Author: kannadanewsnow05

ದಾವಣಗೆರೆ : ದಾವಣಗೆರೆಯಲ್ಲಿ ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು, ಚಿತ್ರಮಂದಿರ ಒಂದದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಈ ಒಂದು ಅಗ್ನಿ ದುರಂತದಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಈ ಬೆಂಕಿ ದುರಂತವು ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣದ ಹೃದಯ ಭಾಗದಲ್ಲಿರುವ ಗಣೇಶ್ ಚಿತ್ರಮಂದಿರದಲ್ಲಿ ಸಂಭವಿಸಿದೆ. ತಡರಾತ್ರಿ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಳಗೆ ದಟ್ಟ ಹೊಗೆ ಹಾಗೂ ಕೆಟ್ಟ ವಾಸನೆ ಬರುತ್ತಿದ್ದಂತೆ ಸ್ಥಳೀಯರು ಗಮನಿಸಿದ್ದಾರೆ. ಅಗ್ನಿ ನಂದಿಸಲು ಪ್ರಯತ್ನಿಸಿದ್ದಾರೆ. ನಂತರ, ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಹರಿಹರದಿಂದ ಅಗ್ನಿಶಾಮಕದಳದ ಸಿಬ್ಬಂದಿ ಅಗಮಿಸಿ ಅಗ್ನಿ ನಂದಿಸಿದ್ದಾರೆ. ಇದು ಪಟ್ಟಣದ ಮೊಟ್ಟ ಮೊದಲ ಚಿತ್ರಮಂದಿರ. ಕಲೆಕ್ಷನ್ ಇಲ್ಲದೇ, ಒಟಿಟಿ ಹೊಡೆತದಿಂದ ನಷ್ಟಕ್ಕೆ ಸಿಲುಕಿದ್ದ ಗಣೇಶ್ ಚಿತ್ರಮಂದಿರ ಕೆಲ ಸಮಯದ ‌ಹಿಂದೆ ಮುಚ್ಚಲ್ಪಟ್ಟಿತ್ತು. 60ರ ದಶಕದಿಂದ ಕಾರ್ಯಾರಂಭಿಸಿದ್ದ ಚಿತ್ರಮಂದಿರ, ಕೆಲ ವರ್ಷಗಳಿಂದ ಪ್ರದರ್ಶನ ಸ್ಥಗಿತಗೊಳಿಸಿತ್ತು. ಆದ್ರೀಗ ಕಟ್ಟಡಕ್ಕೆ ಹಾನಿ ಸಂಭವಿಸಿದೆ. ಅವಘಡಕ್ಕೆ ಸ್ಪಷ್ಟ ಕಾರಣ ಹಾಗೂ ನಷ್ಟದ ಅಂದಾಜು ಮೊತ್ತ ತಿಳಿದು…

Read More

ಬೆಂಗಳೂರು : ಇತ್ತೀಚಿಗೆ ಪ್ಲಾಸ್ಟಿಕ್ ನಲ್ಲಿ ತಯಾರಿಸುವಂತಹ ಇಡ್ಲಿ ಹಾಗೂ ಕಲ್ಲಂಗಡಿಯಲ್ಲಿ ಬಣ್ಣ ಹೆಚ್ಚು ಕಾಣಲು ಕೃತಕ ಬಣ್ಣ ಬಳಕೆ ಹಾಗೂ ಬೆಲ್ಲದಲ್ಲಿ ಸಹ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಾನಿಕಾರಕ ಅಂಶಗಳು ಪತ್ತೆಯಾಗಿದ್ದವು. ಇದೀಗ ಹೆಣ್ಣು ಮಕ್ಕಳ ಅಚ್ಚುಮೆಚ್ಚು ಆಗಿರುವಂತಹ ಮಲ್ಲಿಗೆ ಹೂವಿನಲ್ಲಿ ಕೂಡ ಇದೀಗ ಕೆಮಿಕಲ್ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೌದು ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಮಲ್ಲಿಗೆ ಹೂವೆಂದರೆ ಪಂಚಪ್ರಾಣ.ಎಷ್ಟೇ ದೊಡ್ಡದಾದ ಸಭೆ, ಸಮಾರಂಭಗಳಿರಲಿ ಯಾವುದೇ ಒಂದು ಕಾರ್ಯಕ್ರಮವಿರಲಿ ಮಹಿಳೆಯರು ಮಲ್ಲಿಗೆ ಹೂವು ಮುಡಿದುಕೊಳ್ಳುವುದನ್ನು ಮಾತ್ರ ಮರೆಯಲ್ಲ. ಇದೀಗ ಮಲ್ಲಿಗೆ ಹೂ ಬಾಡದಿರಲಿ ಅಂತ ಬಳಸುವ ಕೆಮಿಕಲ್ ಹೆಣ್ಣುಮಕ್ಕಳಿಗೆ ಕಂಟಕ ಎಂಬ ಅಘಾತಕಾರಿ ಮಾಹಿತಿ ಬಯಲಾಗಿದೆ. ಮಲ್ಲಿಗೆ ಹೂವಿನ ಮೇಲೂ ಈ ಕೃತಕ ಬಣ್ಣ ಬಳಕೆಯ ಕರಾಳತೆ ಬಯಲಾಗಿದ್ದು, ಹೂ ಬಾಡದಿರಲಿ ಅಂತ ಬಳಸುವ ಈ ಕೃತಕ ಬಣ್ಣ, ಆರೋಗ್ಯದ ಮೇಲೆ ದಷ್ಪರಿಣಾಮ ಬೀರಲಿದೆ ಅನ್ನೋ ವರದಿ ಬೆಚ್ಚಿ ಬೀಳಿಸಿದೆ. ಹೂ ಬಾಡದಿರಲಿ ಅಂತ ಕೆಮಿಕಲ್ ಬಳಕೆ…

