Author: kannadanewsnow05

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿಯ ಮೇಲೆ ಚಿರತೆ ದಾಳಿ ಮಾಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪುನರ್ವಸತಿ ಕೇಂದ್ರದಲ್ಲಿ ಈ ಒಂದು ಘಟನೆ ನಡೆದಿದೆ. ಉದ್ಯಾನವನದ ಪ್ರಾಣಿ ಪಾಲಕ ಶಾಂತಪ್ಪ ಮೇಲೆ ಚಿರತೆ ದಾಳಿ ಮಾಡಿದೆ. ಇಂದು ಬೆಳಿಗ್ಗೆ 8.30 ಕ್ಕೆ ಎಂದಿನಂತೆ ಶಾಂತಪ್ಪ ಕೆಲಸಕ್ಕೆ ಬಂದಿದ್ದ ಚಿರತೆಯ ಕೇಜುಗಳನ್ನು ಸ್ವಚ್ಛ ಮಾಡುತ್ತಿದ್ದಾಗ ಏಕಏಕಿ ಚಿರತೆ ದಾಳಿ ಮಾಡಿದೆ. ಪ್ರಾಣಿ ಪಾಲಕ ಶಾಂತಪ್ಪ ಮುಖ ಮತ್ತು ಕತ್ತಿನ ಭಾಗಕ್ಕೆ ಗಂಭೀರವಾದಗಳಾಗಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಗಣಿಯ ಖಾಸಗಿ ಆಸ್ಪತ್ರೆಯಲ್ಲಿ ಶಾಂತಪ್ಪ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಆರ್‌ಸಿಬಿ ಪಂದ್ಯಕ್ಕೆ ನಿನ್ನ ನಡೆದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಸರ್ಕಾರ ಅನುಮತಿ ನೀಡಿದ್ದು ಈ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿ ಪ್ರೇಕ್ಷಕರ ಸುರಕ್ಷತೆಗೆ ಪ್ರಮುಖ ಆದ್ಯತೆ ಕೊಡಬೇಕು ಎಂದು ತಿಳಿಸಿದರು. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು ನ್ಯಾಯಮೂರ್ತಿ ಕುನ್ಹಾ ಅವರ ಶಿಫಾರಸುಗಳು ಅನುಷ್ಠಾನ ಆಗಬೇಕು ಸೆಲೆಬ್ರೇಶನ್ ಅನುಮತಿ ನೀಡವ ಎನ್ನುವುದರ ಕುರಿತು ಯೋಚಿಸುತ್ತೇವೆ . ಹಾಗಾಗಿ ಪಂದ್ಯ ಆರಂಭಕ್ಕೂ ಮುನ್ನ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಸಮಯ ನೀಡಿ ಪಂದ್ಯಗಳು ಆರಂಭ ಮಾಡುವುದಕ್ಕೆ ಮುಂಚೆ ಇಂತಹ ಕ್ರಮಗಳು ಆಗಬೇಕು ಎಂದು ಈಗಾಗಲೇ ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ಅದಕ್ಕಾಗಿ ಈಗಾಗಲೇ ಒಂದು ಸಮಿತಿ ಕೂಡ ರಚನೆ ಮಾಡಲಾಗಿದೆ ಅದರಲ್ಲಿ ಜಿಬಿಎ ಚೀಫ್ ಕಮಿಷನರ್ ಮಹೇಶ್ವರರಾವ್ ಹಾಗೂ ಪೊಲೀಸ್ ಕಮಿಷನರ್ ಸೀಮಂತ ಕುಮಾರ್ ಸಿಂಗ್ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆ ಗಳನ್ನು ಸೇರಿಸಿ ಒಂದು ಸಮಿತಿ ಮಾಡಲಾಗಿದೆ. ಒಂದಕ್ಕಿನ…

