Subscribe to Updates
Get the latest creative news from FooBar about art, design and business.
Author: KNN IT Team
ರಾಮಮಂದಿರದ ಉದ್ಘಾಟನೆ ಜನವರಿ 22, 2024ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಒಂದಲ್ಲ ಒಂದು ವಿಚಾರಕ್ಕೆ ರಾಮಮಂದಿರ ಎಲ್ಲರ ಗಮನ ಸೆಳೆಯುತ್ತಿದ್ದು, ದೇಶದ ಜನರು ಸಂಭ್ರಮದ ಕ್ಷಣಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ರಾಮಮಂದಿರ ಉದ್ಘಾಟನೆಯನ್ನು ಕೆಲವು ದುರುಳರು ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿಗಳನ್ನು ಹರಡಲು ಯತ್ನಿಸುತ್ತಿದ್ದಾರೆ. ಇದೀಗ ಶೃಂಗೇರಿ ಶಾರದಾ ಪೀಠದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದ್ದು, ಮಠದ ಆಡಳಿತ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಸುಮಾರು 500 ವರ್ಷಗಳ ಸುದೀರ್ಘವಾದ ಹೋರಾಟದ ನಂತರ ಶ್ರೀರಾಮಚಂದ್ರನ ಅವತಾರ ಕ್ಷೇತ್ರವಾದ ಪವಿತ್ರ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನಿಗೆ ಭವ್ಯವಾದ ದೇವಸ್ಥಾನದ ನಿರ್ಮಾಣವು ನೆರವೇರಿ ಇದೇ ಶೋಭಕೃತ್ ಪುಷ್ಯ ಶುಕ್ಲದ್ವಾದಶಿ (22-1-2024) ಸೋಮವಾರದಂದು ಪ್ರಾಣಪ್ರತಿಷ್ಠಾಮಹೋತ್ಸವವು ಅತ್ಯಂತ ವೈಭವೋಪೇತವಾಗಿ ಸಂಪನ್ನಗೊಳ್ಳಲಿದೆ. ಈ ವಿಷಯವು ಸಮಸ್ತ ಆಸ್ತಿಕಸ್ತೋಮಕ್ಕೂ ಅತ್ಯಂತಾನಂದದಾಯಕವಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ಕೆಲವರು ಧರ್ಮದ್ವೇಷಿಗಳು ಸಾಮಾಜಿಕ ಜಾಲತಾಣದಲ್ಲಿ ಶೃಂಗೇರಿ ಶಾರದಾಪೀಠದ ಪ್ರಸ್ತುತ ಅಧಿಪತಿಗಳಾದ ಪರಮಪೂಜ್ಯ ಜಗದ್ಗುರು…
ಅಯೋಧ್ಯೆಯ ಶ್ರೀರಾಮನ ಪ್ರತಿಷ್ಠಾಪನೆಯಈ ಹಿನ್ನೆಲೆಯಲ್ಲಿ ಎರಡು ದೇಶೀಯ ಏರ್‌ಲೈನ್ಸ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ ಕೆಲವು ನಗರಗಳಿಂದ ಅಯೋಧ್ಯೆಗೆ ನೇರ ವಿಮಾನಗಳನ್ನು ಒದಗಿಸಲು ತಯಾರಿ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ, ಇತರ ವಿಮಾನಯಾನ ಕಂಪನಿಗಳು ದೇಶದ ವಿವಿಧ ನಗರಗಳಿಂದ ಅಯೋಧ್ಯೆಗೆ ವಿಮಾನಗಳನ್ನು ಪ್ರಾರಂಭಿಸಬಹುದು ಎಂದು ನಂಬಲಾಗಿದೆ. ಸ್ಪೈಸ್ ಜೆಟ್ ಕೂಡ ಅಯೋಧ್ಯೆಗೆ ವಿಮಾನಯಾನ ಆರಂಭಿಸುವುದಾಗಿ ಹೇಳಿದೆ. ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು ಮತ್ತು ಅಹಮದಾಬಾದ್‌ನಿಂದ ಅಯೋಧ್ಯೆಗೆ ನೇರ ವಿಮಾನ ಸೇವೆಗಳು ಪ್ರಾರಂಭವಾಗಲಿವೆ. ಅಯೋಧ್ಯೆ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30, 2023 ರಂದು ಉದ್ಘಾಟಿಸಿದರು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜನವರಿ 17 ರಿಂದ ಬೆಂಗಳೂರು-ಅಯೋಧ್ಯೆ ಮತ್ತು ಕೋಲ್ಕತ್ತಾ-ಅಯೋಧ್ಯೆ ಮಾರ್ಗಗಳಲ್ಲಿ ಹಾರಾಟವನ್ನು ಪ್ರಾರಂಭಿಸಲಿದೆ. ದೆಹಲಿ-ಅಯೋಧ್ಯೆ ಮಾರ್ಗದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವೂ ನಿಗದಿಯಾಗಿದೆ. ದೆಹಲಿಯಿಂದ ಅಯೋಧ್ಯೆಗೆ ವಿಮಾನ ಹಾರಾಟ ಆರಂಭವಾಗಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (IX 1590) ದೆಹಲಿಯಿಂದ ಬೆಳಗ್ಗೆ 10 ಗಂಟೆಗೆ ಟೇಕ್ ಆಫ್ ಆಗಲಿದೆ…
ದೇಶದಲ್ಲಿ ಸಂಕ್ರಾಂತಿ ಹಬ್ಬ ಆರಂಭವಾಗುತ್ತಿದೆ. ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಅನೇಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಆದರೆ ಅಂತಹ ದೀರ್ಘ ಪ್ರಯಾಣ ಎಲ್ಲರಿಗೂ ಅಲ್ಲ. ಕೆಲವರಿಗೆ ಪ್ರಯಾಣದ ವೇಳೆ ವಾಂತಿ, ತಲೆಸುತ್ತು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರಯಾಣ ಶುರುವಾದ ಕೂಡಲೇ ಹೊಟ್ಟೆನೋವು, ವಾಂತಿಯಾಗುತ್ತದೆ. ಇದನ್ನು ಮೋಷನ್ ಸಿಕ್ನೆಸ್ ಎಂದು ಕರೆಯಲಾಗುತ್ತದೆ. ಆದರೆ ಈ ಸಮಸ್ಯೆಯನ್ನು ಕೆಲವು ಸಲಹೆಗಳೊಂದಿಗೆ ಪರಿಶೀಲಿಸಬಹುದು. ಈ ಸಂಕ್ರಾಂತಿಯಂದು ನೀವೂ ಲಾಂಗ್ ಡ್ರೈವ್ ಮಾಡುತ್ತಿದ್ದರೆ, ಪ್ರಯಾಣದ ವೇಳೆ ವಾಂತಿ ಆಗದಿರಲು ಈ ಕೆಲಸಗಳನ್ನು ಮಾಡಬಹುದು. ಪ್ರಯಾಣ ಮಾಡುವಾಗ ಆಸನವೂ ಮುಖ್ಯವಾಗಿದೆ. ಕಡಿಮೆ ಚಲನೆ ಇರುವಲ್ಲಿ ನೀವು ಕುಳಿತರೆ, ಚಲನೆಯ ಕಾಯಿಲೆ ಬರುವ ಸಾಧ್ಯತೆಗಳು ಬಹಳ ಕಡಿಮೆಯಾಗುತ್ತವೆ. ನೀವು ಪ್ರಯಾಣಿಸುವ ವಾಹನದ ಕಿಟಕಿಯನ್ನು ತೆರೆಯಿರಿ ಮತ್ತು ತಾಜಾ ಗಾಳಿಯನ್ನು ಪ್ರಸರಣಕ್ಕೆ ಬಿಡಿ. ತಾಜಾತನವು ಚಲನೆಯ ಅನಾರೋಗ್ಯದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಆಳವಾದ ಉಸಿರಾಟ, ದೃಶ್ಯೀಕರಣ ಮತ್ತು ಸಕಾರಾತ್ಮಕ ಆಲೋಚನೆಗಳು ಚಲನೆಯ ಕಾಯಿಲೆಯಿಂದ ದೂರವಿರಬಹುದು. ಆರಾಮದಾಯಕ ಪ್ರಯಾಣಕ್ಕೆ ಕೊಡುಗೆ ನೀಡುತ್ತದೆ. ನಿಂಬೆ ರಸವು…
