Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಇಸ್ರೇಲ್ ಹಾಗೂ ಇರಾನ್ ನಡುವೆ ತೀವ್ರ ಯುದ್ಧ ನಡೆಯುತ್ತಿದೆ. ಎರಡು ದೇಶಗಳ ನಡುವೆ ಮಿಸೈಲ್ ಡ್ರೋನ್ ವಾರ್ ನಡೆಯುತ್ತಿದ್ದು, ಜನಸಾಮಾನ್ಯರು ದಾಳಿಗೆ ತುತ್ತಾಗಿದ್ದಾರೆ. ಇಂತಹ ಆತಂಕದ ಪರಿಸ್ಥಿತಿಯ ನಡುವೆ ಇಸ್ರೇಲ್ನ ಟೆಲ್ ಅವೀವ್ನಲ್ಲಿ 18 ಮಂದಿ ಕನ್ನಡಿಗರು ಸಿಲುಕಿಕೊಂಡಿದ್ದರು. ಇಂದು 18 ದಿನ ಕನ್ನಡಿಗರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಹೌದು ಇಸ್ರೇಲ್ ಅಲ್ಲಿ ಸಿಲುಕಿದ್ದ 18 ಜನ ಕನ್ನಡಿಗರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಕುವೈತ್ ನಿಂದ ಮುಂಬೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಸಂಜೆ 5 ಗಂಟೆಗೆ ಏರ್ ಇಂಡಿಯಾ ವಿಮಾನದಲ್ಲಿ 18 ಜನ ಕನ್ನಡಿಗರು ಇದೀಗ ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 18 ಜನ ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ.
ಬೆಂಗಳೂರು : 18 ವರ್ಷಗಳ ನಂತರ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಖುಷಿ RCB ಅಭಿಮಾನಿಗಳಿಗೆ ಬಹಳ ದಿನ ಉಳಿಯಲಿಲ್ಲ. ಏಕೆಂದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಜನ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ದೂರು ನೀಡಿದ್ದಾರೆ. ಹೌದು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಎಂ, ಡಿಸಿಎಂ ಸೇರಿದಂತೆ ಐಎಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ದೂರು ದಾಖಲಿಸಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್, ಡಾ. ಶಾಲಿನಿ ರಜನೀಶ್, ಸತ್ಯವತಿ, ಕೆಎಸ್ ಸಿಎ, ಆರ್ ಸಿಬಿ, ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ ದಯಾನಂದ್, ವಿಕಾಸ್ ಕುಮಾರ್, ಶೇಖರ್ ತೆಕ್ಕಣನವರ್, ವಿಧಾನಸೌಧ ಡಿಸಿಪಿ ಕರಿಬಸನಗೌಡ ಸೇರಿ ಹಲವರ ವಿರುದ್ಧ ದೂರು ನೀಡಿದ್ದಾರೆ. ಕಳೆದ ಜೂನ್ 4 ರಂದು ಬೆಂಗಳೂರಿನಲ್ಲಿ ದುರಂತ ನಡೀತು. 11…