Read More

ಬಾಗಲಕೋಟೆ : ಜೀತಕ್ಕೆ ಇಟ್ಟುಕೊಂಡಿದ್ದ ಒಡಿಶಾ ಮೂಲದ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಇಳಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದಲ್ಲಿ ಕಾರ್ಮಿಕರನ್ನು ಇದೀಗ ರಕ್ಷಣೆ ಮಾಡಲಾಗಿದ್ದು, ಬಾಗಲಕೋಟೆ ಜಿಲ್ಲೆಯ ಇಳ್ಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದಲ್ಲಿ ಐವರು ಬಾಲ ಕಾರ್ಮಿಕರು ಸೇರಿದಂತೆ 24 ಕಾರ್ಮಿಕರನ್ನ ರಕ್ಷಣೆ ಮಾಡಲಾಗಿದೆ. ಇಳಕಲ್ ತಹಶೀಲ್ದಾರ್ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ರಕ್ಷಣೆ ಮಾಡಲಾಗಿದೆ. ಈರಪ್ಪ ಕುಂಬಾರ ಎಂಬ ಅವರ ಇಟ್ಟಿಗೆ ಬಟ್ಟಿಯಲ್ಲಿ ಈ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಇಟ್ಟಿಗೆ ಭಟ್ಟಿ ಮಾಲೀಕ ಈರಪ್ಪ ಕುಂಬಾರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಬಾಲ ಕಾರ್ಮಿಕ ನಿಷೇಧ ಮತ್ತು ಜೀತ ಪದ್ಧತಿ ನಿಷೇಧ ಕಾಯ್ದೆ ಅಡಿ ಕೇಸ್ ದಾಖಲಾಗಿದೆ. ಈ ಕುರಿತು ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್ ಹಲೋ ವಿಚಾರಗಳು ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು ಒಂದೇ ವೇದಿಕೆ ಮೇಲೆ ಅಕ್ಕಪಕ್ಕ ಕುಳಿತರು ಕೂಡ ಇಬ್ಬರು ಮಾತನಾಡದೆ ಸುಮ್ಮನಿದ್ದು ಕುತೂಹಲ ಮೂಡಿಸಿದೆ. ಹೌದು ಬೆಂಗಳೂರಲ್ಲಿ ಕಾರ್ಯಕ್ರಮ ಒಂದರಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತರು ಮಾತನಾಡದೆ ಇದ್ದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಇದ್ದರು ಒಂದೇ ಒಂದು ಮಾತು ಆಡದೆ ನಾಯಕರು ಸೈಲೆಂಟ್ ಆಗಿದ್ದರು. ಒಂದು ಕಡೆ ಸಿಎಂ ಸಿದ್ದರಾಮಯ್ಯ ವಾಚ್ ನೋಡುತ್ತಾ ಲೆಟರ್ ಓದುತ್ತಾ ಕುಳಿತಿದ್ದರೆ, ಡಿಕೆ ಶಿವಕುಮಾರ್ ಇನ್ನೊಬ್ರು ಯಾರೊಬ್ಬರ ಜೊತೆಗೆ ಮಾತನಾಡುತ್ತಾ ಇದ್ದಾರೆ. ಈ ಒಂದು ಘಟನೆ ಹಲವಾರು ವಿಷಯಗಳನ್ನ ಚರ್ಚೆಗೆ ಹುಟ್ಟು ಹಾಕಿದೆ. ಏಕೆಂದರೆ ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ರಾಹುಲ್ ಗಾಂಧಿ ಅವರನ್ನು ಭೇಟಿ…

Read More

ಚಾಮರಾಜನಗರ : ಚಾಮರಾಜನಗರದಲ್ಲಿ ಚಿರತೆ ದಾಳಿ ಮುಂದುವರೆದಿದ್ದು, ಬೆಳ್ಳಂ ಬೆಳಗ್ಗೆ ಕೊಟ್ಟಿಗೆಗೆ ನುಗ್ಗಿ ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹಾಲಿಂಗನ ಕಟ್ಟೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಕೊಟ್ಟಿಗೆಗೆ ನುಗ್ಗಿ ಎರಡು ಮೇಕೆಗಳನ್ನು ಚಿರತೆ ಕೊಂದು ತಿಂದಿದೆ. ಗ್ರಾಮದ ಸಿದ್ದೇಗೌಡ ಎಂಬುವವರಿಗೆ ಸೇರಿದ ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿದೆ. ತೋಟದಲ್ಲಿಯೇ ಬೀಡು ಬಿಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕದಲ್ಲಿ ಇದ್ದಾರೆ. ಚಿರತೆ ಉಪಟಳದಿಂದ ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಭಯಭೀತರಾಗಿದ್ದಾರೆ.

