Author: kannadanewsnow05

ರಾಯಚೂರು : ರಾಜ್ಯದಲ್ಲಿ ಸಾಲಭಾದೇ ತಳಲಾರದೆ ರೈತರೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಭಾದೆ ತಾಳಲಾರದೇ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ ರೌಡಕುಂದಾ ಗ್ರಾಮದಲ್ಲಿ ಜರುಗಿದೆ. ಜಿಲ್ಲೆಯ ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದ ಬಳಿ ಕೆರೆಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ರೈತ ಹನುಮಂತ ವಿರುಪಾಕ್ಷಪ್ಪ ಡಮಾಣಿ (44) ಆತ್ಮಹತ್ಯೆಗೆ ಶರಣಾದ ರೈತ ಎಂದು ತಿಳಿದುಬಂದಿದೆ. ಗ್ರಾಮದ ಪಕ್ಕದಲ್ಲಿರುವ ಕೆರೆಗೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತನಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸುಮಾರು 10 ಲಕ್ಷ ರೂ ಹಾಗೂ ಖಾಸಗಿಯಾಗಿ 10 ರಿಂದ 12 ಲಕ್ಷ ರೂ.ಗಳ ಸಾಲ ಇತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಕುರಿತು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಂಧನೂರು ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.

Read More

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ದೊಡ್ಡ ಮಟ್ಟದ ಕಾನೂನು ಜಯ ಸಿಕ್ಕಿದೆ. ಅವರ ಶಸ್ತ್ರಾಸ್ತ್ರ ಪರವಾನಗಿ  ಅಮಾನತುಗೊಳಿಸಿ ಪೊಲೀಸರು ಹೊರಡಿಸಿದ್ದ ಆದೇಶಕ್ಕೆ ನ್ಯಾಯಾಲಯ ಈಗ ತಡೆಯಾಜ್ಞೆ ನೀಡಿದೆ. ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎದುರಿಸುತ್ತಿರುವ ಕ್ರಿಮಿನಲ್ ಆರೋಪಗಳ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಅವರ ಗನ್ ಲೈಸೆನ್ಸ್ ಅನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಪೊಲೀಸರ ಈ ಕ್ರಮವನ್ನು ಪ್ರಶ್ನಿಸಿ ದರ್ಶನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ವಿಚಾರಣೆ ಮತ್ತು ತೀರ್ಪು: ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ದರ್ಶನ್ ಪರ ವಕೀಲರು ಮಂಡಿಸಿದ ವಾದದ ಪ್ರಮುಖ ಅಂಶಗಳು ಇಲ್ಲಿವೆ: ದರ್ಶನ್ ಅವರು 2008 ರಿಂದಲೂ ಅಧಿಕೃತವಾಗಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ್ದಾರೆ. ಯಾವುದೇ ಕಾನೂನುಬಾಹಿರ ಚಟುವಟಿಕೆಗೆ ಅವರು ಶಸ್ತ್ರಾಸ್ತ್ರ ಬಳಸಿಲ್ಲ. ಕೇವಲ ಕ್ರಿಮಿನಲ್ ಪ್ರಕರಣ…

Read More

ಚಿಕ್ಕಬಳ್ಳಾಪುರ : ದೇಶಾದ್ಯಂತ ಮನ್ ರೇಗಾ ಉಳಿಸಿ ಅಭಿಯಾನ ಆರಂಭವಾಗಿದೆ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದಲ್ಲಿ ಈ ಒಂದು ಆಂದೋಲನ ಹಮ್ಮಿಕೊಂಡಿದ್ದು ಸಿದ್ದರಾಮಯ್ಯ ಮಾತನಾಡಿದರು. ಮನ್ ರೇಗಾ ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಕಾಯಿದೆ ಜಾರಿ ಮಾಡಿದೆ. ಮನರೇಗಾ ಯೋಜನೆಯನ್ನು ರದ್ದು ಮಾಡುವ ಅಗತ್ಯವೇ ಇರಲಿಲ್ಲ. ರಾಜ್ಯಗಳ ಹಿತ ಕಾಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ವಿಬಿ ಜಿ ರಾಮ್ ಜಿ ಸಂಪೂರ್ಣ ರದ್ದುಗೊಳಿಸಬೇಕು ಮನರೇಗಾ ಮರು ಜಾರಿಗೊಳಿಸಬೇಕು ಅನ್ನೋದು ನಮ್ಮ ಬೇಡಿಕೆ ಎಂದು ಮನ್ ರೇಗಾ ಬಚಾವ್ ಆಂದೋಲನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.

