Subscribe to Updates
Get the latest creative news from FooBar about art, design and business.
Author: kannadanewsnow05
ತುಮಕೂರು : ತುಮಕೂರು ಜಿಲ್ಲೆಯ ಕುಣಿಗಲ್ ಬಳಿಯ ದೊಡ್ಡಕೆರೆಯಲ್ಲಿ ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟೆಕ್ಕಿ ಸುಮಾ ಮೃತದೇಹ ಪತ್ತೆಯಾಗಿದ್ದು, ಕುಣಿಗಲ್ ತಾಲೂಕಿನ ಸೊಬಗಾನಹಳ್ಳಿ ನಿವಾಸಿ ಸುಮಾ ಮೃತ ದುರ್ದೈವಿ. ಟೆಕ್ಕಿ ಸುಮಾ ಅವರು ಬೆಂಗಳೂರಿನಲ್ಲಿ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಬೆಂಗಳೂರಿನಿಂದ ಗ್ರಾಮಕ್ಕೆ ವಾಪಸ್ ಬಂದಿದ್ದರು. ಸಂಜೆ ಹೊತ್ತಿಗೆ ಕೆರೆ ಬಳಿ ಸುಮಾರ ಬ್ಯಾಗ್, ಮೊಬೈಲ್, ಬಸ್ ಟಿಕೆಟ್, ಚಪ್ಪಲಿ ಸಿಕ್ಕಿವೆ.ಇದರಿಂದ ಅನುಮಾನಗೊಂಡ ಸ್ಥಳೀಯರು ಸುಮಾರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಪೊಲೀಸರು ದೌಡಾಯಿಸಿದ್ದಾರೆ. ಗುರುವಾರ ಸಂಜೆಯಿಂದ ಸುಮಾಗಾಗಿ ಕೆರೆಯಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಹುಡುಕಾಡಿದ್ದಾರೆ.ಆದರೆ ನಿನ್ನೆ ಸುಮಾ ಮೃತದೇಹ ಸಿಕ್ಕಿರಲಿಲ್ಲ. ಹಾಗಾಗಿ ಇಂದು ಮತ್ತೆ ಶೋಧಕಾರ್ಯಕ್ಕೆ ಇಳಿದರು. ಅಗ್ನಿಶಾಮಕದಳ ಸಿಬ್ಬಂದಿಯೊಂಗೆ ಶಾಸಕ ರಂಗನಾಥ್ ಸಾಥ್ ನೀಡಿದ್ದು, ಖುದ್ದು ಶೋಧಕಾರ್ಯಕ್ಕೆ ಕೆರೆಗೆ ಇಳಿದರು.ನಿರಂತರ ಶೋಧಕಾರ್ಯ ಬಳಿಕ ಟೆಕ್ಕಿ ಸುಮಾರ ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ…
ಬೆಂಗಳೂರು : ವಿದೇಶದಿಂದ ಡ್ರಗ್ಸ್ ತಂದು ಬೆಂಗಳೂರಿನಲ್ಲಿ ವಾಟ್ಸಪ್ ಮೂಲಕ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ ಬೆಂಗಳೂರು ಪೊಲೀಸರು, ಇದೀಗ ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ ಗಳು ಸೇರಿದಂತೆ ಒಟ್ಟು ಮೂವರನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಇಬ್ಬರು ವಿದೇಶಿಗರು ಸೇರಿ ಮೂರು ಡ್ರಗ್ ಪೆಡ್ಲರ್ಗಳ ಬಂಧನವಾಗಿದ್ದು, ಬೆಂಗಳೂರಿನ ಆಡುಗೋಡಿ ಠಾಣೆ ಪೋಲಿಸರಿಂದ ಈ ಒಂದು ಕಾರ್ಯಚರಣೆ ನಡೆದದೆ. ಡ್ರಗ್ ಪೆಡ್ಲರ್ ಅಮಿತ್ ನೈಜೀರಿಯಾ ಮೂಲದ ಸ್ಯಾಮ್ಸನ್ ಘಾನಾ ಮೂಲದ ಐಶಾಕ್ ಜಾಯ್ ಎಂಬ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 77 ಲಕ್ಷ ಮೌಲ್ಯದ 743 ಗ್ರಾಂ MDMA ಹಾಗೂ 1.25 ಕೆಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿದೇಶದಿಂದ MDMA ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ವಾಟ್ಸಪ್ ಮೂಲಕ ಬೆಂಗಳೂರಿನಲ್ಲಿ ಈ ಆರೋಪಿಗಳು ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ : ಕ್ಷುಲ್ಲಕ ಕಾರಣಕ್ಕೆ ಬಾರ್ ನಲ್ಲಿ ಸಪ್ಲೈ ಆಗಿ ಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಾಗೇಪಲ್ಲಿ ಎಂಬಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಾಗೇಪಲ್ಲಿ ಪಟ್ಟಣದ ಶ್ರೀನಿವಾಸ್ (48) ಎಂದು ತಿಳಿದು ಬಂದಿದೆ. ಕೊಲೆಯಾದ ದುರ್ದೈವಿ ಬಾಗೇಪಲ್ಲಿ ಪಟ್ಟಣದ ಪ್ರೀತಿ ಬಾರ್ನಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದ.ಸ್ಥಳಕ್ಕೆ ಬಾಗೇಪಲ್ಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು : ಬೆಳಗಾವಿಯಲ್ಲಿ ಕನ್ನಡ ಮಾತನಾಡು ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಬಳಿಕ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಹಲವಾರು ರೀತಿ ಬೆಳವಣಿಗೆ ಆದವು. ಇದೀಗ ಶಿವಸೇನೆ ಹಾಗೂ ಎಂಇಎಸ್ ಪುಂಡರ ವಿರುದ್ಧ ಸಿಡಿದೆದ್ದಿರುವ ಕನ್ನಡಪರ ಸಂಘಟನೆಗಳು ಮಾರ್ಚ್ 22 ರಂದು ಕರ್ನಾಟಕ ಬಂದ್ ಮಾಡಲು ಘೋಷಿಸಿದೆ. ಹೌದು ಇಂದು ಬೆಂಗಳೂರಿನ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು ಈ ಒಂದು ಸಭೆಯಲ್ಲಿ ಅನೇಕ ಕನ್ನಡ ಸಂಘಟನೆಗಳ ಅಧ್ಯಕ್ಷರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು ಕಂಡಕ್ಟರ್ ಮೇಲೆ ಹಲ್ಲಿಯನ್ನು ಖಂಡಿಸಿ ಶಿವಸೇನೆ ಹಾಗೂ ಎಂಇಎಸ್ ವಿರುದ್ಧ ಕನ್ನಡಪರ ಸಂಘಟನೆಗಳು ಮಾರ್ಚ್ 22 ರಂದು ಕರ್ನಾಟಕ ಬಂದ್ ಎಂದು ಘೋಷಣೆ ಮಾಡಿವೆ. ಸಭೆಯಲ್ಲಿ ವಾಟಾಳ್ ನಾಗರಾಜ್, ರಾಜ್ಯದ ಕನ್ನಡ ಪರ ಸಂಘಟನೆಗಳಾದ ಕರವೇ ನಾರಾಯಣ ಗೌಡ, ಪ್ರವೀಣ್ ಕುಮಾರ್ ಶೆಟ್ಟಿ ಬಣ, ಶಿವರಾಮೇಗೌಡ ಬಣ, ಕನ್ನಡ ಜಾಗೃತಿ ಮಂಜುನಾಥ್ ಕೆ.…
