Subscribe to Updates
Get the latest creative news from FooBar about art, design and business.
Author: KNN IT Team
ಉಡುಪಿ : ಕುಂದಾಪುರ ತಾಲೂಕಿನ ಉಳ್ತೂರು ಕಟ್ಟೆಮನೆಯ ಬೊಬ್ಬರ್ಯ ದೈವಸ್ಥಾನದ ಹಾಡಿಯಲ್ಲಿ ಶಾಸನ ಸಹಿತವಾದ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ, ಪುರಾತತ್ವ ಸಂಶೋಧಕ ಪ್ರೊ. ಟಿ.ಮುರುಗೇಶಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶಾಸನವನ್ನು ಒಂದು ಆಯತಾಕಾರದ ಶಿಲೆಯ ಮೇಲೆ ಚಿತ್ರಪಟ್ಟಿಕೆ ಸಹಿತವಾಗಿ ಚಿತ್ರಿಸಲಾಗಿದೆ. ಶಾಸನದ ಮೇಲ್ಭಾಗದಲ್ಲಿ ಚಿತ್ರಪಟ್ಟಿಕೆ ಇದ್ದು, ಅದರ ಕೆಳಭಾಗದಲ್ಲಿ ನಾಲ್ಕು ಸಾಲಿನ ಬರಹವನ್ನು ಕೆತ್ತಲಾಗಿದೆ. ಶಾಸನವನ್ನು ಕನ್ನಡ ಭಾಷೆ ಮತ್ತು ಲಿಪಿಯಲ್ಲಿ ಬರೆಯಲಾಗಿದೆ. ಶಾಸನವು ಶ್ರೀಗಣಾಧಿಪತಯೇ ನಮಃ ಎಂದು ಆರಂಭವಾಗಿದ್ದು, ಪ್ರಜೋತ್ಪತ್ತಿ ಸಂವತ್ಸರದ ಶು 10 ಲೂ ಲವಮಾಳುವನ ವಾಳೆಯ (ಹೆಸರು ನಷ್ಟವಾಗಿದೆ) ಹತನಾದ, ಮೃತ ವಾಳೆಯನ ನೆನಪಿಗೆ ಯಾರೋ (ಹೆಸರು ನಷ್ಟವಾಗಿದೆ) ಈ ವೀರಗಲ್ಲನ್ನು ಹಾಕಿಸಿದರು, ಶಾಸನ ಶುಭಮಸ್ತು ಎಂದು ಕೊನೆಯಾಗಿದೆ. ಶಾಸನದ ಚಿತ್ರಪಟ್ಟಿಕೆಯ ಮಧ್ಯಭಾಗದಲ್ಲಿ ಒಬ್ಬ ವೀರ ವೀರಭಂಗಿಯಲ್ಲಿ, ತನ್ನ ಬಲಗೈಯಲ್ಲಿ ಖಡ್ಗವನ್ನು ಎತ್ತಿಹಿಡಿದಿದ್ದು, ಎಡಗೈಯಲ್ಲಿ ಗುರಾಣಿಯನ್ನು ಹಿಡಿದು ನಿಂತಿರುವಂತೆ ಪ್ರಧಾನವಾಗಿ ಚಿತ್ರಿಸಲಾಗಿದೆ. ವೀರನ ಎಡಭಾಗದಲ್ಲಿ ಛತ್ರವನ್ನು…
ಮುಂಬೈ : ಭಾರತದ ಅತೀ ಉದ್ದನೆಯ ಸಾಗರ ಸೇತುವೆ(ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್)ಯನ್ನು ಪ್ರದಾನಿ ನರೇಂದ್ರ ಮೋದಿ ಜನವರಿ 12 ಉದ್ಘಾಟಿಸುವ ಮೂಲಕ ಲೋಕಾರ್ಪಣೆಗೊಳ್ಳಲಿದೆ. ದಕ್ಷಿಣ ಮುಂಬೈನಿಂದ ನವ ಮುಂಬೈವರೆಗೆ ಸಮುದ್ರದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದ್ದು, ಇದು ಬರೋಬ್ಬರಿ 21.8 ಕಿಲೋ ಮೀಟರ್ ಉದ್ದದ ಸೇತುವೆಯಾಗಿದೆ. ಈ ಮೂಲಕ ಎರಡು ಗಂಟೆಗಳ ಪ್ರಯಾಣವನ್ನು ಇನ್ನು ಕೇವಲ 