Author: kannadanewsnow05

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ತಲಘಟ್ಟಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ಮೂಲದ ಕ್ಯಾಬ್ ಚಾಲಕ ದೇವರಾಜ್ (32) ಹಾಗೂ ಅಶೋಕ (35) ಮೃತರು. ಶ್ರೀನಿವಾಸ್, ಮದನ್, ಮಹಂತೇಶ್ ಎಂಬುವರು ಗಾಯ ಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವರಾಜ್ ಕ್ಯಾಬ್ ಚಾಲಕನಾಗಿ ಹಾಗೂ ಅಶೋಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಗಾಯಾಳುಗಳು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿ ದ್ದರು. ಎಲ್ಲರೂ ಲಗ್ಗೆರೆ, ನೆಲಮಂಗಲ ಸಮೀಪದಲ್ಲಿ ವಾಸವಾಗಿದ್ದು ಸ್ನೇಹಿತರಾಗಿದ್ದಾರೆ. ತಡರಾತ್ರಿ ಐವರು ಕ್ಯಾಬ್‌ನಲ್ಲಿ ಹೊಸಕೆ ರೆಹಳ್ಳಿಯಿಂದ ತುಮಕೂರು ರಸ್ತೆ ಕಡೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಸೋಂಪುರ ಸಮೀಪ ರಸ್ತೆಯ ಉಬ್ಬು ಗಳನ್ನು ಎಗರಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕ್ಯಾಬ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಮಣ್ಣಿನ ಗುಡ್ಡೆಯ ಮೇಲೆ…

Read More

ಬೆಂಗಳೂರು : ಮಾನಹಾನಿ ಆರೋಪ ಪ್ರಕರಣದಲ್ಲಿ ವಿಚಾರಣೆಗೆ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ. ಸಚಿವ ಶಿವಾನಂದ ಪಾಟೀಲ್ ದಾಖಲಿಸಿರುವ ಖಾಸಗಿ ದೂರು ಸಂಬಂಧ ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಯತ್ನಾಳ್‌ ವಿಚಾರಣೆಗೆ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ. ಮುಂದಿನ ವಿಚಾರಣೆಯನ್ನು ಜ.20ಕ್ಕೆ ಮುಂದೂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುವ ಸಂದರ್ಭದಲ್ಲಿ ಯತ್ನಾಳ್ ಅವರು ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಚಿವ ಶಿವಾನಂದ ಎಸ್.ಪಾಟೀಲ್ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಈ ಖಾಸಗಿ ದೂರು ದಾಖಲಿಸಿದ್ದರು.

Read More

ಧಾರವಾಡ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದೆ. ಆದರೆ ಈ ಸಾವು ಅಂಡಮಾನ್ ನಲ್ಲಿ ನಡೆದಿದೆ. ಹೌದು ಅಂಡಮಾನ್ ನಿಕೋಬಾರ್ ಪ್ರವಾಸಕ್ಕೆ ತೆರಳಿದ್ದ ಧಾರವಾಡದ ಕೆಸಿಡಿ ಕಾಲೇಜ್‌ನ ಅಸಿಸ್ಟೆಂಟ್ ಪ್ರೊಫೆಸರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ಎಸ್.ಅನ್ನಪೂರ್ಣ ಎಂದು ಗುರುತಿಸಲಾಗಿದೆ. ಅವರು ಅರ್ಥಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆ ಕುಟುಂಬದ ಜೊತೆ ಅಂಡಮಾನ್ ನಿಕೋಬಾರ್‌ನ ಫೋರ್ಟ್‍ಬ್ಲೇರ್‌ಗೆ ಹೋಗಿದ್ದರು. ಕಳೆದ ರಾತ್ರಿ ಅನ್ನಪೂರ್ಣ ಅಸ್ವಸ್ಥರಾಗಿದ್ದರು. ಸ್ಥಳೀಯ ಆಸ್ಪತ್ರೆಗೆ ಅನ್ನಪೂರ್ಣರನ್ನು ಕರೆದೊಯ್ಯಲಾಗಿತ್ತು. ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ. ಅವರ ಶವವನ್ನು ಧಾರವಾಡಕ್ಕೆ ತರಲು ಕುಟುಂಬಸ್ಥರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸೋಮವಾರ ಶವ ನಗರಕ್ಕೆ ತರುವ ಸಾಧ್ಯತೆ ಇದೆ.

