Subscribe to Updates
Get the latest creative news from FooBar about art, design and business.
Author: kannadanewsnow05
ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ದೂರುದಾರನ ಪರವಾಗಿ ಸ್ಥಳೀಯ 6 ಜನರು ಇದೀಗ ಎಸ್ಐಟಿ ಮುಂದೆ ಹಾಜರಾಗಿದ್ದಾರೆ. ಸ್ಥಳೀಯ 6 ಜನರು ಬಾಲಕಿಯ ಶವ ಹೂತಿರುವುದನ್ನು ನೋಡಿದ್ದಾಗಿ ಸಾಕ್ಷಿ ಹೇಳಲು ಇದೀಗ SIT ಮುಂದೆ ಬಂದಿದ್ದಾರೆ. ಶೋಧ ಕಾರ್ಯಕ್ಕೆ ಸಹಾಯ ಮಾಡುತ್ತೇವೆ ಎಂದು ಆಗಮಿಸಿದ್ದಾರೆ ಆದರೆ ಈ ಕುರಿತು ಎಸ್ಐಟಿ ಅಧಿಕಾರಿಗಳು ಇನ್ನೂ ಕೂಡ ಖಚಿತಪಡಿಸಿಲ್ಲ ಆರು ಜನರ ಹೇಳಿಕೆ ಸತ್ಯಾಸತ್ಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಅಧಿಕಾರಿಗಳು ಇದುವರೆಗೂ ಇದನ್ನು ಖಚಿತಪಡಿಸಿಲ್ಲ.
ಬೆಂಗಳೂರು : ದೊಡ್ಡಬಳ್ಳಾಪುರ ತಾಲೂಕಿನ ಸಿಂಚನಹಳ್ಳಿಯ ಸುಶ್ಮಿತಾ (23) ಎನ್ನುವ ಗರ್ಭಿಣಿ ವೈದ್ಯರ ನಿರ್ಲಕ್ಷಕ್ಕೆ ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮದ ಸುಶ್ಮಿತಾ ಕಠಾರಿ ಆಸ್ಪತ್ರೆಯಲ್ಲಿ ಸುಶ್ಮಿತಾ ಸಾವನಪ್ಪಿದ್ದಾರೆ. ನಿನ್ನೆ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡು ಹೋಗಿದ್ದರು. ಈ ವೇಳೆ ಆಸ್ಪತ್ರೆ ಆಗಿದ್ದರೂ ನಾಳೆ ಹರಿಗೆ ಮಾಡುತ್ತೇವೆ ಅಂತ ವೈದ್ಯರು ಗರ್ಭಿಣಿಗೆ ತಿಳಿಸಿದ್ದರು. ಬೆಳಗ್ಗೆ ಆಸ್ಪತ್ರೆಗೆ ಹೆರಿಗೆ ಅಂತ ಬಂದಾಗ ಸುಶ್ಮಿತಾ ಸಾವನ್ನಪ್ಪಿದ್ದಾರೆ. ವೈದ್ಯರು ಆಸ್ಪತ್ರೆಗೆ ಬರುವ ಗರ್ಭಿಣಿ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ ಸದ್ಯ ಆಸ್ಪತ್ರೆಯ ಮುಂದೆ ಕುಟುಂಬಸ್ಥರು ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ಅವರ ಹಾಕಿದ್ದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ದರ್ಶನ್ ಅವರ ಕುರಿತು ಹೇಳಿಕೆ ನೀಡಿದ ನಟಿ ರಮ್ಯಾ ಗೆ ಇತ್ತೀಚಿಗೆ ಅಭಿಮಾನಿಗಳು ಅಶ್ಲೀಲ ಮೆಸೇಜ್ ಕಳುಹಿಸಿದರು. ಅದರ ಬೆನ್ನಲ್ಲೆ ಇದೀಗ ನಟಿ ಸೋನು ಶೆಟ್ಟಿಗೂ ಕೂಡ ದರ್ಶನ್ ಅಭಿಮಾನಿಗಳು ಅಶೀಲವಾಗಿ ಮೆಸೇಜ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಕುರಿತು ನಟಿ ಸೋನು ಶೆಟ್ಟಿ, ಗಂಭೀರವಾದ ಆರೋಪ ಮಾಡಿದ್ದಾರೆ. ದರ್ಶನ್ ರೌಡಿ ಆಗಬೇಕಿತ್ತು, ಅಪ್ಪಿ ತಪ್ಪಿ ಹೀರೋ ಆಗಿದ್ದಾರೆ ಎಂದಿದ್ದ ಸೋನುಶೆಟ್ಟಿಗೆ ಡಿ ಬಾಸ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಸೋನುಶೆಟ್ಟಿಗೆ ಅಶ್ಲೀಲ ಪದ ಬಳಕೆ ಮಾಡಿ ಬೈದಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಸೋನು ಶೆಟ್ಟಿ ಪೋಸ್ಟ್ ಹಂಚಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳು ಮಾಡಿದ ಕೆಟ್ಟ ಕಮೆಂಟ್ ಗಳನ್ನು ತೋರಿಸಿದ್ದಾರೆ. ಸೋನುಶೆಟ್ಟಿ ಮಾಡಿದ ಪೋಸ್ಟ್ ವೈರಲ್ ಆಗಿದೆ. ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಕಿಡಿಗೇಡಿಗಳ 43 ಐಪಿ ಅಡ್ರೆಸ್ ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಈ ಮೂಲಕ ಕಿಡಿಗೇಡಿಗಳಿಗೆ ಸಿಸಿಬಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಬೆಳಗಾವಿ : ಬೆಳಗಾವಿಯಲ್ಲಿ ಘೋರ ಘಟನೆ ನಡೆದಿದ್ದು, ರಭಸವಾಗಿ ಹರಿಯುವ ಹಳ್ಳದ ನೀರಿನಲ್ಲಿ ಬೈಕ್ ಸವಾರ ಒಬ್ಬ ಕೊಚ್ಚಿ ಹೋಗಿರುವ ಘಟನೆ ಬೆಳಗಾವಿ ತಾಲೂಕಿನ ತಾರೀಹಾಳ ಗ್ರಾಮದ ಹೊರವಲಯದಲ್ಲಿ ಈ ಒಂದು ಘಟನೆ ನಡೆದಿದೆ. ಬೈಕ್ ಸಮೇತ ನೀರಿನಲ್ಲಿ ಪಂಚಾಯಿತಿ ಸಿಬ್ಬಂದಿ ಕೊಚ್ಚಿಕೊಂಡು ಹೋಗಿದ್ದಾರೆ. ತಾರಿಹಾಳ ಗ್ರಾಮದ ಸುರೇಶ್ ಗುಂಡನವರ್ (50) ನಾಪತ್ತೆಯಾಗಿದ್ದಾರೆ. ಗ್ರಾಮ ಪಂಚಾಯಿತಿ ಕೆಲಸ ಮುಗಿಸಿ ರಾತ್ರಿ ಮನೆಗೆ ಹೋಗುವಾಗ ಈ ಒಂದು ದುರಂತ ಸಂಭವಿಸಿದೆ ನಪತ್ಯಾದ ಸುರೇಶ್ ಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ರೌಡಿಶೀಟರ್ ಗಾಳಿಗೆ ಪೊಲೀಸರು ಶಾಕ್ ನೀಡಿದ್ದಾರೆ ಬೆಳಬೆಳಗ್ಗೆ ರೌಡಿಶೀಟರ್ ಗಳ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೌದು ರೌಡಿ ಶೀಟರ್ ಮನೆ ಮೇಲೆ ಪೋಲಿಸರು ದಾಳಿ ನಡೆಸಿದ್ದಾರೆ. ವಾಯುವ್ಯ ವಿಭಾಗದ ಡಡಿಸಿಪಿ ಡಿಎಲ್ ನಾಗೇಶ್ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ. ಬ್ಯಾಡರಹಳ್ಳಿ, ಪೀಣ್ಯ ಸೋಲದೇವನಹಳ್ಳಿ, ರಾಜಗೋಪಾಲನಗರ ಠಾಣೆ ಬಾಗಲಕುಂಟೆ ಪೊಲೀಸರಿಂದ ರೌಡಿಶೀಟರ್ ಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ಯಾದಗಿರಿ : ಈತ ಹಿಂದೂ ಮಠಾಧೀಶನಾಗಿದ್ದ, ಅದರೆ ಈತನ ಸಲಿಂಗ ಕಾಮಪುರಾಣ ನಿಜ ರೂಪ ತಿಳಿದು ಊರಿನ ಗ್ರಾಮಸ್ಥರೆ ಶಾಕ್ ಆಗಿದ್ದಾರೆ. ಹೌದು ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠದ ಮಠಾಧೀಶ ನಿಜಲಿಂಗ ಸ್ವಾಮೀಜಿ ಅಲಿಯಾಸ್ ಮೊಹಮದ್ ನಿಸಾರ್ ಮುಸ್ಲಿಂ ವ್ಯಕ್ತಿಯಾಗಿದ್ದು, ಸಲಿಂಗಕಾಮಿ ಎಂಬುದು ಬೆಳಕಿಗೆ ಬಂದಿದೆ. ಮದ್ಯಪಾನ, ಮಾಂಸಾಹಾರ ಸೇವನೆ ಹಾಗೂ ಯುವಕನೊಂದಿಗೆ ಅಸಭ್ಯವಾಗಿ ವರ್ತಿಸುವ ವಿಡಿಯೋ ವೈರಲ್ ಆಗಿದೆ. ಹೌದು ಯಾದಗಿರಿ ಜಿಲ್ಲೆಯ ಶಹಪುರ ಮೂಲದ ಮೊಹಮದ್ ನಿಸಾರ್ ತನ್ನ ಮೂಲ ಧರ್ಮ ಮರೆಮಾಚಿದ್ದನು. ಈ ವಿಷಯವನ್ನು ಯಾರಿಗೂ ತಿಳಿಸದೇ ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠಕ್ಕೆ ಮಠಾಧೀಶನಾಗಿದ್ದನು.ಮತಾಂತರಗೊಂಡ ವಿಷಯ ತಿಳಿಯುತ್ತಲೇ ನನ್ನ ಹಿನ್ನೆಲೆಯನ್ನು ಹೇಳಿಕೊಂಡಿದ್ದನು. ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿಯಿಂದ ಜಂಗಮದೀಕ್ಷೆ ಪಡೆದುಕೊಂಡಿರೋದಾಗಿ ಹೇಳಿದ್ದನು. ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗುತ್ತಲೇ ತನಗೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದನು. ಇದೀಗ ಮೊಹಮದ್ ನಿಸಾರ್ ಓರ್ವ ಸಲಿಂಗಕಾಮಿ ಎಂದು ತಿಳಿದು ಬಂದಿದೆ.ಮೊಹಮದ್ ನಿಸಾರ್ ತನ್ನ ಕೋಣೆಯಲ್ಲಿ ಕುಡಿದು ತೂರಾಡುತ್ತಿರುವ ಮತ್ತು ಯುವಕನೋರ್ವನ ಜೊತೆ ಸರಸವಾಡುತ್ತಿರುವ…
ಕಲಬುರ್ಗಿ : ಕಲ್ಬುರ್ಗಿಯಲ್ಲಿ ಜೈನ ಧರ್ಮದ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದೂ ಸಂಘಟನೆಗಳು ಇದೊಂದು ಲವ್ ಜಿಹಾದ್ ಎಂದು ಆರೋಪಿಸುತ್ತಿವೆ. ಹೌದು ಬಿಎಸ್ಸಿ ಪರೀಕ್ಷೆ ಬರೆಯಲು ಯುವತಿ ಕಾಲೇಜಿಗೆ ಹೋದಾಗ ನಾಪತ್ತೆಯಾಗಿದ್ದಾಳೆ. ಕಾಲೇಜಿನಲ್ಲಿ ಪರೀಕ್ಷೆ ಬರೆದು ಯುವತಿ ನಾಪತ್ತೆಯಾಗಿದ್ದಾಳೆ.ಜುಲೈ 30 ರಂದು ಕಲ್ಬುರ್ಗಿಯ ಖಾತಗಿ ಕಾಲೇಜಿನಿಂದ ಯುವತಿಯಾಗಿದ್ದಾಳೆ ಗೊಬ್ಬೂರು ಗ್ರಾಮದ ಮಹಾವೀರ ಜೈ ಎಂಬುವರ ಪುತ್ರಿ ನಾಪತ್ತೆಯಾಗಿದ್ದಾಳೆ.
