Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಮೊದಲ ಪ್ರತಿಕ್ರಿಯೆ ನೀಡಿದ್ದು, ಈ ಒಂದು ಪ್ರಕರಣದಲ್ಲಿ ನನಗೆ ಯಾವ ಒತ್ತಡವು ಕೂಡ ಇಲ್ಲ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ದರ್ಶನ್ ಪ್ರಕರಣದಲ್ಲಿ ಒತ್ತಡ ಆರೋಪದ ವಿಚಾರವಾಗಿ ಮಾತನಾಡಿದ ಅವರು, ನನ್ನೊಂದಿಗೆ ಯಾರು ಮಾತಾಡಿಲ್ಲ. ನನಗೆ ಯಾವ ಒತ್ತಡ ಕೂಡ ಇಲ್ಲ. ಘಟನೆ ನಡೆದ 24 ಗಂಟೆ ಆದಮೇಲೆ ನನಗೆ ಈ ವಿಚಾರ ಗೊತ್ತಾಗಿದೆ. ವಿಷಯ ತಿಳಿದು ನಾನು ಮಾತನಾಡುತ್ತೇನೆ. ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಚಿತ್ರದುರ್ಗ : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆತನನ್ನು ಕಿಡ್ನ್ಯಾಪ್ ಮಾಡಿದ ಸ್ಥಳ ಮಹಜರಿಗಾಗಿ ಒಂದು ತಂಡ ಚಿತ್ರದುರ್ಗಕ್ಕೆ ತೆರಳಿದೆ ಎಂದು ತಿಳಿದುಬಂದಿದೆ. ಹೌದು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ, ಜಗದೀಶ್, ಅನು,ರಾಜು ಹಾಗೂ ರವಿಯಿಂದ ರೇಣುಕಾ ಸ್ವಾಮಿಯನ್ನು ಕಿಡ್ನಾಪ್ ಮಾಡಲಾಗಿತ್ತು. ಚಿತ್ರದುರ್ಗ ಮೂಲದ ಜಗದೀಶ್, ಅನು, ರವಿ ಹಾಗೂ ರಾಜು ಎಂದು ಹೇಳಲಾಗುತ್ತಿದೆ. ಚಿತ್ರದುರ್ಗದ ಚಳ್ಳಕೆರೆ ರೇಣುಕಾ ಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಆಟೋದಲ್ಲಿ ಚಿತ್ರದುರ್ಗದ ಹೊಲ ಹೊರಗೆ ಕರೆದು ಹೋಗಿದ್ದರು ಎಂದು ತಿಳಿದುಬಂದಿದೆ. ಚಿತ್ರದುರ್ಗದ ಹೊರವಲಯದಲ್ಲಿ ಆಟೋದಿಂದ ನಂತರ ರೇಣುಕಾಸ್ವಾಮಿಯನ್ನು ಕಾರಿಗೆ ಶಿಫ್ಟ್ ಮಾಡಿದ್ದಾರೆ. ಬಾಡಿಗೆಗೆ ಎಂದು ಹೇಳಿ ಕಾರು ಚಾಲಕ ರವಿಯನ್ನು ಕರೆಸಿಕೊಂಡಿದ್ದರು. ದರ್ಶನ್ ಭೇಟಿ ಮಾಡಿಸುತ್ತೇನೆ ಎಂದು ರಘು ರೇಣುಕಾ ಸ್ವಾಮಿಗೆ ನಂಬಿಸಿದ್ದ ಎನ್ನಲಾಗಿದೆ. ದರ್ಶನ್ ಭೇಟಿ ಮಾಡಲು ರೇಣುಕಾ ಸ್ವಾಮಿ ಖುಷಿಯಿಂದ ಹೋಗಿದ್ದ.ಸದ್ಯ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದು ಇನ್ನುಳಿದ ಆರೋಪಿಗಳು ನಾಪತ್ತೆಯಾಗಿದ್ದಾರೆ.
