Author: kannadanewsnow05

ತಮಿಳುನಾಡು : ತಮಿಳುನಾಡಿನಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ಸಲಿಂಗ ಕಾಮಕ್ಕೆ 5 ತಿಂಗಳ ಮಗುವನ್ನು ಹೆತ್ತ ತಾಯಿಯೇ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ತಮಿಳುನಾಡಿನ ಚಿನ್ನ ಹಟ್ಟಿಯಲ್ಲಿ ಈ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಭಾರತಿ ಮತ್ತು ಸುಮಿತ್ರ ಸಲಿಂಗ ಕಾಮಕ್ಕೆ ಐದು ತಿಂಗಳ ಮಗು ಬಲಿಯಾಗಿದೆ. 26 ವರ್ಷದ ಭಾರತಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾವೆ. ಆದರೂ 22 ವರ್ಷದ ಸುಮಿತ್ರ ಜೊತೆಗೆ ಭಾರತಿ ಸಲಿಂಗ ಕಾಮ ಹೊಂದಿದ್ದಳು. ಕಳೆದ ಐದು ತಿಂಗಳ ಹಿಂದೆ ಭಾರತೀ ಗಂಡು ಮಗುವಿಗೆ ಜನ್ಮ ನೀಡಿದಳು. ನಮ್ಮ ಸರಸಕ್ಕೆ ಮಗು ಅಡ್ಡಿಯಾಗುತ್ತಿದೆ ಅಂತ ಸುಮಿತ್ರ ಹೇಳಿದ್ದಳು ಮಗುವನ್ನು ಕೊಲೆ ಮಾಡುವಂತೆ ಭಾರತಿಗೆ ಸುಮಿತ್ರ ಹೇಳಿದ್ದಾಳೆ. ಹಾಗಾಗಿ ಮಗುವನ್ನು ಉಸಿರುಘಟ್ಟಿಸಿ ತಾಯಿ ಭಾರತಿ ಕೊಲೆ ಮಾಡಿದ್ದಾಳೆ. ಹಾಲು ಕುಡಿಯುವಾಗ ನೆತ್ತಿಗೆ ಏರಿ ಮಗು ಸಾವನಪ್ಪಿದೆ ಎಂದು ಕತೆ ಕಟ್ಟಿದ್ದಾಳೆ. ಸುಮಿತ್ರ ಹೇಳಿದ ಮಾತನ್ನು ಕೇಳಿ ತಾವು ಹೆತ್ತ ಮಗುವನ್ನು ಕೊಲೆ ಮಾಡಿದ್ದಾಳೆ. ಕಳೆದ ನಾಲ್ಕು ವರ್ಷಗಳಿಂದ…

