Author: kannadanewsnow05

ಹಾಸನ : ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲುಪಾಲಾಗಿದ್ದಂತ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಲಾಗಿತ್ತು. ಇಂದು ಅವರು ಜೈಲಿನಿಂದ ರಿಲೀಸ್ ಆಗಿದ್ದಾರೆ. ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಿದ್ದಾರೆ ಏನು ಎಂಬುದೆಲ್ಲ ಸ್ವಲ್ಪ ದಿನಗಳಲ್ಲಿ ಹೊರಬರಲಿದೆ ಎಂದು ತಿಳಿಸಿದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಾನೂನನ್ನು ಗೌರವಿಸಬೇಕಾಗಿರುವುದದು ಎಲ್ಲರ ಕರ್ತವ್ಯವಾಗಿದೆ. ನಾನು ಕೂಡ ಒಬ್ಬ ವಕೀಲನಾಗಿ ನ್ಯಾಯಾಂಗದ ವ್ಯವಸ್ಥೆಗೆ ತಲೆಬಾಗಲೇಬೇಕಾಗುತ್ತದೆ. ನನ್ನ ಮೇಲೆ ಗುರುತರವಾದದ್ದ ಆರೋಪ ಬಂದಿತ್ತು. ಹಾಗಾಗಿ ನಾನು ನ್ಯಾಯಾಂಗ ಬಂಧನದಲ್ಲಿದ್ದ ನಾನು ತನಿಖಧಿಕಾರಿಗಳಿಗೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡಿದ್ದೇನೆ ಎಂದರು. ಎಲ್ಲಾ ರೀತಿಯ ಆಯಾಮದ ವಿಚಾರಣೆ ಮುಗಿದಿದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಅದರ ಬಗ್ಗೆ ಹೆಚ್ಚಿಗೆ ಮಾತನಾಡುವುದು ಬೇಡ. ಆದರೆ ಒಂದು ಸತ್ಯಕ್ಕೆ ಜಯ ಇದೆ ಎಂದು ನಾವೆಲ್ಲರೂ ಅಂದುಕೊಂಡಿದ್ದೇವೆ.ಪ್ರಕರಣದ ಹಿಂದೆ ಯಾರಿದ್ದಾರೆ ಏನೂ ಎಂದು ಸ್ವಲ್ಪ ದಿನಗಳಲ್ಲಿ ಎಲ್ಲವೂ ಹೊರಬರಲಿದೆ. ಪ್ರಕರಣ ತನಿಖೆ…

Read More

ಉತ್ತರಕನ್ನಡ : ಪತ್ರಕರ್ತರು ಪ್ರಯಾಣಿಸುತ್ತಿದ್ದ ಕಾರಿನ ಕೆಳಗೆ ನಾಡಬಾಂಬ್ ಸ್ಫೋಟವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಅದೃಷ್ಟ ಪತ್ರಕರ್ತರ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಗಾಗಿ ಭಾರಿ ಅನಾಹುತವೊಂದು ತಪ್ಪಿದೆ. ಹೌದು ಇಂದು ಕಾಂಗ್ರೆಸ್ ಶಾಸಕ ಆರ್.ವಿ ದೇಶಪಾಂಡೆ ಕಾರ್ಯಕ್ರಮವೊಂದಕ್ಕೆ ಪತ್ರಕರ್ತರು ಸಂದೇಶ್ ದೇಸಾಯಿ ಎನ್ನುವವರ ಕಾರಿನಲ್ಲಿ ತೇರಳುತ್ತಿದ್ದರು. ಈ ವೇಳೆ ಕಾರಿನ ಟೈರ್ ಗೆ ಸಿಕ್ಕು ಬಾಂಬ್ ಸ್ಪೋಟವಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪತ್ರಕರ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ಇದೀಗ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದರ ಬೆನ್ನಲ್ಲೇ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳೊಂದಿಗೆ ಸಭೆ ನಗರದ ಸೂಕ್ಷ್ಮ ಪ್ರದೇಶಗಳು ಮಾತ್ರವಲ್ಲದೆ, ಎಲ್ಲಾ ಮನೆಗಳ ಸರ್ವೆ ನಡೆಸಲು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳ ಬೆನ್ನಲ್ಲೇ ಇಂದು ವಿಧಾನಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ‘ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದ್ದು, ಇಲ್ಲಿಯವರೆಗೂ ರಾಜ್ಯದಲ್ಲಿ 6187 ಪ್ರಕರಣ ದಾಖಲಾಗಿದೆ. ಇದರ ನಿಯಂತ್ರಣದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು. ಸದಾ ಮಳೆ ಬರುತ್ತಿದ್ದರೆ ಡೆಂಗ್ಯೂ ಹುಳಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಮಳೆ ಬಂದು ನಿಂತ ನೀರಿದ್ದರೆ ಅಲ್ಲಿ ಡೆಂಗ್ಯೂ ಸೊಳ್ಳೆಗಳು ರೋಗವನ್ನು ಹರಡಲು ಆರಂಭಿಸುತ್ತವೆ. ಇಂತಹ ವಾತಾವರಣದಿಂದ ರೋಗ ಹೆಚ್ಚುತ್ತದೆ. ಇನ್ನು ಕೆಪಿಎಂ ಆ್ಯಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯವಾಗಿದೆ.…

