Subscribe to Updates
Get the latest creative news from FooBar about art, design and business.
Author: KNN IT Team
ಬೆಂಗಳೂರು : ಬೆಂಗಳೂರಿನಲ್ಲಿನ ನಮ್ಮ ಮೆಟ್ರೋದಲ್ಲಿ ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗೆ ಯತ್ನ ಹಾಗೂ ಹಳಿಗೆ ಜಿಗಿಯುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದನ್ನು ತಡೆಗಟ್ಟಲು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿರ್ಧಾರ ಮಾಡಿದೆ. ನಮ್ಮ ಮೆಟ್ರೋದಲ್ಲಿ ಉಂಟಾಗುತ್ತಿರುವ ಅವಘಡಗಳನ್ನು ತಡೆಯಲು ಶೀಘ್ರದಲ್ಲಿಯೇ ಹೆಚ್ಚುವರಿಯಾಗಿ 326 ಸಿಬ್ಬಂದಿಯನ್ನು ಬಿಎಂಆರ್ಸಿಎಲ್ ನಿಯೋಜಿಸಲಿದೆಯಾಗಿದೆ. ರೈಲುಗಳು ಸಂಚರಿಸುವಾಗ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು, ಪ್ರಯಾಣಿಕರ ಚಲನವಲನದ ಮೇಲೆ ನಿಗಾ ಇಡಲು, ರೈಲುಗಳ ಆಗಮನದ ಮೊದಲು ಪ್ರಯಾಣಿಕರನ್ನು ಸರದಿ ಸಾಲಿನಲ್ಲಿ ನಿಲ್ಲಿಸುವುದು, ಹಳದಿ ಗೆರೆ ದಾಟದಂತೆ ನೋಡಿಕೊಳ್ಳುವುದು ಭದ್ರತಾ ಸಿಬ್ಬಂದಿ ಕೆಲಸವಾಗಿದೆ. ಅವಘಡ ತಡೆಯಲು ಶೀಘ್ರದಲ್ಲೇ ಒಂಬತ್ತು ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್ ಫಾರಂಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ನಮ್ಮ ಮೆಟ್ರೊ ಎಂಟು ಭೂಗತ ನಿಲ್ದಾಣ ಸೇರಿದಂತೆ 65 ನಿಲ್ದಾಣಗಳನ್ನು ಹೊಂದಿದೆ. ಅಲ್ಲದೆ, ಅವುಗಳಲ್ಲಿ ಯಾವುದೂ ಪ್ಲಾಟ್ಫಾರ್ಮ್ ಪರದೆಯ ಬಾಗಿಲು ಅಥವಾ ಗೇಟ್ಗಳನ್ನು ಹೊಂದಿಲ್ಲ. ಹೆಚ್ಚುವರಿ ಸಿಬ್ಬಂದಿ ನೇಮಕದ ಜತೆಗೆ ಪ್ಲಾಟ್ಫಾರಂ…
ಈಗಿನ ಒತ್ತಡಯುತ ಜೀವನ ಶೈಲಿ, ನಿದ್ರಾಹೀನತೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ನಾವು ಸೇವಿಸುವ ಆಹಾರವು ನಿಮ್ಮ ಸಂತೋಷ ಮತ್ತು ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಡೋಪಮೈನ್ ಅಥವಾ ಸಂತೋಷದ ಹಾರ್ಮೋನುಗಳು ಮನಸ್ಥಿತಿ, ಸಂತೋಷವನ್ನು ನಿಯಂತ್ರಿಸುತ್ತವೆ. ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸುವ ಆಹಾರಗಳು ಯಾವುದೆಂಬುದರ ಮಾಹಿತಿ ಇಲ್ಲಿದೆ. ಸ್ವಲ್ಪ ಪ್ರಮಾಣದಲ್ಲಿ ಬಾದಾಮಿ ಅಥವಾ ವಾಲ್ನಟ್ಗಳನ್ನು ತಿನ್ನುವುದು ತೃಪ್ತಿಕರವಾದ ಸೆಳೆತವನ್ನು ನೀಡುವುದರ ಜೊತೆಗೆ ಸಿರೊಟೋನಿನ್ಗೆ ಕಾರಣವಾಗುವ ಟ್ರಿಪ್ಟೊಫಾನ್ ಅನ್ನು ನೀಡುತ್ತದೆ. ಇವು