ಬೆಂಗಳೂರು : ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಇದೀಗ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ ಬೆಂಗಳೂರಿನ ಒಂದನೇ ತ್ವರಿತಗತಿ ನ್ಯಾಯಾಲಯ ಈ ಕುರಿತು ಆದೇಶ ಹೊರಡಿಸಿದೆ. ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದಡಿ ಬಿಎಸ್ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಾರ್ಚ್ ತಿಂಗಳಲ್ಲಿ ಎಫ್ಐಆರ್ ದಾಖಲಾಗಿತ್ತು. ಫೆಬ್ರವರಿಯಲ್ಲಿ ಮಗಳ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಸಂತ್ರಸ್ತೆಯ ತಾಯಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಬಿಸಿನೆಸ್ ಮ್ಯಾನ್‌ಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ಧ ಸಂತ್ರಸ್ತ ಬಾಲಕಿಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದ ಸಂದರ್ಭದಲ್ಲೇ ಪ್ರಕರಣ ಸದ್ದುಮಾಡಿತ್ತು.
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಂಡ್ಯದಲ್ಲಿ ರೈತರು ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ದರ್ಶನ್ ಹಾಗೂ ಆತನ ಗ್ಯಾಂಗನ್ನು ಗಲ್ಲು ಶಿಕ್ಷೆಗೆ ಒಳಪಡಿಸಿ ಎಂದು ಪ್ರತಿಭಟನೆ ನಡೆಸಿದರು. ಮಂಡ್ಯದಲ್ಲಿ ರೈತರು ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಎಲ್ಲಾ 13 ಆರೋಪಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು. ದರ್ಶನ್ ವಿರುದ್ಧ ಮಂಡ್ಯದಲ್ಲಿ ಸಿಡಿದೆದ್ದ ರೈತರು, ಪವಿತ್ರ ಗೌಡ ಹೆಣ್ಣು ಕುಲಕ್ಕೆ ಅವಮಾನ. ಪವಿತ್ರ ಎಂದರೆ ಅದುಕ್ಕೊಂದು ಒಳ್ಳೆಯದಂತಹ ಅರ್ಥ ಇದೆ ಅಂತ ಹೆಸರು ಇಟ್ಟುಕೊಂಡು ಇಂತಹ ನೀತಿ ಕೆಲಸ ಮಾಡಿದವರು ಇವಳು ಹೆಣ್ಣು ಕುಲಕ್ಕೆ ಅವಮಾನ ಅಯೋಗ್ಯ ದರ್ಶನ್ ಪರದೆ ಮೇಲೆ ಬರಬಾರದು ಎಂದು ಪ್ರತಿಭಟನಾ ನಿರುದ ರೈತರು ಕಿಡಿ ಕಾರ್ಯಕರ್ತರು. ಒಬ್ಬ ರೈತನ ಮಗನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ತಂದು ಕೊಲೆ ಮಾಡುತ್ತಾರೆ…