ದಕ್ಷಿಣಕನ್ನಡ : ದಕ್ಷಿಣ ಕನ್ನಡದಲ್ಲಿ ಇಂದು ಬಿಚ್ಚಿ ಬೀಳಿಸುವ ಘಟನೆ ನಡೆದಿದ್ದು, ಪತಿ ಪತ್ನಿಯ ಮೃತ ದೇಹ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿಯೇ ಗರ್ಭಿಣಿ ಪತ್ನಿಯನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಬಡಗುಂಡಿ ಸಮೀಪ ನಡೆದಿದೆ. ಮನೆಯೊಂದರಲ್ಲಿ ಸಜೀಪದ ತಿಮ್ಮಪ್ಪ ಮೂಲ್ಯ (52) ಹಾಗೂ ಅವರ ಗರ್ಭಿಣಿ ಪತ್ನಿ ಜಯಂತಿ (45) ಅವರ ಮೃತದೇಹಗಳು ಇಂದು ಪತ್ತೆಯಾಗಿದ್ದವು. ಆದರೆ ಯಾವುದೋ ವಿಷಯಕ್ಕೆ ಪತ್ನಿಯನ್ನು ಕೊಂದು ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಮೃತರ ಸಂಬಂಧಿಗಳ ದೂರಿನಂತೆ ಪ್ರಕರಣ ದಾಖಲಾಗಿದೆ. ಜಯಂತಿ ಅವರ ಮೃತದೇಹ ಕೋಣೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿದ್ದರೆ, ತಿಮ್ಮಪ್ಪ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಸಮೀಪದವರು ಬೆಳಗ್ಗೆಯಾದರೂ ಬಾಗಿಲು ತೆರೆಯಲಿಲ್ಲವೇಕೆ ಎಂದು ಸಂಶಯದಿಂದ ಗಮನಿಸಿದಾಗ ವಿಷಯ ಗೊತ್ತಾಗಿದ್ದು, ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಂಬಂಧಿಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ಮನೆಯಲ್ಲಿಯೆ ಮಗುವಿಗೆ ಜನ್ಮ ನೀಡಿದ ತಾಯಿಯೊಬ್ಬರು ತೀವ್ರ ರಕ್ತಸ್ರಾವದಿಂದ ಸಾವನಪ್ಪಿರುವ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಛತ್ತಿಸ್ಗಢ ಮೂಲದ ಸಂಜನಾ (25) ಎಂದು ತಿಳಿದುಬಂದಿದೆ. ಸಂಜನಾ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗುವಿನ ಜನನದ ಬಳಿಕ ಅವರಿಗೆ ತೀವ್ರ ರಕ್ತಸ್ರಾವವಾಗಿ ಸಾವನಪ್ಪಿದ್ದಾರೆ. ಗಂಡನನ್ನು ತೊರೆದು ಸಂಜನಾ ಅಮ್ಮನ ಜೊತೆಗೆ ಇದ್ದರು. ಸದ್ಯ ಮಗುವಿಗೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ವಿಜಯಪುರ : ರಸ್ತೆ ಅಪಘಾತದಲ್ಲಿ ಶಾಲೆಗೆ ತೆರಳುತ್ತಿದ್ದ ಶಿಕ್ಷಕ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಅಂಬಳನೂರ ಕ್ರಾಸ್ ಬಳಿ ರಸ್ತೆ ಅಪಘಾತವಾಗಿದೆ. ಬೈಕ್ ನಲ್ಲಿ ಶಿಕ್ಷಕ ವಾಸುದೇವ ಹಂಚಾಟೆ ತೆರಳುತ್ತಿದ್ದರು. ಈ ವೇಳೆ ಸಡನ್ ಆಗಿ ನಾಯಿ ರಕ್ಷಿಸಲು ಹೋಗಿ ವಾಸುದೇವ ಅವರ ಬೈಕ್ ಸ್ಕಿಡ್ ಆಗಿದೆ. ರಸ್ತೆಯ ಮೇಲೆ ಶಿಕ್ಷಕ ವಾಸದೇವ ಕೆಳಗಡೆ ಬಿದ್ದಿದ್ದಾರೆ. ರಸ್ತೆ ಮೇಲೆ ಬಿದ್ದಿದ್ದರಿಂದ ತಲೆಗೆ ಪೆಟ್ಟಾಗಿ ತೀವ್ರ ರಕ್ತ ಸೋರಿಕೆಯಾಗಿ ಶಿಕ್ಷಕ ವಾಸುದೇವ್ ಸಾವನ್ನಪ್ಪಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನ ಕನಕಲ ಗ್ರಾಮದ ಶಾಲೆಯಲ್ಲಿ ವಾಸದೇವ್ ವಿಜ್ಞಾನ ಶಿಕ್ಷಕರಾಗಿದ್ದರು. ನೆಚ್ಚಿನ ಶಿಕ್ಷಕರನ್ನು ಕಳೆದುಕೊಂಡು ವಿದ್ಯಾರ್ಥಿಗಳು ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ನನಗೆ ಅಧಿಕಾರ ಕೊಡಿ ಎಂಬ ಹೇಳಿಕೆ ವಿಚಾರವಾಗಿ ಅವರು ಹೇಳಲಿ ಬಿಡಿ ಅವರಿಗೆ ಯಾರು ಬೇಡ ಅಂದೋರು? 