Read More

ತುಮಕೂರು : ಶಿಕ್ಷಕರ ನಿರ್ಲಕ್ಷಕ್ಕೆ ವಿದ್ಯಾರ್ಥಿನಿಯ ಬೆರಳು ಕಟ್ ಆಗಿದ್ದು ಒಂದನೇ ತರಗತಿ ವಿದ್ಯಾರ್ಥಿನಿ ಎರಡು ಕೈ ಬೆರಳು ಕಳೆದುಕೊಂಡಿರುವ ಘಟನೆ ತುಮಕೂರು ತಾಲೂಕಿನ ಗೂಳೂರು ಶಾಲೆಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಶಿಕ್ಷಕರ ನಿರ್ಲಕ್ಷಕ್ಕೆ ಬಾಲಕಿ ಚಿನ್ಮಯಿ ದೇವಿ ಬಲಗೈನ ಎರಡು ಬೆರಳುಗಳು ಕಟ್ ಆಗಿವೆ. ಸರ್ಕಾರಿ ಶಾಲಾ ಶಿಕ್ಷಕರ ಬೇಜವಾಬ್ದಾರಿ ಆರೋಪ ಕೇಳಿ ಬಂದಿದೆ. ಬಿಸಿ ಊಟ ನೀಡುವ ಬೆಳೆ ಕ್ಯೂ ನಲ್ಲಿ ವಿದ್ಯಾರ್ಥಿನಿ ನಿಂತಿದ್ದಾಳೆ. ಬಾಗಿಲಿಗೆ ಕೈಯಿಟ್ಟುಕೊಂಡು ಬಾಲಕಿ ಚಿನ್ಮಯಿ ದೇವಿ ನಿಂತಿದ್ದಾಳೆ. ಈ ವೇಳೆ ಮೂರನೇ ತರಗತಿಯ ಬಾಲಕಿಯಿಂದ ಬಾಗಿಲು ತಳ್ಳಿದ ಆರೋಪ ಕೇಳಿ ಬಂದಿದೆ. ಈ ವೇಳೆ ಚಿನ್ಮಯಿ ದೇವಿ ಬಲಗೈನ ಎರಡು ಬೆರಳುಗಳು ಕಟ್ಟಾಗಿವೆ. ಕಟ್ಟಾಗಿದ್ದ ಬೆರಳುಗಳು ಇದ್ದಿದ್ದರೆ ಅದನ್ನು ಜೋಡಿಸಬಹುದಾಗಿತ್ತು ಎಂದು ವೈದ್ಯರು ಪರಿಶೀಲನೆ ಮಾಡಿದ ಮೇಲೆ ಹೇಳಿದ್ದಾರೆ. ಕಟ್ ಆಗಿ ಬಿದ್ದ ಬೆರಳುಗಳನ್ನು ಗುಡಿಸಿ ಬಿಸಾಕಿದ ಆರೋಪ ಇದೀಗ ಕೇಳಿ ಬರುತ್ತಿದೆ. ಬೆರಳು ಕಟ್ ಆದ ಜಾಗಕ್ಕೆ ನೀರು ಸುರಿದು…

Read More

ಹಾಸನ : ಅಪಘಾತದಲ್ಲಿ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದಕ್ಕೆ ಇದೀಗ, ಬೆಂಗಳೂರಿಂದ ಶೃಂಗೇರಿಗೆ ಹೊರಟಿದ್ದ ಚಿಕ್ಕಮಗಳೂರು ಡಿಪೋಗೆ ಸೇರಿದ ಎರಡು ಸರ್ಕಾರಿ ಬಸ್‌ಗಳನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸೀಜ್‌ ಮಾಡಲಾಗಿದೆ. ಅಪಘಾತದ ಪರಿಹಾರದ ಹಣ ಕ್ಲೈಮ್ ಆಗದಿದ್ದಕ್ಕೆ ಕೋರ್ಟ್‌ ಆದೇಶದ ಹಿನ್ನೆಲೆ ವಕೀಲರ ತಂಡ ಬಸ್‌ನ್ನು ಸೀಜ್‌ ಮಾಡಿದೆ. ಬಸ್‌ನ್ನು ಚನ್ನರಾಯಪಟ್ಟಣ ಕೋರ್ಟ್ ಆವರಣಕ್ಕೆ ತಂದು ನಿಲ್ಲಿಸುವಂತೆ ವಕೀಲರು ಸೂಚನೆ ನೀಡಿದ್ದಾರೆ. ಈ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ನಡುರಸ್ತೆಯಲ್ಲಿ ಇಳಿಸಿದ್ದಕ್ಕೆ ಜನ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬರುವಾಗ ಮಾರ್ಗ ಮಧ್ಯೆ ಬಸ್‌ ಸೀಜ್‌ ಮಾಡಲಾಗಿದೆ. ಚಿಕ್ಕಮಂಗಳೂರು ಡಿಪೋಕ ಸೇರಿದ 2 ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ಜಪ್ತಿ ಮಾಡಲಾಗಿದೆ. 2023ರಲ್ಲಿ ಬಸ್ ಡಿಕ್ಕಿಯಾಗಿ ರೇಣುಕಪ್ಪ ಮತ್ತು ರವಿಕಿರಣ್ ಮೃತಪಟ್ಟಿದ್ದರು. 32 ಲಕ್ಷ ರೂಪಾಯಿ ಪರಿಹಾರ ನೀಡಲು ಚನ್ನರಾಯಪಟ್ಟಣ ಕೋರ್ಟ್ ಆದೇಶಿಸಿತ್ತು. ನ್ಯಾಯಾಲಯ ಆದೇಶ ನೀಡಿದರು ಸಹ ಪರಿಹಾರ ನೀಡಲು ವಿಳಂಬ ಮಾಡಿದ್ದ ಹಿನ್ನೆಲೆಯಲ್ಲಿ…

