Subscribe to Updates
Get the latest creative news from FooBar about art, design and business.
Author: KNN IT Team
ಲಕ್ನೋ : ಇಂದು ಹಿಂದೂಗಳಿಗೆ ಐತಿಹಾಸಿಕ ದಿನ. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗೊಂಡಿದೆ. ಆ ಮೂಲಕ ನೂರಾರು ವರ್ಷದ ಕನಸು ಅದ್ಧೂರಿಯಾಗಿ ನನಸಾಗಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಈ ಐತಿಹಾಸಿಕ ಕ್ಷಣಕ್ಕೆ ಕೋಟ್ಯಂತರ ಮಂದಿ ಸಾಕ್ಷಿಯಾಗಿದ್ದು, ರಾಮನ ಘೋಷಣೆಯನ್ನು ಮೊಳಗಿಸಿದ್ದಾರೆ. ಪ್ರಾಣ ಪ್ರತಿಷ್ಠಾಪನೆ ದಿನದಿಂದು ಕೆಲ ರಾಜ್ಯಗಳಲ್ಲಿ ಸರ್ಕಾರಿ ರಜೆಯನ್ನು ನೀಡಿದ್ದಾರೆ. ಖಾಸಗಿ ಕಂಪೆನಿ, ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಇನ್ನು ಕೆಲಕಡೆ ಅರ್ಧದಿನ ರಜೆ ನೀಡಲಾಗಿದೆ. ರಾಮನ ಪ್ರತಿಷ್ಠಾಪನೆ ದಿನ ಕಚೇರಿಯಲ್ಲಿ ರಜೆ ನೀಡಿಲ್ಲ ಎನ್ನುವ ಕಾರಣಕ್ಕೆ ಒಬ್ಬ ಉದ್ಯೋಗಿ ಕೆಲಸವನ್ನೇ ಬಿಟ್ಟಿದ್ದಾನೆ. ಗಗನ್ ತಿವಾರಿ ಎನ್ನುವಾತ ತನಗೆ ಪ್ರಾಣ ಪ್ರತಿಷ್ಠೆ ದಿನ ರಜೆ ನೀಡಿಲ್ಲ. ಹಾಗಾಗಿ ತಾನು ಕೆಲಸ ಬಿಟ್ಟಿದ್ದೇನೆ ಎನ್ನುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವುದು ವೈರಲ್ ಆಗಿದೆಯಾಗಿದೆ. ಪ್ರಾಣ ಪ್ರತಿಷ್ಠೆಯ ದಿನ ಕಂಪೆನಿಯ ಜನರಲ್ ಮ್ಯಾನೇಜರ್‌ನಿಂದ ರಜೆ ಕೇಳಿದ್ದೆನು. ಆದರೆ ಈ ಐತಿಹಾಸಿಕ ದಿನದಂದು ರಜೆ ನಿರಾಕರಿಸಿದ್ದಾರೆ. ಹಾಗಾಗಿ ಕೆಲಸವನ್ನು…
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾನಿರ್ದೇಶಕರಿಗೆ, ಯಾವುದೇ ಮಾರಾಟ ಇಲ್ಲವೇ ಇತರೆ ದಾಖಲೆಗಳನ್ನು ನೋಂದಣಿ ಮಾಡುವ ಮೊದಲು ಆ ದಾಖಲೆಗಳನ್ನು ಸಲ್ಲಿಸುವ ವ್ಯಕ್ತಿಯ ಆಧಾರ್ ಅಧಿಕೃತತೆಯನ್ನು ಪರಿಶೀಲನೆ ನಡೆಸಬೇಕೆಂದು ಹೈಕೋರ್ಟ್ ಆದೇಶ ಹೊರಡಿಸಿದೆಯಾಗಿದೆ. ದಾಖಲೆ ನಕಲು ಮಾಡಿ ಭೂಮಿ ಮಾರಾಟ ಮಾಡಿದ್ದಾರೆಂದು ಆರೋಪಿಸಲಾದ ರಮೇಶ್ ಎಂಬ ವ್ಯಕ್ತಿ ನೋಂದಣಿ ಸಂದರ್ಭ ಆಧಾರ್ ದಾಖಲೆ ಸಲ್ಲಿಸಿದ್ದು, ಅದನ್ನು ಅಧಿಕೃತ ದಾಖಲೆ ಅಥವಾ ಗುರುತಿನ ಚೀಟಿ ಎಂದು ಪರಿಗಣಿಸಿ ಉಪನೋಂದಣಾಧಿಕಾರಿ ನೋಂದಣಿ ಮಾಡಿದ್ದಾರೆ. ಆದರೆ, ಆಧಾರ್ ನೈಜತೆ ಪರಿಶೀಲಿಸದೇ ಇರುವುದರಿಂದ ವ್ಯಾಜ್ಯಕ್ಕೆ ಕಾರಣವಾಗಿದೆ ಎಂದು ನ್ಯಾಯಾಲಯ ಹೇಳಿದೆಯಾಗಿದೆ. ಈ ಪ್ರಕರಣ ತನಿಖೆ ನಡೆಸಿದ ಬಳಿಕ ಹೈಕೋರ್ಟ್ ಆಧಾರ್ ಕಾರ್ಡ್ ಅಧಿಕೃತತೆಯನ್ನು ಪರಿಶೀಲಿಸಿದ ಬಳಿಕವೇ ನೋಂದಣಿ ಮಾಡಲು ಸೂಚಿಸಿದೆಯಾಗಿದೆ. ಆಧಾರ್ ಕಾಯಿದೆ- 2016ರ ಅನುಸಾರ ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಪ್ರೇಷನ್ ಯುಐಎಡಿಐ ಜೊತೆಗೆ ನೋಂದಾಯಿ ಸಿಕೊಳ್ಳಬೇಕು.ಇದಾದ ಬಳಿಕ ಯಾವುದೇ ವ್ಯಕ್ತಿ ನಿವೇಶನ ಅಥವಾ ಮನೆ ಮಾರಾಟ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಯಾವುದೇ ದಾಖಲೆಗಳನ್ನು ನೋಂದಣಿ ಮಾಡಿಕೊಳ್ಳಲು…
ಇಂದಿನ ರಾಮ ಮಂದಿರದ ಉದ್ಘಾಟನೆಯ ಶುಭ ದಿನದಂದು ತಾಯ್ತನ ಆನಂದಿಸಲು ಎದುರು ನೋಡುತ್ತಿರುವ ಗರ್ಭಿಣಿಯರು, ತಮಗೆ ಜನಿಸುವ ಮಗು ಜನವರಿ 22ರಂದೇ ಆಗಬೇಕು ಎಂದು ವೈದ್ಯರ ಬಳಿ ಅಂಗಲಾಚುತ್ತಿದ್ದಾರೆ. ಜನವರಿ 22 ಬಹಳ ವಿಶೇಷವಾದ ದಿನ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲವಾಗಿದೆ. ರಾಮನ ಪ್ರಾಣ ಪ್ರತಿಷ್ಠೆಯ ಈ ಶುಭ ಸಂದರ್ಭದಲ್ಲಿ12 ಶುಭಯೋಗಗಳು ರೂಪುಗೊಳ್ಳುತ್ತಿದೆ. ಈ ದಿನ ಮತ್ತು ವಿಶೇಷವಾಗಿ ಅಭಿಜಿತ್ ಮುಹೂರ್ತದಲ್ಲಿ ಜನಿಸಿದ ಮಕ್ಕಳು ಅತ್ಯಂತ ಯಶಸ್ವಿ ಮತ್ತು ಉಜ್ವಲ ಭವಿಷ್ಯವನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ. ಈ ದಿನ ಹುಟ್ಟಿದ ಮಕ್ಕಳು ಹೆಚ್ಚಾಗಿ ಕಲಾತ್ಮಕ ಪ್ರಯತ್ನಗಳಿಂದ ಜೀವನ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ತಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ವರ್ಷಗಳು