Author: kannadanewsnow05

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ-2025ಕ್ಕೆ ಇಂದು ಬೂಕರ್ ಪ್ರಶಸ್ತಿ ವಿಜೇತೆ, ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರು ಉದ್ಘಾಟಿಸಿದರು. ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾಗಿ ಚಾಲನೆ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಗೌರವಿಸಿದರು. ಬಳಿಕ ಭಾಷಣದಲ್ಲಿ ಮಾತನಾಡಿದ ಅವರು, ಚಾಮುಂಡಿ ಸನ್ನಿಧಿ ಬಳಿ ಕರೆದೊಯ್ಯುವುದಾಗಿ ನನ್ನ ಸ್ನೇಹಿತೆ ಒಬ್ಬರು ಹೇಳಿದ್ದರು.ಈಗ ಸರ್ಕಾರ ನನ್ನನ್ನು ದಸರಾ ಉದ್ಘಾಟನೆಗೆ ಅಹ್ವಾನಿಸಿದದ ಬಳಿಕ ಬೇಕಾದಷ್ಟು ಏರುಪೇರು ಹಾಗೂ ಸನ್ನಿವೇಶಗಳು ನಡೆದರೂ ಕೂಡ, ತಾಯಿ ಚಾಮುಂಡಿ ನನ್ನನ್ನು ಕರೆಸಿಕೊಂಡಿದ್ದಾಳೆ. ನಾನು ಈಗ ತಾನೆ ಹಾಗೆ ಸನ್ನಿಧಿಯಿಂದ ನಿಮ್ಮೆಲ್ಲರಿಗೆ ಬಂದು ನಿಂತಿದ್ದೇನೆ. ದಸರಾ ಅಂದರೆ ಇದು ಕೇವಲ ಹಬ್ಬ ಮಾತ್ರ ಅಲ್ಲ ಇದು ನಾಡಿನ ಒಂದು ನಾಡಿಮಿಡಿತ ಸಂಸ್ಕೃತಿಯ ಉತ್ಸವ ಎಲ್ಲರನ್ನೂ ಒಳಗೊಳ್ಳುವಂತಹ ಗಳಿಗೆ ಸಮನ್ವಯದ ಮೇಳವಾಗಿದೆ. ಹೆಸರು ಅರಸರ ಸಂಸ್ಕೃತಿಯ ಪರಂಪರೆಯಿಂದ ಹಿಡಿದು ಕನ್ನಡ ಭಾಷೆಯ ಹೃದಯದ ಆಳದ ಸ್ಪಂದನದ ವರೆಗೆ…

Read More

ಮೈಸೂರು : ವಿಶ್ವ ವಿಖ್ಯಾತ ನಾಡಹಬ್ಬ ದಸರಾ ವನ್ನು ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರು ಉದ್ಘಾಟಿಸುವ ಮೂಲಕ ವಿದ್ಯುಕ್ತವಾದ ಚಾಲನೆ ನೀಡಿದರು. ಮೈಸೂರು ದಸರಾ ಉದ್ಘಾಟನೆಗೆ ಮುನ್ನ ಸಿಎಂ ಸಿದ್ದರಾಮಯ್ಯ ಈಡುಗಾಯಿ ಒಡೆದರು. ಬಳಿಕ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ, ಸಚಿವ ಶಿವರಾಜ್ ತಂಗಡಗಿ, ಸಚಿವ ವೆಂಕಟೇಶ್, ಶಾಸಕ ಜಿಟಿ ದೇವೇಗೌಡ, ಹರೀಶ್ ಗೌಡ ತನ್ವೀರ್ ಸೇಟ್ ಅನಿಲ್ ಚಿಕ್ಕಮಾದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಸೇರಿದಂತೆ ಮೈಸೂರು ಜಿಲ್ಲೆಯ ಪ್ರಮುಖ ನಾಯಕರು ಉಪಸ್ಥಿತರಿದ್ದರು. ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದ್ದು, 1,000 ಆಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಳೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿ, ವಿಐಪಿ, ಮತ್ತು ಪಾಸ್ ಹೊಂದಿದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಒದಗಿಸಲಾಗಿದೆ. ಬೆಟ್ಟದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯದುವೀರ್ ಒಡೆಯರವರ ಖಾಸಗಿ ದರ್ಬಾರ್ ಚಾಮುಂಡಿ ಬೆಟ್ಟದಲ್ಲಿ…

