Subscribe to Updates
Get the latest creative news from FooBar about art, design and business.
Author: kannadanewsnow05
ಮಂಗಳೂರು : ಮಂಗಳೂರಿನ ಪಿಲಿಕುಳ ಮೃಗಾಲಯದಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ಪ್ರಾಣಿಗಳ ಸಾವಿಗೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಇದೀಗ ಹೊಣೆಯಾಗಿದೆ. ಪಿಲಿಕುಳದಲ್ಲಿ ಪ್ರಾಣಿಗಳ ಸಾವಿನ ರಹಸ್ಯ ಇದೀಗ ಬಯಲಾಗಿದೆ. ವಿಷಾಹಾರ ಸೇವನೆಯೇ ಪ್ರಾಣಿಗಳ ಸಾವಿಗೆ ಕಾರಣವಾಗಿದೆ. ಮೃತ ಜಿಂಕೆಯೊಂದರ ಮರಣೋತ್ತರ ವರದಿಯಲ್ಲಿ ವಿಷಾಹಾರ ಸೇವನೆ ಮಾಡಿರುವುದು ಬಹಿರಂಗವಾಗಿದೆ. ಪ್ರಾಣಿಯ ದೇಹದಲ್ಲಿ ಹೈಡ್ರೋಸೈನೆಡ್ ಮತ್ತು ನೈಟ್ರೇಟ್ ಅಂಶಗಳು ಪತ್ತೆಯಾಗಿವೆ. ಸುಮಾರು ನಾಲ್ಕರಿಂದ 150ಕ್ಕೂ ಅಧಿಕ ಪ್ರಾಣಿಗಳ ಆ ಸ್ವಾಭಾವಿಕ ಸಾವಾಗಿದ್ದು, ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಪ್ರಯೋಗಾಲಯದಿಂದ ವರದಿ ಬಹಿರಂಗವಾಗಿದೆ. ಪ್ರಾಣಿಗಳಿಗೆ ನೀಡಲಾಗಿದೆ ತರಕಾರಿ ಎಲೆಗಳಿಂದಲೇ ಪ್ರಾಣಕ್ಕೆ ಕುತ್ತು ತಂದಿದೆ. ಎಲೆಕೋಸು ಮತ್ತು ಹೂಕೋಸು ಬೆಳಗ್ಗೆ ಅತಿಯಾದ ಕೀಟನಾಶಕ ಬಳಕೆ ಮಾಡಿರುವುದು ಬೆಳಗೆಗೆ ಬಂದಿದೆ. ಇದನ್ನು ಶುಚಿಗೊಳಿಸದೆ ನೇರವಾಗಿ ಪ್ರಾಣಿಗಳಿಗೆ ನೀಡಲಾಗುತ್ತಿತ್ತು. ಈ ವಿಷಪೂರಿತ ಅಂಶಗಳು ಮೃಗಾಲಯದ ಪ್ರಾಣಿಗಳ ಸಾವಿಗೆ ಕಾರಣವಾಗಿದೆ. ಇಲ್ಲಿವರೆಗೂ ಕಡ ಮೃಗಾಲಯದಲ್ಲಿ ಕಳೆದ ನಾಲ್ಕು ವರ್ಷದಲ್ಲಿ 150 ಮೂಕ ಪ್ರಾಣಿಗಳ ಮಾರಣಹೋಮ ಹಾಗಿದೆ. ಹುಲಿ, ಜಿಂಕೆ, ಸಾಂಬಾರ್…
ಬೆಂಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಈ ಬಾರಿ ಬೀದರದಲ್ಲಿ ಆಯೋಜಿಸಲಾಗುತ್ತಿರುವ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಂಡಗಳನ್ನು ಕಳುಹಿಸಿಕೊಡುವಂತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಗಾಯತ್ರಿ ಅವರಿಗೆ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ನೇತೃತ್ವದ ತಂಡ ಮನವಿ ಮಾಡಿತು. ಸಂಘದ ಮನವಿ ಸ್ವೀಕರಿಸಿ ಮಾತನಾಡಿದ ನಿರ್ದೇಶಕಿ ಗಾಯತ್ರಿ ಅವರು, ಕಲಾ ತಂಡಗಳನ್ನು ನೀಡುವುದಾಗಿ ಭರವಸೆ ನೀಡಿದ್ದಲ್ಲದೆ, ಸಮ್ಮೇಳನಕ್ಕೆ ಶುಭ ಹಾರೈಸಿದರು. ಬೀದರ್ ಜಿಲ್ಲಾ ಘಕದ ಜಿಲ್ಲಾಧ್ಯಕ್ಷ ಅನಂದ ದೇವಪ್ಪ, ಅಪ್ಪಾರಾವ ಸೌದಿ, ಶಿವಕುಮಾರ ಸ್ವಾಮಿ, ನಂದಕುಮಾರ ಕರಂಜಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು : ರಾಜ್ಯದಲೊಬ್ಬ ಲಕ್ಕಿ ಭಾಸ್ಕರ್ ಸಿನಿಮಾ ಶೈಲಿಯಲ್ಲಿ ಬ್ಯಾಂಕ್ ದರೋಡೆ ಮಾಡಿದ್ದಾನೆ. ಅಸಿಸ್ಟೆಂಟ್ ಮ್ಯಾನೇಜರ್ ನಿಂದಲೇ ನಾಲ್ಕು ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಇಂಡಿಯನ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಕುಮಾರ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಇಂಡಿಯನ್ ಬ್ಯಾಂಕ್ ನಲ್ಲಿ ಅಡಮಾನ ಇಟ್ಟಿದ್ದವರ ಚಿನ್ನವನ್ನು ಕಿರಣ್ ಕದ್ದಿದ್ದಾನೆ. ಬೆಂಗಳೂರಿನ ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಕಳ್ಳತನವಾಗಿದೆ. ಆನ್ ಲೈನ್ ಬೆಟ್ಟಿಂಗ್ ದಂಧೆ ಮಾಡುತ್ತಿದ್ದ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಅದಕ್ಕಾಗಿ ನಾಲ್ಕು ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ಆನ್ಲೈನ್ ಜೂಜಾಟಕ್ಕೆ ಬಳಸಿದ್ದಾನೆ. ಸದ್ಯ ಆರೋಪಿ ಕಿರಣ್ ಅನ್ನು ಪೊಲೀಸರ ಅರೆಸ್ಟ್ ಮಾಡಿದ್ದಾರೆ.
ಶಿವಮೊಗ್ಗ : ಶಿವಮೊಗ್ಗದಲ್ಲಿ ಕಳ್ಳನೊಬ್ಬ ಚಿನ್ನಾಭರಣ ನಗದು ಹಣ ಕದ್ದು ಪುರಾರಿಯಾಗುತ್ತಿದ್ದವನು ಸ್ಥಳೀಯರು ಹಿಡಿದು ಗೋಸ ಕೊಟ್ಟಿರುವ ಘಟನೆ ಸಾಗರದ ಕಾಣಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೋಂಕೇರಿ ಎಂಬಲ್ಲಿ ಈ ಒಂದು ಘಟನೆ ನಡೆದಿದೆ. ಚಿನ್ನಾಭರಣ ಕದ್ದು ಪರಾರಿ ಆಗುತ್ತಿದ್ದ ಕಳ್ಳನನ್ನು ಗ್ರಾಮಸ್ಥರು ಹಿಡಿದು ಗೂಸ ಕೊಟ್ಟಿದ್ದಾರೆ. ಅರೆಬೆತ್ತಲೆ ಆಗಿ ಮೆರವಣಿಗೆ ಮಾಡಿಕೊಂಡು ತಂದಿದ್ದಾರೆ. ಸಾಗರದ ಕನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಂಕೇರಿ ಎಂಬಲ್ಲಿ ಈ ಒಂದು ಘಟನೆ ನಡೆದಿದ್ದು ರೈತ ಕಬ್ಬಳ್ಳಿ ಹುಚ್ಚಪ್ಪ ಎಂಬ ರೈತನ ಮನೆಯಲ್ಲಿ ಕಳ್ಳತನವಾಗಿತ್ತು. ಕಿಟಕಿ ಬಾಗಿಲು ಮುರಿದು ಚಿನ್ನಾಭರಣ ಮತ್ತು ಹಣ ದೋಸ್ತಿದ್ದ 50,000 ಹಣ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಲಾರಿ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದು, ಹಲವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗುವಳ್ಳಿ ಗೇಟ್ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಟ್ರ್ಯಾಕ್ಟರ್ ನಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದು, 13 ಜನರಿಗೆ ಗಾಯಗಳಾಗಿವೆ. ಓರ್ವ ಸ್ಥಳದಲ್ಲಿಯೇ ಸಾವನಪ್ಪಿದ್ದು ಮತ್ತೊರ್ವ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮಾಳಿಗೆ ಹಟ್ಟಿ ಗ್ರಾಮದ ಮಂಜುನಾಥ್ (34) ಸ್ಥಳದಲ್ಲಿ ಸಾವನ್ನಪ್ಪಿದ್ದರೆ, ಮೆಗ್ಗಾನ್ ಆಸ್ಪತ್ರೆಯಲ್ಲಿ ಹೋಳಿಯಪ್ಪ (48) ಸಾವನಪ್ಪಿದ್ದಾರೆ. ಮೃತರು ಹೊಸದುರ್ಗ ತಾಲೂಕಿನ ಮಾಳಿಗೆ ಹಟ್ಟಿ ಗ್ರಾಮದವರು ಎಂದು ತಿಳಿದುಬಂದಿದೆ. ಚಿತ್ರದುರ್ಗ ಜಿಲ್ಲೆಯ ತಾಲೂಕಿನ ಮಾಳಿಗೆ ಹಟ್ಟಿ ಗ್ರಾಮದ ಬಗ್ಗೆ ತಿಳಿದು ಬಂದಿದೆ ಗ್ರಾಮಸ್ಥರು ಮೂರು ಟ್ರಾಕ್ಟರ್ ಗಳಲ್ಲಿ ಗಳಲ್ಲಿ ಕಲ್ಲತ್ತಿಗಿರಿ ದೇಗುಲಕ್ಕೆ ಬಂದಿದ್ದರು ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ ತೆರಳುವಾಗ ಈ ಅಪಘಾತ ಸಂಭವಿಸಿದೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING : ದಕ್ಷಿಣಕನ್ನಡದಲ್ಲಿ ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ : ‘KAF’ ಕ್ರಿಯೇಟಿವ್ ಶಾಪ್ ಸುಟ್ಟು ಭಸ್ಮ!
ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹೆರಾಜೆ ಕಾಂಪ್ಲೆಕ್ಸ್ ನಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ ಕೆಎಎಫ್ ಕ್ರಿಯೇಟಿವ್ ಶಾಪ್ ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ರೀತಿಯಾದ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಠಾಣೆ ಪೋಲಿಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ತುಮಕೂರು : ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕಿತ್ತಾಟ ಜೋರಾಗಿದ್ದು ಕಳೆದ ಎರಡು ದಿನಗಳ ಹಿಂದೆ ಅಷ್ಟೇ ದೆಹಲಿಗೆ ತೆರಳಿ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಭೇಟಿಯಾಗಿ ರಾಜ್ಯದ ಹಲವು ವಿಚಾರಗಳ ಕುರಿತು ಚರ್ಚಿಸಿದರು. ಡಿಕೆ ಶಿವಕುಮಾರ್ ದೆಹಲಿ ಭೇಟಿ ಬೆನ್ನಲ್ಲೇ ರಾಜ್ಯದಲ್ಲಿ ಹಲವು ಬೆಳವಣಿಗೆಗಳು ಆಗಿದ್ದು ಇದೀಗ ಬೇಡುವಾಗ ಭಿಕ್ಷುಕನಾಗು, ಕೊಡುವಾಗ ದಾನಿಯಾಗು, ಬೇಡಿ ಕುಗ್ಗಬೇಡ, ಕೊಟ್ಟು ಕೊರಗಬೇಡ ಎಂದು ಟ್ವೀಟ್ ನಲ್ಲಿ ಡಿಕೆ ಶಿವಕುಮಾರ್, ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ. ನಿನ್ನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಸೋಮೇಶ್ವರ ಶ್ರೀ ಕಾಡುಸಿದ್ದೇಶ್ವರ ಸಂಸ್ಥಾನಮಠಕ್ಕೆ ಭೇಟಿ ನೀಡಿ ವೀರ ಗಂಗಾಧರ ಅಜ್ಜಯ್ಯನ ಗದ್ದುಗೆಗೆ ನಮಸ್ಕರಿಸಿ, ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದವನ್ನು ಪಡೆದೆ. ಬಳಿಕ ಅಜ್ಜಯ್ಯನ ಜಾತ್ರಾ ಮಹೋತ್ಸವ – 2026ರ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಾನು ಡಿಸಿಎಂ ಆಗಿ ಅಲ್ಲ, ಮಠದ ಒಬ್ಬ ಭಕ್ತನಾಗಿ, ಶ್ರೀಗಳ ಶಿಷ್ಯನಾಗಿ, ಅಜ್ಜನ ಒಬ್ಬ ಅನುಯಾಯಿಯಾಗಿ ಸೇವೆ ಮಾಡುತ್ತಿದ್ದೇನೆ.. ಮಾನವ…
ಬೆಂಗಳೂರು : ಕದ್ದ ಆಸ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಪೊಲೀಸರು ಕೇಳಿದಾಗ ಅದನ್ನು ಹಸ್ತಾಂತರ ಮಾಡಲು ವಿಳಂಬಗೊಳಿಸುವ ಅಥವಾ ನಿರಾಕರಿಸುವ ಯಾವುದೇ ಕಾನೂನುಬದ್ಧ ಹಕ್ಕನ್ನು ಹೊಂದಿರುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಕದ್ದ ಆಸ್ತಿ ವಿಷಯದಲ್ಲಿ ಅದು ಚಿನ್ನದ ಸಾಲ ಕಂಪನಿಯಾಗಿದ್ದರೂ ಸಹ ಕದ್ದ ಆಸ್ತಿಯನ್ನು ಹೊಂದುವುದು ರಕ್ಷಾ ಕವಚವಾಗಿ ಬದಲಾಗುವುದಿಲ್ಲ. ಅಲ್ಲದೇ, ಬಡ್ಡಿ ಮತ್ತು ಭದ್ರತೆಯ ಕಾರಣ ನೀಡಿ ಕದ್ದ ವಸ್ತುಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಆದೇಶಿಸಿದೆ. ಕೆಂಗೇರಿಯ ಕರೂರು ವೈಶ್ಯ ಬ್ಯಾಂಕ್ ಶಾಖೆಯಿಂದ ಕದ್ದ ಒಡವೆಗಳನ್ನು ಅಡವಿಟ್ಟುಕೊಂಡು ಸಾಲ ಮಂಜೂರು ಮಾಡಿದ್ದ ಆರೋಪದಲ್ಲಿ ಕದ್ದ ಒಡವೆಗಳನ್ನು ಒಪ್ಪಿಸುವಂತೆ ಕೆಂಗೇರಿ ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ಐಐಎಫ್ಎಲ್ ಫೈನಾನ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಪ್ರಕರಣದ ಹಿನ್ನೆಲೆ 2022ರಿಂದ ಕರೂರು ವೈಶ್ಯ ಬ್ಯಾಂಕ್ನ ಕೆಂಗೇರಿ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಮಹಿಳಾ ಸಿಬ್ಬಂದಿಯೊಬ್ಬರು…
