Author: kannadanewsnow05

ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ SIT ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಹೌದು ಜಯಂತ್ ಇಂದು SIT ಕಚೇರಿಗೆ ಹಿಂಬದಿಯಿಂದ ಎಂಟ್ರಿ ಕೊಟ್ಟಿದ್ದು ಜಯಂತ್ ಹಿಂಬದಿಯಿಂದ ಕಚೇರಿಗೆ ಓಡಿ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಯಾರಿಗೂ ಕಾಣದ ರೀತಿಯಲ್ಲಿ ಜಯಂತ್ ಕಚೇರಿಗೆ ಎಂಟ್ರಿ ಆಗಿದ್ದಾರೆ. ಇದೀಗ ಇಂದು SIT ಅಧಿಕಾರಿಗಳು ಜಯಂತ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.

Read More

ಬೆಂಗಳೂರು : ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮದ್ದೂರಿನಲ್ಲಿ ಗಲಾಟೆ ಮಾಡಿದವರ ಬಂಧನ ಆಗಿದೆ. ರಾಜ್ಯದ ಕೆಲವು ಕಡೆ ಗಣೇಶ ವಿಸರ್ಜನೆ ವೇಳೆ ಕೆಲವು ಸಣ್ಣಪುಟ್ಟ ಘಟನೆಗಳಾಗಿವೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿದರು. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ಕಡೆ ಸಣ್ಣ ಪುಟ್ಟ ಘಟನೆಯಾಗಿದೆ. ಮದ್ದೂರಿನಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಮದ್ದೂರಿನಲ್ಲಿ ಎಲ್ಲವು ನಿಯಂತ್ರಣದಲ್ಲಿದೆ. ಗಲಾಟೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದೇವೆ. ಸೂಕ್ಷ್ಮ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಆದರೂ ಕೂಡ ಒಂದೆರಡು ಕಡೆ ಸಣ್ಣಪುಟ್ಟ ಘಟನೆಗಳಾಗಿವೆ . ಬಿಜೆಪಿಯವರು ಆರೋಪ ಮಾಡುತ್ತಾರೆ ಅವರದು ಅದೇ ಕೆಲಸವಾಗಿದೆ. ಎಂದು ಗೃಹದ ಸಚಿವ ಜಿ. ಪರಮೇಶ್ವರ ತಿಳಿಸಿದರು.

Read More

ದಾವಣಗೆರೆ : ಇತ್ತೀಚಿಗೆ ಈ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರ ಮೇಲು ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಇದೀಗ ದಾವಣಗೆರೆಯಲ್ಲೂ ಕೂಡ ಬೀರಿ ನಾಯಿಗಳು ಡೆಲ್ಲಿ ಅಟ್ಯಾಕ್ ನಡೆಸಿದ್ದು ವೃದ್ಧ ಸೇರಿದಂತೆ ಐ lವರ ಮೇಲೆ ನಾಯಿಗಳು ದಾಳಿ ಮಾಡಿವೆ. ಹೌದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾವಿನ ಕೋಟೆ ಮತ್ತು ಸಾಸ್ವೆಹಳ್ಳಿಯಲ್ಲಿ ನಡೆದಿದೆ. ಮಾವಿನಕೋಟೆಯಲ್ಲಿ ಓರ್ವ ವೃದ್ಧ, ಮೂವರು ಮಕ್ಕಳು ಹಾಗೂ ಸಾಸ್ವೆಹಳ್ಳಿಯ ಓರ್ವ ಬಾಲಕನ ಮೇಲೆ ನಾಯಿಗಳು ದಾಳಿ ಮಾಡಿವೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.‌ ಬೀದಿ ನಾಯಿಗಳ ಸಂಖ್ಯೆ ಮೀತಿಮೀರುತ್ತಿದೆ. ಗ್ರಾಮ ಪಂಚಾಯತ್​ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಸದಸ್ಯರ ವಿರುದ್ಧ ಗ್ರಾಮಸ್ಥರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ತ್ವರಿತ ಕ್ರಮಕ್ಕೆ ಮುಂದಾಗದಿದ್ದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Read More