ಉತ್ಕರ್ಷಣ ನಿರೋಧಕಗಳಿಂದ ಕೂಡಿದ್ದು, ಖಿನ್ನತೆಯ ಅಪಾಯವನ್ನು ಕಡಿಮೆ ಮಾಡುತ್ತವೆ. ಆವಕಾಡೊ ವಿಟಮಿನ್ ಬಿ3 ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಒಳಗೊಂಡಿದೆ. ಸಿರೊಟೋನಿನ್ ಉತ್ಪಾದನೆಗೆ ಕೊಡುಗೆ ನೀಡುತ್ತದೆ. ಚೆರ್ರಿ ಟೊಮೆಟೊಗಳು ಲೈಕೋಪೀನ್ಅನ್ನು ಒಳಗೊಂಡಿದ್ದು, ಇದು ಚಿತ್ತ-ಉತ್ತೇಜಿಸುವ ಗುಣಲಕ್ಷಣಗಳೊಂದಿಗೆ ಸಂಬಂಧಿಸಿದ ಫೈಟೊನ್ಯೂಟ್ರಿಯೆಂಟ್ ಆಗಿದೆ. ಲೈಕೋಪೀನ್ ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಣಬೆಗಳು ವಿಟಮಿನ್ ಡಿ ಯ ಮೂಲವಾಗಿದ್ದು, ವಿಟಮಿನ್ ಡಿ ಮನಸ್ಥಿತಿಯನ್ನು ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಖಿನ್ನತೆ-ಶಮನಕಾರಿ ಗುಣಗಳನ್ನು…
ಮಂಗಳೂರು : ಮೇಲಧಿಕಾರಿಗಳ ಜೊತೆಗೆ ಅನುಚಿತವಾಗಿ ವರ್ತನೆ, ಮರಳು ಮಾಫಿಯಾಗಳೊಂದಿಗೆ ಶಾಮೀಲಾಗಿದ್ದಾರೆ ಮತ್ತು ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ್ಯದ ಆರೋಪದಲ್ಲಿ ಕಂಕನಾಡಿ ನಗರ ಠಾಣೆಯ ಇನ್ಸ್ ಪೆಕ್ಟರ್ ಎಸ್.ಎಚ್. ಭಜಂತ್ರಿ ಅವರನ್ನು ನಗರ ಪೊಲೀಸ್ ಆಯುಕ್ತರು ಅನುಪಮ್ ಅಗರ್ವಾಲ್ ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕಂಕನಾಡಿ ನಗರ ಠಾಣೆ ವ್ಯಾಪ್ತಿಯ ಜಪ್ಪಿನಮೊಗರು ಕಡೆಕಾರಿನಲ್ಲಿ ಅಕ್ರಮ ವ್ಯಾಪಕ ಮರಳುಗಾರಿಕೆ ನಡೆಯುತ್ತಿದ್ದರಿಂದ ಎಸಿಪಿ ಧನ್ಯಾ ನಾಯಕ್ ಕಾರ್ಯಾಚರಣೆ ನಡೆಸಲು ಅಧಿಕಾರಿಗೆ ಸೂಚಿಸಿದ್ದರೂ, ಇನ್ಸ್ ಪೆಕ್ಟರ್ ಭಜಂತ್ರಿ ನಿರ್ಲಕ್ಷ್ಯ ವಹಿಸಿದ್ದರು ಜೊತೆಗೆ ತನ್ನ ಮೇಲಧಿಕಾರಿ ಎಸಿಪಿ ಜೊತೆಗೆ ಉಡಾಫೆಯಿಂದ ಮಾತನಾಡಿದ್ದರು ಎನ್ನಲಾಗಿದೆ. ಎಂಟು ಟಿಪ್ಪರ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿದ್ದರು. ಮರಳು ಮತ್ತು ಟಿಪ್ಪರ್ ವಾಹನಗಳನ್ನು ಮುಂದಿನ ತನಿಖೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರ ಮಾಡಿದ್ದರು. ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ವ್ಯಾಪಕ ಮರಳುಗಾರಿಕೆ ನಡೆಯುತ್ತಿದ್ದರಿಂದ ಎಸಿಪಿ ಧನ್ಯಾ ನಾಯಕ್ ಕಾರ್ಯಾಚರಣೆ ನಡೆಸಲು ಸೂಚಿಸಿದ್ದರೂ, ಇನ್ಸ್ ಪೆಕ್ಟರ್ ಭಜಂತ್ರಿ ನಿರ್ಲಕ್ಷ್ಯ ವಹಿಸಿದ್ದರು.…