ಕೂದಲು ಉದುರುವುದನ್ನು ನಿಲ್ಲಿಸಲು & ಕೂದಲು ವೇಗವಾಗಿ ಬೆಳೆಯಲು, ಧನ್ವಂತರಿ ಆಯುರ್ವೇದ ಶಾಸ್ತ್ರದ ಈ ಒಂದು ಪುಡಿ ಸಾಕು. ಕೂದಲು ವೇಗವಾಗಿ ಬೆಳೆಯುತ್ತದೆ ರಾಜನಿಗೆ ಕಿರೀಟ ಹೇಗೆ ಮುಖ್ಯವೋ ಹಾಗೆಯೇ, ನಮ್ಮ ತಲೆಯ ಮೇಲಿನ ಕೂದಲು ನಮ್ಮಲ್ಲಿ ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಕೂದಲು ಉದುರುವ ಬಗ್ಗೆ ಚಿಂತಿತರಾಗಿರುವ ಅನೇಕ ಜನರಿದ್ದಾರೆ. ಈ ಬ್ಯೂಟಿ ಟಿಪ್ಸ್ ವಿಭಾಗದಲ್ಲಿ, ಕೂದಲು ಉದುರುವಿಕೆಯಿಂದ ವಿವಿಧ ಮುಜುಗರಗಳನ್ನು ಎದುರಿಸುವ ಜನರು ಆ ಮುಜುಗರದಿಂದ ಹೊರಬರಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುವ ಪೌಡರ್ ಅನ್ನು ನಾವು ನೋಡಲಿದ್ದೇವೆ. ಕೂದಲು ವೇಗವಾಗಿ ಬೆಳೆಯುತ್ತದೆ ಕೂದಲು ಉದುರುವುದು ತುಂಬಾ ಸಾಮಾನ್ಯ ಪ್ರಕ್ರಿಯೆ. ಒಂದು ದಿನದಲ್ಲಿ ನಿರ್ದಿಷ್ಟ ಪ್ರಮಾಣದ ಕೂದಲು ಉದುರುವುದು ಅನಿವಾರ್ಯ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ…
ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಅಪರಿಚಿತ ಶವಭೌತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಎಸ್ ಐ ಟಿ ದೂರುದಾರ ತೋರಿಸಿದ ಎಲ್ಲಾ ಪಾಯಿಂಟ್ ಗಳಲ್ಲೂ ಅಸ್ತಿಪಂಜರ ಶೋಧ ಕಾರ್ಯ ನಡೆಸಿದೆ ಅದರಲ್ಲಿ ಕೇವಲ 6ನೇ ಪಾಯಿಂಟ್ ಮತ್ತು ಇನ್ನು ಕೆಲವು ಪಾಯಿಂಟ್ಗಳಲ್ಲಿ ಮೂಡಿಗಳು ಸಿಕ್ಕಿವೆ ಆದರೆ ಸೂಕ್ಷ್ಮಾಣುಗಳಿಂದ ಹಾಗೂ ಮಣ್ಣಿನ ಸವಿತದಿಂದ ಮೂಳೆಗಳಲ್ಲಿನ ಡಿಎನ್ಎ ಕಂಡುಹಿಡಿಯಲು FSL ಅಧಿಕಾರಿಗಳಿಗೆ ಕಷ್ಟವಾಗಿದೆ ಇದೀಗ ಸೊಸೈಟಿ ಅಧಿಕಾರಿಗಳು ಬಂಗಲಗುಡ್ಡದ ರಹಸ್ಯ ಬಯಲು ಮಾಡಲು ಹೊರಟಿದ್ದಾರೆ. ಹೌದು ಇಂದು ಎಸ್ಐಟಿ ಅಧಿಕಾರಿಗಳಿಂದ 14ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ನಡೆಯುತ್ತೆ. ಇದೀಗ ಎಸ್ಐಟಿ ಸ್ಥಳ ಪರಿಶೋಧನೆಯಲ್ಲಿ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಏಕಾಏಕಿ ಪ್ಲಾನ್ ಬದಲಿಸಿದ ಎಸ್ಐಟಿ ಅಧಿಕಾರಿಗಳು, ಬಂಗ್ಲಗುಡ್ಡದ ರಹಸ್ಯ ಬಯಲು ಮಾಡಲು SIT ಅಧಿಕಾರಿಗಳು ಹೊರಟಿದ್ದಾರೆ. ಪಾಯಿಂಟ್ 11 ರಿಂದ 80 ಮೀಟರ್ ದೂರದಲ್ಲಿ ಶೋಧ ನಡೆಸಲು ಸಿದ್ಧರಾಗಿದ್ದಾರೆ. ಹಾಗಾಗಿ ಬಂಗ್ಲಗುಡ್ಡದಲ್ಲಿರಿ ಮತ್ತೆ ಏನಾದರೂ ಅಸ್ತಿ ಪಂಜರದ ಪಳೆಯುಳಿಕೆಗಳು ಸಿಗುತ್ತವೆಯೋ ಎಂದು ಕಾದುನೋಡಬೇಕಾಗಿದೆ.
ಯಾದಗಿರಿ : ನನ್ನ ಜತೆಗೆ ಶಾಸಕರಾದವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಮಂತ್ರಿಗಳಾಗಿದ್ದಾರೆ. ಆದರೆ, ನನಗೆ ಅವಕಾಶ ಮತ್ತು ಅದೃಷ್ಟವಿಲ್ಲ ಎನ್ನುವ ಮೂಲಕ ಶಾಸಕ ಬಸವರಾಜ ರಾಯರೆಡ್ಡಿ ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಯಾದಗಿರಿಯಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, 1985ರಲ್ಲಿ ನನ್ನ ಜತೆಗೆ ಶಾಸಕರಾದ ಸಿದ್ದರಾಮಯ್ಯ, ಜಿ. ಪರಮೇಶ್ವರ ಅವರು ಸಿಎಂ, ಡಿಸಿಎಂ ಆಗಿದ್ದಾರೆ. ಕಾಂಗ್ರೆಸ್ ಕಟ್ಟುವಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನನಗೆ ಅದೃಷ್ಟ ಮತ್ತು ಅವಕಾಶ ಇಲ್ಲದ್ದಕ್ಕೆ ಸಿಎಂ ಆರ್ಥಿಕ ಸಲಹೆಗಾರ ಹುದ್ದೆಗೆ ತೃಪ್ತಿಪಡಬೇಕಾಯಿತು. ಎಲ್ಲವನ್ನೂ ಸಮಯ ಮತ್ತು ಸಂದರ್ಭ ನಿರ್ಧರಿಸುತ್ತದೆ ಎಂದರು. ರಾಜಕಾರಣದಲ್ಲಿ ನನ್ನನ್ನು ನಂಬಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ಕೊಡುವಂಥ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಸ್ನೇಹಿತರಿಗೆ ಸಹಕಾರಿ ರತ್ನ ಪ್ರಶಸ್ತಿ ಕೊಡಲು ಶಿಫಾರಸು ಮಾಡಲಾಗುವುದು ಎಂದು ಕಿಚಾಯಿಸಿದರು.