Read More

ಯಾದಗಿರಿ : ಯಾದಗಿರಿ ಡಿಸಿ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿ ಮಹಿಳಾ ಅಧಿಕಾರಿಗೆ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಹೆಸರಿನಲ್ಲಿ ವಂಚನೆ ಎಸಗಿದ್ದು, ವಾಟ್ಸಾಪ್ ಪ್ರೊಫೈಲ್ ಗೆ ಡಿಸಿ ಹೆಸರು ಹಾಗೂ ಫೋಟೋ ಬಳಸಿ ವಂಚಕರು ವಂಚನೆಯಾಗಿದ್ದಾರೆ. ಡಿಸಿ ಹೆಸರು ಬಳಸಿ ಮಹಿಳಾಧಿಕಾರಿಗೆ ಅಪರಿಚಿತ ವ್ಯಕ್ತಿ ಮೆಸೇಜ್ ಮಾಡಿದ್ದಾನೆ. 50 ಸಾವಿರ ರೂಪಾಯಿ ಕಳುಹಿಸುವಂತೆ ಮಹಿಳಾ ಅಧಿಕಾರಿಗೆ ವಂಚನೆ ಎಸಗಿದ್ದಾನೆ. ಆರೋಗ್ಯ ಇಲಾಖೆ ಮಹಿಳಾಧಿಕಾರಿ ಜ್ಯೋತಿ ಕಟ್ಟಿಮನಿಗೆ ವಂಚಕ ಮೆಸೇಜ್ ಮಾಡಿದ್ದಾನೆ. ನನ್ನ ನಂಬರ್ ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಸಮಸ್ಯೆ ಆಗಿದೆ ತಕ್ಷಣ ರೂ. 50,000 ಹಾಕಿ ಎಂದು ಜ್ಯೋತಿಗೆ ಮೆಸೇಜ್ ಮಾಡಿದ್ದಾನೆ.ಡಿಸಿ ಹಣ ಕೇಳುತ್ತಿದ್ದಾರೆ ಎಂದು ಅಧಿಕಾರಿಯಾಗಿ ಜ್ಯೋತಿ ಗೂಗಲ್ ಪೇ ಮಾಡಿದ್ದಾರೆ. ಬಳಿಕ 20000 ಹಾಕುವಂತೆ ಮತ್ತೆ ಅಪರಿಚಿತ ವ್ಯಕ್ತಿ ಮೆಸೇಜ್ ಮಾಡಿದ್ದಾನೆ. ಅನುಮಾನ ಗೊಂಡ ಅಧಿಕಾರಿ ಜ್ಯೋತಿ ಡಿಸಿ ಹರ್ಷಲ್ ಬಳಿ ಕೇಳಿದ್ದಾರೆ ಯಾವುದೇ ಮೆಸೇಜ್ ಕಳುಹಿಸಿಲ್ಲ ಎಂದು…

Read More

ಬೆಳಗಾವಿ : ಕಬ್ಬಿನ ದರ ಹೆಚ್ಚಿಗೆ ಮಾಡುವಂತೆ ಬೆಳಗಾವಿ ಜಿಲ್ಲೆಯಲ್ಲಿ ಕಳೆದ 9 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರು. ನಿನ್ನೆ ರಾಜ್ಯ ಸರ್ಕಾರ 3,300 ನಿಗದಿ ಮಾಡಿತು. ಅದಕ್ಕೂ ಮೊದಲು ಬೆಳಗಾವಿ ಜಿಲ್ಲೆಯ ಹತ್ತಿರಗಿ ಗ್ರಾಮದಲ್ಲಿ ಪ್ರತಿಭಟನೆಯ ವೇಳೆ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಲಾಗಿತ್ತು. ಹತ್ತರಗಿ ಗ್ರಾಮದಲ್ಲಿ ಕಲ್ಲುತೂರಾಟ ನಡೆಸಿದ 11 ಆರೋಪಿಗಳ ವಿರುದ್ಧ ಇದೀಗ ಎಫ್ ಐ ಆರ್ ದಾಖಲಾಗಿದೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ 11 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪಿ ಎಸ್ ಐ ಆರ್ ವಿ ಪಾಟೀಲ್ ನೀಡಿದ ದೂರಿನ ಅನ್ವಯ 11 ಆರೋಪಿಗಳು ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರತಿಭಟನೆಯ ವೇಳೆ ಪೊಲೀಸರನ್ನು ಕೊಲೆ ಮಾಡುವ ಉದ್ದೇಶದಿಂದ ಕಲ್ಲುತೂರಾಟ ಮಾಡಿ ಪೊಲೀಸರನ್ನು ಒದ್ದು ಹಲ್ಲೆ ಮಾಡಿದ್ದಾರೆ ತೀವ್ರ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಬಿಎನ್ಎಸ್ ಕಾಯ್ದೆಯ ಅಡಿ 189(2), 191(2), 191(3), 285, 132, 121(1), 121(2), 109, 324, 194…

