Author: KNN IT Team

ಲಕ್ನೋ : ಶ್ರೀರಾಮ ಮಂದಿರ ನಿರ್ಮಾಣವನ್ನು ಇಡೀ ವಿಶ್ವ ಬೆರಗುಕಣ್ಣಿನಲ್ಲಿ ನೋಡುತ್ತಿರುವಂತೆಯೇ, ಮಂದಿರದ ವಾಸ್ತುಶಿಲ್ಪ ವೈಶಿಷ್ಟ್ಯಕ್ಕೆ ಮತ್ತೂಂದು ಗರಿ ಮೂಡಿಸುವ ದೇಶದ ಅತೀ ಎತ್ತರದ ಗರುಡಗಂಬ ಮಂಗಳವಾರ ಅಯೋಧ್ಯೆ ತಲುಪಿದೆ.44 ಅಡಿ ಎತ್ತರ ಹಾಗೂ 5,500 ಕೆ.ಜಿ. ತೂಕ ವಿರುವ ಈ ಗರುಡಗಂಬವನ್ನು ಸಂಪೂರ್ಣ ಹಿತ್ತಾಳೆಯಿಂದ ನಿರ್ಮಿಸಲಾಗಿದ್ದು, ಗುಜರಾತ್‌ನ ಅಹ್ಮದಾಬಾದ್‌ನ ಶ್ರೀ ಅಂಬಿಕಾ ಎಂಜಿನಿ ಯರಿಂಗ್‌ ವರ್ಕ್ಸ್ ಸಂಸ್ಥೆಯು ಈ ಧ್ವಜದಂಡವನ್ನು ಅಭಿವೃದ್ಧಿಪಡಿಸಿದೆ. ಪ್ರಾಚೀನ ಹಿಂದೂ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂಥ ಶಿಲಾ ಶಾಸ್ತ್ರದ ಪ್ರಕಾರವೇ ಗರುಡಗಂಬವನ್ನು ಕೆತ್ತನೆ ಮಾಡಲಾ ಗಿದ್ದು, ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ಗರುಡಗಂಬವನ್ನು ಜ.5ರಂದು ಅನಾವರಣಗೊಳಿಸಿದ್ದರು. ಇದೀಗ 450 ಕೆ.ಜಿ. ತೂಕದ ವಿಶೇಷ ರಥವೊಂದರಲ್ಲಿ ಗುಜರಾತ್‌ನಿಂದ ಅಯೋಧ್ಯೆಗೆ ರಥವನ್ನು ತಲುಪಿಸಲಾಗಿದೆ ಎಂದು ಮಂದಿರ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೇ ಗರುಡಗಂಬಕ್ಕೆ ಕೇಸರಿ ಧ್ವಜವನ್ನು ಆರೋಹಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಮ…

Read More

ಅಯೋಧ್ಯೆ ಶ್ರೀರಾಮ ಮಂದಿರ ಪ್ರತಿಷ್ಠಾಪನೆಗೆ ದಿನ ನಿಗದಿಯಾಗಿದ್ದು, ದೇಶದ ಮೂಲೆ ಮೂಲೆಗಳಿಂದ ಜನರು ಹೋಗ ತೊಡಗಿದ್ದಾರೆ. ಆದರೆ ಕರಾವಳಿ ಭಾಗದವರು ಅಯೋಧ್ಯೆಗೆ ತೆರಳಲು ಸುತ್ತಿ ಬಳಸಿ ಹೋಗಬೇಕು. ಪ್ರಸ್ತುತ ಯಾವುದೇ ನೇರ ರೈಲುಗಳು ಇಲ್ಲದಿರುವುದೇ ದೊಡ್ಡ ಅಡಚಣೆಯಾಗಿದೆ. ರಾಮ ಮಂದಿರದ ಉದ್ಘಾಟನೆ ಆದ ಬಳಿಕ ಕರಾವಳಿ ಭಾಗದಿಂದ ಅಲ್ಲಿಗೆ ತೆರಳುವ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ರೈಲ್ವೇ ಇಲಾಖೆ ನೇರ ಎಕ್ಸ್‌ಪ್ರೆಸ್‌ ರೈಲು ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂಬುದು ಕರಾವಳಿಗರ ಆಗ್ರಹವಾಗಿದೆ. ಕೇಂದ್ರ ಸರಕಾರವು ಈಗಾಗಲೇ ಮೈಸೂರು, ಹುಬ್ಬಳ್ಳಿ, ಬೆಂಗಳೂರು ಮೂಲಕ ಅಯೋಧ್ಯೆಗೆ ರೈಲು ಸಂಪರ್ಕ ಮಾಡಲು ಉದ್ದೇಶಿಸಿದೆ. ಅದೇ ರೀತಿ ಕರಾವಳಿಯನ್ನೂ ಅಯೋಧ್ಯೆ ಜತೆಗೆ ಸಂಪರ್ಕ ಮಾಡಬೇಕಿದೆ. ಈಗಾಗಲೇ ಬೆಂಗಳೂರಿನಿಂದ ಅಯೋಧ್ಯೆಗೆ ಕಾಶಿ-ತಮಿಳ್‌ ಸಂಗಮ ಎಕ್ಸ್‌ಪ್ರೆಸ್‌ ಆರಂಭವಾಗಿದೆ. ವಿಶಾಖಪಟ್ಟಣ- ಗೋರಖಪುರ ಎಕ್ಸ್‌ಪ್ರೆಸ್‌, ನಾಗರಕೋಯಿಲ್‌ (ತಮಿಳುನಾಡು)-ಅಯೋಧ್ಯೆ ಎಕ್ಸ್‌ಪ್ರೆಸ್‌ ಆರಂಭ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. ಆದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಂದ ಅಯೋಧ್ಯೆ ಯಾತ್ರೆ ಕೈಗೊಳ್ಳುವ…