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್(ಎನ್‌ಟಿಪಿಸಿ) 1975ರಲ್ಲಿ ಸ್ಥಾಪನೆಗೊಂಡಿದ್ದು, ಕೇಂದ್ರ ಇಂಧನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕ ವಲಯ ಉದ್ಯಮವಾಗಿದ್ದು, ವಿದ್ಯುತ್ ಉತ್ಪಾದನೆ ಹಾಗೂ ರಾಜ್ಯ ವಿದ್ಯುತ್ ಮಂಡಳಿಗಳಿಗೆ ವಿದ್ಯುತ್ ವಿಭಜಿಸಿ, ಸರಬರಾಜು ಮಾಡುವ ಗುರಿ ಹೊಂದಿದೆ. ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದ್ದು, 71,594 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ದೇಶದ ಅತಿ ದೊಡ್ಡ ವಿದ್ಯುತ್ ಕಂಪನಿಯೆಂಬ ಹೆಗ್ಗಳಿಕೆಯೂ ಇದೆ. ಪ್ರಸ್ತುತ ವಿವಿಧ ಹುದ್ದೆಗಳ ಭರ್ತಿಗಾಗಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 61 ಹುದ್ದೆಗಳಿವೆ. ಜಿಡಿಎಂಒ – 20, ಮೆಡಿಕಲ್ ಸ್ಪೆಷಲಿಸ್ಟ್(ಜಿಎಂ)- 25, ಮೆಡಿಕಲ್ ಸ್ಪೆಷಲಿಸ್ಟ್(ಜಿಎಸ್) – 7, ಮೆಡಿಕಲ್ ಸ್ಪೆಷಲಿಸ್ಟ್(ಅನಸ್ತೇಶಿಯ) – 5, ಮೆಡಿಕಲ್ ಸ್ಪೆಷಲಿಸ್ಟ್(ರೇಡಿಯೋಲಾಜಿಸ್ಟ್) – 4. ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ ಹುದ್ದೆಗೆ ಸಂಬಂಧಿಸಿದಂತೆ ಎಂಬಿಬಿಎಸ್, ಜನರಲ್ ಮೆಡಿಸಿನ್‌ನಲ್ಲಿ ಎಂಡಿ/ ಡಿಎನ್‌ಬಿ, ಜನರಲ್ ಸರ್ಜರಿಯಲ್ಲಿ ಎಂಎಸ್/ಡಿಎನ್‌ಬಿ, ಅನಸ್ತೇಶಿಯ ಹಾಗೂ ರೇಡಿಯೋಲಾಜಿಯಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕಿರುವುದು ಕಡ್ಡಾಯವಾಗಿದೆ. ಎನ್‌ಟಿಪಿಸಿ ನಿಯಮಾನುಸಾರ ಅಭ್ಯರ್ಥಿಯ ಗರಿಷ್ಠ ವಯೋಮಿತಿ 37…
ಅಯೋಧ್ಯೆಯಲ್ಲಿ ರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಜನವರಿ 22 ರಂದು ರಾಮಲಲ್ಲಾ ಪ್ರತಿಷ್ಠಾಪನೆ ನಡೆಯಲಿದೆ. ಈ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಅಲ್ಲಿ ಹಾಜರಿರುತ್ತಾರೆ. ದೇಶಾದ್ಯಂತ ದೊಡ್ಡ ವ್ಯಕ್ತಿಗಳು ಮತ್ತು ಸಂತರು ಸಹ ಅಯೋಧ್ಯೆಗೆ ತೆರಳಲಿದ್ದಾರೆ. ಏತನ್ಮಧ್ಯೆ ರಾಮನ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಇತ್ತೀಚೆಗೆ ವರದಿಯಾದ ಸುದ್ದಿಯೊಂದರಲ್ಲಿ, ಕೆಲವರು ಸಾಮಾಜಿಕ ಮಾಧ್ಯಮದಲ್ಲಿ QR ಕೋಡ್‌ಗಳನ್ನು ಹೇಗೆ ಹಂಚಿಕೊಳ್ಳುತ್ತಿದ್ದಾರೆಂದು ತಿಳಿಸಲಾಗಿತ್ತು. QR ಅನ್ನು ಹಂಚಿಕೊಳ್ಳುವುದರ ಜೊತೆಗೆ, ಅವರು ರಾಮ ಮಂದಿರಕ್ಕಾಗಿ ದೇಣಿಗೆ ಕೇಳುತ್ತಿದ್ದರು. ರಾಮನ ದೇವಾಲಯದ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಕೇಳುತ್ತಿದ್ದರು. ಆದರೆ ಇದಕ್ಕೆ ವಿಶ್ವ ಹಿಂದೂ ಪರಿಷತ್ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಮತ್ತೊಮ್ಮೆ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ. ಈ ಹಗರಣದ ಅಡಿಯಲ್ಲಿ, ವಾಟ್ಸಪ್ಪ್ ನಲ್ಲಿ ಜನರಿಗೆ ಸಂದೇಶವನ್ನು ಕಳುಹಿಸಲಾಗುತ್ತಿದೆ. ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ವಿಐಪಿ ಎಂಟ್ರಿ ಕೊಡಲಾಗುತ್ತಿದೆ ಎಂದು ಜನರಿಗೆ ಈ ಸಂದೇಶ ರವಾನೆಯಾಗುತ್ತಿದೆ. ಈ ಸಂದೇಶದಲ್ಲಿ ಮೊಬೈಲ್ ಅಪ್ಲಿಕೇಶನ್‌ಗೆ ಲಿಂಕ್ ಅನ್ನು ಸಹ ಕಳುಹಿಸಲಾಗುತ್ತಿದೆ. ವಾಸ್ತವವಾಗಿ ಇದರಿಂದ…
ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ 2023-24ನೇ ಸಾಲಿನ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಮತ್ತು ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕುರಿತು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುವುದರ ಜತೆಗೆ ಬಡ್ತಿ ಪ್ರಕ್ರಿಯೆ ಚಾಲನೆ ನೀಡುವಂತೆ ಶಾಲಾ ಶಿಕ್ಷಣ ಸೂಚನೆ ನೀಡಿದೆ. ಬಡ್ತಿ ಪ್ರಕ್ರಿಯೆ ಕೌನ್ಸೆಲಿಂಗ್ ಕೈಗೊಳ್ಳುವಾಗ ಕೆಲವು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸೂಚಿಸಿದೆಯಾಗಿದೆ. ಜತೆಗೆ ಮುಖ್ಯ ಶಿಕ್ಷಕರು ಮತ್ತು ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ಪೂರಕವಾದ ವೇಳಾಪಟ್ಟಿಯನ್ನು ರೂಪಿಸಿದೆ. ಜನವರಿ 12ರಂದು ಬಡ್ತಿಗೆ ಅರ್ಹರಿರುವ ಶಿಕ್ಷಕರ ತಾತ್ಕಾಲಿಕ ಅಂತಿಮ ಅದ್ಯತಾ ಪಟ್ಟಿ ಪ್ರಕಟಣೆ ಮಾಡಲಿದೆ. ಜನವರಿ 30ರಂದು ‘ಬಿ’ ವಲಯದಿಂದ ‘ಎ’ ವಲಯಕ್ಕೆ ಮುಖ್ಯ ಶಿಕ್ಷಕರು ಮತ್ತು ಹಿರಿಯ ಮುಖ್ಯ ಶಿಕ್ಷಕರಿಗೆ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ. ಸಂಪೂರ್ಣ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್ https://schooleducation.karnataka.gov.in ನಲ್ಲಿ ನೋಡಬಹುದಾಗಿದೆಯಾಗಿದೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22, 2024ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಪವಿತ್ರ ರಾಮಮಂದಿರಕ್ಕೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕೆಂದು ಭಕ್ತರು ಒಂದಲ್ಲಾ ರೂಪದಲ್ಲಿ ರಾಮಮಂದಿರಕ್ಕೆ ತಮ್ಮ ಕೈಲಾದಷ್ಟು ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ. ಅಯೋಧ್ಯೆಯು ರಾಮ ಮಂದಿರದ ಉದ್ಘಾಟನೆಗೆ ತಯಾರಿ ನಡೆಸುತ್ತಿದೆ. ರಾಮಮಂದಿರ ನಿರ್ಮಾಣವಾಗುತ್ತಿದ್ದಂತೆ ಈ ಪ್ರದೇಶದಲ್ಲಿರುವ ಸುತ್ತಮುತ್ತಲಿನ ಭೂಮಿ ಬೆಲೆ ಗಗನಕ್ಕೇರಿದೆ. ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮವೂ ಜಿಗಿತ ಕಂಡಿದ್ದು, ಹೋಟೆಲ್ ಉದ್ಯಮಿಗಳೂ ಇತ್ತ ಧಾವಿಸುತ್ತಿದ್ದಾರೆ. ಇದಲ್ಲದೆ ಹಿರಿಯ ನಾಗರಿಕರು ಅಯೋಧ್ಯೆಯಲ್ಲಿ ಜಾಗ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ದೇಶದ ವಿವಿಧೆಡೆಯ ಮತ್ತು ವಿದೇಶಗಳಿಂದ ಹಲವು ಹೂಡಿಕೆದಾರರು ಇಲ್ಲಿನ ಜಾಗ ಖರೀದಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದರಿಂದ ಭೂಮಿಯ ಬೆಲೆ ಗಗನಕ್ಕೇರಿದೆ. ಕೆಲವೆಡೆ ಕೇವಲ ನಾಲ್ಕರಿಂದ ಐದು ವರ್ಷಗಳಲ್ಲಿ ಹತ್ತು ಪಟ್ಟು ಬೆಲೆ ಹೆಚ್ಚಾಗಿದೆ. ರಿಯಲ್ ಎಸ್ಟೇಟ್‌ನ ಈ ಚೇತರಿಕೆ ದೇಶಾದ್ಯಂತದ ಹೂಡಿಕೆದಾರರನ್ನು ಆಕರ್ಷಿಸಿದೆ. ಅನಿವಾಸಿ ಭಾರತೀಯರು ಮಾತ್ರವಲ್ಲಿ ದೇಶದ ಹಿರಿಯ ನಾಗರಿಕರು…
ಕಳೆದ ವರ್ಷ ಬಾಡಿಗೆ ತಾಯ್ತನದ ಕಾನೂನಿನಲ್ಲಿ ದಾನಿಗಳ ಗ್ಯಾಮೆಟ್ಸ್- ಅಂದರೆ ಅಂಡಾಣು ಅಥವಾ ಮೊಟ್ಟೆಯ ಜೀವಕೋಶಗಳು ಮತ್ತು ವೀರ್ಯಾಣುಗಳ ಬಳಕೆಯನ್ನು ನಿಷೇಧಿಸಿದ ತಿದ್ದುಪಡಿಯನ್ನು ಮರುಪರಿಶೀಲಿಸಲಾಗುತ್ತಿರುವ ಕುರಿತು ಕೇಂದ್ರವು ಇತ್ತೀಚಿಗೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದು, ಈ ವಿಚಾರವಾಗಿ ಶೀಘ್ರದಲ್ಲೇ ನಿರ್ಧಾರವನ್ನು ಕೈಗೊಳ್ಳುವುದಾಗಿ ವರದಿಗಳು ತಿಳಿಸಿವೆಯಾಗಿದೆ. ಪೀಠದ ಮುಂದೆ ಹಾಜರಾದ ಹೆಚ್ಚುವರಿ ಎಸ್‌ಜಿ ಐಶ್ವರ್ಯ ಭಾಟಿ, ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಕೇಂದ್ರ ಸರ್ಕಾರವು ದಾನಿಗಳಿಂದ ಗ್ಯಾಮೆಟ್‌ಗಳನ್ನು ಸ್ವೀಕರಿಸಲು ಅರ್ಹ ದಂಪತಿಗಳಿಗೆ ಅವಕಾಶ ನೀಡುವತ್ತ ಕಾಯ್ಗೆಗೆ ತಿದ್ದುಪಡಿ ತರಲಿದೆ ಎಂದು ಹೇಳಿದ್ದಾರೆ. ಇದು ವೈದ್ಯಕೀಯ ಕಾರಣದಿಂದ ಅಂಡೋತ್ಪತ್ತಿ ಮಾಡಲು ಸಾಧ್ಯವಾಗದ ದಂಪತಿಗೆ ಬಾಡಿಗೆ ತಾಯ್ತನ ಪ್ರಕ್ರಿಯೆಯನ್ನು ಹೆಚ್ಚು ಸುಲಭಗೊಳಿಸುತ್ತದೆ ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆಯಾಗಿದೆ.
ಕೇಂದ್ರದಿಂದ ರೈತರಿಗೆ ಭರ್ಜರಿ ಶುಭ ಸುದ್ದಿ ಸಿಕ್ಕಿದೆ. ರಾಜ್ಯದ ಈ 8 ಜಿಲ್ಲೆಗಳ ರೈತರಿಗೆ ಖುಷಿಯ ಸುದ್ದಿ ಹೊರಬಿದ್ದಿದೆ. ಕೇಂದ್ರ ಸರಕಾರವು ರಾಜ್ಯದ 8 ಜಿಲ್ಲೆಗಳಿಂದ ಗರಿಷ್ಠ ಬೆಂಬಲ ಬೆಲೆ ನೀಡಿ ಕೊಬ್ಬರಿ ಖರೀದಿಗೆ ಮುಂದಾಗಿದೆ. ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಕೊಬ್ಬರಿ ಖರೀದಿಗೆ ಸರಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಸಹಕಾರ ಇಲಾಖೆಯು ಕೂಡಲೇ ರೈತರು ಬೆಂಬಲ ಪಡೆಯಲು ನೋಂದಣಿ ಮಾಡಿಕೊಳ್ಳಲು 8 ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಇದರಂತೆ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳ ರೈತರಿಂದ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಕೇಂದ್ರ ಸರಕಾರವು ಪ್ರತೀ ಕ್ವಿಂಟಾಲ್ ಕೊಬ್ಬರಿಗೆ 12 ಸಾವಿರ ರೂಪಾಯಿ ಬೆಂಬಲ ಬೆಲೆಯೊಂದಿಗೆ ರೈತರಿಂದ ಕೊಬ್ಬರಿ ಖರೀದಿ ಮಾಡಲಿದೆಯಾಗಿದೆ. ಪ್ರತಿ ಎಕರೆಗೆ 6 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಕೊಬ್ಬರಿಯನ್ನು ಕೇಂದ್ರ ಖರೀದಿ ಮಾಡಲಿದೆ. ಈ ಹೆಸರನ್ನು…
ಮಂಗಳೂರು : ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳಗಳ ಬಯಲಾಟದ ಸಂದರ್ಭದಲ್ಲಿ ಶಬ್ದಮಾಲಿನ್ಯ ನಿಯಮಾವಳಿ, ರಾಜ್ಯ ಹೈಕೋರ್ಟ್ ಆದೇಶದ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಎಲ್ಲಾ ನಿಯಮಗಳ ಅನುಸರಣೆಯು ದೇವಸ್ಥಾನ ಆಡಳಿತ ಮಂಡಳಿಯ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಯವರ 15-11-2022ರ ಆದೇಶದಲ್ಲಿ ಯಕ್ಷಗಾನವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ 10 ಗಂಟೆಯಿಂದ ರಾತ್ರಿ 12.30ರವರೆಗೆ ವಿಸ್ತರಿಸಲಾಗಿತ್ತು. ಆದರೆ ಈ ಅದೇಶವನ್ನು ಪ್ರಶ್ನಿಸಿ ಕೃಷ್ಣಕುಮಾರ್ ಎಂಬವರು ಹೈಕೋರ್ಟ್ ಮೊರೆಹೋಗಿದ್ದರು. ಆ ಕುರಿತ ಹೈಕೋರ್ಟ್ ನ 28-11-2023 ಆದೇಶದಲ್ಲಿ ಯಕ್ಷಗಾನ ಮೇಳದ ಪ್ರದರ್ಶನ ಅವಧಿ ಬಗ್ಗೆ ಅರ್ಜಿದಾರರು ಸೂಕ್ತ ಪ್ರಸ್ತಾವನೆ ವಹಿಸಿ ಜಿಲ್ಲಾಧಿಕಾರಿ ಅಗತ್ಯ ಕ್ರಮ ವಹಿಸಬೇಕು ಎಂದು ಆದೇಶಿಸಿದ್ದರೂ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಅಲ್ಲದೆ ಕೋವಿಡ್ 19ರ ನಿರ್ದಿಷ್ಟ ನಿಬಂಧನೆ ಅಥವಾ ಕೋವಿಡ್ 19ರ ಪೂರ್ವ ಪದ್ಧತಿ ಯಾವುದು ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದೂ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ. ಇದೇ ಜನವರಿ…