Author: kannadanewsnow05

ಬೆಂಗಳೂರು : ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ, ಪರಿಹಾರ ವಿಧೇಯಕ ಸಂಪುಟ ಸಭೆಯಲ್ಲಿ ವಿಧೇಯಕ ಮಂಡನೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ. ಗ್ರಾಮ ಅಥವಾ ಸಮುದಾಯದದಿಂದ ಹೊರಹಾಕುವುದಕ್ಕೆ ನಿರ್ಬಂಧ, ಧಾರ್ಮಿಕ, ಸಾರ್ವಜನಿಕ ಸ್ಥಳಗಳ ಬಳಕೆಗೆ ನಿರ್ಬಂಧ ವಿಧಿಸಿವುದು, ಸಾರ್ವಜನಿಕ ಪೂಜಾ ಸ್ಥಳಗಳ ಪ್ರವೇಶಕ್ಕೆ ಅಡ್ಡಿ ಮಾಡುವುದು, ಸಾಮಾಜಿಕ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ತಡೆಯುವುದು.ವ್ಯವ್ಯಹಾರ ಅಥವಾ ಉದ್ಯೋಗ ತಿರಸ್ಕಾರ ಮಾಡುವುದು ಶಾಲೆ ಆಸ್ಪತ್ರೆ, ಸಮುದಾಯ ಭವನ ಪ್ರವೇಶಕ್ಕೆ ತಡೆಯೋಡ್ದುವುದು. ಸೇವೆ, ಅವಕಾಶ ನಿರಾಕರಿಸುವುದನ್ನು ತಡೆಯಲು ನಿರ್ಬಂಧ, ಮದುವೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ತಡೆಯೋಡ್ಡುವುದು.ಸಂಬಂಧ ಕಡಿತಗೊಳಿಸಲು ಪ್ರಚೋದನೆ ನೀಡುವುದು. ಲಿಂಗತ್ವದ ಆಧಾರಾದ ಮೇಲೆ ಬೇಧ ಮಾಡುವುದು, ವ್ಯಾಪಾರ, ಸಾಮಾಜಿಕ ಸಂಬಂಧಗಳಿಗೆ ತಡೆಯೋಡ್ದುವುದು ಮಕ್ಕಳನ್ನು ಒಟ್ಟಿಗೆ ಆಡಲು ಅಡ್ಡಿ ಪಡಿಸುವುದು.ಮಾನವ ಹಕ್ಕುಗಳ ನಿರಾಕರಣೆ, ಬಟ್ಟೆ ಭಾಷೆ ಸಂಸ್ಕೃತಿಕ ಭೇದ ಮಾಡುವುದು. ಸಂಪುಟ ಸಭೆಯಲ್ಲಿ ವಿಧೇಯಕ ಮಂಡನೆಗೆ ಅನುಮೋದನೆ…

Read More

ಬೆಂಗಳೂರು : ಬೆಂಗಳೂರು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಬಗ್ಗೆ ದೂರು ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಲಾಖೆಯ ವಿವಿಧೆಡೆ ಇರುವ 12 ಕಚೇರಿಗಳ ಮೇಲೆ ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆ ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಆದೇಶದ ಮೇರೆಗೆ, ಬೆಂಗಳೂರಿನ ಜಂಟಿನಿರ್ದೇಶಕರ(ಆಡಳಿತ) ಕಚೇರಿ, ಉಪ ನಿರ್ದೇಶಕರ (ಸಾರ್ವ ಜನಿಕ ಶಿಕ್ಷಣ ಇಲಾಖೆ) ಕಚೇರಿ ಹಾಗೂ 9ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳು ಸೇರಿದಂತೆ ಒಟ್ಟು 12 ಕಚೇರಿಗಳಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ದೂರುಗಳ ಸತ್ಯಾಸತ್ಯತೆ ಅರಿಯಲು ಲೋಕ್ತಾ ಅಧಿಕಾರಿಗಳು ಗೌಪ್ಯ ತನಿಖೆ ನಡೆಸಿದ್ದರು. ಈ ವೇಳೆ ಆರೋಪಗಳಲ್ಲಿ ಹುರುಳಿದೆ ಎಂದು ಖಚಿತವಾದ ಬಳಿಕ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖ ಲಿಸಿಕೊಂಡು ದಾಳಿ ನಡೆಸಲಾಗಿದೆ. ಖಾಸಗಿ ಶಾಲೆಗಳ ನೋಂದಣಿ, ಮಾನ್ಯತೆ ನವೀಕರಣ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಲಂಚಕ್ಕೆ ಬೇಡಿಕೆ. ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ಖಾಸಗಿ ಶಾಲೆಗಳಿಗೆ ಅನಗತ್ಯ ಭೇಟಿ ನೀಡಿ ಕಿರುಕುಳ,…