Read More

ಭಾರತದಲ್ಲಿ ವಾಸಿಸುವ ಲಕ್ಷಾಂತರ ಜನರು ಈಗಾಗಲೇ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಗೃಹ ನಿರ್ಮಾಣ ಮಾಡಿಕೊಂಡಿದ್ದಾರೆ. ಗೃಹ ನಿರ್ಮಾಣ ಮಾಡುವ ಕನಸು ಕಂಡ ಫಲಾನುಭವಿಗಳಿಗೆ ಈಗಲು ಅವಕಾಶವಿದ್ದು, ಅರ್ಜಿ ಸಲ್ಲಿಸಿ ಸಹಾಯ ಪಡೆದುಕೊಳ್ಳಬಹುದು. ಸರ್ಕಾರದಿಂದ ವಸತಿ ನಿರ್ಮಾಣಕ್ಕೆ ಅನುದಾನ ಸಿಗುವುದರ ಜೊತೆಗೆ ರಾಜ್ಯದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯ ಮೂಲಕ ಸಾಕಷ್ಟು ಜನರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಅದರಲ್ಲೂ ಬೆಂಗಳೂರು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಸತಿ ಯೋಜನೆ ಅಡಿಯಲ್ಲಿ 7.5 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ ನೀಡಲಾಗುತ್ತಿದೆ. ಮಹಿಳಾ ಅಭ್ಯರ್ಥಿಯ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಅರ್ಜಿದಾರರು ಮಾಜಿ ಅಥವಾ ವಿಶೇಷ ಚೇತನರಾಗಿದ್ದರೆ ಸರಕಾರದಿಂದ ದೃಢೀಕರಣ ಪ್ರಮಾಣ ಪತ್ರ ನೀಡಬೇಕು. ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಪ್ರತಿಯೊಬ್ಬರಿಗೆ ಮನೆ ನಿರ್ಮಾಣ ಮಾಡಿಕೊಡುವ ಕನಸು ಕಳೆದ ಎರಡು ವರ್ಷಗಳಿಂದ ಆರ್ಥಿಕ ಸಮಸ್ಯೆಯಿಂದ ಪೂರ್ಣವಾಗಿರಲಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ…

Read More

ವಾಹನ ಹಾಗೂ ಸಂಚಾರ ವಿಚಾರವಾಗಿ ಸಾರಿಗೆ ಇಲಾಖೆಯು ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಅಂತೆಯೇ ಇದೀಗ ಬಿಎಸ್-6 ಮಾಲಿನ್ಯ ಮಾನದಂಡಗಳ ಅಡಿಯಲ್ಲಿ ಅನುಮೋದನೆ ಪಡೆಯುವ ವಾಹನಗಳಿಗೆ ಮಾಲಿನ್ಯ ಪರೀಕ್ಷೆ ಅಥವಾ ಹೊಗೆ ಪರೀಕ್ಷೆ ನಡೆಸಲು ಹೊಸ ನಿಯಮಗಳನ್ನು ಹೊರಡಿಸಿದೆ. ಸಾರಿಗೆ ಇಲಾಖೆಯ ಹೊಸ ನಿಯಮದ ಪ್ರಕಾರ ಇನ್ಮುಂದೆ ಫ್ಲೆಕ್ಸ್-ಇಂಧನ ಆಯ್ಕೆಯನ್ನು ಹೊಂದಿರುವ ಎಲ್ಲಾ ದ್ವಿ-ಇಂಧನ ವಾಹನಗಳು ಅನಿಲ ಮಾಲಿನ್ಯಕಾರಕ ಮತ್ತು ಕಣ ಮಾಲಿನ್ಯಕಾರಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ವಾಹನವು ಹೈಡ್ರೋಜನ್ ನಲ್ಲಿ ಚಲಿಸುತ್ತಿದ್ದರೆ, NOX ಹೊರಸೂಸುವಿಕೆಯ ಪರೀಕ್ಷೆಗಳನ್ನು ಮಾತ್ರ ನಡೆಸಲಾಗುತ್ತದೆ. ಅಂದಹಾಗೆ ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಶೇಕಡಾ 7 ರಷ್ಟು ಜೈವಿಕ ಡೀಸೆಲ್ ಮಿಶ್ರಣವನ್ನು ಹೊಂದಿರುವ ವಾಹನಗಳನ್ನು ಡೀಸೆಲ್ (ಬಿ 7) ಗಾಗಿ ಪರೀಕ್ಷಿಸಲಾಗುವುದು ಮತ್ತು ಶೇಕಡಾ 7 ಕ್ಕಿಂತ ಹೆಚ್ಚು ಜೈವಿಕ ಡೀಸೆಲ್ ಮಿಶ್ರಣವನ್ನು ಹೊಂದಿರುವ ವಾಹನಗಳನ್ನು ಮಿಶ್ರಣದ ಪ್ರಕಾರ ಪರೀಕ್ಷಿಸಲಾಗುವುದು ಎಂದು ಮಾಹಿತಿ ನೀಡಿದೆ.

Read More

ಬೆಳ್ತಂಗಡಿ : ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 80 ಕೋಟಿಯಾಗಿ ಹಿಂದೂಗಳ ಜನಸಂಖ್ಯೆ ಇಳಿದಲ್ಲಿ ಭಾರತದಲ್ಲಿ ಹಿಂದುಗಳ ಪರಿಸ್ಥಿತಿ ಹೇಗಿರುತ್ತದೆ ಎಂದು ಯೋಚನೆ ಮಾಡಬೇಕಾಗಿದೆ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಮಾಡಿರುವ ಭಾಷಣದ 46 ಸೆಕೆಂಡ್ ನ ವೀಡಿಯೊ ತುಣುಕು ವೈರಲ್ ಆಗುತ್ತಿದೆ. ಬೆಳ್ತಂಗಡಿ ತಾಲೂಕಿನ ಪೆರಾಡಿಯಲ್ಲಿ ನಡೆದ 50ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಜನವರಿ 7ರಂದು ನಡೆದಿತ್ತು. ಅಂದು ರಾತ್ರಿ ಶಾಸಕ ಹರೀಶ್ ಪೂಂಜ ತುಳುವಿನಲ್ಲಿ ಮಾಡಿರುವ ಭಾಷಣದ ವೀಡಿಯೊ ವೈರಲ್ ಆಗಿದೆ. ಭಾಷಣದಲ್ಲಿ ಅವರು, ಹೆಚ್ಚಿನವರಿಗೆ ಹಿಂದೂಗಳ ಜನಸಂಖ್ಯೆ 80 ಕೋಟಿ ಇದೆ. ಆದರೆ, ಏನೂ ಆಗೋಲ್ಲ ಎಂಬ ಭಾವನೆಯಿದೆ. ಆದರೆ, ಹಿಂದೂಗಳಿಗೆ ಹುಟ್ಟುವುದು ಒಂದು ಅಥವಾ ಎರಡು ಮಕ್ಕಳು. ಮುಸ್ಲಿಮರಿಗೆ ನಾಲ್ಕು ಮಕ್ಕಳು ಹುಟ್ಟುತ್ತದೆ. ಒಂದು ಸಲ ಈ ಬಗ್ಗೆ ಯೋಚನೆ ಮಾಡಿದ್ದಲ್ಲಿ 20 ಕೋಟಿ ಇರುವ ಜನರಿಗೆ ನಾಲ್ಕು ನಾಲ್ಕು ಮಕ್ಕಳು ಆದರೆ ಜನಸಂಖ್ಯೆ ಎಷ್ಟಾಗುತ್ತದೆ. ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾದಲ್ಲಿ ಹಿಂದೂಗಳ…

