Author: kannadanewsnow05

ಚೈನೈ : ಗುಜರಾತ್ನ ಅಹಮದಾಬಾದ್ ವಿಮಾನ ದುರಂತ ಘಟನೆ ಎಲ್ಲಿ 270ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು. ಅದಾದ ಬಳಿಕ, ಇದೀಗ ಇಂಡಿಗೋ ವಿಮಾನದ ವಿಮಾನದ ವಿಂಡ್ ಶೀಲ್ಡ್ ನಲ್ಲಿ ಬಿರುಕು ಕಾಣಿಸಿಕೊಂಡಿರುವ ಘಟನೆ ವರದಿಯಾಗಿದೆ. ಮಧುರೈನಿಂದ ಚೈನ್ನೈ ತೆರುಳುತ್ತಿದ್ದ ವಿಮಾನದ ವಿಂಡ್ ಶೀಲ್ಡ್ ನಲ್ಲಿ ಕಾಣಿಸಿಕೊಂಡಿದೆ. ಆದರೆ ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ಒಂದು ಇದಿಗ ತಪ್ಪಿದೆ. ವಿಮಾನದ ವಿಂಡ್ ಶೀಲ್ಡ್ ನಲ್ಲಿ ಬಿರುಕು ಕಂಡ ಕೂಡಲೇ ಪೈಲೆಟ್ ಮಾಹಿತಿ ನೀಡಿದ್ದಾರೆ ಚೈನ್ನೈ ಏರ್ಪೋರ್ಟ್ ನಲ್ಲಿ ಸುರಕ್ಷಿತವಾಗಿ ಇದೀಗ ವಿಮಾನ ಲ್ಯಾಂಡ್ ಆಗಿದೆ. ಸುಮಾರು 76 ಪ್ರಯಾಣಿಕರನ್ನು ಇಂಡಿಗೋ ವಿಮಾನ ಕರೆ ತಂದಿತ್ತು.

Read More

ಬೆಳಗಾವಿ : ಬೆಳಗಾವಿಯಲ್ಲಿ ವಿಚಿತ್ರವಾದ ಘಟನೆ ಒಂದು ನಡೆದಿದ್ದು, ಪ್ರಿಯಕರ ಜೊತೆ ಪ್ರೇಯಸಿ ಪರಾರಿ ಆಗಿದ್ದಾಳೆ. ಹಾಗಾಗಿ ತಂದೆ ಮಗಳ ತಿಥಿ ಮಾಡಿದ್ದು, ಮಗಳು ತಮ್ಮ ಪಾಲಿಗೆ ಸತ್ತಾಳೆ ಎಂದು ತಂದೆ ತಿಥಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗದ ನಾಗರಾಳ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಊರಿನ ತುಂಬಾ ಮಗಳು ಸತ್ತಳೆಂದು ಶ್ರದ್ಧಾಂಜಲಿ ಬ್ಯಾನರ್ ಹಾಕಿಸಿ ತಂದೆ ತಿಥಿ ಊಟ ಮಾಡಿಸಿದ್ದಾರೆ. ಪ್ರೀತಿಸಿದ ಹುಡುಗನೊಂದಿಗೆ ಸುಶ್ಮಿತಾ ಮನೆ ಬಿಟ್ಟು ಓಡಿ ಹೋಗಿದ್ದಾಳೆ ಈ ಒಂದು ಕಾರಣಕ್ಕೆ ತಂದೆ ಈ ರೀತಿ ಬ್ಯಾನರ್ ಹಾಕಿ ಇಡೀ ಊರಿಗೆ ತಿಥಿ ಊಟ ಹಾಕಿಸಿದ್ದಾರೆ. ಗ್ರಾಮದ ವಿಠ್ಠಲ್ ಬಸ್ತಾವಾಡ ಯುವಕನೊಂದಿಗೆ ಸುಶ್ಮಿತಾ ಪ್ರೀತಿಯಲ್ಲಿ ಬಿದ್ದಿದ್ದಳು.ಮಗಳು ಓಡಿ ಹೋಗಿದ್ದರಿಂದ ಮನನೊಂದು ತಂದೆ ಈ ಒಂದು ತಿಥಿ ಊಟ ಮಾಡಿಸಿ ಊರಿಗೆ ಊಟ ಹಾಕಿಸಿದ್ದಾರೆ.