Read More

ಬಾಗಲಕೋಟೆ : ನೀವು ಯಾರನ್ನಾದ್ರೂ ಸಿಎಂ ಆದರೂ ಮಾಡಿಕೊಳ್ಳಿ ಡಿಸಿಎಂ ಆದರೂ ಮಾಡಿಕೊಳ್ಳಿ ಆದರೆ ನಮ್ಮ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಡಿ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ರಾಜ್ಯದಲ್ಲಿ ಇದೀಗ ಸಿಎಂ ಬದಲಾವಣೆ ಹಾಗೂ ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ತೀವ್ರ ಚರ್ಚೆ ನಡೆಯುತ್ತಿದೆ. ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇಳಕಲ್ ನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಟ್ಟು ಪುಣ್ಯಕಟ್ಟಿಕೊಳ್ಳಿ ಎಂದರು. ನಾವು ಮೀಸಲಾತಿಗಾಗಿ ಪಾದಯಾತ್ರೆ ಆರಂಭಿಸುವ ಮೊದಲು. ನಮ್ಮವರು ಮಂತ್ರಿ ಆಗಬೇಕು, ಮುಖ್ಯಮಂತ್ರಿ ಅಗಬೇಕು ಅಂತ ಹೇಳಿದ್ದೆವು. ಆದ್ರೆ ಈಗ ನಮಗೆ ಮಂತ್ರಿ, ಮುಖ್ಯಮಂತ್ರಿಗಿಂತ ಮೀಸಲಾತಿ ಮುಖ್ಯವಾಗಿದೆ. ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಿಕೊಡಿ ಅನ್ನೋದೇ ನಮ್ಮ ಒತ್ತಾಯ. ಆದ್ರೆ ಇದುವರೆಗೂ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಯಾರನ್ನಾದ್ರೂ ಸಿಎಂ, ಡಿಸಿಎಂ ಮಾಡಿ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಿದರೆ ಸಾಕು ಎಂದರು. ಧರ್ಮಗುರುಗಳಾದವರು ಸರ್ಕಾರದ…