ಬೆಂಗಳೂರು : ಕಾರಿನ ಸನ್ ರೂಫ್ ತೆರೆದು ಮಕ್ಕಳನ್ನ ನಿಲ್ಲಿಸುವ ಪೋಷಕರೆ ಎಚ್ಚರ. ಸನ್ ರೂಫ್ ತೆರೆದು ನಿಂತ ಬಾಲಕನ ತಲೆಗೆ ರಸ್ತೆಯಲ್ಲಿದ್ದ ಹೈಟ್ ರಿಸ್ಟ್ರಿಕ್ಷನ್ ಬ್ಯಾರಿಯರ್ ಬಡಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಸೆಪ್ಟೆಂಬರ್ 6ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿದ್ಯಾರಣ್ಯಪುರದ ಜಿಕೆವಿಕೆ ರಸ್ತೆಯಲ್ಲಿ ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದ ಬಾಲಕನ ತಲೆಗೆ ಗಂಭೀರ ಗಾಯವಾಗಿದೆ. ಬಾಲಕ ಸನ್ ರೂಫ್ ತೆರೆದು ನಿಂತಿದ್ದಾಗ ರಸ್ತೆಯಲ್ಲಿದ್ದ ಹೈಟ್ ರಿಸ್ಟ್ರಿಕ್ಷನ್ ಬ್ಯಾರಿಯರ್ ಬಗ್ಗೆ ಅಂದಾಜು ಸಿಗದ ಚಾಲಕ ಕಾರನ್ನು ಚಲಾಯಿಸಿಕೊಂಡು ಹೋಗಿದ್ದರ ಪರಿಣಾಮ ಕಬ್ಬಿಣದ ಬ್ಯಾರಿಯರ್ ಬಾಲಕನ ತಲೆಗೆ ಬಡಿದಿದೆ. ಘಟನೆಯ ದೃಶ್ಯಗಳು ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಡಿಯೋ ಪರಿಶೀಲನೆ ನಡೆಸಲಾಗಿದ್ದು, ಘಟನೆಯ ಕುರಿತು ಮಾಹಿತಿ ಕಲೆಹಾಕುತ್ತಿರುವುದಾಗಿ ಬೆಂಗಳೂರು ಉತ್ತರ ವಿಭಾಗದ ಸಂಚಾರ ಪೊಲೀಸರು ತಿಳಿಸಿದ್ದಾರೆ. https://twitter.com/3rdEyeDude/status/1964541596994851003?t=qzG0qa7IREcEH24Tj8Q9eQ&s=19

Read More

ಉಡುಪಿ: ಸಮುದ್ರಕ್ಕೆ ಈಜಲು ಹೋದ ನಾಲ್ವರ ಪೈಕಿ ಮೂವರು ಮೃತಪಟ್ಟಿದ್ದು, ಓರ್ವ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಬೆಂಗಳೂರಿನಿಂದ 10 ಮಂದಿ ಯುವಕರ ತಂಡ ಗೋಪಾಡಿಗೆ ಬಂದಿದ್ದು, ಅದರಲ್ಲಿ ಏಳು ಮಂದಿ ಸಮುದ್ರಕ್ಕೆ ಇಳಿದು ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ನಾಲ್ವರು ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದು, ಅವರಲ್ಲಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಓರ್ವನನ್ನು ಸ್ಥಳೀಯರು ರಕ್ಷಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಮತ್ತು ಪೊಲೀಸರು ಆಗಮಿಸಿದ್ದರು. ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು.