Read More

ಬೆಂಗಳೂರು : ಕಾಂತಾರ ಚಾಪ್ಟರ್ ಒನ್ ರಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿರುವ ರುಕ್ಮಿಣಿ ವಸಂತವರಿಗೆ ಸೈಬರ್ ಕಳ್ಳರು ಕಾಟ ನೀಡಿದ್ದಾರೆ ರುಕ್ಮಿಣಿ ವಸಂತ ಹೆಸರಿನಲ್ಲಿ ಸೈಬರ್ ವಂಚಕರು ಹಣ ಪಡೆದು ವಂಚನೆ ಎಸೆಗಿರುವ ಘಟನೆ ಬೆಳಕಿಗೆ ಬಂದಿದೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ರುಕ್ಮಿಣಿ ವಸಂತ ಅವರು ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹೌದು ಈ ವಿಚಾರವನ್ನ ಸ್ವತಃ ನಟಿ ರುಕ್ಕಿಣಿ ವಸಂತ ಅವರೇ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅನಾಮಿಕ ವ್ಯಕ್ತಿಯೊಬ್ಬ ನನ್ನ ಹೆಸರಿನಲ್ಲಿ ಪೋನ್ ಮಾಡಿ ಜನರಿಂದ ಹಣ ಕೇಳುತ್ತಿದ್ದಾನೆ. ನನಗೂ ಅದಕ್ಕೂ ಸಂಬಂಧ ಇಲ್ಲ. ಯಾರೂ ಆ ವಯಕ್ತಿಯನ್ನ ನಂಬಿ ಹಣ ಕಳಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಟ್ವಿಟ್ ನಲ್ಲಿ ಏನಿದೆ? ಇಂದು ಮಧ್ಯಾಹ್ನ ಈ ಬಗ್ಗೆ ನಟಿ ಟ್ವಿಟ್ ಮಾಡಿದ್ದು, ಅದರಲ್ಲಿ 9445893273 ಸಂಖ್ಯೆಯಿಂದ ವ್ಯಕ್ತಿಯೊಬ್ಬ ಜನರಿಗೆ ಕರೆ ಮಾಡುತ್ತಿದ್ದಾನೆ. ಈ ನಂಬರ್ ಬಳಸುವ ಒಬ್ಬ ವ್ಯಕ್ತಿಯು ನನ್ನ ರೀತಿ ನಟನೆ ಮಾಡಿ, ಅನೇಕ…

Read More

ನವದೆಹಲಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸುಪ್ರೀಂ ಕೋರ್ಟ್ ಇತ್ತೀಚಿಗೆ ನಟ ದರ್ಶನ್ ಪವಿತ್ರ ಗೌಡ ಸಿರಿಯಲ್ಲ ಆರೋಪಿಗಳ ಅರ್ಜಿ ವಜಾ ಗೊಳಿಸಿತ್ತು ಇತ್ತೀಚಿಗೆ ಪವಿತ್ರ ಗೌಡ ಅರ್ಜಿ ಪರಿಶೀಲನೆ ಮಾಡಿ ಮತ್ತೊಮ್ಮೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ಪವಿತ್ರ ಗೌಡ ಜಾಮೀನು ಅರ್ಜಿ ವಜಾಗೊಳಿಸಿದೆ. ಸುಪ್ರೀಂ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಇದಕ್ಕೂ ಮೊದಲು ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಪ್ರಕರಣ ರದ್ದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಎಲ್ಲಾ ಆರೋಪಿಗಳ ಅರ್ಜಿ ವಜಾಗೊಳಿಸಿ ಮಹತ್ವದ ಆದೇಶ ನೀಡಿತ್ತು. ಬಳಿಕ ಪವಿತ್ರ ಗೌಡ ಮತ್ತೊಮ್ಮೆ ಅರ್ಜಿ ಪರಿಶೀಲನೆ ನಡೆಸಿ ಜಾಮೀನು ಕೋರಿ ಇತ್ತೀಚಿಗೆ ಅರ್ಜಿ ಸಲ್ಲಿಸಿದ್ದರು. ಇಂದು ಸುಪ್ರೀಂ ಕೋರ್ಟ್ ಪವಿತ್ರ ಗೌಡ ಅರ್ಜಿಯನ್ನು ಸಹ ವಜಾ ಗೊಳಿಸಿದೆ.

