Author: kannadanewsnow05

ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚೆನ್ನಾಗಾಟ ಪ್ರಕರಣದಲ್ಲಿ ನಟಿ ರನ್ಯರಾವ್ ಅವರ ಬಂಧನವಾಗಿದ್ದು ಈಗಾಗಲೇ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಗಿದೆ. ಆದರೆ ಈ ಪ್ರಕರಣದಲ್ಲಿ ಅವರ ಸ್ನೇಹಿತನಾದ ಉದ್ಯಮಿಯ ಪುತ್ರ A2 ಆರೋಪಿ ತರುಣ್ ರಾಜು ಅವರು ಸಹ ಅರೆಸ್ಟ್ ಆಗಿದ್ದು, ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ನಿನ್ನೆ ಆದೇಶ ನೀಡಿತ್ತು. ಬಳಿಕ ತರುಣ್ ರಾಜು ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಇಂದು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ತರುಣ್ ರಾಜು ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ತರುಣ್ ರಾಜು ಜಾಮೀನು ಅರ್ಜಿ ವಿಚಾರಣೆ ಇದೀಗ ಸೋಮವಾರಕ್ಕೆ ಮುಂದೂಡಿಕೆ ಆಗಿದೆ.ಈ ಕುರಿತು ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

Read More

ರಾಯಚೂರು : ರಾಯಚೂರಿನಲ್ಲಿ ಭೀಕರ ಹತ್ಯೆ ನಡೆದಿದ್ದು, ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆಮಾಡಿರುವ ಘಟನೆ ರಾಯಚೂರು ನಗರದ ಬಂಗಿಕುಂಟದಲ್ಲಿ ನಡೆದಿದೆ. ರಾಯಚೂರು ನಗರದ ಬಂಗಿಕುಂಟದಲ್ಲಿ ಚಾಕುವಿನಿಂದ ಇರಿದು ಸಯ್ಯದ್ ಖದಿರ್ (40) ಎನ್ನುವ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆ ಕುರಿತು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ದುಬೈದಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನವನ್ನು ಅಕ್ರಮವಾಗಿ ಕಳ್ಳ ಸಾಗಣೆ ಪ್ರಕರಣದಲ್ಲಿ ಅರೆಸ್ಟ್​ ಆಗಿರುವ ನಟಿ ರನ್ಯಾ ರಾವ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ವಜಾಗೊಳಿಸಿ ನಿನ್ನೆ ಅದೇಶಿಸಿತ್ತು. ಇದೀಗ ನಟಿ ರನ್ಯಾರಾವ್ ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಹೌದು ಜಾಮೀನು ಕೋರಿ ಸೇಷನ್ಸ್ ಕೋರ್ಟ್ ಗೆ ನಟಿ ರನ್ಯಾ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ರನ್ಯಾ ರಾವ್ ಪರ ವಕೀಲರು ಸೇಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರನ್ಯಾ ಅವರ ಜಾಮೀನು ಅರ್ಜಿ ವಜಾ ಗೊಳಿಸಿತ್ತು. ಇದೀಗ ಜಾಮೀನು ಕೋರಿ ಸೆಷನ್ಸ್ ಕೋರ್ಟಿಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದು, ಸೋಮವಾರ ರನ್ಯಾ ಜಾಮೀನು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಪ್ರಕರಣದ ಹಿನ್ನೆಲೆ ? ಕಳೆದ ಮಾ.3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಗೋಲ್ಡ್​​ ಸ್ಮಗ್ಲಿಂಗ್​​ ಆರೋಪದಡಿ ಬಂಧಿಸಿದ್ದ ಡಿಆರ್‌ಐ ಅಧಿಕಾರಿಗಳು, ಅವರಿಂದ…

