Subscribe to Updates
Get the latest creative news from FooBar about art, design and business.
Author: kannadanewsnow05
ನವದೆಹಲಿ : ಸ್ವ ಪಕ್ಷದ ವಿರುದ್ಧವೇ ತಮ್ಮ ಅಸಮಾಧಾನವನ್ನು ಆಗಾಗ ಹೊರ ಹಾಕುತ್ತಿರುವ ಬಿಜೆಪಿಯ ಮಾಜಿ ಸಚಿವ ವಿ ಸೋಮಣ್ಣ ಇಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾದ ಬಿಎಲ್ ಸಂತೋಷ್ ಅವರನ್ನು ಭೇಟಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿರುವ ಬಿಎಲ್ ಸಂತೋಷರನ್ನು ಭೇಟಿ ಮಾಡಿದ್ದಾರೆ.ವರಿಷ್ಟರ ಭೇಟಿ ಮಾಡಲು ಮಾಜಿ ಸಚಿವ ವಿ.ಸೋಮಣ್ಣ ನಿನ್ನೆ ದೆಹಲಿಗೆ ತೆರಳಿದ್ದಾರೆ. ಇಂದು ಬಿ ಎಲ್ ಸಂತೋಷರನ್ನು ಭೇಟಿ ಮಾಡಿದ್ದೂ, ಕೇಂದ್ರ ಸಚಿವ ಅಮಿತ್ ಶಾ ಬೇಟಿಗೆ ವಿ. ಸೋಮಣ್ಣ ಅವಕಾಶ ಕೇಳಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಅಥವಾ ನಾಳೆ ಈ ಸೋಮಣ್ಣ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ರಾಜ್ಯದ ಬಿಜೆಪಿ ಘಟಕದ ನೂತನ ಅಧ್ಯಕ್ಷ ಹಾಗೂ ಪಕ್ಷ ನಾಯಕ ಕುರಿತು ವಿ ಸೋಮಣ್ಣ ಸೇರಿದಂತೆ ಬಿಜೆಪಿಯ ಹಲವು ನಾಯಕರಲ್ಲಿ ಅಸಮಾಧಾನ ಭಗಿಲೆದ್ದಿತ್ತು. ಇದೇ ವಿಷಯವಾಗಿ ಬಸನಗೌಡ ಪಾಟೀಲ್ ಯತ್ನಾಳ ಕೂಡ ವಿಶ್ವ ಪಕ್ಷ ಬಿಜೆಪಿ…
ಬೆಂಗಳೂರು : ಕನ್ನಡ ನಾಮಫಲಕ ಅಳವಡಿಕೆ ಹೋರಾಟದಲ್ಲಿ ಬಂಧನಕ್ಕೊಳಗಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ನಾರಾಯಣಗೌಡ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಗೊಂಡರು. ನಾರಾಯಣಗೌಡ ಬಿಡುಗಡೆಯಾಗುತ್ತಿದ್ದಂತೆ ಕುಮಾರಸ್ವಾಮಿ ಲೇಔಟ್ ನ ಪೊಲೀಸರೂ ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ನಾರಾಯಣಗೌಡರನ್ನು ಮಾರ್ಥಾಸ್ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಎಂದು ಕರೆದುಕೊಂಡು ಹೋಗಲಾಗಿದ್ದು, ಇದೀಗ ಕುಮಾರಸ್ವಾಮಿ ಲೇಔಟ್ ಪೊಲೀಸ್ ಅಧಿಕಾರಿಗಳು ಅಲ್ಲಿಂದ ನೇರವಾಗಿ ಕೋರ್ಟಿಗೆ ಕರೆ ತಂದು ಹಾಜರುಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇದೆ ವೇಳೆ ಕೋರ್ಟ್ ನಾರಾಯಣಗೌಡರ ಜಾಮೀನು ಅರ್ಜಿ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಕೋರ್ಟ್ ಮುಂದೂಡಿತು. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಕೆಸ್ ವಾರೆಂಟ್ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ನಾಮಫಲಕ ರ್ಯಾಲಿ ನಡೆಸಿತ್ತು. ಅಂಗಡಿ ಮುಂಗಟ್ಟುಗಳು ನಾಮಫಲಕಗಳು ಶೇ 60ರಷ್ಟು ಕನ್ನಡದಲ್ಲಿ ಇರಬೇಕೆಂದು ಆಗ್ರಹಿಸಿತ್ತು. ಅಲ್ಲದೇ ರ್ಯಾಲಿ ವೇಳೆ ಬೇರೆ ಬೇರೆ…
