Subscribe to Updates
Get the latest creative news from FooBar about art, design and business.
Author: KNN IT Team
ಸಂಪ್ರದಾಯಗಳು ಮತ್ತು ನಂಬಿಕೆಗಳು ಸನಾತನ ಹಿಂದೂ ಧರ್ಮದೊಂದಿಗೆ ಸಂಬಂಧವನ್ನು ಬೆಸೆದುಕೊಂಡಿದೆ. ಧರ್ಮಗ್ರಂಥಗಳು, ವೇದಗಳು ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾದ ಕೆಲವು ನಂಬಿಕೆಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅನೇಕ ನಂಬಿಕೆಗಳ ಪ್ರಕಾರ, ಹಾವುಗಳು ಗರ್ಭಿಣಿ ಮಹಿಳೆಯನ್ನು ಕಚ್ಚುವುದಿಲ್ಲ ಎಂದು ಹೇಳಲಾಗುತ್ತದೆ. ಈ ವಿಚಾರ ಕೇಳಿದಾಗ ನಿಮಗೆ ಅಚ್ಚರಿ ಎನಿಸಬಹುದು. ಅಷ್ಟೆ ಅಲ್ಲದೇ, ಗರ್ಭಿಣಿಯನ್ನು ನೋಡಿದ ನಂತರ ಹಾವು ಕುರುಡಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಓರ್ವ ಮಹಿಳೆ ಗರ್ಭಧರಿಸುತ್ತಿದ್ದಂತೆ ಆಕೆಯ ಬಳಿ ಹಾವುಗಳು ಸುಳಿಯುವುದಿಲ್ಲ ಎನ್ನಲಾಗುತ್ತದೆ. ಆದರೆ, ಇದರ ಹಿಂದಿನ ಕಾರಣವನ್ನು ನಾವು ಬ್ರಹ್ಮವೈವರ್ತ ಪುರಾಣದಲ್ಲಿ ನೋಡಬಹುದು. ಪ್ರಕೃತಿಯು ಹಾವಿಗೆ ಕೆಲವು ವಿಶೇಷ ಇಂದ್ರಿಯಗಳನ್ನು ನೀಡಿದ್ದು, ಇದರಿಂದ ಮಹಿಳೆ ಗರ್ಭಿಣಿಯಾಗಿದ್ದಾಳೆ ಈ ಎಂಬ ವಿಚಾರವನ್ನು ಸುಲಭವಾಗಿ ಅವುಗಳಿಗೆ ತಿಳಿಯುತ್ತದಂತೆ. ಗರ್ಭಾವಸ್ಥೆಯ ನಂತರ ಸ್ತ್ರೀ ದೇಹದಲ್ಲಿ ಕೆಲವು ಅಂಶಗಳು ಉತ್ಪತ್ತಿಯಾಗುವುದನ್ನು ಹಾವುಗಳು ಸುಲಭವಾಗಿ ಗ್ರಹಿಸುತ್ತದೆ. ಗರ್ಭಿಣಿಯನ್ನು ಕಚ್ಚದೇ ಇರುವುದರ ಹಿಂದೆ ಧಾರ್ಮಿಕ ನಂಬಿಕೆ ಮಾತ್ರವಲ್ಲದೆ ವೈಜ್ಞಾನಿಕ ಕಾರಣ ಕೂಡ ಇದೆ ಎನ್ನಲಾಗುತ್ತದೆ. ಗರ್ಭಧಾರಣೆಯ ಬಳಿಕ ಮಹಿಳೆಯ…