Read More

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 2,500 ಕೋಟಿಗೂ ಹೆಚ್ಚು ಭೂಹಗರಣ ನಡೆದಿದೆ. ಈ ಹಗರಣವನ್ನು ಮುಚ್ಚಿಹಾಕಲು ಸಚಿವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಹಾಗಾಗಿ ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಮೈಸೂರು ನಗರ ಬಿಜೆಪಿ ಶಾಸಕ ಶ್ರೀವತ್ಸ ಒತ್ತಾಯಿಸಿದ್ದಾರೆ. ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಂದರೆ ಮುಡಾದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ನಾನು ಬೆಂಗಳೂರಿನ ನಗರಾಭಿವೃದ್ಧಿ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದೆ. ದೂರಿನನ್ವಯ ನಗರಾಭಿವೃದ್ಧಿ ಕಾರ್ಯದರ್ಶಿಗಳು ಮುಡಾಕ್ಕೆ ತನಿಖಾಧಿಕಾರಿಗಳನ್ನ ಕಳುಹಿಸಿ ಪರಿಶೀಲನೆ ನಡೆಸಿ 140ಕ್ಕೂ ಹೆಚ್ಚು ಕಡತಗಳನ್ನು ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದಾರೆ ಎಂದರು. ಮುಡಾದಲ್ಲಿ ಸೈಟ್ ಹಂಚಿಕೆ ಸೇರಿದಂತೆ ಇತರ ಎಲ್ಲಾ ಕಡೆ ಅವ್ಯವಹಾರ ನಡೆದಿದ್ದು, ಕಳೆದ 4 ವರ್ಷಗಳಲ್ಲಿ 50:50 ಸೈಟು ಹಂಚಿಕೆ ಅವ್ಯವಹಾರದಲ್ಲಿ 2,500 ಕೋಟಿಗೂ ಹೆಚ್ಚು ಅವ್ಯವಹಾರ ಆಗಿದೆ. ಇದನ್ನು ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆಗೆ ನೀಡಬೇಕು. ಮೈಸೂರು ಮುಡಾದಲ್ಲಿ…

Read More

ಕೋಲಾರ : ಕಳೆದ ವರ್ಷ ಡಿಸೇಂಬರ್ ಅಲ್ಲಿ ಕಲಬುರ್ಗಿಯಲ್ಲಿ ಹಾಸ್ಟೆಲ್ ಒಂದರಲ್ಲಿ ಅಪ್ರಾಪ್ತ ಬಾಲಕಿ ಒಬ್ಬಳು ಮಗುವಿಗೆ ಜನ್ಮ ನೀಡಿದ ಪ್ರಕರಣ ನಡೆದಿತ್ತು. ಇದೀಗ ಕೋಲಾರದಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿ ಒಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, ಕೋಲಾರ ಹೊರ ವಲಯದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ವಿದ್ಯಾರ್ಥಿಯನ್ನು ಸಹ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಕೋಲಾರ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಇದಕ್ಕೆ ಕಾರಣನಾದ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ. ಹಾಸ್ಟೆಲ್ ಅಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೇ ಇನ್ನು ಕಳೆದ ವರ್ಷದ ಅಂದರೆ 2023 ಡಿಸೆಂಬರ್​​ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಹಾಸ್ಟೆಲ್​ನಲ್ಲೇ ಮಗುವಿಗೆ ಜನ್ಮ ನೀಡಿರುವ ಪ್ರಕರಣ ಕಲಬುರಗಿಯಲ್ಲಿ ಬೆಳಕಿಗೆ ಬಂದಿತ್ತು. ಬಳಿಕ ನವಜಾತ ಮಗುವಿನೊಂದಿಗೆ ವಿದ್ಯಾರ್ಥಿಯನ್ನು ಕಲಬುರಗಿಯ ಅಮೂಲ್ಯ ಶಿಶು…

