Subscribe to Updates
Get the latest creative news from FooBar about art, design and business.
Author: kannadanewsnow05
ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಹಲವಾರು ಹೆಣಗಳನ್ನು ಹೂತು ಹಾಕಿರುವುದರ ಬಗ್ಗೆ ಸಾಕ್ಷಿ ದೂರುದಾರ ನೀಡಿರುವ ದೂರಿನ ಬಗ್ಗೆ ಕಾಲ್ಪನಿಕವಾಗಿ ಎ.ಐ ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಗಳನ್ನು ಒಳಗೊಂಡಿರುವ ವೀಡಿಯೋ ಬಹಿರಂಗಪಡಿಸಿ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಮಾಡಿರುವ ಬಗ್ಗೆ ಯುಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೌದು ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರರು ತನ್ನ ದೂರಿನಲ್ಲಿ ಹಾಗೂ ನ್ಯಾಯಾಲಯದ ಮುಂದೆ ಬಹಿರಂಗಪಡಿಸಿರುವ ಮಾಹಿತಿಗಳನ್ನು ಹೊರತುಪಡಿಸಿ ಸಾಕ್ಷಿ ದೂರುದಾರರ ಬಗ್ಗೆ ಹಾಗೂ ಪ್ರಕರಣದ ಬಗ್ಗೆ ಇತರ ಹೆಚ್ಚಿನ ಮಾಹಿತಿಯಿರುವ ಕಾಲ್ಪನಿಕವಾಗಿ ಎ.ಐ ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಗಳಿರುವ ವೀಡಿಯೋವನ್ನು ಯುಟ್ಯೂಬ್ ನಲ್ಲಿ ಪ್ರಸಾರ ಮಾಡಿ ಉದ್ದೇಶ ಪೂರ್ವಕವಾಗಿ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಮಾಡಿರುವ ಹಿನ್ನಲೆಯಲ್ಲಿ, ಸಮೀರ್ ಎಂಡಿ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ BNS ಸೆಕ್ಷನ್ 192, 240, 353(1)(b) ಅಡಿ ಪ್ರಕರಣ ದಾಖಲಿಸಿರುವುದಾಗಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
BREAKING : ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ತಡೆಗೋಡೆಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೂವರ ದುರ್ಮರಣ!
ಬೆಂಗಳೂರು : ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರವಾದ ಅಪಘಾತ ಸಂಭವಿಸಿದ್ದು, ತಡೆಗೋಡೆಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ರಾಮನಗರ ತಾಲೂಕಿನ ಜಯಪುರ ಗೇಟ್ ಬಳಿ ಈ ಒಂದು ಘಟನೆ ನಡೆದಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಉಸಿರು ಚೆಲ್ಲಿದರೆ ಓರ್ವನ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಆಸ್ಪತ್ರೆ ಗಾಯಾಳುವನ್ನು ರವಾನಿಸಲಾಗಿದೆ. ಮೈಸೂರು ನಿಂದ ಕಾರು ಬೆಂಗಳೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿದ್ದರೆ ಓರ್ವನ ಸ್ಥಿತಿ ಗಂಭೀರವಾಗಿದೆ.ಘಟನಾ ಸ್ಥಳಕ್ಕೆ ರಾಮನಗರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೈದ್ರಾಬಾದ್ : ತೆಲುಗು ಹಿರಿಯ ನಟ ಕೋಟ ಶ್ರೀನಿವಾಸರಾವ್ (83) ಇಂದು ವಿಧಿವಶರಾಗಿದ್ದಾರೆ. ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಕೋಟ ಶ್ರೀನಿವಾಸರಾವ್ ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಕೋಟಾ ಶ್ರೀನಿವಾಸರಾವ್ ಬಳಲುತ್ತಿದ್ದರು ಎನ್ನಲಾಗಿದೆ. ಸುಮಾರು 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೋಟಾ ಶ್ರೀನಿವಾಸರಾವ್ ನಟಿಸಿದ್ದರು. ಕೋಟ ಶ್ರೀನಿವಾಸ್ ರಾವ್ ಅವರ ಕೊನೆಯ ಚಿತ್ರ ಸುವರ್ಣ ಸುಂದರಿಯಾಗಿದ್ದು, ತೆಲುಗು ತಮಿಳು ಹಿಂದಿ ಕನ್ನಡ ಮಲಯಾಳಂ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ, ನಮ್ಮ ಬಸವ, ರಕ್ತ ಕಣ್ಣೀರು ಸೇರಿ ಹಲವು ಕನ್ನಡ ಚಿತ್ರಗಳಲ್ಲಿ ನಟನೆ ಮಾಡಿದ್ದರು. ಅವರಿಗೆ ಪದ್ಮಶ್ರೀ ನಂದಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ ಅಲ್ಲದೆ ಒಮ್ಮೆ ಶಾಸಕರಿಗೆ ಕೂಡ ಸೇವೆ ಸಲ್ಲಿಸಿದ್ದಾರೆ.
