Author: kannadanewsnow05

ಬೆಂಗಳೂರು : ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ವೇಳೆ ಘೋರ ದುರಂತ ಒಂದು ಸಂಭವಿಸಿದೆ. ಕಾಮಗಾರಿಯ ವೇಳೆ ಬೃಹತ್ ಕ್ರೇನ್ ಒಂದು ಆಯತಪ್ಪಿ ಬಿದ್ದಿದೆ. ಮೆಟ್ರೋ ಗರ್ಡರ್ ಜೋಡಿಸುವಾಗ ಈ ಒಂದು ಘಟನೆ ಸಂಭವಿಸಿದೆ. ಮೆಟ್ರೋ ಸಿಲ್ಕ್ ಬೋರ್ಡ್ ಟು ಏರ್ಪೋರ್ಟ್ ಮಾರ್ಗದಲ್ಲಿ ನೀಲಿ ಮಾರ್ಗದಲ್ಲಿ ಕಾಮಗಾರಿ ನಡೆಯುವಾಗ ಈ ಒಂದು ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ರೀತಿಯಾದ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Read More

ಬಾಗಲಕೋಟೆ : ಬಾಗಲಕೋಟೆಯಲ್ಲಿ ಬೀದಿ ನಾಯಿ ದಾಳಿಗೆ ಇದೀಗ ಬಾಲಕಿ ಒಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾಳೆ. ನಾಯಿ ಕಚ್ಚಿ ಗಾಯಗೊಂಡಿದ್ದ 10 ವರ್ಷದ ಬಾಲಕಿ ಅಲೈನಾ ಲೋಕಾಪುರ ಸಾವನಪ್ಪಿದ್ದಾಳೆ. ಕಳೆದ ಡಿಸೆಂಬರ್ 27ರಂದು ಬಾಗಲಕೋಟೆ ನಗರದ ನವನಗರದಲ್ಲಿ ಅಲೈನ ಮೇಲೆ ಬೀದಿ ನಾಯಿ ದಾಳಿ ನಡೆಸಿತ್ತು. ಕಣ್ಣು ಮೂಗು ಮತ್ತು ಮುಖಕ್ಕೆ ಗಂಭೀರವಾಗಿ ಗಾಯಗಳಾಗಿತ್ತು. ತಕ್ಷಣ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಲೈನ್ ಹಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಆಗದೆ ಇಂದು ಅಲೈನ ಸಾವನ್ನಪ್ಪಿದ್ದಾಳೆ. ಸಾರ್ವಜನಿಕರೇ ಗಮನಿಸಿ : ನಾಯಿ ಕಚ್ಚಿದಲ್ಲಿ ಕೂಡಲೇ ರೇಬಿಸ್ ಲಸಿಕೆ ಹಾಕಿಸಿರಿ ಸಾಕಿದ ಅಥವಾ ಬೀದಿ ನಾಯಿ ಕಚ್ಚಿದಲ್ಲಿ, ಉಗುರಿನಿಂದ ಗಿರಿದರೆ, ನಮ್ಮ ಮೈಮೇಲೆ ಈಗಾಗಲೇ ಇರುವ ಗಾಯವನ್ನು ನಾಲಿಗೆಯಿಂದ ನೆಕ್ಕಿದರೆ ಏನೂ ಆಗುವುದಿಲ್ಲವೆಂದು ನಿರ್ಲಕ್ಷ್ಯ ವಹಿಸದೇ ನಾಯಿ ಕಚ್ಚಿದ ಜಾಗವನ್ನು ಸೋಪು ಮತ್ತು ನೀರಿನಿಂದ ತೊಳೆದು, ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆಯಂತೆ ಮಾರಣಾಂತಿಕವಾದ ರೇಬಿಸ್ ರೋಗ ತಡೆಗಟ್ಟುವ…

Read More

ಹಾಸನ : ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗಲೇ ಹಠಾತ್ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ. ಮೃತರನ್ನು ಪ್ರವೀಣ್ (45) ಎಂದು ಗುರುತಿಸಲಾಗಿದೆ. ಅರಸೀಕೆರೆ ತಾಲೂಕಿನ ದುಮ್ಮೇನಹಳ್ಳಿ ಗ್ರಾಮದ ಪ್ರವೀಣ್ ಅರಸೀಕೆರೆ ಪಟ್ಟಣದಲ್ಲಿ ಅಟೊಮೊಬೈಲ್ ಅಂಗಡಿ ಇಟ್ಟುಕೊಂಡಿದ್ದರು. ಜ.12ರ ಸಂಜೆ ಅಂಗಡಿಯಲ್ಲಿ ವರ್ತಕರಿಗೆ ವಸ್ತುಗಳನ್ನು ನೀಡುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅಂಗಡಿಯಲ್ಲಿದ್ದ ಅವರ ಪುತ್ರ ಪ್ರವೀಣ್ ಅವರ ಎದೆಯನ್ನು ಒತ್ತಿದ್ದಾನೆ. ಆದರೆ ಪ್ರವೀಣ್ ತಮ್ಮ ಅಂಗಡಿಯಲ್ಲೇ ಉಸಿರು ಚೆಲ್ಲಿದ್ದಾರೆ.

Read More

ಹಂಸ ಮತ್ತು ಡಿಂಭಕ :- ಕೃಷ್ಣನು, ‘ದುಷ್ಟ ಸಂಹಾರ ಶಿಷ್ಟ ರಕ್ಷಣೆ’ ಮಾಡಿ ಭೂಭಾರ ಹರಣ ಮಾಡಲು ಅವ ತರಿಸಿದನು. ಪೂತನಿ, ಶಕಟಾಸುರ, ತೃಣಾ ವರ್ತ,ಬಕಾಸುರ ಇನ್ನೂ ಮುಂತಾದ ರಾಕ್ಷಸರ ಸಂಹಾರ, ಕಾಳಿಂಗ ಮರ್ದನ, ಕಂಸ, ಜರಾಸಂಧ, ಕಾಲಯವನ, ಹೀಗೆ ಇನ್ನೂ ಹಲವು ರಾಕ್ಷಸರನ್ನು ಉಪಾಯ ವಾಗಿ ಸಂಹಾರ ಮಾಡಿದನು.ಹಾಗೆ ಹಂಸ ಮತ್ತು ಡಿಂಭಕ ಎಂಬ ದುಷ್ಟರನ್ನು ಸಂಹಾ ರ ಮಾಡುತ್ತಾನೆ. ಸಾಲ್ವ ದೇಶದ ರಾಜ ಬ್ರಹ್ಮದತ್ತ. ಮಹಾಭಾರತದಲ್ಲಿ ಭೀಷ್ಮರು ತನ್ನ ಸಹೋದರ ವಿಚಿತ್ರವೀರ್ಯನಿಗೆ ಮದುವೆ ಮಾಡಿಸುವ ಸಲುವಾಗಿ ಕಾಶಿ ರಾಜನ ಮಕ್ಕಳ ಸ್ವಯಂವರಕ್ಕೆ ಬಂದು ರಾಜನ ಮಕ್ಕಳಾದ ಅಂಬೆ,ಅಂಬಿಕೆ, ಅಂಬಾಲಿಕೆ ಈ ಮೂರು ರಾಜಕುಮಾರಿ ಯರನ್ನು ತನ್ನ ಅರಮನೆಗೆ ತಂದು ತಾಯಿ ಸತ್ಯವತಿ ಮುಂದೆ ನಿಲ್ಲಿಸುತ್ತಾನೆ. ಆಗ ರಾಜಕುಮಾರಿ ಅಂಬೆ ಈ ಮದುವೆಗೆ ಒಪ್ಪುವುದಿಲ್ಲ. ನಾನು ಮತ್ತು ಸಾಳ್ವ ದೇಶ ದ ರಾಜ ಒಬ್ಬರನ್ನೊಬ್ಬರು ಪ್ರೀತಿಸಿದ್ಧೇವೆ ನಾನು ಅವನನ್ನು ವಿವಾಹವಾಗುತ್ತೇನೆ ಎಂದು ರಾಜ ಮಾತೆಗೆ ಹೇಳುತ್ತಾಳೆ. ರಾಜಮಾತೆ ಮತ್ತು ಭೀಷ್ಮರು…