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಈಗಾಗಲೇ ಬಂದಿಸಲಾಗಿದೆ ಹೀಗಾಗಿ ನಟ ದರ್ಶನ್ ಅವರನ್ನು ಸ್ಯಾಂಡಲ್ವುಡ್ ನಿಂದ ಬ್ಯಾನ್ ಮಾಡುವಂತೆ ಈಗಾಗಲೇ ಹಲವಾರು ಸಂಘಟನೆಗಳು ಹಾಗೂ ಸಾರ್ವಜನಿಕರು ಕೂಡ ಆಗ್ರಹಿಸಿದ್ದಾರೆ ಹಾಗಾಗಿ ಇದೀಗ ಫಿಲಂ ಚೇಂಬರ್ ನಲ್ಲಿದ್ದು ದರ್ಶನ್ ಭವಿಷ್ಯ ಈ ಒಂದು ಸಭೆಯಲ್ಲಿ ನಿರ್ಧಾರವಾಗಲಿದೆ. ಈಗಾಗಲೇ ಕೊಲೆ ಕೇಸಿನಲ್ಲಿ ದರ್ಶನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಕ್ಷಣಗಳಲ್ಲಿ ಫಿಲಂ ಚೇಂಬರ್ ಸಭೆ ನಡೆಯಲಿದ್ದು, ಅಧ್ಯಕ್ಷ ಎಂ ಎನ್ ಸುರೇಶ್ ನೇತ್ರತ್ವದಲ್ಲಿ ಮಹತ್ವದ ಸಭೆ ನಡೆಯುತ್ತದೆ. ಸ್ಯಾಂಡಲ್ ವುಡ್ನಿಂದ ನಟ ದರ್ಶನ್ ಅವರನ್ನು ಬ್ಯಾನ್ ಮಾಡ್ತಾರಾ ಎಂಬ ಕುರಿತು ಕೆಲವೇ ಕ್ಷಣಗಳಲ್ಲಿ ಮಾಹಿತಿ ಹೊರಬೀಳಲಿದೆ. ಸ್ಯಾಂಡಲ್ ವುಡ್ನಿಂದ ದರ್ಶನ್ ಬ್ಯಾನಿಗೆ ಆಗ್ರಹ ಕೇಳಿ ಬರುತ್ತಿದೆ. ಸಂಘಟನೆಗಳು ಸಾರ್ವಜನಿಕರಿಂದ ಆಗ್ರಹ ಹಿನ್ನೆಲೆಯಲ್ಲಿ ಇದೀಗ ಕ್ರಮ ಜರುಗಿಸುವ ಸಾಧ್ಯತೆ ಇದೆ. ದರ್ಶನ್ ಬ್ಯಾನ್ ಬಗ್ಗೆ ಸಮಿತಿಯ ಸದಸ್ಯರು ಚರ್ಚಿಸಲಿದ್ದಾರೆ.50 ಸದಸ್ಯರ ಬದಲು 27 ಮಂದಿ ಅಷ್ಟೇ…
ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದಲ್ಲಿ ಕಬ್ಬಿಣ ಕಳ್ಳತನಕ್ಕೆ ಹೋಗಿದ್ದಾಗ ಇಬ್ಬರೂ ಕಳ್ಳರ ಮೇಲೆ ಕೂಲಿಕಾರ್ಮಿಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರಿಂದ ಘಟನೆಯಲ್ಲಿ ಓರ್ವ ಕಳ್ಳ ಸಾವನಪ್ಪಿದ್ದು ಮತ್ತು ಅವರ ಮನೆಗೆ ಗಂಭೀರವಾದಂತಹ ಗಾಯವಾಗಿರುವ ಘಟನೆ ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ. ಹೌದು ಇಬ್ಬರು ಕಳ್ಳರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಓರ್ವ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಕಬ್ಬಿಣ ಕಳ್ಳತನಕ್ಕೆ ಹೋಗಿದ್ದಾಗ ಕಳ್ಳರ ಮೇಲೆ ಹಲ್ಲೆ ನಡೆಸಲಾಗಿದೆ ಕಟ್ಟಡದಲ್ಲಿದ್ದ ಕಬ್ಬಿಣ ಕವಿಯಲು ಹೋಗಿದ್ದ ಸಲ್ಮಾನ್ ಹಾಗೂ ಸಲೀಂ ಎಂಬ ಕಳ್ಳರು ಎಂದು ತಿಳಿದುಬಂದಿದೆ. ಕೂಲಿ ಕಾರ್ಮಿಕರ ಹಲ್ಲೆಯಿಂದ ಸಲ್ಮಾನ್ (25) ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಹಲ್ಲೆಗೊಳಗಾದ ಸಲಿಂ ಸ್ಥಿತಿ ಕೂಡ ಗಂಭೀರವಾಗಿದ್ದು ತಕ್ಷಣ ಅದನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಚಿತ್ರದುರ್ಗದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಪೋಟಕ ತಿರುವು ಪಡೆದುಕೊಂಡಿದ್ದು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡುವ ಸಂದರ್ಭದಲ್ಲಿ ನಟ ದರ್ಶನವರೇ ರೇಣುಕಾ ಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದಾರೆ. ನಟ ದರ್ಶನ್ ಅವರು