Author: kannadanewsnow05

ಬೆಂಗಳೂರು : ಮೊಂತಾ ಚಂಡಮಾರುತದ ಪರಿಣಾಮ ನೆಲೆಯಲ್ಲಿ ರೈಲುಗಳ ಸಂಚಾರದಲ್ಲಿ ವಿಳಂಬ ಆಗಿದೆ ಬೆಂಗಳೂರಿನಿಂದ ಹೊರಡಬೇಕಿದ್ದ ರೈಲುಗಳ ಸಂಚಾರದಲೂ ವಿಳಂಬವಾಗಿದ್ದು 12 ಗಂಟೆಗಳ ಕಾಲ ರೈಲುಗಳು ತಡವಾಗಿ ಸಂಚರಿಸಲಿವೆ. ಅಲ್ಲದೇ ಕಾಕಿನಾಡದಿಂದ ಬರಬೇಕಿದ್ದ ಎಕ್ಸ್ಪ್ರೆಸ್ ರೈಲು ರದ್ದಾಗಿದೆ ಕಾಕಿನಾಡ- ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲು ರದ್ದಾಗಿವೆ. ಬೆಂಗಳೂರು ನಾಗೇರ್ ಕಾಯಲ್ ರೈಲು ಸಂಚಾರ ಕೂಡ ಬಂದ್ ಆಗಿದ್ದು, ಕೆಲವು ರೈಲುಗಳ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಬದಲು ಮಾಡಿದೆ. 12 ಗಂಟೆಗಳ ಕಾಲ ತಡವಾಗಿ ಸಂಚರಿಸಲಿವೆ ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲ್ವೇ ನಿಲ್ದಾಣದಲ್ಲಿ ಮಾಹಿತಿ ಪಡೆದು ಸಂಚರಿಸಬೇಕು.

Read More

ಬಾಗಲಕೋಟೆ : ಬಾಗಲಕೋಟೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ದೀಪಾವಳಿಯಂದೆ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಒಂದು ಅಗ್ನಿ ದುರಂತದಲ್ಲಿ ಎಂಟು ಬೈಕ್ಗಳು ಹಾಗೂ ಮನೆಯ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸ್ನೇಹ ಮೇದಾರ ಸಾವನಪ್ಪಿದ್ದಾಳೆ. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸ್ನೇಹ ಚಿಕಿತ್ಸೆ ಪಡೆಯುತ್ತಿದ್ದಾಲಿ. ಆದರೆ l ಚಿಕಿತ್ಸೆ ಫಲಿಸದೆ ಸ್ನೇಹ ಸಾವನ್ನಪ್ಪಿದ್ದಾಳೆ. ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ನಲ್ಲಿ ಘಟನೆ ನಡೆದಿತ್ತು ಹಬ್ಬಕ್ಕೆ ಹಚ್ಚಿದ ದೀಪಗಳಿಂದ ಬೆಂಕಿ ಹತ್ತಿಕೊಂಡಿತ್ತು 8 ಬೈಕ್ ಹಾಗೂ ಇಡೀ ಮನೆ ಸುಟ್ಟು ಕರಕಲಾಗಿತ್ತು. ಈ ಒಂದು ಘಟನೆಯಲ್ಲಿ ಸ್ನೇಹ ಗಂಭೀರವಾಗಿ ಗಾಯಗೊಂಡಿದ್ದಳು ಆದರೆ ಬೆಳಗಾವಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇದೀಗ ಸಾವನ್ನಪ್ಪಿದ್ದಾಳೆ.

Read More

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಶ್ಚಿಮ ಬಂಗಾಳದ ಮೂಲದ ಮಹಿಳೆಯ ಮೇಲೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಾದನಾಯಕನಹಳ್ಳಿ ಪೊಲೀಸ್ ಸರು ಪ್ರಕರಣದ A1 ಆರೋಪಿಯಾಗಿದ್ದ ಮಿಥುನ್ ನನ್ನು ಅರೆಸ್ಟ್ ಮಾಡಿದ್ದಾರೆ. ಹೌದು ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ಆರೋಪಿ ಆಗಿರುವಂತಹ A1 ಆರೋಪಿ ಮಿಥುನ್ ನನ್ನ ಮಾದನಾಯಕನಹಳ್ಳಿ ಪೋಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಮಿಥುನ್ ಪರಾರಿಆಗಿದ್ದ ಶಿವಗಂಗೆಯ ಬಳಿ ತಲೆಮರಿಸಿಕೊಂಡಿದ್ದ ಮಿಥುನನ್ನು ಅರೆಸ್ಟ್ ಮಾಡಿದ್ದು ಪ್ರಕರಣದ ಎಲ್ಲಾ ಆರೋಪಿಗಳನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹಿಸಲು ಮುಂದಾಗಿರುವ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ವರದಿಯನ್ನು ಸಿದ್ಧಪಡಿಸಲಿದ್ದಾರೆ.

