Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಗ್ಯಾರಂಟಿ ಯೋಜನೆಗೆ NDRF ಹಣ ಬಳಕೆ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಇದೀಗ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, NDRF ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, NDRF ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿಲ್ಲ. ಬಿಜೆಪಿಯವರಿಗೆ ಒಂದು ರೀತಿ ಕಾಮಾಲೆ ರೋಗ ಇದ್ದಂತೆ. ಗ್ಯಾರಂಟಿ ಯೋಜನೆ ಸಕ್ಸಸ್ ಆಗಿದ್ದಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಗ್ಯಾರಂಟಿ ಜಾರಿ ಮಾಡಲು ಆಗಲ್ಲ ಎಂದು ಮೋದಿ ಹೇಳಿದ್ದರು. ಕರ್ನಾಟಕದಲ್ಲಿ ಎರಡೂವರೆ ವರ್ಷದಿಂದ ಗ್ಯಾರಂಟಿ ಸಕ್ಸಸ್ ಆಗಿದೆ ಎಂದರು. ಹಾಗಾಗಿ ಬಿಜೆಪಿಯವರಿಗೆ ತಳಮಳ ಆಗಿ ಬಿಟ್ಟಿದೆ. ನಮ್ಮ ಯೋಜನೆಗಳನ್ನು ಬಿಜೆಪಿಯವರು ಕಾಪಿ ಮಾಡುತ್ತಿದ್ದಾರೆ.ಬಿಹಾರ್, ದೆಹಲಿಕ್ಸ್ ರಾಜಸ್ತಾನ್ ಹಾಗು ಮಹಾರಾಷ್ಟ್ರದಲ್ಲಿ ಏನು ಮಾಡಿದ್ದಾರೆ? ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇನ್ನು MLC ಸಿಟಿ ರವಿ ಹೈಕಮಾಂಡ್ ಗೆ ಸಿದ್ದರಾಮಯ್ಯ ಸೆಡ್ಡು ಹೊಡೆದಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ, ಬಿಜೆಪಿಯವರಿಗೆ ಯಾಕೆ…
ಬೆಂಗಳೂರು : ಬೆಂಗಳೂರಲ್ಲಿ ಇಸ್ರೇಲ್ ರಾಯಭಾರಿ ಕಚೇರಿಯಲ್ಲಿ 6 ‘RDX’ ಇಟ್ಟಿರೋದಾಗಿ ಇ-ಮೇಲ್ ಬೆದರಿಕೆ ಸಂದೇಶ ಬಂದಿದ್ದು, ಶುಕ್ರವಾರ ಪ್ರಾರ್ಥನೆ ವೇಳೆ ಬ್ಲಾಸ್ಟ್ ಆಗುತ್ತೆ ಎಂದು ಬೆದರಿಕೆ ಸಂದೇಶ ಬಂದಿದೆ. ಸೆ.22 ರಂದು Cho_ramaswami@hotmail ಎಂಬ ಐಡಿಯಿಂದ ಮೇಲ್ ಸಂದೇಶ ಬಂದಿದೆ.ಜೊತೆಗೆ ಹೈಕೋರ್ಟ್ ಗು ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ.ಸದ್ಯ ರಾಮಸ್ವಾಮಿ ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು : ಇಷ್ಟು ದಿನ ಕಾಂಗ್ರೆಸ್ ನಲ್ಲಿ ಸೆಪ್ಟೆಂಬರ್, ಅಕ್ಟೊಬರ್ ನವೆಂಬರ್ ನಲ್ಲಿ ಕ್ರಾಂತಿ ಆಗಲಿದೆ ಎಂದು ಕಾಂಗ್ರೆಸ್ ನಾಯಕರು ಸೇರಿ ಬಿಜೆಪಿ ನಾಯಕರು ಹೇಳಿದ್ದೆ ಹೇಳಿದ್ದು, ಇದೀಗ ಶಾಸಕ ಪ್ರದೀಪ್ ಈಶ್ವರ್ ರಾಜ್ಯ ಬಿಜೆಪಿಯಲ್ಲಿ ಅಕ್ಟೊಬರ್ ಕ್ರಾಂತಿ ಆಗಲಿದೆ ಎಂದು ಸ್ಫೋಟಕವಾದ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಅಕ್ಟೊಬರ್ ಕ್ರಾಂತಿ ಆಗುತ್ತದೆ. ಆರ್.