15-20 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ ಎಂದು ವರದಿ ತಿಳಿಸಿದೆ. ಸೇತುವೆ ಉದ್ಘಾಟನೆ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾಹಿತಿ ನೀಡಿದ್ದು, ಈ ಅತೀ ಉದ್ದನೆಯ ಸೇತುವೆ ಉದ್ಘಾಟನೆಯಿಂದ ಮುಂಬೈನ ಆರ್ಥಿಕ ಅಭಿವೃದ್ಧಿ ಹಾಗೂ ಈ ಭಾಗವನ್ನು ಸಂಪರ್ಕಿಸುವ ಪ್ರದೇಶಗಳು ಅಭಿವೃದ್ಧಿ ಹೊಂದಲು ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ. ಈ ಸೇತುವೆಗೆ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಸೇವಾ ಅಟಲ್ ಸೇತು ಎಂದು ಹೆಸರಿಡಲಾಗಿದ್ದು, ಇದಕ್ಕೆ 21,000 ಸಾವಿರ ಕೋಟಿ ರೂಪಾಯಿ ವೆಚ್ಚವಾಗಿದೆ. ಇದರಲ್ಲಿ 15000 ಸಾವಿರ ಕೋಟಿ ರೂಪಾಯಿ ಸಾಲ ಪಡೆದುಕೊಳ್ಳಲಾಗಿದೆ ಎಂದು ಶಿಂಧೆ ತಿಳಿಸಿದರು.…
ಬೆಂಗಳೂರು : ರಾಮಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರಲು ನಿರ್ಧರಿಸುವ ಮೂಲಕ ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಕಾಂಗ್ರೆಸ್ ಮತ್ತೆ ಧಕ್ಕೆ ತಂದಿದೆ ಎಂದು ಕಾರ್ಕಳ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಭಾಗವಹಿಸದಿದ್ದರೆ ಚಿಂತೆ ಇಲ್ಲ. ಈ ಕ್ಷಣದಿಂದ ರಾಮಮಂದಿರ ಹಾಗೂ ಅಯೋಧ್ಯೆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ. ಅಯೋಧ್ಯೆ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸುವುದಕ್ಕೆ ಕಾಂಗ್ರೆಸ್ ನೀಡಿರುವ ಕಾರಣವೇ ಹಾಸ್ಯಾಸ್ಪದ. ಅಪೂರ್ಣ ಕಟ್ಟಡದ ಉದ್ಘಾಟನೆಗೆ ಬರುವುದಿಲ್ಲ ಎಂಬುವುದು ಕಳ್ಳನಿಗೆ ಪಿಳ್ಳೆ ನೆಪ ಅಷ್ಟೆ. ನಿಮ್ಮ ಮನಸಿನಲ್ಲಿದ್ದ ರಾಮ ವಿರೋಧಿ ನಿಲುವು ಹಾಗೂ ಹಿಂದೂ ವಿರೋಧಿ ನಿಲುವು ಈಗ ಮತ್ತೆ ಬಹಿರಂಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಇಂತಹ ಮನಸ್ಥಿತಿಯನ್ನು ದೇಶದ ಪ್ರಜ್ಞಾವಂತ ಜನ ಅರಿತುಕೊಂಡಿದ್ದಾರೆ ಎಂದು ಸುನಿಲ್ ಕುಮಾರ್ ಟಾಂಗ್ ನೀಡಿದ್ದಾರೆಯಾಗಿದೆ.