ರಾಮಮಂದಿರ ‘ಪ್ರಾಣ ಪ್ರತಿಷ್ಠಾಪನೆ’ಯ ಹಿನ್ನೆಲೆಯಲ್ಲಿ ಜನವರಿ 22 ರಂದು ರಾಜ್ಯದಲ್ಲಿಯೂ ರಜೆ ನೀಡಬೇಕೆಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಆದರೆ, ಅಂದು ಶಾಲೆಗಳಿಗೆ ರಜೆ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ ನಡುವೆ, ಖಾಸಗಿ ಶಾಲಾ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಗೆ ಸಮಾರಂಭವನ್ನು ಲೈವ್-ಸ್ಟ್ರೀಮ್ ಮೂಲಕ ತೋರಿಸಲು ಯೋಜಿಸಿವೆ ಎಂದು ತಿಳಿದುಬಂದಿದೆ. ನಾವು ಜನವರಿ 22ರಂದು ಶಾಲೆಗಳಿಗೆ ರಜೆ ಘೋಷಿಸುತ್ತಿಲ್ಲ. ಅದು ಕೆಲಸದ ದಿನವಾಗಿರುತ್ತದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಿಯಾದರು ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಪರಿಸ್ಥಿತಿ ಇದ್ದರೆ, ಆಯಾ ಜಿಲ್ಲಾಧಿಕಾರಿಗಳು ರಜೆ ಘೋಷಿಸಲು ಅವಕಾಶ ಇತ್ತದೆ” ಎಂದು ಶಿಕ್ಷಣ ಇಲಾಖೆಯ ಅದಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ರಜೆ ಇರುವುದಿಲ್ಲವೆಂದು ಸ್ಪಷ್ಟವಾದ ಬಳಿಕ, ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಆಫ್ ಸ್ಕೂಲ್ಸ್ ಇನ್ ಕರ್ನಾಟಕ (ಕೆಎಎಮ್ಎಸ್) ತನ್ನ ಎಲ್ಲ ಸದಸ್ಯ ಶಾಲೆಗಳಿಗೆ ರಜೆ ಘೋಷಿಸದಂತೆ ಸೂಚಿಸಿದೆ. ಅಲ್ಲದೆ, ಉದ್ಘಾಟನಾ ಸಮಾರಂಭವನ್ನು ಶಾಲೆಗಳಲ್ಲಿ ಲೈವ್-ಸ್ಟ್ರೀಮ್ ಮೂಲಕ ವಿದ್ಯಾರ್ಥಿಗಳಿಗೆ ತೋರಿಸುವಂತೆ ನಿರ್ದೇಶಿಸಿದೆ ಎಂದು ತಿಳಿದುಬಂದಿದೆ.Bottom of…
ರಾಮಮಂದಿರದಲ್ಲಿ ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಇದರ ನಡುವೆ ವಿ.ಎಚ್.ಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಾರ ಮಳಿಗೆಗಳು, ಹೊಟೇಲ್ ಉದ್ಯಮಿಗಳು, ಫ್ಯಾಕ್ಟರಿಗಳು, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳಿಗೆ ರಜೆ ನೀಡುವಂತೆ ಮನವಿ ಸಲ್ಲಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನರಿಗೆ ಭಾಗವಹಿಸಲು ಅನುವು ಮಾಡಿಕೊಡುವಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಜನವರಿ 22ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯ ಅವಧಿಯಲ್ಲಿ ರಜೆ ನೀಡುವಂತೆ ವ್ಯಾಪಾರ ಮಳಿಗೆಗಳು, ಹೊಟೇಲ್ ಉದ್ಯಮಿಗಳು, ಫ್ಯಾಕ್ಟರಿಗಳು, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು, ಉದ್ಯಮಪತಿಗಳಲ್ಲಿ ವಿ.ಎಚ್.ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಅವರು ಮನವಿ ಸಲ್ಲಿಸಿದ್ದಾರೆಯಾಗಿದೆ.