Read More

ಮೈಸೂರು : 2025ನೇ ಸಾಲಿನ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೀಗಾಗಿ ಈಗಾಗಲೇ ಅರಮನೆಯಲ್ಲಿ ಸಕಲ ಸಿದ್ಧತೆಗಳು ಸಹ ನಡೆದಿದ್ದು, ಇದೀಗ ಈ ಬಾರಿಯ ಮೈಸೂರು ದಸರಾ ವೀಕ್ಷಣೆಗೆ ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳನ್ನು ಸಾರ್ವಜನಿಕ ಬಳಕೆಗೆ ಜಿಲ್ಲಾಡಳಿತವು ದಸರಾ ಅಧಿಕೃತ ವೆಬ್ ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ. ಹೌದು.. ಈ ಬಾರಿಯ ಮೈಸೂರು ದಸರಾ ಹಬ್ಬದಲ್ಲಿ ಅರಮನೆ, ಜಂಬೂಸವಾರಿ, ಪಂಜಿನ ಕವಾಯತು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಎಲ್ಲವನ್ನೂ ಕಣ್ತುಂಬಿಕೊಳ್ಳಬೇಕು ಎನ್ನುವವರಿಗೆ ಜಿಲ್ಲಾಡಳಿತ, 6500 ರೂಪಾಯಿ ಗೋಲ್ಡ್‌ ಕಾರ್ಡ್‌, ಟಿಕೆಟ್‌ ಗಳನ್ನು ಬಿಡುಗಡೆ ಮಾಡಿದೆ. ಸೆ.22 ರಿಂದ ಅ.2 ರವರೆಗೆ ನಡೆಯಲಿರುವ ದಸರಾದಲ್ಲಿ ಗೋಲ್ಡ್‌ ಕಾರ್ಡ್‌ ಪಡೆದು ಎಲ್ಲ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಗೋಲ್ಡ್ ಕಾರ್ಡ್ ಗೆ ಎಷ್ಟು ದರ? ದಸರಾ ಗೋಲ್ಡ್ ಕಾರ್ಡ್ ಗೆ 6500 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಟಿಕೆಟ್…

Read More

ಬೆಂಗಳೂರು : ಬೆಂಗಳೂರಲ್ಲಿ ಡ್ರಗ್ಸ್ ಸಂಗ್ರಹಿಸಿದ್ದ ಇಬ್ಬರು ಮಹಿಳೆ ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಅದ್ಮ್ಯಾಕೋ ಬ್ರೈಟ್ ಹಾಗು ಎನ್ಕೆಟೈ ಕೋಫಿ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಬಂಧಿತರಿಂದ 70 ಲಕ್ಷ ರೂ.ಮೌಲ್ಯದ 700 ಗ್ರಾಂ MDMA ಸೀಜ್ ಮಾಡಿದ್ದಾರೆ. ಮಂಗಳೂರಿನ ಯಲಹಂಕ ಉಪನಗರ ಠಾಣೆ ಪೋಲಿಸರು ಕಾರ್ಯಾಚರಣೆ ನಡೆಸಿದ್ದು ಯಲಹಂಕದ ದೊಡ್ಡ ಬೆಟ್ಟ ಹಳ್ಳಿ ಮನೆ ಒಂದರಲ್ಲಿ ಪೊಲೀಸರು ಗಾಂಜಾ ಜಪ್ತಿ ಮಾಡಿದ್ದಾರೆ ಆರೋಪಿಗಳ ಮಾಹಿತಿ ಆಧರಿಸಿ ಬೆಂಗಳೂರಿನ ಏಳು ಕಡೆ ದಾಳಿ ಮಾಡಿದ್ದಾರೆ. ದಾಳಿಂಬೆ ಬೆಳೆ ಪಾಸ್ಪೋರ್ಟ್ ಅವತ್ತಿನೂರು ವಾಸವಿದ 9 ಜನರನ್ನು ಅರೆಸ್ಟ್ ಮಾಡಲಾಗಿದೆ. ದಾಳಿಯ ವೇಳೆ ಇಬ್ಬರು ವಿದೇಶದಲ್ಲಿ ಡ್ರಗ್ಸ್ ಪತ್ತೆಯಾಗಿದೆ. ವಿದೇಶಿ ಮಹಿಳೆಯರಾದ ಬೆನೆಡಿಕ್ಸ್, ಪ್ರಿಸ್ಕಿಲ್ ಕೂಡ ಬಂಧನವಾಗಿದೆ.