Read More

ಬೆಂಗಳೂರು : ಇತ್ತೀಚಿಗೆ ಸುಪ್ರೀಂಕೋರ್ಟ್ ಸಿಜೆಐ ಬಿ.ಆರ್ ಗವಾಯಿ ಅವರ ಮೇಲೆ ಹಿರಿಯವಕೀಲ ರಾಕೇಶ್ ಕಿಶೋರ್ ಶೂ ಎಸೆದಿದ್ದ ಪ್ರಕರಣ ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ, ಬಿ.ಆರ್.ಗವಾಯಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದ ಐದು ಖಾತೆಗಳ ವಿರುದ್ಧ ಬೆಂಗಳೂರಿನ ಸೈಬರ್ ಕ್ರೈಮ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹೌದು ಕೇಸರಿ ನಂದನ್, ಶ್ರೀಧರ್ ಕುಮಾರ್, ನಾಗೇಂದ್ರ ಪ್ರಸಾದ್, ರಮೇಶ್ ನಾಯ್ಕ್ ಹಾಗೂ ಮಂಜುನಾಥ್ ಎಂ.ಸಿ ಮಂಜು ಹೆಸರಿನ‌ ಖಾತೆಗಳ ವಿರುದ್ಧ ಮಾಹಿತಿ ತಂತ್ರಜ್ಞಾನ‌ ಕಾಯ್ದೆಯ 67, 66 ಹಾಗೂ 66(C), ಭಾರತೀಯ ನ್ಯಾಯ ಸಂಹಿತೆ 352ರಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇತ್ತೀಚಿನ ಪ್ರಕರಣವೊಂದರ ಕುರಿತು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಆರೋಪಿಗಳು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕುರಿತು ಕೆಟ್ಟದಾಗಿ ಹಾಗೂ ಬೆದರಿಕೆಯೊಡ್ಡುವಂಥಹ ಕಾಮೆಂಟ್ ಪ್ರಕಟಿಸಿದ್ದರು. ಇದನ್ನು ಗಮನಿಸಿದ್ದ ಸೈಬರ್ ಕ್ರೈಮ್‌ನ ಸಾಮಾಜಿಕ ಜಾಲತಾಣ ವಿಭಾಗದ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

Read More

ಮೈಸೂರು : ಮೈಸೂರಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಸ್ಪೋಟಕವಾದ ಅಂಶ ಬಯಲಾಗಿದ್ದು, ಆರೋಪಿ ಕಾರ್ತಿಕ್ ಬಾಲಕಿಗೆ 19 ಬಾರಿ ಚಾಕು ಇರಿದು ಕೊಲೆ ಮಾಡಿದ್ದಾನೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಹೌದು ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ಇದು ದೃಢವಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ಆರೋಪಿ ಕಾರ್ತಿಕ್ 19 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಮದ್ಯದ ನಶೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಆರೋಪಿ ಮದ್ಯ ಕುಡಿದಿದ್ದು ಸಹ ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ. ಪ್ರಕರಣ ಹಿನ್ನೆಲೆ? ದಸರಾ ಸಂದರ್ಭದಲ್ಲಿ ಬೀದಿ ಬದಿಯಲ್ಲಿ ಬಲೂನು, ಇತರ ವಸ್ತುಗಳನ್ನು ಮಾರಲು ಬಂದಿದ್ದ 9 ವರ್ಷದ ಬಾಲಕಿಯ ಶವ ನಗರದ ಕುಸ್ತಿ ಅಖಾಡದ ಮುಂಭಾಗದ ಮೈದಾನದಲ್ಲಿ ದೊರೆತಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ನಜರ್​ಬಾದ್​ ಪೊಲೀಸ್​…

Read More

ದಾವಣಗೆರೆ : ದೇಶದ ವಿವಿಧ ಬ್ಯಾಂಕ್ ಗಳ ಖಾತೆಯಲ್ಲಿ ಹಣ ಕಳ್ಳತನ ಮಾಡಿದ್ದ ವಂಚಕನನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ. ವಿವಿಧ ಬ್ಯಾಂಕ್ ಗಳಲ್ಲಿ ಬರೋಬ್ಬರಿ 150 ಕೋಟಿ ರೂಪಾಯಿ ಕಳ್ಳತನ ಮಾಡಿರುವ ವಂಚಕನನ್ನು ಇದೀಗ ಸೈಬರ್ ಠಾಣೆ ಪೋಲಿಸರು ದಾವಣಗೆರೆಯಲ್ಲಿ ಅರೆಸ್ಟ್ ಮಾಡಿದ್ದಾರೆ. ಹೌದು ದೇಶದ ವಿವಿಧ ಬ್ಯಾಂಕ್ ಗಳ ಖಾತೆಯಲ್ಲಿ ಬರೋಬ್ಬರಿ 150 ಕೋಟಿ ರೂ.ವಂಚಿಸಿರುವ ಆರೋಪಿ ಸೈಯದ್ ಅರ್ಫಾತ್ ನನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ಕೆಲಸ ಮಾಡುತ್ತಿದ್ದ ಆರೋಪಿ ಸೈಯದ್ ಅರ್ಫಾತ್, ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಶಾಂತಿನಗರದ ನಿವಾಸಿ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಆರೋಪಿ ಖಾತೆಯಲ್ಲಿ 150 ಕೋಟಿ ರೂ. ಡೆಪಾಸಿಟ್ ಮಾಡಲಾಗಿದೆ. ಆರೋಪಿಗಳು 132 ಕೋಟಿ ಹಣ ವಿತ್ ಡ್ರಾ ಮಾಡಿದ್ದು, 18 ಕೋಟಿ ರೂ.ಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ದಾವಣಗೆರೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 5ಕ್ಕೆ ಏರಿಕೆಯಾಗಿದೆ. ರಾತ್ರಿ ಚಿಕಿತ್ಸೆ ಫಲಿಸದೆ ಮತ್ತೆ ಇಬ್ಬರು ಗಾಯಾಳುಗಳು ಸಾವನ್ನಪ್ಪಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರು ಗಾಯಾಳುಗಳು ಸಾವನಪ್ಪಿದ್ದಾರೆ. ನಿನ್ನೆ ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಹೌದು ಬಿಡದಿ ಬಳಿಯ ಭೀಮನಹಳ್ಳಿ ಗ್ರಾಮದ ಶೆಡ್‌ವೊಂದರಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ 7 ಕಾರ್ಮಿಕರಲ್ಲಿ ಮೂವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಮನುರುಲ್ ಶೇಖ್, ಜಾವಿದ್ ಅಲಿ ಹಾಗೂ ತಜ್‌ಬುಲ್‌ ಮೃತಪಟ್ಟವರೆಂದು ಗುರುತಿಸಲಾಗಿದೆ. ಇದೀಗ ಮತ್ತೆ ಇಬ್ಬರು ಸಾವನಪ್ಪಿದು ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಹೃದಯಾಘಾತದಿಂದ ಬಿಎಂಟಿಸಿ ಬಸ್ ಚಾಲಕರೊಬ್ಬರು ಸಾವನಪ್ಪಿದ್ದಾರೆ. ದೇವನಹಳ್ಳಿಯ ಬಿಎಂಟಿಸಿ ಬಸ್ ಡಿಪೋದಲ್ಲಿ ಈ ಒಂದು ಘಟನೆ ನಡೆದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ 50ನೇ ಬಸ್ ಡಿಪೋದಲ್ಲಿ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಮೂಲದ ನಾರಾಯಣಪ್ಪ ಸಾವನಪ್ಪಿದ್ದಾರೆ. ಕಳೆದ ರಾತ್ರಿ ಕೆಲಸ ಮುಗಿಸಿ ಬಸ್ ಸಮೇತ ಅವರು ಡಿಪೋಗೆ ಬಂದಿದ್ದರು. ಬಸ ನಿಲ್ಲಿಸುತ್ತಿದ್ದಂತೆ ನಾರಾಯಣಪ್ಪಗೆ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಅಲ್ಲಿಯೇ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ.

Read More

ವಿಳ್ಯದೆಲೆಯನ್ನು ನಾವು ಪ್ರಮುಖವಾಗಿ ಎಲ್ಲ ಸಮಾರಂಭಗಳಲ್ಲಿ ಉಪಯೋಗಿಸುವ ಪ್ರಮುಖ ವಸ್ತು. ವಿಶೇಷವಾಗಿ.ಆಂಜನೇಯನಿಗೆ ವಿಳ್ಯದೆಲೆಯ ಹಾರ ಹಾಕಿದರೆ ಫಲ ವಿಶೇಷತೆ..‌ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೈವಜ್ಞ ಪ್ರಧಾನ್ ತಾಂತ್ರಿಕ್ ಶ್ರೀ ವಿದ್ಯಾಧರ್ ನಕ್ಷತ್ರಿ 9686268564 ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 9686268564 ೧.ಸ್ವಾಮಿಗೆ ಚಿಗುರು ವೀಳ್ಯದೆಲೆ ಹಾರವನ್ನು ಹಾಕಿದರೆ ಖಾಯಿಲೆಯಿಂದ ನರಳುವವರು ಬೇಗ ಗುಣಮುಖರಾಗುತ್ತಾರೆ. ೨. ಮನೆಯಲ್ಲಿ ಮಾಂತ್ರಿಕ ಕಾಟ ಇರುವವರು ಆಂಜನೇಯ ಸ್ವಾಮಿಗೆ ಚಿಗುರು ವೀಳ್ಯದೆಲೆ ಹಾರ ಹಾಕಿದರೆ ಮಾಂತ್ರಿಕ ಭಾದೆ ನಿವಾರಣೆಯಾಗುತ್ತದೆ .. ೩. ಸಂಸಾರದಲ್ಲಿ ನೆಮ್ಮದಿ ಇಲ್ಲದವರು ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿದರೆ…

Read More

ಬೆಂಗಳೂರು : ಕೊಲೆ ಆರೋಪಿ ದರ್ಶನಕ್ಕೆ ಜೈಲಿನಲ್ಲಿ ಕನಿಷ್ಠ ಸವಲತ್ತು ನೀಡದ ವಿಚಾರವಾಗಿ ಕೊಲೆ ಆರೋಪಿ ದರ್ಶನ ಅರ್ಜಿ ಭಾಗಶಹ ಅಂಗೀಕಾರವಾಗಿದೆ. ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ಈ ಕುರಿತು ಆದೇಶ ನೀಡಿದೆ. ಹೌದು ಆರೋಪಿ ದರ್ಶನಕ್ಕೆ ಜಲಿನಲಿ ಕನಿಷ್ಠ ಸವಲತ್ತು ನೀಡಿದ ಆರೋಪದ ಹಿನ್ನೆಲೆಯಲ್ಲಿ ಜರಿನಲ್ಲಿ ಖುದ್ದು ಪರಿಶೀಲಿಸುವಂತೆ ಕೋರಿದ ಅರ್ಜಿ ಇದೀಗ ಅಂಗೀಕಾರ ಮಾಡಿದೆ. ಕೊಲೆ ಆರೋಪಿ ದರ್ಶನ್ ಅರ್ಜಿ ಭಾಗಶಹ ಅಂಗೀಕಾರವಾಗಿದೆ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ಈ ಕುರಿತು ಆದೇಶ ನೀಡಿದೆ. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಸವಲತ್ತು ಪರಿಶೀಲಿಸಬೇಕು ಕೋರ್ಟ್ ಆದೇಶ ಪಾಲನೆಯಾಗಿದೆಯೋ ಇಲ್ಲವೋ ಪರಿಶೀಲಿಸಬೇಕು ಎಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದ ಜಡ್ಜ್ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗೆ ಈ ಕುರಿತು ಸೂಚನೆ ನೀಡಿದೆ.

Read More

ಬೆಂಗಳೂರು : ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವಂತ ಸ್ಯಾಂಡಲ್ ವುಡ್ ಹಿರಿಯ ನಟ ಉಮೇಶ್ ಆರೋಗ್ಯ ಏರುಪೇರಾಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯದ ಮಾಹಿತಿಯಂತೆ ಹಿರಿಯ ನಟ ಉಮೇಶ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಸ್ಯಾಂಡಲ್ ವುಡ್ ಹಿರಿಯ ನಟ ಉಮೇಶ್ ಅವರು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಇಂದು ಅವರು ಮನೆಯಲ್ಲಿ ಸ್ನಾನದ ರೂಂ ನಲ್ಲಿ ಕಾಲು ಜಾರಿ ತಪ್ಪಿ ಬಿದ್ದಿದ್ದರು. ಆ ಬಳಿಕ ಅವರ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಅವರನ್ನು ಬೆಂಗಳೂರಿನ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊಂಟ ಮತ್ತು ಕಾಲಿಗೆ ಗಂಭೀರವಾಗಿ ಪೆಟ್ಟಾಗಿದ್ದು, ಸಂತ ಹಾಗೂ ಕಾಲಿಗೆ ಸರ್ಜರಿ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

Read More