Author: kannadanewsnow05

ತುಮಕೂರು : ನಿನ್ನೆ ತಾನೆ ಬೆಂಗಳೂರಿನಲ್ಲಿ ಚೀಟಿ ವ್ಯವಹಾರ ಸಂಬಂಧ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಒಂದು ಲಕ್ಷ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರು ಇನ್ಸ್ಪೆಕ್ಟರ್ ನನ್ನ ಅರೆಸ್ಟ್ ಮಾಡಿದ್ದಾರೆ. ಇದೀಗ ತುಮಕೂರಿನಲ್ಲಿ ಸಹ 40,000 ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಪಿಎಸ್ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತುಮಕೂರು ಗ್ರಾಮಾಂತರ ಠಾಣೆ ಪಿಎಸ್ಐ ಚೇತನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 40,000 ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಪಿಎಸ್ಐ ಚೇತನ್ ಕುಮಾರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪಿ ಎಸ್ ಐ ಚೇತನ್ ಕುಮಾರ್ ಕಾರ್ ಒಂದನ್ನು ವಶಕ್ಕೆ ಪಡೆದಿದ್ದರು. ಕಾರಿನಲ್ಲಿ ಅನುಮಾನಾಸ್ಪದ ವಸ್ತುವಿದೆಯೆಂದು ಪಿಎಸ್ಐ ಚೇತನ್ ಕುಮಾರ್ ಅದನ್ನು ಠಾಣೆಗೆ ತಂದಿದ್ದಾರೆ. ಬಳಿಕ ಕಾರು ಬಿಡದೆ ಪ್ರಕರಣವನ್ನು ಸಹ ದಾಖಲಿಸದೆ 40,000 ಇಲಾಖೆ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರು ಮೂಲದ ವ್ಯಕ್ತಿಯ ಬಳಿ ಚೇತನ್ ಕುಮಾರ್ ಹಣಕ್ಕೆ ಬೇಡಿಕೆ ಇಟ್ಟಿದ್ದ.…

Read More

ಬೆಂಗಳೂರು : ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣವು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಬೆಂಗಳೂರಿನ ಅಶೋಕನಗರ ಪೊಲೀಸರು ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಐಟಿ ದಾಳಿಗೆ ಹೆದರಿ ನಡೆಸಿದ ಕೃತ್ಯವೇ ಎಂಬ ಪ್ರಶ್ನೆ ಮೂಡಿದೆ. ಸರಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಈಗಾಗಲೇ ಹೇಳಿದ್ದಾರೆ. ಡಿಜಿ ಮತ್ತು ಐಜಿಪಿ ಸಲೀಂ ಅವರು ಕಮಿಷನರ್​ರಿಂದ ಮಾಹಿತಿ ಪಡೆದಿದ್ದಾರೆ. ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವ ಸಾಧ್ಯತೆಯಿದೆ. ಸಾವಿರಾರು ಕೋಟಿ ಮೌಲ್ಯದ ಉದ್ಯಮ ಸಾಮ್ರಾಜ್ಯವನ್ನು ಹೊಂದಿದ್ದ ರಾಯ್ ಅವರ ಈ ಹಠಾತ್ ನಿಧನಕ್ಕೆ ಕಾರಣ ಏನೆಂದು ಸ್ಪಷ್ಟವಾಗಿಲ್ಲ.