Read More

ಉಡುಪಿ : ಉಡುಪಿಯಲ್ಲಿ ವಾಹನಗಳ ದಟ್ಟಣೆ ನಡುವೆ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾನೆ. ಉಡುಪಿ ನಗರದ ಕಲ್ಸಂಕ ಜಂಕ್ಷನ್ ನಲ್ಲಿ ಈ ಒಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ಸ್ಥಳೀಯ ಪೊಲೀಸರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ಒಂದು ತಪ್ಪಿದೆ. ಗದಗ ಮೂಲದ ವ್ಯಕ್ತಿ ಒಬ್ಬ ಪೆಟ್ರೋಲ್ ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ರಸ್ತೆಯಲ್ಲಿ ಯುವಕನ ಹುಚ್ಚಾಟಕ್ಕೆ ಕೆಲ ಹೊತ್ತು ಭಯದ ವಾತಾವರಣ ನಿರ್ಮಾಣವಾಗಿತ್ತು. ಪೆಟ್ರೋಲ್ ಬಾಟಲ್ ಅನ್ನು ವ್ಯಕ್ತಿ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಹಲವು ಬಾರಿ ಪೆಟ್ರೋಲ್ ಬಾಟಲಿಯನ್ನು ಸಂಚಾರಿ ಪೊಲೀಸರು ಕಸಿದುಕೊಂಡಿದ್ದರು. ಮತ್ತೆ ಬಾಟಲಿಯಲ್ಲಿ ಪೆಟ್ರೋಲ್ ತಂದು ಯುವಕ ಮೈ ಮೇಲೆ ಸುರಿದುಕೊಂಡಿದ್ದಾನೆ. ಕುಟುಂಬ ಕಲಹದಿಂದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಯುವಕನನ್ನು ಉಡುಪಿ ನಗರ ಪೊಲೀಸ್ರು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಇದೀಗ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯುವಕನನ್ನು ಗದಗ…

Read More

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ನಮ್ಮ ಮೆಟ್ರೋ ಟಿಕೆಟ್ ದರ ಶೇಕಡ 5ರಷ್ಟು ಏರಿಕೆ ಮಾಡುವ ವಿಚಾರವಾಗಿ ಭಾರಿ ವಿರೋಧ ವ್ಯಕ್ತವಾಗಿತ್ತು. ಕೇಂದ್ರದ ಸೂಚನೆ ಬಂದ ಮೇಲೆ ಬಿಎಂಆರ್‌ಸಿಎಲ್ ಟಿಕೆಟ್ ಪ್ರಯಾಣದ ಏರಿಕೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದು. ಆದರೆ ಇದೀಗ ಮತ್ತೆ ಮೆಟ್ರೋ ಪ್ರಯಾಣದ ಏರಿಕೆ ಮಾಡುವ ಕುರಿತು ಚಿಂತನೆ ನಡೆಯುತ್ತಿದೆ. ಹೌದು 5% ಮೆಟ್ರೋ ದರ ಏರಿಕೆಗೆ ತಾತ್ಕಾಲಿಕವಾಗಿ ತಡೆ ನೀಡಲಾಗಿತ್ತು. ಮೆಟ್ರೋ ಖರ್ಚು ವೆಚ್ಚಗಳ ಬಗ್ಗೆ ಆಡಿಟ್ ಮಾಡಿ ಅಂತ ಬಿಎಂಆರ್‌ಸಿಎಲ್‌ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸೂಚಿಸಿದ್ದರು‌. ಬಿಎಂಆರ್‌ಸಿಎಲ್ ಆಂತರಿಕ ಅಡಿಟ್ ಮಾಡಿದೆ. ಮೆಟ್ರೋ ನಿರ್ವಹಣೆ, ಖರ್ಚು ವೆಚ್ಚ, ಸಿಬ್ಬಂದಿ ಸಂಬಳ, ಇಂಧನ ವೆಚ್ಚ ಎಲ್ಲದರ ಬಗ್ಗೆ ಆಡಿಟ್ ಮುಗಿದಿದ್ದು, ಡಿಸಿಎಂ ಅವರ ಗಮನಕ್ಕೆ ತರಲು ಬಿಎಂಆರ್‌ಸಿಎಲ್ ಮುಂದಾಗುತ್ತಿದೆ. ಆಡಿಟ್ ಮುಗಿದ ಹಿನ್ನೆಲೆ ಮತ್ತೆ ದರ ಏರಿಕೆ ಚರ್ಚೆ ಮುನ್ನೆಲೆಗೆ ಬಂದಿದೆ. ನಿಗದಿ ಆಗಿದ್ದ 5% ದರದಲ್ಲಿ 1% ಅಥವಾ 2% ಗೆ…

