Author: kannadanewsnow05

ಬೆಂಗಳೂರು : ದುಬೈ ನಿಂದ ಅಕ್ರಮವಾಗಿ 14 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಈ ಒಂದು ಪ್ರಕರಣದ ತನಿಖೆಯ ವೇಳೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ನಟಿ ರನ್ಯಾ ರಾವ್ ಅವರನ್ನು ತಮ್ಮ ಕೆಲಸಕ್ಕೆ ಬಳಸಿಕೊಂಡ ಮತ್ತೊಂದು ಟೀಂ ಇದರ ಹಿಂದೆ ಇದೆ ಎಂದು ತಿಳಿದುಬಂದಿದೆ. ಹೌದು ಚಿನ್ನ ಕಳ್ಳಸಾಗಣೆಯಲ್ಲಿ ನಟಿ ರನ್ಯಾ ರಾವ್ ಬಂಧನ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ.ನಟಿ ರನ್ಯಾರನ್ನು ಬಂಧಿಸಿರುವ ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗಿವೆ. ರನ್ಯಾ ಕೇವಲ ಪಾತ್ರಧಾರಿ, ಅಸಲಿ ಕಿಂಗ್ ಬೇರೆಯೇ ಇದ್ದಾರೆ ಎನ್ನಲಾಗಿದೆ. ಈ ಅಕ್ರಮ ಚಿನ್ನ ಸಾಗಾಟದಲ್ಲಿ ಏರ್ಪೋರ್ಟ್‌ನ ಕೆಲ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಚಿನ್ನ ಸಾಗಾಟದಲ್ಲಿ ನಟಿ ರನ್ಯಾಗೆ ಕೆಜಿಗೆ ನಾಲ್ಕರಿಂದ ಐದು ಲಕ್ಷ ಕಮಿಷನ್ ನೀಡುತ್ತಿದ್ದ ಬಗ್ಗೆ ಮಾಹಿತಿ…

Read More

ಬೆಂಗಳೂರು : ಮುಂದಿನ ತಿಂಗಳು ಏಪ್ರಿಲ್ 4 ರಿಂದ 14 ರವರೆಗೆ ಬೆಂಗಳೂರಿನಲ್ಲಿ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸವ ಆಯೋಜನೆ ಮಾಡಲಾಗಿದ್ದು, ಅಲ್ಲಿಯವರೆಗೆ ಹಾಲಿ ಧರ್ಮರಾಯ ಸ್ವಾಮಿ ದೇವಸ್ಥಾನದ ನಿರ್ವಹಣಾ ಸಮಿತಿಯನ್ನು ಮುಂದುವರಿಯಲು ಹೈಕೋರ್ಟ್‌ ಅನುಮತಿ ನೀಡಿದೆ. ಹಾಲಿ ಸಮಿತಿಯನ್ನು ಮುಂದುವರಿಸುವಂತೆ ಕೋರಿ ಧರ್ಮರಾಯ ಸ್ವಾಮಿ ದೇವಸ್ಥಾನ ನಿರ್ವಹಣಾ ಸಮಿತಿಯ ಕೆ.ಸತೀಶ್‌ ಅರ್ಜಿ ಸಲ್ಲಿಸಿದ್ದರು.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಹಾಲಿ ಸಮಿತಿಯ ಅವಧಿ ಮಾರ್ಚ್‌ 21ಕ್ಕೆ ಮುಗಿಯಲಿದೆ.‌ ಆದರೆ, ಕರಗ ಸಿದ್ಧತೆ ಮೂರು ತಿಂಗಳ ಹಿಂದೆಯೇ ಆರಂಭವಾಗಿದೆ. ಹೀಗಾಗಿ, ಕರಗ ಮಹೋತ್ಸವ ಮುಗಿಯುವವರೆಗೆ ಹಾಲಿ ಸಮಿತಿಯನ್ನೇ ಮುಂದುವರಿಸಬೇಕು ಎಂದು ಕೋರಿದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಹಾಲಿ ಸಮಿತಿಯು ಕರಗ ಮಹೋತ್ಸವ ಮುಗಿಯವವರೆಗೆ ಅಂದರೆ ಏಪ್ರಿಲ್ 15ರವರೆಗೆ ಅಸ್ತಿತ್ವದಲ್ಲಿರಲಿದೆ ಎಂದು ಆದೇಶಿಸಿ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿತು.