Read More

ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಮಾಡಿದ 40 ಶೇಕಡ ಕಮಿಷನ್‌ ಆರೋಪದ ಕುರಿತು ತನಿಖೆ ನಡೆಸಲು ನೇಮಿಸಲಾಗಿದ್ದ ನ್ಯಾಯಮೂರ್ತಿ ಹೆಚ್‌.ಎನ್‌ ನಾಗಮೋಹನ್‌ದಾಸ್ ವಿಚಾರಣಾ ಆಯೋಗ, ತನ್ನ ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಈ ವಿಚಾರವಾಗಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ 40 ಪರ್ಸೆಂಟ್ ಕಮಿಷನ್ ನಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರು ಈಗ 60 ರಿಂದ 80 ಪರ್ಸೆಂಟ್ ದಾಟಿದೆ ಎಂದು ಹೇಳುತ್ತಿದ್ದಾರೆ ಮಾನ್ಯ ಮುಖ್ಯಮಂತ್ರಿಗಳೇ ಅಂಗೈ ಹುಣ್ಣಿಗೆ ಕನ್ನಡಿ ಬೇಡ 60% ಕಮಿಷನಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಹೋಗುತ್ತಿದೆ? ಇದು ನಮ್ಮ ಆರೋಪವಲ್ಲ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ NOC ಗೆ 20% ಕೊಡಬೇಕು. ದಲ್ಲಾಳಿ ಅಧಿಕಾರಿಗಳಿಗೆ ಎಷ್ಟು ಪರ್ಸೆಂಟ್ ಕೊಡಬೇಕು? ನೀವು ಪ್ರಾಮಾಣಿಕರಾಗಿದ್ದರೆ ಕ್ರಮ ಕೈಗೊಳ್ಳಿ. 40% ಕಮಿಷನ್ ವಿರುದ್ಧ ಕ್ರಮ ಕೈಗೊಳ್ಳದಂತೆ ನಿಮ್ಮನ್ನು ಯಾರು ತಡೆದಿದ್ದಾರೆ? ತಪ್ಪಿತಸ್ಥರು…

Read More

ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗೆ SEP-TSP ಹಣವನ್ನು ಬಳಸಲಾಗುತ್ತಿದೆ ಎಂದು ಕಳೆದ ಹಲವು ದಿನಗಳಿಂದ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಆರೋಪ ಮಾಡಿದ್ದು, ಈ ವಿಚಾರವಾಗಿ ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಕುರಿತು ಚರ್ಚೆ ನಡೆಸಲಾಯಿತು ಈ ಕುರಿತು ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದರು. ಕಾಡಿನಲ್ಲಿ ಪ್ರಾಣಿಗಳನ್ನು ಕಾಯುವ ಜನರಿಗೆ ಎಸ್ ಸಿ, ಎಸ್ ಟಿ ಹಣ ಬಳಸಿದ್ದಾರೆ ಎಂದು ಅಶೋಕ್ ಹೇಳಿದಾಗ ಅಲ್ಲಿ ಎಸ್ ಸಿ ಎಸ್ ಟಿ ಸಮುದಾಯದವರಿದ್ದಾರೆ ಹಾಗಾಗಿ ಅವರಿಗೆ ಕೊಟ್ಟಿದ್ದಾರೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು. ಈ ವೇಳೆ ಕಾಡಿನಲ್ಲಿನೂ ಲಿಂಗಾಯತ, ದಲಿತ, ಬ್ರಾಹ್ಮಣ ಹುಲಿಗಳು ಇವೆಯಾ ಎಂದು ಹುಲಿ ದಾಳಿ ಮಾಡುವ ರೀತಿ ಅನುಕರಣೆ ಮಾಡಿ ಸ್ಪೀಕರ್ ಕಾಲೆಳೆದ ಶಾಸಕ ಯತ್ನಾಳ್, ಸ್ಪೀಕರ್ ತಮ್ಮ ಮಾತನ್ನು ವಾಪಸ್ ಪಡೆಯುತ್ತೇನೆ ಅಂದರು ಬಿಡದೆ ಶಾಸಕ ಯತ್ನಾಳ್ ಮಾತನಾಡಿದರು. ಕೊನೆಗೆ ಸ್ಪೀಕರ್ ಯುಟಿ ಖಾದರ್ ಯತ್ನಾಳ್ ಅವರಿಗೆ ಕೈ ಮುಗಿದರು.

Read More

ಕಲಬುರ್ಗಿ : ಮನೆ ಇಲ್ಲದವರಿಗೆ ಸರ್ಕಾರದಿಂದ ಮಂಜೂರಾದ ಮನೆಗಳನ್ನು ಹಂಚಲಾಗುತ್ತದೆ. ಆದರೆ ಈ ಒಂದು ಮನೆಗಾಗಿ ಮಹಿಳೆಯೊಬ್ಬರು ಗ್ರಾಮ ಪಂಚಾಯತ್ ಸದಸ್ಯನ ಬಳಿಗೆ ಮನೆ ನೀಡಿ ಎಂದು ಮನವಿ ಮಾಡಿದಾಗ, ಮೊದಲು ಆತ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಬಳಿಕ ಹಣದ ಬದಲು ನೀನು ಬಾ ಇಲ್ಲ ನಿನ್ನ ಮಗಳನ್ನು ಕಳಿಸು ಎಂದು ಮಂಚಕ್ಕೆ ಕರೆದು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಹೌದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದಲ್ಲಿ ಮನೆ ಕೇಳಲು ಬಂದ ಮಹಿಳೆಗೆ ಮರಗುತ್ತಿ ಗ್ರಾಮ ಪಂಚಾಯತಿ ಸದಸ್ಯ ನೀಲಕಂಠ ರಾಠೋಡ್ ಮಂಚಕ್ಕೆ ಕರೆದಿದ್ದಾನೆ. ಪಂಚಾಯತಿ ಮನೆ ಮಾಡಿಸಿಕೊಡುತ್ತೇನೆ ನನ್ನ ಜೊತೆ ಮಲಕೋ. ನೀನು ಬರಲಿಲ್ಲ ಅಂದ್ರೆ ನಿನ್ನ ಮಗಳನ್ನಾದರೂ ಕಳಿಸು ಎಂದಿದ್ದಾನೆ. ಈ ಸಂಬಂಧ ಮಹಿಳೆ, ನೀಲಕಂಠ ರಾಠೋಡ್ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮಳಸಾಪುರ ಗ್ರಾಮದ ಮಹಿಳೆ ಮನೆ ಮಾಡಿಸಿಕೊಡಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ನೀಲಕಂಠಗೆ ಮನವಿ…

Read More

ಬೆಂಗಳೂರು : ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಸಮಾವೇಶ ಮಾಡುತ್ತೇವೆ. ವೀರಶೈವ ಲಿಂಗಾಯತ ಸಮುದಾಯ ಯಾರ ಸ್ವತ್ತು ಅಲ್ಲ ಹಾಗಾಗಿ ಈ ಒಂದು ವೀರಶೈವ ಲಿಂಗಾಯತ ಸಮಾವೇಶಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬರಬಹುದು ಎಂದು ಬಿಜೆಪಿಯ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿದರು. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯ ಒಗ್ಗೂಡಿಸಲು ಸಮಾವೇಶ ಆಯೋಜನೆ ಮಾಡಲಾಗಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮಾವೇಶ ನಡೆಸಲು ನಿರ್ಧಾರ ಮಾಡಲಾಗಿದೆ. ವೀರಶೈವ ಲಿಂಗಾಯತ ಸಮಾವೇಶಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಬರಬಹುದು ಎಂದರು. ವೀರಶೈವ ಲಿಂಗಾಯತ ಸಮುದಾಯ ಯಾರ ಸ್ವತ್ತು ಅಲ್ಲ. ಈ ಒಂದು ಸಮಾವೇಶದಿಂದ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲ. ನಾನು ಈ ಹಿಂದೆ ಬೇರೆಯವರ ಮಾತು ಕೇಳಿ ಹಿನ್ನಡೆ ಅನುಭವಿಸಿದ್ದೇನೆ. ಬಸನಗೌಡ ಪಾಟೀಲ್ ಯತ್ನಾಳ್ ಈ ರೀತಿ ಮಾಡೋಕೆ ಹೋಗಬಾರದು. ವೀರಶೈವ ಲಿಂಗಾಯತ ಸಮಾವೇಶಕ್ಕೆ ಶಾಸಕ ಯತ್ನಾಳ್ ಬರಬೇಕು…

Read More

ಮೈಸೂರು : ಕಳೆದ ಮಾರ್ಚ್ 5 ರಂದು ಮೈಸೂರಲ್ಲಿ ವೃದ್ದೆಯೊಬ್ಬರ ಸಾವಾಗಿತ್ತು. ಆದರೆ ವೃದ್ದೆಯ ಮಗ ತಾಯಿಯ ಸಾವಿನ ಕುರಿತು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಶಾಕ್ ಆಗಿದೆ. ಏಕೆಂದರೆ ವೃದ್ದೆಯ ಸ್ನೇಹಿತೆನೆ ಆಕೆಯ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹೌದು ಮೈಸೂರು ವೃದ್ದೆಯ ಮರ್ಡರ್ ಬೆಚ್ಚಿ ಬೀಳಿಸುತ್ತೆ. ಕೊಟ್ಟ ಸಾಲ ಕೇಳಿದಕ್ಕೆ ಎದೆ ಮೇಲೆ ಕುಳಿತು ವೃದ್ದೆಯ ಉಸಿರುಗಟ್ಟಿಸಿ ಹತ್ಯೆಗೈಯ್ಯಲಾಗಿದೆ. ಈ ಕುರಿತು ಮೈಸೂರು ಜಿಲ್ಲಾ ಪೊಲೀಸ್ ಆಯುಕ್ತೆ ಸಿಮಾ ಲಾಟ್ಕರ್ ಸ್ಪೋಟಕವಾದ ಮಾಹಿತಿ ನೀಡಿದ್ದಾರೆ. ಕೊಲೆ ಮಾಡಿದ್ದಾಗಿ ಆರೋಪಿ ಶಕುಂತಲಾ ತಪ್ಪು ಒಪ್ಪಿಕೊಂಡಿದ್ದಾಳೆ.ಸದ್ಯ ಆಕೆಯನ್ನು ಜೈಲಿಗೆ ಅಟ್ಟಲಾಗಿದೆ. ಶಕುಂತಲಾ ಗೆ 2.5 ಲಕ್ಷ ಸಾಲ ಕೊಟ್ಟಿದ್ದ ಮೃತ ಸುಲೋಚನಾ ಮಾರ್ಚ್ 5 ರಂದು ಸಾಲ ಕೇಳಲು ಶಕುಂತಲಾ ಮನೆಗೆ ತೆರಳಿದ್ದಾಳೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯ ಗಲಾಟೆ ಆಗಿದೆ. ಗಲಾಟಿ ನಂತರ ಶಕುಂತಲಾ ಉಸಿರು ಕಟ್ಟಿಸಿ ಸುಲೋಚನಾಳನ್ನು…