Read More

ಚಾಮರಾಜನಗರ : ಮನೆ ಮಂದಿಯಲ್ಲ ಮಂತ್ರಾಲಯದ ರಾಯರ ದರ್ಶನಕ್ಕೆ ತೆರಳಿದ್ದರು. ಆದರೆ ರಾಯರ ದರ್ಶನ ಮುಗಿಸಿಕೊಂಡು ವಾಪಸ್ಸು ಬಂದು ನೋಡಿದರೆ, ಕಳ್ಳರು ಮನೆಯ ಬೀಗ ಮುರಿದು ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಚಾಮರಾಜನಗರದ ಚನ್ನೀಪುರಮೋಳೆ ಬಡಾವಣೆಯಲ್ಲಿ ನಡೆದಿದೆ. ಹೌದು ರಾಯರ ದರ್ಶನ ಪಡೆದು ಮನೆಗೆ ವಾಪಸ್ಸಾದವರಿಗೆ ಬಿಗ್ ಶಾಕ್ ಎದುರಾಗಿದ್ದು, ಬಡಾವಣೆಯ ರಾಘವೇಂದ್ರ ಎಂಬುವವರ ಮನೆ ಆಗಿದ್ದು, ಎಲ್ಲರೂ ಮಂತ್ರಾಲಯದ ರಾಯರ ದರ್ಶನಕ್ಕೆ ಹೋಗಿದ್ದರು. ಮಂತ್ರಾಲಯದಿಂದ ಬರುವಷ್ಟರಲ್ಲಿ ಮನೆ ಬೀಗ ಒಡೆದು ಕಳ್ಳತನ ಮಾಡಿದ್ದಾರೆ. ಬೀಗ ಒಡೆದು ಕಳ್ಳತನ ಮಾಡಿದ್ದಾರೆ. ಚಿನ್ನದ ಜೊತೆಗೆ 20 ಸಾವಿರ ರೂಪಾಯಿ ನಗದು ದೋಚಿದ್ದಾರೆ. ಈ ಕುರಿತು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮನೆಯಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟುಗಳ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೂ ಸೈಟ್​ ಹಂಚಿಕೆ ಮಾಲಾಗಿದ್ದು, ಈ ಕುರಿತು ಬಿಜೆಪಿ ಶಾಸಕ ಸುನೀಲ್ ಕುಮಾರ ಪ್ರತಿಕ್ರಿಯಿಸಿದ್ದು, ನಾಳೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು. ಬೆಂಗಳೂರಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಸುನೀಲ್ ಕುಮಾರ್ ಮಾತನಾಡಿ, ಒಂದು ವರ್ಷದಲ್ಲೇ ಹಗರಣ ಮೇಲೆ‌ ಹಗರಣ ಬಯಲಿಗೆ ಬರುತ್ತಿದೆ. ವಾಲ್ಮೀಕಿ ‌ನಿಗಮ ಹಗರಣ ಬೆನ್ನಲ್ಲೇ ‌ಮುಡಾದಲ್ಲಿ ಹಗರಣ ಬಯಲಿಗೆ. ಸಿಎಂ ಉಸ್ತುವಾರಿ ‌ಜಿಲ್ಲೆಯಲ್ಲಿ‌ ಹಗರಣ ಆಗಿದ್ರೂ ಸುಮ್ಮನಿದ್ದಾರೆ. ಒಂದು ರೀತಿಯಲ್ಲಿ ಅವರ ಮನೆ ಬಾಗಿಲಲ್ಲೇ ನಡೆದಿರುವ ಹಗರಣ ಎಂದು ತಿಳಿಸಿದರು. ಸಿಎಂ ಕುಟುಂಬ ಸದಸ್ಯರಿಗೆ ಸೈಟ್ ಹಂಚಿಕೆ ಆಗಿದ್ದು ವರದಿಯಲ್ಲಿ ಸ್ಪಷ್ಟವಾಗಿದೆ. ರಾಜ್ಯದಲ್ಲಿರೋದು ಶೂನ್ಯ ಅಭಿವೃದ್ಧಿ ಸರ್ಕಾರ. ಅಧಿವೇಶನದಲ್ಲಿ ಹಗರಣದ ಬಗ್ಗೆ ಪ್ರಸ್ತಾಪಿಸ್ತೇವೆ. ಆರೋಪ ಬಂತಂದ್ರೆ ಕೇವಲ ವರ್ಗಾವಣೆ ಮಾಡೋದು ಅಷ್ಟೇ ಆಗುತ್ತಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ…

