Author: kannadanewsnow05

ಬೆಂಗಳೂರು : ಕೇವಲ ಡಿಕೆ ಡಿಕೆ ಎಂದು ಘೋಷಣೆ ಕೂಗೋದಲ್ಲ. ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿ ಇನ್ನೊಂದು ಚಾನ್ಸ್ ಕೊಡಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರೋಕ್ಷವಾಗಿ ತಾವು ಮುಖ್ಯಮಂತ್ರಿ ಆಗುವ ಕನಸನ್ನು ಬಿಚ್ಚಿಟ್ಟಿದ್ದಾರೆ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಪಿಟಿಸಿಎಲ್ (KPTCL) ನೌಕರರ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ವೇಳೆ ಡಿಕೆ ಶಿವಕುಮಾರ್ ಭಾಷಣ ಮಾಡಲು ಬಂದ ಕೂಡಲೇ ವಿದ್ಯುತ್ ಇಲಾಖೆ ಸಿಬ್ಬಂದಿಗಳು, ನೌಕರರು ಡಿಕೆ ಡಿಕೆ ಅಂತ ಘೋಷಣೆ ಕೂಗಿದರು.ಈ ವೇಳೆ ಮಾತಾನಾಡಿದ ಡಿಕೆ ಶಿವಕುಮಾರ್ ಈಗ ಡಿಕೆ ಡಿಕೆ ಅನ್ನೋದು ಅಲ್ಲ. ಎಲೆಕ್ಷನ್ ‌ನಲ್ಲಿ ಇನ್ನೊಂದು ಸಾರಿ ಡಿಕೆ ಶಿವಕುಮಾರ್ ತಂದು ಕೂರಿಸಿದ ಮೇಲೆ ಈ ಘೋಷಣೆ ಕೂಗಿ ಎಂದರು. ತಾವು ಇಂಧನ ಇಲಾಖೆ ಸಚಿವನಾಗಿ ಇದ್ದಾಗ ಮಾಡಿದ ಸಾಧನೆ ಹೇಳಿದ್ರು. ನೀವು ಮನಸ್ಸು ಮಾಡಿದ್ರೆ ಡಿಕೆ ಶಿವಕುಮಾರ್‌ನನ್ನು ಮೇಲಕ್ಕೆ ಎತ್ತಬಹುದು. ಕೆಳಗೆ ಇಳಿಸಬಹುದು. ಅಷ್ಟು ಶಕ್ತಿ ನಿಮಗೆ ಇದೆ. ನಾವು ನಿಮಗೆ…

Read More

ಬೆಂಗಳೂರು : ಆರ್ ಎಸ್ ಎಸ್ ಬಜರಂಗದಳದ ವಿರುದ್ಧ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ 42ನೇ ACJM ಕೋರ್ಟ್ ನಲ್ಲಿ ವಕೀಲ ಅರುಣ್ ಎಂಬುವವರು ಸಲ್ಲಿಸಿದ ಖಾಸಗಿ ದೂರು ವಿಚಾರಣೆ ನಡೆಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಕೇಸ್ ಸ್ವೀಕರಿಸುವ ಮುನ್ನ ಸಿದ್ದರಾಮಯ್ಯ ವಾದ ಆಲಿಸಲು ಅವಕಾಶ ಕಲ್ಪಿಸಲಾಗಿದ್ದು, BNS ಸೆಕ್ಷನ್ 253 ಅಡಿ ಕೋರ್ಟ್ ಇದೀಗ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿದೆ. ಅತಿ ಹೆಚ್ಚು ಅಪರಾಧ ಕೃತ್ಯಗಳಾಗುತ್ತಿರುವುದೇ ಆರ್ ಎಸ್ ಎಸ್ ಮತ್ತು ಬಜರಂಗದಳದಿಂದ ಎಂದು ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ಖಂಡಿಸಿ, ಜನರ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಅಡಿ ವಕೀಲ ಕಿರಣ್ ಎಂಬುವವರು ಕೇಸ್ ದಾಖಲಿಸಿದ್ದರು. ಜೂನ್ 26ರ ಒಳಗಾಗಿ ನೋಟಿಸ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಬೇಕಾಗಿದೆ.

Read More

ಮೈಸೂರು : ಮೈಸೂರಲ್ಲಿ ಘೋರವಾದ ಘಟನೆ ನಡೆದಿದ್ದು, ಹಾಸ್ಟೆಲ್ ನಲ್ಲಿ ಬಿ ಎಸ್ ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಟೆರೇಶಿಯನ್ ಕಾಲೇಜು ಹಾಸ್ಟೆಲ್ ನಲ್ಲಿ ಜೆ ಶಖಿನಾ (20) ಆತ್ಮಹತ್ಯೆ ಶರಣಾದ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ನಿವಾಸಿ ಎಂದು ತಿಳಿದುಬಂದಿದೆ. ಇಂದು 6 ನೇ ಸೆಮಿಸ್ಟರ್ ಭೌತಶಾಸ್ತ್ರ ಪರೀಕ್ಷೆ ಬರೆಯಬೇಕಾಗಿತ್ತು. ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ

Read More

ಬೆಂಗಳೂರು : ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35,000 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಇಲಾಖೆಯ 532 ಮಂದಿ ಪೌರ ಕಾರ್ಮಿಕರ ಹುದ್ದೆ ಕಾಯಂ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಇಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ವಜ್ರ ಮಹೋತ್ಸವವನ್ನು ಉದ್ಘಾಟಿಸಿ, ವಜ್ರಜ್ಯೋತಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಹಂತ ಹಂತವಾಗಿ ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35,000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತೆ ಎಂದರು. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ನಿಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಎನ್‌ಪಿಎಸ್ ಜಾರಿ ಮಾಡಿದ್ದು ಕೇಂದ್ರ ಸರ್ಕಾರ. ನಾವು ಒಪಿಎಸ್ ಜಾರಿಯನ್ನು ಪ್ರಣಾಳಿಕೆಯಲ್ಲೇ ಘೋಷಿಸಿದ್ದೇವೆ. ಈ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. 1964ರಲ್ಲಿ ಆರಂಭವಾದ ನೌಕರರ ಸಂಘ ಇಷ್ಟು ಸುದೀರ್ಘ ಕಾಲ ನಿರಂತರವಾಗಿ ನೌಕರರ ಕಷ್ಟ ಸುಖಗಳಿಗೆ ಸ್ಪಂದಿಸಿ, ಪ್ರಾಮಾಣಿಕ ಹೋರಾಟ ನಡೆಸುತ್ತಿದೆ. ಜೊತೆಗೆ ಗ್ರಾಹಕರಿಗೆ ಸಮರ್ಪಕ ವಿದ್ಯುತ್…

Read More

ಮೈಸೂರು : 3 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಚೆಸ್ಕಾಂ ಎಇಇ ಒಬ್ಬ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿದೆ. ಚೆಸ್ಕಾಂ ವಿಜಿಲೆನ್ಸ್ ಅಧಿಕಾರಿಯಾಗಿದ್ದ ದೀಪಕ್ ಇಂದು 3 ಲಕ್ಷ್ಮ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಲೋಕಾಯುಕ್ತ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ನೇತೃತ್ವದಲ್ಲಿ ದಾಳಿ ನಡೆದಿದೆ. ಅನಧಿಕೃತ ಸಂಪರ್ಕದ ಪೆನಾಲ್ಟಿ ಹಣ ಕಡಿಮೆ ಮಾಡಲು ದೀಪಕ್ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಖಾಸಗಿ ಹೋಟೆಲ್ ನಲ್ಲಿ 3 ಲಕ್ಷ ಲಂಚ ಸ್ವೀಕರಿಸುವಾಗ ದೀಪಕ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಸದ್ಯ ದೀಪಕ್ನನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಉದೇಶ್ ಮಾರ್ಗದರ್ಶನದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದೆ.

Read More

ಬೆಂಗಳೂರು : ಲಂಚ ಪಡೆಯುವ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಲೋಕಾಯುಕ್ತ ಅಧಿಕಾರಿಯೇ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವುದು ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ ತಂದಿದೆ. ಸರ್ಕಾರಿ ನೌಕರರನ್ನು ಬೆದರಿಸಿ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿದ್ದ ಆರೋಪದ ಮೇಲೆ ಇದೀಗ ಲೋಕಾಯುಕ್ತ ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದ ಶ್ರೀನಾಥ್ ಜೋಶಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. ಹೌದು ಲೋಕಾಯುಕ್ತ ಪೊಲೀಸರಿಂದ ಶ್ರೀನಾಥ್ ಜೋಶಿಗೆ ನೋಟಿಸ್ ಜಾರಿ ಮಾಡಲಾಗಿದೆ. ಲೋಕಾಯುಕ್ತದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿರುವ ಹಿನ್ನೆಲೆಯಲ್ಲಿ ಇದೀಗ ಶ್ರೀನಾಥ್ ಜೋಶಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿದೆ. ಆದರೆ ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಶ್ರೀನಾಥ್ ಜೋಶಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಆಗಿ ಶ್ರೀನಾಜೋಷಿ ಸೇವೆ ಸಲ್ಲಿಸುತ್ತಿದ್ದರು. ನಿರೀಕ್ಷಣಾ ಜಾಮಿನ ಕೋರಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ನಾಳೆ ನಿಗದಿ ಮಾಡಿದೆ. ಇದೆ ವೇಳೆ ಲೋಕಾಯುಕ್ತ ಪೊಲೀಸರಿಗು ನೋಟಿಸ್ ನೀಡಿದೆ.