Read More

ಬೆಂಗಳೂರು : ದೇಶದಲ್ಲಿ ವಿದ್ವಂಸಕ ಕೃತ್ಯಕ್ಕೆ ಯತ್ನಿಸಿದ್ದ 8 ಜನ ಉಗ್ರರನ್ನು ನಿನ್ನೆ ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಕೂಡ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು. ನಾವೂ ಕೂಡಾ ರಾಜ್ಯದಲ್ಲಿ ಆಂತರಿಕವಾಗಿ ಅಲರ್ಟ್ ಮಾಡಿದ್ದೇವೆ. ನಮ್ಮ ಐಎಸ್‌ಡಿ ವಿಭಾಗಕ್ಕೆ ಅಲರ್ಟ್ ಮಾಡಿದ್ದೇವೆ. ಅಲ್ಲಿ ಬಂಧಿತ ಶಂಕಿತರಲ್ಲಿ ಬಾಂಗ್ಲಾದವ್ರೂ ಇದ್ದಾರೆ. ನಮ್ಮಲ್ಲಿ ಬಾಂಗ್ಲಾವಾಸಿಗಳ ಪತ್ತೆ ಮಾಡುವ ಕಾರ್ಯಾಚರಣೆ ನಡೀತಿದೆ. ಕಳೆದ ಒಂದು ತಿಂಗಳಿಂದ ಪ್ರತೀ ಸ್ಟೇಷನ್ ವ್ಯಾಪ್ತಿಯಲ್ಲಿ ಅಭಿಯಾನ ನಡೀತಿದೆ ಅಂತ ಪರಮೇಶ್ವರ್ ಹೇಳಿದ್ರು.

Read More

ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿ ಮತ್ತೊಂದು ಪ್ರತಿಷ್ಠಿತ ಬ್ಯಾಂಕ್ ದರೋಡೆಗೆ ನಡೆಸಿದ್ದ ಪ್ರಯತ್ನವೊಂದು ಕೂದಲೆಳೆ ಅಂತರದಲ್ಲಿ ವಿಫಲವಾಗಿದೆ. ನಗರದ ಶೇಷಾದ್ರಿಪುರಂನಲ್ಲಿರುವ ಕೆನರಾ ಬ್ಯಾಂಕ್ ಶಾಖೆಗೆ ಕನ್ನ ಹಾಕಲು ಯತ್ನಿಸಿದ ಕಳ್ಳನೊಬ್ಬ ಸೈರನ್ ಶಬ್ದಕ್ಕೆ ಹೆದರಿ ಅರ್ಧಕ್ಕೇ ಪರಾರಿಯಾದ ಘಟನೆ ತಡರಾತ್ರಿ ನಡೆದಿದೆ. ಘಟನೆಯ ವಿವರ: ಶೇಷಾದ್ರಿಪುರಂನ ಕೆನರಾ ಬ್ಯಾಂಕ್ ಶಾಖೆಯೊಳಗೆ ತಡರಾತ್ರಿ ನುಗ್ಗಿದ ಕಳ್ಳನೊಬ್ಬ ದರೋಡೆಗೆ ವ್ಯವಸ್ಥಿತ ಸಂಚು ರೂಪಿಸಿದ್ದನು. ಬ್ಯಾಂಕ್‌ನ ಒಳಭಾಗಕ್ಕೆ ಪ್ರವೇಶಿಸಿದ ಈತ ಮೊದಲು ಪೂರ್ತಿ ಬ್ಯಾಂಕ್ ಅನ್ನು ತಡಕಾಡಿದ್ದಾನೆ. ನಂತರ ಹಣ ಮತ್ತು ಚಿನ್ನಾಭರಣಗಳಿರುವ ‘ಸ್ಟ್ರಾಂಗ್ ರೂಮ್’  ಬಳಿ ಬಂದು ಅದರ ಲಾಕ್ ಕಟ್ ಮಾಡಲು ಯತ್ನಿಸಿದ್ದಾನೆ. ದರೋಡೆ ವಿಫಲವಾದದ್ದು ಹೇಗೆ? ಕಳ್ಳ ಸ್ಟ್ರಾಂಗ್ ರೂಮ್‌ನ ಲಾಕ್ ಕಟ್ ಮಾಡಲು ಮುಂದಾದ ತಕ್ಷಣವೇ ಬ್ಯಾಂಕ್‌ನಲ್ಲಿದ್ದ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯ ಸೈರನ್ (Siren) ಆನ್ ಆಗಿದೆ. ಸೈರನ್ ಶಬ್ದ ಇಡೀ ಪ್ರದೇಶದಲ್ಲಿ ಜೋರಾಗಿ ಕೇಳಿಸಲು ಆರಂಭಿಸಿದ ತಕ್ಷಣ ಕಂಗಾಲಾದ ಕಳ್ಳ, ಸಿಕ್ಕಿಬೀಳುವ ಭೀತಿಯಿಂದ ದರೋಡೆ ಯತ್ನವನ್ನು ಕೈಬಿಟ್ಟು ಅಲ್ಲಿಂದ…