Read More

ಬೆಂಗಳೂರು : ಬೆಂಗಳೂರಲ್ಲಿ ಇಂದು ಮತ್ತೊಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದು, ಸೈಟ್ ವಿಚಾರದ ತನಿಖೆ ಹೆಸರಿನಲ್ಲಿ ಪೊಲೀಸ್ ಅಧಿಕಾರಿಯು ಕಿರುಕುಳ ನೀಡುತ್ತಿದ್ದರು ಎಂದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಮಾಕ್ಷಿಪಾಳ್ಯದ ಶ್ರೀನಿವಾಸನಗರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಮಹಾದೇವಯ್ಯ ಎಂದು ತಿಳಿದುಬಂದಿದೆ.ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಮಹದೇವಯ್ಯ ವಿರುದ್ಧ ಕಳೆದ ಫೆಬ್ರವರಿಯಲ್ಲಿ ರಾಜಗೋಪಾಲನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶಿವಶಂಕರ್ ಎಂಬುವವರು ಮಹದೇವಯ್ಯ ವಿರುದ್ಧ ದೂರು ನೀಡಿದ್ದರು. ಪ್ರಕರಣ ಸಂಬಂಧ ಮಹದೇವಯ್ಯ ಜಾಮೀನು ಪಡೆದ ಬಳಿಕ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದರು. ತನಿಖೆ ಹೆಸರಲ್ಲಿ 15 ದಿನಗಳಿಂದ ಠಾಣೆಗೆ ಕರೆಸಿ ಟಾರ್ಚರ್ ಮಾಡುತ್ತಿದ್ದರು. ವಿಚಾರಣೆ ವೇಳೆ ರಾಜಗೋಪಾಲನಗರ ಠಾಣೆ ಇನ್ಸ್‌ಪೆಕ್ಟರ್‌ ಕಿರುಕುಳ ನೀಡಿದ್ದರು. ಊರುಬಿಟ್ಟು ಹೋಗಿ, ಇಲ್ಲದಿದ್ದರೆ ಹೇಳಿದವರಿಗೆ ಸೈಟ್ ರಿಜಿಸ್ಟರ್ ಮಾಡಿ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಮಹದೇವಯ್ಯ ಪತ್ನಿ ಆರೋಪಿಸಿದ್ದಾರೆ.ಇದರಿಂದ ಬೇಸತ್ತು ಮಹಾದೇವಯ್ಯ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.

Read More

ದಕ್ಷಿಣಕನ್ನಡ : ಅಪ್ರಾಪ್ತ ವಯಸ್ಸಿನ ಮಗನೋರ್ವ ಸ್ಕೂಟರ್​ ಓಡಿಸಿ ತಂದೆಗೆ ಸಂಕಷ್ಟ ತಂದಿಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬಾಲಕ ರಸ್ತೆ ನಿಯಮ ಉಲ್ಲಂಘಿಸಿದ್ದಕ್ಕೆ ನ್ಯಾಯಾಲಯ ಆತನ ತಂದೆಗೆ 26 ಸಾವಿರ ದಂಡ ವಿಧಿಸಿದೆ. ಎರಡು ದಿನಗಳ ಹಿಂದೆ ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಎಸ್. ಐ. ಸುತೇಶ್ ನೇತೃತ್ವದಲ್ಲಿ ಅಲ್ಲಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಬಾಲಕನೋರ್ವ ಪರ್ಲಿಯಾ ಸಮೀಪ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿರುವುದು ಕಂಡುಬಂದಿದೆ. ಆಗ ಆತನನ್ನು ನಿಲ್ಲಿಸಿ ವಿಚಾರಿಸಿದಾಗ ಅಪ್ರಾಪ್ತ ವಯಸ್ಕನಾಗಿದ್ದು, ಲೈಸನ್ಸ್ ಇಲ್ಲದಿರುವುದು ಗೊತ್ತಾಗಿದೆ. ಲೈಸನ್ಸ್ ಹೊಂದಿರದ, ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಸ್ಕೂಟರ್ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪರಿಣಾಮ, ಈ ಕುರಿತು ಪ್ರಕರಣ ದಾಖಲಾಗಿದ್ದು, ಬಳಿಕ ಬಾಲಕನ ತಂದೆ, ಸಮೀರ್ ಎಂಬವರಿಗೆ ಬಂಟ್ವಾಳ ಜೆಎಂಎಫ್ ಸಿ ಕೋರ್ಟಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ನಿಯಮ ಉಲ್ಲಂಘಿಸಿದ್ದಕ್ಕಾಗಿ 26 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