Read More

ಬೆಂಗಳೂರು : ಕೋರ್ಟ್ ಗೆ ಹಾಜರಾಗುವವರೆಗೂ ನನಗೆ ಊಟ ಕೊಟ್ಟಿಲ್ಲ. ನನಗೆ ಸರಿಯಾಗಿ ನಿದ್ರೆ ಮಾಡೋಕೆ ಬಿಟ್ಟಿಲ್ಲ. ಅಧಿಕಾರಿಗಳು ಉದ್ದೇಶಪೂರ್ವಗಾವಿ ಹೀಗೆ ಮಾಡಿದ್ದಾರೆ. ನನಗೆ ಹಿಂಸೆ ಕೊಟ್ಟಿದ್ದಲ್ಲೇ ಕಣ್ಣೀರು ಬರುವಂತೆ ಹೊಡೆದ್ರು. ನನ್ನ ತಂದೆ, ಕುಟುಂಬದವರನ್ನ ಕೂಡ ಬೆದರಿಸುತ್ತಿದ್ದರು. ಅಧಿಕಾರಿಗಳ ವಿರುದ್ಧ ದೂರಿನಲ್ಲಿ ನಟಿ ರನ್ಯಾ ರಾವ್ ಉಲ್ಲೇಖ ಮಾಡಿದ್ದಾರೆ. ನಟಿ ರನ್ಯಾ ರಾವ್ ಚಿನ್ನ ಸಾಗಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಡಿ ಆರ್ ಐ ಅಧಿಕಾರಿಗಳ ವಿರುದ್ಧವೇ ದೂರಿನ ಸುರಿಮಳೆ ಮಾಡಿದ್ದಾರೆ. ಅದರಲ್ಲಿ ನನ್ನ ಮುಖಕಕ್ಕೆ 10 ರಿಂದ 15 ಬಾರಿ ಹೊಡೆದಿದ್ದಾರೆ. 40 ಖಾಲಿ ಹಾಳೆಗಳಲ್ಲಿ ಸಹಿ ಮಾಡಿಸಿಕೊಂಡಿದ್ದಾರೆ. ನನ್ನ ತಂದೆಗೂ ಇದಕ್ಕೂ ಸಂಬಂಧವಿಲ್ಲ. ಆದರೂ ಬೆದರಿಕೆ ಹಾಕಿದ್ದಾರೆ. ನನ್ನ ಮೇಲೆ ಒತ್ತಡ ಹಾಕಿ, ಚಿತ್ರ ಹಿಂಸೆ ನೀಡಿದ್ದಾರೆ ಎಂದಿದ್ದಾರೆ. ನನಗೆ ಹೊಡೆದ ಅಧಿಕಾರಿಗಳನ್ನು ನಾನು ಗುರುತಿಸುತ್ತೇನೆ. ನನ್ನ ಹತ್ತಿರ ಖಾಲಿ ಹಾಳೆಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ. ಸಾಕ್ಷ್ಯ ಪತ್ರಗಳಲ್ಲಿ 50 ರಿಂದ 60 ಪುಟಗಳಲ್ಲಿ ಸಹಿ ಮಾಡಿದ್ದೇನೆ.…

