Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಕಲಬುರ್ಗಿ : ಹೋಳಿ ಹುಣ್ಣಿಮೆಯಂದು ಸಾಮಾನ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಅಣಕು ಶವಯಾತ್ರೆ ನಡೆಸಿ ಮನೋರಂಜನ ರೀತಿಯಲ್ಲಿ ಹೋಳಿ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಆದರೆ ಕಲ್ಬುರ್ಗಿಯಲ್ಲಿ ಕೆಲ ಯುವಕರು ಬುರ್ಖಾ ರೀತಿಯ ವೇಷ ಧರಿಸಿ ಅಣುಕು ಶವ ಯಾತ್ರೆ ಮಾಡಿದರಿಂದ ಐವರು ಯುವಕರ ಮೇಲೆ ಇದೀಗ ಪೊಲೀಸರು FIR ದಾಖಲಿಸಿದ್ದಾರೆ. ಹೌದು ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಹೋಳಿ ನಿಮಿತ್ತ ನಡೆದ ‘ಅಣಕು ಶವಯಾತ್ರೆ’ಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಐವರು ಯುವಕರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಕಾಮದಹನದ ನಂತರ ದುಷ್ಟ ಸಂಹಾರದ ಪ್ರತೀಕವಾಗಿ ಅಣಕು ಶವಯಾತ್ರೆ ನಡೆಸುವ ಸಂಪ್ರದಾಯವಿದೆ. ಈ ವೇಳೆ ಕೆಲವರು ಮಹಿಳೆಯರ ವೇಷ ಧರಿಸಿ ಅಳುವಂತೆ ನಟಿಸಿ ಹಾಸ್ಯ ಪ್ರದರ್ಶನ ನೀಡುತ್ತಾರೆ. ಆದರೆ, ನಿಂಬರ್ಗಾ ಗ್ರಾಮದಲ್ಲಿ ನಡೆದ ಈ ಬಾರಿಯ ಆಚರಣೆಯಲ್ಲಿ, ಯುವಕನೊಬ್ಬ ಮುಸ್ಲಿಂ ಸಮುದಾಯದ ಮಹಿಳೆಯರು ಧರಿಸುವ ‘ಬುರ್ಕಾ’ ಮಾದರಿಯ ಬಟ್ಟೆ ಧರಿಸಿ ಶವಯಾತ್ರೆಯ ಹಿಂದೆ…

Read More

ಬೆಂಗಳೂರು : ಬೆಂಗಳೂರಿನ *ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA)* ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಏರ್‌ಪೋರ್ಟ್ ಕೌನ್ಸಿಲ್ ಇಂಟರ್‌ನ್ಯಾಷನಲ್ (ACI) ನೀಡುವ *’ಅತ್ಯುತ್ತಮ ಆಗಮಸ್ಥಾನ’ (Best Airport at Arrivals Globally)* ಪ್ರಶಸ್ತಿಯನ್ನು ಸತತ *4ನೇ ಬಾರಿಗೆ* ಮುಡಿಗೇರಿಸಿಕೊಂಡಿದೆ. ಈ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ: ಪ್ರಶಸ್ತಿಯ ವಿವರಗಳು * *ಪ್ರಶಸ್ತಿ ನೀಡಿದ ಸಂಸ್ಥೆ:* ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್ (Airports Council International – ACI). * *ವರ್ಗ:* 2025ನೇ ಸಾಲಿನ ಏರ್‌ಪೋರ್ಟ್ ಸರ್ವಿಸ್ ಕ್ವಾಲಿಟಿ (ASQ) ಪ್ರಶಸ್ತಿಗಳಲ್ಲಿ “ಜಾಗತಿಕವಾಗಿ ಆಗಮನದ ಸಮಯದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ”. * *ವಿಶೇಷತೆ:* ಇದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ದೊರೆಯುತ್ತಿರುವ ಸತತ 4ನೇ ಗೆಲುವಾಗಿದೆ (2021, 2022, 2023, ಮತ್ತು 2024-25ರ ಅವಧಿ). ಆಯ್ಕೆಗೆ ಪ್ರಮುಖ ಕಾರಣಗಳು ಈ ಪ್ರಶಸ್ತಿಯನ್ನು ಕೇವಲ ಮೂಲಸೌಕರ್ಯ ನೋಡಿ ನೀಡುವುದಿಲ್ಲ, ಬದಲಿಗೆ ನೇರವಾಗಿ *ಪ್ರಯಾಣಿಕರ ಪ್ರತಿಕ್ರಿಯೆ (Feedback)* ಆಧರಿಸಿ ನೀಡಲಾಗುತ್ತದೆ. ಬೆಂಗಳೂರು ಏರ್‌ಪೋರ್ಟ್ ಈ…

Read More

ಬೆಂಗಳೂರು : ಗಲ್ಫ್ ಯುದ್ಧದ ನಡುವೆ ಇದೀಗ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಹಾಗಾಗಿ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತು ಬೆಲೆ ಏರಿಕೆ ಆಗಲಿದೆ ಎಂದು ವರ್ತಕರು ಹೇಳಿದ್ದಾರೆ. ಅಡುಗೆ ಎಣ್ಣೆಯದರ ಪ್ರತಿ ಲೀಟರ್ ಗೆ ಐದು ರೂಪಾಯಿ ಏರಿಕೆ ಆಗುವ ಸಾಧ್ಯತೆಯಿದ್ದು ಬೇಡಿಕೆಗೆ ತಕ್ಕಂತೆ ಅಡುಗೆ ಎಣ್ಣೆ ಸರಬರಾಜು ಆಗುತ್ತಿಲ್ಲ ಅಡುಗೆ ಎಣ್ಣೆ ಬಳಿಯಲ್ಲಿ ಮತ್ತಷ್ಟು ಏರಿಕೆ ಆಗಬಹುದು ಎಂದು ತರಗುಪೇಟೆ ಅಡುಗೆ ಎಣ್ಣೆ ವರ್ತಕ ಸತೀಶ್ ಈ ಒಂದು ಹೇಳಿಕೆ ನೀಡಿದ್ದಾರೆ. ಈ ಕುರಿತ ಪ್ರಮುಖ ಅಂಶಗಳು ಇಲ್ಲಿವೆ: ಬೆಲೆ ಏರಿಕೆಗೆ ಪ್ರಮುಖ ಕಾರಣಗಳು ಪೂರೈಕೆಯಲ್ಲಿ ವ್ಯತ್ಯಯ: ಭಾರತವು ತನ್ನ ಒಟ್ಟು ಬಳಕೆಯ ಬಹುಪಾಲು ಅಡುಗೆ ಎಣ್ಣೆಯನ್ನು (ವಿಶೇಷವಾಗಿ ಸೂರ್ಯಕಾಂತಿ ಮತ್ತು ಪಾಮ್ ಆಯಿಲ್) ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಗಲ್ಫ್ ಪ್ರದೇಶದಲ್ಲಿನ ಅಸ್ಥಿರತೆಯಿಂದ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗುವ ಆತಂಕವಿದೆ. ಆಮದು ಸುಂಕದ ಪ್ರಭಾವ: ಇತ್ತೀಚೆಗೆ ಕೇಂದ್ರ ಸರ್ಕಾರವು…

Read More

ಬೆಂಗಳೂರು : ಇರಾನ್ ಸರ್ವೋಚ್ಚ ನಾಯಕ ಖಮೇನಿ ಪರ ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗಿದೆ ಎಂಬ ಆರೋಪದ ಹಿನ್ನೆಲೆ ಶಾಂತಿನಗರ ಶಾಸಕ ಎನ್‌ ಹ್ಯಾರಿಸ್ ವಿರುದ್ಧ ದೂರು ಸಲ್ಲಿಕೆಯಾಗಿದೆ. ಹೌದು ಹಿಂದೂ ಸಂಘಟನೆ ಕಾರ್ಯಕರ್ತ ತೇಜಸ್ ಗೌಡ ಶಾಸಕ ಎನ್‌ ಹ್ಯಾರಿಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಹಾಗೂ ಡಿಜಿ ಹಾಗೂ ಐಜಿಪಿಗೆ ದೂರು ಸಲ್ಲಿಸಿದ್ದಾರೆ. ಸದ್ಯ ಇರಾನ್ ನಾಯಕ ಅಲಿ ಖಮೇನಿ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ರಾಜಕೀಯ ಮತ್ತು ಕಾನೂನು ವಿವಾದಕ್ಕೆ ಕಾರಣವಾಗಿದ್ದು,ಕಾಂಗ್ರೆಸ್ ಶಾಸಕ ಎನ್‌ ಹ್ಯಾರಿಸ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ಹೈಕೋರ್ಟ್ ನಿರ್ದೇಶನ ಉಲ್ಲಂಘಿಸಲಾಗಿದೆ ಎಂಬ ಆರೋಪವಿದೆ. ಯಾವುದೇ ಪ್ರತಿಭಟನೆ, ಹೋರಾಟ, ಧರಣಿ ನಡೆಸುವುದಾದರೂ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿಯೇ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶನವಿದೆ. ಆದರೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರು ಹೈಕೋರ್ಟ್ ನಿರ್ದೇಶನ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಹಿಂದೂ ಕಾರ್ಯಕರ್ತ ತೇಜಸ್ ಗೌಡ ದೂರಿನಲ್ಲಿ…