Read More

ಕಲಬುರಗಿ : ಕಲಬುರ್ಗಿಯಲ್ಲಿ ಖತರ್ನಾಕ್ ಕಳ್ಳನೊಬ್ಬ ತನ್ನ ಗೆಳತಿಯ ಜೊತೆಗೆ ಸಹ ಜೀವನ ನಡೆಸಲು ಕಳ್ಳತನಕ್ಕೆ ಇಳಿದಿದ್ದಾನೆ. ಇದೀಗ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.ಹೌದು ಗೆಳತಿಯೊಂದಿಗೆ ಸಹ ಜೀವನ (ಲಿವಿಂಗ್ ಟುಗೆದರ್) ನಡೆಸಲು ಮತ್ತು ಆಕೆ ಹಾಗೂ ತನ್ನ ಶೋಕಿ ಆಸೆಗಳನ್ನು ತಿರಿಸಿಕೊಳ್ಳಲು ಕಳ್ಳತನಕ್ಕಿಳಿದ ವ್ಯಕ್ತಿಯನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ಸುಲಿಗೆ ಮತ್ತು ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಶೋಕಿ ಈಡೇರಿಸಿಕೊಳ್ಳಲು ಇಂತಹ‌ ಕೃತ್ಯಗಳನ್ನು ಎಸಗುತ್ತಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ. ಅಫಜಲಪುರದ ಕಲ್ಲಪ್ಪ ಅಲಿಯಾಸ ಸಂಜು ಪೂಜಾರಿ (24) ಬಂಧಿತ ಆರೋಪಿ. ಈತ ಯುವತಿಯೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿದ್ದ. ಕೂಲಿ ಕೆಲಸ ಮಾಡುತ್ತಿದ್ದು, ಖರ್ಚಿಗೆ ದುಡಿದ ಹಣ ಸಾಕಾಗದೇ ಇದ್ದಾಗ ಪರ್ಸ್​ಗಳನ್ನು ಕದಿಯುತ್ತಿದ್ದ. ಮನೆ ಖರ್ಚು, ತನ್ನ ಖರ್ಚು ಹೆಚ್ಚಾದಂತೆ ಮನೆಗಳ ಕಳ್ಳತನ‌ ಮಾಡುತ್ತಿದ್ದ ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್‌.ಡಿ‌ ಮಾಹಿತಿ ನೀಡಿದರು.

Read More

ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಾಲ್ ಸೆಂಟರ್ ಮೇಲೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ. ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಯ್ಡು ಲೇಔಟ್ ನ ಖಾಸಗಿ ಕಟ್ಟಡದಲ್ಲಿರುವ ಕಾಲ್ ಸೆಂಟರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಈ ಒಂದು ಕಾಲ್ ಸೆಂಟರ್ ನಲ್ಲಿ ಪರಿವರ್ತನೆ ಮಾಡಲಾಗುತ್ತಿತ್ತು. ಅಕ್ರಮವಾಗಿ ಸ್ಥಳೀಯ ಕರೆಗಳನ್ನಾಗಿ ಆರೋಪಿಗಳು ಪರಿವರ್ತಿಸುತ್ತಿದ್ದರು. ದಾಳಿಯ ಬೆಲೆ 40,00,000 ಮೌಲ್ಯದ 28 ಸಿಂಹ ಬಾಕ್ಸ್ ವಿವಿಧ ಕಂಪನಿಗಳ 1093 ಸಿಮ್ ಕಾರ್ಡ್ಗಳನ್ನು ಹೋಲಿಸಲು ಜಪ್ತಿ ಮಾಡಿಕೊಂಡಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ಇದೀಗ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ವಿವಿಧ ಠಾಣಾ ವ್ಯಾಪ್ತಿಗಳಲ್ಲಿನ ಡ್ರಗ್ಸ್ ಹಾಗೂ ಗಾಂಜಾ ಮಾರಾಟಗಾರರನ್ನು ಅರೆಸ್ಟ್ ಮಾಡಲಾಗಿದೆ. ಇದುವರೆಗೂ ಕೋಟ್ಯಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಮತ್ತು ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ ಕುಮಾರ್ ಸಿಂಗ್ ಹೇಳಿಕೆ ನೀಡಿದರು. ಹೈಡ್ರೋ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರಿಂದ ವಿದೇಶಿ ಮಹಿಳೆಯ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಸುಮಾರು 18.60 ಕೋಟಿ ಮಾಡಿದ 18 ಕೆಜಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 2 ಮೊಬೈಲ್ ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆಯಲಾಗಿದೆ. ಇನ್ನು RMC ಯಾರ್ಡ್ ಪೊಲೀಸರಿಂದ ಗಾಂಜಾ ಮಾರುತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಅದು ಸುಮಾರು 8.35 ಲಕ್ಷ ಮಾಡಿದ 8 ಕೆಜಿ 350 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇನ್ನು ಆರ್ ಟಿ ನಗರ ಪೊಲೀಸ್ ಇಂದ ಇವರು ಗಾಂಜಾ ಮಾರಾಟಗಾರರನ್ನು ಬಂಧಿಸಲಾಗಿದೆ. ಬಂದಿತರಿಂದ…

