Subscribe to Updates
Get the latest creative news from FooBar about art, design and business.
Author: kannadanewsnow05
ಕರ್ನೂಲ್ : ಎರಡು ಬೈಕ್ ಗಳಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆಆಂಧ್ರಪ್ರದೇಶದ ಪಾಂಡವಗಲ್ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ಪಾಂಡವಾಗಲ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಸಾರಿಗೆ ಬಸ್ ಡಿಕ್ಕಿಯಾಗಿ ಎರಡು ಬೈಕ್ಗಳಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಗಾವತಿಯಿಂದ ಮಂತ್ರಾಲಯಕ್ಕೆ ಈ ಒಂದು ಸಾರಿಗೆ ಬಸ್ ಹೊರಟಿತ್ತು. ಅಪಘಾತದಲ್ಲಿ ರಾಯಚೂರು ಮೂಲದ ಇಬ್ಬರು ಹಾಗು ಕರ್ನುಲ್ ಜಿಲ್ಲೆಯ ಆದೋನಿ ಮೂಲದ ಇಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದ ಕುರಿತು ಆಂಧ್ರಪ್ರದೇಶದ ಆದೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಡಿ ಗ್ರೇಟರ್ ಬೆಂಗಳೂರು ವಿಧೇಯಕ ಮಂಡಿಸಿದರು. ಗ್ರೇಟರ್ ಬೆಂಗಳೂರು ಅಥಾರಿಟಿ ಮೇಲೆ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಈ ಒಂದು ಚರ್ಚೆಯಲ್ಲಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಭಾಗಿಯಾಗಿದ್ದು, ವಿಧೇಯಕವನ್ನು ಬೆಂಬಲಿಸಿ ST ಸೋಮಶೇಖರ್ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಶಾಸಕ ಎಸ್ ಟಿ ಸೋಮಶೇಖರ್ ಅವರ ಮಾತನ್ನು ಸ್ವಾವತಿಸಿದರು. ಮೇಜು ತಟ್ಟಿ ಸೋಮಶೇಖರ್ ಮಾತನ್ನು ಕಾಂಗ್ರೆಸ್ ಸದಸ್ಯರು ಸ್ವಾಗತಿಸಿದರು. ಬಿಜೆಪಿ ಶಾಸಕರ ಅಭಿಪ್ರಾಯವನ್ನು ಸೋಮಶೇಖರ್ ಆಕ್ಷೇಪಿಸಿ ಮಾತನಾಡಿದ್ದು, ಚರ್ಚೆಯುದಕ್ಕೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದರು. ಆದರೆ ಈ ಸಂದರ್ಭದಲ್ಲಿ ಬಿಜೆಪಿ ಶಾಸಕರು ಸೋಮಶೇಖರ್ ಮಾತನಾಡುವ ಸಂದರ್ಭದಲ್ಲಿ ಮೌನಕ್ಕೆ ಜಾರಿದ್ದರು.
ಬೆಳಗಾವಿ : ಬೆಳಗಾವಿಯಲ್ಲಿ ಚಲಿಸುತ್ತಿದ್ದ ಬಸ್ ಬ್ರೇಕ್ ಫೇಲ್ ಆಗಿದ್ದರಿಂದ ಬಸ್ ಪಲ್ಟಿಯಾದ ಪರಿಣಾಮ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 15ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ನಡೆದಿದೆ. ಹೌದು ಬೈಲಹೊಂಗಲ ತಾಲೂಕಿನ ಲಿಂಗದಳ್ಳಿ-ಅರವಳಿ ಬಳಿ ಬ್ರೇಕ್ ಫೇಲ್ ಆಗಿ ಬಸ್ ಪಲ್ಟಿಯಾಗಿದೆ. ಲಿಂಗದಹಳ್ಳಿ ಬಳಿ ಬಸ್ ಪಲ್ಟಿಯಾದ ಪರಿಣಾಮ ಬಸ್ ನಲ್ಲಿಫಾ ಸುಮಾರು 15 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ
ಬೆಂಗಳೂರು : ದುಬೈ ನಿಂದ ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರನ್ಯಾ ರಾವ್ ಕಳೆದ 3 ದಿನಗಳಿಂದ ಡಿ ಆರ್ ಐ ಕಸ್ಟಡಿಯಲ್ಲಿದ್ದರು. ಇದೀಗ ನಟಿ ರನ್ಯಾರಾವ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಮತ್ತೆ ಅಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ. ಕೋರ್ಟ್ ನಲ್ಲಿ ನಟಿ ರನ್ಯಾರಾವ್ ಹಾಜರಾದ ಬಳಿಕ ಕಣ್ಣೀರು ಹಾಕಿದರು. ಈ ವೇಳೆ ಹಲ್ಲೆ ಮಾಡಿದ್ರ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದಾಗ, ಕೋರ್ಟ್ನಲ್ಲೇ ನಟಿ ರನ್ಯರಾವ್ ಅತ್ತಿದ್ದಾರೆ. ನಾನು ಎಮೋಷನಲ್ ಬ್ರೋಕನ್ ಆಗಿದ್ದೇನೆ. ಕೆಟ್ಟದಾಗಿ ನನಗೆ ಬೈದಿದ್ದಾರೆ. ತಲೆಗೆ ಸುತ್ತಿಗಿಯಲ್ಲಿ ಹೊಡೆದಂತೆ ಪ್ರಶ್ನೆ ಮಾಡಿದ್ದಾರೆ. ಮಾನಸಿಕವಾಗಿ ನಾನು ಕುಗ್ಗಿದ್ದೇನೆ. ಕೆಟ್ಟ ಪದ ಬಳಸಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡಿಲ್ಲ. ಹೇಳಿಲ್ಲ ಅಂದರೆ ಏನಾಗುತ್ತೆ ಅನ್ನೋದು ಗೊತ್ತಲ್ಲ. ಒಂದು ಬೆದರಿಕ ರೀತಿಯಲ್ಲಿ ಅಧಿಕಾರಿಗಳು ಮಾತನಾಡಿದ್ದಾರೆ ಎಂದು ಜಡ್ಜ್ ಜಜ್…
ಬೆಂಗಳೂರು : ದುಬೈ ನಿಂದ ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ ಆರ್ ಐ ಕಸ್ಟಡಿಯಲ್ಲಿದ್ದ ನಟಿ ರನ್ಯಾರಾವ್ ಇಂದು ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಮತ್ತೆ ಅಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿದ್ದಾರೆ. ಕೋರ್ಟ್ ನಲ್ಲಿ ನಟಿ ರನ್ಯಾರಾವ್ ಹಾಜರಾದ ಬಳಿಕ ಕಣ್ಣೀರು ಹಾಕಿದರು. ಈ ವೇಳೆ ಹಲ್ಲೆ ಮಾಡಿದ್ರ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದಾಗ, ಕೋರ್ಟ್ನಲ್ಲೇ ನಟಿ ರನ್ಯರಾವ್ ಅತ್ತಿದ್ದಾರೆ. ನಾನು ಎಮೋಷನಲ್ ಬ್ರೋಕನ್ ಆಗಿದ್ದೇನೆ. ಕೆಟ್ಟದಾಗಿ ನನಗೆ ಬೈದಿದ್ದಾರೆ. ತಲೆಗೆ ಸುತ್ತಿಗಿಯಲ್ಲಿ ಹೊಡೆದಂತೆ ಪ್ರಶ್ನೆ ಮಾಡಿದ್ದಾರೆ. ಮಾನಸಿಕವಾಗಿ ನಾನು ಕುಗ್ಗಿದ್ದೇನೆ ಎಂದು ರನ್ಯಾ ಜಡ್ಜ್ ಮುಂದೆ ಹೇಳಿದರು. ಕೆಟ್ಟ ಪದ ಬಳಸಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡಿಲ್ಲ. ಹೇಳಿಲ್ಲ ಅಂದರೆ ಏನಾಗುತ್ತೆ ಅನ್ನೋದು ಗೊತ್ತಲ್ಲ. ಒಂದು ಬೆದರಿಕ ರೀತಿಯಲ್ಲಿ ಅಧಿಕಾರಿಗಳು ಮಾತನಾಡಿದ್ದಾರೆ ಎಂದು ಜಡ್ಜ್ ಜಜ್ ಮುಂದೆ ನಟಿ ರನ್ಯಾರಾವ್ ತಿಳಿಸಿದ್ದಾರೆ. ಇದೆ ವೇಳೆ ಈ ವೇಳೆ ನ್ಯಾಯಾಧೀಶರು ಡಿ ಆರ್ ಐ…
ಬೆಂಗಳೂರು : ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಿರುವು ಸಿಕ್ಕಿದ್ದು, ಬಂಧಿತ ಉದ್ಯಮಿ ಪುತ್ರ ತರುಣ್ ರಾಜ್ ನನ್ನು ಮಾರ್ಚ್ 15 ರವರೆಗೆ ಡಿ ಆರ್ ಐ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಹೌದು ಬಂಧಿತ ತರುಣ ರಾಜ್ ಕುಮಾರ್ ಮಾರ್ಚ್ 15 ರವರೆಗೆ ಡಿ ಆರ್ ಐ ಕಸ್ಟಡಿಗೆ ನೀಡಿ ಆರ್ಥಿಕ ಅಪರಾಧಿಗಳ ಕೋರ್ಟ್ ಆದೇಶ ಹೊರಡಿಸಿದೆ. ಇಂದು ಜಡ್ಜ್ ನಿವಾಸದಲ್ಲಿ ಹಾಜರುಪಡಿಸಿ ಆರೋಪಿಯನ್ನು ಡಿ ಆರ್ ಐ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಡಿ ಆರ್ ಐ ಅಧಿಕಾರಿಗಳ ಮನವಿಯ ಮೇರೆಗೆ ನ್ಯಾಯಾಧೀಶರು ಕಷ್ಟಡಿಗೆ ನೀಡಿ ಅದೇಶಿಸಿದ್ದಾರೆ.