ಬಾಗಲಕೋಟೆ : ಬಿಜೆಪಿಯವರು ಕಾಂಗ್ರೆಸ್ನ 55 ಶಾಸಕರನ್ನು ಪಟ್ಟಿ ಮಾಡಿದ್ದಾರೆ. ಬಿಜೆಪಿ ಏಜೆಂಟ್ಗಳನ್ನು ಅವರ ಮನೆಗೆ ಕಳುಹಿಸಿ ಹೆದರಿಸಿದ್ದಾರೆ. ಬಿಜೆಪಿಗೆ ಬರದೇ ಹೋದ್ರೆ ಸಿಬಿಐ, ಇಡಿ ದಾಳಿ ಮಾಡಿಸಿ ಅಕ್ರಮ ಆಸ್ತಿ ಹೊರಗೆಳಸ್ತೀವಿ ಅಂತಾರೆ, ಇದಕ್ಕೆ ನಾನು ಜಗ್ಗೋದಿಲ್ಲ, ಬಗ್ಗೋದಿಲ್ಲ, ಆ ಲಿಸ್ಟ್ನಲ್ಲಿ ನಾನು ಇದ್ದರೂ ಇರಬಹುದು ಎಂದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುಣಸುಂದದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ನಾನು ಅದಕ್ಕೆ ಭಯಪಟ್ಟಿಲ್ಲ, ಅವರು ಮಾಡುತ್ತಿದ್ದಾರೆ. ಮೊನ್ನೆ ನೋಡಿರಬಹುದು ನಮ್ಮ ಬಳ್ಳಾರಿ ಶಾಸಕರು, ಭರತ ರೆಡ್ಡಿ, ಸಂಸದ ತುಕಾರಾಮ್, ನಾಗೇಂದ್ರ ಅವರ ಮೇಲೆ ದಾಳಿ ಮಾಡಿದರು. ಇವೆಲ್ಲ ಉದ್ದೇಶಪೂರ್ವಕ ದ್ವೇಷದ ರಾಜಕಾರಣ, ಕುತಂತ್ರ ರಾಜಕಾರಣ. ಬಿಜೆಪಿಯವರಿಗೆ ತಾಕತ್, ಧಮ್ ಇದ್ರೆ ಜನರ ಮಧ್ಯೆ ಬರಲಿ. 2028ಕ್ಕೆ ಚುನಾವಣೆ ಆಗಲಿ ಎಂದು ತಿರುಗೇಟು ನೀಡಿದರು. ಯಾರನ್ನಾದ್ರೂ ಎತ್ತಿ ಕಟ್ಟಿ ಸರ್ಕಾರ ಬೀಳಿಸೋ ಪ್ರಯತ್ನ ಮಾಡೋದು. ಸಿಬಿಐ, ಇಡಿ ದಾಳಿಗಳ ಮೂಲಕ ಹೆದರಿಸೋಕೆ ಮಾಡ್ತಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ಶಾಸಕರು ಬರದೇ ಹೋದ್ರೆ ಇಡಿ, ಸಿಬಿಐ ದಾಳಿಯಿಂದ ಹೆದರಿಸಿದ್ದಾರೆ.…
ವಿಜಯನಗರ : ವಿಜಯನಗರದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಪ್ರೀತಿಸಿದ ಯುವತಿಯ ಮನೆಯವರೇ, ಜೀವ ಬೆದರಿಕೆ ಹಾಕಿದ್ದರಿಂದ ಹೆದರಿಕೊಂಡು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯ ಉದ್ಧಟ್ಟಿ ದೊಡ್ಡತಾಂಡದಲ್ಲಿ ನಡೆದಿದೆ. 4 ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಯ ಕುಟುಂಬಸ್ಥರು ಕೊಲೆ ಬೆದರಿಕೆ ಹಾಕಿದ್ದಕ್ಕೆ ನಿನ್ನೆ ಶಶಿಕುಮಾರ್ ನಾಯ್ಕ್ (25) ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅದೇ ಗ್ರಾಮದ ಯುವತಿಯನ್ನು ಶಶಿಕುಮಾರ್ ಕಳೆದ 4 