Read More

ಮೈಸೂರು : ವಿಶ್ವ ವಿಖ್ಯಾತ ನಾಡಹಬ್ಬ ದಸರಾ ವನ್ನು ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರು ಇನ್ನೇನು ಕೆಲವೇ ಕ್ಷಣಗಳಲ್ಲಿ ದಸರಾ ಉದ್ಘಾಟಿಸಲಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ ಮುನ್ನ ಸಿಎಂ ಸಿದ್ದರಾಮಯ್ಯ ಈಡುಗಾಯಿ ಒಡೆದರು. ಬಳಿಕ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬಾನು ಮುಷ್ತಾಕ್ ಅವರು ಪೂಜೆ ಬಳಿಕ ದೇವಿಯ ಮಂಗಳಾರತಿ ತೆಗೆದುಕೊಂಡರು. ದೇವಿಯ ದರ್ಶನದ ಬಳಿಕ ಭಾವುಕರಾದರು. ಇದೆ ವೇಳೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸೀರೆ ಉಡುಗೊರೆ ನೀಡಲಾಗಿದ್ದು, ದೇವಿಯ ಪಾದದ ಅಡಿ ಇಟ್ಟು ಪೂಜಿಸಿದ್ದ ಸೀರೆಯನ್ನು ಬಾನು ಮುಷ್ತಾಕ್ ಅವರಿಗೆ ಇದೆ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಉಡುಗೊರೆಯಾಗಿ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ, ಸಚಿವ ಶಿವರಾಜ್ ತಂಗಡಗಿ, ಸಚಿವ ವೆಂಕಟೇಶ್, ಶಾಸಕ ಜಿಟಿ ದೇವೇಗೌಡ, ಹರೀಶ್ ಗೌಡ ತನ್ವೀರ್ ಸೇಟ್ ಅನಿಲ್ ಚಿಕ್ಕಮಾದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಸೇರಿದಂತೆ ಮೈಸೂರು ಜಿಲ್ಲೆಯ ಪ್ರಮುಖ ನಾಯಕರು…

Read More

ಬಳ್ಳಾರಿ : ರಾಜ್ಯದಲ್ಲಿ ಇದೀಗ ಮತ್ತೊಂದು ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಮೂರನೇ ಮಗು ಹೆಣ್ಣಾಗಿದ್ದಕ್ಕೆ ತಾಯಿಯೊಬ್ಬಳು ಮಗುವನ್ನು ಕಾಲುವಿಗೆ ಎಸೆದು ಕೊಂದಿರುವ ಘೋರ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ನಲ್ಲಿ ನಡೆದಿದೆ. ಪ್ರಿಯಾಂಕಾ ದೇವಿ ತನ್ನ ಮಗುವನ್ನು ಕೊಲೆಗೈದ ತಾಯಿ ಎಂದು ತಿಳಿದುಬಂದಿದೆ. ಪ್ರಿಯಾಂಕಾ ದೇವಿಯ ಪತಿ ಸರೋಜ್ ಕುಮಾರ್ ಜಿಂದಾಲ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಹಾರ ಮೂಲದ ಈ ದಂಪತಿ ತೋರಣಗಲ್‌ನಲ್ಲಿ ವಾಸವಾಗಿದ್ದರು. ದಂಪತಿಗೆ ಮೊದಲು ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಮೂರನೇ ಹೆಣ್ಣು ಮಗು ಜನಿಸಿ ಎರಡು ತಿಂಗಳಾಗಿತ್ತು. ಮೂರನೆಯ ಮಗುವೂ ಹೆಣ್ಣಾದ ಕಾರಣ ಕೋಪಗೊಂಡ ಪ್ರಿಯಾಂಕಾ ದೇವಿ ಮಗುವನ್ನು ಕಾಲುವೆಗೆ ಎಸೆದು ಕೊಲೆ ಮಾಡಿದ್ದಾಳೆ. ಬಳಿಕ ಮಗು ಇಲ್ಲ ಎಂದು ಗೋಳಾಡಿ ನಾಟಕವಾಡಿದ್ದಾಳೆ. ಅಮಾಯಕಳಂತೆ ಪೊಲೀಸರ ಮುಂದೆ ತನ್ನ ಮಗು ಇಲ್ಲ ಎಂದು ಕಣ್ಣೀರು ಹಾಕಿದ್ದಾಳೆ. ಪತಿ ಸರೋಜ್ ಕುಮಾರ್ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಮಗು ಕಾಣೆಯಾದ ಬಗ್ಗೆ…

