Author: kannadanewsnow05

ಬೆಂಗಳೂರು : ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಇದೀಗ RTO ಅಧಿಕಾರಿಗಳು ಸೀಜ್ ಮಾಡಿದ್ದಾರೆ.ಖಾಸಗಿ ವಾಹನಗಳಿಗೆ ಬಿಸಿ ಮುಟ್ಟಿಸಿದ ಆರ್‌ಟಿಓ ಅಧಿಕಾರಿಗಳು ಬೆಂಗಳೂರಿನ ಪ್ರಮುಖ ಶಾಲಾ ಕಾಲೇಜು ವಾಹನಗಳನ್ನು ಇದೀಗ ಸೀಜ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಆರ್‌ಟಿಓ ಅಧಿಕಾರಿಗಳಿಂದ ಈ ಒಂದು ಭರ್ಜರಿ ಕಾರ್ಯಾಚರಣೆ ನಡೆದಿದೆ. ಮಕ್ಕಳನ್ನು ಚಾಲಕರು ಬೇಕಾಬಿಟ್ಟಿಯಾಗಿ ಕೂಡಿಸಿಕೊಂಡು ಹೋಗುತ್ತಿದ್ದರು. ವಾಹನಗಳ ಪರವಾನಿಗೆ ಚಾಲಕರು ಡಿಎಲ್ ಇಲ್ಲದೆ ಸಂಚರಿಸುತ್ತಿದ್ದರು. ನಿಯಮ ಪಾಲಿಸದ ಶಾಲಾ ವಾಹನಗಳನ್ನು ಆರ್ ಟಿ ಓ ಅಧಿಕಾರಿಗಳು ಇದೀಗ ಸೀಜ್ ಮಾಡಿದ್ದಾರೆ. ಶಾಲಾ ವಾಹನಗಳು ಶಾಲೆಯ ಹೆಸರಿನಲ್ಲಿ ನೋಂದಣಿ ಆಗಿರಬೇಕು ಆದರೆ ಸಾಕಷ್ಟು ವಾಹನಗಳು ಯಾರದೋ ಹೆಸರಿನಲ್ಲಿ ನೋಂದಣಿ ಆಗಿವೆ. ಹಾಗಾಗಿ ಆರ್ ಟಿ ಓ ಅಧಿಕಾರಿಗಳು ಇದೀಗ ನೂರಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಸೀಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು : ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಮಾರ್ಚ್ 7 ರಂದು ವಿಚಾರಣೆ ಮುಂದೂಡಿತು. ಈ ವೇಳೆ ಅಂತಿಮ ವರದಿ ಕಾಪಿ ನೀಡಲು ದೂರುದಾರ ಸ್ನೇಹಮಯಿ ಕೃಷ್ಣ ಈ ವೇಳೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ತಕರಾರು ಇದ್ದರೆ ಆಕ್ಷೇಪಣೆ ಸಲ್ಲಿಸುವಂತೆ ಇದೆ ವೇಳೆ ಕೋರ್ಟ್ ಸ್ನೇಹಮಯಿ ಕೃಷ್ಣಗೆ ಕೋರ್ಟ್ ಸೂಚಿಸಿತು. ನಮಗೆ ಲೋಕಾಯುಕ್ತ ತನಿಖೆಯ ಅಂತಿಮ ವರದಿಯ ಕಾಪಿ ನೀಡಿ ನಂತರ ತಕರಾರು ಅರ್ಜಿ ಸಲ್ಲಿಸುವುದಾಗಿ ಸ್ನೇಹಮಯಿ ಕೃಷ್ಣ ತಿಳಿಸಿದರು. ಈ ವೇಳೆ ಅಂತಿಮ ವರದಿ ನೀಡಲು ಲೋಕಾಯುಕ್ತ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಕೋರ್ಟ್ ಸೂಚನೆ ನೀಡಿ, ಮಾರ್ಚ್ 7 ರಂದು ವಿಚಾರಣೆ ಮುಂದೂಡಿ ನ್ಯಾಯಾಲಯ ಆದೇಶ ನೀಡಿತು. ಹಾಗಾಗಿ ಲೋಕಾಯುಕ್ತ ಅಧಿಕಾರಿಗಳು ಇಂದು ಸ್ನೇಹಮಯಿ ಕೃಷ್ಣಗೆ ಅಂತಿಮ ವರದಿಯ ಕಾಪಿ ನೀಡಲಿದ್ದಾರೆ.

Read More

ರಾಜಸ್ತಾನ : ರಾಜಸ್ಥಾನದಲ್ಲಿ ಮನಕಲಕುವ ಘಟನೆ ನಡೆದಿದ್ದು, 32 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 5 ವರ್ಷದ ಬಾಲಕ ಮೃತಪಟ್ಟಿದ್ದಾನೆ.ಮೃತ ಬಾಲಕನನ್ನು ಪ್ರಲ್ಹಾದ್ ಹೋಗಿ ಅಂತ ಗುರುತಿಸಲಾಗಿದೆ. ಹೌದು ರಾಜಸ್ಥಾನದ ಝಾಲಾವರ್ ಜಿಲ್ಲೆಯ ಕೃಷಿ ಜಮೀನಿನಲ್ಲಿ ಭಾನುವಾರ 5 ವರ್ಷದ ಬಾಲಕ 32 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ, ಕೂಡಲೇ ಅಧಿಕಾರಿಗಳ ತಂಡ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. NDRF ಹಾಗೂ SDRF ನ ನಿರಂತರ 14 ಗಂಟೆಗಳ ಕಾರ್ಯಾಚರಣೆ ನಡೆಸಲಾಗಿತ್ತು. ಆದ್ರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕ ಸಾವನಪ್ಪಿದ್ದಾನೆ. ಪೊಲೀಸರ ಪ್ರಕಾರ, ಮಧ್ಯಾಹ್ನ 1.15 ರ ಸುಮಾರಿಗೆ ಪ್ರಹ್ಲಾದ್ ಮೈದಾನದಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.ಪೋಷಕರು ಹೊಲದ ಇನ್ನೊಂದು ಬದಿಯಲ್ಲಿ ಕೆಲವು ಕೆಲಸಗಳಲ್ಲಿ ನಿರತರಾಗಿದ್ದಾಗ ಅವನು ಬೋರ್ವೆಲ್ ಬಳಿಯ ಕಲ್ಲಿನ ಚಪ್ಪಡಿ ಮೇಲೆ ಕುಳಿತು ಅದರಲ್ಲಿ ಜಾರಿ ಬಿದ್ದಿದ್ದಾನೆ ಎಂದು ವರದಿಯಾಗಿದೆ.

Read More

ಬೆಳಗಾವಿ : ಕನ್ನಡ ಮಾತಾಡು ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ನಮ್ಮ ಕಂಡಕ್ಟರ್​ ಮಹಾದೇವ ಹುಕ್ಕೇರಿ ಮೇಲೆ ಬೇಕು ಅಂತಾನೇ ಪೋಕ್ಸೋ ಕೇಸ್​ ಕೊಟ್ಟಿದ್ದಾರೆ. ಅವತ್ತು ಬಸ್​​ನಲ್ಲಿ ಒಬ್ಬರು – ಇಬ್ಬರು ಇರಲಿಲ್ಲ. 90 ಜನ ಪ್ರಯಾಣಿಸುತ್ತಿದ್ದರು. ನೋಡೋಣ ಆ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ. ಬಿಮ್ಸ್ ಆಸ್ಪತ್ರೆ ಬಳಿ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದ್ದು, ಕಂಡಕ್ಟರ್ ಆರೋಗ್ಯ ಸ್ಥಿತಿ ಚೆನ್ನಾಗಿದ್ದು, ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಅವರ ವಿರುದ್ಧ ಪೋಕ್ಸೋ ದೂರು ದಾಖಲಾಗಿದ್ದಕ್ಕೆ ಅವರು ಆತಂಕಗೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ಕೇಸ್ ಕೊಟ್ಟಿದ್ದಾರೆ ನಾನು ಪ್ರಕರಣದ ಬಗ್ಗೆ ಗೃಹ ಸಚಿವರ ಜೊತೆಗೆ ಮಾತನಾಡುತ್ತೇನೆ. ಕಂಡಕ್ಟರ್ ಮಹದೇವಪ್ಪ ಜೊತೆಗೆ ಸರ್ಕಾರ ಹಾಗೂ ರಾಜ್ಯದ ಜನ ಇದ್ದಾರೆ MES ಗುಂಡಾಗಿರಿಗೆ ಬೆಂಬಲ ನೀಡಿದರೆ ಕೇಸ್ ದಾಖಲಿಸುತ್ತೇವೆ ಎಂದು ತಿಳಿಸಿದರು. ಅವತ್ತು ಇಬ್ಬರು ಹುಡುಗ – ಹುಡುಗಿ ಬಸ್​ನಲ್ಲಿ ಹತ್ತಿದ್ದರು. ಇಬ್ಬರೂ…