Read More

ಮಂಡ್ಯ : ಮಂಡ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಕೋರ್ಟ್ ಅಮೀನ್ ಮೇಲೆ ಕಣ್ಣಿಗೆ ಮಹಿಳೆಯೊಬ್ಬರು ಖಾರದಪುಡಿ ಎರಚಿರುವ ಘಟನೆ ನಡೆದಿದೆ. ಅಪಘಾತ ಪ್ರಕರಣದ ಸಂಭಂದ ನೋಟಿಸ್ ಕೊಡಲು ಹೋಗಿದ್ದಾಗ ಈ ಘಟನೆ ನಡೆದಿದೆ. ಕೋರ್ಟ್ ಅಮೀನ್ ಶಂಕರೇಗೌಡ ಎನ್ನುವವರ ಕನ್ನಳ್ಳಿ ಮಹಿಳೆ ಖಾರದಪುಡಿ ಎರಚಿ ದಾಳಿ ಮಾಡಿದ್ದಾಳೆ. ಮಂಡ್ಯ ಜಿಲ್ಲೆಯ ಮಳೆನಹಳ್ಳಿ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಅಪಘಾತ ಪ್ರಕರಣ ಸಂಬಂಧ ನೋಟಿಸ್ ಕೊಡಲು ಭೇಟಿ ನೀಡಿರುತ್ತಾರೆ. ಈ ವೇಳೆ ಅಮೀನ್ ಕಣ್ಣಿಗೆ ಸಾಕಮ್ಮ ಎನ್ನುವ ಮೇಲೆ ಕಾರದಪುಡಿ ಎರಚಿದ್ದಾಳೆ. ಕೆ.ಆರ್ ಪೇಟೆ ಸಿವಿಲ್ ಕೋರ್ಟ್ ಅಮೀನ್ ಶಂಕರೇಗೌಡರಿಗೆ ಕಾರದಪುಡಿ ಎರಚಿದ್ದಾಳೆ.

Read More

ಬೆಂಗಳೂರು : ಸನ್ ರೂಫ್ ಓಪನ್ ಮಾಡಿ ಮಕ್ಕಳನ್ನು ತಿಳಿಸುವಾಗ ಪೋಷಕರು ಆದಷ್ಟು ಎಚ್ಚರದಿಂದ ಇರಬೇಕು ಇದೀಗ ಬೆಂಗಳೂರಿನಲ್ಲಿ ಭೀಕರವಾದ ಘಟನೆ ಒಂದು ನಡೆದಿದ್ದು, ಸನ್ ರೂಫ್ ಓಪನ್ ಮಾಡಿ ಬಾಲಕನೊಬ್ಬ ನಿಂತಿದ್ದ ವೇಳೆ ಕಬ್ಬಿಣದ ಕಮಾನಿಗೆ ಬಾಲಕನ ತಲೆಗೆ ಬಡಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ. ವಿದ್ಯಾರಣ್ಯಪುರದ ಜಿಕೆವಿಕೆ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ. ಕಾರಿನ ಸನ್ರೂಫ್ ಓಪನ್ ಮಾಡಿ ಬಾಲಕ ನಿಂತಿದ್ದ ಈ ವೇಳೆ ಕಬ್ಬಿಣದ ಕಮಾನು ಬಾಲಕನ ತಲೆಗೆ ಬಡಿದಿದೆ, ಕಾರಿನಲ್ಲಿ ಓಪನ್ ಮಾಡಿ ನಿಂತಿದ್ದಾಗ ಭೀಮ್ ಬಾಲಕನ ತಲೆಗೆ ಬಡೆದಿದೆ. ಬಾಲಕನ ತಲೆಗೆ ಬಡಿಯುವ ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸರಿಯಾಗಿದೆ ಕಬ್ಬಿಣದ ಕಾರಿನ ಒಳಗೆ ಬಾಲಕ ಇದೆ ವೇಳೆ ಕುಸಿದು ಬಿದ್ದಿದ್ದಾನೆ.

Read More

ಬೆಂಗಳೂರು : ಬೆಂಗಳೂರು ನಗರದ ಪ್ರತಿಷ್ಠಿತ ಹೋಟೆಲ್ ಮೇಲೆ ಸಿಸಿಬಿ ದಾಳಿ ನಡೆಸಿದೆ. ಅವಧಿ ಮೀರಿ ಹೋಟೆಲ್ ನಲ್ಲಿ ಪಾರ್ಟಿ ಮತ್ತು ಡ್ರಗ್ಸ್ ಬಳಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ JW ಮಾರಿಯೆಟ್ ಹೋಟೆಲ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ಜನರು ಮಾಡುತ್ತಿದ್ದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಸಿಸಿಬಿ ಎಸಿಪಿ ಮಹಾನಂದ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ದಾಳಿಯ ವೇಳೆ ಸಿಸಿಬಿ ಪೊಲೀಸರು ಓರ್ವನನ್ನ ವಶಕ್ಕೆ ಪಡೆದುಕೊಂಡಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More