Read More

ಉತ್ತರಕನ್ನಡ : ಪಾಗಲ್ ಪ್ರೇಮಿ ಒಬ್ಬ ಪ್ರೀತ್ಸೆ ಎಂದು ಯುವತಿಯ ಹಿಂದೆ ಬಿದ್ದಿದ್ದಾನೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಮೃತ ಯುವತಿಯನ್ನು ರಿಶೆಲ್ ಎಂದು ಗುರುತಿಸಲಾಗಿದೆ. ಯುವಕನ ಕಾಟ ತಾಳಲಾರದೆ ತಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಯುವತಿಯ ತಂದೆ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಬಾಡ ನಂದನಗದ್ದಾದ ಶರಾಗ್ ಚಂದ್ರಾಹಾಸ ಕೊಡಾರಕರ್ ಎಂಬಾತನೇ ತನ್ನ ಮಗಳಿಗೆ ಕಾಟ ಕೊಟ್ಟಿದ್ದಾನೆ ಎಂದು ಮೃತ ಯುವತಿಯ ತಂದೆ ಕಿಸ್ತೋದ್ ಪ್ರಾನ್ಸಿಸ್ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿಯ ಪ್ರೇಮ ನಿವೇದನೆಯನ್ನು ಯುವತಿ ನಿರಾಕರಿಸಿದಾಗ, ಆತ ಆಕೆಯನ್ನು ಟಾರ್ಗೆಟ್ ಮಾಡಿ ಅತ್ಯಂತ ಕ್ರೂರವಾಗಿ ಮಾತನಾಡುತ್ತಿದ್ದನು. ನೀನು ಬದುಕಿದ್ದು ಪ್ರಯೋಜನವಿಲ್ಲ, ಸತ್ತು ಹೋಗು. ನೀನು ಬದುಕಿರುವುದಕ್ಕಿಂತ ಸತ್ತರೆ ಒಳ್ಳೆಯದು ಎಂದು ಹೀಯಾಳಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಮನನೊಂದು ಜನವರಿ 09, 2026 ರಂದು ಮಧ್ಯಾಹ್ನ ಸುಮಾರು 2:30…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ನಿಗೂಢ ಸಾವು ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಗಳೂರು ಮೂಲದ ಮಹಿಳಾ ಟೆಕ್ಕಿ ಶರ್ಮಿಳ (34) ಕೊಲೆ ಆಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕೇರಳ ಮೂಲದ ಕರ್ನಲ್ ಕುರೈ ಎಂಬ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾ ಹತ್ಯೆಯಾಗಿದೆ. ಕೊಲೆಯಾದ ಶರ್ಮಿಳ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾಮಮೂರ್ತಿ ನಗರದ ಸುಬ್ರಮಣ್ಯ ಲೇಔಟ್ ನಲ್ಲಿ ಶರ್ಮಿಳಾ ವಾಸವಿದ್ದರು . ಕೇರಳ ಮೂಲದ ಆರೋಪಿ ಕರ್ನಲ್ ಕುರೈನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶರ್ಮಿಳಾ ವಾಸವಿದ್ದ ಪಕ್ಕದ ಮನೆಯಲ್ಲಿಯೇ ಕರ್ನಲ್ ವಾಸವಿದ್ದ ಶರ್ಮಿಳಾಳನ್ನು ಆರೋಪಿ ಕರ್ನಲ್ ಕುರೈ ಪ್ರೀತಿಸುತ್ತಿದ್ದ. ಅಲ್ಲದೆ ಶರ್ಮಿಳ ಜೊತೆಗೆ ದಿನಾಲು ಮಾತುಕತೆ ನಡೆಸುತ್ತಿದ್ದ. ತಾನು ಪ್ರೀತಿಸುತ್ತಿದ್ದ ವಿಚಾರ ಆರೋಪಿ ಶರ್ಮಿಳಗೆ ಹೇಳದೆ ಇದ್ದ. ಜನವರಿ…