ವಿಜಯಪುರ : ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಆಚರಿಸಲು ಜನವರಿ 18 ರಿಂದ ಜನವರಿ 22 ರವರೆಗೆ ಉಚಿತ ಹೆರಿಗೆಯ ಸೌಲಭ್ಯ ಒದಗಿಸುವುದಾಗಿ ಜೆಎಸ್ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಿದೆ. ಜೆಎಸ್ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಡೆಸುತ್ತಿರುವ ‘ಶ್ರೀ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್’ ಈ ನಿರ್ಧಾರವನ್ನು ಪ್ರಕಟಿಸಿದೆ. ಇಂದಿನಿಂದ ಆರಂಭಗೊಂಡು, ಅಯೋಧ್ಯೆಯಲ್ಲಿ ಸೋಮವಾರ ನಡೆಯಲಿರುವ ‘ರಾಮಮಂದಿರ ಪ್ರಾಣ ಪ್ರತಿಷ್ಠಾ ದಿನವನ್ನು ಆಚರಿಸಲು ಜನವರಿ 22 ರವರೆಗೆ ನಮ್ಮ ಆಸ್ಪತ್ರೆಯಲ್ಲಿ ಹೆರಿಗೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಇದು ಒಂದು ದೊಡ್ಡ ಸಂದರ್ಭವಾಗಿದೆ ಮತ್ತು ನಾವು ಮಹತ್ವದ ರೀತಿಯಲ್ಲಿ ಕೊಡುಗೆ ನೀಡಲು ಬಯಸುತ್ತೇವೆ. ಹೀಗಾಗಿ ಐದು ದಿನಗಳ ಕಾಲ ನಮ್ಮ ಆಸ್ಪತ್ರೆಯಲ್ಲಿ ನಡೆಯುವ ಎಲ್ಲಾ ಹೆರಿಗೆಗಳನ್ನು ಉಚಿತವಾಗಿ ಮಾಡಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಯಾವುದೇ ಒಬ್ಬ ವ್ಯಕ್ತಿಯು ಸ್ವಯಂಪ್ರೇರಣೆಯಿಂದ ನೀಡಿದರೂ ಸಹ ಪಾಸ್ಪೋರ್ಟ್ ಮತ್ತು ಭಾರತೀಯ ಸಾಗರೋತ್ತರ ನಾಗರಿಕ (ಒಸಿಐ) ಕಾರ್ಡ್ಗಳನ್ನು ಬ್ಯಾಂಕ್ಗಳು ಸಾಲದ ಭದ್ರತೆಗಾಗಿ ಒತ್ತೆ ಇರಿಸಿಕೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಭಾರತದಲ್ಲಿ ಹುಟ್ಟಿದ್ದು, ಭಾರತದ ಒಸಿಐ ಕಾರ್ಡ್ ಹೊಂದಿರುವ ಯುನೈಟೆಡ್ ಕಿಂಗ್ಡಂ ಪ್ರಜೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆ ನಡೆಸಿದ್ದಾರೆ. ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಇಬ್ಬರು ವಸತಿ ಸಾಲ ಪಡೆದಿದ್ದರು. ಸಾಲದ ಭದ್ರತೆಗಾಗಿ ಅವರು ತಮ್ಮ ಪಾಸ್ಪೋರ್ಟ್ ಮತ್ತು ಒಸಿಐ ಕಾರ್ಡ್ಅನ್ನು ಬ್ಯಾಂಕ್ ನೀಡಿದ್ದರು. ಆದರೆ, ಸಾಲವನ್ನು ಪಾವತಿಸದ ಆರೋಪದ ಮೇಲೆ ಬ್ಯಾಂಕ್ ವಂಚನೆ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು. ಬ್ಯಾಂಕ್ ನಡೆ ಪ್ರಶ್ನಿಸಿ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು. ಯುನೈಟೆಡ್ ಕಿಂಗ್ಡಂ ಪ್ರಜೆಯ ಪರವಾಗಿ ವಾದ ಮಂಡಿಸಿದ ವಕೀಲರು, “ಪಾಸ್ಪೋರ್ಟ್ ಮತ್ತು ಒಸಿಐ ದಾಖಲೆಗಳನ್ನು ಬ್ಯಾಂಕ್ ತನ್ನ ಬಳಿ ಇಟ್ಟುಕೊಳ್ಳಲು ಅಧಿಕಾರವಿಲ್ಲ. ಯುಕೆ ಸರ್ಕಾರ ನೀಡಿದ ಪಾಸ್ಪೋರ್ಟ್ಅನ್ನು ತಡೆಹಿಡಿಯುವ ಅಥವಾ ಇಟ್ಟುಕೊಳ್ಳುವ ಅಧಿಕಾರ ಬ್ಯಾಂಕ್ಗಳಿಗೆ ಇಲ್ಲ.…
ಕರ್ನಾಟಕದಲ್ಲಿ ಬರ ಎದುರಾಗಿದೆ. ಇನ್ನೂ ಪರಿಹಾರ ನೀಡಿಲ್ಲವೆಂದು ಹಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ, ಬರದ ನಡುವೆಯೂ ಒಣಮೆಣಸಿನಕಾಯಿ ಬೆಲೆಯಲ್ಲಿ ಭಾರೀ ಕುಸಿತವಾಗಿದ್ದು, ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ಈ ಹಿಂದೆ 50,000 ರೂ.ವರೆಗೆ ಮಾರಾಟವಾಗುತ್ತಿದ್ದ ಕ್ವಿಂಟಲ್ ಮೆಣಸಿನಕಾಯಿ ಬೆಲೆ ಈಗ, 10,000 ರೂ.ಗೆ ಕುಸಿದಿದೆ ಎಂದು ಹೇಳಲಾಗಿದೆ. ಪರಿಣಾಮ, ಸಾಲ ಮಾಡಿ ಬೆಳೆ ಬೆಳೆದಿದ್ದ ರೈತರಿಗೆ ಭಾರೀ ಹೊಡೆತ ಕೊಟ್ಟಿದೆ ಎಂದು ಮಾಹಿತಿ ದೊರಕಿದೆ. ಬಳ್ಳಾರಿ ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ಮೆಣಸಿನಕಾಯಿ ಬೆಳೆ ಬೆಳೆದಿದ್ದರು. ಈಗ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಮೆಣಸಿನಕಾಯಿ ಖರೀದಿಗೆ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದು, ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಯಲ್ಲಿ ಸುಮಾರು 37,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಪ್ರತಿ ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲು ಸರಾಸರಿ 70,000 ರೂ. ವೆಚ್ಚವಾಗುತ್ತದೆ. ಬೆಳೆದ ಬೆಳೆಗೆ ಬೆಲೆಯೇ ಸಿಗದಿದ್ದರೆ ನಮ್ಮ ಪರಿಸ್ಥಿತಿ ಏನಾಗಬೇಕು ಎಂದು ರೈತರು ಅಳಲು ತೋಡಿಕೊಂಡಿದ್ದಾರೆಯಾಗಿದೆ.