Read More

ಬಳ್ಳಾರಿ : ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿರೋದು, ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಕೇಸ್. ಕನ್ನಡ ಯೂಟ್ಯೂಬ್ ಜಗತ್ತಿನಲ್ಲೊಂದು ಸಂಚಲನ ಸೃಷ್ಟಿಯಾಗಿದೆ. ಈವರೆಗೆ ಇಂಗ್ಲೀಷ್ , ಹಿಂದಿ ಯೂಟ್ಯೂಬ್ ಚಾನಲ್ ಗಳಲ್ಲಿ ಮಾತ್ರ ಕಾಣಲು ಸಿಗುತ್ತಿದ್ದ ಕೋಟಿಗಟ್ಟಲೆ ವೀಕ್ಷಣೆ, ಲಕ್ಷಗಟ್ಟಲೆ ಲೈಕ್ಸ್, ಸಾವಿರ ಸಾವಿರ ಕಮೆಂಟುಗಳು ಕನ್ನಡ ಯೂಟ್ಯೂಬ್ ಚಾನಲ್ ಒಂದರ ವಿಡಿಯೋಗೆ ಸಿಕ್ಕಿವೆ ಹೌದು ದಕ್ಷಿಣ ಕನ್ನಡ ಸೌಜನ್ಯ ಪ್ರಕರಣದ ಕುರಿತು ವಿಡಿಯೋ ಮಾಡಿದ್ದ ಸಮೀರ್ ಎಂಡಿ ಎಂಬವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸಮೀರ್ ನನ್ನು ಬಂಧಿಸಲು ಪೊಲೀಸರು ಬಳ್ಳಾರಿಗೆ ತೆರಳಿದ್ದಾಗ ಈ ವೇಳೆ ಸಮೀರ್ ನಾನು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ ಮೇಲೆ ಆತನಿಗೆ ನೋಟಿಸ್ ನೀಡಿ ಪೊಲೀಸರು ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಸೌಜನ್ಯ ಪ್ರಕರಣದ ಕುರಿತು ವಿಡಿಯೋ ಮಾಡಿದ್ದ ಸಮೀರ್ ಎಂಡಿ, ನನಗೆ ಜೀವ ಬೆದರಿಕೆ ಬರುತ್ತಿರುವ ಹಿನ್ನೆಲೆ ಸೌಜನ್ಯ ಪ್ರಕರಣದ ಮತ್ತೋರ್ವ ಹೋರಾಟಗಾರ ಗಿರಿಶ್ ಮಟ್ಟನವರ್ ಅವರನ್ನು ಮನೆಗೆ…

Read More

ಬೆಂಗಳೂರು : ಹೈಕೋರ್ಟ್ ಆದೇಶ ಪ್ರತಿಯನ್ನೇ ನಕಲು ಮಾಡಿ ಲಕ್ಷಾಂತರ ಹಣ ವಂಚನೆ ಎಸಗಿದ್ದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕುಣಿಗಲ್ ಮೂಲದ ವಿಜೇತ್ ಮತ್ತು ಲೋಹಿತ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಹೌದು ಹೈಕೋರ್ಟ್ ನೀಡಿದ ರೀತಿ ಆದೇಶ ಪ್ರತಿಯನ್ನು ಬಂಧಿತ ಆರೋಪಿಗಳು ತಯಾರಿಸುತ್ತಿದ್ದರು ಸೃಷ್ಟಿಸಿದ್ದ ಆದೇಶದಲ್ಲಿ ವಿಜೇತ್ ಇಡಿಯಲ್ಲಿ ಒಂದು ಕೇಸ್ ದಾಖಲಿಸಿದ್ದ. ಆ ಪ್ರಕರಣದಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಫ್ರೀಜ್ ಆಗಿತ್ತು. ಆದರೆ ಹೈಕೋರ್ಟ್ ನಲ್ಲಿ ಇಡಿ ವಿರುದ್ಧ ವಿಜೇತ್ ಕೇಸ್ ಹಾಕಿದಂತೆ ಇಡಿ ವಿರುದ್ಧ ಆರೋಪಿ ವಿಜೇತ ಗೆಲುವು ಸಾಧಿಸಿದ್ದ. ಫ್ರಿಜ್ ಮಾಡಿದ್ದ ಹಣವನ್ನು ರಿಲೀಸ್ ಮಾಡುವಂತೆ ಆದೇಶವನ್ನು ಸೃಷ್ಟಿ ಮಾಡಲಾಗಿತ್ತು. ಈ ಆದೇಶ ಪ್ರತಿ ತೋರಿಸಿ ಆರೋಪಿಗಳು ಹಲವರಿಗೆ ವಂಚಿಸಿದ್ದಾರೆ. ನಮಗೆ ಇಡಿ ಅಧಿಕಾರಿಗಳಿಂದ ಕೋಟ್ಯಾಂತರ ರೂಪಾಯಿ ರಿಲೀಸ್ ಆಗಬೇಕಿದೆ. ಅದಕ್ಕೆ ಹೈ ಕೋರ್ಟ್ ಆದೇಶ ಕೂಡ ಮಾಡಿದೆ. ಆದರೆ ಈಗ ನನಗೆ ಇದನ್ನು ಬಿಡಿಸಿಕೊಳ್ಳಲು ಹಣ ಕಟ್ಟಬೇಕಿದೆ.…

Read More

ಕೊಡಗು : ರಾಜ್ಯದಲ್ಲಿ ಮಾರ್ಚ್ ಆರಂಭದಲ್ಲೇ ಹಲವು ಜಿಲ್ಲೆಗಳಲ್ಲಿ ತೀವ್ರ ಉಷ್ಣಾಂಶ ಹೆಚ್ಚಾಗಿದ್ದು, ಜನರು ಈಗಿನಿಂದಲೇ ಮನೆಯಿಂದ ಹೊರಗಡೆ ಕಾಲಿಡೊದಕ್ಕೆ ಹೆದರುತ್ತಿದ್ದಾರೆ.ಇದರ ಮಧ್ಯ ಬೇಸಿಗೆ ಅವಧಿಗೂ ಮೊದಲೇ ಜೀವನದ ಕಾವೇರಿ ಇದೀಗ ಬತ್ತಿದೆ. ಹೌದು ಕೊಡಗು ಜಿಲ್ಲೆಯಲ್ಲಿ ಉಗಮವಾಗುವ ಜೀವನದಿ ಕಾವೇರಿ ಇದೀಗ ಬೇಸಿಗೆ ಆರಂಭಕ್ಕು ಮೊದಲೇ ಬತ್ತುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿತಾಣವಾದ ದುಬಾರೆಯಲ್ಲಿ ಮೋಟರ್ ಬೋಟ್ ಸಂಚಾರ ಸ್ಥಗಿತವಾಗಿದೆ. ಪ್ರವಾಸಿಗರಿಗೆ ರಾಫ್ಟಿಂಗ್ ಸಂಚಾರವನ್ನು ಇದೀಗ ಸ್ಥಗಿತಗೊಳಿಸಲಾಗಿದೆ ಏಪ್ರಿಲ್ ಮೇ ತಿಂಗಳಲ್ಲಿ ಕಾವೇರಿ ನದಿ ಪೂರ್ತಿಯಾಗಿ ಬತ್ತಿ ಹೋಗಲಿದೆ ಎನ್ನಲಾಗುತ್ತಿದೆ. ಕಾವೇರಿ ನದಿ ಬತ್ತುವ ಹಿನ್ನೆಲೆ ಈ ಭಾಗದ ರೈತರಿಗೆ ಆತಂಕ ಶುರುವಾಗಿ. ಅಂತರ್ಜಲ ಕುಸಿತದಿಂದ ಕಾವೇರಿ ನದಿ ನಿಧಾನಕ್ಕೆ ಬತ್ತಿ ಹೋಗುತ್ತಿದೆ. ಬೇಸಿಗೆ ಆರಂಭಕ್ಕೂ ಮುನ್ನ ಕಾವೇರಿ ನದಿ ಬತ್ತುತ್ತಿದೆ. ಕೊಡಗು ಜಿಲ್ಲೆಯಲ್ಲಿ ಬರಗಾಲ ಭೀತಿ ಎದುರಾಗಿದೆ. ಮಾರ್ಚ್ ಮೊದಲ ತಿಂಗಳಲ್ಲೇ ಈ ರೀತಿ ಪ್ರಶಸ್ತಿ ನಿರ್ಮಾಣವಾದರೆ ಇನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊಡಗು ಜಿಲ್ಲೆಯ ಜನರು…