Read More

ಮೈಸೂರು : ಬಾನು ಮುಷ್ತಾಕ್ ದಸರಾ ಉದ್ಘಾಟನೆ ಕುರಿತಂತೆ ವಿಪಕ್ಷ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಇತ್ತೀಚಿಗೆ ಸುಪ್ರೀಂ ಕೋರ್ಟ್ ಕೂಡ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಪ್ರಶ್ನೆಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಇದೀಗ ನಾಳೆ ಬೆಳಿಗ್ಗೆ 10 ಗಂಟೆಗೆ ಬಾನು ಮುಷ್ತಾಕ್ ದಸರಾ ಉದ್ಘಾಟಿಸಲಿದ್ದಾರೆ. ಹೌದು ವಿಶ್ವದ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2025 ನವರಾತ್ರಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಡದೇವಿ ಚಾಮುಂಡಿ ಸನ್ನಿಧಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಜಗತ್ಪ್ರಸಿದ್ಧ ಮೈಸೂರು ಅರಮನೆಯಲ್ಲಿ ಸೋಮವಾರದಿಂದ ಅಂದರೆ ನಾಳೆಯಿಂದ ರತ್ನ ಖಚಿತ ಸಿಂಹಾಸನವೇರಿ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಖಾಸಗಿ ದರ್ಬಾರ್‌ ನಡೆಸಲಿದ್ದಾರೆ. ಅರಮನೆಯ ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣಧಾರಣೆ ನಡೆಯಲಿದ್ದು, ಬೆಳಗ್ಗೆ 11.35ಕ್ಕೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಮಂಗಳವಾದ್ಯದೊಂದಿಗೆ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ. ಸವಾರಿ ತೊಟ್ಟಿಯ ಬಳಿ ಪಟ್ಟದ ಆನೆ, ಕುದುರೆ, ಹಸು ಜೊತೆ ಮಹಿಳೆಯರು ಕಳಸ ಹೊತ್ತು…

Read More

ಬೆಂಗಳೂರು : ನಾಳೆಯಿಂದ ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ. ಆದರೆ ಇದು ಜಾತಿಗಣತಿ ಅಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ ನಾಯ್ಕ್ ಹೇಳಿಕೆ ನೀಡಿದರು. ಬೆಂಗಳೂರಿನಲ್ಲಿ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದ ನಾಯ್ಕ್, ನಾಳೆಯಿಂದ ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ. ಇದು ಜಾತಿಗಣತಿ ಅಲ್ಲ. ನಾಳೆಯಿಂದ ನಡೆಯುತ್ತಿರುವುದು ಜಾತಿಗಣತಿ ಅಲ್ಲ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಸಾಮಾಜಿಕ ಶೈಕ್ಷಣಿಕಹಾಗು ಆರ್ಥಿಕ ಸ್ಥಿತಿಗತಿ ತಿಳಿಯುವುದಕ್ಕಾಗಿ ಸಮೀಕ್ಷೆ ಮಾಡುತ್ತಿದ್ದೇವೆ. ಕೆಲವರು ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಮ್ಮ ಸಮೀಕ್ಷೆ ಪೂರ್ಣಗೊಳ್ಳುವುದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಮಧುಸೂಧನ್ ನಾಯಕ್ ತಿಳಿಸಿದರು.