ಮನೆಯಲ್ಲಾಗಲಿ, ಸಮಾರಂಭಗಳಲ್ಲಾಗಲಿ ಅಥವಾ ಎಲ್ಲಾ ಹೋಟೆಲ್ ಗಳಲ್ಲೂ ಊಟದ ನಂತರ ಮೊಸರು-ಸಕ್ಕರೆ ಕೊಡುವುದು ಗೊತ್ತಿದೆ. ಇದೆರಡನ್ನು ಮಿಕ್ಸ್ ಮಾಡಿ ಸವಿದರೆ ಅದೆಂತ ರುಚಿ. ಆದರೆ ಕೆಲವರು ಇದನ್ನು ತಿಂದರೆ ಶೀತ ಆಗುತ್ತೆ, ಕೆಮ್ಮು ಬರುತ್ತೆ, ಗಂಟಲು ಕೆರೆಯುತ್ತೆ ಎಂದೆಲ್ಲಾ ಅಲ್ಲಗಳೆಯುತ್ತಾರೆ. ತಿನ್ನೋರಿಗೂ ಅಡ್ಡಗಾಲು ಹಾಕುತ್ತಾರೆ. ಮೊಸರಿಗೆ ಸಕ್ಕರೆ ಸಾಕಿ ತಿನ್ನೋದ್ರಿಂದ ಏನೆಲ್ಲಾ ಲಾಭಗಳಿವೆಯೆಂದರೆ, ಶೀತ, ನೆಗಡಿ, ಕೆಮ್ಮು, ಕಫ ಕಡಿಮೆಯಾಗುತ್ತದೆ. ಅಸಿಡಿಟಿ, ಹೊಟ್ಟೆ ಉರಿ ಕಡಿಮೆಯಾಗುತ್ತದೆ. ದೇಹವನ್ನು ಸದಾ ತಂಪಾಗಿರಿಸುತ್ತದೆ. ಮೆದುಳಿನ ಹಾಗೂ ದೇಹದ ಶಕ್ತಿ ಹೆಚ್ಚಿಸುತ್ತದೆಯಾಗಿದೆ.
ಈಗೀಗ ಮನುಷ್ಯನಿಗೆ ಕೋಪ ಬರುವುದು ಸಹಜ. ಆದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ನೀವು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ಅನೇಕ ಜನರು ಕೋಪ ನಿರ್ವಹಣೆಗೆ ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಕೆಲವರು ಧ್ಯಾನವನ್ನು ಅಭ್ಯಾಸ ಮಾಡುತ್ತಾರೆ, ಇತರರು ವಿವಿಧ ರೀತಿಯ ಚಿಕಿತ್ಸೆಯನ್ನು ಅಭ್ಯಾಸ ಮಾಡುತ್ತಾರೆ. ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಹದಗೆಡುತ್ತದೆ. ಮಾನವ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಕೆಲವು ವಿಧದ ರತ್ನಗಳು ಜನರ ಕೋಪವನ್ನು ನಿಯಂತ್ರಿಸಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅದ್ಭುತ ರತ್ನದ ಕಲ್ಲು ಅಮೆಥಿಸ್ಟ್ ಆಗಿದೆ. ಇದು ತಿಳಿ ನೇರಳೆ ಬಣ್ಣವನ್ನು ಹೊಂದಿರುತ್ತದೆ. ಇದನ್ನು ಧರಿಸುವುದರಿಂದ ಮನುಷ್ಯನ ಸಹಿಷ್ಣುತೆ ಹೆಚ್ಚುತ್ತದೆ. ಕಿರಿಕಿರಿಯ ಭಾವನೆಗಳನ್ನು ಕಡಿಮೆ ಮಾಡಬಹುದು. ಅಮೆಥಿಸ್ಟ್ ಕೋಪವನ್ನು ನಿಯಂತ್ರಿಸಲು ಉಪಯುಕ್ತ ಸಾಧನವಾಗಿದೆ. ಏಕೆಂದರೆ ಇದು ಉದ್ವೇಗ ಮತ್ತು ಆತಂಕವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಈ ರತ್ನವು ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಜ್ಞಾನವನ್ನು ಉತ್ತೇಜಿಸುತ್ತದೆ. ಅಮೆಥಿಸ್ಟ್ ಅನ್ನು ಆಭರಣಗಳಲ್ಲಿ ಧರಿಸಬಹುದು. ಇಲ್ಲದಿದ್ದರೆ…