Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪತಿಯೊಬ್ಬ ತನ್ನ ಪತ್ನಿ ಹಾಗು ಮಾವನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೌದು ಪತ್ನಿ ಮಾವನಿಗೆ ಖಾರದಪುಡಿ ಎರಚಿ ಸಾಯಿ ಕುಮಾರ್ ಹಲ್ಲೆ ನಡೆಸಿದ್ದಾನೆ. ವರದಕ್ಷಿಣೆ ವಿಚಾರಕ್ಕೆ ಮನೆಯಲ್ಲಿ ಪತಿ ಮತ್ತು ಪತ್ನಿಯ ಮಧ್ಯೆ ಗಲಾಟೆ ನಡೆಯುತ್ತಿತ್ತು. ಇದೆ ವೇಳೆ ಮಾವನ ಜೊತೆಗೂ ಸಾಯಿ ಕುಮಾರ್ ಜಗಳ ಮಾಡಿದ್ದಾನೆ. ಈ ವೇಳೆ ಖಾರದ ಪುಡಿ ಎರಚಿ ಪತ್ನಿ ಮತ್ತು ಮಾವನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಸದ್ಯ ಪತಿ ವಿರುದ್ಧ ಪತ್ನಿ ರಮ್ಯಾ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರನ್ಯಾ ರಾವ್ ಅವರನ್ನು ನಿನ್ನೆ DRI ಅಧಿಕಾರಿಗಳು 3 ದಿನಗಳ ಕಾಲ ತಮ್ಮ ಕಸ್ಟಡಿಗೆ ತೆಗೆದುಕೊಂಡು ಇಂದಿನಿಂದ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಡಿ ಆರ್ ಐ ಹಿರಿಯ ಅಧಿಕಾರಿಗಳು ನಟಿ ರನ್ಯಾರಾವ್ ಅವರನ್ನು ಅಕ್ರಮ ಚಿನ್ನ ಸಾಗಾಟದ ಕುರಿತು ವಿಚಾರಣೆ ನಡೆಸಲಿದ್ದಾರೆ. ಹೌದು DRI ಹಿರಿಯ ಅಧಿಕಾರಿಗಳಿಂದ ರನ್ಯಾಗೆ ಇಂದಿನಿಂದ ಡ್ರಿಲ್ ನಡೆಯಲಿದೆ. ರನ್ಯಾ ಹಿಂದಿನ ಸಿಂಡಿಕೇಟ್ ಪತ್ತೆ ಹಚ್ಚಲಿರುವ ಅಧಿಕಾರಿಗಳು, ದುಬೈ ನಿಂದ ಇದುವರೆಗೂ ಎಷ್ಟು ಬಾರಿ ಅಕ್ರಮವಾಗಿ ಚಿನ್ನ ಸಾಗಿಸಿದ್ದಾಳೆ? ಹಾಗೂ ಬೆಂಗಳೂರಿಗೆ ತಂದು ಯಾರಿಗೆ ಕೊಟ್ಟಿದ್ದಾಳೆ? ಎಂದು ಡಿಆರ್ಐ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ರನ್ಯಾ ಮೊಬೈಲ್ ಮತ್ತು ಲ್ಯಾಪ್ಟಾಪ್ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.ಮೊಬೈಲ್ ಮತ್ತು ಲ್ಯಾಪ್ಟಾಪ್ ಪಡೆದು ಮಾಹಿತಿ ಮೇಲೆ ವಿಚಾರ ನಡೆಸಲಿದ್ದು ಮನೆಯಲ್ಲಿ ಸಿಕ್ಕ ಹಣ ಚಿನ್ನದ ಮೂಲದ ಬಗ್ಗೆಯೂ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.
ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಬೆಂಗಳೂರಿನಲ್ಲಿ ಯುವಕನೊಬ್ಬ ಯುವತಿಯನ್ನು ಟ್ಯಾಂಕ್ ಮೇಲೆ ಕೂರಿಸಿಕೊಂಡು ರೋಮ್ಯಾನ್ಸ್ ಮಾಡುತ್ತಿರುವ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಬೆಂಗಳೂರಲ್ಲಿ ಇದೀಗ ಮತ್ತೊಂದು ಘಟನೆ ನಡೆದಿದ್ದು ಯುವಕರಿಬ್ಬರ ಜೊತೆಗೆ ಯುವತಿ ತ್ರಿಬಲ್ ರೈಡಿಂಗ್ ಮಾಡಿದ್ದು ಅಲ್ಲದೆ ಯುವಕನಿಗೆ ಬೈಕ್ ನಲ್ಲಿಯೇ ಸಾರ್ವಜನಿಕ ಸ್ಥಳದಲ್ಲಿ ಕಿಸ್ ಮಾಡಿರುವ ಘಟನೆ ವರದಿಯಾಗಿದೆ. ಹೌದು ರಸ್ತೆಯಲ್ಲಿ ಯುವಕ, ಯುವತಿಯರ ಹುಚ್ಚಾಟದಿಂದ ರಸ್ತೆಯಲ್ಲಿನ ವಾಹನ ಸವಾರರು ಪರದಾಡಿದ್ದಾರೆ. ಒಂದೇ ಬೈಕನಲ್ಲಿ ಇಬ್ಬರು ಯುವಕರು ಮತ್ತು ಓರ್ವ ಯುವತಿ ಹೆಲ್ಮೆಟ್ ಹಾಕದೆ, ತ್ರಿಬಿಲ್ ರೈಡಿಂಗ್ ಹೋಗಿದ್ದಾರೆ. ಅಲದೇ ಬೈಕ್ನಲ್ಲಿ ಹೋಗುತ್ತಲೇ ಯುವತಿ ಯುವಕನಿಗೆ ಕಿಸ್ ಕೊಟ್ಟಿದ್ದಾಳೆ. ಪ್ರಶ್ನಿಸಿದ ಇತರೆ ಬೈಕ್ ಸವಾರರಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಮಾರ್ಚ್ 7 ರಂದು ರಾತ್ರಿ ರಾಗಿಗುಡ್ಡ ರಸ್ತೆಯಲ್ಲಿ ಘಟನೆ ನಡೆದಿದೆ. ಓರ್ವ ಯುವಕ ಬೈಕ್ ಚಾಲನೆ ಮಾಡುತ್ತಿದ್ದನು. ಸವಾರನ ಹಿಂದೆ ಕುಳಿತಿದ್ದ ಯುವಕನಿಗೆ ಯುವತಿ ಮುತ್ತುಕೊಟ್ಟಿದ್ದಾಳೆ. ಯುವಕ ಯುವತಿಯರ ಹುಚ್ಚಾಟವನ್ನು ಬೈಕ್…
ತುಮಕೂರು : ತುಮಕೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ, ಸುಮಾರು 10ಕ್ಕೂ ಅಧಿಕ ಅಂತರಾಜ್ಯ ಕಳ್ಳರ ಬಂಧನ ಮಾಡಲಾಗಿದೆ ಎಂದು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ವೆಂಕಟ್ ಹೇಳಿಕೆ ನೀಡಿದ್ದಾರೆ. ಕಳೆದ ಎರಡು ತಿಂಗಳಿಂದ ಕಳ್ಳತನ ಮಾಡಿದ್ದ ಅಂತರಾಜ್ಯ 10 ಜನ ಕಳ್ಳರನ್ನು ಅರೆಸ್ಟ್ ಮಾಡಲಾಗಿದೆ. ತುಮಕೂರು ಜಿಲ್ಲೆಯ ವಿವಿಧಡೆ ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದವು. 11 ಪ್ರಕರಣದಲ್ಲಿ 23 ಲಕ್ಷ ಮೌಲ್ಯದ ಚಿನ್ನದ ಸರ ಕಳ್ಳತನ ಆಗಿತ್ತು ಎಂದು ತಿಳಿಸಿದರು. ತುಮಕೂರು ನಗರ, ಮಧುಗಿರಿ, ಶೀರಾ, ಹುಲಿಯೂರುದುರ್ಗ, ಹೊಸ ಬಡಾವಣೆ, ಕೊಡಿಗೆನಹಳ್ಳಿ, ಅಮೃತೂರು, ತಿಪಟೂರು, ಜಯನಗರ ಸೇರಿದಂತೆ ವಿವಿಧಡೆ ಕಳ್ಳತನ ಪ್ರಕರಣ ನಡೆದಿತ್ತು. ಇದೀಗ ಈ ಒಂದು ಪ್ರಕರಣಗಳ ಹಿನ್ನೆಲೆಯಲ್ಲಿ 10 ಜನ ಅಂತರಾಜ್ಯ ಕಳ್ಳರನ್ನು ಅರೆಸ್ಟ್ ಮಾಡಲಾಗಿದೆ ಎಂದು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ವೆಂಕಟ್ ಅವರು ಮಾಹಿತಿ ನೀಡಿದರು.