Read More

ಬೆಂಗಳೂರು : ರಾಜ್ಯ ಸರ್ಕಾರಕ್ಕೆ ಸಾವಿರ ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಆರನೇ ಗ್ಯಾರಂಟಿ ಘೋಷಣೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ದೆಹಲಿಯಲ್ಲಿ ಗುರುವಾರ ಈ ಕುರಿತಾಗಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಭೂಮಿ ಗ್ಯಾರಂಟಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು. ಭೂಮಿಯ ಹಕ್ಕು ಪತ್ರ ಇಲ್ಲದ ಲಕ್ಷಾಂತರ ಜನರಿಗೆ ನಾವು ಹಕ್ಕುಪತ್ರ, ಪಟ್ಟಾ ದಾಖಲೆ ನೀಡುತ್ತಿದ್ದೇವೆ. ಜತೆಗೆ ಜನರಿಗೆ ಪಕ್ಕಾ ಖಾತೆ ಹಂಚಿಕೆ ಮಾಡುತ್ತಿದ್ದೇವೆ. ಪಂಚ ಗ್ಯಾರಂಟಿಗಳ ಹೊರತಾಗಿ ಇದು ನಮ್ಮ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಮಾಹಿತಿ ನೀಡಿದರು. ಮುಂದಿನ ಒಂದು ಸಾವಿರ ದಿನ ಹೇಗಿರಲಿದೆ ಎಂದು ಕೇಳಿದಾಗ, “ಬಹಳ ಪ್ರಕಾಶಮಾನವಾಗಿ, ಬಲಿಷ್ಠವಾಗಿರಲಿದೆ ಎಂದು ತಿಳಿಸಿದರು. ನಾವು ರಾಜಕಾರಣದಲ್ಲಿದ್ದೇವೆ, ರಾಜಕಾರಣ ಮಾಡಲೇಬೇಕು. ನನಗೆ ಸದಾ ಯಶಸ್ಸು ಸಿಗುತ್ತದೆ. ಸ್ವಲ್ಪ ಶ್ರಮ ಬೇಕಾಗುತ್ತದೆ ಅಷ್ಟೇ. ಅಧಿಕಾರ ಹಂಚಿಕೆ ವಿಚಾರವಾಗಿ ನಾವು ಈ ವಿಚಾರವಾಗಿ ಚರ್ಚೆ ಮಾಡಿಲ್ಲ. ಪಕ್ಷ ತನ್ನದೇ ಆದ ಗುರಿ ಹೊಂದಿದ್ದು, ಪಕ್ಷದ ಯಶಸ್ಸು ಹಾಗೂ ಪಕ್ಷದ…

Read More

ಕಲಬುರ್ಗಿ : ಕಲ್ಬುರ್ಗಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಮೂವರು ಸ್ನೇಹಿತರು ಮದುವೆಗೆ ಹೋಗಿ ಬರುವಾಗ ತ್ರಿಬಲ್ ರೈಡ್ ವೇಳೆ ಕ್ರೂಸರ್ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ಥಳದಲ್ಲೆ ಓರ್ವ ಯುವಕ ಸಾವನ್ನಪ್ಪಿದ್ದು ಇಬ್ಬರಿಗೆ ಗಂಭೀರವಾದ ಘಟನೆ ಕಲಬುರ್ಗಿ ನಗರದ ಹೊರವಲಯದ ಕೇಂದ್ರ ಕಾರಾಗೃಹದ ಬಳಿ ಸಂಭವಿಸಿದೆ. ಮೃತ ಯುವಕನನ್ನ ಪ್ರದೀಪ್ ಶಿಂಧೆ (19) ಎಂದು ಗುರುತಿಸಲಾಗಿದ್ದು, ಇನ್ನು ಬೈಕ್ ಮೇಲೆ ಆತನ ಜೊತೆ ತೆರಳಿದ್ದ ಇಬ್ಬರು ಸ್ನೇಹತರಿಗೆ ಗಂಭೀರವಾದ ಗಾಯಗಳಾಗಿದ್ದು, ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಗನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಪ್ರಕಾರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Read More

ಕೊಡಗು : ವಿದ್ಯುತ್ ಅಂತಿ ತುಳಿದು ಕಾಫಿ ಬೆಳೆಗಾರ ಸಾವನಪ್ಪಿರುವ ಘೋರ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹಾಲಗುಂದ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟಕ್ಕೆ ನೀರು ಹಾಯಿಸುವಾಗ ಹಾಲುಗುಂದ ಗ್ರಾಮದ ಕೆ ಜಿಮಾಂ(67) ಸಾವನಪ್ಪಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More