ರೇಣುಕಾ ಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದರಿಂದಲೇ ಆತ ಸಾವನಪ್ಪಿದ್ದಾನೆ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಹೌದು ಈ ಒಂದು ಪ್ರಕರಣಕ್ಕೆ ಇದೀಗ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದ್ದು, ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಬೆಂಗಳೂರಿನ ಆರ್ ಆರ್ ನಗರದ ಪಟ್ಟಣಗೆರೆ ಶೆಡ್ ಗೆ ಕರೆದುಕೊಂಡು ಬಂದಾಗ ನಟ ದರ್ಶನ್ ರೇಣುಕಾ ಸ್ವಾಮಿ ಮರ್ಮಾಂಗಕ್ಕೆ ಒದಿದ್ದರಿಂದಲೇ ರೇಣುಕಾ ಸ್ವಾಮಿ ಮೃತಪಟ್ಟಿದ್ದಾನೆ ಎಂದು ಮತ್ತೊಬ್ಬ ಆರೋಪಿಯಾದ ದೀಪಕ್ ಪೊಲೀಸರ ಎದುರು ಬಾಯಿಬಿಟ್ಟಿದ್ದಾನೆ ಎಂಬ ಸ್ಪೋಟಕ ಮಾಹಿತಿ ಬೆರಂಗವಾಗಿದೆ. ಈಗಾಗಲೇ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐ ವಿಟ್ನೆಸ್ ಗಾಗಿ ದೀಪಕ್ ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಹಾಗಾಗಿ ದೀಪಕ್ ಈ ಒಂದು ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದ್ದು ಕೋರ್ಟ್ ನಲ್ಲಿ ಕೂಡ ಇದೇ…
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ತಿರುವು ಪಡೆದುಕೊಂಡಿದ್ದು, ಈ ಒಂದು ಕೃತ್ಯದಲ್ಲಿ ಈಗಾಗಲೇ ಪವಿತ್ರ ಗೌಡ, ನಟ ದರ್ಶನ್ ಸೇರಿದಂತೆ 13 ಆರೋಪಿಗಳು ಜೈಲು ಪಾಲಾಗಿದ್ದಾರೆ ಇದರ ಬೆನ್ನಲ್ಲೇ ಇದೀಗ ಈ ಒಂದು ಪ್ರಕರಣದಲ್ಲಿ ಪೊಲೀಸರು ಶಮಿಲಾಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹೌದು ರೇಣುಕಾಸ್ವಾಮಿ ಕೊಲೆ ನಂತರ ಆರೋಪಿಗಳು ಪಿಎಸ್ಐಯೊಬ್ಬರಿಗೆ ಕರೆ ಮಾಡಿದ್ದರು. ಆಗ, ನಮ್ಮ ಠಾಣಾ ವ್ಯಾಪ್ತಿಯಲ್ಲಿ ಹೆಣ ಹಾಕಬೇಡಿ ಎಂದು ಪಿಎಸ್ಐ ಹೇಳಿದ್ದರು ಎನ್ನಲಾಗಿದೆ. ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಯನ್ನು ಹೊಡೆದು ಕೊಲೆ ಮಾಡಿದ ಆರೋಪ ದರ್ಶನ್ ಗ್ಯಾಂಗ್ ಮೇಲಿದೆ. ಈ ಪ್ರದೇಶದ ಬೆಂಗಳೂರಿನ ರಾಜರಾಜೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿದೆ. ಪಿಎಸ್ಐ ಬಳಿ ಚರ್ಚಿಸಿದ ನಂತರವೇ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿ ಶವವನ್ನು ಕಾಮಾಕ್ಷಿಪಾಳ್ಯಕ್ಕೆ ಶವ ಕೊಂಡೊಯ್ದು ಎಸೆದಿದ್ದರು. ಅಲ್ಲದೆ, ದರ್ಶನ್ ಮತ್ತು 13ನೇ ಆರೋಪಿ ದೀಪಕ್ನನ್ನು ಪ್ರಕರಣದಿಂದ ಬಚಾವ್ ಮಾಡಲು 5 ಕೋಟಿ ರೂಪಾಯಿಗೆ ಡೀಲ್ ನಡೆಸಲು ಮುಂದಾಗಿದ್ದರು ಎಂಬ ಆರೋಪ ಇದೀಗ…
ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಬಂಧಿಸಲಾಗಿದ್ದು ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ನೀನಾಸಂ ಸತೀಶ ಪ್ರತಿಕ್ರಿಯೆ ನೀಡಿದ್ದು, ತಪ್ಪು ಯಾರೇ ಮಾಡಿದರು ಕಾನೂನು ಪ್ರಕಾರ ಶಿಕ್ಷೆ ಆಗಬೇಕು ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಯಾರೇ ಮಾಡಿದರು ಕಾನೂನು ಪ್ರಕಾರ ಶಿಕ್ಷೆ ಆಗಬೇಕು. ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳಬಾರದು ಈ ಬಗ್ಗೆ ವಾಣಿಜ್ಯ ಮಂಡಳಿ ಕೂಡ ಸೂಕ್ತ ಕ್ರಮ ಕೈಗೊಳ್ಳಲಿದೆ ಅಂದು ಬೆಂಗಳೂರಿನಲ್ಲಿ ಸ್ಯಾಂಡಲ್ವುಡ್ ನೀನಾಸಂ ಅಶ್ವಥ್ ಹೇಳಿಕೆ ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎ1 ಆರೋಪಾಗಿರುವ ಪವಿತ್ರ ಗೌಡ ಏಟು ಆರೋಪಿ ಆಗಿರುವ ನಟ ದರ್ಶನ್ ಹಾಗೂ ಆರೋಪಿಗಳನ್ನು ಕರೆದುಕೊಂಡು ನಿನ್ನೆ ಪೊಲೀಸರು ಆರ್ ಆರ್ ನಗರದಲ್ಲಿರುವ ಪಟ್ಟಣಗೆರೆ ಶೆಡ್ ನಲ್ಲಿ ಸ್ಥಳ ಮಹಜರು ನಡೆಸಿದ್ದರು. ಇಂದು ಕೂಡ ಪೊಲೀಸರು ಆರೋಪಿಗಳ ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಪೊಲೀಸರು ಭರ್ಜರಿ ಬೇಟೆಯಾಡಿದ್ದು,ಇದೀಗ ನಕಲಿ ಆರ್‌ಎಂಡಿ ಗುಟ್ಕಾ ತಯಾರಿಕ ಜಾಲವನ್ನು ಪತ್ತೆ ಮಾಡಿದ್ದು, 7 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕೂಡ ಜಪ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೌದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಂತೇಶ್ ಮೂಲಿಮನಿ ಎಂಬುವವರ ದೂರಿನ ಮೇಲೆ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು, ಆರ್‌ಎಂಡಿ ಪಾನ್ ಮಸಾಲಾ ಮತ್ತು ಎಂ ಗೋಲ್ಡ್ ಸೆಂಟೆಡ್ ಟೊಬ್ಯಾಕೋ ಹೆಸರಿನ ಪೌಚ್ ತಯಾರಿಕೆ ಮಾಡುತ್ತಿದ್ದವರ ದಾಳಿ ಮಾಡಿ, ಏಳು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ದೆಹಲಿ, ಹೈದ್ರಾಬಾದ್, ಬೆಳಗಾವಿ ಹಾಗೂ ನಿಪ್ಪಾಣಿ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನು ಮಹಮ್ಮದ ವಶೀಮ್ ಮುನೀರ, ಹಿಮಾಯತ, ಮಹ್ಮದ್, ವಿಕಾಸ್ ಚವ್ಹಾಣ, ಸಂತೋಷ ಬಳ್ಳೋಳ್ಳೆ, ಜಹೀರ , ಇಕ್ವಾಲ್ ಎಂದು ಹೇಳಲಾಗುತ್ತಿದ್ದು,ಸುಮಾರು 30 ಲಕ್ಷ ರೂ. ಮೌಲ್ಯದ ಎಂ ಗೋಲ್ಡ್ ಸೆಂಟೆಡ್ ಟೊಬ್ಯಾಕೋ ಹಾಗೂ ಆರ್‌ಎಂಡಿ ಪಾನ್ ಮಸಾಲಾ…