Read More

ಮಂಗಳೂರು : ಇತ್ತೀಚಿಗೆ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯ ನೀಡುತ್ತಿರುವ ವಿಷಯ ಬಯಲಾಗಿತ್ತು. ಬಳಿಕ ಅಧಿಕಾರಿಗಳು ಅಲ್ಲಿ ತನಿಖೆ ನಡೆಸಿದ್ದರು. ಇದೀಗ ಮಂಗಳೂರು ಜೈಲಿನ ಒಳಗೆ ಗಾಂಜಾ ಸಪ್ಲೈ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಹೌದು ಮಂಗಳೂರು ಕಾರ್ಯಾಗೃಹಕ್ಕೆ ಗಾಂಜಾ ಸಪ್ಲೈ ಆಗುತ್ತಿದೆ. ಹಾಡಹಗಲೇ ಜೈಲು ಒಳಗೆ ಪುಂಡರು ಗಾಜಾ ಎಸೆಯೋ ದೃಶ್ಯ ಇದೀಗ ಸೆರೆಯಾಗಿದೆ.ಕಾರಿನ ಡ್ಯಾಶ್ ಕ್ಯಾಮ್ ನಲ್ಲಿಯೇ ಈ ಒಂದು ಕೃತ್ಯ ಸೆರೆಯಾಗಿದೆ. ರಸ್ತೆಯಿಂದ ಜೈಲು ಕಾಂಪೌಂಡ್ ಒಳಗೆ ಪುಂಡರು ಗಾಂಜಾ ಎಸೆದಿರುವ ದೃಶ್ಯ ಸೆರೆಯಾಗಿದೆ. ಸ್ಕೂಟರ್ ನಲ್ಲಿ ಬಂದು ಪುಂಡರು ಗಾಜಾ ಎಸೆದು ಅಲ್ಲಿಂದ ಪರಾರಿ ಆಗಿರುವ ಘಟನೆ ನಡೆದಿದೆ.ಮಾಜಿ ಮೇಯರ್ ಕವಿತಾ ಸನಿಲ್ ಕಾರಿನ ಕ್ಯಾಮೆರಾದಲ್ಲಿ ಈ ಒಂದು ದೃಶ್ಯ ಸರಿಯಾಗಿದೆ ಎನ್ನಲಾಗಿದೆ.ರಸ್ತೆಯಿಂದ ಜೈಲು ಕಾಂಪೌಂಡ್ ಒಳಗೆ ಪುಂಡರು ಗಾಂಜಾ ಎಸೆದಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಸ್ಕೂಟರ್ ನಲ್ಲಿ ಬಂದು ಪುಂಡರು ಗಾಜಾ ಎಸೆಯದು…

Read More

ಹಾವೇರಿ : ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿ ಮೃತಪಟ್ಟಿರುವ ಘೋರ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಅತ್ತಿಗೇರಿಯಲ್ಲಿ ಈ ಒಂದು ಘಟನೆ ನಡೆದಿದೆ. ಮೃತ ಬಾಲಕರನ್ನು ಪ್ರಜ್ವಲ್ ದೇವರಮನಿ (15) ಸನತ್ ರೆಡ್ಡಿ (14) ಮೃತ ಬಾಲಕರು ಎಂದು ತಿಳಿದು ಬಂದಿದೆ. ಕೆರೆಯಲ್ಲಿ ಈಗಾಗಲೇ ಪ್ರಜ್ವಲ್ ದೇವರಮನಿ ಎನ್ನುವ ಬಾಲಕನ ಮದುವೆಯಾಗಿದ್ದು ಇನ್ನೂ ಸನತ್ ಎನ್ನುವ ಬಾಲಕನ ಮರ್ತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.

