Author: kannadanewsnow05

ಹಾವೇರಿ : ಸಾಂಬಾರ್ ಮೈ ಮೇಲೆ ಬಿದ್ದು ಗಾಯಗೊಂಡಿದ್ದ ಬಾಲಕಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ರಾಮಪುರ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ರುಕ್ಸಾನಾ ಬಾನು ಶೇಖ್ ಸನದಿ ಎನ್ನುವ ಬಾಲಕಿ ಸಾವನಪ್ಪಿದ್ದಾಳೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ರಾಮಾಪುರ ಎಂಬ ಗ್ರಾಮದಲ್ಲಿ ಈ ಒಂದು ದುರಂತ ನಡೆದಿದೆ. ಪೋಷಕರ ಜೊತೆಗೆ ಬಾಲಕಿ ಸಂಬಂಧಿಕರ ವಿವಾಹಕ್ಕೆ ಹೋಗಿದ್ದಳು. ಮದುವೆಯ ಮನೆಯಲ್ಲಿ ಬಾಲಕಿಯ ಮೇಲೆ ಬಿಸಿ ಸಾಂಬಾರ್ ಬಿದ್ದಿದೆ. ತಕ್ಷಣ ಬಾಲಕಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನದ ಹಿಂದೆ ಅಷ್ಟೇ ಬಾಲಕಿಯನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಇಂದು ಮತ್ತೆ ಬಾಲಕೀಯ ಮೈ ಮೇಲೆ ಗುಳ್ಳೆಗಳು ಆಗಿದ್ದವು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ.