ಅಶೋಕ್ ವಿಪಕ್ಷ ಸ್ಥಾನಕ್ಕೆ ಕಂಟಕವಿದೆ. ಆರ್.ಅಶೋಕ್ ಔಟ್ ಗೊಯಿಂಗ್ ವಿಪಕ್ಷ ನಾಯಕ. ಸುನೀಲ್ ಕುಮಾರ್ ಇನ್ ಕಮಿಂಗ್ ವಿಪಕ್ಷ ನಾಯಕ ಎಂದು ಪದ್ಮನಾಭನಗರದ ಜ್ಯೋತಿಷ್ಯಾಲಯ ಸುಳ್ಳು ಹೇಳುತ್ತದೆ. ಹೀಗಾಗಿ ಬೇರೆ ಜ್ಯೋತಿಷ್ಯಾಲಯಕ್ಕೆ ಹೋಗಿದ್ದೆ. ಆರ್.ಅಶೋಕ್ ಚೇರ್ ಅಕ್ಟೊಬರ್ ತಿಂಗಳಲ್ಲಿ ಅಲ್ಲಾಡುತ್ತೆ ಬಿಜೆಪಿಯ ಮನೆ ಒಡೆದು ನೂರು ಬಾಗಿಲು ಆಗಿದೆ ಎಂದರು.
ಬೆಂಗಳೂರು : ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು ಇದುವರೆಗೂ ಬೆಂಗಳೂರು ಹೊರತುಪಡಿಸಿ, 63% ರಷ್ಟು ಜಾತಿ ಗಣತಿ ಸಮೀಕ್ಷೆ ನಡೆದಿದೆ ಇದೀಗ ಇಂದಿನಿಂದ ಬೆಂಗಳೂರಿನಲ್ಲಿ ಜಾತಿ ಗಣತಿ ಸಮೀಕ್ಷೆ ಆರಂಭವಾಗಿದ್ದು, ಆರಂಭದಲ್ಲೇ ಹಲವು ವಿಘ್ನಗಳು ಎದುರಾಗಿವೆ.ಇದೀಗ ಹಲವು ಸಮಸ್ಯೆ ಎದುರಿಸುತ್ತಿರುವ ಸಿಬ್ಬಂದಿಗಳು ಸಮಸ್ಯೆ ಬಗೆಹರಿಸಿ ಎಂದು 200ಕ್ಕೂ ಹೆಚ್ಚು ಸಿಬ್ಬಂದಿಗಳು ಜಾತಿಗಣತಿ ಸಮೀಕ್ಷೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೌದು ಬೆಂಗಳೂರಿನಲ್ಲಿ ಜಾತಿಗಣತಿಗೆ ಆರಂಭದಲ್ಲೇ ವಿಘ್ನವಾಗಿದ್ದು, ಸಿಬ್ಬಂದಿಯನ್ನು ಸೆಲೆಕ್ಟ್ ಮಾಡಿದ್ದೆ ಒಂದು ವಾರ್ಡಿಗೆ ಸಿಬ್ಬಂದಿಯನ್ನು ನಿಯೋಜಿಸಿದ್ದೇ ಮತ್ತೊಂದು ವಾರ್ಡ್ ಗೆ ನೂರಕ್ಕೆ ಎಷ್ಟು ಸಿಬ್ಬಂದಿಗೆ ವಾರ್ಡ್ ಬದಲಾಗಿದೆ. ದೂರ ಹೋಗಿ ಸಮೀಕ್ಷೆ ಮಾಡುವುದು ಹೇಗೆ ಅಂತ ಅವರು ಅಳಲು ತೋಡಿಕೊಳ್ಳುತ್ತಿದ್ದಾರೆ. ಸ್ಥಳಕ್ಕೆ ಹೋಗುವುದರಲ್ಲಿ ನಮಗೆ ಸಮಯ ಆಗುತ್ತದೆ ಸಮೀಕ್ಷೆ ಮಾಡುವುದು ಹೇಗೆ ಅಂತ ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ.ಸರ್ಕಾರಿ ನೌಕರರದರೆ ಎಲ್ಲವನ್ನು ಸಹಿಸಿಕೊಳ್ಳಬೇಕಾ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಒಬ್ಬರು ಸಿಬ್ಬಂದಿ ಸಂಪೂರ್ಣವಾಗಿ ಕುರುಡವಾಗಿದ್ದು, ನನಗೆ…