ಬೇಕಾಗಬಹುದು. ಇವರು ಯಾರೇ ಮೋಸ ಮಾಡಿದರೂ ಕೂಡ ಅವರನ್ನು ಮತ್ತೆ ಮತ್ತೆ ನಂಬುವ ತಪ್ಪನ್ನು ಮಾಡುತ್ತಾರೆಯಾಗಿದೆ. ಖ್ಯಾತಿ ಮತ್ತು ಪಾರಿಜಾತ ಯೋಗ ರೂಪುಗೊಂಡ ಸಮಯದಲ್ಲಿ ಮಕ್ಕಳು ಜನಿಸಿದರೆ ಅವರಷ್ಟು ಅದೃಷ್ಟವಂತರು ಮತ್ತೊಬ್ಬರಿಲ್ಲ. ಈ ಮಕ್ಕಳಿಗೆ ಸಮಾಜದಲ್ಲಿ ವಿಶೇಷ ಗೌರವ ಮತ್ತು ಪ್ರತಿಷ್ಠೆಗಳು ದೊರೆಯುವುದಲ್ಲದೆ ಹಣಗಳಿಸಲು…
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ನ ಪ್ರಾಣ ಪರತಿಷ್ಠೆ ಸಂಪನ್ನವಾಯಿತು. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಈ ವರ್ಷದ ಕೊನೆಯಲ್ಲಿ ಅದೇ ನಗರದಲ್ಲಿ ಹೊಸ ಮಸೀದಿ ನಿರ್ಮಾಣವನ್ನು ಪ್ರಾರಂಭ ಮಾಡಲು ಯೋಜನೆ ಹಾಕಿಕೊಂಡಿದೆಯಾಗಿದೆ. ರಾಮ ಮಂದಿರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಹಣವನ್ನು ಸಂಗ್ರಹಿಸಲು ಮತ್ತು ಕೆಲಸವನ್ನು ಪ್ರಾರಂಭಿಸಲು ಮುಸ್ಲಿಂ ಗುಂಪುಗಳು ಪ್ರಯತ್ನ ನಡೆಸುತ್ತಿದೆ. ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಮಸೀದಿ ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಪವಿತ್ರ ರಂಜಾನ್ ತಿಂಗಳ ಬಳಿಕ ಮೇ ತಿಂಗಳಲ್ಲಿ ನಿರ್ಮಾಣ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಮಸೀದಿ ಪೂರ್ಣಗೊಳ್ಳಲು ಮೂರರಿಂದ ನಾಲ್ಕು ವರ್ಷಗಳು ಬೇಕಾಗಬಹುದು ಎಂದು ಮಾಹಿತಿ ದೊರಕಿದೆ.
ಈಗಿನ ಕಾಲದಲ್ಲಿ ತುಂಬಾ ಹೂಡಿಕೆಯ ಆಯ್ಕೆಗಳಿವೆಯಾಗಿದೆ. ಅಪಾಯವಿಲ್ಲದ ಹೂಡಿಕೆಗಳೂ ಕೂಡಾ ಇವೆ. ಹೈರಿಸ್ಕ್ ಹೈ ರಿಟರ್ನ್ ಇರುವ ಹೂಡಿಕೆಗಳೂ ಇವೆ. ಅಪಾಯವೇ ಇಲ್ಲದ ಹೂಡಿಕೆಗಳಲ್ಲಿ ಚಿನ್ನ, ಭೂಮಿಯನ್ನು ಸೇರಿಸಬಹುದಾಗಿದೆ. ಅತ್ಯಂತ ಕಡಿಮೆ ಅಪಾಯವಿರುವ ಹೂಡಿಕೆಗಳಲ್ಲಿ ಪಿಪಿಎಫ್ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳು, ಎಫ್ಡಿ, ಆರ್ಡಿ, ಗವರ್ನ್ಮೆಂಟ್ ಬಾಂಡ್, ಸಾವರೀನ್ ಗೋಲ್ಡ್ ಬಾಂಡ್ ಇತ್ಯಾದಿಗಳು ಸೇರುತ್ತವೆಯಾಗಿದೆ. ಇನ್ನು ತುಸು ಹೆಚ್ಚು ಅಪಾಯವಿರುವ ಹೂಡಿಕೆಗಳಲ್ಲಿ ಮ್ಯುಚುವಲ್ ಫಂಡ್ಗಳಿವೆ. ಹೆಚ್ಚು ಅಪಾಯವಿರುವ ಮತ್ತು ಹೆಚ್ಚು ರಿಟರ್ನ್ ಪಡೆಯುವ ಅವಕಾಶ ನೀಡುವ ಹೂಡಿಕೆಯಲ್ಲಿ ಈಕ್ವಿಟಿ ಇದೆ. ಪ್ರತಿ ದಿನಕ್ಕೆ 170 ರೂ ಅಥವಾ ತಿಂಗಳಿಗೆ 5,000 ರೂ ಹಣ ಉಳಿಸಿ ಹೂಡಿಕೆಗೆ ವಿನಿಯೋಗಿಸಬಹುದಾದರೆ ದೀರ್ಘಾವಧಿಯಲ್ಲಿ ಒಂದು ಕೋಟಿ ರೂ ಆದಾಯವನ್ನು ಸುಲಭವಾಗಿ ಪಡೆಯಬಹುದಾಗಿದೆ. ಇವತ್ತು ಎಫ್ಡಿಗಳಿಗೆ, ಪಿಪಿಎಫ್ ಇತ್ಯಾದಿಗಳಿಗೆ ಕನಿಷ್ಠ ಶೇ. 6.5ರಷ್ಟು ಬಡ್ಡಿ ಸಿಗುತ್ತದೆ. ಬಹಳ ಸುರಕ್ಷಿತವಾದ ಈ ಹೂಡಿಕೆಯಲ್ಲಿ ನೀವು ತಿಂಗಳಿಗೆ 5,000 ರೂನಂತೆ ತೊಡಗಿಸಿದರೆ, 10 ವರ್ಷದಲ್ಲಿ ನಿಮ್ಮ ಹಣ 8.46 ಲಕ್ಷ…
ಝೀ ಎಂಟರ್ಟೈನ್ಮೆಂಟ್ ಸಂಸ್ಥೆ ಜೊತೆ ಜಪಾನ್ನ ಸೋನಿ ಗ್ರೂಪ್ ಸಂಸ್ಥೆಯ ಭಾರತೀಯ ವ್ಯವಹಾರಗಳ ವಿಲೀನ ಕಾರ್ಯ ನಡೆಯುವುದಿಲ್ಲವಾಗಿದೆ. ಸೋನಿ ಗ್ರೂಪ್ ಇದರಿಂದ ಹೊರನಡೆದಿದೆಯಾಗಿದೆ. ವಿಲೀನಗೊಳಿಸುವ ಯೋಜನೆಯನ್ನು ಕೈಬಿಡುತ್ತಿರುವುದಾಗಿ ಝೀ ಎಂಟರ್ಟೈನ್ಮೆಂಟ್ ಸಂಸ್ಥೆಗೆ ಸೋನಿ ಪತ್ರ ಬರೆದಿದೆ ಎಂದು ಮಾಹಿತಿ ದೊರಕಿದೆ. ಇಂದು ಬೆಳಗ್ಗೆ ಟರ್ಮಿನೇಶನ್ ಲೆಟರ್ ಅನ್ನು ಝೀಗೆ ಕಳುಹಿಸಿರುವುದು ಮಾಹಿತಿ ಬಂದಿದೆ. ಸ್ವಲ್ಪ ದಿನಗಳ ಹಿಂದೆಯೇ ಮಾಧ್ಯಮಗಳಲ್ಲಿ ಈ ಒಪ್ಪಂದ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎನ್ನುವ ಸುದ್ದಿ ದಟ್ಟವಾಗಿ ಕೇಳಿಬಂದಿತ್ತು. ಆದರೆ, ಝೀ ಸಂಸ್ಥೆ ಆ ಸುದ್ದಿಯನ್ನು ಅಲ್ಲಗಳೆದಿತ್ತು. ಈಗ ಸೋನಿ ಸಂಸ್ಥೆಯೇ ಅಧಿಕೃತವಾಗಿ ಟರ್ಮಿನೇಶನ್ ಲೆಟರ್ ಕಳುಹಿಸಿದೆ. ವರದಿ ಪ್ರಕಾರ ವಿಲೀನ ಒಪ್ಪಂದದ ಕೆಲ ನಿಬಂಧನಗಳಿಗೆ ಝೀ ಬದ್ಧವಾಗಿಲ್ಲ ಎಂಬುದು ಸೋನಿ ಹೊರನಡೆಯಲು ಕಾರಣವಾಗಿದೆ. ಎರಡು ವರ್ಷದ ಹಿಂದೆ ಸೋನಿಯ ಭಾರತೀಯ ವ್ಯವಹಾರಗಳನ್ನು ಝೀ ಸಂಸ್ಥೆ ಜೊತೆ ವಿಲೀನಗೊಳಿಸುವ ಒಪ್ಪಂದವಾಗಿತ್ತು. ಹಲವು ನಿಯಮ ಮತ್ತು ನಿಬಂಧನೆಗಳಿಗೆ ಈ ಒಪ್ಪಂದ ಒಳಪಟ್ಟಿತ್ತು. ಡಿಸೆಂಬರ್ ಕೊನೆಯ ವಾರದೊಳಗೆ ಒಪ್ಪಂದಕ್ಕೆ ಅಂಕಿತ ಬೀಳಬೇಕಿತ್ತು.…
ನೂತನ ಮಂದಿರದಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಬಳಿಕ 48 ದಿನಗಳ ಮಂಡಲೋತ್ಸವ ನಡೆಯಲಿದೆ. ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಟ್ರಸ್ಟಿಯೂ ಆಗಿರುವ ಶ್ರೀ ಪೇಜಾವರ ಮಠಾ ಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಈ ಮಂಡಲೋತ್ಸವ ಜರುಗಲಿದೆ. ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಬೆಂಗಳೂರಿನಲ್ಲಿ ಸ್ಥಾಪಿಸಿರುವ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿರುವ ಅನೇಕ ವಿದ್ವಾಂಸರು ದೇಶದ ಬೇರೆ ಬೇರೆ ಭಾಗಗಳಲ್ಲಿದ್ದಾರೆ. ಇವರ ಜತೆಗೆ ದೇಶದ ಬೇರೆ ಭಾಗದ ವಿದ್ಯಾಪೀಠಗಳಲ್ಲಿ ಅಧ್ಯಯನ ಮಾಡಿರುವ ವಿದ್ವಾಂಸರಿದ್ದಾರೆ. ಪೂರ್ಣಪ್ರಜ್ಞ ವಿದ್ಯಾಪೀಠದ ಮುಂದಾಳ್ತನದಲ್ಲಿ ಅನೇಕ ವಿದ್ವಾಂಸರೊಂದಿಗೆ ಮಂಡಲೋತ್ಸವ ನೆರವೇರಲಿದೆ. ಮೊದಲ 44 ದಿನ ನಿತ್ಯವೂ ಹೋಮ, ಹವನಗಳ ಜತೆಗೆ ಕಲಾಶಾಭಿಷೇಕ, ಪ್ರತಿಮೆಗೆ ತತ್ವನ್ಯಾಸ ಇತ್ಯಾದಿ ವಿಧಿವಿಧಾನಗಳು ನಡೆಯಲಿವೆ. ಪ್ರತಿನಿತ್ಯ ಸಂಜೆ ಉತ್ಸವ ನಡೆಯಲಿದೆ. ಕೊನೆಯ ನಾಲ್ಕು ದಿನಗಳ ಕಾಲ ಬ್ರಹ್ಮಕಲಶಾಭಿಷೇಕದ ರೀತಿಯಲ್ಲಿ ಸಹಸ್ರ ಕಲಶಾಭಿಷೇಕ ಜರಗಲಿದೆ. ರಾಮರಾಜ್ಯ ಪರಿಕಲ್ಪನೆಯಡಿ ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದು, ಈ ಅವಧಿಯಲ್ಲಿ ಆ ಸಮಿತಿಗಳು ರಾಮರಾಜ್ಯ ಪರಿಕಲ್ಪನೆಯಡಿ ಕೆಲಸ ಮಾಡಲು ಅಯೋಧ್ಯೆಗೆ ಬಂದು…
ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ರಾಮಲಲ್ಲಾ ಮೂರ್ತಿಯನ್ನು ರಚಿಸಿದ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ಬಹುಶಃ ಇಂದು ನಾನು ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ನನ್ನ ಪೂರ್ವಜರು, ಕುಟುಂಬ ಸದಸ್ಯರು ಮತ್ತು ಭಗವಾನ್ ರಾಮಲಲ್ಲಾ ಅವರ ಆಶೀರ್ವಾದ ಯಾವಾಗಲೂ ನನ್ನೊಂದಿಗಿದೆ. ಕೆಲವೊಮ್ಮೆ ನಾನು ಕನಸಿನ ಲೋಕದಲ್ಲಿದ್ದೇನೆ ಎಂದು ನನಗೆ ಅನಿಸುತ್ತದೆ”” ಎಂದು ಹೆಮ್ಮೆಯಿಂದ ಹೇಳಿದರು. ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ರಾಮಮಂದಿರದಲ್ಲಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭ ನಡೆಯಿತು. ಕಳೆದ ವಾರ ರಾಮ್ ಲಲ್ಲಾನ ಹೊಸ ವಿಗ್ರಹವನ್ನು ದೇವಾಲಯದ ಒಳಗೆ ಇರಿಸಲಾಗಿತ್ತು. ವಿಗ್ರಹವು ಕಮಲದ ಮೇಲೆ ನಿಂತಿರುವ ಐದು ವರ್ಷದ ರಾಮ ದೇವರನ್ನು ತೋರಿಸುತ್ತದೆ. 11 ದಿನಗಳ ಕಟ್ಟುನಿಟ್ಟಾದ ಧಾರ್ಮಿಕ ವಿಧಿಗಳನ್ನು ಅನುಸರಿಸುತ್ತಿದ್ದ ಪ್ರಧಾನಿ ಮೋದಿ ಅವರು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದರು. ಗಣೇಶ್ವರ್ ದ್ರಾವಿಡ್, ಲಕ್ಷ್ಮೀಕಾಂತ್ ದೀಕ್ಷಿತ್ ಅವರ ನೇತೃತ್ವದಲ್ಲಿ ಪೂಜೆ ನಡೆಯಿತು. ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್…
ಬೆಂಗಳೂರು : ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ರಾಜ್ಯದ 224 ಕ್ಷೇತ್ರಗಳ ಮತದಾರರ ಪಟ್ಟಿ ಪ್ರಕಟಿಸಿದರು. ಇದರಲ್ಲಿ ಬದಲಾವಣೆ, ತಿದ್ದುಪಡಿ ಇದ್ದರೆ ಫಾರ್ಮ್ 8 ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದ ಮುಂಚಿತ 10 ದಿನದ ಒಳಗಾಗಿ ಅರ್ಜಿ ಸಲ್ಲಿಸಬಹುದು. ಅಂತಿಮ ಪಟ್ಟಿಯಲ್ಲಿ ಈಗ 5,37,85,815 ಮತದಾರರಿದ್ದಾರೆ. ಇದರಲ್ಲಿ 2,69,33,750 ಪುರುಷರು ಹಾಗೂ 2,68,47,145 ಮಹಿಳೆಯರಿದ್ದಾರೆ ಎಂದು ಮಾಹಿತಿ ನೀಡಿದರು. ಕರಡು ಪಟ್ಟಿಗೆ ಹೋಲಿಸಿದರೆ ಮಹಿಳಾ ಮತದರಾರು ಸಂಖ್ಯೆ 2,77,717 ರಷ್ಟು ಗಮನಾರ್ಹ ಹೆಚ್ಚಾಗಿದೆ. 