Read More

ಶಿವಮೊಗ್ಗ : ಇಂದು ಶಿವಮೊಗ್ಗದಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ವೈದ್ಯ ದಂಪತಿಯ ಪುತ್ರಿಯೊಬ್ಬರು ಮೃತಪಟ್ಟಿದ್ದಾರೆ. ಮೃತ ಯುವತಿ ಸಹ ಇತ್ತೀಚಿಗಷ್ಟೇ ಎಂಬಿಬಿಎಸ್ ಮುಗಿಸಿ ವೈದ್ಯೇಯಾಗಿದ್ದಳು ಎಂದು ತಿಳಿದುಬಂದಿದೆ. ಇತ್ತೀಚಿಗಷ್ಟೇ ಮೃತ ಡಾ. ಸಾನಾ ವೈದ್ಯೆಯಾಗಿದ್ದರು. ಕಳೆದ ತಿಂಗಳು ಅಷ್ಟೇ ಎಂಬಿಬಿಎಸ್ ಮುಗಿಸಿ ಬಂದಿದ್ದರು. ಶಿವಮೊಗ್ಗದ ಸಿನ್ಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ್ದರು. ಶಿವಮೊಗ್ಗದ ತಾವರೆಕೊಪ್ಪದಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಶಿವಮೊಗ್ಗದ ಟ್ಯಾಂಕ್ ಮೊಹಲ್ಲ ನಿವಾಸಿಯಾಗಿರುವ ಸಾನಾ ಈ ಒಂದು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಘಟನೆ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಉಡುಪಿ : ಪತ್ನಿ ಅತಿಯಾದ ಮೊಬೈಲ್ ಬಳಸ್ತಿಯ ಎಂದು ಪತಿಯೊಬ್ಬ ಪತ್ನಿಯ ಜೊತೆಗೆ ಗಲಾಟೆ ತೆಗೆದು ಕತ್ತಿಯಿಂದ ಕೊಚ್ಚಿ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಈ ಒಂದು ಘಟನೆ ನಡೆದಿದೆ.ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ಪತ್ನಿ ರೇಖಾ (28) ಎನ್ನುವ ಪತ್ನಿಯನ್ನು ಪತಿ ಗಣೇಶ್ ಭೀಕರವಾಗಿ ಕೊಲೆ ಮಾಡಿದ್ದಾನೆ. ಮದ್ಯ ವ್ಯಸನಿಯಾಗಿರುವ ಗಣೇಶ್ ಪೂಜಾರಿ ಇಂದ ಈ ಒಂದು ಕೃತ್ಯ ನಡೆದಿದೆ. ವಿಪರೀತ ಮೊಬೈಲ್ ಬಳಸುತ್ತೀಯಾ ಎಂದು ಪತ್ನಿಯ ಜೊತೆಗೆ ಗಣೇಶ್ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಕತ್ತಿಯಿಂದ ಕೊಚ್ಚಿ ಪತ್ನಿಯ ಭೀಕರ ಕೊಲೆ ಮಾಡಿದ್ದಾನೆ.ಸದ್ಯ ಪೊಲೀಸರು ಆರೋಪಿ ಗಣೇಶನನ್ನು ಅರೆಸ್ಟ್ ಮಾಡಿದ್ದಾರೆ. ಕೊಲೆ ಕುರಿತಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣದಲ್ಲಿ ಜೂನ್ 22 ರಂದು ಸಂಚಾರದಲ್ಲಿ ವ್ಯತ್ಯಯ ಇರಲಿದೆ. ಭಾನುವಾರ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಇರಲಿದ್ದು, ಎಂ. ಜಿ ರಸ್ತೆಯಿಂದ ಬೈಯಪ್ಪನಹಳ್ಳಿ ನಡುವಿನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಜೂನ್ 22 ರಂದು ಟ್ರಿನಿಟಿ ಸರ್ಕಲ್, ಹಲಸೂರು ನಡುವೆ ನಿರ್ವಹಣಾ ಕಾಮಗಾರಿ ಹಿನ್ನಲೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಸಂಚಾರ ಇರುವುದಿಲ್ಲ.ಆದರೆ ಬೈಯಪ್ಪನಹಳ್ಳಿಯಿಂದ ಕಾಡುಗೋಡಿಯವರೆಗೂ ಮೆಟ್ರೋ ಸಂಚಾರ ಇರುತ್ತದೆ. ಅಲ್ಲದೇ ಚಲಘಟ್ಟದಿಂದ ಎಂ. ಜಿ ರಸ್ತೆ ಅವರಿಗೆ ಎಂದಿನಂತೆ ಮೆಟ್ರೋ ಸಂಚಾರ ಇರಲಿದೆ. ಆದರೆ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿಯ ನಡುವೆ ಮಾತ್ರ ಸಂಚಾರ ಇರುವುದಿಲ್ಲ. ಹಸಿರು ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಸಂಚಾರ ಇರಲಿದೆ ಎಂದು ಬಿಎಂಆರ್‌ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಬೆಂಗಳೂರು : ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಜೂನ್ ನಾಲ್ಕರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಸುವ ವೇಳೆ ಕಾಲ್ತುಳಿತದಿಂದ 11 ಜನರು ಸಾವನಪ್ಪಿದ್ದರು. ಈ ಒಂದು ಪ್ರಕರಣದಿಂದ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ ದಯಾನಂದ್ ಅಮಾನತುಕೊಂಡಿದ್ದರು. ಇದೀಗ ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಜಗದೀಶ್ ಅವರು ಬಿ.ದಯಾನಂದ್ ಗೆ ನೋಟಿಸ್ ನೀಡಿದ್ದಾರೆ. ಹೌದು ಕಳೆದ ಜೂನ್ 4 ರಂದು ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ವಿಚಾರಣೆಗೆ ಹಾಜರಾಗುವಂತೆ ಬಿ.ದಯಾನಂದ್ ಅವರಿಗೆಗೆ ನೋಟಿಸ್ ನೀಡಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ದಯಾನಂದ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಒಂದು ಕಾಲ್ತುಳಿದ ಪ್ರಕರಣದಲ್ಲಿ ಸದ್ಯ ಬಿ.ದಯಾನಂದ ಅವರು ಅಮಾನತ್ತಿನಲ್ಲಿದ್ದಾರೆ.

Read More

ಬೆಂಗಳೂರು : ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಗೆ ಏಕಾಏಕಿ ವ್ಯಕ್ತಿಯೊಬ್ಬ ನುಗ್ಗಲು ಯತ್ನಿಸಿದ್ದಾನೆ. ಏರ್ಪೋರ್ಟ್ ಟರ್ಮಿನಲ್ ಗೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ತಕ್ಷಣ CISF ಸಿಬ್ಬಂದಿಗಳು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ. ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.ಪಾಸ್ ಪೋರ್ಟ್ ಇಲ್ಲದೆ ಏಕಾಏಕಿ ಟರ್ಮಿನಲ್ ಗೆ ನುಗ್ಗಿದ್ದಾನೆ. ಸದ್ಯ ವಶಕ್ಕೆ ಪಡೆದ ವ್ಯಕ್ತಿಯನ್ನು ಸದಾದ್ ಮಹಮ್ಮದ್ ಬಾಬಾ ಎಂದು ತಿಳಿದುಬಂದಿದೆ. ಮಹಮದ್ ಬಾಬಾ ಜಮ್ಮು ಕಾಶ್ಮೀರದ ಶ್ರೀನಗರ ಮೂಲದ ನಿವಾಸಿ ಎನ್ನಲಾಗಿದ್ದು, ಸಿಐಎಸ್ಎಫ್ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