Read More

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ಈ ಮೊದಲು ದರ್ಶನ್ ಗೆ ಈ ರಾಜ್ಯಾತಿಥ್ಯ ನೀಡಿರುವ ವಿಚಾರವಾಗಿ ಭಾರಿ ಸದ್ದು ಆಗಿತ್ತು. ಇದೀಗ ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು ಜೈಲಿನಲ್ಲಿ ಉಮೇಶ್ ರೆಡ್ಡಿ ಬಿಂದಾಸ್ ಲೈಫ್ ಸ್ಟೈಲ್ ನಡೆಸುತ್ತಾ ಇದ್ದಾನೆ. ಹೌದು ಜೈಲಿನಲ್ಲಿ ಅಪರಾಧಿ ಉಮೇಶ್ ರೆಡ್ಡಿ ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆಗಿದೆ. ಕೊಲೆ ಆರೋಪಿ ದರ್ಶನ್ ಇರೋ ಜೈಲಲ್ಲಿ ನಲ್ಲಿ ರಾಜಾತಿಥ್ಯ ನೀಡಲಾಗುತ್ತಿದ್ದು, ಪರಪ್ಪನ ಅಗ್ರಹಾರ ಜೇಲಿನಲ್ಲಿ ಉಮೇಶ್ ರೆಡ್ಡಿಗೆ ಫುಲ್ ರಾಜಾತಿಥ್ಯ ನೀಡಲಾಗುತ್ತಿದೆ. ಉಮೇಶ್ ರೆಡ್ಡಿ ಬಿಂದಾಸ್ ಲೈಫ್ ಲೀಡ್ ಮಾಡುತ್ತಿದ್ದಾನೆ. ಅಲ್ಲದೆ ನಟಿ ರನ್ಯಾರಾವ್ ಗೋಲ್ಡ್ ಪ್ರಕರಣದ ಆರೋಪಿ ಬಳಿಯೂ ಮೊಬೈಲ್ ಪತ್ತೆಯಾಗಿದೆ ನ್ಯಾಯಾಂಗ ಬಂದನದಲ್ಲಿರುವ ತರುಣ್ ಕೊಂಡೂರು ಬಿಂದಾಸ್ ಆಗಿ ಮೊಬೈಲ್ ಬಳಕೆ ಮಾಡುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ. ಅಲ್ಲದೆ ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಸ್ಫೋಟಕ ದೃಶ್ಯ ವೈರಲ್ ಆಗಿದ್ದವು…

Read More

ಮಂಗಳೂರು : ಶ್ರೀಮಂತರು ಹಾಗೂ ಉದ್ಯಮಿಗಳಿಗೆ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ಇಂದ ಆರೋಪಿ ರೋಷನ್ ಸಲ್ಡಾನಗೆ ಸೇರಿದ ಆಸ್ತಿ ಜಪ್ತಿ ಮಾಡಿಕೊಳ್ಳಲಾಗಿದೆ. ಸಲ್ಡಾನ ಮನೆ ಬ್ಯಾಂಕ್ ಖಾತೆ ಸೇರಿ ಒಟ್ಟು 2.5 ಕೋಟಿ ರೂಪಾಯಿ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಮಂಗಳೂರು ಉಪವಲಯ ಕಚೇರಿ ಅಧಿಕಾರಿಗಳಿಂದ ಮಾಡಲಾಗಿದ್ದು, ಪ್ರಮುಖ ಆರೋಪಿ ರೋಷನ್ ಸಲ್ದಾನ ಆತನ ಪತ್ನಿ ಡಬ್ನೀನೀತು ಹಾಗೂ ಇತರರ ವಿರುದ್ಧ ದಾಖಲಾದ ಎಫ್ಐಆರ್ ಆಧಾರದ ಮೇಲೆ ಇಡೀ ತನಿಖೆ ನಡೆಸುತ್ತಿದ್ದು, ಶ್ರೀಮಂತರು ಉದ್ಯಮಿಗಳಿಗೆ ಸಾಲ ಕೊಡಿಸುವ ಆಮಿಷ ಒಡ್ಡಿ ವಂಚನೆ ಎಸಗಲಾಗಿತ್ತು. ಆರೋಪಿ ರೋಷನ್ ಸಲ್ಡಾನ ಸುಮಾರು 200 ಕೋಟಿಗೂ ಅಧಿಕ ವಂಚನೆ ಎಸಗಿದ್ದ.