Read More

ಬೆಂಗಳೂರು : 40% ಕಮಿಷನ್ ಎಂದು ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ, ಅಪಪ್ರಚಾರ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ. ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ, ಕರ್ನಾಟಕದಲ್ಲಿ ಶೇ. 63% ಭ್ರಷ್ಟಾಚಾರ ಇದೆ ಸ್ವತಃ ಮಾನ್ಯ ಉಪಲೋಕಾಯುಕ್ತರೇ ತಮ್ಮ ಘನ ಸರಕಾರಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಈಗೇನು ಹೇಳುತ್ತೀರಿ? ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೀರಾ? ಅಥವಾ ಇದೇ ಭಂಡ ಬಾಳು ಮುಂದುವರೆಸುತ್ತೀರಾ? ಸುಳ್ಳು, ಅಪಪ್ರಚಾರ, ಕುತಂತ್ರದಿಂದ 136 ಸೀಟು ಪಡೆದ ಕಾಂಗ್ರೆಸ್ ಪಕ್ಷ, ಈಗ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿದರೆ, 36 ಸೀಟೂ ಬರುವುದಿಲ್ಲ. ಇದು ನನ್ನ ಗ್ಯಾರೆಂಟಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. https://twitter.com/RAshokaBJP/status/1996429336161960362?t=xVdHuy8P7sP8p34GAt-SiQ&s=19

Read More

ಬೆಂಗಳೂರು : ಈ ಬಾರಿ ಉತ್ತಮ ಮಳೆಯಿಂದಾಗಿ ಮಂಡ್ಯ, ಮೈಸೂರು ಭಾಗದಲ್ಲಿ ಭತ್ತದ ಬೆಳೆಯಲ್ಲಿ ಉತ್ತಮ ಫಸಲು ಬಂದಿದೆ. ಆದರೆ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸದೆ, ಸೂಕ್ತ ಬೆಲೆ ಕೊಡದೆ, ದಾಸ್ತಾನಿಗೆ ಜಾಗವಿಲ್ಲ, ತೇವಾಂಶ ಜಾಸ್ತಿ ಇದೆ ಎಂದು ಎಂದಿನಂತೆ ಅನ್ನದಾತರನ್ನು ಸತಾಯಿಸುತ್ತಿದೆ ಈ ರೈತ ವಿರೋಧಿ @INCKarnataka ಸರ್ಕಾರ. ಸಿಎಂ @siddaramaiah ನವರೇ, ಕೇಂದ್ರ ಸರ್ಕಾರ ಕ್ವಿಂಟಲ್ ಭತ್ತಕ್ಕೆ ₹2362 ಬೆಂಬಲ ಬೆಲೆ ಘೋಷಿಸಿದೆ. ಕೇರಳ, ಒಡಿಸ್ಸಾ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ನೀಡುತ್ತಿರುವಂತೆ ರಾಜ್ಯ ಸರ್ಕಾರದ ವತಿಯಿಂದ ಕ್ವಿಂಟಲ್ ಭತ್ತಕ್ಕೆ ₹500 ಪ್ರೋತ್ಸಾಹ ಧನವಾಗಿ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರಗಳ ಮೂಲಕ ಭತ್ತ ಖರೀದಿ ಮಾಡಿ ರೈತರ ನೆರವಿಗೆ ಬನ್ನಿ. ತೇವಾಂಶ ಕಡಿಮೆ ಮಾಡಿಕೊಂಡು ಬನ್ನಿ, ದಾಸ್ತಾನಿಗೆ ಸ್ಥಳವಿಲ್ಲ ಎನ್ನುವ ಕುಂಟು ನೆಪಗಳನ್ನು ಕೊಡುವುದು ಬಿಟ್ಟು, ಪಂಜಾಬ್ ಇನ್ನಿತರ ರಾಜ್ಯಗಳ ಮಾದರಿಯಲ್ಲಿ ಭತ್ತ ಖರೀದಿ ಕೇಂದ್ರಗಳಲ್ಲೇ ಒಣಗಿಸುವ ಯಂತ್ರ ಅಳವಡಿಸಿ ಖರೀದಿ ಪ್ರಕ್ರಿಯೆ ತ್ವರಿತಗೊಳಿಸಿ. ನಿಮ್ಮ ಸರ್ಕಾರದ…