Read More

ಬೆಳಗಾವಿ : ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿದಾಗಿನಿಂದಲೂ, ಪುರುಷರಿಗೆ ಬಸ್ನಲ್ಲಿ ಕುಳಿತುಕೊಳ್ಳಲು ಸೀಟ್ ಸಿಗುವುದೇ ಅಪರೂಪ ಅಂತದರಲ್ಲಿ ಇದೀಗ ಬಸ್ ನಲ್ಲಿ ಕಿಟಕಿ ಪಕ್ಕ ಸೀಟ್ ಗಾಗಿ ಯುವಕರ ಮಧ್ಯ ಗಲಾಟೆ ನಡೆದು ಓರ್ವ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು ಪಂಚಬಾಳೇಕುಂದ್ರಿ ಗ್ರಾಮದಿಂದ ಸಿಬಿಟಿಗೆ ಬರುತ್ತಿದ್ದ ಬಸ್​ನಲ್ಲಿ ಕಿಟಕಿ ಪಕ್ಕದ ಸೀಟ್​ಗಾಗಿ ಯುವಕರ ಮಧ್ಯೆ ಗಲಾಟೆ ನಡೆದಿದ್ದು, ಓರ್ವ ಯುವಕನಿಗೆ ಚಾಕು ಇರಿಯಲಾಗಿದೆ.ಗ್ರಾಮದ ಮಜ್ಜು ಸನದಿ(20) ಎಂಬ ಯುವಕ ಎದೆ ಭಾಗಕ್ಕೆ ಯುವಕರ ಗ್ಯಾಂಗ್​ ಒಂದು ಚಾಕು ಇರಿದು ಪರಾರಿ ಆಗಿದೆ. ಹೊಟ್ಟೆಯ ಭಾಗಕ್ಕೆ ಚಾಕು ಇರಿದಿದ್ದರಿಂದ ತೀವ್ರವಾಗಿ ರಕ್ತಸ್ರಾವ ಆಗಿತ್ತು. ತಕ್ಷಣ ಗಾಯಾಳು ಯುವಕನನ್ನು ಬೆಳಗಾವಿ ಬಿಮ್ಸ್​ ಆಸ್ಪತ್ರೆ ಐಸಿಯುನಲ್ಲಿ ಮಜ್ಜುಗೆ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಡಿಸಿಪಿ ರೋಹನ್​ ಜಗದೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಬೆಂಗಳೂರು : ಬೆಂಗಳೂರಲ್ಲಿ ಘೋರ ಘಟನೆ ನಡೆದಿದ್ದು, ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂ 13ನೇ ಕ್ರಾಸ್ ನಲ್ಲಿರುವ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ. ಕಟ್ಟಡದಿಂದ ಕೆಳಗೆ ಬಿದ್ದಿದ್ದರಿಂದ ವಿದ್ಯಾರ್ಥಿನಿಯ ತಲೆಗೆ ಗಂಭೀರವಾದ ಗಾಯಗಳಾಗಿವೆ. ವಿದ್ಯಾರ್ಥಿನಿಯನ್ನು ತಕ್ಷಣ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಿಗ್ಗೆ ತಿಂಡಿ ತಿನ್ನದೇ ಬಾಲಕಿ ಶಾಲೆಗೆ ಬಂದಿದ್ದಾಳೆ ಈ ವೇಳೆ ಕಟ್ಟಡದಿಂದ ಕೆಳಗೆ ನೋಡಿದಾಗ ತಲೆ ಸುತ್ತಿ ಕಟ್ಟಡದಿಂದ ಬಿದ್ದಿದ್ದಾಳೆ ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ. ಆಸ್ಪತ್ರೆಗೆ ಸ್ಥಳೀಯ ಶಾಸಕ ಡಾ. ಅಶ್ವತ್ ನಾರಾಯಣ ಭೇಟಿ ನೀಡಿ, ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದ್ದಾರೆ.