Read More

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಗೆಜೆಟೆಡ್ ಪ್ರೊಬೇಷನರ್ಸ್ (Group A & B) ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಸರ್ಕಾರ ಮತ್ತು ಆಯೋಗವು ಆಂತರಿಕ ತನಿಖೆ ಹಾಗೂ ಪರಿಶೀಲನೆಗೆ ಮುಂದಾಗಿದೆ. ಈ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ: ಅಕ್ರಮ ಆರೋಪದ ಹಿನ್ನೆಲೆ ಇತ್ತೀಚೆಗೆ ಪ್ರಕಟವಾದ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿ ಈ ಕೆಳಗಿನ ಸಂಶಯಾಸ್ಪದ ಅಂಶಗಳು ಕಂಡುಬಂದಿವೆ ಎಂದು ಅಭ್ಯರ್ಥಿಗಳು ಮತ್ತು ವಿರೋಧ ಪಕ್ಷಗಳು ಆರೋಪಿಸಿವೆ: ಸರಣಿ ಸಂಖ್ಯೆಯ ಅಭ್ಯರ್ಥಿಗಳ ಆಯ್ಕೆ: ಒಂದೇ ಪರೀಕ್ಷಾ ಕೇಂದ್ರದ, ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ ಸತತ 10 ರಿಂದ 15 ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿರುವುದು ಅಕ್ರಮದ ಶಂಕೆ ಮೂಡಿಸಿದೆ. ಕುಟುಂಬ ಸದಸ್ಯರ ಆಯ್ಕೆ: ಕೆಲವು ಪ್ರಕರಣಗಳಲ್ಲಿ ಒಂದೇ ಕುಟುಂಬದ ಸದಸ್ಯರು ಒಟ್ಟಾಗಿ ಆಯ್ಕೆಯಾಗಿರುವುದು ಕೂಡ ಚರ್ಚೆಗೆ ಕಾರಣವಾಗಿದೆ. ಪಾರದರ್ಶಕತೆಯ ಕೊರತೆ: ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಲೋಪದೋಷಗಳು ನಡೆದಿವೆ ಮತ್ತು…

Read More

ಬೆಂಗಳೂರು : ನೇಮಕಾತಿಯಲ್ಲಿ ಒಳಮೀಸಲಾತಿ ಗೊಂದಲ ಬಗ್ಗೆ ಇಂದು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸೋದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಒಳಮೀಸಲಾತಿ ಹಂಚಿಕೆಯಲ್ಲಿ ಗೊಂದಲ ಆಗಿದೆ ಅಂತ ಸಮಸ್ಯೆ ಆಗಿದೆ. ರೋಸ್ಟರ್ ಮಾಡುವಾಗ ಒಂದು ವರ್ಗಕ್ಕೆ ಹೆಚ್ಚು ಮೀಸಲಾತಿ ಸಿಗುತ್ತದೆ ಅನ್ನೋದಿದೆ. ಈಗ ಮತ್ತೆ ಸಂಪುಟದಲ್ಲಿ ವಿಷಯದ ಮೇಲೆ ಚರ್ಚೆ ಆಗುತ್ತದೆ. ಅಂತಿಮವಾಗಿ ಸಂಪುಟದಲ್ಲಿ ಏನು ಚರ್ಚೆ ಆಗುತ್ತೋ ಅದರಂತೆ ಮುಂದುವರಿಯುತ್ತೇವೆ. ಎಸ್‌ಸಿ ಸಮುದಾಯಕ್ಕೆ 17% ಒಳಮೀಸಲಾತಿ ಕೊಡುವ ತೀರ್ಮಾನ ಆಗಿತ್ತು. ಆದರೆ ಅಲೆಮಾರಿಗಳಿಗೆ ಪ್ರತ್ಯೇಕ 1% ಕೊಡಿ ಅಂತ ಬೇಡಿಕೆ ಇದೆ. ಕೋರ್ಟಿನಲ್ಲೂ 56% ಮೀಸಲಾತಿಗೆ ತಡೆ ಕೊಡಲಾಗಿದೆ. ಇದೆಲ್ಲ ದೊಡ್ಡ ಚರ್ಚೆ ನಡೆಸಿ ತೀರ್ಮಾನ ಮಾಡಬೇಕಾದ ವಿಚಾರ. ಭಿನ್ನಾಭಿಪ್ರಾಯಗಳು ಇದ್ದೇ ಇರ್ತವೆ. ಏನೇ ಇದ್ದರೂ ಸಂಪುಟದಲ್ಲಿ ಚರ್ಚೆ ಮಾಡಿ ಎಲ್ಲರ ಹಿತಾಸಕ್ತಿ ನೋಡಿ ತೀರ್ಮಾನ ಆಗುತ್ತೆ ಅಂತ ಭರವಸೆ ವ್ಯಕ್ತಪಡಿಸಿದರು. ಇನ್ನು 56% ಮೀಸಲಾತಿಯಡಿಯೇ ನೇಮಕಾತಿ ಹಾಗೂ ಒಳಮೀಸಲಾತಿ ಕೊಡುವಂತೆ ಒತ್ತಾಯಿಸಿ ಬಿಜೆಪಿಯಿಂದ ಹೋರಾಟದ ಎಚ್ಚರಿಕೆ ವಿಚಾರ ಬಗ್ಗೆ…