Read More

ಗದಗ : ಗದಗ ಜಿಲ್ಲೆ ನರಗುಂದದಲ್ಲಿ 5 ತಿಂಗಳ ಬಾಣಂತಿ ಸಾವಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಬಾಣಂತಿ ಪವಿತ್ರ (25) ಎನ್ನುವ ಬಾಣಂತಿಯ ಶವ ಪತ್ತೆಯಾಗಿದೆ. ಬಾಣಂತಿಯನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ. ಯೋಧ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಈ ಒಂದು ಗಂಭೀರವಾದ ಆರೋಪ ಕೇಳಿ ಬಂದಿದ್ದು, ಗಂಡನ ಮನೆಗೆ ಬಂದ ಮೂರೇ ದಿನದಲ್ಲಿ ಪವಿತ್ರ ಕೊಲೆಯಾಗಿದೆ. ಪತಿ ಹರೀಶ್ ಕಲ್ಲಕುಟಿಕರ್ ಹಾಗೂ ಮಾವ ಮೂಕಪ್ಪ ಅತ್ತೆ ಸೋಮವ್ವ ವಿರುದ್ಧ ಮೃತಳ ಕುಟುಂಬಸ್ಥರು ಈ ಒಂದು ಆರೋಪ ಮಾಡುತ್ತಿದ್ದಾರೆ.ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು ಘಟನೆ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಬೆಂಗಳೂರು : ವೈದ್ಯೆ ಬಳಿ 6.5 ಲಕ್ಷ ಹಣ ಪಡೆದು ಹಿಂದಿರುಗಿಸದೆ ವಂಚನೆ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಕಿರುತೆರೆ ನಟೆ ವಿಸ್ಮಯ ಗೌಡ ವಿರುದ್ಧ ಇದೀಗ FIR ದಾಖಲಾಗಿದೆ. ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ FIR ದಾಖಲಿಸಲಾಗಿದೆ.  ಬೆಂಗಳೂರಿನ ಬಸವೇಶ್ವರನ ಠಾಣೆಯಲ್ಲಿ FIR ದಾಖಲಾಗಿದೆ. ವೈದ್ಯೆ ಹಿಮಾನ್ವಿ ಎಂಬುವವರ ಬಳಿ 6.5 ಲಕ್ಷ ಸಾಲ ಪಡೆದು ಹಿಂದಿರುಗಿಸಿದೆ ವಂಚನೆ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಮಾನ್ವಿ ಅನ್ನೋರು ಕೋರ್ಟಿಗೆ ಖಾಸಗಿ ದೂರು ಸಲ್ಲಿಸಿದರು. ಖಾಸಗಿ ದೂರು ಅನ್ವಯ ನ್ಯಾಯಾಲಯದ ನಿರ್ದೇಶನದಂತೆ ಕಿರುತೆರೆ ನಟಿ ವಿಸ್ಮಯ ಗೌಡ ವಿರುದ್ಧ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

Read More

ಬೆಳಗಾವಿ : ಕೊನೆಗೂ ಬೆಳಗಾವಿ ಪಾಲಿಕೆಯ ಮೇಯರ್ ಹಾಗು ಉಪಮೇಯರ್ ಚುನಾವಣೆಗೆ ಮೂಹೂರ್ಥ ಕೂಡಿ ಬಂದಿದ್ದು, ಇದೆ ಮಾರ್ಚ್ 15 ರಂದು ಪಾಲಿಕೆಯ ಮೇಯರ್ ಹಾಗು ಉಪಮೇಯರ್ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಹೌದು ಬೆಳಗಾವಿಯ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಗೆ ಮೂಹೂರ್ಥ ಫಿಕ್ಸ್ ಆಗಿದ್ದು, ಮಾರ್ಚ್ 15 ರಂದು ಚುನಾವಣೆ ನಡೆಯಲಿದೆ. ಸಮಯಕ್ಕೆ ಚುನಾವಣೆ ನಡೆಯಲಿದೆ ಒಂದು ಬೆಳಗ್ಗೆ 9ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಮೇಯರ್ ಸ್ಥಾನಕ್ಕೆ ಸಾಮಾನ್ಯ ಪುರುಷ, ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಚುನಾವಣೆ ನಡೆಯಲಿದೆ. ಈ ಒಂದು ಚುನಾವಣೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಅಭಯ್ ಪಾಟೀಲ್ ಗೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಇಬ್ಬರೂ ಸದಸ್ಯರು ಅಮಾನತು ಆದರೂ ಕೂಡ ಬಿಜೆಪಿಗೆ ಸ್ಪಷ್ಟವಾದ ಬಹುಮತ ಇದೆ ಹಾಗಾಗಿ ಈ ಚುನಾವಣೆ ಇಬ್ಬರಿಗೂ ಪ್ರತಿಷ್ಠೆಯ ಚುನಾವಣೆ ಆಗಿದೆ.

Read More