ರೈತರ ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಮಹತ್ವದ ಘೋಷಣೆ ಮಾಡಲಿದೆ. ವರದಿಗಳ ಪ್ರಕಾರ, ಇದು ನಡೆದರೆ ರೈತರಿಗೆ ಭಾರಿ ಪರಿಹಾರ ಸಿಗಲಿದೆ ಎನ್ನಬಹುದು. ಸಾಲದ ಹೊರೆ ಕಡಿಮೆಯಾಗಲಿದೆ. ತೆಲಂಗಾಣದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರೈತರ ಸಾಲ ಮನ್ನಾ ಮಾಡುವುದಾಗಿ ಚುನಾವಣಾ ಭರವಸೆಯ ಭಾಗವಾಗಿ ಕಾಂಗ್ರೆಸ್ ಘೋಷಿಸಿದೆ. ವರದಿಗಳ ಪ್ರಕಾರ, ರೇವಂತ್ ರೆಡ್ಡಿ ಸರ್ಕಾರ ಈಗ ರೈತ ಸಾಲ ಮನ್ನಾ ವಿಷಯದ ಬಗ್ಗೆ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೀಡಿದ್ದ ಭರವಸೆಗಳನ್ನು ಅನುಷ್ಠಾನಗೊಳಿಸುವತ್ತ ಗಮನ ಹರಿಸಿದೆ. ಇದು ರೈತರ ಸಾಲ ಮನ್ನಾ ಅಂಶವನ್ನೂ ಒಳಗೊಂಡಿದೆ. ಅದೇ ಸಮಯದಲ್ಲಿ ಅನ್ನದಾತರ ಸಾಲ ಮನ್ನಾ ಮಾಡಲು ಸರ್ಕಾರ ಉದ್ದೇಶಿಸಿದೆಯಂತೆ. ಅದರ ಭಾಗವಾಗಿ, ನಾವು ಹೊಸ ಕ್ರಿಯಾತ್ಮಕತೆಯೊಂದಿಗೆ ಮುಂದುವರಿಯಲು ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ರೈತರ ಸಾಲ ಮನ್ನಾಕ್ಕೆ ವಿಶೇಷ ನಿಗಮ ಸ್ಥಾಪನೆಗೆ ರೇವಂತ್ ರೆಡ್ಡಿ ಸರ್ಕಾರ ಮುಂದಾಗಿದೆಯಂತೆ. ಆದರೆ, ಈ ವಿಚಾರವಾಗಿ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ವರದಿಗಳು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದ ಉಳ್ಳಾಲ ಠಾಣಾ ವ್ಯಾಪ್ತಿಯ ಬಗಂಬಿಲದಲ್ಲಿ 2019 ರಲ್ಲಿ ಯುವತಿಯೊಬ್ಬಳಿಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಕುರಿತಂತೆ ನ್ಯಾಯಾಲಯವು ಶುಕ್ರವಾರ ತೀರ್ಪು ಪ್ರಕಟಿಸಿದೆ. ಮಂಗಳೂರು ನ್ಯಾಯಾಲಯವು ಯುವಕ ಸುಶಾಂತ್ ಯಾನೆ ಶಾನ್ (31) ಒಟ್ಟು 18 ವರ್ಷ 1 ತಿಂಗಳು ಸಜೆ ವಿಧಿಸಿ ಆದೇಶ ನೀಡಿದೆಯಾಗಿದೆ. ಐಪಿಸಿ ಸೆಕ್ಷನ್ 341 ಶಿಕ್ಷಾರ್ಹ ಕಲಂಗೆ 1 ತಿಂಗಳು ಸಜೆ. 326 ಶಿಕ್ಷಾರ್ಹ ಕಲಂಗೆ 7 ವರ್ಷ ಕಠಿಣ ಸಜೆ, 1 ಲಕ್ಷ ರೂ. ದಂಡ. ದಂಡ ಪಾವತಿಗೆ ವಿಫಲನಾದರೆ 1 ವರ್ಷ ಕಠಿಣ ಸಜೆ. 307 ರ ಶಿಕ್ಷಾರ್ಹ ಕಲಂ ಗೆ 10 ವರ್ಷದ ಕಠಿಣ ಸಜೆ ಮತ್ತು 1 ಲಕ್ಷ ರೂ. ದಂಡ. ದಂಡ ಪಾವತಿಸಲು ತಪ್ಪಿದ್ದಲ್ಲಿ 1 ವರ್ಷ ಕಠಿಣ ಸಜೆ. 354 ರ ಶಿಕ್ಷಾರ್ಜ ಕಲಂಗೆ 1 ವರ್ಷದ ಕಠಿಣ ಸಜೆ ಮತ್ತು…
ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಹಲವು ಗಡುವುಗಳನ್ನು ಈಗಾಗಲೇ ನೀಡಿತ್ತು. ಫೆಬ್ರವರಿ 17 ಕೊನೆಯ ದಿನವಾಗಿದೆ. ನಕಲಿ ನಂಬರ್ ಪ್ಲೇಟ್, ವಾಹನಗಳನ್ನು ಕಾನೂನು ಬಾಹಿರ ಚಟುವಟಿಕೆಗೆ ಬಳಕೆ ಮಾಡುವುದನ್ನು ತಪ್ಪಿಸಲು ಹಾಗೂ ವಾಹನಗಳನ್ನು ಟ್ರಾಕ್ ಮಾಡಲು ಹೀಗೆ ಹಲವು ಕಾರಣಗಳಿಂದ HSRP ಅಗತ್ಯವಾಗಿದೆ. ಇದೀಗ ಈ ಪ್ಲೇಟ್ ಪಡೆಯಲು ಸರಕಾರ ಮಾರ್ಗಸೂಚಿ ಹೊರಡಿಸಿದೆ. 2019ರ ಎಪ್ರಿಲ್‌ಗೂ ಮೊದಲು ರಿಜಿಸ್ಟ್ರೇಶನ್ ಆಗಿರುವ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ. 2019ರ ಎಪ್ರಿಲ್ ಬಳಿಕ ರಿಜಿಸ್ಟ್ರೇಶನ್ ಆಗಿರುವ ವಾಹನಗಳಿಗೆ ಹಾಕಲಾಗಿರುವ ನಂಬರ್ ಪ್ಲೇಟ್ HSRP ಆಗಿದೆ. ಹೀಗಾಗಿ ಯಾರ ವಾಹನ ಎಪ್ರಿಲ್ 2019ರ ಮೊದಲ ರಿಜಿಸ್ಟ್ರೇಶನ್ ಆಗಿದೆಯೋ ಆ ವಾಹನಗಳ ಮಾಲೀಕರು HSRP ನಂಬರ್ ಪ್ಲೇಟ್ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ವರದಿಯಾಗಿದೆ. HSRP ಎಂದರೆ, ಇದೊಂದು ವಾಹನಗಳ ನೋಂದಣಿ ನಂಬರ್ ಪ್ಲೇಟ್, ಅಲ್ಯೂಮಿನಿಯಂನಿಂದ ತಯಾರಿ ಮಾಡಲಾಗುತ್ತದೆ. ಲೇಸರ್ ಕೋಡ್ ಇದರಲ್ಲಿ ಇರಲಿದ್ದು, ಸ್ಕ್ಯಾನ್ ಮಾಡಿದಾಗ ವಾಹನದ ಕುರಿತ…
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಸಹಾಯಕ ಇಂಜಿನಿಯರ್ (ಅಗ್ನಿಶಾಮಕ), ಸಹಾಯಕ ಕಾರ್ಯನಿರ್ವಾಹಕ (ಕಾರ್ಯದರ್ಶಿ) ಮತ್ತು ವ್ಯವಸ್ಥಾಪಕ (ಸುರಕ್ಷತೆ) ಹುದ್ದೆಗಳು ಖಾಲಿಯಿದ್ದು, ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸಬಹುದು. ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನಲ್ಲಿ ಒಟ್ಟು ನಾಲ್ಕು ಹುದ್ದೆಗಳು ಖಾಲಿಯಿದೆ. MRPL ನೇಮಕಾತಿ 2024 ರ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಜನವರಿ 12, 2024 ರಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಿದೆ. ಈ ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್ https://www.mrpl.co.in/careers ಭೇಟಿ ನೀಡಬಹುದು. ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಕೊನೆಯ ದಿನದ ಮೊದಲು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ, ಒಬಿಸಿ ಮತ್ತುಇ.ಡಬ್ಲ್ಯೂ.ಎಸ್ ವರ್ಗದ ಅರ್ಜಿದಾರರಿಗೆ ಅರ್ಜಿ ಶುಲ್ಕ 118 ರೂ. ಯಿದೆ. ಎಸ್‌ಸಿ, ಎಸ್‌ಟಿ, ಪಿಡಬ್ಲೂಬಿಡಿ ಮತ್ತು ಮಾಜಿ ಸೈನಿಕ ವರ್ಗಗಳಿಗೆ ಅರ್ಜಿ…
ಪುತ್ತೂರು : ಜನವರಿ 22 ರಂದು ನಡೆಯಲಿರುವ ಶ್ರೀರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಕಾಂಗ್ರೇಸ್ ನಾಯಕರು ತೆರಳದೇ ಇರಲು ನಿರ್ಧರಿಸಿರುವುದು ಮೂರ್ಖತನದ ಕೆಲಸ ಎಂದು ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಾಗ್ದಾಳಿ ನಡೆಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀರಾಮ ನಮಗೆ ಮಾತ್ರ ಅಲ್ಲ, ಇಡೀ ಜಗತ್ತಿಗೆ ಬೇಕಾದವನು, ರಾಮನ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹೋಗದವರು ರಾಮ ಪ್ರತಿಪಾದಿಸಿದ ಧರ್ಮ,ಸಂಸ್ಕೃತಿ, ಮೌಲ್ಯಗಳನ್ನು ತಿರಸ್ಕಾರ ಮಾಡಿದಂತೆ, ರಾಮಮಂದಿರ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮವಲ್ಲ, ಈ ದೇಶದ ಪ್ರಧಾನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಗೌರವದ ಸಂಗತಿ. ಪ್ರಾಣ ಪ್ರತಿಷ್ಠೆಯ ವೈದಿಕ ವಿಧಿ-ವಿಧಾನಗಳನ್ನು ವೈದಿಕರೇ ಮಾಡುತ್ತಾರೆ. ಆ ಸಂದರ್ಭದಲ್ಲಿ ಪ್ರಧಾನಿ ಉಪಸ್ಥಿತಿ ಇರುವುದು ಒಂದು ವೈಶಿಷ್ಟ್ಯ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು. ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಅನ್ನೋ ಕಾರಣಕ್ಕೆ ರಾಮನ ಪ್ರತಿಷ್ಠಾಪನೆಗೆ ಹೋಗದಿರುವುದು ಕಾಂಗ್ರೇಸ್ ಪಕ್ಷದ ಮೂರ್ಖತನ ಎಂದ ಅವರು ಈ ನಿರ್ಧಾರ ಸಮಾಜದಲ್ಲಿ ಕೆಟ್ಟ ಸಂದೇಶವನ್ನು ಸಾರಲಿದೆ. ಸುದೈವ ಅಂದರೆ ಯಾರು ಅಯೋಧ್ಯೆಗೆ ಹೋಗದಿರಲು…
ಮನೆಮಂದಿ ಅಥವಾ ಫ್ರೆಂಡ್ಸ್ ಎಲ್ಲರೂ ಹೊರಗಡೆ ಟ್ರಿಪ್ ಹೋದಾಗ ಹೋಟೆಲ್ ಅಥವಾ ಲಾಡ್ಜ್ ಗಳಲ್ಲಿ ಉಳಿಯೋದು ಸಾಮಾನ್ಯ. ಹೀಗೆ ಉಳಿಯುವಾಗ ನೀವು ಅಲ್ಲಿ ಈ ವಿಶೇಷವನ್ನೇನಾದರೂ ಗಮನಿಸಿದ್ದೀರಾ. ಏನಂದ್ರೆ ಯಾವುದೇ ಹೋಟೆಲ್ ನಲ್ಲಿ ಕೊಠಡಿ ಸಂಖ್ಯೆ 13 ಇರುವುದಿಲ್ಲ. 12 ರೂಮ್ ನಂಬರ್ ಬಳಿಕ 14 ನಂಬರ್ ಮುಂದುವರಿಯುತ್ತದೆ. ಬರೀ ರೂಮ್ ಮಾತ್ರವಲ್ಲ ಯಾವುದಾದರೂ ಒಂದು ಬಿಲ್ಡಿಂಗ್ ಕೂಡ 12 ಮಹಡಿಗಳಿಗಿಂತ ಹೆಚ್ಚು ಎತ್ತರವಾಗಿದ್ದರೆ ಅಂದರೆ 15, 20 ಅಂತಸ್ತುಗಳಷ್ಟು ಎತ್ತರ ಇದ್ದರೆ ಅದರಲ್ಲಿ 13ನೇ ಮಹಡಿ ಇರೋದೆ ಇಲ್ಲ. ನೇರವಾಗಿ 14ನೇ ಮಹಡಿ ಇರುತ್ತೆ ಇದು ನಿಮಗೆ ವಿಚಿತ್ರವಾಗಿ ತೋರಬಹುದು, ಆದರೆ ಅದು ನಿಜ. ಇದು ವಿಚಿತ್ರ ಎನಿಸಿದರೂ ಸಹ ಅದರ ಹಿಂದಿನ ಕಾರಣ ತಿಳಿದರೆ ನಿಜಕ್ಕೂ ನಮ್ಮನ್ನು ಅಚ್ಚರಿಗೆ ದೂಡುತ್ತದೆ. 13ನೇ ನಂಬರ್ ಬಳಸದೇ ಇರುವುದಕ್ಕೆ ಟ್ರೈಸ್ಕೈಡೆಕಾಫೋಬಿಯಾ ಎಂದು ಕರೆಯುತ್ತಾರೆ. ಇದರರ್ಥ 13ನೇ ನಂಬರ್ ಮೇಲಿನ ಭಯ ಎಂಬುದಾಗಿದೆ. ಅಂದರೆ, 13ನೇ ನಂಬರ್ ದುರಾದೃಷ್ಟ ಅಥವಾ ಸಾವಿನ ಸಂಖ್ಯೆ…
ಎಲ್ಲಾ ವಿದ್ಯಾರ್ಥಿಗಳು ಚಾಕಲೇಟ್ ತಿನ್ನುವುದು ಸಾಮಾನ್ಯವಾದದ್ದು. ಆದರೆ ಇಲ್ಲೊಂದು ಕಡೆ ಚಾಕಲೇಟ್ ತಿಂದ ವಿದ್ಯಾರ್ಥಿಗಳು ಚಿತ್ರವಿಚಿತ್ರವಾಗಿ ವರ್ತಿಸ ತೊಡಗಿದ ಘಟನೆಯೊಂದು ನಡೆದಿದೆ. ಈ ವಿಚಿತ್ರ ವರ್ತನೆ ಏನು ಎಂದು ಪೋಷಕರಿಗೆ ಮತ್ತು ಶಿಕ್ಷಕರಿಗೆ ತಕ್ಷಣಕ್ಕೆ ಅರ್ಥವಾಗಲಿಲ್ಲ. ಆದರೆ ಕೆಲವು ದಿನಗಳಿಂದ ವಿದ್ಯಾರ್ಥಿಗಳು ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಗಮನಿಸಿ ಕೆಲ ಶಿಕ್ಷಕರು, ಶಾಲೆಯ ಸುತ್ತಮುತ್ತ ವಿಚಾರಿಸಿದ್ದಾರೆ. ಆಗ ತಿಳಿದು ಬಂದಿದ್ದೇ ಬೆಚ್ಚಿ ಬೀಳಿಸುವ ವಿಷಯ. ಇದೀಗ ಈ ಪ್ರಕರಣಕ್ಕೆ ಪೊಲೀಸರ ಎಂಟ್ರಿ ಕೂಡಾ ಆಗಿದೆ. ಪಾನ್ ಗೂಡಂಗಡಿಗಳಲ್ಲಿ ಮಾರುತ್ತಿದ್ದ ಚಾಕಲೇಟನ್ನು ತಿಂದ ವಿದ್ಯಾರ್ಥಿಗಳು ವಿಚಿತ್ರ ವರ್ತನೆ ಮಾಡಿದ್ದರಿಂದ ರಂಗಾರೆಡ್ಡಿ ಜಿಲ್ಲೆಯ ಕೋತೂರ್ ಮಂಡಲ ಕೇಂದ್ರದ ಸರಕಾರಿ ಪ್ರೌಢಶಾಲೆಯ ಪಕ್ಕದಲ್ಲೇ ಒರಿಸ್ಸಾದ ಕೆಲವರು ಪಾನ್‌ಗಳಲ್ಲಿ ಮಾರುವ ಚಾಕಲೇಟನ್ನು ಉಚಿತವಾಗಿ ನೀಡಿದ್ದಾರಂತೆ. ಇದನ್ನು ತಿಂದು ವಿದ್ಯಾರ್ಥಿಗಳು ವಿಚಿತ್ರವಾಗಿ ವರ್ತಿಸಿದ್ದಾರೆ. ಇದನ್ನು ಶಿಕ್ಷಕರು ಗಮನಿಸಿದ್ದಾರೆ. ಶಿಕ್ಷಕರು ಅಕ್ಕಪಕ್ಕ ವಿಚಾರಿಸಿ ಇದು ಏನೆಂದು ವಿಚಾರಿಸಿದರು. ಮೊದಲಿಗೆ ಪಾನ್ ಅಂಗಡಿ ವ್ಯಾಪಾರಿಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಚಾಕಲೇಟ್ ನೀಡಿದ್ದಾರೆ. ನಂತರ ವಿದ್ಯಾರ್ಥಿಗಳು ಅದರ…
ಸ್ನಾನದ ನಂತರ, ಹೆಚ್ಚಿನ ಜನರು ಒದ್ದೆಯಾದ ಕೂದಲಿನೊಂದಿಗೆ ಸ್ನಾನಗೃಹದಿಂದ ಹೊರಬರುತ್ತಾರೆ. ಹೀಗೆ ಮಾಡುವುದರಿಂದ ಕೂದಲು ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನಾವು ಇಂದು ನಿಮಗೆ ತಲೆ ಕೂದಲು ಸ್ನಾನದ ನಂತರ ಹೇಗೆ ಹೇರ್ ಡ್ರೈಯರ್ ಇಲ್ಲದೆ ಕೂದಲು ಒಣಗಿಸುವುದು ಎಂಬುವುದರ ಬಗ್ಗೆ ತಿಳಿಸುತ್ತೇವೆ. ತಲೆ ಸ್ನಾನದ ನಂತರ ಬಾತ್ರೂಮ್ನಲ್ಲಿಯೇ ನಿಮ್ಮ ಕೂದಲಿನಿಂದ ನೀರನ್ನು ಹಿಸುಕಿ ನೀರನ್ನು ಹೊರಗೆ ಹಾಕಿ. ಇದರ ನಂತರ, ಹೊರಗೆ ಬಂದು ಅದನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ. ಒದ್ದೆಯಾದ ಕೂದಲಿನ ಮೇಲೆ ಒರಟಾದ ಹಲ್ಲಿನ ಬಾಚಣಿಗೆಯನ್ನು ಮಾತ್ರ ಬಳಸಿ. ಒದ್ದೆ ಕೂದಲು ಹೆಚ್ಚು ದುರ್ಬಲವಾಗಿರುವುದರಿಂದ, ಈ ಸಮಯದಲ್ಲಿ ಬಾಚಿಕೊಳ್ಳುವುದರಿಂದ ಕೂದಲು ಉದುರುವ ಅಪಾಯ ಹೆಚ್ಚಾಗುತ್ತದೆ. ಶಾಂಪೂ ಹಾಕಿ ