Subscribe to Updates
Get the latest creative news from FooBar about art, design and business.
Author: kannadanewsnow05
ಮೈಸೂರು : ಮೈಸೂರಿನಲ್ಲಿ ಸರಣಿ ಕೊಲೆ ಪ್ರಕರಣಗಳು ನಡೆಯುತ್ತಿದ್ದವು ಅಲ್ಲದೆ 9 ವರ್ಷದ ಬಾಳಿಕೆಯ ಮೇಲೆ ಅತ್ಯಾಚಾರ ಹೆಚ್ಚಾಗಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ನಾಳೆ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲೆಗೆ ಭೇಟಿ ನೀಡಲಿದ್ದು ಹಿರಿಯ ಅಧಿಕಾರಿಗಳ ಜೊತೆಗೆ ಈ ಕುರಿತು ಸಭೆ ನಡೆಸಲಿದ್ದಾರೆ. ಮೈಸೂರಿನ ವರುಣ ಕ್ಷೇತ್ರದ ಶಾಸಕರಾಗಿರುವ ಸಿಎಂ ಸಿದ್ದರಾಮಯ್ಯ ನಾಳೆ ಮೈಸೂರಿನಲ್ಲಿ ಹಿರಿಯ ಅಧಿಕಾರಿಗಳ ಜೊತೆಗೆ ಈ ಕುರಿತು ಸಭೆ ನಡೆಸಲಿದ್ದಾರೆ. ನಾಳೆ ಸಂಜೆ 7:25 ಕ್ಕೆ ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು ಸರಣಿ ಕೊಲೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ ಅಧಿಕಾರಿಗಳ ಜೊತೆಗೆ ಮಾಹಿತಿ ಪಡೆದ ನಂತರ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಆ ಬಳಿಕ ಬೆಂಗಳೂರಿಗೆ ತೆರಳಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಇದೆ ಅವಧಿಯಲ್ಲಿ ಕಾಂಗ್ರೆಸ್ ಆಡಳಿತ ಕೊನೆಯಾಗಲಿದ್ದು, ಜನ್ಮ ಜನ್ಮದಲ್ಲೂ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಸ್ಫೋಟಕವಾದ ಭವಿಷ್ಯ ನುಡಿದಿದ್ದಾರೆ. ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವಧಿ ಇದೇ ಕೊನೆ, ಇದಾದ್ಮೇಲೆ ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ ಅಂತ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಎಲ್ಲಾ ರಾಜಕೀಯದವರು ಗೊಂದಲದಲ್ಲಿ ಸಿಲುಕಲಿದ್ದು ಬಹಳಷ್ಟು ಜನ ಕಿತ್ತಾಡುತ್ತಾರೆ. ಸ್ಥಾನ ಪಲ್ಲಟ ಮಾಡಿಕೊಳ್ಳಲಿದ್ದಾರೆ. ಇಡೀ ಜಗತ್ತಿನ ಇತಿಹಾಸ ಪುಟದಲ್ಲಿ ಕರ್ನಾಟಕ ರಾಜ್ಯ ಕುರ್ಚಿಗಾಗಿ ಒಡೆದಾಡಿಕೊಳ್ಳುವುದರಲ್ಲಿ ಹೆಸರುವಾಸಿಯಾಗುತ್ತೆ. ಸಂಕ್ರಾಂತಿ ಒಳಗಡೆ ಕೇತು ಮತ್ತು ಸೂರ್ಯ ರಾಹು ಜೊತೆಗೆ ಜರುಗಲಿದ್ದು ಬಹಳ ದೊಡ್ಡ ಗಲಾಟೆಗಳು ನಡೆಯುತ್ತವೆ. ಇದರ ಜೊತೆಗೆ ಸ್ಥಾನ ಪಲ್ಲಟ, ಪಕ್ಷಪಾತ, ಭೇದ ಭಾವ ಆಗಲಿದೆ ಎಂದರು. ಇದು ಕೊನೆಯ ಹಂತ, ಮುಂದಿನ ದಿನಗಳಲ್ಲಿ ಪ್ರಳಯದ ಆಗುತ್ತೆ. ಉತ್ತರ ಭಾರತ,…
ಬೆಂಗಳೂರು : ಕನ್ನಡದ ಖ್ಯಾತ ಹಾಸ್ಯ ಹಿರಿಯ ನಟ ಉಮೇಶ್ ಅವರ ಆರೋಗ್ಯ ಸತಿ ಗಂಭೀರವಾಗಿದ್ದು ಸದ್ಯ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸ್ಯ ನಟರಾಗಿ ಗುರುತಿಸಿಕೊಂಡಿರುವ ಇವರು ವರ ನಟ ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಹಲವು ಮೇರು ನಟರೊಂದಿಗೆ ನಟಿಸಿದ್ದಾರೆ. ಹಾಸ್ಯ ಪಾತ್ರದಿಂದಲೇ ಇವರು ಕನ್ನಡ ಜನತೆಯ ಮನೆ ಮಾತಾಗಿದ್ದಾರೆ. ಸದ್ಯ ಇವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರು : ಮೈಸೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಸಿಮೆಂಟ್ ಲಾರಿ ಮತ್ತು ಬಸ್ ಒಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಲಾರಿ ಚಾಲಕ ಹಾಗೂ ಕ್ಲೀನರ್ ಸಾವನ್ನಪ್ಪಿದ್ದು 10 ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ವರದಿಯಾಗಿದೆ.ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬನ್ನಿಕುಪ್ಪೆ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದ ಭೀಕರತೆಗೆ ಬಸ್ ಚಾಲಕ ಹಾಗೂ ಕ್ಲೀನರ್ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೈಸೂರಿನಿಂದ ಕೇರಳ ಕಡೆಗೆ ತೆರಳುತ್ತಿದ್ದ ಲಾರಿಗೆ, ಕೇರಳದಿಂದ ಮೈಸೂರಿನ ಕಡೆ ಬರುತ್ತಿದ್ದ ಬಸ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸಿಮೆಂಟ್ ಲಾರಿ ಪಲ್ಟಿಯಾಗಿದೆ. ಅಪಘಾತಕ್ಕೊಳಗಾದ ಎರಡೂ ವಾಹನಗಳು ಕೇರಳ ಮೂಲದ್ದಾಗಿದೆ. ಮೃತದೇಹಗಳು ಹುಣಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ : ಸಿದ್ದರಾಮಯ್ಯ ಅವರ ಎದೆ ಬಗೆದು ನೋಡಿದರೆ ಬಸವಣ್ಣ ಕಾಣೋದಿಲ್ಲ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಕಾಣುತ್ತಾರೆ. ಸಚಿವ ಸಂಪುಟ ವಿಸ್ತರಣೆ ಮೂಲಕ ಭಯ ಹುಟ್ಟಿಸುತ್ತಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರಿಗೆ ಸಿಎಂ ಸಿದ್ದರಾಮಯ್ಯ ಭಯ ಹುಟ್ಟಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಿಮ್ಮನ್ನು ತೆಗೆಯುತ್ತೇವೆ ತೆಗೆಯುತ್ತೇವೆ ಅಂತ ಎಚ್ಚರಿಕೆ ಕೊಡುತ್ತಿದ್ದಾರೆ. ಪದೇ ಪದೇ ಈ ರೀತಿ ಹೇಳಿಕೆ ನೀಡಿ, ಹುಷಾರ್ ನಮ್ಮ ಜೊತೆ ಇರಬೇಕು ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಬಲಿಗರಿಗೆ ಸಿಎಂ ಸಿದ್ದರಾಮಯ ಎಚ್ಚರಿಕೆ ಕೊಡುತ್ತಿದ್ದಾರೆ ಇವೆಲ್ಲವನ್ನು ನೋಡಿದರೆ ಈ ಸರ್ಕಾರ ಇರುತ್ತಾ ಅಥವಾ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದರು.
ಬೆಂಗಳೂರು : ಬೆಂಗಳೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇದೀಗ ವರದಿಯಾಗಿದೆ. ಮೇಘರಾಜ್ (31) ಬ್ಯಾಂಕ್ ಮ್ಯಾನೇಜರ್ ಶವವಾಗಿ ಪತ್ತೆಯಾಗಿದ್ದು ರಾಜರಾಜೇಶ್ವರಿ ನಗರದಲ್ಲಿರುವ 1522 ಪಬ್ನಲ್ಲಿ ಈ ಒಂದು ಘಟನೆ ನಡೆದಿದೆ. ರಾಜರಾಜೇಶ್ವರಿ ನಗರದಲ್ಲಿರುವ ಪಬ್ ಗೆ ಮೂರು ಸ್ನೇಹಿತರ ಜೊತೆಗೆ ಮೇಘರಾಜ್ ಹೋಗಿದ್ದ. ರಾತ್ರಿಯೆಲ್ಲರೂ ಕುಡಿದು ಪಾರ್ಟಿ ಮಾಡಿ ಊಟ ಮಾಡಿದ್ದರು. ಮನೆಗೆ ಹೋಗುವಾಗ ಎಲ್ಲರೂ ಬಂದಿದ್ದರು ತುಂಬಾ ಹೊತ್ತಾದರೂ ಮೇಘರಾಜ್ ಹೊರಬಾರದ ಹಿನ್ನೆಲೆಯಲ್ಲಿ, ಬಾತ್ರೂಮ್ಗೆ ಹೋಗಿ ಪರಿಶೀಲಿಸಿದಾಗ ಮೇಘರಾಜ ಶವವಾಗಿ ಪತ್ತೆಯಾಗಿದ್ದಾನೆ. ಆರ್ ಆರ್ ನಗರ ಠಾಣೆ ಪೋಲೀಸರಿಂದ ತನಿಖೆ ಮುಂದುವರೆದಿದೆ.
ಬೆಂಗಳೂರು : ಲೋಕಾಯುಕ್ತ ಹೆಸರಲ್ಲಿ ಹಣ ವಸೂಲಿ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಪಿ ಶ್ರೀನಾಥ್ ಜೋಶಿಗೆ ಮತ್ತೊಂದು ಶಾಕ್ ಎದುರಾಗಿದ್ದು, ತನಿಖೆಯ ವೇಳೆ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆ ಆಗಿರುವುದು ದೃಢಪಟ್ಟಿದೆ. ಲೋಕಾಯುಕ್ತ ಅಧಿಕಾರಿಗಳು ಈ ಕುರಿತು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಇಲಾಖೆಯ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿ ಎಸ್ಪಿ ಶ್ರೀನಾಥ್ ಜೋಶಿ ಹಣವನ್ನು ವಸೂಲಿ ಮಾಡುತ್ತಿದ್ದರು. ಬಳಿಕ ಹಣವಸೂಲಿ ಮಾಡಿದ್ದು ಅಲ್ಲದೆ ಪಡೆದ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಮಾಡಿದ್ದಾರೆ. ತನಿಖೆ ಮಾಹಿತಿ ಪತ್ರದಲ್ಲಿ ಲೋಕಾಯುಕ್ತ ADGP ಉಲ್ಲೇಖಿಸಿದ್ದಾರೆ.
ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಡಿ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಮೌಲ್ಯದ ಸೈಟ್ಗಳನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕೋಟಿ ಕೋಟಿ ಮೌಲ್ಯದ ಮುಟ್ಟುಗೋಲು ಹಾಕಿಕೊಂಡಿದ್ದು, ಇಡಿ ಪಡೆದಿರುವ ಸೈಟ್ಗಳ ದಾಖಲೆ ಇದೀಗ ಬೆಚ್ಚಿ ಬೀಳಿಸುತ್ತೆ. ಸುಮಾರು 59ಕ್ಕೂ ಹೆಚ್ಚು ಸೈಟ್ಗಳನ್ನು ಇಡಿ ತಂಡ ವಶಕ್ಕೆ ಪಡೆದುಕೊಂಡಿದೆ. 