ಬೆಂಗಳೂರು : ಡಿಸಿಪಿ ಕಚೇರಿಯ ಬಳಿಯೇ ರೌಡಿಶೀಟರ್ ಒಬ್ಬ ಅಪಾಯಕಾರಿ ವ್ಹಿಲಿಂಗ್ ಮಾಡಿದ್ದು ಅಲ್ಲದೆ ಲಾಂಗ್ ಮಚ್ಚುಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ರೌಡಿಶೀಟರ್ ಸಿದ್ದಿಕಿ ಅಲಿಯಾಸ್ ಬರ್ನಲ್ ನನ್ನು ಇದೀಗ ಬೆಂಗಳೂರಿನ ಶಿವಾಜಿನಗರ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಿವಾಜಿನಗರ ತಾಳಿ ಪೊಲೀಸರಿಂದ ರೌಡಿಶೀಟರ್ ಸಿದ್ದುಕಿ ಬಂಧನವಾಗಿದೆ ವೀಲಿಂಗ್ ನಡೆಸಿ ಲಾಂಗ್ ಪ್ರದರ್ಶನ ಮಾಡುತ್ತಿದ್ದ ಆರೋಪದ ಅಡಿ ಇದೀಗ ಆತನನ್ನು ಅರೆಸ್ಟ್ ಮಾಡಲಾಗಿದೆ ಸಾರ್ವಜನಿಕರಲ್ಲಿ ರೌಡಿಶೀಟರ್ ಸಿದ್ದಿಕೆ ಆತಂಕ ಸೃಷ್ಟಿ ಮಾಡುತ್ತಿದ್ದ ಆರೋಪಿಸಿದ್ದಕ್ಕೆ ವಿರುದ್ಧ ವಿವಿಧಡೆ 17 ಪ್ರಕರಣಗಳು ದಾಖಲಾಗಿದ್ದವು ಪೂರ್ವ ವಿಭಾಗ ಡಿಸಿಪಿ ಕಚೇರಿಯ ಬಳಿಯೇ ಆಸಾಮಿ ವೀಲಿಂಗ್ ಮಾಡಿದ್ದ ಎನ್ನಲಾಗಿದೆ ಹಾಗಾಗಿ ಇದೀಗ ಆತನನ್ನು ಶಿವಾಜಿನಗರ ಠಾಣೆಪಡಿಸಲು ಅರೆಸ್ಟ್ ಮಾಡಿದ್ದಾರೆ.
ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ವೀರಶೈವ ಸಮಾಜದ ಮತಗಳು ದೂರವಾಗಿದ್ದು ಅಲ್ಲದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಇದೆ ಕಾರಣವಾಯಿತು ಎಂದು ಬಿಜೆಪಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಸ್ಫೋಟಕವಾದ ಹೇಳಿಕೆ ನೀಡಿದ್ದಾರೆ. ಚಿಕ್ಕಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂಪಿ ರೇಣುಕಾಚಾರ್ಯ, ವೀರಶೈವ ಲಿಂಗಾಯತರ ಅಗ್ರಗಣ್ಯ ನಾಯಕ ಬಿಎಸ್ ಯಡಿಯೂರಪ್ಪ. ಕಳೆದ ವಿಧಾನಸಭಾ ಚುನಾವಣೆ ಸೋಲಿಗೆ ಇದೇ ಪ್ರಮುಖ ಕಾರಣ. ಯಡಿಯೂರಪ್ಪ ಕೆಳಗಿಳಿಸಿದ್ದು, ನೂರಕ್ಕೆ ನೂರು ಸೋಲಿಗೆ ಕಾರಣವಾಯ್ತು. ಟಿಕೆಟ್ ಕೊಡುವ ಗೊಂದಲ, ಹಿರಿಯರ ಕಡೆಗಣನೆ ಹಾಗೂ ವೀರಶೈವ ಮತಗಳು ದೂರವಾಗಿದ್ದು ಕೂಡ ಸೋಲಿಗೆ ಕಾರಣವಾಗಿದೆ ಎಂದು ಚಿಕ್ಕಮಂಗಳೂರಿನಲ್ಲಿ ಮಾಜಿ ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದರು. ನಿನ್ನೆ ಅಮಿತ್ ಶಾ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದರು.ಬಿವೈ ವಿಜಯೇಂದ್ರ, ಅಮಿತ್ ಶಾ ಒಂದೇ ಕಾರಿನಲ್ಲಿ ಬಂದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವೇದಿಕೆಯ ಮೇಲೆ ಇದ್ದರು. ಯಾರ್ಯಾರು ಏನೇನು ಕೊಟ್ಟರು ಎಂಬ ಬಗ್ಗೆ ಮಾಹಿತಿ…