Read More

ಮೈಸೂರು : ಅನಾರೋಗ್ಯದಿಂದ ಬಳಲುತ್ತಿದ್ದ ಉದ್ಯಮಿಯೊಬ್ಬರು ತಮ್ಮ ಕಾರ್ಖಾನೆ ಸಮೀಪ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅರ್ಜುನ್ (40) ಮೃತ ದುರ್ದೈವಿ.ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಎಸ್.ಎಸ್. ಇಂಡಸ್ಟ್ರೀಸ್ ಎಂಬ ಕಾರ್ಖಾನೆ ನಡೆಸುತ್ತಿದ್ದರು. ಹಲವಾರು ದಿನಗಳಿಂದ ಅರ್ಜುನ್ ಅನಾರೋಗ್ಯದಿಂದ ಬಳಲುತ್ತಿದ್ದರೆಂದು ಹೇಳಲಾಗಿದೆ.ಮುಂಜಾನೆ ಮನೆಯಿಂದ ಹೊರನಡೆದ ಅರ್ಜುನ್ ತಮ್ಮ ಇಂಡಸ್ಟ್ರೀಸ್ ಸಮೀಪ ನೇಣಿಗೆ ಶರಣಾಗಿದ್ದಾರೆ. ಮುಂಜಾನೆಯೇ ಮನೆಯಲ್ಲಿ ಅರ್ಜುನ್ ಕಂಡು ಬಂದಿಲ್ಲ.ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸಿದಾಗ ಮನೆಯಿಂದ ಹೊರಗೆ ತೆರಳಿರುವುದು ಕಂಡುಬಂದಿದೆ. ಇದಾದ ಕೆಲಸಮಯದ ನಂತರ ಅರ್ಜನ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಈ ಸಂಬಂಧ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಲ್ಲಿ ಬೆಸ್ಕಾಂ ನಿರ್ಲಕ್ಷಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಕಳೆದ ಜೂನ್ 15 ರಂದು ಕೆಆರ್ ಪುರಂನ ಸ್ವಾತಂತ್ರ್ಯ ನಗರದಲ್ಲಿ ಆಟವಾಡುತ್ತಾ ಬಾಲಕನೊಬ್ಬ ಪೋರಕೆಯನ್ನು ಹೈಟೆನ್ಶನ್ ವಿದ್ಯುತ್ ಬಳಿ ಎಸೆದಾಗ ಈ ವೇಳೆ ವಿದ್ಯುತ್ ಶಾಕ್ ನಿಂದ ಬಾಲಕ ಗಂಭೀರವಾಗಿ ಗಾಯಗೊಳ್ಳುತ್ತಾನೆ. ನಂತರ ಆತನನ್ನು ಸ್ಥಳಿಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಆದರೆ ಇಂದು ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆ. ಹೌದು ಹೈಟೆನ್ಷನ್ ವಿದ್ಯುತ್ ತಗುಲಿ ಗಾಯಗೊಂಡಿದ್ದ ಬಾಲಕ ಇದೀಗ ಸಾವನಪ್ಪಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 10 ವರ್ಷದ ಅನಂತ್ ಕೊನೆಯುಸಿರೆಳಿದಿದ್ದಾನೆ. ಬೆಂಗಳೂರಿನ ಕೆಆರ್ ಪುರಂ ನ ಸ್ವಾತಂತ್ರ್ಯ ನಗರದಲ್ಲಿ ಘಟನೆ ನಡೆದಿದ್ದು, ನೇಪಾಳದಿಂದ ಬಂದು ಅನಂತ್ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ಜೂನ್ 15ರಂದು ಪೊರಕೆ ಎಸೆಯುವ ವೇಳೆ ವಿದ್ಯುತ್ ಶಾಕ್ ತಗುಲಿ ಅನಂತ್ ಗಾಯಗೊಳ್ಳುತ್ತಾನೆ. ವಿಕ್ಟೊರಿಯ ಆಸ್ಪತ್ರೆಯಲ್ಲಿ ಅನಂತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ 12:30 ಸುಮಾರಿಗೆ ಸಾವನ್ನಪ್ಪಿದ್ದಾನೆ ಘಟನೆ ಸಂಭಂದ ಕೆಆರ್ ಪುರಂ ಠಾಣೆಯಲ್ಲಿ ಪ್ರಕರಣ…