Read More

ಬೆಂಗಳೂರು : “ನಾನು ಸರ್ಕಾರದಲ್ಲಿದ್ದೇನೆ. ಸಮಾಜದವರ ಅಭಿಪ್ರಾಯಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಅದು ಅವರ ಅಭಿಪ್ರಾಯ. ಆನಂತರ ಇದರ ಬಗ್ಗೆ ಮಾತನಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ದೆಹಲಿಗೆ ತೆರಳುವ ಮುನ್ನ ಸದಾಶಿವನಗರ ನಿವಾಸದ ಬಳಿ ಭಾನುವಾರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಶನಿವಾರ ನಡೆದಿದ್ದ ಒಕ್ಕಲಿಗ ಮಠಾಧೀಶರ ಹಾಗೂ ಮುಖಂಡರ ಸಭೆಯಲ್ಲಿ ಜಾತಿಜನಗಣತಿ ಮುಂದೂಡುವ ನಿರ್ಣಯದ ಬಗ್ಗೆ ಕೇಳಿದಾಗ ಆ ಬಗ್ಗೆ ಈಗ ಪ್ರತಿಕ್ರಿಯಿಸುವುದಿಲ್ಲ ಎಂದರು. ದೆಹಲಿ ಭೇಟಿಯ ಕುರಿತು ಕೇಳಿದಾಗ, “ಕಾವೇರಿ ನೀರಿನ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ದಿನಾಂಕ ನಿಗದಿಯಾಗಿದ್ದು, ಈ ಬಗ್ಗೆ ವಕೀಲರುಗಳ ಬಳಿ ಚರ್ಚಿಸಲು ಹಾಗೂ ಒಂದಷ್ಟು ಕೆಲಸಗಳ ಕಾರಣಕ್ಕೆ ತೆರಳುತ್ತಿರುವೆ” ಎಂದು ತಿಳಿಸಿದರು.

Read More

ಬೆಂಗಳೂರು : ಬೆಂಗಳೂರಲ್ಲಿ ಘೋರ ಘಟನೆ ನಡೆದಿದ್ದು, ಗೆಜ್ಜೆಗದಹಳ್ಳಿಯಲ್ಲಿ 2ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ನಿರ್ಮಾಣ ಹಂತದ ಕಟ್ಟಡದಿಂದ ಆಯತಪ್ಪಿ ಬಿದ್ದು ಕಾರ್ಮಿಕ ಸಾವನ್ನಪ್ಪಿದ್ದಾನೆ. ಮೃತ ಕಾರ್ಮಿಕನನ್ನು ಯಾದಗಿರಿ ಜಿಲ್ಲೆಯ ಗೋಪಾಲಪುರ ಗ್ರಾಮದ ಬೀರಪ್ಪ (38) ಎಂದು ತಿಳಿದುಬಂದಿದೆ. ಕಳೆದ ಎಂಟು ವರ್ಷಗಳಿಂದ ಬೀರಪ್ಪ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಇದೀಗ ಎರಡನೇ ಮಹಡಿಯಿಂದ ಆಯತಪ್ಪಿ ಬಿದ್ದು ಬೀರಪ್ಪ ಸಾವನಪ್ಪಿದ್ದಾನೆ. ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹಾಸನ : ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಪುರಸಭೆ ಆವರಣದಲ್ಲಿರುವ ಗಣೇಶ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ದೇವಸ್ಥಾನಕ್ಕೆ ಮುಖ ಮುಚ್ಚಿಕೊಂಡು ಮಹಿಳೆ ಒಬ್ಬಳು ದೇವಸ್ಥಾನದ ಒಳಗಡೆ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ್ದು ಇದೇ ಮಹಿಳೆ ಎಂದು ಅನುಮಾನ ವ್ಯಕ್ತವಾಗುತ್ತಿದೆ. ಮಹಿಳೆಯ ಮೇಲೆ ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಪೂರಕವೆಂಬಂತೆ ಮಹಿಳೆ ದೇವಸ್ಥಾನದ ಒಳಗಡೆ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇನ್ನು ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಎಸ್.ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಿಡಿಗೇಡಿಗಳನ್ನು ಬಂಧಿಸುವಂತೆ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Read More