Read More

ಚಾಮರಾಜನಗರ : ಹುಲಿ ಸೆರೆ ಕೂಂಬಿಂಗ್ ಸಲುವಾಗಿ ಬಂದಿದ್ದ ಸಾಕಾನೆ ಪಾರ್ಥ ಸಾರಥಿಗೆ ಜೇನು ಕಚ್ಚಿದ ಪರಿಣಾಮ ದಿಕ್ಕಾಪಾಲಾಗಿ ಓಡಿ ಗುಂಡ್ಲುಪೇಟೆ ಪಟ್ಟಣದೊಳಗೆ ನುಗ್ಗಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಕಲ್ಲಹಳ್ಳಿ ಗ್ರಾಮದ ಬಳಿ ಹುಲಿ ಸೆರೆ ಕೂಂಬಿಂಗ್ ಸಲುವಾಗಿ ರಾಂಪುರ ಸಾಕಾನೆ ಶಿಬಿರದ ಪಾರ್ಥಸಾರಥಿಯನ್ನು ಕರೆತರಕಾಗಿತ್ತು. ಕಾರ್ಯಾಚರಣೆ ಬಳಿಕ ನೀರು ಕುಡಿಸಲು ತೆರಳಿದಾಗ ಹೆಜ್ಜೇನು ದಾಳಿ ನಡೆಸಿವೆ. ನಂತರ ಮಾವುತ ಚೇತನ್ ಮಾತು ಕೇಳದೇ ಆನೆ ಪಟ್ಟಣಕ್ಕೆ ಬಂದಿದೆ. ದಾರಿ ತಪ್ಪಿ ಬಂದ ಸಾಕಾನೆ ಪಟ್ಟಣದ ಸಾರಿಗೆ ಬಸ್ ನಿಲ್ದಾಣದೊಳಗೆ ನುಗ್ಗಿದೆ. ಈ ವೇಳೆ ಬೈಕ್ ಸವಾರರು, ಪ್ರಯಾಣಿಕರು ಇತರೆ ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿದ್ದಾರೆ. ನಂತರ ನಿಲ್ದಾಣದಿಂದ ಹೊರಬಂದ ಆನೆ ಮಡಹಳ್ಳಿ ರಸ್ತೆ ಮೂಲಕ ಅಶ್ವಿನಿ ಬಡಾವಣೆ, ಜೆಎಸ್‍ಎಸ್ ನಗರದ ಕಡೆಯಲ್ಲೆಲ್ಲಾ ಓಡಾಡಿದೆ. ಸಾರ್ವಜನಿಕರಿಗೆ ತೊಂದರೆ ಉಂಟಾಗುವುದನ್ನು ತಡೆಯಲು ಅರಣ್ಯ ಇಲಾಖೆಯವರು ಸಾಕಾನೆಯನ್ನು ಹಿಂಬಾಲಿಸುವ ಜೊತೆಗೆ ಮಡಹಳ್ಳಿ ರಸ್ತೆಯಲ್ಲಿ ಬೈಕ್ ಸಂಚಾರಕ್ಕೆ ಪೊಲೀಸರ ಸಹಕಾರದಲ್ಲಿ ನಿರ್ಬಂಧ ಹಾಕಿಸಿದ್ದರು.