ಬೆಂಗಳೂರು : ಬೆಂಗಳೂರಲ್ಲಿ ಘೋರವಾದ ದುರಂತವೊಂದು ಸಂಭವಿಸಿದ್ದು, ಡಿನೋನೇಟರ್ ಗೆ ಮಿಂಚು ಬಡಿದು ಓರ್ವ ಸಾವನಪ್ಪಿದ್ದು, ಇಬ್ಬರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಉರಿಗಹಳ್ಳಿ ಬಳಿಯ ನೀವು ಸ್ಯಾಂಡ್ ಕ್ರಷರ್ ನಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಉರಗಹಳ್ಳಿಯಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕ ಕಿಶನ್ (45) ಸಾವನ್ನಪ್ಪಿದ್ದಾರೆ. ಇನ್ನು ಘಟನೆಯೆಲ್ಲಿ ನಿಜಾಂ ಹಾಗೂ ಶರ್ಮ ಎಂಬವರಿಗೆ ಗಂಭೀರವಾದ ಗಾಯಳಾಗಿವೆ. ಬಂಡೆ ಸ್ಫೋಟಿಸಲು ದಿನಾನೆಟರ್ ಅಳವಡಿಸಲು ತಯಾರಿ ನಡೆದಿತ್ತು. ನಿನ್ನೆ ಸಂಜೆ ಡಿಟೋನೇಟರ್ ಗೆ ಮಿಂಚು ಬಡಿದು ಈ ಒಂದು ದುರಂತ ಸಂಭವಿಸಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
BIG NEWS : ಬೆಂಗಳೂರಿನಲ್ಲಿ ‘ಜಾತಿಗಣತಿಗೆ’ ಆರಂಭದಲ್ಲೇ ವಿಘ್ನ : ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಸಿಬ್ಬಂದಿಗಳು
ಬೆಂಗಳೂರು : ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು ಇದುವರೆಗೂ ಬೆಂಗಳೂರು ಹೊರತುಪಡಿಸಿ, 63% ರಷ್ಟು ಜಾತಿ ಗಣತಿ ಸಮೀಕ್ಷೆ ನಡೆದಿದೆ ಇದೀಗ ಇಂದಿನಿಂದ ಬೆಂಗಳೂರಿನಲ್ಲಿ ಜಾತಿ ಗಣತಿ ಸಮೀಕ್ಷೆ ಆರಂಭವಾಗಿದ್ದು, ಆರಂಭದಲ್ಲೇ ಹಲವು ವಿಘ್ನಗಳು ಎದುರಾಗಿವೆ. ಹೌದು ಬೆಂಗಳೂರಿನಲ್ಲಿ ಜಾತಿಗಣತಿಗೆ ಆರಂಭದಲ್ಲೇ ವಿಘ್ನವಾಗಿದ್ದು, ಸಿಬ್ಬಂದಿಯನ್ನು ಸೆಲೆಕ್ಟ್ ಮಾಡಿದ್ದೆ ಒಂದು ವಾರ್ಡಿಗೆ ಸಿಬ್ಬಂದಿಯನ್ನು ನಿಯೋಜಿಸಿದ್ದೇ ಮತ್ತೊಂದು ವಾರ್ಡ್ ಗೆ ನೂರಕ್ಕೆ ಎಷ್ಟು ಸಿಬ್ಬಂದಿಗೆ ವಾರ್ಡ್ ಬದಲಾಗಿದೆ. ದೂರ ಹೋಗಿ ಸಮೀಕ್ಷೆ ಮಾಡುವುದು ಹೇಗೆ ಅಂತ ಅವರು ಅಳಲು ತೋಡಿಕೊಳ್ಳುತ್ತಿದ್ದಾರೆ. ಸ್ಥಳಕ್ಕೆ ಹೋಗುವುದರಲ್ಲಿ ನಮಗೆ ಸಮಯ ಆಗುತ್ತದೆ ಸಮೀಕ್ಷೆ ಮಾಡುವುದು ಹೇಗೆ ಅಂತ ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ. ಒಬ್ಬರು ಸಿಬ್ಬಂದಿ ಸಂಪೂರ್ಣವಾಗಿ ಕುರುಡವಾಗಿದ್ದು, ನನಗೆ ಕಣ್ಣು ಕಾಣಿಸಲ್ಲ ಯಾವುದೇ ಆಪರೇಷನ್ ಮಾಡಲು ಸಹ ಬರದಂತೆ ಕಣ್ಣು ಕಾಣಿಸಲ್ಲ. ಹೀಗಿದ್ದ ಮೇಲೆ ನಮಗೆ ದೂರದ ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ. ಹೀಗಾದರೆ ಸಮೀಕ್ಷೆ ಮಾಡುವುದು ಹೇಗೆ ಎಂದು ಅಳಲು…