Read More

ಬೆಂಗಳೂರು : ರಾಹುಲ್ ಗಾಂಧಿ ಸತ್ಯ ದ್ವೇಷ ಹುಟ್ಟಿಸುವ ಮಾತನ್ನು ಹೇಳಿದ್ದಾರೆ. ಹೀಗೆ ಹೇಳುವುದಕ್ಕೆ ಅವರ ಕುಟುಂಬದಲ್ಲಿರುವ ಡಿಎನ್ಎ ಕಾರಣ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದೇಶದ ವಿಭಜನೆಗೆ ಸಹಿ ಹಾಕಿದ ಪಾರ್ಟಿ ಯಾವುದು? ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಲು ಯಾರು ಕಾರಣ? ಖಲಿಸ್ಥಾನ ಸಂಘಟನೆಗೆ ಶಕ್ತಿ ನೀಡಿದಂತಹ ವ್ಯಕ್ತಿ ಪಕ್ಷ ಯಾವುದು? ಭಯೋತ್ಪಾದನೆ ಚಟುವಟಿಕೆಗೆ ಶಕ್ತಿ ತುಂಬಿದ ಪಕ್ಷ ಯಾವುದು? ಸರ್ವಾಧಿಕಾರ ಏರಿದ ಪಕ್ಷ ಕಾಂಗ್ರೆಸ್ ಹಾಗೂ ಇಂದಿರಾಗಾಂಧಿ ಸಿಖ್ಖರ ಮೇಲೆ ದಾಳಿ ಮಾಡಿದ್ದು ಆರ್ ಎಸ್ ಎಸ್ ಅಲ್ಲ ಇಂದಿರಾ ಗಾಂಧಿ ಬೆಂಗಳೂರಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ವಾಗ್ದಾಳಿ ನಡೆಸಿದರು. ಮುಡಾ ಹಗರಣದ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಅಗೆದಷ್ಟು, ಬಗೆದಷ್ಟು ಹೊರಗೆ ಬರುತ್ತಿದೆ. ನನ್ನನ್ನೂ ಮಿರಿಸಿದ ಹಗರಣ ಮಾಡುತ್ತಿದ್ದಾರೆ ಎಂದು ಚಾರ್ಲ್ಸ್ ಶೋಭರಾಜ್‌ಗೂ ಅನ್ನಿಸುತ್ತಿದೆಯಂತೆ. ಅಧಿವೇಶನದಲ್ಲಿ…

Read More

ರಾಮನಗರ : ಚನ್ನಪಟ್ಟಣದ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇದೀಗ ಹೇಳಿಕೆ ಒಂದನ್ನು ನೀಡಿದ್ದು, ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಯಾರೇ ಅಭ್ಯರ್ಥಿಯಾದರೂ ನನ್ನ ಮುಖ ನೋಡಿ ವೋಟ್ ಹಾಕಿ ಎಂದು ಜನರಲ್ಲಿ ಮನವಿ ಮಾಡಿದರು. ಇಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾಗಿರಲಿ ಅವರಿಗೆ ನನ್ನ ಮುಖ ನೋಡಿ ಮತ ಹಾಕಿ. ಕಾಂಗ್ರೆಸ್ ಅಭ್ಯರ್ಥಿ ಯಾರೇ ಇದ್ದರೂ ನನ್ನ ಮುಖ ನೋಡಿ ಮತ ಹಾಕಿ ಎಂದು ಡಿಕೆ ಶಿವಕುಮಾರ್ ಜನರಲ್ಲಿ ಮನವಿ ಮಾಡಿದರು. ಇದೆ ವೇಳೆ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ವಿಷಯವನ್ನು ಪ್ರಸ್ತಾಪಿಸಿ ನೀವು ಉಚಿತವಾಗಿ ಬಸ್ ಕೊಟ್ಟಿದ್ದರಿಂದ ನಮ್ಮ ಮೆಟ್ರೋಗೆ ಜನಾನೇ ಬರುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ ಎಂದು ತಿಳಿಸಿದರು. ರಾಮನಗರದಲ್ಲಿ ಉಚಿತವಾಗಿ ವಿದ್ಯುತ್ ಎರಡು ಸಾವಿರ ರೂಪಾಯಿ ಮನೆಯೊಡತಿಗೆ ತಲುಪುತ್ತವೆ ಎಂದು ತಿಳಿಸಿದರು.

Read More