Read More

ಕಲಬುರಗಿ : ಕಲಬುರ್ಗಿಯಲ್ಲಿ ಭೀಕರ ಕೊಲೆಯಾಗಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಗಂಡನನ್ನೆ ಪತ್ನಿ ಹಾಗೂ ಆಕೆಯ ಪ್ರೀಯಕರ ಸೇರಿ ಕೊಲೆಗೈದಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭಾಗೋಡಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಹತ್ಯೆಯಾದ ವ್ಯಕ್ತಿಯನ್ನು ಕಬ್ಬಲಿಗ ಸಮಾಜದ ತಿಪ್ಪಣ್ಣ ಕುಪೇಂದ್ರ (30) ಎಂದು ತಿಳಿದುಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಬಾರದೆಂದು ಶಾಂತಮ್ಮ ಮತ್ತು ಆಕೆಯ ಪ್ರಿಯಕರ ಸೇರಿ ತಿಪ್ಪಣ್ಣ ಕುಪೇಂದ್ರ ಎನ್ನುವವರನ್ನು ತಲೆದಿಂಬ್ಬಿಂದ ಮುಖವನ್ನು ಮುಚ್ಚಿ ಉಸಿರು ಗಟ್ಟಿಸಿ ಕೊಲೆಗೈದಿದ್ದಾರೆ ಎಂದು ತಿಳಿದು ಬಂದಿದೆ. ತಲೆ ದಿಂಬಿನಿಂದ ಮುಖವನ್ನು ಮುಚ್ಚಿ ಉಸಿರು ಗಟ್ಟಿಸುತ್ತಿರುವಾಗ ತಿಪ್ಪಣ್ಣ ಜೋರಾಗಿ ಕಿರುಚಿದ್ದು ಅಕ್ಕ ಪಕ್ಕದವರು ಬಂದು ಮನೆಯ ಬಾಗಿಲು ಬಡಿದಾಗ ಯಾರೂ ಮನೆಯ ಬಾಗಿಲು ತೆರೆಯಲಿಲ್ಲ ಇದರಿಂದ ಅನುಮಾನಗೊಂಡು 112 ಗೆ ಕರೆ ಮಾಡಿ ಪೊಲೀಸರನ್ನು ಕರೆಸಿದಾಗ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇತ್ತ ಪೊಲೀಸರು ಬರುವ ವಿಚಾರ ಗೊತ್ತಾಗುತ್ತಿದ್ದಂತೆ ಪ್ರಿಯಕರ ಅಟ್ಟದ ಮೇಲೆ ಹೋಗಿ ಅಲ್ಲಿನ ಕಿಟಕಿಯಿಂದ ಜಿಗಿದು ಪರಾರಿಯಾಗಿದ್ದಾನೆ. ಶಾಂತಮ್ಮನನ್ನು…

Read More

ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ನಂದ ಕಿಶೋರ್ ವಿರುದ್ಧ ಗಂಭೀರವಾದ ಆರೋಪ ಕೇಳಿಬಂದಿದೆ. ಯುವ ನಟ ಶಬರೀಶ್, ನಂದ ಕಿಶೋರ್ ಅವರು ತಮ್ಮಿಂದ 22 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದು, ಈಗ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಅಲ್ಲದೆ ಸುದೀಪ್ ಅವರ ಹೆಸರು ಬಳಸಿ ನನಗೆ ಬೆದರಿಕೆ ಸಹ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಹೌದು ಸುದೀಪ್ ನಟನೆಯ ರನ್ನ, ವಿಕ್ಟರಿ, ಅಧ್ಯಕ್ಷ, ಪೊಗರು, ಸೇರಿದಂತೆ ಇನ್ನೂ ಕೆಲ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ನಂದ ಕಿಶೋರ್ ವಿರುದ್ಧ ಯುವ ನಟ ಶಬರಿಶ್ ಹಣಕಾಸು ವಂಚನೆ ಆರೋಪ ಮಾಡಿದ್ದಾರೆ. ನಿರ್ದೇಶಕ ನಂದ ಕಿಶೋರ್, ತಮ್ಮಿಂದ 22 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಟ ಶಬರಿಶ್ ನಿರ್ದೇಶಕ ನಂದ ಕಿಶೋರ್ ಸುಮಾರು ಒಂಬತ್ತು ವರ್ಷಗಳ ಹಿಂದೆ ಜಿಮ್ ಒಂದರಲ್ಲಿ ಪರಿಚಯವಾದರಂತೆ. ಪರಿಚಯ ಗೆಳೆತನವಾಗಿ, ನಂದ ಕಿಶೋರ್, ಶರಬೀಶ್ ಅವರನ್ನು ಸಿಸಿಎಲ್​​ನಲ್ಲಿ ಆಡಿಸುವುದಾಗಿ ಭರವಸೆ ನೀಡಿ, ಶಬರೀಶ್ ಅವರಿಂದ…

Read More