Read More

ಕಾಶ್ಮೀರ : ಗಡಿಯಲ್ಲಿ ಮತ್ತೆ ಪಾಪಿ ಪಾಕಿಸ್ತಾನ್ ಬಾಲ ಬಿಚ್ಚಿದೆ. ಜಮ್ಮು ಕಾಶ್ಮೀರದತ್ತ ಪಾಕಿಸ್ತಾನ ಡ್ರೋನ್ ಗಳು ನುಗ್ಗಿ ಬಂದಿವೆ. ಪಾಕಿಸ್ತಾನ ಕಿತಾಪತಿಗೆ ಭಾರತೀಯ ಸೇನೆ ತಿರುಗಟು ನೀಡಿದೆ. ಪಾಕಿಸ್ತಾನದ ಡ್ರೋನ್ ಗಳನ್ನು ಭಾರತೀಯ ಸೇನೆ ದ್ವಂಸ ಮಾಡಿದೆ. ಹೌದು ಅನುಮಾನಾಸ್ಪದವಾಗಿ ಪಾಕಿಸ್ತಾನ್ ಡ್ರೋನ್ ಗಳು ಹಾರಿ ಬಂದಿದ್ದವು. ನಿನ್ನೆ ಸಂಜೆ 6:35 ರ ಸುಮಾರಿಗೆ ಪಾಕಿಸ್ತಾನ ಡ್ರೋನ್ ಗಳ ಹಾರಾಟ ನಡೆದಿತ್ತು. ಗನಿಯ ಕಲ್ಸಿಯನ್ ಗ್ರಾಮಗಳ ಪ್ರದೇಶದ ಮೇಲೆ ಹಾರಾಟ ನಡೆಸಲಾಗಿತ್ತು. ಮಧ್ಯಮ ಮತ್ತು ಹಗುರವಾದ ಮಷೀನ್ ಗಳಿಂದ ಡ್ರೋನ್ ಗಳನ್ನು ಉಡೀಸ್ ಮಾಡಲಾಗಿದೆ. ಅಂತರಾಷ್ಟ್ರೀಯ ಅಂಗಡಿಯಲ್ಲಿ ಭಾರತೀಯ ಸೇನೆ ಹೈ ಅಲರ್ಟ್ ಆಗಿದೆ ಪಾಕಿಸ್ತಾನ ಮತ್ತೆ ಬಾಲ ಬಿಚ್ಚಲು ಮುಂದಾಗಿದ್ದು ಅದಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ.

Read More

ಬಾಗಲಕೋಟೆ: ಜಿಲ್ಲೆಯಲ್ಲಿ ರಾಜ್ಯದಲ್ಲೊಂದು ಮನಕಲಕುವ ಕೀಚಕ ಕೃತ್ಯವೊಂದು ನಡೆದಿದೆ. ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರವೆಸಗಿ ಹೆದ್ದಾರಿಯಲ್ಲೇ ಕೀಚಕರು ಬಿಟ್ಟು ಹೋಗಿರುವಂತ ಘಟನೆ ನಡೆದಿದೆ. ಜನವರಿ.5ರಂದು ನಡೆದಿರುವಂತ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆಯಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ಎಸಗಿರುವಂತ ಘಟನೆ ನಡೆದಿದೆ. 40 ವರ್ಷದ ವಿಚ್ಚೇದಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎನ್ನಲಾಗುತ್ತಿದೆ. ಬಾಗಲಕೋಟೆಯ ಹುನಗುಂದದಲ್ಲಿ ಈ ಕೃತ್ಯ ನಡೆಸಲಾಗಿದೆ. ಅತ್ಯಾಚಾರವೆಸಗಿ ಹೆದ್ದಾರಿ ಬಳಿ ದುಷ್ಟರು ಬಿಟ್ಟು ಹೋಗಿದ್ದಾರೆ. ಸಾರ್ವಜನಿಕರ ಸಹಾಯದಿಂದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದವೆರೆದಿದೆ. ಈ ಸಂಬಂಧ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉತ್ತರಕನ್ನಡ : ಪಾಗಲ್ ಪ್ರೇಮಿ ಒಬ್ಬ ಪ್ರೀತ್ಸೆ ಎಂದು ಯುವತಿಯ ಹಿಂದೆ ಬಿದ್ದಿದ್ದಾನೆ ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಮೃತ ಯುವತಿಯನ್ನು ರಿಶೆಲ್ ಎಂದು ಗುರುತಿಸಲಾಗಿದೆ. ಯುವಕನ ಕಾಟ ತಾಳಲಾರದೆ ತಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಯುವತಿಯ ತಂದೆ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಬಾಡ ನಂದನಗದ್ದಾದ ಶರಾಗ್ ಚಂದ್ರಾಹಾಸ ಕೊಡಾರಕರ್ ಎಂಬಾತನೇ ತನ್ನ ಮಗಳಿಗೆ ಕಾಟ ಕೊಟ್ಟಿದ್ದಾನೆ ಎಂದು ಮೃತ ಯುವತಿಯ ತಂದೆ ಕಿಸ್ತೋದ್ ಪ್ರಾನ್ಸಿಸ್ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿಯ ಪ್ರೇಮ ನಿವೇದನೆಯನ್ನು ಯುವತಿ ನಿರಾಕರಿಸಿದಾಗ, ಆತ ಆಕೆಯನ್ನು ಟಾರ್ಗೆಟ್ ಮಾಡಿ ಅತ್ಯಂತ ಕ್ರೂರವಾಗಿ ಮಾತನಾಡುತ್ತಿದ್ದನು. ನೀನು ಬದುಕಿದ್ದು ಪ್ರಯೋಜನವಿಲ್ಲ, ಸತ್ತು ಹೋಗು. ನೀನು ಬದುಕಿರುವುದಕ್ಕಿಂತ ಸತ್ತರೆ ಒಳ್ಳೆಯದು ಎಂದು ಹೀಯಾಳಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಮನನೊಂದು ಜನವರಿ 09, 2026 ರಂದು ಮಧ್ಯಾಹ್ನ ಸುಮಾರು 2:30…

