Subscribe to Updates
Get the latest creative news from FooBar about art, design and business.
Author: kannadanewsnow05
ಕೊಪ್ಪಳ : ಉಳಿದ ಅವಧಿಗೂ ಸಿದ್ದರಾಮಯ್ಯನವರೇ ಸಿಎಂ ಆಗಿ ಇರುತ್ತಾರೆ ಅಂದರೆ ಮುಂದಿನ 2 ವರ್ಷ 8 ತಿಂಗಳು ಸಹ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಇರಲಿದ್ದಾರೆ ಎಂದು ಕೊಪ್ಪಳದಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಹಾಗೂ ಶಾಸಕರಾದ ಬಸವರಾಜ್ ರೆಡ್ಡಿ ಹೇಳಿಕೆ ನೀಡಿದರು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಸಿಎಂ ನೇತೃತ್ವದಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲ. ಹಾಗಾಗಿ ಉಳಿದ ಅವಧಿಗೂ ಸಿದ್ದರಾಮಯ್ಯನವರೇ ಸಿಎಂ ಆಗಿ ಇರುತ್ತಾರೆ ಅಂದರೆ ಮುಂದಿನ 2 ವರ್ಷ 8 ತಿಂಗಳು ಸಹ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಇರಲಿದ್ದಾರೆ ಎಂದು ಬಸವರಾಜ್ ರಾಯರೆಡ್ಡಿ ಹೇಳಿಕೆ ನೀಡಿದರು.
ಕೊಪ್ಪಳ : ಸನ್ಮಾನದ ವೇಳೆ ಸಿಎಂ ಸಿದ್ದರಾಮಯ್ಯ ಪೇಟ ಧರಿಸಲು ನಿರಾಕರಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಈ ಒಂದು ಘಟನೆ ನಡೆದಿದ್ದು, ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿ ಈ ಒಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸನ್ಮಾನದ ವೇಳೆ ಸಿಎಂ ಸಿದ್ದರಾಮಯ್ಯಗೆ ಸಚಿವರಾದ ಶಿವರಾಜ್ ತಂಗಡಗಿ ಹಾಗೂ ಶಾಸಕ ಹಿಟ್ನಾಳ್ ಪೇಟಾ ಹಾಕಲು ಹೋದಾಗ, ಸಿದ್ದರಾಮಯ್ಯ ಪೇಟಾ ಬೇಡ ಅಂತ ನಿರಾಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಅನ್ನು ಉದ್ಘಾಟಿಸಿದರು.
ಬೆಂಗಳೂರು : ಬೆಂಗಳೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಕಾರು ಹರಿದು ಒಂದುವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಮನಿ ಬಳಿ ಈ ಒಂದು ಘಟನೆ ಸಂಭವಿಸಿದ್ದು, ಬೆಳಿಗ್ಗೆ ಮನೆಯಿಂದ ಕಾರು ಹೊರ ತೆಗೆಯುತ್ತಿದ್ದ ವೇಳೆ ಈ ಒಂದು ದುರಂತ ಸಂಭವಿಸಿದೆ. ಮನೆಯ ಮಾಲೀಕ ಸ್ವಾಮಿ ಎಂಬುವವರು ಕಾರು ಹೊರ ತೆಗೆಯುತ್ತಿದ್ದ ವೇಳೆ ಮನೆ ಬಾಡಿಗೆಗೆ ಇದ್ದ ಕುಟುಂಬದ ಮಗು ಸಾವನ್ನಪ್ಪಿದೆ. ಕಾರನ್ನು ರಿವರ್ಸ್ ತೆಗೆಯುವಾಗ ಈ ಒಂದು ದುರ್ಘಟನೆ ಸಂಭವಿಸಿದೆ. ಒಂದುವರೆ ವರ್ಷದ ಮಹಮ್ಮದ್ ಉಮರ್ ಫಾರೂಕ್ ಎನ್ನುವ ಮಗು ಸಾವನ್ನಪ್ಪಿದೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಒಂದು ಮನೆಯಲ್ಲಿ ಕುಣಿಗಲ್ ನಿಂದ ಕುಟುಂಬ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಬಾಡಿಗೆ ಇದ್ದ ಸಂಬಂಧಿಕರ ಮನೆಗೆ ಮಗುವಿನ ಪೋಷಕರು ಬಂದಿದ್ದರು. ಮನೆ ಹೊರಗಡೆ ಮಹಮ್ಮದ್ ಆಟ ಆಡುತ್ತಿದ್ದ ಆಗ ಮನೆಯ ಮಾಲಿಕ ಕಾರು ರಿವರ್ಸ್ ತೆಗೆದುಕೊಳ್ಳುವಾಗ ಮಗುವಿನ ಮೇಲೆ ಕಾರು ಹರಿದು…