Read More

ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ರಕ್ತ ಚಂದನ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ವರಪ್ರಸಾದ್ ರೆಡ್ಡಿ ಮತ್ತು ರಾಜಶೇಖರ್ ಬಂದಿದ ಆರೋಪಿಗಳು ಎಂದು ತಿಳಿದು ಬಂದಿದೆ. ಒಟ್ಟು 75 ಲಕ್ಷ ಮೌಲ್ಯದ 739 ಕೆಜಿ ರಕ್ತ ಚಂದನ ಪೊಲೀಸರು ಜತ್ತಿ ಮಾಡಿಕೊಂಡಿದ್ದಾರೆ. ಐವತ್ತು ಅಡಿ ಉದ್ದದ 50 ಪೀಸ್ ರಕ್ತ ಚಂದನಗಳು ಪತ್ತೆಯಾಗಿವೆ. 75 ಲಕ್ಷ ಬೆಲೆಬಾಳುವ ರಕ್ತ ಚಂದನ ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಸಹ ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ಹಿನ್ನೆಲೆ ನೋಡುವುದಾದರೆ ಒಬ್ಬ ಇಂಜಿನಿಯರ್ ಹಾಗೂ ಮತ್ತೊಬ್ಬ ಎಂಬಿಎ ಪದವೀಧರರು ಎಂದು ತಿಳಿದುಬಂದಿದೆ. ಆರೋಪಿಗಳು ಆಂಧ್ರಪ್ರದೇಶದ ಮೂಲದವರು ಎಂದು ತಿಳಿದುಬಂದಿದೆ. ಇನ್ನು ಮತ್ತೊಂದು ಪ್ರಕರಣದಲ್ಲಿ ಹುಳಿಮಾವು ಪೊಲೀಸರು ಮತ್ತೊಂದು ಕಾರ್ಯಾಚರಣೆ ನಡೆಸಿದ್ದು, ರಕ್ತ ಚಂದನ ಮಾರಾಟ ಮಾಡುತ್ತಿದ್ದ ಇಬ್ಬರೂ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಇವರಿಂದ ಅರವತ್ತು ಲಕ್ಷ ಮೌಲ್ಯದ 1150 ಕೆಜಿ ರಕ್ತ ಚಂದನ ಸಾಗಿಸುತ್ತಿದ್ದರು. ಕಾರಿನ ಹಿಂಬದಿ…