ಆಧುನಿಕ ಜಗತ್ತಿಗೆ ಹೊಂದಿಕೊಂಡಿರುವ ನಾವು ಇಂದು ಮೊಬೈಲ್ ಫೋನ್ ಬಿಟ್ಟು ಇರದ ಪರಿಸ್ಥಿತಿಗೆ ಬಂದಿದ್ದೇವೆ. ಅದನ್ನು ನಮ್ಮ ಜೀವನದ ಒಂದು ಅಂಗವಾಗೆ ಮಾಡಿಕೊಂಡಿದ್ದು, ಆ ಫೋನ್ ಗೆ ಏನಾದರೂ ಆದರೆ ನಮಗೇ ಏನೋ ಆಯಿತೆನ್ನುವಂತೆ ಒದ್ದಾಡುತ್ತೇವೆ. ಹೀಗಿರುವಾಗ ಕೆಲವೊಮ್ಮೆ ಈ ಫೋನ್ ಜೊತೆ ಜವಾಬ್ದಾರಿ ಮರೆತು ವರ್ತಿಸುತ್ತೇವೆಹ ಅಂದರೆ ಅದನ್ನು ಸ್ವಚ್ಛ ಮಾಡುವಾಗ ಒಟ್ಟಾರೆ ಮಾಡುವುದು, ಹೇಗೆ ಬೇಕು ಹಾಗೆ ಇಟ್ಟುಕೊಳ್ಳುವುದು ಮಾಡುತ್ತೇವೆ. ಆದರೆ ಇನ್ಮುಂದೆ ಮೊಬೈಲ್ ಫೋನ್ ಸ್ವಚ್ಛ ಮಾಡುವಾಗ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿರಿ. ನೀವು ಯಾವುದಾದರೂ ದ್ರವ ಅಥವಾ ಲಿಕ್ವಿಡ್ ಬಳಸಿ ಮೊಬೈಲ್ ಕ್ಲೀನ್ ಮಾಡೋದ್ರಿಂದ ನಿಮ್ಮ ಫೋನಿನ ಸ್ಪೀಕರ್ಗಳು ಮತ್ತು ಮೈಕ್ ಅನ್ನು ಹಾನಿಗೊಳಿಸಬಹುದು. ನಿಮ್ಮ ಫೋನ್ ಐಪಿ ರೇಟಿಂಗ್ ನೊಂದಿಗೆ ಬರದಿದ್ದರೆ ನಿಮ್ಮ ಫೋನ್ ಹಾನಿಗೊಳಗಾಗಬಹುದು. ಅಲ್ಲದೆ ಅದು ಮೊಬೈಲ್ ಒಳಗೆ ಹೋಗಿ ಅದರ ಎಲೆಕ್ಟ್ರಾನಿಕ್ ಭಾಗಗಳನ್ನು ಹಾನಿಗೊಳಿಸಬಹುದು.ಸ್ಮಾರ್ಟ್ ಫೋನ್ ಪರದೆ ಅಥವಾ ಹಿಂಭಾಗದ ಕವರ್ ಅನ್ನು ಎಂದಿಗೂ ಗಟ್ಟಿಯಾದ ವಸ್ತುವಿನಿಂದ ಸ್ವಚ್ಛಗೊಳಿಸಬೇಡಿ. ಯಾಕೆಂದರೆ…
ಮೈಕೆಲ್ ಜಾಕ್ಸನ್ ಅವರು ಪಾಪ್ ಸಂಗೀತದಲ್ಲಿ ಕ್ರಾಂತಿಯನ್ನೇ ಮಾಡಿ ‘ಕಿಂಗ್ ಆಫ್ ಪಾಪ್’ ಎನಿಸಿಕೊಂಡಿದ್ದರು. ಜಾಕ್ಸನ್ ಅವರದೇ ಆದ ಸ್ಟೈಲ್ ಹೊಂದಿದ್ದರಂತೆ. ಅದರಲ್ಲಿಯೂ ಅವರು ಒಂದೇ ಕೈಗೆ ಗ್ಲೌಸ್ ಧರಿಸುವುದನ್ನು ಕೂಡಾ ಜನ ಸಿಗ್ನೇಚರ್ ಸ್ಟೈಲ್ ಎಂದುಕೊಂಡಿದ್ದರು. ಮೈಕೆಲ್ ಜಾಕ್ಸನ್ ಧ್ವನಿ, ಸಂಗೀತ, ನೃತ್ಯ- ಸಾಮಾನ್ಯ ಸಂಗೀತದ ವಿಡಿಯೋಗಳನ್ನು ಚಲನಚಿತ್ರ-ಪ್ರಮಾಣದ ವೈಶಿಷ್ಟ್ಯಗಳಾಗಿ ಪರಿವರ್ತಿಸುವ ಸೃಜನಾತ್ಮಕತೆಯಿಂದ ಸಾಮಾನ್ಯ ಜನರನ್ನು ಕೂಡ ಸೆಳೆಯುವ ವಿಶೇಷ ಕಲೆಯನ್ನು ತನ್ನದಾಗಿಸಿಕೊಂಡಿದ್ದ. ಪಾಪ್ ತಾರೆಗಳ ನಡುವೆ ಮೈಕೆಲ್‌ರ ಜುಟ್ಟು, ಬಣ್ಣ, ಜೊತೆಗೆ ಒಂದೇ ಕೈಗೆ ಧರಿಸುತ್ತಿದ್ದ ಬಿಳಿಯ ಹೊಳೆಯುವ ಗ್ಲೌಸ್ ಕೂಡಾ ಅವರ ಸಿಗ್ನೇಚರ್ ಸ್ಟೈಲ್ ಆಗಿ ನೋಡುಗರ ಕಣ್ಮನ ಸೆಳೆಯುತ್ತಿತ್ತು. ಮೈಕೆಲ್ ಧರಿಸುತ್ತಿದ್ದ ಬಿಳಿ ಗ್ಲೌಸ್ ಹಿನ್ನೆಲೆ ಗಮನಿಸಿದರೆ,1983 ರಿಂದ ಆತ ತನ್ನ ಬಲಗೈಗೆ ಬಿಳಿ ಕೈಗವಸು ಧರಿಸುತ್ತಿದ್ದರಂತೆ. ಇದಕ್ಕೆ ಕಾರಣವೇನು ಗೊತ್ತಾ??ಆತ ಹೆಚ್ಚು ಮುಜುಗರ ತರುತ್ತಿದ್ದ ಆರೋಗ್ಯ ಸಮಸ್ಯೆಯನ್ನು ಎಲ್ಲರಿಂದ ಮುಚ್ಚಿಡಲು ಹೀಗೆ ಮಾಡುತ್ತಿದ್ದನಂತೆ. 2009ರ ಜೂನ್ 25ರಂದು ಮೈಕೆಲ್ ನಿಧನರಾದ ಬಳಿಕ, ನಟಿ ಸಿಸಿಲಿ…
ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ನೀವೇನಾದರೂ ರೈಲಿನಲ್ಲಿ ಹೆಚ್ಚಾಗಿ ಪ್ರಯಾಣ ಮಾಡುವವರಾದರೆ ಈ ಮಾಹಿತಿ ತಿಳಿದಿದ್ದರೆ ಉತ್ತಮ.ಚಲಿಸುತ್ತಿರುವ ರೈಲಿನಿಂದ ನಿಮ್ಮ ಫೋನ್ ಬಿದ್ದರೆ ಏನು ಮಾಡೋದು ಎಂಬ ಕುತೂಹಲ ಹೆಚ್ಚಿನವರನ್ನು ಕಾಡುತ್ತಿರುತ್ತದೆ. ಚಲಿಸುವ ರೈಲಿನಿಂದ ಫೋನ್ ಬಿದ್ದರೆ ನೀವು ಮೊದಲು ರೈಲ್ವೇ ಹಳಿಯ ಬದಿಯಲ್ಲಿ ಅಳವಡಿಸಿರುವ ಕಂಬದ ಮೇಲೆ ಬರೆದಿರುವ ಸಂಖ್ಯೆ ಇಲ್ಲವೇ ಸೈಡ್ ಟ್ರಾಕ್ ಸಂಖ್ಯೆಯನ್ನು ಗಮನಿಸಿ. ನಿಮ್ಮ ಪಕ್ಕದಲ್ಲಿರುವ ಪ್ರಯಾಣಿಕರಿಂದ ಫೋನ್ ಕೇಳಿ ಪಡೆದು ಆರ್‌ಪಿಎಫ್(RPF) ಮತ್ತು ಸಂಖ್ಯೆ 182 ಕ್ಕೆ ಫೋನ್ ಬಿದ್ದ ಮಾಹಿತಿಯನ್ನು ನೀಡಿ. ಈ ಸಮಯದಲ್ಲಿ, ಫೋನ್ ಯಾವ ಕಂಬ ಇಲ್ಲವೇ ಟ್ರ್ಯಾಕ್ ಸಂಖ್ಯೆಯ ಬಳಿ ಬಿದ್ದಿದೆ ಎಂಬುದನ್ನು ತಿಳಿಸಬೇಕು. ಹೀಗೆ ಮಾಡಿದಾಗ ರೈಲ್ವೆ ಪೊಲೀಸರಿಗೆ ಫೋನ್ ಪತ್ತೆ ಮಾಡುವುದು ಸುಲಭವಾಗಲಿದೆ. ಪೊಲೀಸರು ತಕ್ಷಣ ಅದೇ ಸ್ಥಳಕ್ಕೆ ತಲುಪಿ ಫೋನ್ ಹುಡುಕಲು ಆರಂಭಿಸುತ್ತಾರೆ. ಈ ಪ್ರಕ್ರಿಯೆಯ ಬಳಿಕ…