60 ಕೋಟಿ ಮೌಲ್ಯದ ಸೈಟ್ ಗಳನ್ನ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದೆ. ಕಾಂಗ್ರೆಸ್ ಮುಖಂಡ ಪಾಪಣ್ಣ ಅವರಿಂದ 31 ಸೈಟ್, ಮೈಸೂರಿನ ವಿಜಯನಗರದ 4ನೇ ಹಂತದಲ್ಲಿರುವ ಸೈಟ್ 59 ಸೈಟ್ ಗಳನ್ನ ಮುಟ್ಟುಗೊಲು ಹಾಕಿಕೊಂಡಿದೆ. ಅಲ್ಲದೆ ಮನೆ ಕೆಲಸದವನ ಹೆಸರಿನಲ್ಲೂ ಕೂಡ ಕೋಟಿ ಕೋಟಿ ಆಸ್ತಿ ಮಾಡಿದ್ದ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ, ಅತ್ತೆ, ಮಾವ ಬಾಮೈದ ಹೆಸರಿನಲ್ಲಿ ಕೂಡ ಕೋಟಿ ಕೋಟಿ ಆಸ್ತಿ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಮುಡಾ ಮಾಜಿ ಅಧ್ಯಕ್ಷ ಮರಿಗೌಡಗು ಕೂಡ ಸೈಟ್ ಗಳು ಮಂಜೂರಾಗಿವೆ. ಈ ಕುರಿತು ಕೋರ್ಟಿಗೆ ಇಡಿ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
ಕಲಬುರ್ಗಿ : ಕಲ್ಬುರ್ಗಿ ಜಿಲ್ಲೆಯ ಶಹಬಾದ್ ತಾಲೂಕಿನ ಮುಟ್ಟಗ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಮೂರ್ತಿಯನ್ನು ಕಿಡಿಗೇಡಿಗಳು ಭಗನಗೊಳಿಸಿರುವ ಘಟನೆ ವರದಿಯಾಗಿದೆ ಕಲೆನಿಂದ ಮೂರ್ತಿಯ ಕೈ ಕಟ್ ಮಾಡಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಮುತ್ತಗಿ ಗ್ರಾಮದಲ್ಲಿ ಸದ್ಯಕ್ಕೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಭಧ್ರತೆ ಕೈಗೊಂಡಿದ್ದಾರೆ. ಘಟನೆ ಕುರಿತಂತೆ ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಅಂಬಿಗರ ಚೌಡಯ್ಯ ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಯುವತಿಯ ಜೊತೆಗೆ ಆಟೋ ಚಾಲಕ ಕಿರಿಕ್ ಮಾಡಿಕೊಂಡಿದ್ದಾನೆ. ಯುವತಿಯ ಆಮೇಲೆ ಆಟೋ ಚಾಲಕ ಹಲ್ಲಿಗೆ ಯತ್ನಿಸಿದ್ದಾನೆ ಅವಾಚ್ಯ ಶಬ್ದಗಳಿಂದ ಯುವತಿಯನ್ನು ಆಟೋ ಚಾಲಕ ನಿಂದಿಸಿರುವ ಘಟನೆ ವರದಿಯಾಗಿದೆ. ಯುವತಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು ಕೂಡ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಪದೇಪದೇ ಹಲ್ಲೆ ಮಾಡಿದ್ದಾನೆ. ಉಬರ್ ಆಟೋ ಚಾಲಕ ಈ ಒಂದು ಕೃತ್ಯ ಎಸಗಿದ್ದು, ಅಕ್ಟೋಬರ್ 2ರಂದು ನಡೆದಂತಹ ಘಟನೆ ತಡವಾಗಿ ಬಳಕೆಗೆ ಬಂದಿದೆ ಅಕ್ಟೋಬರ್ 2ರ ಸಂಜೆ 7.30 ರ ಸುಮಾರಿಗೆ ಈ ಒಂದು ಘಟನೆ ನಡೆದಿದೆ ಅವಾಚ್ಯವಾಗಿ ನಿಂದಿಸಿ ಯುವತಿಯ ಮೇಲೆ ಹಲ್ಲೆಗೂ ಆಟೋ ಚಾಲಕ ಮುಂದಾಗಿದ್ದಾನೆ. 2 ಆಪ್ ನಲ್ಲಿ ಯುವತಿ ಆಟೋ ಬುಕ್ ಮಾಡಿದ್ದಾಳೆ. ಪಿಕಪ್ ಮಾಡಲು ಎರಡು ಆಟೋಗಳು ಒಟ್ಟಿಗೆ ಬಂದಿವೆ ಈ ಪೈಕಿ ಒಂದು ಆಟೋ ಮಾತ್ರ ಆಯ್ಕೆ ಮಾಡಿದ್ದಳು . ಇದರಿಂದ ರೊಚ್ಚಿಗೆದ್ದ ಚಾಲಕ ಯುವತಿಗೆ ಅವಾಚ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ಗೆ…














