Subscribe to Updates
Get the latest creative news from FooBar about art, design and business.
Author: KNN IT Team
ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ : ಉದ್ಯಮಿ, ನಟರು, ಆಟಗಾರರು… ಇಲ್ಲಿದೆ ಅಯೋಧ್ಯೆ ಕಾರ್ಯಕ್ರಮದ ಅತಿಥಿಗಳ ಪಟ್ಟಿ…
ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರಾಮ ದೇವರ ಮೂರ್ತಿಗೆ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಇದೀಗ ವಿಶ್ವವೇ ಎದುರು ನೋಡುತ್ತಿರುವ ಈ ಭವ್ಯ ಸಮಾರಂಭದಲ್ಲಿ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಶ್ರೀರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶದ ವಿವಿಧ ಕ್ಷೇತ್ರಗಳ ದಿಗ್ಗಜರಿಗೆ ಟ್ರಸ್ಟ್ ಆಹ್ವಾನ ನೀಡಿದೆ. ಸುಮಾರು 8,000 ಜನರು ಆಹ್ವಾನಿತರ ದೀರ್ಘ ಪಟ್ಟಿಯಲ್ಲಿದ್ದರೆ, ಆಯ್ದ ಪಟ್ಟಿಯಲ್ಲಿ ಪ್ರಮುಖ ರಾಜಕಾರಣಿಗಳು, ಪ್ರಮುಖ ಕೈಗಾರಿಕೋದ್ಯಮಿಗಳು, ಉನ್ನತ ಚಲನಚಿತ್ರ ತಾರೆಯರು, ಕ್ರೀಡಾಪಟುಗಳು, ಅಧಿಕಾರಿಗಳು ಮತ್ತು ರಾಜತಾಂತ್ರಿಕರು ಸೇರಿದಂತೆ ಕೆಲವೇ ನೂರು ಜನರಿದ್ದಾರೆ. ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ರಾಮ ಮಂದಿರದ ಪ್ರತಿಷ್ಠಾಪನೆಗೆ ಆಹ್ವಾನಿತರ ಆಯ್ದ ಅತಿಥಿಗಳ ಪಟ್ಟಿಯಲ್ಲಿದ್ದಾರೆ. ಅಮಿತಾಭ್ ಬಚ್ಚನ್ ಅವರ ಕುಟುಂಬವು ಅಯೋಧ್ಯೆಗೆ ಖಾಸಗಿ ವಿಮಾನದಲ್ಲಿ ತೆರಳಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ ಎಂದು ಪಿಟಿಐ ವರದಿ ತಿಳಿಸಿದೆ. ಉದ್ಯಮಿ ಮುಖೇಶ್ ಅಂಬಾನಿ, ತಾಯಿ ಕೋಜಿಲಾಬೆನ್, ಪತ್ನಿ ನೀತಾ, ಮಕ್ಕಳಾದ ಆಕಾಶ್…
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3 ರಿಂದ 4ರಷ್ಟು ಏರಿಕೆಯಾಗಲಿದೆ. ಜನವರಿ 1, 2024 ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಶೇಕಡಾ 50 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಡಿಸೆಂಬರ್ AICPI ಸೂಚ್ಯಂಕದ ಆಧಾರದ ಮೇರೆಗೆ ಇದನ್ನು ಜನವರಿ 30 ರೊಳಗೆ ಬಿಡುಗಡೆ ಮಾಡಲಾಗುತ್ತದೆ. ಪ್ರಸ್ತುತ ಕೇಂದ್ರ ನೌಕರರು 46% ಡಿಎ ಪ್ರಯೋಜನವನ್ನು ಪಡೆಯುತ್ತಿದ್ದು, ಇದೀಗ 4% ಹೆಚ್ಚಳವಾದರೆ ತುಟ್ಟಿಭತ್ಯೆ 50% ಕ್ಕೆ ಹೆಚ್ಚಳವಾಗಲಿದೆ. ಮುಂದಿನ ಡಿಎ ಜನವರಿ 2024 ರಿಂದ ಏರಿಕೆ ಮಾಡಲಾಗುತ್ತದೆ. ಇದು ಮುಂದಿನ ಜೂನ್ ವರೆಗೆ ಅನ್ವಯವಾಗುತ್ತದೆ. ಇದನ್ನು ಆದಷ್ಟು ಶೀಘ್ರವಾಗಿ ಏರಿಕೆ ಮಾಡಲಾಗುತ್ತದೆ. ಲೋಕಸಭಾ ಚುನಾವಣೆ ಹಿನ್ನೆಲೆ ಹೋಳಿ ಹಬ್ಬದ ಮೊದಲೇ ಇಲ್ಲವೇ ಚುನಾವಣಾ ನೀತಿ ಸಂಹಿತೆ ಜಾರಿ ಮೊದಲು ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮನೆ ಬಾಡಿಗೆ ಭತ್ಯೆಯನ್ನೂ ಶೇ.3 ರಷ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಎಚ್.ಆರ್.ಎ ಶೇ.27 ರಿಂದ 30ಕ್ಕೆ ಹೆಚ್ಚಳವಾಗಲಿದೆ. ಇದರೊಂದಿಗೆ…
ಧಾರವಾಡ : ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲು ಎರಡೇ ದಿನ ಬಾಕಿ ಉಳಿದಿದೆ. ಇದೇ ಸಂದರ್ಭದಲ್ಲಿ ಸಮೀಪದ ಕಲಿಕೇರಿ ಗ್ರಾಮದ ವೀರಗಲ್ಲಿನಲ್ಲಿ ಶ್ರೀರಾಮ ಮತ್ತು ಲಕ್ಷ್ಮಣರಂತೆ ಬಿಲ್ಲು ಹಿಡಿದಿರುವ ವೀರಗಲ್ಲೊಂದು ಪತ್ತೆಯಾಗಿದೆ. ಗ್ರಾಮದ ಹೊರಭಾಗದಲ್ಲಿ ಕೆರೆಯ ದಂಡೆಯಲ್ಲಿ ಈ ಕಲ್ಲು ಪಾಳು ಜಾಗದಲ್ಲಿ ಬಿದ್ದಿತ್ತು. ಗ್ರಾಮಸ್ಥರು ಜೆಸಿಬಿ ಮೂಲಕ ಕಚ್ಚಾ ರಸ್ತೆ ದುರಸ್ತಿ ನಡೆಸುತ್ತಿದ್ದಾಗ ದೊಡ್ಡ ಕಲ್ಲು ಪತ್ತೆಯಾಗಿದೆ. ಈ ಕಲ್ಲಿನಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ರೂಪಗಳಿವೆ. ಇದಲ್ಲದೇ ಮೇಲ್ಭಾಗದಲ್ಲಿ ಶಿವಪಾರ್ವತಿ ಕೆತ್ತನೆ, ಕೆಳಭಾಗದಲ್ಲಿ ಶ್ರೀರಾಮನ ಕೆತ್ತನೆಯಿದೆ. ವಿಗ್ರಹ ಕಂಡು ಅಚ್ಚರಿಗೊಂಡ ಸ್ಥಳೀಯರು ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಲ್ಲದೇ, ಜನವರಿ 22 ರಂದು ಸೋಮವಾರ ಕಲಿಕೇರಿ ಗ್ರಾಮದಲ್ಲಿಯೇ ಈ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲು ನಿರ್ಧರಿಸಿದ್ದಾರೆಯಾಗಿದೆ.