ಬೆಂಗಳೂರು : ಸುಪ್ರೀಂ ಕೋರ್ಟ್ ಸಿಜೆಐ ಬಿಆರ್ ಗವಾಯಿ ಮೇಲೆ ವಕೀಲ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೊಂದು ನಾಚಿಕೆಗೇಡು ವಿಷಯ ವೈಯಕ್ತಿಕವಾಗಿ ಇದನ್ನು ಧಿಕ್ಕರಿಸುತ್ತೇನೆ. ಭಾರತದಲ್ಲಿ ಎಲ್ಲಾ ಧರ್ಮಗಳು ಬಹಳ ವರ್ಷಗಳಿಂದ ಇವೆ ದೇಶ ಯಾವ ದಿಕ್ಕಿನಲ್ಲಿ ಹೋಗಬೇಕೆಂದು ಯುವಕರು ಗಮನಿಸಬೇಕು ಎಂದು ಸಂತೋಷ್ ಲಾಡ್ ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಸನಾತನ ಧರ್ಮ, ಹಿಂದೂ ಧರ್ಮ, ಕ್ರಿಶ್ಚಿಯನ್ನ ಧರ್ಮ, ಮುಸ್ಲಿಂ ಧರ್ಮ ಎಲ್ಲಾ ಧರ್ಮಗಳು ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಇವೆ. ಆದರೆ ದೇಶ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂಬುದನ್ನು ಯೋಚನೆ ಯುವಕರು ವಿಶೇಷವಾಗಿ ಯೋಜನೆ ಮಾಡಲೇಬೇಕು. ಭಾರತ ಧರ್ಮನ ಮತ್ತು ಜಾತಿನ ಸೀಮಿತ ಆಗಿರುವಂತಹ ದೇಶ ಅಲ್ಲ. ಸಿಜೆಐ ಅವರು ಮೊನ್ನೆ ಆರ್ ಎಸ್ ಎಸ್ ಸಭೆಗೆ ಹೋಗಲ್ಲ ಅಂತ ಹೇಳಿಕೆ ನೀಡಿರುವ ಹಿನ್ನೆಲೆಯಿಂದ ಶೂ ಎಸೆದಿರಬಹುದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು.
ದಾವಣಗೆರೆ : ತುಂಗಭದ್ರ ನದಿಯಲ್ಲಿ ತೆಪ್ಪ ಮಗುಚಿ ಇಬ್ಬರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿಯ ತುಂಗಭದ್ರಾ ನದಿಯಲ್ಲಿ ಈ ಒಂದು ಘಟನೆ ನಡೆದಿದೆ. ತೆಪ್ಪ ಮಗುಚಿ ತಿಪ್ಪೇಶ್ (25) ಹಾಗೂ ಮುಕ್ತಿಯಾರ್ (19) ಸಾವನಪ್ಪಿದ್ದಾರೆ. ಮೀನು ಹಿಡಿಯಲು ಹೋಗಿದ್ದಾಗ ಈ ಒಂದು ದುರಂತ ಸಂಭವಿಸಿದೆ. ಮರಳು ದಂತೆಯಿಂದ ಈ ಒಂದು ಘಟನೆ ನಡೆದಿದೆ ಎನ್ನುವ ಆರೋಪ ಸಹ ಇದೆ ವೇಳೆ ಕೇಳಿ ಬಂದಿದೆ. ಸ್ಥಳಕ್ಕೆ ಹೊನ್ನಾಳಿ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೈಸೂರು : ಮುಡಾ ಹಗರಣಕ್ಕೆ ಸಬಂಧಪಟ್ಟಂತೆ ಇದೀಗ ಇಡಿ ಅಧಿಕಾರಿಗಳು ಒಟ್ಟು 252 ನಿವೇಶನಗಳ ಒಟ್ಟು 440 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮುಡಾ ಅಧಿಕಾರಿಗಳು ಅಕ್ರಮವಾಗಿ ನೀಡಿದ 252 ನಿವೇಶನಗಳನ್ನು ಇದೀಗ ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅಲ್ಲದೇ ಮುಡಾದ ಮಾಜಿ ಆಯುಕ್ತರಾದ ದಿನೇಶ್ ಕುಮಾರ್ ಬಳಿ ಇದ್ದ 32 ಸೈಟ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 40.8 ಕೋಟಿ ಮೌಲ್ಯದ ನಿವೇಶನಗಳನ್ನು ಇಡಿ ಅಧಿಕಾರಿಗಳು ವರ್ಷಕ್ಕೆ ಪಡೆದುಕೊಂಡಿದ್ದಾರೆ. ಅಧಿಕಾರಿಗಳು ಅಕ್ರಮವಾಗಿ 752 ಸೈಟ್ ಗಳನ್ನು ಅಲಾಟ್ ಮಾಡಿದ್ದರು. ಮುಡಾ ಅಧಿಕಾರಿಗಳೇ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತು ಆಗಿತ್ತು.ಮಾಜಿ ಆಯುಕ್ತ ದಿನೇಶ್ ಬಳಿ ಇರುವ 32 ನಿವೇಶನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಿನೇಶ್ ಕುಟುಂಬಸ್ಥರ ಹೆಸರಿನಲ್ಲಿ ಆಸ್ತಿ ಮಾಡಿದ್ದ ಎನ್ನಲಾಗಿದೆ.