ಬೆಂಗಳೂರು : ಇಂದು ಬೆಳಿಗ್ಗೆ ತಾನೇ ಬೆಂಗಳೂರಿನಲ್ಲಿ ರಸ್ತೆ ದಾಟುವ ವೇಳೆ ಮಹಿಳೆಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು ಎರಡು ಬಿಎಂಟಿಸಿ ಬಸ್ ಗಳ ನಡುವೆ ಸೆಲುಕಿ ಆಟೋ ಅಪ್ಪಚ್ಚಿಯಾಗಿದೆ ಈ ವೇಳೆ ಆಟೋ ಚಾಲಕ ಹಾಗೂ ಪ್ರಯಾಣಿಕ ಸ್ಥಳದಲ್ಲಿ ಸಾವನಪ್ಪಿರುವ ಘಟನೆ ಬೆಂಗಳೂರಿನ ಹನುಮಂತ ನಗರದ ಸೀತಾ ಸರ್ಕಲ್ ಬಳಿ ನಡೆದಿದೆ. ಹೌದು ಬಿಎಂಟಿಸಿ ಬಸ್ ಡಿಕ್ಕಿಯಾಗಿ ಆಟೋ ಚಾಲಕ ಹಾಗು ಪ್ರಯಾಣಿಕ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಹನುಮಂತನಗರದ ಹನುಮಂತ ನಗರದ ಸೀತಾ ಸರ್ಕಲ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಎರಡು ಬಿಎಂಟಿಸಿ ಬಸ್ಗಳ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾಗಿದೆ. ಘಟನೆಯಲ್ಲಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಆಟೋ ಚಾಲಕ ಹಾಗೂ ಪ್ರಯಾಣಿಕ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ರಾಯಚೂರು : ಕಿಡಿಗೇಡಿಗಳು ಸರ್ಕಾರಿ ಶಾಲೆಯ ಬಾಗಿಲ ಹಾಗೂ ಕೊಠಡಿಗಳಿಗೆ ಕುಂಕುಮ ಅರಿಶಿಣ ನಿಂಬೆಹಣ್ಣು ಹಚ್ಚಿ ಮಾಟ ಮಂತ್ರ ಮಾಡಿಸಿರುವ ಘಟನೆಯ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೊರವಿ ಎಂಬ ಗ್ರಾಮದಲ್ಲಿ ಈ ಒಂದು ಘಟನೆ ಬೆಳಕಿಗೆ ಬಂದಿದೆ. ಮಾನ್ವಿ ತಾಲೂಕಿನ ಕೊರವಿ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಮಾಟ ಮಂತ್ರ ಮಾಡಿಸಿದ ಕಿಡಿಗೇಡಿಗಳು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗೆ ಕಿಡಿಕೇಡಿಗಳು ಮಾಟ ಮಂತ್ರ ಮಾಡಿಸಿದ್ದಾರೆ. ರಾತ್ರಿ ವೇಳೆ ಗ್ರಾಮದ ಶಾಲೆಯ ಗೋಡೆ ಹಾಗೂ ಬಾಗಿಲಿಗೆ ಕುಂಕುಮ ಹಚ್ಚಿದ್ದು ಹರಿಶಿಣ ನಿಂಬೆಹಣ್ಣು ಮಂತ್ರಿಸಿ ಕಿಡಿಗೇಡಿಗಳು ಮಾಟ ಮಂತ್ರ ಮಾಡಿ ತೆರಳಿದ್ದಾರೆ. ಇದೀಗ ಗ್ರಾಮದ ಸರ್ಕಾರಿ ಶಾಲೆಗೆ ವಾಮಾಚಾರ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಮಾಟ ಮಂತ್ರ ಮಾಡಿಸಿದ್ದರಿಂದ ಶಾಲೆಗೆ ಹೋಗಲು ಇದೀಗ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆದರುತ್ತಿದ್ದಾರೆ. ಮಾಟ ಮಂತ್ರ ಮಾಡಿಸಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಬೆಂಗಳೂರು : ನಿನ್ನೆ ತಾನೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ಹುಟ್ಟು ಹಬ್ಬದ ಮರುದಿನವೇ ಇದೀಗ ಪೋಕ್ಸೋ ಪ್ರಕರಣದಲ್ಲಿ ಬಿಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಮಾರ್ಚ್ 15 ರಂದು ಖುದ್ದು ಹಾಜರಾಗುವಂತೆ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಬಿಎಸ್ ಯಡಿಯೂರಪ್ಪಗೆ ಸಮನ್ಸ್ ಜಾರಿ ಮಾಡಿದೆ. ಇಂದು ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯದಲ್ಲಿ ಪೋಕ್ಸೋ ಪ್ರಕರಣ ಸಂಬಂಧ ವಿಚಾರಣೆ ನಡೆಯಿತು. ವಿಚಾರಣೆಯ ವೇಳೆ ಕೋರ್ಟಿಗೆ ಸಲ್ಲಿಸಿದ ಆರಂಭ ಪಟ್ಟಿಯನ್ನು ಪರಿಗಣಿಸಿತು. ಬಳಿಕ ನ್ಯಾಯಾಲಯವು ಮಾರ್ಚ್ 15 ರಂದು ಕೋರ್ಟಿಗೆ ಖುದ್ದು ಹಾಜರಾಗುವಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಇತರೆ ಆರೋಪಿಗಳಿಗೆ ಖುದ್ದು ಹಾಜರಾಗಿ ಎಂದು ಸಮನ್ಸ್ ಜಾರಿ ಮಾಡಿದೆ.ಹಾಗಾಗಿ ಬಿಎಸ್ ಯಡಿಯೂರಪ್ಪ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣ ಹಿನ್ನೆಲೆ? ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 2024ರ ಮಾರ್ಚ್ 3ರಂದು ಬಿಎಸ್ವೈ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಆರೋಪದ ಮೇಲೆ ಪ್ರಕರಣ…
ಬೆಂಗಳೂರು : ನಿನ್ನೆ ತಾನೆ ಪ್ಲಾಸ್ಟಿಕ್ ನಲ್ಲಿ ಇಡ್ಲಿ ತಯಾರಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಿತ್ತು. ಇದೀಗ ಟ್ಯಾಟೂ ಹಾಗೂ ಮಹಿಳೆಯರ ಸೌಂದರ್ಯ ವರ್ಧಕಕ್ಕೆ ಹೆಸರುವಾಸಿಯಾದ ಲಿಪ್ಸ್ಟಿಕ್, ಲಿಪ್ ಕೇರ್ ಹಾಗೂ ಕಾಸ್ಮೆಟಿಕ್ಸ್ ಗಳಿಗೂ ಕೂಡ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಚಿಂತೆ ನಡೆಸಿದ್ದು, ಈ ಕುರಿತು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರಕ್ಕೆ ಕಠಿಣ ಕಾನೂನು ಜಾರಿ ತರಲು ಪತ್ರ ಬರೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಹೌದು ಕಳಪೆ ಗುಣಮಟ್ಟದ ಕಾಸ್ಮೆಟಿಕ್ಸ್ ಗಳಿಗೂ ಬ್ರೇಕ್ ಬೀಳುವ ಸಾಧ್ಯತೆ ಇದೆ. ಕೇಂದ್ರ ಆರೋಗ್ಯ ಇಲಾಖೆಗೆ ಮನವಿ ಮಾಡಲು ಇದೀಗ ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದ್ದು, ಈ ಕುರಿತು ಪತ್ರ ಬರೆಯಲು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡರಾವ್ ಇದೀಗ ಸಿದ್ಧತೆ ನಡೆಸಿದ್ದಾರೆ.ಬೀದಿ ಬದಿಯಲ್ಲಿ ಸಿಗುವಂತಹ ಲಿಪ್ಸ್ಟಿಕ್ ಲಿಪ್ ಕೇರ್ ಕಾಸ್ಮೆಟಿಕ್ಸ್ ಗಳಿಗೂ ರಾಜ್ಯ ಸರ್ಕಾರ ಇದೀಗ ಬ್ರೇಕ್…
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಗೆ ಇದೀಗ ಹೈಕೋರ್ಟ್ ಮತ್ತೊಂದು ಬಿಗ್ ರಿಲೀಫ್ ನೀಡಿದೆ. ದರ್ಶನ್ ಎಲ್ಲಿಂದ ಬಿಡುಗಡೆಗೆ ಮುನ್ನ ಹೈಕೋರ್ಟ್ ಹಲವು ಶರತ್ತುಗಳನ್ನು ವಿಧಿಸಿತ್ತು ಆದರೆ ಇದೀಗ ಹೈಕೋರ್ಟ್ ಈ ಒಂದು ವಿಚಾರಗಳಲ್ಲಿ ಹಲವು ಶರತುಗಳನ್ನು ಸರಿಸಿ ಹೈಕೋರ್ಟ್ ದರ್ಶನ್ ಅವರಿಗೆ ರಿಲೀಫ್ ನೀಡಿದೆ. ಹೌದು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಜಾಮೀನು ಷರತ್ತು ಗಳನ್ನು ಇದೀಗ ಹೈಕೋರ್ಟ್ ಸಡಿಲಿಸಿದೆ . ಕೋರ್ಟ್ ಅನುಮತಿ ಇಲ್ಲದೆ ನಟ ದರ್ಶನ್ ವಿದೇಶಕ್ಕೆ ತೆರಳುವಂತಿಲ್ಲ ಎಂದು ಹೇಳಿ ಹಲವು ಶರತ್ತುಗಳನ್ನು ಇದೀಗ ಹೈಕೋರ್ಟ್ ಸಲ್ಲಿಸಿದೆ ಈ ಮೂಲಕ ನಟ ದರ್ಶನ್ ಅವರಿಗೆ ಈ ಒಂದು ಪ್ರಕರಣದಲ್ಲಿ ಮತ್ತೆ ರಿಲೀಫ್ ಸಿಕ್ಕಂತಾಗಿದೆ.
ಬೆಂಗಳೂರು : ಬೆಳಗಾವಿಯಲ್ಲಿ ಶಿವಸೇನೆ ಮತ್ತು ಎಂಇಎಸ್ ಪುಂಡರಿಂದ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಸೇನೆ ವಿರುದ್ಧ ಇದೀಗ ಕನ್ನಡಪರ ಸಂಘಟನೆಗಳು ಸಿಡಿದೆದ್ದಿವೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಲಿದೆ. ಹೌದು ಶಿವಸೇನೆ ಮತ್ತು ಎಂಇಎಸ್ ವಿರುದ್ಧ ಕನ್ನಡಪ್ರ ಸಂಘಟನೆಗಳು ಸಿಡಿದೆದ್ದಿದ್ದು, ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ ಈ ಒಂದು ಸಭೆಯಲ್ಲಿ ಕರ್ನಾಟಕ ಬಂದ್ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ರಾಜ್ಯದ ಕನ್ನಡ ಪರ ಸಂಘಟನೆಗಳ ಸಭೆ ಕರೆದ ವಾಟಾಳ್ ನಾಗರಾಜ್, ಕರವೇ ಪ್ರವೀಣ್ ಕುಮಾರ್ ಶೆಟ್ಟಿ, ಶಿವರಾಮೇಗೌಡ ಬಣ, ಕನ್ನಡ ಜಾಗೃತಿ ಮಂಜುನಾಥ್ ಕೆ. ಗಿರೀಶ್ ಗೌಡ ಕನ್ನಡ ಸೇನೆ ಅಧ್ಯಕ್ಷ ಕುಮಾರ ಸೇರಿ ವಿವಿಧ ಮುಖಂಡರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇಂದಿನ ಸಭೆಯಲ್ಲಿ ಹೋರಾಟದ ರೂಪರೇಷಗಳ ಬಗ್ಗೆ ನಿರ್ಧರಿಸಲಾಗುತ್ತದೆ.