ಬೆಂಗಳೂರು : ಇತ್ತೀಚಿಗೆ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೇಲೆ ಇದೀಗ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ, ಖಾಸಗಿ ಹೋಟೆಲ್ಗಳಿಗೆ ವಿದೇಶಿ ಯುವತಿಯರನ್ನು ಕರೆಸಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು. ಘಟನೆಗೆ ಸಂಬಂಧಿಸಿದಂತೆ ಮೂರು ವಿದೇಶಿ ಮೂಲದ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಇದೆ ಬವೇಳೆ ವೇಶ್ಯಾವಾಟಿಕೆಗೆ ಕರೆತಂದಿದ್ದ ಇವರು ವಿದೇಶಿ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.ಮಹಿಳೆಯರ ರಕ್ಷಣೆ ಮಾಡಿ ಎಫ್ ಆರ್ ಆರ್ ಓ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.ಬೆಂಗಳೂರು, ಜೈಪುರ್, ಚೆನ್ನೈ, ಮೈಸೂರು, ದೆಹಲಿ, ಉದಯಪುರ ಹಾಗೂ ಮುಂಬೈ ಮುಂತಾದ ಕಡೆ ಆರೋಪಿಗಳು ಏಜೆಂಟ್ ಗಳನ್ನು ಇಟ್ಟುಕೊಂಡು ಈ ದಂಧೆ ನಡೆಸುತ್ತಿದ್ದರು. ಹೆಚ್ಚಿನ ಹಣದ ಆಮಿಷಗಳನ್ನು ತೋರಿಸಿ ಆರೋಪಿಗಳು ದಂದೆಗೆ ಕರೆಸಿಕೊಳ್ಳುತ್ತಿದ್ದರು. ಟೆಲಿಗ್ರಾಂ ಹಾಗೂ ವಾಟ್ಸಪ್…
ಬೆಂಗಳೂರು : ಅಂದರ್ ಬಾಹರ್ ಆಡುತ್ತಿದ್ದ ಅಪಾರ್ಟ್ಮೆಂಟ್ ಒಂದರ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು ದಾಖಲೆ ಇಲ್ಲದ 86 ಲಕ್ಷಕ್ಕೂ ಹೆಚ್ಚು ನಗದು ಹಣವನ್ನು ಜಪ್ತಿ ಮಾಡಿಕೊಂಡು ಆರು ಜನರನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಜೆಜೆ ನಗರದ ಅಪಾರ್ಟ್ಮೆಂಟ್ ಅಲ್ಲಿ ನಡೆದಿದೆ. ಅಪಾರ್ಟ್ಮೆಂಟ್ ನಲ್ಲಿ ಆರು ಜನರು ಸುಮಾರು 1,40,000ಕ್ಕೂ ಹೆಚ್ಚು ಹಣ ಇಟ್ಟು ಜೂಜಾಡುತ್ತಿದ್ದರು.ಈ ವೇಳೆ ಖಚಿತ ಮಾಹಿತಿಯ ಮೇರೆಗೆ ಸಿಸಿ ಬೇಧಿಕಾರಿಗಳು ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಸಿಸಿಬಿ ಅಧಿಕಾರಿಗಳು ಪರಿಶೀಲನೆ ವೇಳೆ ಶಾಕ್ ಆಗಿದ್ದು, ಸುಮಾರು 86, 87,800 ರೂಪಾಯಿ ದಾಖಲೆ ಇಲ್ಲದ ಹಣ ದೊರಕಿದೆ. ದಾಳಿ ನಡೆದ ಕೂಡಲೇ ಅಪಾರ್ಟ್ಮೆಂಟ್ನ ಮಾಲೀಕ ತಕ್ಷಣ ಪರಾರಿಯಾಗಿದ್ದು, ಅಂದರ್ ಬಹಾರ್ ಆಡುತ್ತಿದ್ದ ಸುಮಾರು ಆರು ಜನರನ್ನು ಇದೀಗ ಸಿಸಿಬಿ ಅಧಿಕಾರಿಗಳು ಬಂಧಿಸಿ, ನಗದು ಹಣವನ್ನು ಜತ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಲಬುರ್ಗಿ : ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸುಲಭವಾಗುತ್ತದೆ ಎಂದು ಸಿದ್ದರಾಮಯ್ಯ ಬಣದ ಹಲವು ಕಾಂಗ್ರೆಸ್ ನಾಯಕರು ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವಂತೆ ಒತ್ತಡ ಹೇರುತ್ತಿದ್ದದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಈ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಸ್ಪಷ್ಟನೆ ನೀಡಿದ್ದು ಮೂರು ಡಿಸಿಎಂ ಹುದ್ದೆ ವಿಚಾರ ಹೈಕಮಾಂಡ್ ಮುಂದೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲೋಕಸಭೆ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳ ಆಯ್ಕೆಗೆ ವಿಚಾರವಾಗಿ ನಾಳೆ (ಜ.10) ರಂದು ಸಭೆ ನಡೆಯಲಿದೆ. ಯಾರನ್ನು ಕಣಕ್ಕಿಳಿಸಬೇಕು ಎಂದು ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಇಂಡಿಯಾ ಒಕ್ಕೂಟ ಒಟ್ಟಾಗಿ ಹೋಗುವ ನಿರ್ಣಯ ಕೈಗೊಂಡಿದ್ದೇವೆ. ಬುಧವಾರ ದೆಹಲಿಯಲ್ಲಿ ಅನೇಕ ಘಟಕಗಳ ಸಭೆ ಕೂಡ ಕರೆದಿದ್ದೇವೆ. ಈಗಾಗಲೇ ಎಲ್ಲಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಿದ್ದೇವೆ ಎಂದು ತಿಳಿಸಿದರು. ಹೆಚ್ಚುವರಿ ಡಿಸಿಎಂ ವಿಚಾರವಾಗಿ ನಮ್ಮ ಮುಂದೆ ಪ್ರಸ್ತಾವನೆ ಇಲ್ಲ. ಹೆಚ್ಚುವರಿ ಡಿಸಿಎಂ ಉಹಾಪೋಹ. ಎಲೆಕ್ಷನ್ ಸಂದರ್ಭದಲ್ಲಿ…
ಮೈಸೂರು : ರಾಮನ ಪೇಟೆಂಟ್ ಅನ್ನು ಬಿಜೆಪಿಗೆ ಕೊಟ್ಟಿದ್ದೆ ಕಾಂಗ್ರೆಸ್. ಕಾಂಗ್ರೆಸ್ಸಿಗರೇ ಪೂಜಿಸಿದ್ದರೆ ಬಿಜೆಪಿಗೆ ಈ ಪೇಟೆಂಟ್ ಸಿಗುತ್ತಿತ್ತು. ಕಾಂಗ್ರೆಸ್ನವರಿಗೆ ರಾಮ ರಾಜ್ಯದ ಮೇಲೆ ನಂಬಿಕೆ ಇದೆಯಾ ಅಥವಾ ರಾವಣ ರಾಜ್ಯದ ಮೇಲೆ ನಂಬಿಕೆ ಇದೆಯಾ ಅವರನ್ನೇ ಕೇಳಿ ಕಾಂಗ್ರೆಸ್ ಗೆ ಗಾಂಧೀಜಿ ರಾಮರಾಜ್ಯದ ಮೇಲೆ ನಂಬಿಕೆ ಇಲ್ಲ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಾಕ್ಷತೆಗೆ ಅನ್ನ ಭಾಗ್ಯ ಅಕ್ಕಿ ಬಳಸಿದ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ಅವರು, ಮಂತ್ರಾಕ್ಷತೆ ಸ್ವೀಕರಿಸಿದವರಿಗೆ ಅಕ್ಕಿ ಕೊಡಲು ಮನಸ್ಸು ಬರುತ್ತಾ ಅಕ್ಷತೆ ಬಗ್ಗೆ ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯಗೆ ನಂಬಿಕೆ ಇಲ್ಲ ಅಯೋಧ್ಯೆಗೆ ಹೋಗುವುದು ಬಿಡುವುದು ಸಿಎಂ ಗೆ ಬಿಟ್ಟ ವಿಚಾರ ಎಂದು ಕಿಡಿಕಾರಿದರು. ಪ್ರತಾಪ್ ಸಿಂಹ ನ್ಯಾಷನಲ್ ಲೀಡರ್ ಎಂಬ ಯತಿಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಖಂಡಿತ ನಾನು ನ್ಯಾಷನಲ್ ಲೀಡರ್ ಅಲ್ಲ ಎಂದು ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.ಬರವಣಿಗೆಯ…
ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ಮಹದೇವಪುರದಲ್ಲಿ ನಿರ್ವಣ ಸ್ಪ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬೀದಿಯಾನಂದ ಪ್ರತಿಕ್ರಿಯೆ ನೀಡಿ ಈ ಪ್ರಕರಣದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವ ಆರೋಪ ಕೇಳಿಬಂದಿದೆ ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತಂತೆ ಮಾತನಾಡಿದ ಅವರು, ಮಾದೇವಪುರದ ನಿರ್ವಾಣ ಸ್ಪಾ ಮೇಲೆ ಸಿಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 40 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ತಿಳಿಸಿದರು. 33 ಭಾರತೀಯರು ಹಾಗೂ 7 ಜನ ವಿದೇಶಿ ಮಹಿಳೆಯರನ್ನು ಸಿಸಿಬಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಸಿಸಿಬಿ ದಾಳಿಯಲ್ಲಿ 47 ಗ್ರಾಹಕರು ಸಿಗಿಬಿದ್ದಿದ್ದಾರೆ.23 ಜನ ಕೆಲಸಗಾರರನ್ನು ಈಗಾಗಲೇ ವಿಚಾರಣೆ ಮಾಡಲಾಗಿದೆ. ಸ್ಪ ಮಾಲಿಕ ಅನಿಲ್ ರೆಡ್ಡಿ ಬಂಧಿಸಿ 5.18 ಲಕ್ಷ ಜಪ್ತಿ ಮಾಡಿದ್ದೇವೆ ಎಂದು ಹೇಳಿದರು. ಪ್ರಕರಣ ಕುರಿತಂತೆ ಮಾರತಹಳ್ಳಿ ಎಸಿಪಿ…
ಬೆಂಗಳೂರು : ಇತ್ತೀಚಿಗೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಮೂರು ಸಮುದಾಯಗಳ ನಾಯಕರನ್ನು ಹೆಚ್ಚುವರಿ ಡಿಸಿಎಂ ಹುದ್ದೆಗೆ ನೇಮಕ ಮಾಡಬೇಕು ಎಂದು ಹೇಳಿಕೆ ನೀಡಿರುವ ವಿಚಾರ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಈಗ ಈ ವಿಚಾರಕ್ಕೆ ಪುಷ್ಟಿ ನೀಡುವಂತೆ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲ, ಈ ವಿಷಯದ ಕುರಿತು ಚರ್ಚಿಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ಜೊತೆ ಕಾಂಗ್ರೆಸ್ ಉಸ್ತುವಾರಿ ಸುರಜೆವಾಲ ಚರ್ಚೆ ವಿಚಾರ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಚರ್ಚೆಯಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, ಎಷ್ಟು ಸಮುದಾಯಗಳಿಗೆ ಕೊಡಬೇಕು ಅಂತ ಚರ್ಚೆ ಮಾಡಿಲ್ಲ ಎಂದು ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ವೇಣುಗೋಪಾಲ್ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಹೆಚ್ಚುವರಿ ಡಿಸಿಎಂ ಸೃಷ್ಟಿಯಾದರೂ ಡಿಕೆಶಿ ಡಿಸಿಎಂ ಆಗಿರುತ್ತಾರೆ.ಅದು ಅವರ ಹುದ್ದೆ ನಾವು ನಮ್ಮ ಬೇಡಿಕೆಯನ್ನು ಹೇಳಿದ್ದೇವೆ.ಪಕ್ಷದ ಹೈಕಮಾಂಡ್ ಈ…