ಯಾದಗಿರಿ : ತರಕಾರಿ ಹಣ ಹಾಗೂ ಸಂಬಳ ನೀಡುವ ವಿಚಾರವಾಗಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿ ನಡುವೆ ಮುನಿಸು ಉಂಟಾಗಿದ್ದರಿಂದ ಇದೀಗ ಸರ್ಕಾರಿ ಶಾಲೆಯಲ್ಲಿ ಕಳೆದ ಐದು ದಿನಗಳಿಂದ ಬಿಸಿ ಊಟ ಸ್ಥಗಿತವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಶಾಂತಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಸಿಬ್ಬಂದಿ ತಿಕ್ಕಾಟಕ್ಕೆ ಬಿಸಿಊಟ ಸ್ಥಗಿತವಾಗಿದೆ. ತರಕಾರಿ ಹಣ ಹಾಗೂ ಸಂಬಳ ನೀಡುವ ವಿಚಾರದಲ್ಲಿ ಮುನಿಸು ಮಾಡಿಕೊಂಡಿದ್ದು, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ಹಾಗೂ ಅಡುಗೆ ಸಿಬ್ಬಂದಿಯ ಮಧ್ಯೆ ವೈಮನಸು ಉಂಟಾಗಿದೆ. ಹೀಗಾಗಿ ಶಾಲೆಯ 350ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇದೀಗ ಇವರ ಒಂದು ಮುನಿಸಿನಿಂದ ಬಿಸಿಊಟ ಸ್ಥಗಿತವಾಗಿದೆ. ಕಳೆದ ಐದು ದಿನಗಳಿಂದ ಬಿಸಿ ಊಟ ಇಲ್ಲದೆ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದಾರೆ. ಬಿಸಿ ಊಟ ಸ್ಥಗಿತಗೊಂಡರು, ಮುಖ್ಯ ಶಿಕ್ಷಕಿ ಯಾವುದೇ ಕ್ರಮ ಕೈಗೊಂಡಿಲ್ಲ. ಶಿಕ್ಷಕಿಯ ಈ ನಡೆಯಿಂದ ಗ್ರಾಮಸ್ಥರು ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯ…
ಕೊಪ್ಪಳ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರವಾಸಕ್ಕೆ ಎಂದು ಬಂದಿದ್ದ ವಿದೇಶಿ ಮಹಿಳೆ ಹಾಗು ದೇಶಿಯ ಮಹಿಳೆಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದಿದ್ದು, ವರದಿಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಪ್ರವಾಸಿ ತಾಣ ಸಾಣಾಪುರ ಕೆರೆ ಬಳಿ ಜಂಗ್ಲಿಗೆ ಹೋಗುವ ರಸ್ತೆ ಮಧ್ಯದಲ್ಲಿನ ತುಂಗಾಭದ್ರ ಎಡದಂಡೆ ಕಾಲುವೆ ಪಕ್ಕ ಈ ಘಟನೆ ನಡೆದಿದೆ. ಗಿಟಾರ್ ಬಾರಿಸುತ್ತಾ ಕುಳಿತಿದ್ದ ಇಬ್ಬರು ವಿದೇಶಿ ಹಾಗೂ ಮೂವರು ದೇಶಿಯ ಪ್ರವಾಸಿಗರ ಮೇಲೆ ಗುರುವಾರ ತಡರಾತ್ರಿ ಹಲ್ಲೆಯಾಗಿದೆ. ವಾಯುವಿಹಾರಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ವಿದೇಶಿಯರಿದ್ದ ಗುಂಪಿನ ಮೇಲೆ ದಾಳಿ ಮಾಡಿರುವ ಕೆಲ ಸ್ಥಳೀಯ ಯುವಕರು, ಗುಂಪಿನಲ್ಲಿದ್ದ ಪುರುಷರನ್ನು ಕಾಲುವೆಗೆ ದೂಡಿ, ಒಬ್ಬ ವಿದೇಶಿ ಮತ್ತು ಒಬ್ಬ ಸ್ಥಳೀಯ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆಯಲ್ಲಿ ಕಾಲುವೆಗೆ ಬಿದ್ದಿದ್ದ ಒಬ್ಬ ಸ್ವದೇಶಿ ಯುವಕ ನಾಪತ್ತೆಯಾಗಿದ್ದು, ಇನ್ನುಳಿದವರಿಗೆ ಗಾಯಗಳಾಗಿವೆ. ಅಮೆರಿಕ ಮೂಲದ ಡೇನಿಯಲ್, ಇಸ್ರೇಲ್ನ ಸೀಮಾ,…