Read More

ರಾಯಚೂರು : ಹೋಳಿ ಹಬ್ಬ ಆಚರಣೆ ಬಳಿಕ ಸ್ನಾನಕ್ಕೆಂದು ಕೆರೆಗೆ ತೆರಳಿ ನಾಪತ್ತೆಯಾಗಿದ್ದ ಇಬ್ಬರು ಶವವಾಗಿ ಪತ್ತೆಯಾಗಿರುವ ಪ್ರತ್ಯೇಕ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಮೊದಲನೇ ಘಟನೆ ರಾಯಚೂರು ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೊದಲನೇ ಘಟನೆ ಸುಲ್ತಾನಪುರ ಗ್ರಾಮದಲ್ಲಿ ನಡೆದಿದ್ದು, ಸ್ನಾನಕ್ಕೆಂದು ಹೊಂಡಕ್ಕೆ ಜಿಗಿದ ಓರ್ವ ವ್ಯಕ್ತಿ ನೀರು ಪಾಲಾಗಿದ್ದರು. ನಾಪತ್ತೆಯಾಗಿದ್ದವರನ್ನು ಜಾಗೀರವೆಂಕಟಾಪುರ ಗ್ರಾಮದ ಸೋಮನಗೌಡ (45) ಎಂದು ತಿಳಿಯಲಾಗಿದ್ದು, ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಇನ್ನೂ ರಾಯಚೂರು ತಾಲೂಕಿನ ಆರ್‌ಡಿಎಸ್ ಕಾಲುವೆಗೆ ಸ್ನಾನಕ್ಕೆಂದು ಹೋಗಿದ್ದ ಯರಗೇರಾ ಗ್ರಾಮದ ಮಹಾದೇವ (30) ನಾಪತ್ತೆಯಾಗಿದ್ದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸಿತ್ತು.ಶನಿವಾರ ಬೆಳಿಗ್ಗೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಟಾ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದು ವಿದೇಶಗಳಿಂದ ಚಿನ್ನ ತರುವುದು ಹಾಗೂ ಡ್ರಗ್ಸ್ ತರುವುದು ಹೊಸದೇನಲ್ಲ ಬಿಡಿ. ಈ ಕುರಿತು ಕೇಂದ್ರದ ಇಂಟಲಿಜೆನ್ಸ್ ಸಂಸ್ಥೆ ಇದೆ ತನಿಖೆ ನಡೆಸುತ್ತಿದೆ 15 ದಿನದಲ್ಲಿ ಎಲ್ಲವೂ ಹೊರ ಬರಲಿದೆ ಎಂದು ತಿಳಿಸಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ಚಿನ್ನ ತರೋದು ಡ್ರಗ್ಸ್ ತರೋದು ಹೊಸದೇನು ಅಲ್ಲ. ಫೋನ್ ಮಾಡಿ ಬಿಡಿ ಅಂತ ನಾವು ಹೇಳುತ್ತೇವೆ. ಬಿಜೆಪಿಯವರು ಹೇಳುತ್ತಾರೆ. ಇಂತಹ ಪ್ರಕರಣದಲ್ಲಿ ರಾಜಕಾರಣಿ ಅಧಿಕಾರಿಗಳ ಮಕ್ಕಳು ಸಿಕ್ಕಿದ್ದಾರೆ ಎಂದು ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ರಾಜಕಾರಣಿ ಮಕ್ಕಳಿ ಅಧಿಕಾರಿಗಳ ಮಕ್ಕಳು ಇರೋದು ಸಹ ಹೊಸದಲ್ಲ. ಇನ್ನು 15 ದಿನ ಕಾಯಿರಿ ಎಲ್ಲವೂ ಹೊರಗಡೆ ಬರುತ್ತದೆ. ಕಾನೂನಲ್ಲಿ ಏನು ಶಿಕ್ಷೆ…

Read More

ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೊನೆಗೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದೆ. ಪಾಲಿಕೆಯ ನೂತನ ಮೇಯರ್ ಆಗಿ ಮಂಗೇಶ್ ಪವಾರ್ ಹಾಗೂ ಉಪಮೇಯರ್ ಆಗಿ ವಾಣಿವಿಲಾಸ್ ಜೋಶಿ ಅವರು ಆಯ್ಕೆಯಾಗಿದ್ದಾರೆ. ಬೆಳಗಾವಿಯ ನೂತನ ಮೇಯರ್ ಆಗಿ ಮಂಗೇಶ್ ಪವಾರ್, ಉಪ ಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿ ಕೈ ಎತ್ತುವ ಮೂಲಕ ಆಯ್ಕೆಗೆ ಅವಕಾಶ ನೀಡಿದ್ದರು. ಮಂಗೇಶ್ ಪರವಾಗಿ 40 ಮತಗಳು ವಿರುದ್ಧವಾಗಿ 5 ಮತಗಳು ಚಲಾವಣೆ ಆಗಿವೆ. ಅದೇ ರೀತಿ ವೀಣಾ ಪರವಾಗಿ 40 ಹಾಗು ವಿರುದ್ಧವಾಗಿ 19 ಮತಗಳು ಚಲಾವಣೆ ಆಗಿವೆ. ಮೂರನೇ ಅವಧಿಗೆ ಮೇಯರ್ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಇದೀಗ ಬೆಳಗಾವಿಯ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತೀವ್ರ ಮುಖಭಂಗ ಆಗಿದ್ದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಜಯಭೇರಿ ಬಾರಿಸಿದೆ. ಸದಸ್ಯತ್ವ ರದ್ದಾದರು ಬಿಜೆಪಿಗೆ ಗೆಲುವು ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದಿದ್ದಕ್ಕೆ…