Read More

ಮಂಗಳೂರು : ಮಂಗಳೂರಿನಲ್ಲಿ ಘೋರ ಘಟನೆ ಒಂದು ನಡೆದಿದ್ದು ಚುರುಮುರಿ ಸ್ಟಾಲ್ ಗೆ ಬಂದ ಹಸಿವಿಗೆ ಕೀಚಕನೊಬ್ಬ ಚೂರಿ ಇರಿದಿರುವ ಘಟನೆ ಮಂಗಳೂರು ಹೊರವಲಯದ ಎಡಪದ ವಿನ ಭೂಪಾಡಿಕಲ್ಲು ಬಳಿ ಈ ಒಂದು ಘಟನೆ ನಡೆದಿದೆ. ಆಹಾರ ಅರಿಸಿ ಬಂದ ಹಸು ಸ್ಟಾಲ್ ಬಳಿ ಏನಾದರೂ ತಿನ್ನಲು ಸಿಗುತ್ತೆ ಅಂತ ಬಂದಿತ್ತು. ಈ ವೇಳೆ ಹಸುವನ್ನು ಚೂರಿ ಇರಿದು ಉಮರಬ್ಬ ಎಂಬಾತ ಓಡಿಸಲು ಮುಂದಾಗಿದ್ದಾನೆ. ಈ ವೇಳೆ ಹಸುವಿನ ಮೂತಿಗೆ ಉಮರಬ್ಬ ಚೂರಿಯಿಂದ ಇರಿದಿದ್ದಾನೆ. ಅರಿಶಿಣ ಹಚ್ಚಿ ಅಯ್ಯಪ್ಪ ಮಾಲಾಧಾರಿಗಳು ಮತ್ತು ಸ್ಥಳೀಯರು ಹಸುವನ್ನು ಆರೈಕೆ ಮಾಡಿದ್ದಾರೆ. ಉಮರಬ್ಬನ ವಿರುದ್ಧ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಶಸ್ವಿನಿ ತಾಯಿ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಕಾಲೇಜು ಪ್ರಿನ್ಸಿಪಾಲ್ ಸೇರಿದಂತೆ ಒಟ್ಟು ಐವರು ಉಪನ್ಯಾಸಕರ ವಿರುದ್ಧ FIR ದಾಖಲಾಗಿದೆ. ಹೌದು ಬೆಂಗಳೂರಿನಲ್ಲಿ ಡೆಂಟಲ್ ಸ್ಟೂಡೆಂಟ್ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಲೇಜು ಪ್ರಿನ್ಸಿಪಾಲ್ ಸೇರಿ ಇವರು ಲೆಕ್ಚರರ್ಸ್ ವಿರುದ್ಧ fir ದಾಖಲಾಗಿದೆ ಯಶಸ್ವಿನಿ ತಾಯಿ ಅವರು ದೂರು ನೀಡಿದ ಹಿನೆಲೆಯಲ್ಲಿ ಅದರ ಅನ್ವಯ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ಬೇಸತ್ತು ಜನವರಿ 8ರಂದು ಚಂದಾಪುರದ ಮನೆಯಲ್ಲಿ ಯಶಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದಳು. ಯಶಸ್ವಿನಿ ಆತ್ಮಹತ್ಯೆಗೆ ಕಾಲೇಜು ಉಪನ್ಯಾಸಕರು ಕಿರುಕುಳ ನೀಡಿರುವ ಆರೋಪ ಕೇಳಿಬಂದಿತ್ತು. ಸಹಪಾಠಿಗಳ ಮುಂದೆ ಯಶಸ್ವಿನಿ ಬಣ್ಣ ಹಾಗೂ ಡ್ರೆಸ್ ಬಗ್ಗೆ ಉಪನ್ಯಾಸಕರು ಟೀಕಿಸಿದ್ದರು. ಕಪ್ಪು ಬಣ್ಣದ ನಿನಗೆ ಡಾಕ್ಟರ್ ಆಗಬೇಕಾ ಎಂದು ಹೀಯಾಳಿಸಿದ್ದರು. ವಿದ್ಯಾರ್ಥಿನಿ ಕಣ್ಣು ನೋವು ಎಂದಿದ್ದಕ್ಕೆ ಕೊಂಕು ಮಾತನಾಡಿರುವ ಆರೋಪ ಕೇಳಿ ಬಂದಿದೆ ಸೆಮಿನಾರ್ ರೇಡಿಯೋಲೋಜಿ, ಕೇಸ್…

Read More