Read More

ಉತ್ತರಕನ್ನಡ : ಖಾಸಗಿ ಬಸ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಕೋಟಿ ರೂಪಾಯಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಉತ್ತರಕನ್ನಡ ಜಿಲ್ಕೆಯ ಕಾರವಾರ ತಾಲೂಕಿನ ಮಾದಾಳಿ ಚೆಕ್ ಪೋಸ್ಟ್ ನಲ್ಲಿ ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಗೋವಾದಿಂದ 1 ಕೋಟಿ ರೂಪಾಯಿ ಹಣವನ್ನು ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು ಕಲ್ಮೇಶಕುಮಾರ್, ಬೊಂಬ್ರಾರಾಮ್ ಎಂಬುವವರ ಬ್ಯಾಗಿನಲ್ಲಿ ಹಣ ಪತ್ತೆಯಾಗಿದೆ. ಪೊಲೀಸರು ಖಾಸಗಿ ಬಸ್ ತಪಾಸಣೆ ನಡೆಸಿದ್ದಾರೆ ಒಂದು ಕೋಟಿ ರೂಪಾಯಿ ಹಣ ಪತ್ತೆಯಾಗಿದೆ. ನಿನ್ನೆ ರಾತ್ರಿ 9:30 ಕ್ಕೆ ಪೊಲೀಸರು ಹಣ ವಶ ಪಡೆದು ತನಿಖೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು, ಹಿಟ್ ಅಂಡ್ ರನ್ ಗೆ ಇಬ್ಬರು ಬೈಕ್ ಸವಾರರು ಬಲಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಬಳಿ ಈ ಒಂದು ಘಟನೆ ಸಂಭವಿಸಿದ್ದು, ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ನಲ್ಲಿ ಇದ್ದಂತಹ ಇಬ್ಬರು ಯುವಕರು ಸಾವನಪ್ಪಿದ್ದಾರೆ. ಈ ಒಂದು ಅಪಘಾತದಲ್ಲಿ ತೂಬಗೆರೆ ನಿವಾಸಿ ನಂದನ್ ಕುಮಾರ್ (22) ಹಾಗೂ ದೊಡ್ಡ ತಿಮ್ಮನಹಳ್ಳಿಯ ರವಿಕುಮಾರ್ (24) ಮೃತ ಯುವಕರು ಎಂದು ತಿಳಿದುಬಂದಿದೆ. ಮೃತರು ದೊಡ್ಡಬಳ್ಳಾಪುರ ನಗರದ ಎಲ್ ಅಂಡ್ ಟಿ ಕಂಪನಿಯ ಸಿಬ್ಬಂದಿಗಳು ಎಂದು ತಿಳಿದುಬಂದಿದೆ. ಬೈಕ್ ಗೆ ಹಿಂದಿನಿಂದ ವೇಗವಾಗಿ ಬಂದಂತಹ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ.ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ…

Read More

ಕೊಪ್ಪಳ : ಕೊಪ್ಪಳದಲ್ಲಿ ಹೃದಯ ವಿದ್ರಾವಕ ಒಂದು ಘಟನೆ ಒಂದು ನಡೆದಿದ್ದು, ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಬೆನಕಲ್ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ, ಇಬ್ಬರು ಮಕ್ಕಳನ್ನು ಕೊಂದು ತಾಯಾತ್ಮ ತಿಳಿ ಶರಣಾಗಿದ್ದಾಳೆ. ಮಕ್ಕಳಾದ ರಮೇಶ (4) ಮತ್ತು ಜಾನು (2) ಹತ್ತಿ ಗೈದು ಲಕ್ಷ್ಮವ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್ ನಿಂದ ಪ್ರಯಾಣಿಕನೊಬ್ಬ ತನ್ನ ಬ್ಯಾಗ್ ನಲ್ಲಿ ಅಕ್ರಮವಾಗಿ ಎರಡೂವರೆ ಕೆಜಿ ಗಾಂಜಾವನ್ನು ತಂದಾಗ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯ ವೇಳೆ ಸಿಗಿ ಬಿದ್ದಿದ್ದಾನೆ. ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡುವರೆ ಕೆಜಿ ಕಾಂಜಾ ಪತ್ತೆಯಾಗಿದೆ. ಬ್ಯಾಂಕಾಕ್ ನಿಂದ ಪ್ರಯಾಣಿಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ತನ್ನ ಬ್ಯಾಗ್ ನ ಕೆಳಭಾಗದಲ್ಲಿ ಅಂಟಿಸಿ ಗಾಂಜಾ ತಂದಿದ್ದ. ವಿಮಾನ ನಿಲ್ದಾಣದಲ್ಲಿ ಪೊಲೀಸರ ಪರಿಶೀಲನೆ ವೇಳೆ ಗಾಂಜಾ ಪತ್ತೆಯಾಗಿದೆ. ಸದ್ಯ ಕೆಂಪೇಗೌಡ ಏರ್ಪೋರ್ಟ್ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Read More

ತುಮಕೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಈಗಾಗಲೇ ಹಲವಾರು ಚರ್ಚೆಗಳು ಆರಂಭವಾಗಿದ್ದು ಇತ್ತೀಚಿಗೆ ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ತಂದೆ ರಾಜಕೀಯ ಕೊನೆಗಾಲದಲ್ಲಿ ಇದ್ದಾರೆ ಅವರ ನಂತರ ಹಿಂದೂ ಸಂಘಟನೆಯನ್ನು ಸತೀಶ್ ಜಾರಕಿಹೊಳಿ ಮುನ್ನಡೆಸಲಿದ್ದಾರೆ ಆ ಅರ್ಹತೆ ಅವರಿಗಿದೆ ಇದೆ ಎಂದು ಪರೋಕ್ಷವಾಗಿ ನೆಕ್ಸ್ಟ್ ಸಿಎಂ ಸತೀಶ್ ಜಾರಕಿಹೊಳಿ ಎಂದು ಹೇಳಿಕೆ ನೀಡಿದರು. ಅಲ್ಲದೇ ಇಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಕೆ.ಎಚ್ ಮುನಿಯಪ್ಪ ಅವರು ಹಿರಿಯರು ಅವರಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ.ಅವರು ಮುಖ್ಯಮಂತ್ರಿ ಆದರೆ ನನಗೆ ತುಂಬಾ ಖುಷಿಯಾಗುತ್ತದೆ. ನಾನು ಅದನ್ನು ಸ್ವಾಗತ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದೀಗ ವೀರಭದ್ರ ಸ್ವಾಮಿಜಿಗಳು ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಲಿ ಎಂದು ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ನಡೆದ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ಚೆಟ್ಟೇನಹಳ್ಳಿಯಲ್ಲಿ ಧಾರ್ಮಿಕ ಸಭೆಯಲ್ಲಿ ಹೇಳಿಕೆ ನೀಡಿದ್ದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚೆಟ್ಟೇನಹಳ್ಳಿ ಪರಮೇಶ್ವರ್ ಸಿಎಂ ಆಗಲಿ ಎನ್ನುವುದು…

Read More

ಮಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಈಗಾಗಲೇ ಭಾರಿ ಚರ್ಚೆ ನಡೆಯುತ್ತಿದ್ದು ಅದರ ಜೊತೆಗೆ ಸಂಪುಟ ಪುನಾರ ರಚನೆ ಕುರಿತಂತೆ ಹಲವು ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ ಇದೀಗ ಐದು ವರ್ಷಗಳ ಕಾಲ ನೀವೇ ಮುಖ್ಯಮಂತ್ರಿನ ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ತೀರ್ಮಾನ ಮಾಡಿದರೆ ನಾನೇ ಮುಖ್ಯಮಂತ್ರಿ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು 5 ವರ್ಷಗಳ ಕಾಲ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯಲಿದ್ದಾರೆ ಅದಕ್ಕೆ ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದಾಗ ಒಂದು ವೇಳೆ ಹೈಕಮಾಂಡ್ ಮನಸ್ಸು ಮಾಡಿದರೆ ಐದು ವರ್ಷಗಳ ಕಾಲ ಕೂಡ ನಾನೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತೇನೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಈ ಒಂದು ಹೇಳಿಕೆ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಿಎಂ ಆಗಲು ತುದಿಗಾಲಲಿ ನಿಂತಿರುವ ಎಲ್ಲ ನಾಯಕರಿಗೂ ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗುತ್ತಿದೆ.

Read More

ಕೋಲಾರ : ಮದ್ಯ ಸೇವನೆ ಬಳಿಕ ಸ್ನಾಕ್ಸ್ ನೀಡಿದ್ದಕ್ಕೆ ಬಾರ್ ಕ್ಯಾಶಿಯರ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಕೊಲೆ ನಡೆದ 24 ಗಂಟೆಯಲ್ಲೇ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ಠಾಣೆ ಪೊಲೀಸರು ಕೊಲೆ ಆರೋಪಿ ಸುಭಾಷ್ ಅಲಿಯಾಸ್ ಮಿಯಾನನ್ನ ಅರೆಸ್ಟ್ ಮಾಡಿದ್ದಾರೆ. ಬಾರ್ ಮುಚ್ಚುವ ವೇಳೆ ಬಂದು ಸ್ನಾಕ್ಸ್ ಕೊಡಿ ಅಂತ ಸುಭಾಷ್ ಕಿರುಕುಳ ನೀಡಿದ್ದಾನೆ. ಈ ವೇಳೆ ಕುಮಾರ್ ಸ್ನಾಕ್ಸ್ ಕೊಡಲು ಆಗಲ್ಲ ಅಂತ ಹೇಳಿದಾಗ ಕುಮಾರ ಪತ್ನಿ ಮತ್ತು ಮಕ್ಕಳ ಎದುರೇ ಸುಭಾಷ್ ಚಾಕು ಇರಿದು ಕುಮಾರನನ್ನ ಭೀಕರವಾಗಿ ಕೊಲೆ ಮಾಡಿದ್ದ. ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 24 ಗಂಟೆಯಲ್ಲಿ ಆರೋಪಿ ಸುಭಾಷ್ ನನ್ನ ಅರೆಸ್ಟ್ ಮಾಡಿದ್ದಾರೆ.

Read More