Read More

ಭಾರತೀಯ ರೈಲ್ವೆಯ ಆಡಳಿತದಡಿ ಕಾರ್ಯನಿರ್ವಹಿಸುವ ರೈಲ್ವೆ ಪ್ರೊಟೆಕ್ಷನ್ ಫೋರ್ಸ್​​​ (ಆರ್‌ಪಿಎಫ್) 1957ರಲ್ಲಿ ಸ್ಥಾಪನೆಯಾಗಿದ್ದು, ರೈಲ್ವೆ ಸಚಿವಾಲಯದ ನಿಯಂತ್ರಣದಲ್ಲಿದೆ. ರೈಲ್ವೆಗೆ ಸಂಬಂಧಿಸಿದ ಉಪಕರಣಗಳಿಗೆ ಧಕ್ಕೆಯಾಗದಂತೆ ತಡೆಯುವ ಜತೆಗೆ ಆಸ್ತಿಯನ್ನು ಒತ್ತುವರಿ ಮಾಡದಂತೆ ಸಂರಕ್ಷಣೆ ಮಾಡುವ ಜವಾಬ್ದಾರಿ ನಿರ್ವಹಿಸುತ್ತದೆ. 1989ರ ರೈಲ್ವೆ ಕಾಯ್ದೆಯಡಿ ಅಪರಾಧಿಗಳನ್ನು ಹುಡುಕುವ, ಬಂಧಿಸುವ ಹಾಗೂ ವಿಚಾರಣೆ ಮಾಡುವ ಅಧಿಕಾರ ಹೊಂದಿದೆ. ಪ್ರಸ್ತುತ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಪ್ರಕಟಣೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಒಟ್ಟು 2,250 ಹುದ್ದೆಗಳಿವೆ. ಕಾನ್ಸ್‌ಟೇಬಲ್ – 2000, ಸಬ್ ಇನ್‌ಸ್ಟೆಕ್ಟರ್ – 250 ಹುದ್ದೆಗಳಿವೆ. ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿರಬೇಕು. ಸಬ್ ಇನ್‌ಸ್ಟೆಕ್ಟರ್ ಹುದ್ದೆ ಆಕಾಂಕ್ಷಿಗಳು ಪದವಿ ಪಡೆದಿರಬೇಕು. ಆರ್‌ಪಿಎಫ್ ನಿಯಮಾನುಸಾರ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ಪಾವತಿಸಲಾಗುತ್ತದೆ. ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 18 ರಿಂದ 25 ವರ್ಷ…

Read More

ಚಳಿಗಾಲದಲ್ಲಿ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ. ಇದಕ್ಕೆ ಕಾರಣ ದೇಹದಲ್ಲಿನ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಅದರ ಜೊತೆಗೆ ವಿಪರೀತ ಚಳಿ ಮತ್ತು ಧೂಳಿನಿಂದ ನೆಗಡಿ, ಕೆಮ್ಮು, ತ್ವಚೆ ಮತ್ತು ಕೂದಲಿನ ಸಮಸ್ಯೆಗಳು ಉಂಟಾಗುತ್ತವೆ. ಚಳಿಗಾಲದಲ್ಲಿ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಕೂರುವುದರಿಂದ ಆಗುವ ಪ್ರಯೋಜನಗಳನ್ನು ನೋಡೋಣ. – ಚಳಿಗಾಲದಲ್ಲಿ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಹೃದಯಕ್ಕೆ ತುಂಬಾ ಒಳ್ಳೆಯದು. ಸೂರ್ಯನ ಬೆಳಕು ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. – ಬೆಳಿಗ್ಗೆ ಅಥವಾ ಸಂಜೆ ಸೂರ್ಯನಲ್ಲಿ ಕುಳಿತುಕೊಳ್ಳುವುದು ಉಲ್ಲಾಸಕರವಾಗಿದೆ. ಇದು ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. – ಆರೋಗ್ಯಕರ ಮತ್ತು ಸಂತೋಷವಾಗಿರಲು ವಿಟಮಿನ್ ಡಿ ಅತ್ಯಗತ್ಯ. ದೇಹಕ್ಕೆ ಸಾಕಷ್ಟು ವಿಟಮಿನ್ ಡಿ ಸಿಗುವುದರಿಂದ ಮೂಳೆಗಳು ಮತ್ತು ಹಲ್ಲುಗಳು ಆರೋಗ್ಯಕರವಾಗಿರುತ್ತವೆ. – ಚಳಿಗಾಲದಲ್ಲಿ ಪ್ರತಿದಿನ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಕುಳಿತರೆ ದೇಹಕ್ಕೆ ವಿಟಮಿನ್ ಡಿ ದೊರೆಯುತ್ತದೆ. ರೋಗನಿರೋಧಕ ಶಕ್ತಿಯೂ ಸಿಗುತ್ತದೆ. ಇದರಿಂದ ಅನೇಕ ರೋಗಗಳು ದೂರವಾಗುತ್ತವೆ. -…