Read More

ಕೊಳ್ಳೆಗಾಲ, ಡಿ.3: ಮಾನವ-ಹುಲಿ ಸಂಘರ್ಷದ ಹಿನ್ನೆಲೆಯಲ್ಲಿ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ತಿಂಗಳ ಅವಧಿಯಲ್ಲಿ 22 ಹುಲಿ ಮತ್ತು ಮರಿಗಳ ರಕ್ಷಣೆ ಮಾಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಕೊಳ್ಳೆಗಾಲದಲ್ಲಿಂದು ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣಕ್ಕಾಗಿ ಕಮಾಂಡ್ ಸೆಂಟರ್ ಉದ್ಘಾಟಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ ಕೊನೆಯವಾರ ಮತ್ತು ನವೆಂಬರ್ ಮೊದಲ ವಾರದಲ್ಲಿ ಹುಲಿಗಳ ದಾಳಿಯಿಂದ ಅಮೂಲ್ಯ ಜೀವ ಹಾನಿ ಆದ ಹಿನ್ನೆಲೆಯಲ್ಲಿ ಕಾಡಿನ ಹೊರಗೆ ಸಂಚರಿಸುತ್ತಿರುವ ಹುಲಿಗಳ ಸೆರೆ (ರಕ್ಷಣೆ)ಗೆ ಆದೇಶ ನೀಡಲಾಗಿತ್ತು ಎಂದು ತಿಳಿಸಿದರು. ಅಧಿವೇಶನದ ಬಳಿಕ ಯಸಳೂರಲ್ಲಿ ಅರ್ಜುನ ಸ್ಮಾರಕ ಉದ್ಘಾಟನೆ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಆನೆ ಅರ್ಜುನನ ಸ್ಮಾರಕವನ್ನು ಹುತಾತ್ಮನಾದ ಸ್ಥಳ ಯಸಳೂರಿನಲ್ಲಿ ಮತ್ತು ಅರ್ಜುನ ಇದ್ದ ಶಿಬಿರ ಬಳ್ಳೆಯಲ್ಲಿ ನಿರ್ಮಿಸುವುದಾಗಿ ಸರ್ಕಾರ ಹೇಳಿತ್ತು. ಅದರಂತೆ ಸ್ಮಾರಕ ನಿರ್ಮಾಣವಾಗಿದ್ದು, ಬಳ್ಳೆಯಲ್ಲಿ ಈಗಾಗಲೇ ಉದ್ಘಾಟನೆ ನೆರವೇರಿದೆ. ಶಾಸಕರ ಸಲಹೆಯಂತೆ ಕೆಲವೊಂದು ಮೂಲಭೂತ ಸೌಕರ್ಯವನ್ನು…

Read More

ಬೆಂಗಳೂರು : ಇತ್ತೀಚಿಗೆ ಬೆಂಗಳೂರಲ್ಲಿ ಸಿದ್ದಾಪುರ ದರೋಡೆ ಪ್ರಕರಣ ಹಾಗು ದಾವಣಗೆರೆಯಲ್ಲಿ PSI ಕೋಟ್ಯಂತರ ದರೋಡೆ ಪ್ರಕರಣ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯ ಮೇಲೆ ಕಳ್ಳತನ ಆರೋಪ ಬಂದಿದೆ. ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿಯೇ ಕಳ್ಳತನ ನಡೆದಿದೆ. ಹೌದು ಸೈಬರ್ ಪ್ರಕರಣದ ಆರೋಪಿಯನ್ನ ವಿಚಾರಣೆಗೆ ಕರೆತಂದಾಗ ಆತನ ಕಾರಿನಲ್ಲಿ 11 ಲಕ್ಷ ಹಣದ ಬ್ಯಾಗ್ ಅನ್ನು ಹೆಡ್ ಕಾನ್ಸ್‌ಟೇಬಲ್‌ ಜಬೀವುಲ್ಲಾ ಕದ್ದಿರುವ ಆರೋಪ ಕೇಳಿಬಂದಿದೆ.ಹಣ ಕಳ್ಳತನ ಮಾಡಿ ಏನು ಗೊತ್ತೇ ಇಲ್ಲ ಎನ್ನುವಂತೆ ಜಬೀವುಲ್ಲಾ ಕೆಲಸ ಮಾಡ್ತಿದ್ದನಂತೆ. ಇತ್ತ ಆರೋಪಿ ಬಂಧಿಸಿದ್ದ ಇನ್ಸ್ಪೆಕ್ಟರ್ ಉಮೇಶ್ ಅಂಡ್ ಟೀಂ ಆತನನ್ನ ಜೈಲಿಗಟ್ಟಿತ್ತು. ಬಳಿಕ ಜಾಮೀನು ಪಡೆದು ಹೊರಬಂದ ಆರೋಪಿ ತನ್ನ ಕಾರಿನಲ್ಲಿ ಇದ್ದ ಹಣದ ಬ್ಯಾಗ್ ನಾಪತ್ತೆ ಆಗಿರುವುದನ್ನ ನೋಡಿ ಈ ಬಗ್ಗೆ ಸೈಬರ್ ಪೊಲೀಸರ ಬಳಿ ಪ್ರಶ್ನೆ ಮಾಡಿದ್ದಾನೆ. ಆರೋಪಿಯ ಪ್ರಶ್ನೆಗೆ ಗಾಬರಿಗೊಂಡು ಪರಿಶೀಲನೆ ಮಾಡಿದಾಗ ಕಾರಿನಲ್ಲಿದ್ದ ಹಣವನ್ನ ಜಬೀವುಲ್ಲಾ ತೆಗೆದುಕೊಂಡು ಹೋಗಿರೋದು ಗೊತ್ತಾಗಿದೆ. ಸಿಸಿಟಿವಿ…

Read More