Read More

ಹಾಸನ : ಇತ್ತೀಚಿಗೆ ಈ ಒಂದು ರೀಲ್ಸ್ ಎನ್ನುವ ಹುಚ್ಚಾಟಕ್ಕೆ ಅನೇಕ ಯುವ ಜನರು ಬಲಿಯಾಗುತ್ತಿದ್ದಾರೆ. ಇದೀಗ ಇಂತಹದ್ದೇ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದ್ದು, ರೀಲ್ಸ್ ಮಾಡಲು ಹೋಗಿ ಬೆಟ್ಟದಿಂದ ಪ್ರಪಾತಕ್ಕೆ ಬಿದ್ದು ಯುವಕನೊಬ್ಬ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಗವಿಬೆಟ್ಟದಲ್ಲಿ ನಡೆದಿದೆ. ಹೌದು ರೀಲ್ಸ್ ಮಾಡಲು ಬೆಟ್ಟದ ತುದಿಯಲ್ಲಿ ನಿಂತ ಯುವಕ ಆಯತಪ್ಪಿ ಪ್ರಪಾತಕ್ಕೆ ಬಿದ್ದು ಗಾಯಗೊಂಡ ಘಟನೆ ಸಕಲೇಶಪುರ ತಾಲೂಕಿನ ಗವಿಬೆಟ್ಟದಲ್ಲಿ ನಡೆದಿದೆ. ರಾಕಿದ್ (18) ನೂರು ಅಡಿಗೂ ಹೆಚ್ಚು ಆಳದ ಪ್ರಪಾತಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡ ಯುವಕ ಎಂದು ತಿಳಿದುಬಂದಿದೆ.ಶನಿವಾರಸಂತೆಯಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಸಕಲೇಶಪುರದ ಗವಿಬೆಟ್ಟಕ್ಕೆ ಬಂದಿದ್ದ ರಾಕಿದ್, ಬೆಟ್ಟದ ತುದಿಯಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದ ವೇಳೆ ಜಾರಿ ಬಿದ್ದ. ಪರಿಣಾಮ ಆತನ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.ಸ್ಥಳೀಯರು ಮತ್ತು ಯಸಳೂರು ಠಾಣೆ ಪೊಲೀಸರ ಸಹಾಯದಿಂದ ರಾಕಿದ್ ನನ್ನು ಮೇಲೆತ್ತಿ ತಕ್ಷಣವೇ ಶನಿವಾರಸಂತೆ ಅಸ್ಪತ್ರೆಗೆ ಕರೆದೊಯ್ಯಲಾಯಿತು.ಯಸಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,…

Read More

ಮಹಾರಾಷ್ಟ್ರ : ಪ್ರೇಯಸಿಗೆ ಬೇರೆ ಯುವಕನ ಜೊತೆ ಸಂಬಂಧ ಇದೆ ಎಂದು ತಿಳಿದ ಮಾಜಿ ಪ್ರಿಯಕರನೊಬ್ಬ, ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ಎರಡೆರಡು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿದೆ. ಹೌದು ಮಹಿಳೆ ಮತ್ತು ಅತ್ಯಾಚಾರವೆಸಗಿದ ವ್ಯಕ್ತಿ ಕೆಲವು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿದ್ದರು ಆಕೆ ಆತನನ್ನು ಬಿಟ್ಟು ಬೇರೊಬ್ಬನನ್ನು ಪ್ರೀತಿಸಿದ್ದನ್ನು ಅರಗಿಸಿಕೊಳ್ಳಲಾಗದೆ ಫೆಬ್ರವರಿ 19ರಂದು ರಾತ್ರಿ ಯುವತಿಯ ಸಹೋದರನನ್ನು ಅಪಹರಿಸಿದ್ದರು. ನಂತರ ಆತನಿಗೆ ತನ್ನ ತಂಗಿಗೆ ಕರೆ ಮಾಡಿ ಇಲ್ಲಿಗೆ ಬರುವಂತೆ ಹೇಳು ಎಂದು ಹೇಳಿದ್ದಾನೆ. ಆಕೆ ಸ್ಥಳಕ್ಕೆ ಬಂದಾಗ ಆರೋಪಿಗಳು ಆಕೆಯ ಸಹೋದರ ಮತ್ತು ಆಕೆಯನ್ನು ಕರೆದೊಯ್ಯುತ್ತಿದ್ದ ಆಟೋರಿಕ್ಷಾ ಚಾಲಕನನ್ನು ಥಳಿಸಿ ಆಕೆಯನ್ನು ಎಳೆದುಕೊಂಡು ಹೋಗಿದ್ದಾರೆ.ಆರೋಪಿಗಳು ನಾಗಾಂವ್‌ನ ಶಾಲೆಯ ಬಳಿ ಮತ್ತು ಫಾತಿಮಾನಗರದ ಪಿಕಪ್ ವ್ಯಾನ್‌ನೊಳಗೆ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಯುವತಿ ಮೇಲೆ ಎರಡು ವಿಭಿನ್ನ ಸ್ಥಳಗಳಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸೂಚಿಸುತ್ತದೆ. ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ನಂತರ ಆಕೆ ಪೊಲೀಸ್ ಠಾಣೆಗೆ ಬಂದು…