Read More

ಗದಗ : ಗದಗದಲ್ಲಿ ಭೀಕರವಾದ ಅಪಘಾತ ಸಭವಿಸಿದ್ದು, ಗೂಡ್ಸ್‌ ವಾಹನ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಎಂಟು ಜನರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗದಗ ತಾಲೂಕಿನ ಹರ್ತಿ ಬಳಿ ನಡೆದ ಘಟನೆ ನಡೆದಿದೆ. ಮುತ್ತಪ್ಪ ಸುಟಗೇರಿ (35), ನಿಂಗಪ್ಪ ಯಳವತ್ತಿ (36) ಮೃತ ದುರ್ದೈವಿಗಳು. ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಹಾಗೂ ಗಾಯಾಳುಗಳು ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮಸ್ಥರು. ಒಟ್ಟು ಹತ್ತು ಮಂದಿ ಗೋಜನೂರು ಕಾಮಣ್ಣ ಮೆರವಣಿಗೆ ನೋಡಲು ಹೋಗಿದ್ದರು. ಗೋಜನೂರಿನಿಂದ ಹಿರೇಕೊಪ್ಪಕ್ಕೆ ಬರುವ ವೇಳೆ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಚಾಲಕನ ಅಜಾಗರೂಕತೆಯಿಂದ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ವಿಜಯನಗರ : ಈ ಹಿಂದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಗಳು ನಡೆದಿದ್ದವು. ಅದರ ಬೆಲೆ ಇದೀಗ ವಿಜಯನಗರದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕನೊಬ್ಬ ಬಾಳೆಹಣ್ಣಿನ ಆಸೆ ತೋರಿಸಿ ಶೌಚಾಲಯ ಸ್ವಚ್ಛಗೊಳಿಸಿರುವ ಘಟನೆ ವರದಿಯಾಗಿದೆ. ಹೌದು ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿರುವ ಆಘಾತಕಾರಿ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ನಡೆದಿದೆ. ಈ ಕೃತ್ಯ ಎಸಗಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಉಮೇಶ್ ವಿರುದ್ಧ ಗ್ರಾಮಸ್ಥರು ಈಗ ರೊಚ್ಚಿಗೆದ್ದಿದ್ದಾರೆ. ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಉಮೇಶ್ ಅವರು ಇಬ್ಬರು ಪುಟ್ಟ ವಿದ್ಯಾರ್ಥಿಗಳಿಗೆ ಬಾಳೆ ಹಣ್ಣಿನ ಆಸೆ ತೋರಿಸಿ, ಅವರಿಂದ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ಈ ದೃಶ್ಯವನ್ನು ಗಮನಿಸಿದ ಸ್ಥಳೀಯ ಯುವಕರು ಮತ್ತು ಸಾರ್ವಜನಿಕರು ತಕ್ಷಣವೇ ಶಿಕ್ಷಕನನ್ನು ಪ್ರಶ್ನಿಸಿದ್ದಾರೆ. ಯುವಕರು ತಪ್ಪು ಒಪ್ಪಿಕೊಳ್ಳುವಂತೆ ಶಿಕ್ಷಕನಿಗೆ ಒತ್ತಾಯಿಸಿದಾಗ, ಶಿಕ್ಷಕ ಉಮೇಶ್ ಉದ್ಧಟತನ ಮೆರೆದಿದ್ದಾರೆ. ನನ್ನನ್ನು ಪ್ರಶ್ನಿಸಲು ನೀವ್ಯಾರು? ನಿಮ್ಮ ಮೇಲೆ…