ವರ್ಷದಿಂದ ಪ್ರೀತಿಸುತ್ತಿದ್ದ. ಯುವತಿ ಮನೆಯವರು ಮದುವೆಗೆ ನಿರಾಕರಿಸಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತು ಆತ ನೇಣಿಗೆ ಶರಣಾಗಿದ್ದಾನೆ. ಯುವಕನ ಸಾವಿಗೆ ಪ್ರಿಯತಮೆಯ ಕುಟುಂಬಸ್ಥರ ಬೆದರಿಕೆಯೇ ಕಾರಣ ಎಂದು ಆರೋಪಿಸಿ ಹರಪ್ಪನಹಳ್ಳಿ ಪೊಲೀಸ್ ಠಾಣೆಗೆ ಶಶಿಕುಮಾರ್ ಕುಟುಂಬಸ್ಥರು ದೂರು ನೀಡಿದ್ದಾರೆ. ಈ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ವಿಕೃತಕಾಮಿ ಒಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ತಾಯಿ ಮಗಳು ಸ್ನಾನ ಮಾಡುವ ವಿಡಿಯೋ ಮಾಡುತ್ತಿದ್ದ ಆರೋಪಿ ಮೊಯೀನುದ್ದಿನ್ ಎಂಬ ಆರೋಪಿಯನ್ನು ಇದೀಗ ಪೊಲೀಸ್ ಮಾಡಿದ್ದಾರೆ. ಹೌದು ತಾಯಿ ಮಗಳು ಸ್ನಾನ ಮಾಡುವಾಗ ಕದ್ದು ಮುಚ್ಚಿ ಕಾಮುಕನೊಬ್ಬ ವಿಡಿಯೋ ಮಾಡುತ್ತಿದ್ದ. ಕಾಡುಗೊಡಿಯ ಚನ್ನಸಂದ್ರ ದಲ್ಲಿ ಒಂದು ಘಟನೆ ನಡೆದಿದ್ದು, ಕಾಡುಗೋಡಿ ಪೊಲೀಸರು ಇದೀಗ ಮೊಯೀನುದ್ದಿನ್ ನನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ಮಂಗಳವಾರ ಇಬ್ಬರ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ಮೊಬೈಲ್ ನಲ್ಲಿರುವ ವಿಡಿಯೋ ಡಿಲೀಟ್ ಮಾಡಿ ಕಾಮುಕನನ್ನು ಜೈಲಿಗೆ ಅಟ್ಟಿದ್ದಾರೆ. ಕೇರಳ ಮೂಲದ ಹಾಜ ಮೊಹಿದ್ದಿನ್ (24) ಬಂಧಿತ. ಈತ ಜುಲೈ 8ರಂದು ಚನ್ನಸಂದ್ರದ ಮನೆಯೊಂದರ ಬಳಿ ಹೋಗಿ ಮಹಿಳೆ ಮತ್ತು ಆಕೆಯ 8 ವರ್ಷದ ಮಗಳ ಜತೆ ಸ್ನಾನ ಮಾಡುವಾಗ ಮೊಬೈಲ್‌ನಿಂದ ವಿಡಿಯೋ ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು…
ಮುಂಬೈ : ಜನವರಿಯಲ್ಲಿ ನಟ ಸೈಫ್ ಅಲಿ ಖಾನ್ ಅವರ ಮೇಲೆ ದಾಳಿ ನಡೆದ ಬಳಿಕ ಪತ್ನಿ ಕರೀನಾ ಕಪೂರ್ ಮೇಲೆಯೂ ಸಹ ದಾಳಿಯ ಯತ್ನ ನಡೆದಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಆಸ್ಪತ್ರೆಯಿಂದ ಬಿಡುಗಡೆ ಯಾದ ಸೈಫ್‌ರನ್ನು ಮನೆಗೆ ಕರೆತರಲು ಕರೀನಾ ಆಸ್ಪತ್ರೆಗೆ ಹೊರಟಿದ್ದರು. ಸೈಫರನ್ನು ಮನೆಗೆ ಕರೆತರುವ ವೇಳೆ ಕರೀನಾ ಅವರ ಕಾರಿನ ಮೇಲೆ ಅನಾಮಿಕರು ದಾಳಿ ಮಾಡಿ, ಕಾರು ಅಲುಗಾಡುವಂತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕರೀನಾ, ವಾಪಸ್ ಮನೆಗೆ ತೆರಳಿ ಸೈಫ್‌ರನ್ನು ಮನೆಗೆ ಕರೆತರುವ ಹೊಣೆ ನನಗೆ ವಹಿಸಿದ್ದರು ಎಂದು ನಟನ ಮನೆಯ ಭದ್ರತೆ ವಹಿಸಿಕೊಂಡಿರುವ ರೋನಿತ್ ರಾಯ್ ಹೇಳಿದ್ದಾರೆ. ಘಟನೆ ಹಿನ್ನೆಲೆ:ಜ.16ರಂದು ಮುಂಬೈನ ಬಾಂದ್ರಾದಲ್ಲಿನ ನಟ ಸೈಫ್ ಮನೆ ಒಳಗೆ ದಾಳಿ ಕೋರ ನುಗ್ಗಿ ಚೂರಿಯಿಂದ ಇರಿದಿದ್ದ. ಇದರಿಂದಾಗಿ 2.5 ಇಂಚಿನ ಚೂರಿ ನಟನ ದೇಹದಲ್ಲಿ ಉಳಿದಿತ್ತು. ಬಳಿಕ 5 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದರು.
ಚಾಮರಾಜನಗರ : ರಾಜ್ಯದಲ್ಲಿ ಹೃದಯಘಾತ ಸರಣಿ ಸಾವುಗಳು ಮುಂದುವರೆದಿದ್ದು, ನಿನ್ನೆ ಹೃದಯಾಘಾತದಿಂದ ಖಾಸಗಿ ಬಸ್ ಚಾಲಕ ಮೃತಪಟ್ಟ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಖಾಸಗಿ ಬಸ್ ಚಾಲಕ ಹೃದಯಾಘಾತದಿಂದ ಮೃತ ಪಟ್ಟಿರುವುದು ಇದು ಎರಡನೇ ಪ್ರಕಾರಣವಾಗಿದೆ. ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಗುರುಸಿದ್ದು(55) ಮೃತ ದುರ್ದೈವಿ. ಯಳಂದೂರಿನಿಂದ ಗುಂಡ್ಲುಪೇಟೆಗೆ ತೆರಳುವ ಆರ್ಪಿಕೆ ಎಂಬ ಖಾಸಗಿ ಬಸ್ ಚಾಲಕರಾಗಿದ್ದ ಗುರುಸಿದ್ದು ಅವರಿಗೆ ಬಸ್ ಚಾಲನೆ ವೇಳೆಯೇ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಬಸ್ನ ಸಿಬ್ಬಂದಿ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪ್ರಾಥಮಿಕ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ. ಜಿಲ್ಲೆಯಲ್ಲಿ ಖಾಸಗಿ ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟ ಎರಡನೇ ಪ್ರಕರಣ ಇದಾಗಿದೆ. ಹನೂರು ತಾಲೂಕಿನ ಮಿಣ್ಯಂ ಗ್ರಾಮದ ಖಾಸಗಿ ಬಸ್ ಚಾಲಕ ರಮೇಶ್ (47) ಹನೂರು ಪಟ್ಟಣದಿಂದ ಕೊಳ್ಳೇಗಾಲಕ್ಕೆ ಖಾಸಗಿ ಬಸ್ ಚಾಲನೆ ಮಾಡಿಕೊಂಡು ತೆರಳುತ್ತಿದ್ದಾಗ ಮಧುವನಹಳ್ಳಿ ಗ್ರಾಮದ ಬಳಿಎದೆ ನೋವು ಕಾಣಿಸಿಕೊಂಡು ಮೃತಪಟ್ಟಿದ್ದರು.
ಬೆಂಗಳೂರು : ರಾಜ್ಯ ಸರ್ಕಾರ ಈಗಾಗಲೇ ಬಸ್ಸು, ಮೆಟ್ರೋ ಟ್ರೈನ್ ಸೇರಿದಂತೆ ಹಲವು ವಸ್ತುಗಳ ದರ ಏರಿಕೆ ಮಾಡಿ ಜನತೆಗೆ ಶಾಕ್ ನೀಡಿದೆ. ಇದರ ಬೆನ್ನಲ್ಲೆ ಇದೀಗ ಪ್ರಾಣಿ ಪ್ರೀಯರಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು, ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರವೇಶ ಶುಲ್ಕ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಹೌದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರವೇಶ ಶುಲ್ಕ ಏರಿಕೆಗೆ ಸರ್ಕಾರ ಅಸ್ತು ಎಂದಿದೆ. ಶೇ 20 ರಷ್ಟು ಪ್ರವೇಶ ಶುಲ್ಕ ಹೆಚ್ಚಳಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಅಂತಿಮ ಆದೇಶ ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದೆ. ಆಗಸ್ಟ್ 1 ರಿಂದ ಪರಿಷ್ಕೃತ ದರ ಜಾರಿಯಾಗುವ ಸಾಧ್ಯತೆ ಇದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಜೂ ವೀಕ್ಷಣೆಗೆ ವಯಸ್ಕರಿಗೆ ಹಾಲಿ ಟಿಕೆಟ್ ದರ 100 ರೂ. ಇದ್ದು 120 ಆಗಲಿದೆ. ಮಕ್ಕಳಿಗೆ ಹಾಲಿ ಟಿಕೆಟ್ ದರ 50 ರೂ. ಇದ್ದು 60 ರೂ. ಆಗಲಿದೆ. ಹಿರಿಯ ನಾಗರಿಕರಿಗೆ ಹಾಲಿ ಟಿಕೆಟ್ ದರ…
ವಿಜಯನಗರ : ಕಾಂಗ್ರೆಸ್ ಶಾಸಕರ ಮನಸ್ಸುಗಳು ಕದಲಿದರೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದು ಖಚಿತ ಎಂಬುದಾಗಿ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ. ಹೌದು ವಿಜಯನಗರ ಜಿಲ್ಲೆಯ ಹೂವಿನಡಗಲಿ ತಾಲ್ಲೂಕಿನ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ.ಈ ನುಡಿಯಲ್ಲಿ ಡಿ.ಕೆ ಶಿವಕುಮಾರ್ ಸಿಎಂ ಆಗುವ ಯೋಗ ಇದೆ ಎಂಬುದಾಗಿ ಶ್ರೀವೆಂಕಪ್ಪಯ್ಯ ಮೈಲಾರದ ಕಾರ್ಣಿಕ ನುಡಿಯನ್ನು ವಿಶ್ಲೇಷಿಸಿದ್ದಾರೆ. ಸಿಎಂ ಸಿದ್ಧರಾಮಯ್ಯ ಬದಲಾವಣೆ ಗೂಡಾರ್ಥದಲ್ಲಿದೆ ಎಂಬುದಾಗಿ ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿಯನ್ನು ಮೈಲಾರಲಿಂಗೇಶ್ವರ ದೇವರ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಿಸಿದ್ದಾರೆ. 2025ರ ಪ್ರಸಕ್ತ ವರ್ಷದ ದೈವವಾಣಿ ತುಂಬಿದ ಕೊಡ ತುಳಿಕಿತಲೇ ಪರಾಕ್ ಎಂಬುದಾಗಿದೆ. ಇದರ ಅರ್ಥ ರಾಜ್ಯದಲ್ಲಿ ತುಂಬಿದ ಕೊಡಪಾನದಂತೆ ಈಗ ಸರ್ಕಾರ ಇದೆ. ಎಲ್ಲರೂ ಒಗ್ಗಟ್ಟಿನಿಂದ ಇದ್ದರೇ ಯಾವುದೇ ತೊಂದರೆ ಆಗಲ್ಲ. ಮನಸ್ಸು ಕದಲಿದರೇ ಸರ್ಕಾರಕ್ಕೆ ಅಪಾಯವಿದೆ ಎಂಬುದಾಗಿ ಕಾರ್ಣಿಕ ನುಡಿಯಾಗಿದೆ. ತುಂಬಿದ ಕೊಡ ಏನಾದರೂ ತುಳಿಕಿದರೇ ಸರ್ಕಾರಕ್ಕೆ ತೊಂದರೆಯಾಗುತ್ತದೆ. ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಬದಲಾವಣೆ ಆಗೋದು ಖಚಿತ ಎಂದು ವೆಂಕಪ್ಪಯ್ಯ ಒಡೆಯರ್ ತಿಳಿಸಿದ್ದಾರೆ.