ಬೆಂಗಳೂರು : ಮಹಿಳೆಯೋರ್ವಳು ಪ್ರಿಯಕರನಿಗೆ ತನ್ನ ಸ್ನೇಹಿತೆಯನ್ನು ಪರಿಚಯಿಸಿದ್ದು ಈ ವೇಳೆ ಆತ ಮಹಿಳೆಯ ಸ್ನೇಹಿತೆಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಓಯೋ ರೂಂಗೆ ಕರೆದುಕೊಂಡು ಹೋಗಿದ್ದಾನೆ. ಈ ವಿಷಯ ತಿಳಿದು ಮಹಿಳೆ ಅವರಿಬ್ಬರೂ ಇರುವ ಲಾಡ್ಜ್ ಗೆ ತೆರಳಿ ಗಲಾಟೆ ಮಾಡಿದ್ದಾಳೆ. ಆಗ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಶೋಧ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆತ್ಮಹತ್ಯೆಗೂ ಮುನ್ನ ತನ್ನ ಪ್ರಿಯತಮ ಬೇರೊಂದು ಮಹಿಳೆಯೊಂದಿಗೆ ಇದ್ದ ಓಯೋ ರೂಂ ಮೇಲೆ ದಾಳಿ ಮಾಡಿ ಗಲಾಟೆ ಮಾಡಿದ್ದಳು. ಗಲಾಟೆಗೆ ಪ್ರಿಯತಮ ವಿಶ್ವನಾಥ್ ಸರಿಯಾಗಿ ರೆಸ್ಪಾನ್ಸ್ ಮಾಡಿದಿದ್ದಾಗ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ಯಶೋಧಗೆ ಗಂಡ ಇಬ್ಬರು ಮಕ್ಕಳಿದ್ದರು. ಹೀಗಿದ್ದರೂ, ಆಕೆ ಪಕ್ಕದ ಏರಿಯಾದ ಮನೆಯಲ್ಲಿ ಆಡಿಟರ್ ಆಗಿದ್ದ ವಿಶ್ವನಾಥ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಕಳೆದ 9 ವರ್ಷಗಳಿಂದ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು. ಆದರೆ, ಇತ್ತೀಚೆಗೆ ಯಶೋಧ ತನ್ನ ಸ್ನೇಹಿತೆಯೊಬ್ಬರನ್ನು ಪ್ರಿಯಕರನಿಗೆ ಪರಿಚಯಿಸಿದ್ದರು. ಪ್ರಿಯಕರ ಯಶೋಧ ಸ್ನೇಹಿತೆ…
ಮೈಸೂರು : ಜಂಬೂ ಸವಾರಿ ಆರಂಭಕ್ಕೂ ಮುನ್ನ ನಡೆದ ವೈಭವದ ದಸರಾ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಂಪುಟ ಸಚಿವರೊಂದಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಮೊಮ್ಮಗ ಕಾಣಿಸಿಕೊಂಡ ವಿಚಾರವಾಗಿ ಸಚಿವ HC ಮಹದೇವಪ್ಪ ಇದೀಗ ಸ್ಪಷ್ಟನೆ ನೀಡಿದ್ದಾರೆ ಮೈಸೂರಿನಲ್ಲಿ ಮಾತನಾಡಿದ ಅವರು, ಸಿಎಂ ಪರೇಡ್ ವೇಳೆ ಮಹದೇವಪ್ಪ ಮೊಮ್ಮಗ ಕಾಣಿಸಿಕೊಂಡ ವಿಚಾರವಾಗಿ ಈ ಕುರಿತು, ಅಲ್ಲಿ ಯಾವ ಪ್ರೋಟೋಕಾಲ್ ಕೂಡ ಉಲ್ಲಂಘನೆಯಾಗಿಲ್ಲ ಅದು ಪ್ರೋಟೋಕಾಲ್ ವ್ಯಾಪ್ತಿಗೆ ಬರುವುದೇ ಇಲ್ಲ. ಪರೇಡ್ ಅಲ್ಲ ಮತ್ತು ಅಲ್ಲಿ ಯಾವ ಧ್ವಜ ವಂದನೆಯೂ ಇರಲಿಲ್ಲ. ಕೇವಲ ಜನರಿಗೆ ವಂದನೆ ಸಲ್ಲಿಸಲು ಎಲ್ಲರೂ ಒಟ್ಟಾಗಿ ಹೋಗಿದ್ದೆವು. ಆಚರಣೆ ಬಗ್ಗೆ ಗೊತ್ತಿಲ್ಲದವರು ಈ ರೀತಿ ಸುದ್ದಿ ಹಬ್ಬಿಸುತ್ತಾರೆ ಅಷ್ಟೇ ಎಂದು ಮೈಸೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ ಸ್ಪಷ್ಟಪಡಿಸಿದರು.