ಚಿಕ್ಕಮಗಳೂರು : ನಗರದಲ್ಲಿ ಹಸುವಿನ ಬಾಲಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಬಾಲಕನನ್ನು ಹಿಂದೂ ಕಾರ್ಯಕರ್ತರು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ವಿಜಯಪುರ ಬಡಾವಣೆಯಲ್ಲಿ 16 ವರ್ಷದ ಬಾಲಕನೊಬ್ಬ ಹಸುವಿನ ಬಾಲಕ್ಕೆ ಸೆಂಟ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ದಾನೆ. ಬಾಲಕನ ಕೃತ್ಯ ಕಂಡು ಸ್ಥಳೀಯರು ಹಾಗೂ ಹಿಂದೂ ಕಾರ್ಯಕರ್ತರು ಬಾಲಕನಿಗೆ ಥಳಿಸಿ, ಪೊಲೀಸರಿಗೊಪ್ಪಿಸಿದ್ದಾರೆ. ಬಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಕೃತಿ ಮೆರೆದ ಬಾಲಕನ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗನಿಗೆ ಥಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೂ ಬಾಲಕನ ತಾಯಿ ದೂರು ನೀಡಿದ್ದಾಳೆ. ಅಪ್ರಾಪ್ತ ಬಾಲಕನ ಮನಸ್ಥಿತಿ ಬಗ್ಗೆ ಸ್ಥಳೀಯರು ಆತಂಕ ಹೊರಹಾಕಿದ್ದಾರೆ. ಬಾಲಕ ಕೃತ್ಯಕ್ಕೆ ಬಳಸಿದ ಲೈಟರ್ ಹಾಗೂ ಸೆಂಟ್ ಬಾಟಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕ್ರಮಕ್ಕೆ ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರ : ಬೆಂಗಳೂರಿನಲ್ಲಿ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ವಿಚಾರವಾಗಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ತಂಡ ಹಿಂದೂ ಧರ್ಮ ಒಡೆಯಲು ಪ್ರಯತ್ನಿಸುತ್ತಿದೆ ಬಸವಣ್ಣನವರು ಮೂರ್ತಿ ಪೂಜಕರು, ಅಂಕಿತನಾಮ ಕೂಡಲಸಂಗಮದೇವ. ಶಿವನ ಹೆಸರಿನಲ್ಲಿ ಬಸವಣ್ಣನವರ ವಚನಗಳಿವೆ. ಬಸವಣ್ಣನ ಹೆಸರನ್ನು ಕೆಲವು ಸ್ವಾಮೀಜಿಗಳು ಬಿಸಿನೆಸ್ ಮಾಡಿಕೊಂಡಿದ್ದಾರೆ. ಈ ನಕ್ಸಲೆಟ್ ಸ್ವಾಮಿಗಳು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮನೆಯಲ್ಲಿ ಇರುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಬಸವತತ್ವ ಅಂತಾರಲ್ಲ ಆ ಸ್ವಾಮಿಗಳಿಗೆ ಏನು ಗೊತ್ತಿದೆ? ಬಸವಣ್ಣ ಹುಟ್ಟಿದ್ದು ವಿಜಯಪುರ ಜಿಲ್ಲೆಯಲ್ಲಿ ಐಕ್ಯ ಆಗಿದ್ದು ಕೂಡ ಅಲ್ಲಿಯೇ. ಸನಾತನ ಧರ್ಮವನ್ನು ಬಯ್ಯುವ ನಕ್ಸಲೆಟ್ ಗ್ಯಾಂಗ್. ಕೆಲ ನಕ್ಸಲೆಟ್ ಸ್ವಾಮೀಜಿಗಳು ತಮ್ಮ ಮನಸ್ಸಿಗೆ ಬಂದಂತೆ ಕರೆಯುತ್ತಿದ್ದರು ಓಂ ಶ್ರೀ ಗುರು ಲಿಂಗ ಬಸವ ಸ್ವಾಮಿ ನಮಃ ಅಂತ ಕರೆಯುತ್ತಿದ್ದರು. ಈಗ ಶ್ರೀ ಗುರುಲಿಂಗ ಸ್ವಾಮಿ ನಮಃ ಅಂತ ಕರೆಯುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇವರೆಲ್ಲ ಬಸವಲಿಂಗ ಅಂತ ಕರೆಯುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್…