ಬೆಂಗಳೂರು : ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಒಬ್ಬಳು ನಾನು ಯಾರಿಗೂ ಮೋಸ ಮಾಡಿಲ್ಲ ಎಂದು ಡೆತ್ ನೋಟ್ ಅಲ್ಲಿ ಸಂಪೂರ್ಣವಾಗಿ ವಿವರವಾಗಿ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ತ್ಯಾಗರಾಜ ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ ಜಾನ್ಸಿ ಎಂದು ಗುರುತಿಸಲಾಗಿದ್ದು, ದ್ವಿತೀಯ ಪಿಯುಸಿ ಅಧ್ಯಯನ ಮಾಡುತ್ತಿದ್ದಾಳೆ. ಆತ್ಮಹತ್ಯೆಗು ಮುನ್ನ ಡೆತ್ ನೋಟ್ ಅಲ್ಲಿ ಸಂಪೂರ್ಣವಾಗಿ ವಿವರ ಬರೆದಿಟ್ಟು ವಿದ್ಯಾರ್ಥಿನಿ ಜಾನ್ಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲೇಜಿನಿಂದ ಬಂದು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ತ್ಯಾಗರಾಜನಗರದಲ್ಲಿ ಘಟನೆ ಸಂಭವಿಸಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.ನಾನು ಯಾರಿಗೂ ಮೋಸ ಮಾಡಿಲ್ಲ ಎಂದು ಸಂಪೂರ್ಣವಾಗಿ ವಿವರ ಬರೆದು ಬುಜ್ಜಿ, ಆಲ್ ಫ್ರೆಂಡ್ಸ್ ಮಿಸ್ ಯು ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆ ಕುರಿತಂತೆ ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ : ರಾಕಿಂಗ್ ಸ್ಟಾರ್ ಯಶ್, ಹುಟ್ಟು ಹಬ್ಬದ ದಿನದಂದು ಅತ್ಯಂತ ಘೋರ ದುರಂತ ಸಂಭವಿಸಿದೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸುಣದೂರು ಗ್ರಾಮದಲ್ಲಿ ನಟ ಯಶ್ ಅವರ ಇಪ್ಪತೈದು ಅಡಿ ಕಟೌಟ್ ಕಟ್ಟುವ ವೇಳೆ ವಿದ್ಯುತ್ ಶಾಕ್ ತಗುಲಿ ಮೂವರು ಯುವಕರು ಸಾವನಪ್ಪಿದ್ದು ನಾಲ್ವರು ಯುವಕರು ಗಂಭೀರವಾಗಿ ಗಾಯಗೊಂಡಿರುವಂತಹ ಘಟನೆ ಸಂಭವಿಸಿದೆ. ಘಟನೆಯ ನಂತರ ನಟ ಯಶ್ ಅವರು ನಿನ್ನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುಣ್ಣದೂರು ಗ್ರಾಮಕ್ಕೆ ಭೇಟಿ ನೀಡಿ ಮೃತ ಯುವಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ತಾವು ಕೂಡ ಭಾವುಕರಾಗಿರುವಂತಹ ಸನ್ನಿವೇಶ ಜರುಗಿತು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಈ ರೀತಿ ಕಟ್ ಔಟ್ ನೀಲ್ಲಿಸುವುದು ಆಗಲಿ ಇನ್ಯಾವುದೋ ಮಾಡುವುದಾಗಲಿ ಮಾಡಬೇಡಿ ಅಭಿಮಾನ ಪ್ರೀತಿಯಿಂದ ಇರಲಿ ಆದರೆ ಈ ರೀತಿ ಘಟನೆಗಳಿಂದ ನನಗೆ ಹುಟ್ಟುಹಬ್ಬದ ಮೇಲೆ ಅಸಹ್ಯ ಹುಟ್ಟಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ಅವರು ಗಂಭೀರವಾಗಿ ಗಾಯಗೊಂಡಂತಹ ಉಳಿದ ನಾಲ್ವರು ಯುವಕರನ್ನು ಭೇಟಿಯಾಗಲು ಗದಗ ಜಿಲ್ಲೆಯ ಜೇಮ್ಸ್…