ಕೋಲಾರ : ಕೋಲಾರದಲ್ಲಿ ನಾಪತ್ತೆಯಾಗಿದೆ ಇಬ್ಬರು ಬಾಲಕಿಯರು ಇದೀಗ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುಪ್ಪಂಪಾಳ್ಯ ಬಳಿ ಇಬ್ಬರು ಬಾಲಕಿಯರ ಶವ ಪತ್ತೆಯಾಗಿದೆ. ಅಕ್ಟೋಬರ್ 2 ರಂದು ಮುಳಬಾಗಿಲು ತಾಲೂಕಿನ ಯಳಚೇಪಲ್ಲಿ ಇಂದ ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದರು. ಧನ್ಯ ಬಾಯಿ (13) ಹಾಗೂ ಚೈತ್ರಾ ಬಾಯಿ (13) ನಾಪತ್ತೆಯಾಗಿದ್ದರು. ಇದೀಗ ಮುಳಬಾಗಿಲು ತಾಲೂಕಿನ ಕುಪ್ಪಂಪಾಳ್ಯ ಬಳಿ ಇಬ್ಬರು ಬಾಲಕಿಯರು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದುಷ್ಕರ್ಮಿಗಳು ಬಾಲಕಿಯರನ್ನು ಕೊಂದು ಶವ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿ : ಮಧ್ಯಪ್ರದೇಶ ಹಾಗು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಸರಣಿ ಸಾವು ಸಂಭವಿಸಿದ್ದು, ಇದುವರೆಗೂ ಕೆಮಿನ ಸಿರಪ್ ಸೇವಿಸಿ ಮೃತಪಟ್ಟ ಮಕ್ಕಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸಿರಪ್ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಎರಡು ವರ್ಷದೊಳಗಿನ ಮಕ್ಕಳಿಗೆ ಶೀತ ಕೆಮ್ಮು ಔಷಧಿ ನೀಡಬೇಡಿ, 5 ವರ್ಷದೊಳಗಿನ ಮಕ್ಕಳಿಗೆ ಕಾಫ್ ಸಿರಪ್ ನೀಡಬೇಕಾದರೆ ಎಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಎಚ್ಚರಿಕೆ ಕ್ರಮ ಕೈಗೊಳ್ಳುವುದಕ್ಕೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಮೊದಲು ಹೈಡ್ರೇಶನ್ ಹಾಗೂ ರೆಸ್ಟ್ ಮಾಡುವುದು ಮೊದಲ ಆದ್ಯತೆ ಆಗಿರಬೇಕು ಎಂದು ಸೂಚನೆ ನೀಡಿದೆ. ಔಷಧ ನಿಯಂತ್ರಕ ಅಮಾನತು ಕೆಮ್ಮು ಅಂತ ಕೊಟ್ಟ ಸಿರಪ್ ಗೆ ಮೃತ ಮಕ್ಕಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ 9 ಮತ್ತು ರಾಜಸ್ಥಾನದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಕೇಸರ್ ಫಾರ್ಮಾ ಕಂಪನಿಯ 19 ಮೆಡಿಸನ್ ಇದೀಗ ಸ್ಥಗಿತಗೊಳಿಸಲಾಗಿದೆ.…