Read More

ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಟಿ ರನ್ಯಾ ರಾವ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ರನ್ಯಾ ರಾವ್ ಮನೆಯ ಮೇಲೆ ಇಡಿ ದಾಳಿ ಮಾಡಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ಆದರೆ ನಟಿ ರನ್ಯಾ ರಾವ್ ಪತಿಗು ಡಿ ಆರ್ ಐ ಶಾಕ್ ನೀಡಿದೆ. ಹೌದು ರನ್ಯಾ ಪತಿ ಜತಿನ್ ನಿವಾಸ ಸೇರಿದಂತೆ ಒಟ್ಟು 9 ಕಡೆ DRI ದಾಳಿ ನಡೆಸಿದೆ. ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿನ ಫ್ಲ್ಯಾಟ್ ಸೇರಿದಂತೆ 9 ಸ್ಥಳಗಳಲ್ಲಿ ದಾಳಿ ನಡೆಸಿದೆ. ಅಲ್ಲದೇ ರನ್ಯಾ ರಾವ್ ವಿದೇಶಿ ಪ್ರಯಾಣಕ್ಕೆ ಫ್ಲೈಟ್ ಟಿಕೆಟ್ ಬುಕ್ ಮಾಡಲು ಜತಿನ್ ಕ್ರೆಡಿಟ್ ಕಾರ್ಡ್ ಬಳಸಿದ್ದ ಹಿನ್ನೆಲೆಯಲ್ಲಿ DRI ದಾಳಿ ನಡೆಸಿದೆ.

Read More

ಬೆಂಗಳೂರು : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣದಲ್ಲಿ ನಟಿ ರನ್ಯಾರಾವ್ ಈಗಾಗಲೇ ಜೈಲು ಪಾಲಾಗಿದ್ದಾರೆ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರನ್ಯಾ ಅವರ ಬಾಯ್ ಫ್ರೆಂಡ್ ಆಗಿರುವ ತರುಣ್ ರಾಜು ಮೇಲು ಇದೀಗ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೌದು ಇಂದು ಇಡಿ ಅಧಿಕಾರಿಗಳು ಬೆಂಗಳೂರಿನ ಲ್ಯಾವೆಲ್ಲಿ ಮೆನ್ಷನ್ ಅಪಾರ್ಟ್ಮೆಂಟಲ್ಲಿ ಇಡೀಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇದೀಗ ಆಕೆ ಬಾಯ್ ಫ್ರೆಂಡ್ ಆಗಿದ್ದ ತರುಣ ರಾಜು ನಿವಾಸದ ಮೇಲು ಇಡಿ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ತರುಣ್ ರಾಜು ಯಾರು? ನಟಿ ರನ್ಯಾ ರಾವ್ ಅವರು ಟಾಲಿವುಡ್ ನಟ ತರುಣ್ ಎಂಬುವರು ಬಾಯ್ ಫ್ರೆಂಡ್ ಎಂಬುದಾಗಿ ಹೇಳಲಾಗುತ್ತಿದೆ. ತೆಲುಗು ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲು ಸಿನಿಮಾಗಾಗಿ ತನ್ನ ಹೆಸರನ್ನು ತರುಣ್ ಎಂಬುದಾಗಿ ಬದಲಿಸಿಕೊಂಡಿದ್ದನಂತೆ. ತರುಣ್ ಮೂಲ ಹೆಸರು ವಿರಾಟ್ ಕೊಂಡೂರು ರಾಜ್ ಎಂಬುದಾಗಿದೆ. 2018ರಲ್ಲಿ ತೆರೆ ಕಂಡಂತ ಪರಿಚಯಂ…

Read More

ಮೈಸೂರು : ಪತಿ ಹಾಗೂ ಆತನ ಮನೆಯವರಿಂದ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿ ಒಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಸಿಂಡೇನಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ರೇಷ್ಮಾ (25) ಎಂದು ತಿಳಿದುಬಂದಿದ್ದು, ಬರೀ ಶ್ರೀನಿವಾಸ್ ಹಿರೇ ವಿಚಾರವಾಗಿ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಕಳೆದ ಆರು ವರ್ಷಗಳ ಹಿಂದೆ ಶ್ರೀನಿವಾಸ ಹಾಗೂ ರೇಷ್ಮಾ ಅವರ ಮದುವೆ ಆಗಿತ್ತು. ಈರಯ್ಯನ ಕೊಪ್ಪಲು ನಿವಾಸಿ ಚಂದ್ರೇಗೌಡ, ಶಾಂತಮ್ಮ ದಂಪತಿಯ ಪುತ್ರಿ ರೇಷ್ಮಾ ಸಾವಿಗೆ ಪತಿ ಶ್ರೀನಿವಾಸ್ ಮತ್ತು ಆತನ ಸಹೋದರ ಶ್ರೀಧರ್, ಮಾವ ಮಾದೇಗೌಡ, ಅತ್ತೆ ಸರಸಮ್ಮ ಕಾರಣ ಎಂದು ಆರೋಪ ಕೇಳಿಬಂದಿದೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Read More