Read More

ಕೋಲಾರ : ಕೋಲಾರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರರು ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕೂಸಂದ್ರ ಕ್ರಾಸ್ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಮೃತ ಬೈಕ್ ಸವಾರರನ್ನು ನಾಗರಾಜು (22) ಹಾಗೂ ಶೇಖರ್ (23) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಅಪಘಾತದ ಕುರಿತು ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕೊಪ್ಪಳ : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಈ ಹಿಂದೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಜೈಲುವಾಸ ಅನುಭವಿಸಿದ್ದರು. ಇದೀಗ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಆಂಧ್ರದ ಗಣಿಗಾರಿಕೆ ಪರ್ಮಿಟ್ ಹೆಸರಲ್ಲಿ ಕರ್ನಾಟಕದ ಭೂಮಿಯನ್ನೇ ಒತ್ತುವರಿ ಮಾಡಿರೋದು ಬಯಲಾಗಿದೆ. ಹೌದು ನಿವೃತ್ತ ನ್ಯಾಯಾಧೀಶ ಸುದಾಂಶು ದುಲಿಯಾ ನೇತೃತ್ವದಲ್ಲಿ ಸುಪ್ರೀಂಕೋರ್ಟ್ ಸಮಿತಿ ರಚಿಸಿತ್ತು. ತಿಂಗಳ ಹಿಂದೆ ಡ್ರೋನ್ ಸರ್ವೇ ನಡೆಸಿದ್ದ ಸಮಿತಿ ಸಲ್ಲಿಸಿರುವ ವಿಸ್ತೃತ ವರದಿಯಲ್ಲಿ ರೆಡ್ಡಿ ಅಕ್ರಮ ಉಲ್ಲೇಖಿಸಿದೆ. ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿ ಗ್ರಾಮದಲ್ಲಿ ಜನಾರ್ದನ ರೆಡ್ಡಿ ಒಡೆತನದ ಓಎಂಸಿ 2 ಹೆಸರಿನಲ್ಲಿ 39.50 ಹೆಕ್ಟೇರ್, ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್ ಪ್ರದೇಶಗಳಲ್ಲಿ ಪಡೆದಿದ್ದ ಗಣಿಗುತ್ತಿಗೆ ಪ್ರದೇಶ ಮತ್ತು ಗಡಿಗಳ ಹೊಂದಾಣಿಕೆ ಆಗಿಲ್ಲ. ಈ ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಅತಿಕ್ರಮಣ ಮಾಡಿವೆ. ಕರ್ನಾಟಕ ಮತ್ತು ಆಂಧ್ರದ ನಡುವಿನ ಗಡಿನಾಶ ಪಡಿಸಿ, ಬಳ್ಳಾರಿ ಮೀಸಲು ಅರಣ್ಯ ಪ್ರದೇಶಗಳಾದ ವಿಠಲಾಪುರ, ತುಮಟಿ ಸೇರಿ ವಿವಿಧೆಡೆ ಅಕ್ರಮವಾಗಿ 28.90 ಲಕ್ಷ ಟನ್ ಅಕ್ರಮ ಅದಿರು…