Read More

ಬೆಂಗಳೂರು : ಇತ್ತೀಚಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇದೀಗ, ಬೆಂಗಳೂರಿನಲ್ಲಿ ಮಹಿಳೆಯ ಮೇಲೆ ಭೀಕರವಾಗಿ ಸಾಕು ನಾಯಿಯೊಂದು ದಾಳಿ ಮಾಡಿದ್ದು ಮಹಿಳೆಯ ಮುಖ ತಲೆ ಕುತ್ತಿಗೆ ಸೇರಿ 50ಕ್ಕೂ ಸ್ಟಿಚ್ ಹಾಕಲಾಗಿದೆ. ಜನವರಿ 26ರಂದು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ಈ ಮಹಿಳೆಯ ಮೇಲೆ ದಾಳಿ ಮಾಡಿದೆ. ಮಹಿಳೆ ಬೆಳಿಗ್ಗೆ ವಾಕಿಂಗ್ ಹೋಗುವಾಗ ರಸ್ತೆ ಬದಿಯಲ್ಲಿ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಅಲ್ಲಿಯದ ಒಬ್ಬ ವ್ಯಕ್ತಿ ಸಹಾಯ ಸಹಾಯಕ್ಕೆ ಬರುತ್ತಾರೆ. ಆದರೂ ಕೂಡ ನಾಯಿ ಅಟ್ಯಾಕ್ ಮಾಡೋದನ್ನ ನಿಲ್ಲಿಸಲ್ಲ. ಅಮರೇಶ್ ರೆಡ್ಡಿ ಎನ್ನುವವರಿಗೆ ಸೇರಿದ ಸಾಕೋ ನಾಯಿ ಅಟ್ಯಾಕ್ ಮಾಡಿದ್ದು ಬಿಡಿಸಲು ಬಂದ ವ್ಯಕ್ತಿಯ ಮೇಲು ಕೂಡ ದಾಳಿ ಮಾಡಿದೆ. ಸದ್ಯ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಕುತ್ತಿಗೆ ತಲೆ ಹಾಗೂ ಮುಖಕ್ಕೆ ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ. ನಾಯಿಯ ಮಾಲೀಕರ ವಿರುದ್ಧ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ…

Read More

ತುಮಕೂರು : ಮಾಜಿ ಸಂಸದೆ ಹಾಗೂ ಹಿರಿಯ ನಟಿ ಬಿ ಜಯಶ್ರೀ ಅವರನ್ನು ಭೂಮಾಪನ ಇಲಾಖೆ ಅಧಿಕಾರಿ ಒಬ್ಬ ಅಲೆದಾಡಿಸಿದ ಘಟನೆ ವರದಿಯಾಗಿದೆ. ಸರ್ವೆಗಾಗಿ ಬಿ.ಜಯಶ್ರೀ ಅವರನ್ನು ಅಲೆದಾಡಿಸಿದ ಘಟನೆ ವರದಿಯಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಭೂ ಮಾಪನ ಕಚೇರಿಗೆ ಬಿ ಜಯಶ್ರೀ ಅಲೆದಾಡಿದ್ದಾರೆ. ಜೀ.ವಿ ಮಾಲತಮ ಆರ್ಟ್ ಟ್ರಸ್ಟಿಗೆ ಐದು ಗುಂಟೆ ಜಮೀನು ದಾನ ಮಾಡಿದ್ದರು. ಗುಬ್ಬಿಯಲ್ಲಿ ರಂಗ ಚಟುವಟಿಕೆಗಾಗಿ 5 ಗುಂಟೆ ಜಾಗ ಕೊಟ್ಟಿದ್ದರು. ಈ ಜಾಗದ ಸರ್ವೆಗೆ ಅರ್ಜಿಯನ್ನು ಬಿ. ಜಯಶ್ರೀ ಸಲ್ಲಿಸಿದ್ದಾರೆ.ಅರ್ಜಿ ಶುಲ್ಕ ಕೂಡ ಮೂರುವರೆ ಸಾವಿರ ರೂಪಾಯಿ ಪಾವತಿ ಆಗಿದ್ದರೂ ಸರ್ವೇ ಆಗಿಲ್ಲ. ಕಾರಣ ಕೇಳಿದರೆ ಯಾರು ಕೂಡ ಸರಿಯಾಗಿ ಸ್ಪಂದನೆ ನೀಡಿಲ್ಲ ಎಂದು ಸರ್ವೆ ಅಧಿಕಾರಿ ವಿರುದ್ಧ ಬಿ ಜಯಶ್ರೀ ಗಂಭೀರವಾಗಿ ಆರೋಪ ಮಾಡಿದ್ದಾರೆ.

Read More

ಉಡುಪಿ : ಸಾಮಾಜಿಕ ಜಾಲತಾಣದ ಮೂಲಕ ದ್ವೇಷ ಹರಡಿದ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣೆ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಶಿಕ್ಷಕರ ಸಹಕಾರ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಉದ್ಯಮಿ ಕೆ.ನಾಗರಾಜ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಇಬ್ಬರು ಆರೋಪಗಳನ್ನು ಬ್ರಹ್ಮಾವರ ಟಾನಿಕ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಾಟ್ಸಪ್ ಗ್ರೂಪ್ ನಲ್ಲಿ ಇಬ್ಬರ ಆರೋಪಿಗಳು ವಿಡಿಯೋ ಶೇರ್ ಮಾಡಿದ್ದಾರೆ. ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ವಿಡಿಯೋ ಶೇರ್ ಮಾಡಿದ್ದಾರೆ. ಪೊಲೀಸರು ಸದ್ಯ ಇಬ್ಬರನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Read More

ವಿಜಯನಗರ : ರಾಜ್ಯದಲ್ಲಿ ಬಿಚ್ಚಿ ಬೀಳಿಸೋ ಘಟನೆ ಒಂದು ನಡೆದಿದ್ದು ಪುತ್ರನೊಬ್ಬ ತಂದೆ ತಾಯಿ ಮತ್ತು ಆತನ ಸಹೋದರಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಈ ಒಂದು ಭೀಕರ ಹತ್ಯೆ ನಡೆದಿದೆ. ತಂದೆ ತಾಯಿ ಮತ್ತು ಸಹೋದರಿ ನಾಪತ್ತೆಯಾಗಿದ್ದಾರೆ ಎಂದು ಬೆಂಗಳೂರಿನ ತಿಲಕನಗರ ಠಾಣೆಗೆ ಪುತ್ರ ಅಕ್ಷಯ್ ಎಂಬಾತ ದೂರ ನೀಡಿದ್ದಾನೆ. ವಿಚಾರಣೆಯ ವೇಳೆ ತಾನೇ ಕೊಂದಿರುವುದಾಗಿ ಮಾಹಿತಿ ನೀಡಿದ್ದಾನೆ. ಅವರನ್ನು ಕೊಂದು ಮನೆಯಲ್ಲಿ ಹೂತು ಹಾಕಿದ್ದಾಗೆ ಒಮ್ಮೆ ಹೇಳಿದರೆ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಮನೆಯಲ್ಲಿ ಹೂತು ಹಾಕಿದ್ದಾಗೆ ಹೇಳಿಕೆ ನೀಡಿದ್ದಾನೆ ಇನ್ನು ಮತ್ತೊಮ್ಮೆ ಸಂಡೂರಿನಲ್ಲಿ ಶವ ಎಸೆದಿರುವುದಾಗಿ ಹೇಳಿಕೆ ನೀಡಿದ್ದಾನೆ. ವ್ಯಕ್ತಿ ನೀಡಿದ ಸ್ಪಷ್ಟ ಹೇಳಿಕೆಯ ಬಗ್ಗೆ ಕೊಟ್ಟೂರು ಠಾಣೆಗೆ ಬೆಂಗಳೂರಿನ ತಿಲಕ ನಗರ ಠಾಣೆ ಪೊಲೀಸ್ರು ಮಾಹಿತಿ ನೀಡಿದ್ದಾರೆ. ತಿಲಕ ನಗರ ಠಾಣೆ ಪೋಲಿಸರ ಮಾಹಿತಿ ಆಧರಿಸಿ ಇದೀಗ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶವಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Read More

ಮೈಸೂರು : ಮೈಸೂರಿನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಡ್ರಗ್ಸ್ ತಯಾರಿಕೆ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಫ್ಯಾಕ್ಟರಿಯಲ್ಲಿ ಪೊಲೀಸರು ಶೋಧ ಮುಂದುವರಿಸಿದ್ದು, ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಶ್ವಾನ ದಳದಿಂದಲೂ ಕೂಡ ಪರಿಶೀಲನೆ ನಡೆಯುತ್ತಿದೆ. ಆರು ಪ್ರತ್ಯೇಕ ಶ್ವಾನದಳ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಪೊಲೀಸರು ಸ್ಥಳದಲ್ಲಿ ಪರಿಶೀಲನೆ ಮಾಡಿದ್ದು ಇಂಚಿಂಚು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಸ್ಥಳದಲ್ಲಿ ಡ್ರಗ್ಸ್ ತಯಾರಿಕೆ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಮಾದಕ ದ್ರವ್ಯ ಪತ್ತೆಗಾಗಿ ಆರು ಶ್ವಾನ ಬಳಸಿ ಪರಿಶೀಲನೆ ಮಾಡುತ್ತಿದ್ದಾರೆ. ಪ್ರತಿಯೊಂದು ಫ್ಯಾಕ್ಟರಿಯಲ್ಲೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಅನುಮಾನಾಸ್ಪದ ವಸ್ತುಗಳನ್ನು ಶ್ವಾನಗಳ ಮೂಲಕ ಪರಿಶೀಲಿಸುತ್ತಿದ್ದಾರೆ ಯೋಧ, ಭೈರ, ದತ್ತ, ಲಿಯೋ, ಸಿಂಬ ಹಾಗೂ ಗರುಡ ಶ್ವಾನಗಳಿಂದ ಪರಿಶೀಲನೆ ನಡೆಯುತ್ತಿದೆ.

Read More

ಕೊಡಗು : ಕಾಡಾನೆ ಜೊತೆಗೆ ಶಾಲಾ ವಾಹನ ಚಾಲಕ ಹುಚ್ಚಾಟ ನಡೆಸಿದ್ದಾನೆ. ವಿಡಿಯೋ ಮಾಡುತ್ತಿದ್ದಾಗ ಕಾಡಾನೆ ಶಾಲಾ ಬಸ್ ಅನ್ನು ಅಟ್ಟಾಡಿಸಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಲ್ದಾರಿ ಬಳಿ ಈ ಒಂದು ಘಟನೆ ನಡೆದಿದೆ. ಮಗಳ ಕೈಯಲ್ಲಿ ಚಾಲಕ ಸುನಿಲ್ ವಿಡಿಯೋ ಮಾಡಿಸಿದ್ದಾನೆ. ಆನೆ ಹಿಮ್ಮುಖವಾಗಿ ಶಾಲಾ ವಾಹನ ಚಲಾಯಿಸಿ ಹುಚ್ಚಾಟ ಮೆರೆದಿದ್ದಾನೆ. ಶಾಲಾ ಮಕ್ಕಳನ್ನು ಬಿಟ್ಟು ಬರುವಾಗ ಒಂಟಿ ಸಲಗ ಎದುರಾಗಿತ್ತು. ವಾಹನ ನಿಲ್ಲಿಸಿ ಸುನಿಲ್ ಮಗಳಿಗೆ ವಿಡಿಯೋ ಮಾಡುವಂತೆ ಸೂಚನೆ ನೀಡಿದ್ದಾನೆ. ಸಿದ್ದಾಪುರದ ಬಿಜಿಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ಬಸ್ ಇದಾಗಿದ್ದು ಚಾಲಕನ ಹುಚ್ಚಾಟಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. https://www.instagram.com/reel/DUGLkBAEmTY/?igsh=d2tqb3VkNWIxYzRz