Read More

ಬೆಂಗಳೂರು : ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ ಇದೀಗ ಮತ್ತೊಂದು ಬಲಿಯಾಗಿದೆ. ವಿದ್ಯುತ್ ಶಾಕ್ ನಿಂದ ವ್ಯಕ್ತಿ ಒಬ್ಬರು ಸಾವನ್ನಪ್ಪಿದ್ದಾರೆ. ವಿದ್ಯುತ್ ದುರಸ್ತಿ ಮಾಡುತ್ತಿದ್ದ ಜಯರಾಮ್ ಎನ್ನುವವರು ಇದೀಗ ಸಾವನಪ್ಪಿದ್ದಾರೆ. ಬೆಂಗಳೂರಿನ ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆಯಲ್ಲಿ ಈ ಒಂದು ಘಟನೆ ನಡೆದಿದೆ. ಬೆಸ್ಕಾಂ ಅಧಿಕಾರಿಗಳಿಂದ ಇದೀಗ ಮತ್ತೊಂದು ಎಡವಟ್ಟು ಸಂಭವಿಸಿದ್ದು, ಪದೇ ಪದೇ ವಿದ್ಯುತ್ ಕೈ ಕೊಟ್ಟಾಗ ಬೆಸ್ಕಾಂ ಸಿಬ್ಬಂದಿಗಳು ಮಾಡಬೇಕಾದ ಅಂತಹ ಕೆಲಸವನ್ನು ಜಯರಾಮ್ ಮಾಡಿದ್ದಾರೆ. ಆದರೆ ಜಯರಾಮ್ ಲೈಟ್ ಕಂಬ ದುರಸ್ತಿ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆ ಸಂಭಂದ ಸಾರ್ವಜನಿಕರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Read More

ಬಳ್ಳಾರಿ : ಆತನ ಬಳಿ ಸುಮಾರು 90ಕ್ಕೂ ಹೆಚ್ಚು ಇಮೇಲ್ ಐಡಿ ಇತ್ತು. 10 ನಕಲಿ ಕಾರ್ಡ್ ಗಳು ಸಹ ಇದ್ದವು ಅಲ್ಲದೇ ಕಾಮುಕನ ಮೊಬೈಲ್ ನಲ್ಲಿ 13500 ಮಹಿಳೆಯರ ಅಶ್ಲೀಲ ಫೋಟೋ ಇತ್ತು. ಹೌದು ಬಳ್ಳಾರಿಯಲ್ಲಿ ಇದೀಗ ಮೋಸ್ಟ್ ವಾಂಟೆಡ್ ಕಾಮುಕನನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತ ಆರೋಪಿಯನ್ನು ಸಂಡೂರು ಪಟ್ಟಣದಲ್ಲಿ ಖಾಸಗಿ ಕಂಪನಿಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಕಾಮುಕ ಶುಭಂ ಕುಮಾರ್ ಎಂದು ತಿಳಿದುಬಂದಿದೆ. ಬಂಧಿತ ಶುಭಂ ನಗ್ನ ವಿಡಿಯೋ ಕರೆ ಮಾಡುವಂತೆ ಮಹಿಳೆಯರಿಗೆ ಆತ ಕಿರುಕುಳ ನೀಡುತ್ತಿದ್ದ. ಒಪ್ಪದಿದ್ದಾಗ ನಕಲಿ ಖಾತೆ ಸೃಷ್ಟಿಸಿ ಮಾನ ಹಾನಿ ಮಾಡುತ್ತಿದ್ದ. ಮಹಿಳೆಯರಿಗೆ ವಿಡಿಯೋ ಕರೆ ಮಾಡಿ ಎಡಿಟ್ ಮಾಡುತ್ತಿದ್ದ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದ. ಶುಭ ಕುಮಾರ್ ನನ್ನು ಇದೀಗ ಅರೆಸ್ಟ್ ಮಾಡಲಾಗಿದೆ.ಕಳೆದ ಎರಡು ವರ್ಷದಿಂದ ಮುಂಬೈ ಪೊಲೀಸರು ಈತನ ಹಿಂದೆ ಬಿದ್ದಿದ್ದರು. ಬಂಧಿತ ಆರೋಪಿ ದೆಹಲಿಯಲ್ಲಿ ಆರೋಪಿ ಶುಭಂ ಕುಮಾರ್ ಡಿಪ್ಲೋಮಾ ಓದಿದ್ದ. ಬಳಿಕ ಬಳ್ಳಾರಿಯ…

Read More