ಬೆಂಗಳೂರು : ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಎಡಿಜಿಪಿ ಚಂದ್ರಶೇಖರ್ ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ. ಕೇಂದ್ರ ಸಚಿವ ಕುಮಾರಸ್ವಾಮಿಗೆ ಮಧ್ಯಂತರ ರಿಲೀಫ್ ವಿಸ್ತರಿಸಿದ ಹೈಕೋರ್ಟ್, ಮುಂದಿನ ವಿಚಾರಣೆ ಅವರಿಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಎಫ್ಐಆರ್ ಆಧರಿಸಿ ನಿರೀಕ್ಷಣಾ ಜಾಮೀನು ರದ್ದುಪಡಿಸಲು ಕೇಳುವಂತಿಲ್ಲ. 10 ವರ್ಷ ಹಳೆಯ ನಿರೀಕ್ಷಣಾ ಜಾಮೀನು ರದ್ದುಪಡಿಸಲು ಕೇಳುವಂತಿಲ್ಲ. ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಏಕ ಸದಸ್ಯ ಪೀಠದ ನಿಬಂಧ ವಿಸ್ತರಣೆ ಮಾಡಿದ್ದು, ನವೆಂಬರ್ 6ರ ನಿರ್ಬಂಧ ತಿರವಿಗೆ ಲೋಕಾಯುಕ್ತ ಪರ ವಕೀಲ ವೆಂಕಟೇಶ್ ಅರಬಟ್ಟಿ ಮನವಿ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಅರ್ಜಿ ಸಲ್ಲಿಸಿದರೆ ವಿಚಾರಣೆ ನಡೆಸಲಾಗುವುದು ಎಂದು ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.ಬಳಿಕ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿ ಆದೇಶ ಹೊರಡಿಸಿದರು.
ಚಾಮರಾಜನಗರ : ರಾಜ್ಯದಲ್ಲಿ ಇಂದು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಾಲ್ಯ ವಿವಾಹ ಮತ್ತು ಬಾಲಕಿಯ ನಿಶ್ಚಿತಾರ್ಥವನ್ನು ಅಧಿಕಾರಿಗಳು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಚಾಮರಾಜನಗರದ ಎಪಿ ಮೊಹಲ್ಲಾದಲ್ಲಿ ಬಾಲ್ಯ ವಿವಾಹಕ್ಕೆ ಅಧಿಕಾರಿಗಳು ಬ್ರೇಕ್ ಹಾಕಿದ್ದು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಪೊಲೀಸರು ಬಾಲ್ಯ ವಿವಾಹವನ್ನು ತಡೆದಿದ್ದಾರೆ. ಬಳಿಕ ಪೋಷಕರಿಗೆ ಈ ಕುರಿತು ಅರಿವು ಮೂಡಿಸಿದರು. ಇನ್ನು 2ನೇ ಪ್ರಕಾರಣವೂ ಚಾಮರಾಜನಗರ ತಾಲೂಕಿನ ಬಿಸಿಲವಾಡಿ ಗ್ರಾಮದಲ್ಲಿ ನಡೆದಿದ್ದು, ಯುವಕನ ಜೊತೆಗೆ ಬಾಲಕಿಗೆ ನಿಶ್ಚಿತಾರ್ಥ ನೆರವೇರಿಸುತ್ತಿದ್ದರು. ಬಾಲಕಿಗೆ ನಿಶ್ಚಿತಾರ್ಥದ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರಿ ಸಲ್ಲಿಕೆಯಾಗಿದೆ. ತಕ್ಷಣ ಅಧಿಕಾರಿಗಳು ದೂರನ್ನು ಆಧರಿಸಿ ಬಿಸಲವಾಡಿ ಗ್ರಾಮಕ್ಕೆ ಧಾವಿಸಿ ಬಾಲಕಿಯ ನಿಶ್ಚಿತಾರ್ಥಕ್ಕೆ ಬ್ರೇಕ್ ಹಾಕಿದ್ದಾರೆ. ಅಲ್ಲದೇ ಅಲ್ಲಿದ್ದ ಎಲ್ಲರಿಗೂ ಸಹ ಬಾಲ್ಯ ವಿವಾಹದ ಕುರಿತು ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದ್ದಾರೆ. ಈ ವೇಳೆ ಎರಡು ಕಡೆ ಪೋಷಕರಿಂದ ಅಧಿಕಾರಿಗಳು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ಮಕ್ಕಳ ರಕ್ಷಣಾ ಘಟಕ ಮಕ್ಕಳ…
ದಕ್ಷಿಣಕನ್ನಡ : ಎಷ್ಟು ದಿನ ಅಂತ ಲವ್ ಜಹಾದ್ ಬಗ್ಗೆ ಮಾತನಾಡುತ್ತಿರೋಣ? ಎಷ್ಟು ದಿನ ಅಂತ ನಮ್ಮ ಹೆಣ್ಣು ಮಕ್ಕಳನ್ನೇ ನೋಡುತ್ತಿರಿ? ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ, ಮದುವೆಯಾಗಿ ಎಂದು ದಕ್ಷಿಣ ಕನ್ನಡದ ಉಳ್ಳಾಲ ತಾಲೂಕಿನ ಕುತ್ತಾರೂನಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅನ್ಯ ಧರ್ಮದವರನ್ನು ಪ್ರೀತಿಸಿ, ಮದುವೆಯಾಗಿ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿಕೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ದಕ್ಷಿಣ ಕನ್ನಡದ ಉಳ್ಳಾಲ ತಾಲೂಕಿನ ಕುತ್ತಾರೂನಲ್ಲಿ ಕಾರ್ಯಕ್ರಮದಲ್ಲಿ ಎಲ್ಲಿವರೆಗೂ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿರೋಣ? ಸ್ವಲ್ಪ ಬದಲಾವಣೆ ತರೋಣ. ಹುಡುಗಿ ಸಿಗಲಿಲ್ಲ ಅಂತ ಎಷ್ಟು ದಿನ ನೀವು ಹೇಳುತ್ತೀರಿ? ಎಷ್ಟು ದಿನ ಅಂತ ನಮ್ಮದೇ ಹೆಣ್ಣು ಮಕ್ಕಳನ್ನು ನೋಡ್ತೀರಾ?ಅನ್ಯ ಧರ್ಮದೇವತೆಯನ್ನು ಪ್ರೀತಿಸಿ ಮದುವೆಯಾಗಿ ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರು : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರನ್ಯಾ ರಾವ್ ಪಕರಣ ಕೆ ಇದೀಗ ಮತ್ತೊಂದು ತಿರುಗು ಸಿಕ್ಕಿದ್ದು ರನ್ಯಾರಾವ್ ಮತ್ತು ಉದ್ಯಮಿಯ ಪುತ್ರ ಸ್ನೇಹಿತರಾಗಿದ್ದರು ಎಂದು ಹೇಳಲಾಗಿದ್ದು ಇದೀಗ ವಿಚಾರಣೆಯ ಬಳಿಕ ಉದ್ಯಮಿಯ ಪುತ್ರನನ್ನು DRI ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹೌದು ವಿಚಾರಣೆ ನಡೆಸಿದ ಬಳಿಕ ಡಿ ಆರ್ ಐ ಅಧಿಕಾರಿಗಳು ಉದ್ಯಮಿಯ ಪುತ್ರನನ್ನು ಅರೆಸ್ಟ್ ಮಾಡಿದ್ದಾರೆ. ಉದ್ಯಮಿ ಪುತ್ರ ಹಾಗೂ ರನ್ಯಾ ರಾವ್ ಸ್ನೇಹಿತರಾಗಿದ್ದರು. ಇದೀಗ ಡಿ ಆರ್ ಐ ಅಧಿಕಾರಿಗಳಿಂದ ಉದ್ಯಮಿಯ ಪುತ್ರ ಬಂಧನವಾಗಿದೆ. ಫೈವ್ ಸ್ಟಾರ್ ಹೋಟೆಲ್ ಮಾಲೀಕನ ತಮ್ಮನ ಮಗನನ್ನು ಅರೆಸ್ಟ್ ಮಾಡಲಾಗಿದೆ. ಉದಿನಿ ಪುತ್ರರನ್ನು ಅರೆಸ್ಟ್ ಮಾಡಿರುವ ಗಡಿಯಾರ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಉದ್ಯಮಿ ಪುತ್ರ ತರುಣ್ ರಾಜು ನನ್ನು ಅರೆಸ್ಟ್ ಮಾಡಿದ್ದಾರೆ. ಹೋಟೆಲ್ ಮಾಲೀಕನ ತಮ್ಮನ ಮಗ ತರುಣ್ ರಾಜು ನಟಿ ರನ್ಯಾ ರಾವ್ ಲಿಂದ…