Read More

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಡ್ರಾಪ್ ನೀಡುವ ನೆಪದಲ್ಲಿ ಕಾಮುಕನಬ್ಬ ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ತಾನು ಮಾಡಿದ್ದು ಪಾಪದ ಕೆಲಸ ಎಂದು ಪಶ್ಚಾಪತಾಪದಿಂದ ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಘಟನೆ ಹಿನ್ನೆಲೆ? ಬಾಗೇಪಲ್ಲಿಯ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂತ್ರಸ್ತೆ, ಬಾಗೇಪಲ್ಲಿಯಿಂದ ವಾಪಸ್ಸು ಚಿಕ್ಕಬಳ್ಳಾಪುರ ತಾಲೂಕಿನ ಸ್ವಗ್ರಾಮಕ್ಕೆ ತೆರಳಲು ಪೆರೇಸಂದ್ರ ಕ್ರಾಸ್ ಬಳಿಯ ಬಸ್‍ನಿಲ್ದಾಣದಲ್ಲಿ ನಿಂತಿದ್ದಳು. ಆ ವೇಳೆ ಅಲ್ಲಿಗೆ ಬಂದ ಬೈಕ್ ಸವಾರ ಗಣೇಶ್​​ ಅಪ್ರಾಪ್ತ ವಿದ್ಯಾರ್ಥಿನಿಗೆ ಡ್ರಾಪ್ ಕೊಡುವ ನೆಪದಲ್ಲಿ ಆಕೆಯನ್ನು ಬೈಕ್ ಮೇಲೆ ಹತ್ತಿಸಿಕೊಂಡಿದ್ದಾನೆ. ನಂತರ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನಂತೆ. ನಂತರ ಭಯ ಭೀತನಾದ ಆರೋಪಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಮಾಡಿದ ಪಾಪಕೃತ್ಯವನ್ನು ಹೇಳಿಕೊಂಡಿದ್ದಾನೆ. ಗಣೇಶ್​​ ಸ್ನೇಹಿತ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆ ಬೆನ್ನಲ್ಲೇ ಪೊಲೀಸರು ನಿರ್ಜನ ಪ್ರದೇಶಕ್ಕೆ ಬಂದು ಹುಡುಕಾಡಿದ್ದಾರೆ. ಆರೋಪಿಯ ಮೊಬೈಲ್​​ ಟ್ರೇಸ್​​…

Read More

ಮಂಡ್ಯ : ಬಿಗ್ ಬಾಸ್ ಕನ್ನಡ 12 ಈಗಾಗಲೇ ಫಿನಾಲೆ ಹಂತಕ್ಕೆ ತಲುಪಿದ್ದು ಬರುವ ಭಾನುವಾರದಂದು ಬಿಗ್ ಬಾಸ್ ವಿನ್ನರ್ ಯಾರು ಎಂದು ಘೋಷಣೆ ಆಗಲಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ, ಗಿಲ್ಲಿ, ರಘು, ದೃವಂತ್, ಕಾವ್ಯ ರಕ್ಷಿತಾ, ಹಾಗು ಧನುಷ್ ಉಳಿದುಕೊಂಡಿದ್ದು ಬರುವ ಭಾನುವಾರ ಬಿಗ್ ಬಾಸ್ ವಿನ್ನರ್ ಯಾರು ಎಂದು ನಟ ಕಿಚ್ಚ ಸುದೀಪ್ ಘೋಷಣೆ ಮಾಡಲಿದ್ದಾರೆ. ಈಗಾಗಲೇ ಎಲ್ಲರ ಅಭಿಮಾನಿಗಳು ಸಹ ತಮ್ಮ ಮೆಚ್ಚಿನ ಸ್ಪರ್ಧಿಯ ಪರವಾಗಿ ಓಟು ಹಾಕಲು ಆರಂಭಿಸಿದ್ದು, ಕೆಲವರಂತೂ ಅಭಿಯಾನವನ್ನೇ ಮಾಡುತ್ತಿದ್ದಾರೆ. ಇದೀಗ ಗಿಲ್ಲಿ ಪರವಾಗಿ ಅವರ ಕ್ಷೇತ್ರದ ಶಾಸಕರೇ ಮತ ಕೇಳಿದ್ದಾರೆ. ಗಿಲ್ಲಿಗೆ ಓಟು ಹಾಕಿರೆಂದು ಮಂಡ್ಯ ಜಿಲ್ಲೆ ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ ಅವರು ಮತ ಯಾಚನೆ ಮಾಡಿದ್ದಾರೆ. ವಿಡಿಯೋ ಮೂಲಕ ಅವರು ಗಿಲ್ಲಿಗೆ ಮತ ಹಾಕಿ ಎಂದು ಕೇಳಿಕೊಂಡಿದ್ದು, ಈಗಾಗಲೇ ಬಿಗ್ ಬಾಸ್ ಅಂತಿಮ ಘಟ್ಟಕ್ಕೆ ತಲುಪಿದ್ದು ಮಳವಳ್ಳಿಯ ಹೆಮ್ಮೆಯ ಗಿಲ್ಲಿ ನಟ ಅವರು ಸಹ…