Read More

ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಟಾ ಮಾಡಿದ ಪ್ರಕರಣದಲ್ಲಿ ಸದ್ಯ ನಟಿ ರನ್ಯ ರಾವ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದೀಗ ನಟಿ ರನ್ಯಾರಾವ್ ಕಾರು ಚಾಲಕ ದೀಪಕ ಕೂಡ ಅರೆಸ್ಟ್ ಆಗಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರು ಕಾರು ಚಾಲಕ ದೀಪಕ್ ನನ್ನು ಅರೆಸ್ಟ್ ಮಾಡಿದ್ದಾರೆ. ನಟಿ ರನ್ಯಾ ರಾವ್ ಕಾರು ಚಾಲಕನಾಗಿದ್ದಂತಹ ದೀಪಕ್, ಹಲವು ಜನರ ಬಳಿ ಶೇರು ಮಾರುಕಟ್ಟೆಯಲ್ಲಿ ಹಣ ಡಬಲ್ ಮಾಡುವುದಾಗಿ ಹೇಳಿ ಅವರಿಂದ ಹಣ ಪಡೆದು ವಂಚನೆ ಎಸಗಿದ್ದ. ಈ ಕುರಿತು ಜನರು ದೂರು ನೀಡಿದ್ದರು. ಜನರಿಂದ ಹಣ ಪಡೆದು ಆರು ತಿಂಗಳಿನಿಂದ ರನ್ಯಾರಾವ್ ಕಾರು ಚಾಲಕ ದೀಪಕ್ ನಾಪತ್ತೆಯಾಗಿದ್ದ. ಇದೀಗ ಬೆಂಗಳೂರಿನ ಸಿಸಿಬಿ ಪೊಲೀಸರು ದೀಪಕ್ ನಾನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Read More

ಆಂಧ್ರಪ್ರದೇಶ : ಇಬ್ಬರು ಮಕ್ಕಳು ಶಾಲೆಯ ಫೀಸ್ ಕಟ್ಟೋಕೆ ಆಗದೆ ಪಾಪಿ ತಂದೆಯೊಬ್ಬ, ಮಕ್ಕಳಿಬ್ಬರನ್ನು ಕೊಂದು ಬಳಿಕ ಡೆತ್ ನೋಟ್ ಬರೆದಿಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ ನಡೆದಿದೆ. ಮಕ್ಕಳದ ಜೋಶಿಲ್ ಹಾಗು ನಿಖಿಲನ್ನು ಪಾಪಿ ತಂದೆ ಚಂದ್ರಕಿಶೋರ್ ಕೊಲೆ ಮಾಡಿದ್ದಾನೆ. ಕಳೆದ ವರ್ಷ ಇಬ್ಬರೂ ಮಕ್ಕಳಿಗೆ ಎರಡು ಲಕ್ಷ ಫೀಸ್ ಕಟ್ಟಿದ್ದರು. ಈ ವರ್ಷ ಫೀಸ್ ಕಟ್ಟಲು ಆಗದೆ ಚಂದ್ರಕಿಶೋರ್ ಒದ್ದಾಡಿದ್ದಾರೆ. ಇದೇ ವಿಚಾರಕ್ಕೆ ಮನೆಯಲ್ಲಿ ದಿನಾಲು ಗಲಾಟೆ ನಡಿತಾ ಇತ್ತು. ಇದೇ ಕೋಪಕ್ಕೆ ಮಕ್ಕಳನ್ನು ತಂದೆ ಚಂದ್ರಕಿಶೋರ್ ಕೊಲೆಗೈದಿದ್ದಾನೆ. ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ ಡೆತ್ ನೋಟ್ ಬರೆದಿದ್ದಾನೆ. ಮಕ್ಕಳಿಗೆ ಸ್ಕೂಲ್ ಫೀಸ್ ಕಟ್ಟಕ್ಕಾಗದೆ ಹೇಯ ಕೃತ್ಯ ನಡೆದಿದೆ. ಮಕ್ಕಳ ಕೈ ಮತ್ತು ಕಾಲು ಕಟ್ಟಿ ಬಕೆಟ್ ನಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ. ಪತ್ನಿಗೆ ಮಕ್ಕಳಿಗೆ ಸಮವಸ್ತ್ರ ಹೊಲಿಸಲು ಟೇಲರ್ ಬಳಿ ಕರೆದುಕೊಂಡು ಹೋಗುತೇನೆ. ನೀನು ಇಲ್ಲಿಯೇ ಇರು…