ತಿಮಿಂಗಿಲ ಬದುಕಿರುವಾಗ ಅದರ ಹತ್ತಿರ ಹೋಗಲು ಎಲ್ಲರೂ ಭಯಪಡುತ್ತಾರೆ. ಆದರೆ ಅದು ಸತ್ತರೆ ಯಾರೂ ಭಯಪಡುವುದಿಲ್ಲ. ಆದರೆ ಸಾವಿನ ನಂತರವೇ ತಿಮಿಂಗಿಲವು ಅತ್ಯಂತ ಅಪಾಯಕಾರಿಯಾದುದು. ತಿಮಿಂಗಿಲವು ಸತ್ತ ನಂತರ, ಅದರ ದೇಹವು ಸಮುದ್ರದ ಅಲೆಗಳ ಮೂಲಕ ಸಮುದ್ರ ತೀರಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ತಿಮಿಂಗಿಲವನ್ನು ನೋಡದ ಅನೇಕ ಜನರು ಅದನ್ನು ನೋಡುವ ಮತ್ತು ಅದರ ಬಳಿ ಹೋಗುವ ಪ್ರಯತ್ನ ಮಾಡುತ್ತಾರೆ. ಹಾಗೆ ನೋಡಿದರೆ ಜೀವಂತ ತಿಮಿಂಗಿಲಗಳಿಗಿಂತ ಸತ್ತ ತಿಮಿಂಗಿಲಗಳು ತಮಗೆ ಹೆಚ್ಚು ಅಪಾಯವನ್ನುಂಟುಮಾಡುತ್ತವೆ ಎಂಬ ಅಂಶ ಕೆಲವೇ ಜನರಿಗೆ ತಿಳಿದಿದೆ. ವಾಸ್ತವವಾಗಿ, ಸತ್ತ ತಿಮಿಂಗಿಲದ ದೇಹವು ಯಾವುದೇ ಸಮಯದಲ್ಲಿಯಾದರೂ ಸ್ಫೋಟಗೊಳ್ಳಬಹುದು. ಸತ್ತ ತಿಮಿಂಗಿಲದ ದೇಹವು ಏಕೆ ಸ್ಫೋಟಗೊಳ್ಳುತ್ತದೆ ಎಂಬ ಪ್ರಶ್ನೆ ಈಗ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು, ಸಾಮಾನ್ಯವಾಗಿ ಜೀವಿಗಳ ಮರಣದ ನಂತರ, ಬ್ಯಾಕ್ಟೀರಿಯಾಗಳು ಅವುಗಳ ದೇಹದ ಆಂತರಿಕ ಭಾಗಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಈ ಕಾರಣದಿಂದಾಗಿ, ಅವುಗಳ ದೇಹದಲ್ಲಿ ಅನೇಕ ರೀತಿಯ ಅನಿಲಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಆ ಅನಿಲಗಳಿಂದಾಗಿ ದೇಹದಲ್ಲಿ ಊತ ಬರಲು…
ಚೆನ್ನೈ : ನಯನತಾರಾ ಅಭಿನಯಿಸಿರುವ ʼಅನ್ನಪೂರ್ಣಿʼ ಸಿನಿಮಾದ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ ಕೇಳಿಬಂದಿದ್ದು, ಬಾಯ್ಕಟ್ ಕೂಗು ಹಾಗೂ ಪ್ರತಿಭಟನೆ ಶುರುವಾಗಿದೆ. ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ನಯನತಾರಾ ಅವರ ಇತ್ತೀಚಿನ ಚಿತ್ರ ʼಅನ್ನಪೂರ್ಣಿʼ ಸಿನಿಮಾದ ನಿರ್ಮಾಪಕರ ವಿರುದ್ಧ ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ಪೊಲೀಸ್ ದೂರು ದಾಖಲಿಸಿದ್ದಾರೆ. ನಿರ್ಮಾಪಕರು ರಾಮನನ್ನು ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. “ಭಗವಾನ್ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ನಿರೀಕ್ಷೆಯಲ್ಲಿ ಇಡೀ ಜಗತ್ತು ಸಂಭ್ರಮಿಸುತ್ತಿರುವ ಈ ಸಮಯದಲ್ಲಿ, ಝೀ ಸ್ಟುಡಿಯೋಸ್, ನಾಡ್ ಸ್ಟುಡಿಯೋಸ್ ಮತ್ತು ಟ್ರೈಡೆಂಟ್ ಆರ್ಟ್ಸ್ ನಿರ್ಮಾಣದ ಈ ಹಿಂದೂ ವಿರೋಧಿ ಚಲನಚಿತ್ರ ʼಅನ್ನಪೂರ್ಣಿʼ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡುವ ವೇಳೆ ನಮಾಜ್ ಮಾಡುತ್ತಾಳೆ.ಈ ಚಿತ್ರದಲ್ಲಿ ಲವ್ ಜಿಹಾದ್ ನ್ನು ಪ್ರಚಾರ ಮಾಡಲಾಗಿದೆ. ಫರ್ಹಾನ್ ಭಗವಾನ್ ಶ್ರೀ ರಾಮ್ ಕೂಡ ಮಾಂಸ ತಿನ್ನುವವರಾಗಿದ್ದರು ಎಂದು ಹೇಳಿ ಮಾಂಸ…
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆಯಲು ಕೇಂದ್ರ ಸರಕಾರವು ಇ-ಕೆವೈಸಿ ಹಾಗೂ ಭೌತಿಕ ದೃಢೀಕರಣವನ್ನು ಕಡ್ಡಾಯಗೊಳಿಸಿದೆ. ಇದನ್ನು ಪೂರ್ಣಗೊಳಿಸದ ಫಲಾನುಭವಿಗಳ ಸಹಾಯಧನ ಪಾವತಿಯನ್ನು ತಡೆಹಿಡಿಯೋದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿಯ ತನಕ ಸಾಕಷ್ಟು ರೈತರು ಇನ್ನೂ ಇ-ಕೆವೈಸಿ ಪೂರ್ಣಗೊಳಿಸಿಲ್ಲವೋ ಅವರನ್ನು ನಿರಂತರವಾಗಿ ಕೃಷಿ ಇಲಾಖೆ ಮನವಿ ಮಾಡಿದರೂ ಪೂರ್ಣಗೊಳಿಸಿಲ್ಲ. ಇದೀಗ ಕೃಷಿ ಇಲಾಖೆ ವಿವಿಧ ಪಂಚಾಯತ್ ಮಟ್ಟದಲ್ಲಿ ಇ-ಕೆವೈಸಿ ಹಾಗೂ ಭೌತಿಕ ದೃಢೀಕರಣ ಶಿಬಿರ ಆಯೋಜಿಸಿದೆ. ಈ ಯೋಜನೆಯಲ್ಲಿ ರೈತರು ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರೂ. ನಂತೆ ವಾರ್ಷಿಕ ಒಟ್ಟು ಆರು ಸಾವಿರ ಪಡೆಯುತ್ತಾರೆ. ಇ-ಕೆವೈಸಿ ಮಾಡಲು https://pmkisan.gov.in ವೆಬ್‌ಸೈಟ್ ನಲ್ಲಿ ಅಥವಾ ಪಿ.