ಬೆಂಗಳೂರು : ಜ್ಞಾನ ಎನ್ನುವುದು ಯಾರ ಅಪ್ಪನ ಮನೆಯ ಸ್ವತ್ತಲ್ಲ ಎಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ರಾಮಾಯಣ ಬರೆಯಲು ಸಾಧ್ಯ ಆಗುತ್ತಿತ್ತಾ? ಬೆಸ್ತರ ಜಾತಿಯಲ್ಲಿ ಹುಟ್ಟಿದವರು ಮಹಾಭಾರತ ಬರೆಯಲು ಆಗುತ್ತಿತ್ತ? ಎಂದು ಪ್ರಶ್ನಿಸಿದರು. ಎಲ್ಲರಿಗೂ ಸಮಾನವಾದ ಅವಕಾಶ ಸಿಕ್ಕರೆ ಸಮಾನವಾಗಿ ಬೆಳೆಯುತ್ತಾರೆ. ನಮ್ಮದು ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆ. ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಬಂದರೆ ಇದಕ್ಕೆ ಚಲನೆ ಬರುತ್ತದೆ. ಅದಕ್ಕಾಗಿ ನಾವು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವಂತೆ ಬೇಡಿಕೆ ಇಟ್ಟಿದ್ದೀರಿ ಅದನ್ನು ಮುಂದಿನ ವರ್ಷದಿಂದ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು. ನಾನು ರಾಜಕೀಯದಲ್ಲಿ ಏನು ಮಾತು ಕೊಡುತ್ತೇನೋ ಆ ಕೆಲಸ ಮಾಡುತ್ತೇನೆ. ಮೆಟ್ರೋ ಯೋಜನೆ ನಾವು ಮತ್ತು ಕೇಂದ್ರ ಸರ್ಕಾರ ಸೇರಿ ಮಾಡಿರುವುದು. ಮೆಟ್ರೋದಲ್ಲಿ ರಾಜ್ಯದ ಪಾಲು ಹೆಚ್ಚಿದೆ ಶೇ.87 ರಷ್ಟು ನಮ್ಮ…
ಹಾಸನ : ಹಾಸನದಲ್ಲಿ ಸಮೀಕ್ಷೆಗೆ ಹೋಗುತ್ತಿದ್ದ ಶಿಕ್ಷಕಿಗೆ ಅಪಘಾತವಾಗಿದ್ದು, ಗಂಭೀರವಾದ ಗಾಯಗಳಾಗಿದೆ. ದ್ವಿಚಕ್ರ ವಾಹನದಲ್ಲಿ ತೆರಳುವಾಗ ನಾಯಿ ಅಡ್ಡ ಬಂದಿದ್ದರಿಂದ ಅಪಘಾತವಾಗಿದ್ದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ವಡ್ಡರಹಳ್ಳಿಯಲ್ಲಿ ಈ ಅಪಘಾತ ಸಂಭವಿಸಿದೆ. ವಡ್ಡರಹಳ್ಳಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ರಾಧಾಗೆ ಗಂಭೀರವಾಗಿ ಗಾಯವಾಗಿದೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ರಾಧಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಶಿಕ್ಷಕಿ ರಾಧಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಕ್ಷಕಿ ಮೇಲೆ ನಾಯಿ ದಾಳಿ ಇನ್ನು ಹಾಸನದಲ್ಲಿ ಮತ್ತೊಂದು ಘಟನೆ ಸಂಭವಿಸಿದ್ದು, ಜಾತಿ ಗಣತಿಗೆ ತೆರಳಿದ್ದ ಶಿಕ್ಷಕಿ ಮೇಲೆ ನಾಯಿಗಳು ಡೆಡ್ಲಿ ಅಟ್ಯಾಕ್ ನಡೆಸಿವೆ. ಹಾಸನದ ಬೇಲೂರು ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಬೀದಿ ನಾಯಿಗಳು ದಾಳಿ ಮಾಡಿದಾಗ, ಶಿಕ್ಷಕಿ ಬಚಾವ್ ಮಾಡಲು ಹೋಗಿದ್ದ ಅವರ ಪತಿ ಸೇರಿ 7 ಜನರ ಮೇಲು ಕೂಡ ನಾಯಿಗಳು ದಾಳಿ ಮಾಡಿದೆ. ಶಿಕ್ಷಕಿ ಸೇರಿದಂತೆ ಒಟ್ಟು 7 ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ.…