Read More

ಕಲಬುರ್ಗಿ : ಕಲ್ಬುರ್ಗಿಯಲ್ಲಿ ತಡರಾತ್ರಿ ಭೀಕರವಾದ ಅಪಘಾತ ಸಂಭವಿಸಿದ್ದು, ಬೈಕ್ ಮತ್ತು ಕಾರಿಗೆ ಟ್ಯಾಂಕರೊಂದು ಢಿಕ್ಕಿಯಾಗಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಕಲಬುರಗಿ ತಾಲೂಕಿನ ಔರಾದ್(ಬಿ) ಗ್ರಾಮದ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಮೃತರನ್ನು ಕಮಲಾಪುರ ತಾಲ್ಲೂಕಿನ ಶಿರಡೋಣ ಗ್ರಾಮದ ನಾಗೇಂದ್ರಪ್ಪ (33), ಶಿವರಾಜ್(32), ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದ್ರಕಲಾ(70) ಹಾಗೂ ದತ್ತಾತ್ರೇಯ(48) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಉತ್ತಮ(36) ಹಾಗೂ ಸುದೇಶ್ನಾ ಎಂಬುವವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಮನಾಬಾದ್ ಕಡೆಗೆ ಹೋಗುತ್ತಿದ್ದ ಬೈಕ್ ಹಾಗೂ ಕಾರಿಗೆ ಹುಮನಾಬಾದ್ ಕಡೆಯಿಂದ ಕಲಬುರಗಿಯತ್ತ ಹೋಗುತ್ತಿದ್ದ ಟ್ಯಾಂಕರ್ ಢಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಬೈಕ್ ನಲ್ಲಿದ್ದ ಇಬ್ಬರು ಸವಾರರು ಮತ್ತು ಕಾರಿನಲ್ಲಿದ್ದ ಮತ್ತಿಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕಲಬುರಗಿ ಸಂಚಾರಿ ಠಾಣೆ-2 ರಲ್ಲಿ ಪ್ರಕರಣ ದಾಖಲಾಗಿದೆ

Read More

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ MLCಸಿಟಿ ರವಿ ಅವರು ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಬಿಜೆಪಿ ಎಂಎಲ್ಸಿ ಸಿಟಿ ರವಿ ವಿರುದ್ಧ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹೌದು ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಪದ ಬಳಕೆ ಆರೋಪಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಎಂಎಲ್ಸಿ ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೆಲವು ದಿನಗಳ ಹಿಂದೆ ಫೋನ್ ನಲ್ಲಿ ಮಾತನಾಡುವಾಗ ಕಾರ್ಯಕ್ರಮ ಒಂದಕ್ಕೆ ಬರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತಿನ ಭರದಲ್ಲಿ ಸವಿತಾ ಸಮಾಜದ ಕುರಿತು ಅವಹೇಳನಕಾರಿ ಪದ ಬಳಸಿದ್ದರು. ಬಳಿಕ ಸವಿತಾ ಸಮಾಜದವರ ಕ್ಷಮೆ ಕೂಡ ಸಿಟಿ ರವಿ ಕೇಳಿದರು. ಆದರೆ ಇದೀಗ ಮಡಿವಾಳ ಪೊಲೀಸ್ ಠಾಣೆಯಲ್ಲಿ ಸಿ ಟಿ ರವಿ ವಿರುದ್ಧ FIR ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಮುರುಗೇಶ್ ಮೊದಲಿಯಾರ್ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 27 ರಂದು ಎಂಎಲ್‌ಸಿ ಸಿಟಿ ರವಿ ಅಕ್ಷೇಪಾರ್ಹ ಪದ…

Read More