17,47,518 ಮತದಾರರ ಗುರುತಿನ ಚೀಟಿಗಳನ್ನು ಪೋಸ್ಟ್ ಮೂಲಕ ಕಳುಹಿಸಲಾಗಿದೆ. ಈಗ 10,76,506 ಮತದಾರರ ಗುರುತಿನ ಚೀಟಿ ಮುದ್ರಣವಾಗಿದ್ದು, ರವಾನಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪಟ್ಟಿಯಲ್ಲಿ 10,34,018 ಯುವ ಮತದಾರರಿದ್ದಾರೆ. ಇದರಲ್ಲಿ 3,88,527 ರಷ್ಟು ಯುವಕರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ. ಅನಿವಾಸಿ ಭಾರತೀಯರ ಮತದಾರರ ಸಂಖ್ಯೆ 3,165 ಇದೆ. 80 ವರ್ಷ ಮೇಲ್ಪಟ್ಟ ವಯೋಮಾನದ ಮತದಾರರ ಸಂಖ್ಯೆ 12,71,862 ಇದೆ. 100…
ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಸಾವಿರಾರು ಅತಿಥಿಗಳ ಸಮ್ಮುಖದಲ್ಲಿ ರಾಮಲಲ್ಲಾನ ಮಹಾಭಿಷೇಕ, ಪ್ರಾಣ ಪ್ರತಿಷ್ಠಾ ಸಮಾರಂಭ ಅಯೋಧ್ಯೆಯಲ್ಲಿ ನಡೆಯಿತು. ಈ ನಡುವೆ ದೇವಾಲಯ ಹಾಗೂ ಅದರ ನಿರ್ಮಾಣದ ಕುರಿತ ಕೆರಲು ಅಚ್ಚರಿ ಸಂಗತಿಗಳು ಹೊರಬೀಳುತ್ತಿವೆ. ಅಂತೆಯೇ ರಾಮಮಂದಿರ ನಿರ್ಮಾಣಕ್ಕೆ ಬರೀ 45ದಿನಗಳಲ್ಲಿ ಬಂದ ಹಣದ ಮಾಹಿತಿ ದೊರಕಿದೆ. ಅಯೋಧ್ಯಾ ರಾಮ ಮಂದಿರ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ಮಂದಿರ ನಿರ್ಮಾಣದ ಕಾರ್ಯ ತಕ್ಷಣ ಆರಂಭವಾಯಿತು. ಇದಕ್ಕೆ ಸರ್ಕಾರ ತಾನು ಒಂದು ರೂಪಾಯಿ ನೀಡುವುದಿಲ್ಲ, ಭಕ್ತಾದಿಗಳು ನೀಡುವ ದೇಣೆಗೆಯಿಂದಲೇ ಮಂದಿರ ನಿರ್ಮಾಣ ಆಗುತ್ತದೆ ಎಂದಿತು. ಅಂತೆಯೇ ಈ ನಿಧಿ ಸಂಗ್ರಹ ಅಭಿಯಾನವು ಜನವರಿ 14, 2021 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 27, 2021ರಂದು ಮುಕ್ತಾಯಗೊಂಡಿತ್ತು. ಕೇವಲ 45 ದಿನಗಳಲ್ಲಿ, 10 ಕೋಟಿಗೂ ಹೆಚ್ಚು ಜನರು ನೀಡಿದ ದೇಣಿಗೆ 2500 ಕೋಟಿ ರೂಪಾಯಿ. ‘ಶ್ರೀರಾಮ ಮಂದಿರ ನಿಧಿ ಸಮರ್ಪಣ’ ಎಂದು ಹೆಸರಿಸಲಾದ ಈ ದೇಣಿಗೆ ಅಭಿಯಾನವು ನಾಲ್ಕು…