ಎಂ.ಕಿಸಾನ್ ಮೊಬೈಲ್ ಆಪ್ ಮುಖಾಂತರ ಮಾಡಬಹುದು. ಇ-ಕೆವೈಸಿಯನ್ನು ಒಟಿಪಿ ಮುಖಾಂತರ ಆಧಾರ್ ಸಂಖ್ಯೆಯೊಂದಿಗೆ ಮೊಬೈಲ್ ನಂಬರ್ ಜೋಡಣೆ ಮಾಡಿದವರು https://pmkisan.gov.in ವೆಬ್‌ಸೈಟ್‌ನ ಇ-ಕೆವೈಸಿ ಮೇಲೆ ಕ್ಲಿಕ್ಕಿಸಿ ಆಧಾರ್ ನಂಬರ್, ಕ್ಯಾಪ್ಚಾ ನಮೂದಿಸಿ. ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ದಾಖಲಿಸಿ ಇ-ಕೆವೈಸಿ ಮಾಡಿ.…
ಹಲವರ ಮನೆ, ಕಛೇರಿಯ ಮೇಜು, ಹೋಟೆಲ್ ರಿಸೆಪ್ಷನ್ ಮುಂತಾದ ಅನೇಕ ಸ್ಥಳಗಳಲ್ಲಿ ಮಡಕೆ ಹೊಟ್ಟೆಯೊಂದಿಗೆ ನಗುವ ಬುದ್ಧನ ಆಕೃತಿಯನ್ನು ಕಾಣಬಹುದು. ಲಾಫಿಂಗ್ ಬುದ್ಧ ನಿಮ್ಮನ್ನು ನಗಿಸುವ ಆಟಿಕೆ ಮಾತ್ರವಲ್ಲ. ಇದು ಸಮೃದ್ಧಿ, ನೆಮ್ಮದಿ ಮತ್ತು ಸಂತೋಷದ ಸಂಕೇತವಾಗಿದೆ. ಪುರಾತನ ಚೀನೀ ಸಾಂಪ್ರದಾಯಿಕ ಪದ್ಧತಿಗಳ ಪ್ರಕಾರ (ಫೆಂಗ್ ಶೂಯಿ), ನಿಮ್ಮ ವಾಸದ ಸ್ಥಳದ ಸುತ್ತಲೂ ಈ ಆಹ್ಲಾದಕರ ಪ್ರತಿಮೆಗಳನ್ನು ಇರಿಸುವುದು ಧನಾತ್ಮಕ ಶಕ್ತಿ ಮತ್ತು ಸಂತೋಷವನ್ನು ಆಹ್ವಾನಿಸುತ್ತದೆ. ಸುತ್ತಮುತ್ತಲಿನ ಪರಿಸರವನ್ನು ಸಕಾರಾತ್ಮಕತೆಯಿಂದ ತುಂಬುತ್ತದೆ. ಲಾಫಿಂಗ್ ಬುದ್ಧ ದೃಢವಾದ, ಮಡಕೆ-ಹೊಟ್ಟೆಯ ನಗುವಿನೊಂದಿಗೆ ಕಾಣಿಸಿಕೊಳ್ಳುತ್ತಾನೆ. ಇದು ಅದೃಷ್ಟ, ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಈ ಅಂಕಿಅಂಶವನ್ನು ಹಲವು ವಿಧಗಳಲ್ಲಿ ತಯಾರಿಸಲಾಗುತ್ತದೆ. ಬಟ್ಟೆಯ ಚೀಲಗಳಲ್ಲಿ ಸಂಪತ್ತನ್ನು ಹೊತ್ತ ಲಾಫಿಂಗ್ ಬುದ್ಧನ ಪ್ರತಿಮೆಗಳೂ ಇವೆ. ಪ್ರತಿಯೊಂದೂ ಅದೃಷ್ಟ, ಸಂಪತ್ತು, ಸಮೃದ್ಧಿ, ಕುಟುಂಬ ಸಂಬಂಧಗಳು, ಜೀವನದ ಪ್ರಮುಖ ಅಂಶಗಳನ್ನು ಪ್ರತಿನಿಧಿಸುತ್ತದೆ. ನಗುವ ಬುದ್ಧನ ಚಿತ್ರಗಳು ಮತ್ತು ಪ್ರತಿಮೆಗಳಲ್ಲಿರುವ ವ್ಯಕ್ತಿಯ ಹೆಸರು ಬುಡಾಯಿ. ಅವರು ಚೀನಾದ ಅಸಾಧಾರಣ ಝೆನ್ ಸನ್ಯಾಸಿ. ಬುಡೈ…