Read More

ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತವನ್ನು ಅವಲಂಬಿಸಿ, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆ ಅಥವಾ ಇಳಿಕೆ ಅನೇಕ ದೇಶಗಳಲ್ಲಿ ಕಂಡುಬರುತ್ತದೆ. ಜಾಗತಿಕ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದಲ್ಲಿ ನಿನ್ನೆ ಭಾರೀ ಕುಸಿತ ಕಂಡುಬಂದಿದೆ. ನಂತರ ಇದು ಕಳೆದ ಒಂದು ತಿಂಗಳಲ್ಲೇ ಅತಿದೊಡ್ಡ ಕುಸಿತವಾಗಿದೆ. ಇಂದು, ಕಚ್ಚಾ ತೈಲದ ಬೆಲೆಯಲ್ಲಿ ಯಾವುದೇ ದೊಡ್ಡ ಇಳಿಕೆ ಕಂಡುಬಂದಿಲ್ಲ. ಆದರೆ ದರಗಳು ಮಿಶ್ರವಾಗಿ ಕಾಣುತ್ತಿವೆ. ಕಚ್ಚಾ ತೈಲವು ಕೆಳಮಟ್ಟಕ್ಕೆ ಇಳಿಕೆಯಾಗುತ್ತಿರುವುದು ಕಂಡುಬಂದಿದ್ದು, ಇದರ ಹಿಂದೆ ಹಲವು ಕಾರಣಗಳಿವೆ. OPEC+ ಸೌದಿ ಅರೇಬಿಯಾ ಕಚ್ಚಾ ತೈಲ ಬೆಲೆಗಳನ್ನು ಕಡಿತಗೊಳಿಸಿದ ಪರಿಣಾಮ ಮತ್ತು ಜಾಗತಿಕ ಮಾರುಕಟ್ಟೆಗಳ ದುರ್ಬಲತೆಯು ಕಚ್ಚಾ ತೈಲದ ಮೇಲೆ ಕಂಡುಬರುತ್ತಿದೆ. ಈ ಕಾರಣದಿಂದಾಗಿ, ಅದರ ಬೆಲೆ ನಿರಂತರವಾಗಿ ಕುಸಿಯುತ್ತಿದೆ. ರಿಯಾದ್ ಕಚ್ಚಾತೈಲದ ಬೆಲೆಯಲ್ಲಿ ನಿರೀಕ್ಷೆಗೂ ಮೀರಿ ಕಡಿತಗೊಳಿಸಿದ್ದು, ಇದರ ಪರಿಣಾಮ ಕಚ್ಚಾ ತೈಲ ಬೆಲೆಯ ಮೇಲೆ ಕಂಡು ಬಂದಿದೆ. ಇದಲ್ಲದೇ ಇತರ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲೂ ಕಚ್ಚಾ ತೈಲದ ಬೆಲೆ ತೀವ್ರವಾಗಿ ಕುಸಿಯುತ್ತಿದೆ. ನಿನ್ನೆ, ಬ್ರೆಂಟ್ ಕಚ್ಚಾ…