Read More

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಬದಲಾವಣೆ ನಡೆದಿದ್ದು, ಸಂಪುಟ ಪುನಾರ ರಚನೆ ಕುರಿತು ಇದೀಗ ಕೂಗು ಕೇಳು ಬರುತ್ತಿದೆ. ಅಧಿಕಾರ ಹಸ್ತಾಂತರದ ಮಧ್ಯೆ ಸಂಪುಟ ವಿಸ್ತರಣೆ ಕೂಗು ಸಹ ಕೇಳಿ ಬಂದಿದೆ. ಇದೀಗ ಮೊದಲ ಬಾರಿಗೆದ್ದಂತಹ 31 ಶಾಸಕರು ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ. ಹೌದು ಇದೀಗ ರಾಜ್ಯ ಕಾಂಗ್ರೆಸ್ ನಲ್ಲಿ ಯಾವಾಗ ಬೇಕಾದರೂ ಯಾವ ಬೆಳವಣಿಗೆ ನಡೆದರೂ ಕೂಡ ಅಚ್ಚರಿಪಡಬೇಕಿಲ್ಲ. ಕಾಂಗ್ರೆಸ್ ನಲ್ಲಿ ಸಂಪುಟ ಪುನಾರಚನೆ ಕುರಿತು ಕಾಂಗ್ರೆಸ್ ಹೈಕಮಾಂಡ್ಗೆ ಮೊದಲ ಬಾರಿ ಗೆದ್ದ ಶಾಸಕರು ಪತ್ರ ಬರೆದಿದ್ದಾರೆ. ರಾಹುಲ್ ಗಾಂಧಿ ಹಾಗೂ ರಣದೀಪ ಸಿಂಗ್ ಸುರ್ಜೆವಾಲಗೆ ಶಾಸಕರು ಪತ್ರ ಬರೆದಿದ್ದಾರೆ. ಮೊದಲ ಬಾರಿ ಗೆದ್ದ ಶಾಸಕರಿಂದ ರಾಹುಲ್ ಗಾಂಧಿಗೆ ಪತ್ರ ಬರೆಯಲಾಗಿದೆ. ನಮಗೂ ಸಂಪುಟದಲ್ಲಿ ಅವಕಾಶ ಕೊಡಿ ಎಂದು ಶಾಸಕರು ಪತ್ರದಲ್ಲಿ ಮನವಿ ಮಾಡಿದ್ದಾರೆ. ಹೈಕಮಾಂಡ್ ತಟ್ಟಿದ ಮೊದಲ ಬಾರಿ ಗೆದ್ದ ಶಾಸಕರು, 5 ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಲು ಬೇಡಿಕೆ ಇಟ್ಟಿದ್ದಾರೆ. ಹಾಗಾಗಿ ಈ…