ದಕ್ಷಿಣಕನ್ನಡ : ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯುತ್ ಗುತ್ತಿಗೆದಾರರೊಬ್ಬರು, ತೀವ್ರ ನೋವು ಅನುಭವಿಸುತ್ತಿದ್ದರು ನೋವು ತಾಳದೆ ತಮ್ಮ ಮನೆಯ ಸಮೀಪ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯ ಕಾರ್ಕಳದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರನ್ನು ಕಾರ್ಕಳ ಏಳ್ನಾಡುಗುತ್ತು ಸತ್ಯಪ್ರಕಾಶ್ ಹೆಗ್ಡೆ (49) ಎನ್ನಲಾಗಿದ್ದು, ಇವರು ಗುರುವಾರ ರಾತ್ರಿ ಸ್ವರಾಜ್ಯ ಮೈದಾನ ಬಳಿಯ ತಮ್ಮ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಡುಬಿದಿರೆಯಲ್ಲಿ ಅನ್ನಪೂರ್ಣೇಶ್ವರಿ ಎಲೆಕ್ಟ್ರಿಕಲ್ಸ್ ಆಯಂಡ್ ಟ್ರಾನ್ಸ್‌ಪೋರ್ಟ್ ಅಂಗಡಿ ಹೊಂದಿದ್ದು, ಎರಡು ದಶಕಗಳಿಂದ ವಿದ್ಯುತ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು.ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.ಇದೇ ಚಿಂತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಹಾಸನ : ಹಾಸನದಲ್ಲಿ ಬೆಚ್ಚಿಬಿಳಿಸುವಂತಹ ಘಟನೆ ನಡೆದಿದ್ದು ಪತ್ನಿ ಒಬ್ಬಳು ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ. ಪತ್ನಿಯ ಈ ನಡೆಯಿಂದ ಮನನೊಂದ ಆಕೆಯ ಪತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಾಕವಳ್ಳಿ ಗ್ರಾಮದ ಬಳಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ರವಿ (38) ಎಂದು ಗುರುತಿಸಲಾಗಿದೆ.ರವಿಯ ಪತ್ನಿ ಕೆಲ ದಿನಗಳ ಹಿಂದೆ ಗಂಡನನ್ನು ಬಿಟ್ಟು ಮಗುವಿನೊಂದಿಗೆ ಹೊನ್ನವಳ್ಳಿ ಗ್ರಾಮದ ಪ್ರದೀಪ್ ಜೊತೆ ಪರಾರಿಯಾಗಿದ್ದಳು. ಇದರಿಂದ ಮನನೊಂದ ರವಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಸ್ಪಂದಿಸದ ಕಾರಣ ಎಸ್ಪಿಗೆ ದೂರು ನೀಡಿದ್ದರು.ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಮನನೊಂದ ರವಿ ಶನಿವಾರ ಮಾಕವಳ್ಳಿ ಬಳಿ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ರವಿ ಅವರ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದ್ದು ಘಟನೆ ಕುರಿತು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.