ಭಾರತೀಯ ವನಿತಾ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್ 2024 ಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಎಫ್ಐಎಚ್ ಒಲಿಂಪಿಕ್ಸ್ ಅರ್ಹತಾ ಹಾಕಿ ಕೂಟದ 3 ಮತ್ತು 4ನೇ ಸ್ಥಾನಕ್ಕಾಗಿ ಶುಕ್ರವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಜಪಾನ್ ತಂಡದೆದುರು ಭಾರತ ತಂಡ 0-1 ಗೋಲಿನ ಅಂತರದಿಂದ ಸೋಲು ಅನುಭವಿಸಿದೆ. ಉರಾಟಾ ಕಾನಾ ಪೆನಾಲ್ಟಿ ಕಾರ್ನರ್ನಿಂದ ಏಕೈಕ ಗೋಲು ಮಾಡಿದರು. ಮುನ್ನಡೆ ಸಾಧಿಸಿದ ಜಪಾನ್ ಭಾರತಕ್ಕೆ ಯಾವುದೇ ಗೋಲು ಬಾರಿಸಲು ಅವಕಾಶ ಮಾಡಿಕೊಡದೆ ಒಲಿಂಪಿಕ್ಸ್ 2024 ಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಯಿತು. ಭಾರತ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಜರ್ಮನಿ ವಿರುದ್ಧ ಕಠಿನ ಹೋರಾಟ ನೀಡಿ ಪೆನಾಲ್ಟಿ ಶೂಟೌಟ್ನಲ್ಲಿ 3-4 ಅಂತರದಿಂದ ಸೋಲನ್ನು ಕಂಡಿತ್ತಾಗಿದೆ.
ಮಂಗಳೂರು : ನಗರದ ಸಿಸಿಬಿ ಪೊಲೀಸರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆಟೋ ರಿಕ್ಷಾದಲ್ಲಿ ನಿಷೇಧಿತ ಮಾದಕ ಪದಾರ್ಥ ಎಮ್.ಡಿ.ಎಮ್.ಎ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಮಂಗಳೂರು ಬಜಾಲ್ ನಿವಾಸಿ ತೌಸೀಫ್ ಯಾನೆ ತೌಚಿ(23) ಬಂಧಿತ ಆರೋಪಿಯಾಗಿದ್ದಾನೆ, ಬಂಧಿತನಿಂದ ಒಟ್ಟು 5,11,000/- ರೂ ಮೌಲ್ಯದ ಸೊತ್ತು ವಶಕ್ಕೆ ಪಡೆದಿದ್ದಾರೆಯಾಗಿದೆ. ಜನವರಿ 18 ರಂದು ನಗರದ ಪಳ್ನೀರ್ ನ ಎಸ್.ಎಲ್ ಮಥಾಯಿಸ್ ರಸ್ತೆಯ ಕೊಯಿಲೊ ಲೇನ್ ಬಳಿ ಆಟೋ ರಿಕ್ಷಾದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಎಮ್.ಡಿ.ಎಮ್.ಎ ಎಂಬ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದರು. ಆರೋಪಿತನಿಂದ 45 ಸಾವಿರ ರೂ ಮೌಲ್ಯದ 9 ಗ್ರಾಂ ನಿಷೇಧಿತ ಎಮ್.ಡಿ.ಎಮ್.ಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಹಾಗೂ ಆಟೋರಿಕ್ಷಾ ಸೇರಿ ಒಟ್ಟು 5,11,000/- ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ಮಂಗಳೂರು ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ…
ಗಡಿಯಾರವನ್ನು ಗೋಡೆಯ ಮೇಲೆ ನೇತು ಹಾಕುವಾಗ ಕೆಲವು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಅನುಸಾರ, ಮನೆಯಲ್ಲಿರುವ ಗಡಿಯಾರ ಕೂಡ ನಮ್ಮ ಅದೃಷ್ಟದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. ಹೀಗಾಗಿ, ನಾವು ಮನೆಯಲ್ಲಿ ಗಡಿಯಾರವನ್ನು ಹಾಕುವಾಗ ಕೆಲ ವಿಚಾರಗಳನ್ನು ತಿಳಿದಿರುವುದು ಅವಶ್ಯಕವಾಗಿದೆ. ನಂಬಿಕೆಗಳನುಸಾರ, ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ವಾಸ್ತು ತಜ್ಞರ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಗಡಿಯಾರವನ್ನು ಹಾಕಲೇಬಾರದು ಎಂದು ಹೇಳಲಾಗುತ್ತದೆ. ಹೀಗಾಗಿ, ಮನೆಯ ಇಲ್ಲವೇ ಕಚೇರಿಯ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ಇಡಲೇಬಾರದು. ಒಂದು ವೇಳೆ ಹಾಕಿದರೆ, ಇದು ವ್ಯಕ್ತಿಯ ಪ್ರಗತಿಯನ್ನು ಕುಂಠಿತ ಮಾಡುತ್ತದೆ. ವ್ಯಾಪಾರಸ್ಥರು ಅಂಗಡಿಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ನೇತು ಹಾಕುವುದರಿಂದ ವ್ಯವಹಾರದಲ್ಲಿ ಭಾರೀ ನಷ್ಟ ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ತಪ್ಪಾದ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಹ್ವಾನ ಕೊಟ್ಟಂತೆ ಆಗಲಿದೆ. ಇದರಿಂದ ಮನೆಯಲ್ಲಿ ನಾನಾ ಬಗೆಯ ಕಲಹ, ಗಲಾಟೆ ಉಂಟಾಗಬಹುದು. ಅವರು ಆರ್ಥಿಕ ಬಿಕ್ಕಟ್ಟಿನಲ್ಲಿ…
4 ವರ್ಷಗಳ ಹಿಂದೆ ರಾಮ ಜನ್ಮಭೂಮಿ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟಿನ ಸಂವಿಧಾನಿಕ ಪೀಠದ ಐವರು ನ್ಯಾಯಾಧೀಶರಿಗೆ ಜನವರಿ 22 ರಂದು ನಡೆಯುವ ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. 2019ರಲ್ಲಿ ಅಯೋಧ್ಯೆ ರಾಮ ಮಂದಿರದ ಪರವಾಗಿ ತೀರ್ಪು ನೀಡಿದ ಐವರು ನ್ಯಾಯಾಧೀಶರಾದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ಮಾಜಿ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಝೀರ್, ಅಶೋಕ್ ಭೂಷಣ್ ಹಾಗೂ ಎಸ್ ಎ ಬೋಬ್ಡೆ ಅವರನ್ನು ಆಹ್ವಾನಿಸಲಾಗಿದೆ. ಆಹ್ವಾನಿತರಲ್ಲಿ ಮಾಜಿ ಮುಖ್ಯ ನ್ಯಾಯಾಧೀಶರು, ನ್ಯಾಯಾಧೀಶರು, ಉನ್ನತ ವಕೀಲರು ಒಳಗೊಂಡು 50 ನ್ಯಾಯ ಶಾಸ್ತ್ರಜ್ಞರನ್ನು ಆಹ್ವಾನಿಸಲಾಗಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಮಾಜಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಕೂಡ ಆಹ್ವಾನಿತರಲ್ಲಿ ಸೇರಿದ್ದಾರೆ. ಐವರ ಸಾಂವಿಧಾನಿಕ ಪೀಠವು ವಿವಾದಿತ ಜಾಗವನ್ನು ರಾಮ ಲಲ್ಲಾ ದೇಗುಲಕ್ಕೆ ನೀಡಿತ್ತು. ಅಲ್ಲದೆ ಮುಸ್ಲಿಂ ಅರ್ಜಿದಾರರಿಗೆ ಮಸೀದಿ…
ಈಗೀಗ ಪ್ರತಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಅದರಲ್ಲಿಯೂ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಏರಿಕೆಯಾಗುತ್ತಿದೆ. ಈ ನಡುವೆ, ಗ್ಯಾಸ್ ಸಿಲಿಂಡರ್ ಅನ್ನು ಹೆಚ್ಚು ಕಾಲ ಉಳಿಯುವಂತೆ ಮಾಡಲು ಏನೂ ಮಾಡೋದು ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ಕೆಲವು ಸಿಂಪಲ್ ಸಲಹೆಗಳು. ಗ್ಯಾಸ್ ಬರ್ನರ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಇದರಿಂದ ಅವುಗಳನ್ನು ಸರಿಯಾಗಿ ಬಳಕೆ ಮಾಡಬಹುದು. ಬರ್ನರ್ ಕೊಳಕು ಇಲ್ಲವೇ ಧೂಳಿನಿಂದ ಮುಚ್ಚಿಹೋಗಿದ್ದರೆ, ಅದರ ಜ್ವಾಲೆಯು ನೀಲಿ ಬಣ್ಣಕ್ಕೆ ತಿರುಗಿ ಇಲ್ಲವೇ ಸ್ವಲ್ಪ ಹಳದಿಯಾಗಬಹುದು. ಹೀಗಾದರೆ, ಈ ಬರ್ನರ್ ಅನ್ನು ತೊಳೆದು ಸ್ವಚ್ಛಗೊಳಿಸಬೇಕು. ಗ್ಯಾಸ್ ಬರ್ನರ್ ಅನ್ನು ಸ್ವಚ್ಛಗೊಳಿಸಲು,ಗ್ಯಾಸ್ ಬರ್ನರ್ ಅನ್ನು ಬಿಸಿ ನೀರಿನಲ್ಲಿ ಇರಿಸಿ ಅದಕ್ಕೆ ಸ್ವಲ್ಪ ನಿಂಬೆ ಹಿಂಡಿಕೊಂಡು ಅದರಲ್ಲಿ ಸಂಪೂರ್ಣ ಇನೋ ಪ್ಯಾಕೆಟ್ ಸೇರಿಸಬೇಕು. ಹೀಗೆ ಎರಡರಿಂದ ಮೂರು ಗಂಟೆವರೆಗೆ ಈ ಮಿಶ್ರಣದಲ್ಲಿ ಬರ್ನರ್ ಅನ್ನು ನೆನೆಸಿದ ಬಳಿಕ ಬ್ರಷ್ನಿಂದ ಬರ್ನರ್ ಅನ್ನು ಸ್ವಚ್ಛಗೊಳಿಸಬೇಕು. ಅಡುಗೆಯಲ್ಲಿ ಸಾಧ್ಯವಾದಷ್ಟು ಕುಕ್ಕರ್ ಬಳಸಿದರೆ ಉತ್ತಮ. ಇದು ಅಡುಗೆಗೆ ಗ್ಯಾಸ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಅಷ್ಟೆ…
ಆಯಾ ಪಕ್ಷ ಹೊರಡಿಸಿದ್ದ ವಿಪ್ ಉಲ್ಲಂಘಿಸಿ ಅನರ್ಹಗೊಂಡಿದ್ದರೆ, ಅಂತಹವರು ನಂತರದ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಸ್ಪರ್ಧಿಸಲು ನಿರ್ಬಂಧವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರಸಭೆಯಲ್ಲಿ ವಿಪ್ ಉಲ್ಲಂಘಿಸಿದ ಆರೋಪದ ಮೇಲೆ ನಗರಸಭೆ ಸದಸ್ಯ ಮೊಹಮ್ಮದ್ ಶಫಿಕ್ ಅವರನ್ನು ಅನರ್ಹಗೊಳಿಸಲಾಗಿತ್ತು. ಅವರು ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಸ್ವೀಕರಿಸಿದ್ದನ್ನು ಪ್ರಶ್ನಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ ಮುನೇಗೌಡ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ, “ವಿಪ್ ಉಲ್ಲಂಘಿಸಿ ಅನರ್ಹರಾದವರು, ನಂತರ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಸ್ಪರ್ಧಿಸಲು ಯಾವುದೇ ನಿರ್ಬಂಧ ಇರುವುದಿಲ್ಲ” ಎಂದು ಹೇಳಿದೆ. ಸಂವಿಧಾನದ ಕಲಂಗಳನ್ನು ಉಲ್ಲೇಖಿಸಿರುವ ನ್ಯಾಯಾಧೀಶರು, “ಸಂವಿಧಾನದ ಪರಿಚ್ಛೇದ 191(1)ರ ಪ್ರಕಾರ ಅನರ್ಹಗೊಂಡರೆ ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಆದರೆ, 191(2)ರ 10ನೇ ಅನುಸೂಚಿ ಅಡಿಯಲ್ಲಿ ಅನರ್ಹಗೊಂಡಿದ್ದರೆ, ಆ ಅನರ್ಹತೆ ಸದಸ್ಯತ್ವಕ್ಕೆ ಮಾತ್ರ ಅನ್ವಯವಾಗಲಿದೆ. ಅಂತಹ ವ್ಯಕ್ತಿ ಮುಂದಿನ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಬಹುದು. ಈ…
ಜನವರಿ 22 ರಂದು ರಾಮ ಮಂದಿರದ ಉದ್ಘಾಟನೆಗೆ ಸಿದ್ಧತೆಗಳು ಭರದಿಂದ ಸಾಗಿವೆ ಮತ್ತು ಪರಿಸ್ಥಿತಿಯ ಲಾಭವನ್ನು ಪಡೆಯಲು, ಹ್ಯಾಕರ್ಗಳು ಬಲೆಗಳನ್ನು ಹಾಕಲು ಪ್ರಾರಂಭಿಸಿದ್ದಾರೆ. ರಾಮ ಮಂದಿರದಲ್ಲಿ ಉಚಿತ ವಿಐಪಿ ಪ್ರವೇಶದ ಭರವಸೆ ನೀಡಿ ವಂಚಕರು ವಾಟ್ಸಾಪ್ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಹಲವಾರು ಬಳಕೆದಾರರು ವರದಿ ಮಾಡಿದ್ದಾರೆ. ವರದಿಯ ಪ್ರಕಾರ, ಜನವರಿ 22 ರಂದು ರಾಮ ಮಂದಿರಕ್ಕೆ ವಿಐಪಿ ಪ್ರವೇಶವನ್ನು ನೀಡುವ ನಕಲಿ ವಾಟ್ಸಾಪ್ ಸಂದೇಶವು ಬಳಕೆದಾರರಿಗೆ ಎಪಿಕೆ ಫೈಲ್ ಅನ್ನು ಡೌನ್ಲೋಡ್ ಮಾಡಲು ಕೇಳುತ್ತದೆ, ಅದು ಸಾಧನದಲ್ಲಿ ಸ್ಪೈವೇರ್ ಅಥವಾ ಮಾಲ್ವೇರ್ ಅನ್ನು ಸ್ಥಾಪಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಸೈಬರ್ ದರೋಡೆಕೋರರು ಭಗವಾನ್ ರಾಮನ ಹೆಸರಿನಲ್ಲಿ ಉಚಿತ ಮೊಬೈಲ್ ರೀಚಾರ್ಜ್ ನೀಡುವ ಮೂಲಕ ಜನರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಜನರು ಅದರ ಮೇಲೆ ಕ್ಲಿಕ್ ಮಾಡಿದರು ಮತ್ತು ತಮ್ಮ ಠೇವಣಿಗಳನ್ನು ಕಳೆದುಕೊಂಡರು. ಅಂತಹ ಲಿಂಕ್ಗಳನ್ನು ಕ್ಲಿಕ್ ಮಾಡದಂತೆ ಅಥವಾ ಸಂದೇಶಗಳು ಮತ್ತು ಫೋನ್ ಸಂಖ್ಯೆಗಳಿಗೆ ಪ್ರತಿಕ್ರಿಯಿಸದಂತೆ ಗುರುಗ್ರಾಮ್ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ. ಅಯೋಧ್ಯೆಯಲ್ಲಿ…