2028ಕ್ಕೆ ಪ್ರಧಾನಮಂತ್ರಿಯಾಗಲಿ ಮುಖ್ಯಮಂತ್ರಿ ಆಗಲಿ, ಬೇಡ ಅಂದೋರ್ಯಾರು? ಆದರೆ ಹೈಕಮಾಂಡ್ ಎಲ್ಲವನ್ನೂ ಅಂತಿಮವಾಗಿ ನಿರ್ಧಾರ ಮಾಡುತ್ತದೆ. ಸಾಮೂಹಿಕ ನಾಯಕತ್ವದ ಮೇಲೆ ಅಧಿಕಾರಕ್ಕೆ ಬರುವುದು ಎಂದು ಸಂಪುಟ ಸಭೆಯ ನಂತರ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದರು. ಇನ್ನು ಬಳ್ಳಾರಿ ಹಾಲು ಒಕ್ಕೂಟದ ಚುನಾವಣೆ ವಿಳಂಬ ವಿಚಾರವಾಗಿ ಭೀಮ ನಾಯಕ್ ಆರೋಪಕ್ಕೆ ಸಚಿವ ಜಯನ ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, ಆ ರೀತಿ ತಿಳಿದುಕೊಂಡಿದ್ದರೆ ನಾನೇನು ಮಾಡೋಕೆ ಆಗಲ್ಲ. ಸಿಎಂ ಸಿದ್ದರಾಮಯ್ಯಗೆ ದೂರು ಕೊಟ್ಟ ಮೇಲೆ ಅವರೇ ನಿರ್ಧಾರ ಮಾಡುತ್ತಾರೆ. ನಾವು ಕೋರ್ಟ್ ಆದೇಶದ ವಿರುದ್ಧ ಹೋಗೋಕಾಗಲ್ಲ. ಅದರ ಬಗ್ಗೆ ಸಂಪೂರ್ಣ ಮಾಹಿತಿ ನನಗೂ ಸಹ ಇಲ್ಲ. ಈ ವಿಚಾರದಲ್ಲಿ ನಾನು ಮಧ್ಯಪ್ರವೇಶ ಮಾಡಲ್ಲ ಎಂದು ತಿಳಿಸಿದರು.
ಬೆಂಗಳೂರು : ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು, ದಾಳಿ ಮಾಡಿ ಲಂಚಬಾಕ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ. ಆದರೆ ಲೋಕಾಯುಕ್ತ ಅಧಿಕಾರಿಗಳೇ ಇಂತಹ ಭ್ರಷ್ಟಾಚಾರದಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಮುಖ ಆರೋಪಿ ಆಗಿರುವ ಶ್ರೀನಾಥ್ ಜೋಶಿ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಇದೀಗ ಹೈಕೋರ್ಟ್ ತಡೆ ನೀಡಿದೆ. ಹೌದು ಲೋಕಾಯುಕ್ತ ಪೊಲೀಸರ ದಾಳಿ ಬೆದರಿಕಯೋಡ್ಡಿ ಅಧಿಕಾರಿಗಳಿಂದ ಹಣ ಹೊಸೂಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀನಾಥ್ ಜೋಶಿ ವಿರುದ್ಧದ ಪ್ರಕರಣಕ್ಕೆ ಇದೀಗ ಹೈಕೋರ್ಟ್ ತಡೆ ನೀಡಿದೆ. ವಿಚಾರಣೆಯನ್ನು ಹೈಕೋರ್ಟ್ ಜೂನ್ 30ಕ್ಕೆ ನಿಗದಿಪಡಿಸಿದೆ. ಶ್ರೀನಾಥ್ ಜೋಶಿ ಲೋಕಾಯುಕ್ತ ಪೊಲೀಸರ ನೋಟಿಸ್ ರದ್ದು ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಶ್ರೀನಾಥ್ ಜೋಶಿ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದೆ.