Read More

ಹಾವೇರಿ : ಕರ್ತವ್ಯ ಲೋಪ ಹಿನ್ನಲೆ ಹಾವೇರಿ ಜಿಲ್ಲೆಯ ಗುತ್ತಲ ಠಾಣೆ ಪಿಎಸ್ಐ ಬಸನಗೌಡ ಬಿರಾದರ ಅಮಾನತುಗೊಳಿಸಿ ದಾವಣಗೆರೆ ಪೂರ್ವ ವಲಯ ಐಜಿಪಿ ಡಾ. ರವಿಕಾಂತ್ ಗೌಡ ಆದೇಶ ಹೊರಡಿಸಿದ್ದಾರೆ. ಗುತ್ತಲ ಪಟ್ಟಣದಲ್ಲಿ ಮಟ್ಕಾ ರಾಜಾರೋಷವಾಗಿ ನಡೆಯುತ್ತಿತ್ತು. ಮೂರು ದಿನಗಳ ಹಿಂದೆ ಗುತ್ತಲ ಪಟ್ಟಣಕ್ಕೆ ರುದ್ರಪ್ಪ ಲವಾಣಿ ಭೇಟಿ ನೀಡಿದ್ದರು. ವಿವಿಧ ಕಾಮಗಾರಿಗಳ ಉದ್ಘಾಟನೆಗೆ ರುದ್ರಪ್ಪ ಲಮಾಣಿ ಆಗಮಿಸಿದ್ದರು. ಆರೋಪಿಯನ್ನು ಹಿಡಿದು ಪೊಲೀಸರಿಗೆ ರುದ್ರಪ ಲಮಾಣಿ ಒಪ್ಪಿಸಿದ್ದಾರೆ. ಮಟ್ಕಾ ದಂದೇ ಕೋರರನ್ನು ಹಿಡಿಯಲು ಶಾಸಕರೇ ಬರಬೇಕಾಯಿತು ಎಂದು ಪೊಲೀಸರ ವಿರುದ್ಧ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More

ಬೆಳಗಾವಿ: ಅಪ್ರಾಪ್ತ ವಯಸ್ಸಿನ ದಿವ್ಯಾಂಗ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ 40 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಂದೂವರೆ ಲಕ್ಷ ರೂಪಾಯಿ ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ತ್ವರಿತ ಪೋಕ್ಸೋ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಮ್. ಪುಷ್ಪಲತಾ ಅವರು ಒಟ್ಟು 8 ಸಾಕ್ಷಿಗಳ ವಿಚಾರಣೆ ಮಾಡಿ, 58 ದಾಖಲೆಗಳು, 7 ಮುದ್ದೆಮಾಲುಗಳ ಆಧಾರದ ಮೇಲಿಂದ ಆರೋಪಿ ಧರೇಪ್ಪ ಖನಸೆ ಮೇಲಿನ ಆಪಾದನೆ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದರು. ಜೊತೆಗೆ ಆರೋಪಿತನಿಗೆ ಕಲಂ: 6 ಪೋಕ್ಸೋ ಕಾಯ್ದೆ-2012 ರಡಿ 30 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ಮತ್ತು ದಂಡದ ಮೊತ್ತ ತುಂಬಲು ತಪ್ಪಿದಲ್ಲಿ 2 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ, ಹಾಗೂ ಕಲಂ 3(1) (w) (i) (ii), 3(2)(v) ಎಸ್ಸಿ/ಎಸ್ಟಿ ಸೆಕ್ಷನ್ ಅಡಿಯಲ್ಲಿ 10 ವರ್ಷ ಕಾರಾಗೃಹ ಶಿಕ್ಷೆ, 50…

Read More