Read More

ಬಾಲಿವುಡ್​ ಅಂಗಳದಲ್ಲಿ​ ಕಿಂಗ್ ಖಾನ್ ಅಭಿನಯದ ‘ಜವಾನ್’ ಮತ್ತು ‘ಪಠಾಣ್’ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ್ದ ಮೊತ್ತವನ್ನು ಇದೀಗ ಬಾಲಿವುಡ್​ನ ಮತ್ತೊಬ್ಬ ಸ್ಟಾರ್​ ನಟನ ಚಿತ್ರ ತಲುಪುವಲ್ಲಿ ಯಶಸ್ವಿಯಾಗಿದ್ದು, ಶಾರುಖ್​ ಅವರ ಎರಡು ಚಿತ್ರಗಳ ಬಳಿಕ ಜಾಗತಿಕವಾಗಿ 900 ಕೋಟಿ ರೂ. ತಲುಪಿದ ಮೂರನೇ ಚಿತ್ರ ಇದಾಗಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹಾಗೂ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿದ ‘ಅನಿಮಲ್’​ ಕಳೆದ ವರ್ಷ ಸಿಕ್ಕಾಪಟ್ಟೆ ಗದ್ದಲದ ಮಧ್ಯೆಯೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಕಂಡಿತು. ಬಿಡುಗಡೆಯಾದ ಮೊದಲ ದಿನವೇ ಭಾರೀ ವಿವಾದಕ್ಕೆ ತುತ್ತಾದ ಚಿತ್ರವು, ಕಲೆಕ್ಷನ್​ ಸಾಲಿನಲ್ಲಿ ಮಾತ್ರ ಕುಸಿಯಲಿಲ್ಲ ಎಂಬುದು ಆಶ್ಚರ್ಯ! ಇದೀಗ ಈ ಚಿತ್ರ ವಿಶ್ವದಾದ್ಯಂತ 900 ಕೋಟಿ ರೂ. ಗಡಿ ದಾಟಿದ ಮೂರನೇ ಬಾಲಿವುಡ್ ಚಿತ್ರವಾಗಿ ಹೊರಹೊಮ್ಮಿದೆ. ಸಿನಿಪ್ರೇಕ್ಷಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ‘ಅನಿಮಲ್’ ಚಿತ್ರವು, ಅಶ್ಲೀಲ ಸೀನ್​ಗಳನ್ನು ಒಳಗೊಂಡಿದೆ. ಇಂತಹ ಸಿನಿಮಾಗಳನ್ನು ನೋಡಲು ಕಷ್ಟವಾಗುತ್ತದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ…

Read More

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ಜನವರಿ 17ರಂದು ಹಮ್ಮಿಕೊಂಡಿದ್ದ ರಾಮಲಲ್ಲಾ ವಿಗ್ರಹ ಪುರ ಮೆರವಣಿಗೆಯನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರದ್ದುಗೊಳಿಸಿರುವುದಾಗಿ ಮಾಹಿತಿ ನೀಡಿದೆ. ಅಯೋಧ್ಯೆ ನಗರದಲ್ಲಿ ರಾಮಲಲ್ಲಾ ವಿಗ್ರಹ ಮೆರವಣಿಗೆಯ ಸಂದರ್ಭದಲ್ಲಿ ಅಪಾರ ಪ್ರಮಾಣದ ಭಕ್ತರು ರಾಮಲಲ್ಲಾ ವಿಗ್ರಹದ ಛಾಯಾಚಿತ್ರ ಸೆರೆ ಹಿಡಿಯಲು ಮುಂದಾಗುವುದರಿಂದ ಜನದಟ್ಟಣೆ ಸಂಭವಿಸಬಹುದು ಎಂದು ಟ್ರಸ್ಟ್‌ ಹೇಳಿದೆ. ಆದರೂ ಪುರ ಮೆರವಣಿಗೆ ರದ್ದಗೊಂಡಿದ್ದರೂ ಕೂಡಾ ಜನವರಿ 17ರಂದು ರಾಮ ಜನ್ಮಭೂಮಿ ಆವರಣದಲ್ಲಿ ನೂತನ ವಿಗ್ರಹದ ಮೆರವಣಿಗೆ ನಡೆಸಲು ಟ್ರಸ್ಟ್‌ ಸಿದ್ಧತೆ ನಡೆಸಿದೆ. ಹಿರಿಯ ಅಧಿಕಾರಿಗಳು ಮತ್ತು ಕಾಶಿ ಕ್ಷೇತ್ರದ ಹಿರಿಯ ಸಂತರ ಜತೆಗಿನ ಸಭೆಯ ನಂತರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಿದೆ. ಅಪಾರ ಪ್ರಮಾಣದ ಭಕ್ತರನ್ನು ನಿಯಂತ್ರಿಸುವುದು ಹಾಗೂ ಭದ್ರತೆಯ ಕಾರಣದಿಂದ ಪುರ ಮೆರವಣಿಗೆ ರದ್ದುಗೊಳಿಸಲಾಗಿದೆ. ಅಯೋಧ್ಯೆ ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ, ನೂತನ ರಾಮಲಲ್ಲಾ ವಿಗ್ರಹವನ್ನು ಪುರ ಮೆರವಣಿಗೆಗೆ…

Read More