ದಕ್ಷಿಣಕನ್ನಡ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಚಿನ್ನಯ್ಯ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿರುವ 5ನೇ ವಿಡಿಯೋ ರಿಲೀಸ್ ಆಗಿದ್ದು 2023 ಆಗಸ್ಟ್ ನಲ್ಲಿ ಈ ಒಂದು ವಿಡಿಯೋಗಳನ್ನು ರೆಕಾರ್ಡ್ ಮಾಡಿಟ್ಟುಕೊಳ್ಳಲಾಗಿತ್ತು. ಇದೀಗ ಆರೋಪಿಗಳು ಒಂದೊಂದಾಗಿ ವಿಡಿಯೋ ಬಿಡುತ್ತಿದ್ದಾರೆ. ತಿಮರೋಡಿ ಜೊತೆಗೆ ಮಾತನಾಡುವಾಗ ಚಿನ್ನಯ್ಯ ಸೌಜನ್ಯ ಕೊಲೆ ಪ್ರಕರಣದ ಕುರಿತು ಮಾತನಾಡಿದ್ದಾನೆ ಹೌದು ತಿಮರೊಡಿ ಮುಂದೆ ಸೌಜನ್ಯ ಕೇಸ್ ಬಗ್ಗೆ ಪ್ರಸ್ತಾಪಿಸಲಾಗಿದೆ. ಆರೋಪಿ ಚಿನ್ನಯ ತಿಮ್ಮರೋಡಿ ಮುಂದೆ ಸೌಜನ್ಯ ಪ್ರಕರಣದ ಕುರಿತು ಪ್ರಸ್ತಪಿಸಿದ್ದಾನೆ. ಸೌಜನ್ಯ ಕಿಡ್ನಾಪ್ ಕೇಸ್ನಲ್ಲಿ ರವಿ ಪೂಜಾರಿ ಭಾಗಿಯಾಗಿದ್ದಾನೆ. ಕೊಲೆ ಮಾಡಿದವರಿಗೆ ಊಟ ಮತ್ತು ತಿಂಡಿ ಕೊಟ್ಟಿದ್ದಾನೆ ಕೊಲೆ ಮಾಡಿದವರಿಗೆ ರವಿ ಪೂಜಾರಿ ಸಹಾಯ ಮಾಡಿದ್ದಾನೆ. ರವಿ ಪೂಜಾರಿ ನಂತರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.ಸಹಾಯ ಮಾಡಿದ ರವಿ ಪೂಜಾರಿ ಇದೀಗ ಇಲ್ಲ ಎಂದು ಆರೋಪಿ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ. ರವಿ ಪೂಜಾರಿ ಮತ್ತು ಗೋಪಾಲಕೃಷ್ಣ ಒಂದೇ ರೂಮ್ನಲ್ಲಿದ್ದರು. ಧರ್ಮಸ್ಥಳದಲ್ಲಿ ಇಬ್ಬರು ಒಟ್ಟಿಗೆ ರೂಮ್ನಲ್ಲಿ ಇದ್ದರು ಇಬ್ಬರು ಬಾಹುಬಲಿ ಬೆಟ್ಟದಲ್ಲಿ…

Read More