ಯಾದಗಿರಿ : ರಾಜ್ಯದಲ್ಲಿ ಅನಿಷ್ಟ ಪದ್ಧತಿ ಸಾಮಾಜಿಕ ಬಹಿಷ್ಕಾರ ಇನ್ನು ಜೀವಂತವಾಗಿದೆ. ಹೌದು ತಮ್ಮದೇ ಸಮುದಾಯದಿಂದ 12 ಕುಟುಂಬಗಳಿಗೆ ಬಹಿಷ್ಕಾರದ ಶಿಕ್ಷೆ ನೀಡಲಾಗಿದೆ ಈ ಒಂದು ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ನಡೆದಿದೆ. ಸ್ವಕೋಳಿ ಸಾಳಿ ಸಮುದಾಯದ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ತಮ್ಮದೇ ಸಮುದಾಯದಿಂದ 12 ಕುಟುಂಬಗಳು ಬಹಿಷ್ಕಾರಗೊಂಡಿವೆ. ಕಳೆದ 8 ವರ್ಷಗಳಿಂದ ಕುಟುಂಬದ ಸದಸ್ಯರು ಈ ಒಂದು ಸಂಕಷ್ಟ ಎದುರಿಸುತ್ತಿದ್ದಾರೆ. ಸಮುದಾಯಕ್ಕೆ ಸೇರಿದ ಸಂಘದ ಬಗ್ಗೆ ಆಸ್ತಿ ಲೆಕ್ಕ ಕೇಳಿದ್ದಕ್ಕೆ ಬಹಿಷ್ಕಾರ ಹಾಕಿದ್ದಾರೆ. ಶಹಾಪುರದ ನಗರದಲ್ಲಿರುವ ಜಿಹ್ವೇಶ್ವರ ಕಲ್ಯಾಣ ಮಂಟಪ ಹಾಗೂ 18 ವಾಣಿಜ್ಯ ಮಳಿಗೆಗಳ ಆದಾಯದ ಬಗ್ಗೆ 20 ಕುಟುಂಬಗಳು ಪ್ರಶ್ನೆ ಮಾಡಿದ್ದವು. ಸಂಘಕ್ಕೆ ಸೇರಿ ಆಸ್ತಿಗಳಿಂದ ವಾರ್ಷಿಕ 25 ಲಕ್ಷ ಆದಾಯ ಹರಿದು ಬರುತ್ತೆ ಆದಾಯದ ಬಗ್ಗೆ 20 ಕುಟುಂಬಗಳು ಪ್ರಶ್ನೆ ಮಾಡಿದ್ದವು. ಪ್ರಶ್ನೆ ಮಾಡಿದ್ದಕ್ಕೆ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿವೆ. 20 ರಲ್ಲಿ 8 ಕುಟುಂಬಗಳು…
ಮಂಡ್ಯ : ಮಂಡ್ಯದಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಂದ ಗಾರೆ ಕೆಲಸ ಮಾಡಿಸಿರುವ ಘಟನೆ ಇದೀಗ ವರದಿಯಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಲಕುಂದಿ ಗ್ರಾಮದ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಶಾಲೆಗೆ ಮಕ್ಕಳು ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ. ಆದರೆ ಈ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಂದ ಗಾರೆ ಕೆಲಸ ಮಾಡಿಸಿದ್ದಾರೆ. ನಾಗಮಂಗಲ ತಾಲೂಕಿನ ನಲಕುಂದಿ ಗ್ರಾಮದ ಶಾಲೆಯಲ್ಲಿ ಶಾಲಾ ಮಕ್ಕಳು ಕೂಲಿ ಆಳುಗಳಂತೆ ಕೆಲಸ ಮಾಡಿದ್ದಾರೆ. ಹೀಗಾಗಿ ಸ್ಥಳೀಯರು ಶಾಲಾ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಷ್ಟು ಜನ ಮಕ್ಕಳನ್ನು ಇಟ್ಕೊಂಡು ಗಾಡಿ ಕೆಲಸ ಮಾಡುತ್ತಿದ್ದೀರಲ್ಲ ಗ್ರಾಮದಲ್ಲಿ ಬೇರೆ ಯಾರು ನಿಮಗೆ ಈ ಕೆಲಸ ಮಾಡೋಕೆ ಸಿಗಲಿಲ್ವಾ? ಮಕ್ಕಳ ಕೈಯಲ್ಲಿ ಹೇಗೆ ಕೆಲಸ ಮಾಡಿಸಿದ್ದೀರಾ? ನೀವು ಏನು ಬೇಕಾದರೂ ಮಾಡಿ ಆದರೆ ಮಕ್ಕಳ ಕೈಯಲ್ಲಿ ಯಾಕೆ ಕೆಲಸ ಮಾಡಿಸುತ್ತೀರಾ? ಮಕ್ಕಳನ್ನು ಶಾಲೆಗೆ ಕಳಿಸುವುದು ಇದಕ್ಕೆನಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.