ಮೈಸೂರು : ಇಂದು ಮೈಸೂರು ಊರಲ್ಲಿ ಘೋರವಾದ ಘಟನೆ ಒಂದು ನಡೆದಿದ್ದು, ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೈಸೂರು ತಾಲೂಕಿನ ನಾಗನಹಳ್ಳಿ ಬಳಿ ಈ ಒಂದು ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪ್ರಸನ್ನ (64) ಎಂದು ಗುರುತಿಸಲಾಗಿದೆ. ಕುಕ್ಕೆ ಸುಬ್ರಮಣ್ಯ ಮಠದ ನಿಕಟವರ್ತಿಯಾಗಿದ್ದ ಪ್ರಸನ್ನ ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳುವಾಗ ಈ ಒಂದು ದುರಂತ ಸಂಭವಿಸಿದೆ. ಪೊಲೀಸರು ಸದ್ಯ ಪ್ರಸನ್ನ ಅವರ ಮೃತದೇಹವನ್ನು ಕೆ.ಆರ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ ಘಟನೆ ಕುರಿತು ಮೈಸೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಖಾಸಗಿ ಅಪಾರ್ಟ್ಮೆಂಟ್ನ ಇಂಗು ಗುಂಡಿಯಲ್ಲಿ ಅಸ್ತಿ ಪಂಜರ ಪತ್ತೆಯಾಗಿದ್ದು ಬೆಂಗಳೂರಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ಬೆಳಕಿಗೆ ಬಂದಿದೆ ಎರಡು ದಿನದ ಹಿಂದೆ ನಾಲ್ಕೈದು ಅಸ್ತಿ ಪಂಜರದ ಅವಶೇಷಗಳು ಪತ್ತೆಯಾಗಿವೆ. ಇದರಿಂದ ಸಹಜವಾಗಿ ಅಪಾರ್ಟ್ಮೆಂಟ್ನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಹೌದು ಬೆಂಗಳೂರಿನ ಬೇಗೂರಿನಲ್ಲಿ ಇರುವ ಅಪಾರ್ಟ್ಮೆಂಟ್ವೊಂದರಲ್ಲಿ ಒಳಚರಂಡಿಯಲ್ಲಿ ತಲೆಬುರುಡೆ, ಅಸ್ತಿಪಂಜರ, ಮೂಳೆ ಸೇರಿದಂತೆ ಹಲವು ಭಾಗಗಳು ಪತ್ತೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಆಗ್ನೇಯ ಬೆಂಗಳೂರಿನ ಎಂಎನ್ ಕ್ರೆಡೆನ್ಸ್ ಫ್ಲೋರಾ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ನಡೆದಿದೆ. ಶೌಚಗುಂಡಿ ಸ್ವಚ್ಚಗೊಳಿಸುವಾಗ ಕಾರ್ಮಿಕರಿಗೆ ಇವೆಲ್ಲಾ ಸಿಕ್ಕಿದ್ದು, ಅವರು ಒಮ್ಮೆ ಶಾಕ್ಗೆ ಒಳಗಾಗಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣ ಸಂಬಂಧ ಪೂರ್ವ ವಿಭಾಗದ ಜಂಟಿ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯೆ ನೀಡಿದ್ದು, ಅಪಾರ್ಟ್ಮೆಂಟಿನ ಇಂಗು ಗುಂಡಿಯಲ್ಲಿ ಪಳೆಯುಳಿಕೆ ಸಿಕ್ಕಿದೆ. ಮೇಲ್ನೋಟಕ್ಕೆ ಇದು ಪುರುಷರ ಅಸ್ತಿಪಂಜರದ ರೀತಿ ಕಾಣಿಸುತ್ತಿದೆ. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ…
ಚಿಕ್ಕಬಳ್ಳಾಪುರ : ಇಂದು ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಬೇಕಿತ್ತು ಆದರೆ ಕಾರಣಾಂತರಗಳಿಂದ ಈ ಒಂದು ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿತ್ತು. ಇದೀಗ ಜುಲೈ 3ರಂದು ಮತ್ತೆ ನಂದಿ ಬೆಟ್ಟದಲ್ಲಿ ರಾಜ್ಯಸಭೆ ಸಂಪುಟ ಸಭೆ ನಡೆಸಲು ರಾಜ್ಯ ಸರ್ಕಾರ ಇದೀಗ ತೀರ್ಮಾನಿಸಿದೆ. ಹೌದು ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಬೆಟ್ಟದಲ್ಲಿ ಜುಲೈ 3ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ಇದೀಗ ನಿರ್ಧರಿಸಿದೆ. ಇಂದು ನಂದಿ ಬೆಟ್ಟದಲ್ಲಿ ನಿಗದಿಯಾಗಿದ್ದ ಸಂಪುಟ ಸಭೆ ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಇದೀಗ ಜುಲೈ 3ರಂದು ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ.