Subscribe to Updates
Get the latest creative news from FooBar about art, design and business.
Author: KNN IT Team
ಕರ್ನಾಟಕ ಸರ್ಕಾರ ನಿಗದಿ ಪಡಿಸಿದ ಕೆಲಸಗಳನ್ನು ಹೊರತುಪಡಿಸಿ ಪೌರಕಾರ್ಮಿಕರನ್ನು ಬೇರೆ ಕೆಲಸಗಳಿಗೆ ನಿಯೋಜಿಸುವಂತಿಲ್ಲ ಎಂದು ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ. ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಅಧಿಸೂಚಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿದ ಕರ್ತವ್ಯಗಳ ಬದಲಾಗಿ ಇತರೆ ಅನ್ಯ ಕೆಲಸ ಕಾರ್ಯಗಳಿಗೆ ನಿಯೋಜಿಸುತ್ತಿರುವ ಬಗ್ಗೆ ನಿರ್ದೇಶನಾಲಯಕ್ಕೆ ಹಲವಾರು ದೂರುಗಳು ಬಂದಿವೆ. ಈ ಹಿನ್ನೆಲೆ, ಪೌರಾಡಳಿತ ನಿರ್ದೇಶನಾಲಯ ಈ ಆದೇಶ ಹೊರಡಿಸಿದೆಯಾಗಿದೆ. ಒಂದು ವೇಳೆ ಸರ್ಕಾರದ ಆದೇಶದ ಮೇರೆಗೂ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ, ಬೇರೆ ಕೆಲಸಗಳಿಗೆ ನಿಯೋಜನೆ ಮಾಡಿದವರಿಗೆ ಮತ್ತು ಅವರಿಂದ ಸೇವೆ ಪಡೆದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಇಲಾಖೆ ಎಚ್ಚರಿಕೆ ನೀಡಿದೆ. ಹಾಗೆಯೇ, ಇತರೆ ಯಾವುದೇ ಅನ್ಯ ಕೆಲಸಗಳಿಗೆ ನಿಯೋಜಿಸದಂತೆ ಇಲಾಖೆ ಕಟ್ಟುನಿಟ್ಟಾಗಿ ಸೂಚಿಸಿದೆ. ಪೌರಕಾರ್ಮಿಕರನ್ನು ಅವರಿಗೆ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ ಇತರೆ ಕೆಲಸಗಳಿಗೆ ನಿಯೋಜಿಸುವುದು ನಿಯಮಬಾಹಿರವಾಗಿದ್ದು, ಈ…
ಸರ್ಜರಿ ಮಾಡಿಸಿಕೊಂಡು ಮಹಿಳೆಯಿಂದ ಪುರುಷನಾಗಿದ್ದ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪೊಲೀಸ್ ಪೇದೆ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಮಹಾರಾಷ್ಟ್ರದ ಮಜಲಗಾಂವ್ ತಾಲೂಕಿನ ರಾಜೇಗಾಂವ್ ನಿವಾಸಿ ಲಲಿತ್ ಕುಮಾರ್ ಸಾಳ್ವೆ ಅವರು ಜನವರಿ 15 ರಂದು ಗಂಡು ಮಗುವಿಗೆ ತಂದೆಯಾಗಿದ್ದಾರೆ. 1988 ರ ಜೂನ್ ನಲ್ಲಿ ಜನಿಸಿದ ಲಲಿತಾ ಸಾಳ್ವೆ 2010 ರಲ್ಲಿ ಪೊಲೀಸ್ ಇಲಾಖೆಗೆ ಸೇರಿದರು. 2013 ರಲ್ಲಿ ಲಲಿತಾ ಅವರು ತನ್ನ ದೇಹದಲ್ಲಿ ಕೆಲ ಬದಲಾವಣೆಯನ್ನು ಕಂಡುಕೊಂಡಿದ್ದಾರೆ. ಈ ಕಾರಣದಿಂದ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾದ ಅವರಿಗೆ, ವೈ ಕ್ರೋಮೋಸೋಮ್ ಇರುವುದು ದೃಢವಾಗಿದೆ. ಸಾಳ್ವೆಗೆ ಲಿಂಗ ಡಿಸ್ಫೋರಿಯಾ ಇದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಲಿಂಗ ರಿಸೈನ್ ಮೆಂಟ್ ಶಸ್ತ್ರಚಿಕಿತ್ಸೆ ಮಾಡಲು ಸಲಹೆ ನೀಡಿದ್ದರು. ಅದರಂತೆ ಲಲಿತಾ ಅವರು, 2018 ರಲ್ಲಿ ರಾಜ್ಯ ಸರ್ಕಾರದಿಂದ ಅನುಮತಿ ಪಡೆದು, ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದರು. 2018 ಮತ್ತು 2020 ರ ನಡುವೆ ಮೂರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಶಸ್ತ್ರ ಚಿಕಿತ್ಸೆಯ ಬಳಿಕ ಅವರ ಹೆಸರನ್ನು ಲಲಿತ್…
ಮಂಗಳೂರು : ಇಡಿ ಅಧಿಕಾರಿಗಳು ಕೋಚಿಮುಲ್ ನೇಮಕಾತಿಯಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಪ್ರಶ್ನೆಪತ್ರಿಕೆ ಮಾರಾಟ ಶಂಕೆ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೋಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿರುವ ಇಡಿ ಅಧಿಕಾರಿಗಳು ಎರಡು ದಿನಗಳ ಕಾಲ ಪರಿಶೀಲನೆ ನಡೆಸಿದ್ದಾರೆ. ಕಳೆದ 6 ತಿಂಗಳ ಹಿಂದೆಯೇ ನಡೆದಿದ್ದ ನೇಮಕಾತಿಗೆ ಪರೀಕ್ಷೆ, ಫಲಿತಾಂಶ ಪ್ರಕಟ ಹೊಣೆಯನ್ನು ಮಂಗಳೂರು ವಿವಿ ಹೊತ್ತಿತ್ತು. ಈ ಹಿನ್ನೆಲೆಯಲ್ಲಿ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ರಾಜುಕೃಷ್ಣ ಚಲನ್ನವರ್ ಅವರನ್ನು ವಿಚಾರಣೆ ಮಾಡಲಾಗುತ್ತಿದೆ. ನೇಮಕಾತಿ ಪರೀಕ್ಷೆಯ ಜವಾಬ್ದಾರಿ ವಹಿಸಿಕೊಂಡಿದ್ದ ಪ್ರೊ.ರಾಜುಕೃಷ್ಣ ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೋಚಿಮುಲ್ ನೇಮಕಾತಿ ಅಕ್ರಮದಲ್ಲಿ ಮಂಗಳೂರು ವಿವಿ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ತಿಂಗಳ ಹಿಂದೆಯೇ ಕುಲಸಚಿವರಿಗೆ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದೀಗ ವಿವಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ರಾಯಚೂರು : ಮಂತ್ರಾಲಯಕ್ಕೆ ಮಾರ್ಗ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂತ್ರಾಲಯ ಪ್ರವೇಶದ ಮುಖ್ಯ ದ್ವಾರದ ಬಳಿ ಇಂದು ಶ್ರೀ ಅಭಯ ರಾಮನ 36 ಅಡಿ ಎತ್ತರದ ಏಕಶಿಲಾ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅಭಯ ರಾಮನ ವಿಗ್ರಹದ ಎದುರೇ ಅಭಯಾಂಜನೇಯ ಸ್ವಾಮಿಯ 32 ಅಡಿಯ ಏಕಶಿಲಾ ವಿಗ್ರಹವಿದೆ. ಇದರ ಎದುರಿಗಿನ ಸುಮಾರು ಆರು ಎಕರೆ ಪ್ರದೇಶದಲ್ಲಿ ಶ್ರೀಅಭಯ ರಾಮನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಇಂದು ಅಭಯರಾಮನ ವಿಗ್ರಹ ಪ್ರತಿಷ್ಠಾಪನೆ ನಡೆಯಿತು. 36 ಅಡಿ ಎತ್ತರದ ಭವ್ಯವಾದ ಶ್ರೀ ಅಭಯ ರಾಮ ಮೂರ್ತಿಯ ಕೆತ್ತನೆ ಪ್ರಕ್ರಿಯೆ ವರ್ಷಗಳ ಬಳಿಕ ಪೂರ್ಣಗೊಂಡಿದೆ. ಹೀಗಾಗಿ ಮೇರುಕೃತಿಯನ್ನು ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಹೋರಭಾಗದ ಪೀಠದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಈ ಮಹತ್ವದ ಸಂದರ್ಭದಲ್ಲಿ ಸ್ವಾಮೀಜಿ ಅವರು ಪೀಠದ ಮೇಲೆ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಇದಕ್ಕೂ ಮೊದಲು ಶ್ರೀಗಳು ಆಧ್ಯಾತ್ಮಿಕ ಮಹತ್ವದ ಕೆಲವು ಆಚರಣೆಗಳನ್ನು ನಡೆಸಿ ನಂತರ ಪ್ರತಿಷ್ಠಾಪನೆ ಮಾಡಿದರು. ಶ್ರೀ ಅಭಯ ರಾಮನ 36 ಅಡಿ ಎತ್ತರದ ಏಕಶಿಲಾ…
ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ದಿನದಿಂದ ದಿನಕ್ಕೆ ದೊಡ್ಡ ಸಮಸ್ಯೆಯಾಗುತ್ತಿದೆ. ಮಧುಮೇಹಿಗಳು ತಮ್ಮ ಆಹಾರ, ಪಾನೀಯ ಮತ್ತು ಜೀವನಶೈಲಿಯ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಮಧುಮೇಹದಿಂದ ಬದುಕುವುದು ಸುಲಭದ ಕೆಲಸವಲ್ಲವಾದರೂ, ಅದು ಕಷ್ಟಕರವಲ್ಲ ಎಂದು ಒಪ್ಪಿಕೊಳ್ಳಬೇಕು. ಬಾರ್ಲಿ ವಾಟರ್ ರಿಫ್ರೆಶ್ ಪಾನೀಯವಾಗಿದೆ. ಬಾರ್ಲಿ ನೀರು ನೈಸರ್ಗಿಕವಾಗಿ ನಮ್ಮ ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಮಧುಮೇಹಿಗಳಿಗೆ ತಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬರ ಅಡುಗೆಮನೆಯಲ್ಲಿಯೂ ಇರುವ ಈ ಪೋಷಕಾಂಶ ಭರಿತ ಬಾರ್ಲಿಯು ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಮಧುಮೇಹವನ್ನು ನಿಯಂತ್ರಿಸುತ್ತದೆ: ಬಾರ್ಲಿಯು ನೀರಿನಲ್ಲಿ ಕರಗುವ ಫೈಬರ್‌ನಲ್ಲಿ ಸಮೃದ್ಧವಾಗಿದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಸ್ಪೈಕ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಟೈಪ್ 2 ಡಯಾಬಿಟಿಸ್ ರೋಗಿಗಳು ಅಕ್ಕಿಯ ಬದಲಿಗೆ ಬಾರ್ಲಿ ನೀರನ್ನು ಕುಡಿಯುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ ರಕ್ತದಲ್ಲಿನ…
ಅನೇಕ ಜನರು ದೇಹದ ಆಕಾರ ಬದಲಾವಣೆಯೊಂದಿಗೆ ತೂಕವನ್ನು ಪ್ರಾರಂಭಿಸುತ್ತಾರೆ. ಹಾಗಾಗಿ ದೇಹದ ಆಕಾರದ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಬೊಜ್ಜು ಒಂದು ರೋಗವಲ್ಲ. ಆದರೆ ಇದು ಅಧಿಕ ಕೊಲೆಸ್ಟ್ರಾಲ್, ಹೃದಯಾಘಾತ, ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಇತರ ಕಾಯಿಲೆಗಳಿಗೆ ಕಾರಣವಾಗಬಹುದು. ಇಂತಹ ಗಂಭೀರ ಕಾಯಿಲೆಗಳನ್ನು ತಪ್ಪಿಸಲು ನೀವು ಇಂದಿನಿಂದಲೇ ಆರೋಗ್ಯಕರ ಆಹಾರವನ್ನು ಸೇವಿಸಲು ಪ್ರಾರಂಭಿಸಬೇಕು. ಆಗ ಮಾತ್ರ ಹೊಟ್ಟೆ ಮತ್ತು ಸೊಂಟದ ಮೇಲೆ ಸಂಗ್ರಹವಾದ ಕೊಬ್ಬು ಕಡಿಮೆಯಾಗುತ್ತದೆ. ತೂಕ ನಷ್ಟಕ್ಕೆ ನೀವು ಹಸಿರು ಚಹಾ ಸೇರಿದಂತೆ ಅನೇಕ ಗಿಡಮೂಲಿಕೆ ಚಹಾಗಳನ್ನು ಕುಡಿಯಬಹುದು. ಆದರೆ ಈ ವಿಶೇಷ ತರಕಾರಿಯಿಂದ ಮಾಡಿದ ಹಸಿರು ಕಾಫಿಯನ್ನು ಪ್ರಯತ್ನಿಸಬಹುದು. ಬ್ರೊಕೊಲಿ ಕಾಫಿಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ತೂಕ ಹೆಚ್ಚಾಗುವುದನ್ನು ಕಡಿಮೆ ಮಾಡುತ್ತದೆ. ಬ್ರೊಕೊಲಿಯನ್ನು ಹೆಚ್ಚಾಗಿ ತಿನ್ನಲು ಸಾಧ್ಯವಾಗದವರಿಗೆ ಬ್ರೊಕೊಲಿ ಪೌಡರ್ ಉತ್ತಮ ಆಯ್ಕೆಯಾಗಿದೆ ಎಂದು ಝೀ ನ್ಯೂಸ್ ವರದಿ ಹೇಳಿದೆ. ಭಾರತದ ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಪ್ರಕಾರ, ಬ್ರೊಕೊಲಿ ಕಾಫಿ…
ಮನೆಯಿಂದ ಹೊರ ಹೋದಾಗ, ಟ್ರಿಪ್ ಹೊರಟಾಗ ಹೆಚ್ಚಿನವರು ಅಂಗಡಿಗಳಲ್ಲಿ ದುಡ್ಡು ಕೊಟ್ಟು ನೀರಿನ ಬಾಟಲಿ ಖರೀದಿಸುತ್ತಾರೆ. ಜೊತೆಗೆ ಮನೆಯಲ್ಲೂ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ತುಂಬಿಸಿಟ್ಟು ಕುಡಿಯುತ್ತೇವೆ. ಹೀಗೆ ನೀವು ಯಾವಾಗಲೂ ನೀರನ್ನು ಖರೀದಿಸಿ, ಪ್ಲಾಸ್ಟಿಕ್ ಬಾಟಲಿಯಲ್ಲಿ ಸೇವನೆ ಮಾಡ್ತೀರಾ, ಹಾಗಾದರೆ ಇಲ್ಲಿದೆ ಅಚ್ಚರಿಯ ವಿಷಯ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಪ್ಲಾಸ್ಟಿಕ್ ಬಾಟಲಿ ಕುರಿತು ನಡೆಸಿದ ಅಧ್ಯಯನ ವರದಿ ಬೆಚ್ಚಿ ಬೀಳಿಸುತ್ತಿದೆ. ನಾವು ಕುಡಿಯುವ 1 ಲೀಟರ್ ಪ್ಲಾಸ್ಟಿಕ್ ಬಾಟಲಿ ನೀರಿನಲ್ಲಿ ಬರೋಬ್ಬರಿ 2.4 ಲಕ್ಷ ಪ್ಲಾಸ್ಟಿಕ್ ಸೂಕ್ಷ್ಮ ತುಣುಕುಗಳಿವೆ. ಅಲ್ಲದೆ ಪ್ಲಾಸ್ಟಿಕ್ ಬಾಟಲಿ ನೀರು ಕುಡಿಯುವುದರಿಂದ ಮನುಷ್ಯನ ದೇಹದೊಳಕ್ಕೆ ಮೈಕ್ರೋಪ್ಲಾಸ್ಟಿಕ್ ಕಣಗಳು ಸೇರಿಕೊಳ್ಳುತ್ತದೆ ಎಂಬ ಸತ್ಯ ಕೂಡ ಬಯಲಾಗಿದೆ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆಯಾಗಿದೆ. ಮೈಕ್ರೋಪ್ಲಾಸ್ಟಿಕ್ ಕಣಗಳು ಮನುಷ್ಯನ ಜೀವಕೋಶಗಳ ಸೇರಲಿದೆ. ರಕ್ತಪ್ರವಾಹದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಬಹು ಅಂಗಾಗ ವೈಕಲ್ಯಗಳು ಸಂಭವಿಸಲಿದೆ. ಈ ಮೈಕ್ರೋಪ್ಲಾಸ್ಟಿಕ್ ಗರ್ಭದಲ್ಲಿರುವ ಮಗುವಿನ ದೇಹವನ್ನೂ ಸೇರುತ್ತದೆ. ತಾಯಿಯ ಹೊಕ್ಕಳ ಬಳ್ಳಿ ಮೂಲಕ ಮಗುವಿನ ದೇಹ…
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಎರಡು ದಿನಗಳಿರುವಾಗ,ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಂದೂ ಸೇನಾ ಕಾರ್ಯಕರ್ತರು ಬಾಬರ್ ರಸ್ತೆಯ ಹೆಸರನ್ನು ಅಯೋಧ್ಯಾ ಮಾರ್ಗ ಎಂದು ಬದಲಾಯಿಸಿದ್ದಾರೆ. ಅಯೋಧ್ಯೆ ರಸ್ತೆ ಸ್ಟಿಕ್ಕರ್ ಅನ್ನು ಅಂಟಿಸಲಾಗಿದೆ. ಈ ವಿಷಯ ಬಹಿರಂಗವಾಗಿ ಗೊತ್ತಾದ ಕೂಡಲೇ ಸ್ವಲ್ಪ ಸಮಯದ ನಂತರ ಸ್ಟಿಕ್ಕರ್ ಅನ್ನು ತೆಗೆದುಹಾಕಲಾಗಿದೆ. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿ ವೈರಲ್ ಆಗಿದೆ.
ಪ್ರೀತಿ ಕುರುಡು ಎಂಬ ಮಾತಿನಂತೆ ಮನೆಯವರ ಸಮಾಜದ ವಿರೋಧದ ನಡುವೆಯೂ ಮದುವೆಯಾಗಿ, ಈ ನಡುವೆ ಮದುವೆಯಾದ ಬಳಿಕ ಈ ಬಂಧದ ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಮನಸ್ತಾಪ ಉಂಟಾಗಿ ಬೀದಿಜಗಳಕ್ಕೆ ಕಾರಣವಾಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದರ ನಡುವೆ ಪ್ರೀತಿಯ ನಿಜವಾದ ವ್ಯಾಖ್ಯಾನ ನೀಡುವಂತಹ ಅದೆಷ್ಟೋ ಆದರ್ಶ ಅಪರೂಪದ ಜೋಡಿಗಳನ್ನು ನಾವು ನೋಡಬಹುದು. ಕಾಲ ಬದಲಾದಂತೆ ಜನರ ಯೋಚನಾ ಲಹರಿ ಕೂಡ ಬದಲಾಗುವುದು ಸಹಜ. ಈ ನಡುವೆ ಪ್ರೇಮಿಗಳ ನಡುವೆ ಮೈಕ್ರೋ ಚೀಟಿಂಗ್ ಎಂಬ ಕಾನ್ಸೆಪ್ಟ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ಅಷ್ಟಕ್ಕೂ ಏನಿದು ಮೈಕ್ರೋ ಚೀಟಿಂಗ್ ಎಂದು ನೀವು ಯೋಚಿಸುತ್ತಿರಬಹುದು. ಸಾಮಾನ್ಯವಾಗಿ ಚೀಟಿಂಗ್ ಎಂದು ಕರೆಯಲ್ಪಡುವ ರಹಸ್ಯ ಸಂಬಂಧ ಕೂಡ ಮೈಕ್ರೋ ಚೀಟಿಂಗ್ ಎಂದು ಪರಿಗಣಿಸಲಾಗುತ್ತದೆಯಾಗಿದೆ. ನಿಮ್ಮೊಂದಿಗೆ ಪ್ರೀತಿಯ ನಾಟಕ ಮಾಡಿಕೊಂಡು ಬೇರೆಯವರ ಜೊತೆಗೂ ಪ್ರೀತಿಯಲ್ಲಿದ್ದರೆ ಅದನ್ನು ಪ್ರೇಮ ಎನ್ನಲಾಗದು. ಎರಡು ಅಥವಾ ಎರಡಕ್ಕಿಂತ ಹೆಚ್ಚು ಲವ್ ಮೆಂಟೈನ್ ಮಾಡುವುದು ಮೈಕ್ರೋ ಚೀಟಿಂಗ್ ಭಾಗವಾಗಿರುತ್ತದೆ. ಯಾವುದೇ ಲವರ್ಸ್ ಮಧ್ಯೆ ಒಬ್ಬ…
ಹೂವುಗಳು ಉತ್ತಮ ಸುಗಂಧ ಮಾತ್ರವಲ್ಲ, ಇದರೊಂದಿಗೆ ಪೂಜೆ ಸಲ್ಲಿಸಿದರೆ ಒಳ್ಳೆಯ ಫಲ ಸಿಗುತ್ತದೆ ಎನ್ನುತ್ತಾರೆ ವಿದ್ವಾಂಸರು. ನಮ್ಮಲ್ಲಿ ಅದೃಷ್ಟವನ್ನು ಮರೆಮಾಡುವ 5 ಹೂವುಗಳಿವೆ. ಅವರಿಂದ ಆರ್ಥಿಕ ಪರಿಸ್ಥಿತಿ ಉನ್ನತ ಮಟ್ಟಕ್ಕೆ ಏರುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ಲಕ್ಷ್ಮಿ ದೇವಿಗೆ ಇಷ್ಟವಾದ 5 ಹೂವುಗಳನ್ನು ಇಲ್ಲಿ ವಿವರಿಸಲಾಗಿದೆ. ದೇವಿಯನ್ನು ಪೂಜಿಸುವಾಗ ಈ ಹೂವುಗಳನ್ನು ಬಳಸಿದರೆ, ನೀವು ತಕ್ಷಣ ಐಶ್ವರ್ಯವನ್ನು ಹೊಂದುತ್ತೀರಿ ಎಂದು ಹೇಳಲಾಗುತ್ತದೆ. ಲಕ್ಷ್ಮಿ ದೇವಿಯು ಪದ್ಮಹಸ್ತದ ಅಧಿದೇವತೆ. ಅವಳನ್ನು ಹೂವಿನಲ್ಲಿಯೇ ಅಳೆಯಲಾಗುತ್ತದೆ. ಆದ್ದರಿಂದ ದೇವಿಗೆ ಪ್ರತಿದಿನ ಕಮಲವನ್ನು ಅರ್ಪಿಸುವ ಭಕ್ತನು ತನ್ನ ಜೀವನದಲ್ಲಿ ಎಂದಿಗೂ ಬಡತನವನ್ನು ಅನುಭವಿಸುವುದಿಲ್ಲ. ಹೀಗೆ ಪೂಜಿಸುವ ಭಕ್ತರು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಯಾವಾಗಲೂ ಪಡೆಯಬಹುದು. ಪರಿಮಳಯುಕ್ತ ಕೆಂಪು ಗುಲಾಬಿ ಹೂವು ಲಕ್ಷ್ಮಿ ದೇವಿಗೆ ಅಚ್ಚುಮೆಚ್ಚಿನದು. ಈ ಕಾರಣಕ್ಕಾಗಿ, ದೇವಿಗೆ ಪೂಜೆಯಲ್ಲಿ ಗುಲಾಬಿಗಳನ್ನು ಅರ್ಪಿಸುವುದು ಹೆಚ್ಚು ಪ್ರಶಂಸನೀಯವಾಗಿದೆ. ಆದ್ದರಿಂದ ನಾವು ಪ್ರತಿದಿನ ಐದು ಗುಲಾಬಿಗಳನ್ನು ದೇವಿಗೆ ಅರ್ಪಿಸಿದರೆ, ಸಂಪತ್ತು ವೇಗವಾಗಿ ಹೆಚ್ಚಾಗುತ್ತದೆ, ಜೀವನದಲ್ಲಿ ಸಮೃದ್ಧಿ ಬರುತ್ತದೆ.…