Read More

ಮೈಸೂರು : ಸಾಮಾನ್ಯವಾಗಿ ಕ್ರಿಕೆಟ್ ಆಡುವಾಗ ಎದುರು ಬದುರು ತಂಡದ ಆಟಗಾರರು ಜಗಳ ಆಡುವುದನ್ನು ನೋಡಿದ್ದೇವೆ. ಇದು ಅಂತರಾಷ್ಟ್ರೀಯ ಕ್ರಿಕೆಟ್ ಗೂ ಹೊರತಾಗಿಲ್ಲ. ಆದರೆ ಇದೀಗ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ವಡ್ಡರಗುಡಿಯಲ್ಲಿ ಯುವಕನೊಬ್ಬ ಸೋಲುವ ಮ್ಯಾಚ್ ಗೆಲ್ಲಿಸಿದ್ದಕ್ಕೆ ಆತನನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹೌದು ಮೈಸೂರು ಜಿಲ್ಲೆಯ ಹೆಚ್ಡಿ ಕೋಟೆ ತಾಲೂಕಿನ ವಡ್ಡರಗುಡಿ ಗ್ರಾಮದ ದಿವ್ಯ ಕುಮಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಕಳೆದ ಫೆಬ್ರವರಿ 24 ರಂದು ಬೀಚನಹಳ್ಳಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆದಿತ್ತು. ನೇರಳೆ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು. ಜೆಪಿ ವಾರಿಯರ್ಸ್ ತಂಡದ ಪರವಾಗಿ ದಿವ್ಯ ಕುಮಾರ್ ಕ್ರಿಕೆಟ್ ಆಡಿದ್ದ. ಅಲ್ಲದೆ ಫೈನಲ್ ಪದ್ಯದಲ್ಲಿ ಕೂಡ ದಿವ್ಯ ಕುಮಾರ್ ಉತ್ತಮ ಪ್ರದರ್ಶನ ನೀಡಿ ಪಂದ್ಯ ಗೆಲ್ಲಿಸಿದ್ದ. ಡೆವಿಲ್ಸ್ ಸೂಪರ್ ಕಿಂಗ್ ತಂಡದ ವಿರುದ್ಧ ಫೈನಲ್ ಪಂದ್ಯ ನಡೆದಿತ್ತು ಪಾರ್ಟಿ ಮಾಡಿತ್ತು. ಪಾರ್ಟಿ ಮಾಡಿದ ದಿನವೇ ಆತನ ಮೇಲೆ ಹಲ್ಲೆ ನಡೆಸಲಾಗಿತ್ತು.…

Read More