Read More

ಬೆಂಗಳೂರು : ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಂದಿನಿ ಶವ ಪತ್ತೆಯಾಗಿದೆ. ಚಾಮರಾಜಪೇಟೆಯಲ್ಲಿ ರಾತ್ರಿ 9:30ಕ್ಕೆ ಈ ಒಂದು ಘಟನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದಾಗ ನೇಣು ಬಿಗಿದ ಸ್ಥಿತಿಯಲ್ಲಿ ನಂದಿನಿ ಎನ್ನುವ ಮಹಿಳೆ ಶವ ಪತ್ತೆಯಾಗಿದೆ. ಕೂಡಲೇ ಕುಟುಂಬಸ್ಥರು ನೋಡಿ ನಂದಿನಿ ಮೃತ ದೇಹವನ್ನು ಕೆಳಗೆ ಇಳಿಸಿದ್ದಾರೆ. ಪೊಲೀಸರು ಬರುವ ಮುನ್ನವೇ ಕುಟುಂಬಸ್ಥರು ಮೃತ ದೇಹವನ್ನು ಕೆಳಗೆ ಇಳಿಸಿದ್ದಾರೆ. ಹಾಗಾಗಿ ಆತ್ಮಹತ್ಯೆ ಮಡಿಕೊಂಡಿರಬಹದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಮೃತ ನಂದಿನಿ ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.ನಂದಿನಿ ಕಳೆದ ಎಂಟು ವರ್ಷದ ಹಿಂದೆ ಸೂರ್ಯ ಎಂಬಾತನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಲ್ಲದೇ ದಂಪತಿಗಳಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಕೂಡ ಇತ್ತು. ಆದರೆ ನಂದಿನಿಗೆ ದಿನನಿತ್ಯ ವ್ಯಕ್ತಿಯೋರ್ವ ಕರೆ ಮಾಡಿ ಹಿಂಸೆ ನೀಡುತ್ತಿದ್ದ.. ಈ ಸಂಬಂಧ ಪತ್ನಿ ಹಾಗೂ ಪತಿ ಸೂರ್ಯ ನಡುವೆ ಹಲವಾರು ಬಾರಿ ಗಲಾಟೆ ಕೂಡ…

Read More

ಬೆಂಗಳೂರು : ನಿನ್ನೆ ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೇಯಸಿ ತನ್ನ ಪ್ರೀತಿ ನಿರಾಕರಿಸಿದಳು ಎಂಬ ಒಂದೇ ಒಂದು ಕಾರಣಕ್ಕಾಗಿ ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿಯ ಅಪಾರ್ಟ್ಮೆಂಟ್ ಗೆ ತೆರಳಿ ಅಲ್ಲಿದ್ದ ಯುವತಿಗೆ ತಂದೆಯ ಕಾರಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದ ಘಟನೆ ನಡೆದಿತ್ತು ಇದೀಗ ಈ ಒಂದು ಘಟನೆಗೂ ಮುನ್ನ ಪಾಗಲ್ ಪ್ರೇಮಿ ರಾಹುಲ್ ಯುವತಿಯ ಸಾಕು ತಂದೆಗೆ ಚಾಕು ಇರಿದಿದ್ದ ಎಂದು ಹೇಳಲಾಗುತ್ತಿದೆ. ಹೌದು ಬೆಂಗಳೂರಿನಲ್ಲಿ ಕಾರುಗಳಿಗೆ ರೌಡಿಶೀಟರ್ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾನು ಪ್ರೀತಿಸುತ್ತಿದ್ದ ಯುವತಿಯ ಸಾಕು ತಂದೆಗೆ ಚಾಕು ಇರಿದಿದ್ದಾನೆ. ಲಕ್ಷ್ಮಿ ನಾರಾಯಣ ಎನ್ನುವವರಿಗೆ ರಾಹುಲ್ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ. ಪ್ರೇಯಸಿ ಹುಡುಕಿಕೊಂಡು ಮನೆಗೆ ಹೋಗಿ ರಾಹುಲ್ ಗಲಾಟೆ ಮಾಡಿದ್ದಾನೆ. ಈ ವೇಳೆ ಗಲಾಟೆಗೆ ವಿರೋಧ ಮಾಡಿದ್ದ ಸಾಕು ತಂದೆ ಲಕ್ಷ್ಮಿನಾರಾಯಣಗೆ ರಾಹುಲ್ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ. ಲಕ್ಷ್ಮೀನಾರಾಯಣ್ ಎನ್ನುವವರಿಗೆ ಚಾಕು ಇರಿದ ಬಳಿಕ ಹುಚ್ಚು ಪ್ರೇಮಿ ಹಾಗೂ ರೌಡಿಶೀಟರ್…

Read More