Read More

ಬೆಂಗಳೂರು : ಪ್ರಯಾಣದ ವೇಳೆ ಬ್ಯಾಗ್ ನಲ್ಲಿ ಬಾಂಬ್ ಇದೆ ಅಂತ ಬೆದರಿಕೆ ಹಾಕಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಬೆದರಿಕೆ ಹಾಕಿದವನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ಮೂಲದ ಅಬು ಅಕಿಲ್ ಅಜರ್ ಎಂಬಾತನನ್ನ ಅರೆಸ್ಟ್ ಮಾಡಿದ್ದಾರೆ. ತಪಾಸನೆ ವೇಳೆ ಬಾಂಬ್ ಎಂದು ಬೆದರಿಕೆ ಹಾಕಿದ್ದಾನೆ. ಆರೋಪಿನ ವಶಕ್ಕೆ ಪಡೆದು ಏರ್ಪೋರ್ಟ್ ಸಿಬ್ಬಂದಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರಿನಿಂದ ಅಹ್ಮದಾಬಾದ್ ಗೆ ಅಬು ಅಖಿಲ್ ತೆರಳಲು ಏರ್ ಪೋರ್ಟ್ ಗೆ ಬಂದಿದ್ದ. ಈ ವೇಳೆ ಎರಡು ಕಡೆ ಬ್ಯಾಗ್ ತಪಾಸಣೆ ಮಾಡಿದ್ದ ಏರ್ಪೋರ್ಟ್ ಸಿಬ್ಬಂದಿ, ಬ್ಯಾಗ್ ಸಂಪೂರ್ಣ ಚೆಕ್ ಮಾಡಿದ್ದಕ್ಕೆ ಅಬು ಅಕಿಲ್ ಆಕ್ರೋಶಗೊಂಡಿದ್ದ . ಆಗ ಬ್ಯಾಗನಲ್ಲಿ ಎರಡು ಚಿಕ್ಕ ಚಿಕ್ಕ ಬಾಂಬ್ ಇದೆ ಅಂತ ಬೆದರಿಕೆ ಹಾಕಿದ್ದಾನೆ ಬೆದರಿಕ ಹಾಕಿದ್ದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನವದೆಹಲಿ : ದೆಹಲಿಯ ಪ್ರೀತಿ ವಿಹಾರ್ ಪ್ರದೇಶದಲ್ಲಿ ಭಾರಿ ಕಟ್ಟಡ ಕುಸಿತವಾಗಿದ್ದು, ಹಳೆಯ ಜಲ ಮಂಡಳಿ ಕಚೇರಿ ಬಳಿ ಕಟ್ಟಡವನ್ನು ಕುಸಿದಿದೆ. ಅದೃಷ್ಟವಶಾತ್ ಯಾವುದೇ ರೀತಿಯಾದ ಸಾವು ನೋವು ಸಂಭವಿಸಿಲ್ಲ. ಆದರೆ ಕಟ್ಟಡದಲ್ಲಿ ನಾಲ್ವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹೌದು ನವದೆಹಲಿಯ ಪ್ರೀತ್ ವಿಹಾರ್ ಪ್ರದೇಶದಲ್ಲಿ ಕಟ್ಟಡ ಕುಸಿದಿದೆ. ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ದಳ ತಿಳಿಸಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ, ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಕಳೆದ ವರ್ಷ, ನವೆಂಬರ್‌ನಲ್ಲಿ, ನವದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾದ ರಚನೆಯ ಕುಸಿತದಿಂದಾಗಿ ಮೂವರು ಪುರುಷರು ಮತ್ತು ಒಬ್ಬ ಮಹಿಳೆ ಸೇರಿದಂತೆ ನಾಲ್ವರು ಗಾಯಗೊಂಡಿದ್ದರು. ನವದೆಹಲಿಯ ಜ್ವಾಲಾ ನಗರದ ಬೀದಿ ಸಂಖ್ಯೆ 6 ರಲ್ಲಿ ಈ ಕುಸಿತ ಕಂಡುಬಂದಿದೆ. ಜ್ವಾಲಾ ನಗರದ ಘಟನೆಯ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ. ಮನೆಯ ಮೂರನೇ ಮಹಡಿಯಲ್ಲಿ ಕುಟುಂಬವು ಹಾಲ್ ನಿರ್ಮಿಸುತ್ತಿದೆ ಎಂದು ಒಬ್ಬ ಕುಟುಂಬದ ಸದಸ್ಯರು ತಿಳಿಸಿದ್ದು, ಪರಿಣಾಮವಾಗಿ, ಹೊಸದಾಗಿ ನಿರ್ಮಿಸಲಾದ ರಚನೆಯ…

Read More