Read More

ಗದಗ : ಗುತ್ತಿಗೆದಾರನ ಬಳಿ 5 ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿರಹಟ್ಟಿ ಬಿಜೆಪಿ ಶಾಸಕ ಈಗಾಗಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಆದರೆ ಇದೀಗ ಈ ಒಂದು ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಸ್ವಾಮೀಜಿ ಒಬ್ಬರ ಜೊತೆ ಶಾಸಕ ಚಂದ್ರು ಲಮಾಣಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಹೌದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸುವ ಬಗ್ಗೆ ಸ್ವಾಮೀಜಿಯೊಬ್ಬರ ಕೈವಾಡ ಇರುವ ಆರೋಪ ಕೇಳಿಬಂದಿದೆ. ಶಿರಹಟ್ಟಿ ತಾಲೂಕಿನ ಅದರಹಳ್ಳಿ ಕುಮಾರ ಮಹಾರಾಜರ ಸ್ವಾಮೀಜಿ ಹಾಗೂ ಬಿಜೆಪಿ ಕಾರ್ತಕರ್ತರೊಬ್ಬರು 2.36 ನಿಮಿಷಗಳ ಕಾಲ ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿದೆ. ಇನ್ನು ಈ ಪ್ರಕರಣದ ಕುರಿತು ಮಾತನಾಡಿರುವ ಸ್ವಾಮೀಜಿ, ಶಾಸಕ ಡಾ.ಚಂದ್ರು ಲಮಾಣಿ ಬಗ್ಗೆ ನಾನು ಮಾತನಾಡಿರೋದು ಸತ್ಯ. ಆಡಿಯೋದಲ್ಲಿ ಇರುವ ಧ್ವನಿ ನನ್ನದೇ ನಾನೇ ಮಾತನಾಡಿರುವುದು. 6 ತಿಂಗಳ ಹಿಂದೆ ಚಂದ್ರು ಲಮಾಣಿ ಬಗ್ಗೆ ಮಾತಾಡಿರೋ ಆಡಿಯೋ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು…

Read More

ಮಂಡ್ಯ :- ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಹಿನ್ನೆಲೆಯಲ್ಲಿ ಹುಡುಗನ ಮನೆಗೆ ಯುವತಿಯ ತಂದೆ ಬೆಂಕಿ ಹಚ್ಚಿದ್ದು, ಯುವಕನ ಮನೆ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ಜರುಗಿದೆ. ಮದ್ದೂರು ತಾಲೂಕಿನ ಕೆ.ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚುಂಚಗಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಈ ಘಟನೆ ಜರುಗಿದ್ದು, ಯುವತಿಯ ತಂದೆ ಚನ್ನೇಗೌಡನಿಗೂ ಸಣ್ಣ ಪುಟ್ಟ ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚುಂಚಗಹಳ್ಳಿ ಗ್ರಾಮದ ವಿನೋದ್ ಎಂಬ ಯುವಕ ಪಕ್ಕದ ಮನೆಯ ಯುವತಿ ಕಾವ್ಯ ಎಂಬ ಯುವತಿಯನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಕಳೆದ ಗುರುವಾರದಂದು ಯುವತಿಯ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದಾರೆ. ಈ ಘಟನೆಯಿಂದ ಕುಪಿತಗೊಂಡಿದ್ದ ಯುವತಿಯ ತಂದೆ ಚನ್ನೇಗೌಡ ಶನಿವಾರ ಬೆಳಿಗ್ಗೆ ಯುವಕನ ಮನೆಗೆ ಬೆಂಕಿ ಹಚ್ಚುವ ವೇಳೆ ಯುವಕನ ಮನೆಯಲ್ಲಿ ಯಾರು ಇಲ್ಲದ ಪರಿಣಾಮ ಹೆಚ್ಚಿನ ಪ್ರಾಣಾಪಾಯ ಸಂಭವಿಸಿಲ್ಲ. ತಕ್ಷಣವೇ ಅಕ್ಕ ಪಕ್ಕದ ಮನೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಸ್ಥಳಕ್ಕೆ ಮದ್ದೂರು ಅಗ್ನಿಶಾಮಕ ದಳದವರು ಆಗಮಿಸುವಷ್ಟರಲ್ಲಿ ಮನೆಯಲ್ಲಿದ್ದ ಪೀಠೋಪಕರಣ, ಎಲೆಕ್ಟ್ರಾನಿಕ್…

Read More