Read More

ಚಿಕ್ಕಮಗಳೂರು : ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಬರಿಮಲೆಗೆ ತೆರಳಿರುವ ಅಯ್ಯಪ್ಪ ಮಾಲಾಧಾರಿಗಳು ಕೇರಳ ಸರ್ಕಾರ ಹಾಗೂ ಅಲ್ಲಿನ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ವ್ಯವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಲಾಧಾರಿಗಳು ರಸ್ತೆ ಮಧ್ಯೆಯೇ ಮಲಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇರಳ ಸರ್ಕಾರ ಹಾಗೂ ಪೊಲೀಸರ ನಡೆಗೆ ಮಾಲಾಧಾರಿಗಳು ಆಕ್ರೋಶ ಹೊರಹಾಕಿದ್ದಾರೆ. ‘ಅಯ್ಯಪ್ಪಸ್ವಾಮಿ ಕರ್ನಾಟಕದಲ್ಲೇ ನೆಲೆಸಬೇಕಿತ್ತು, ಇಲ್ಲಿಗೆ ಏಕೆ ಬಂದ್ರಿ’ ಎಂದು ಭಾವುಕದ ಮಾತುಗಳನ್ನಾಡಿದ್ದಾರೆ. ಕರ್ನಾಟಕದ ವಾಹನಗಳನ್ನು ಎರಿಮಲೈನಲ್ಲೇ ತಡೆಹಿಡಿಯುತ್ತಿರುವ ಕೇರಳ ಪೊಲೀಸರು ಅಲ್ಲಿಂದ ಮುಂದಕ್ಕೆ ಪ್ರಯಾಣಿಸಲು ಕೇರಳದ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದಾರೆ ಎಂದು ಮಾಲಾಧಾರಿಗಳು ಆರೋಪಿಸಿದ್ದಾರೆ. ಎರಿಮಲೈಯಿಂದ ಶಬರಿಮಲೆಗೆ ಸುಮಾರು 100 ಕಿ.ಮೀ.‌ ದೂರವಿದ್ದು, ಭಕ್ತರು ಅನಿವಾರ್ಯವಾಗಿ ತಮ್ಮ ವಾಹನಗಳನ್ನು ಬಿಟ್ಟು ಕೇರಳದ ವಾಹನಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದ ವಾಹನಗಳಿಗೆ ಸೂಕ್ತ ಸ್ಪಂದನೆ ನೀಡದ ಕೇರಳ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಾಡಿಗೆ ವಾಹನ ಮಾಡಿಕೊಂಡು ಹೋಗಿರುವ ತರೀಕೆರೆಯ ಭಕ್ತರು ಈಗ ಅತ್ತ ಹೋಗಲಾಗದೆ, ಇತ್ತ…

Read More

ಚಾಮರಾಜನಗರ : ಚಾಮರಾಜನಗರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ರಸ್ತೆ ತಿರುವಿನಲ್ಲಿ ಸರ್ಕಾರಿ ಬಸ್ ಗೆ ಬೈಕಿ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೂರ್ಣಕೆರೆ ಬಳಿ ತಾಳಬೆಟ್ಟದ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಮೃತರನ್ನು ರಾಮೇಗೌಡನಹಳ್ಳಿಯ ಶಿವಪ್ಪ ಮತ್ತು ಸತೀಶ್ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಶವಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದ ಕುರಿತು ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More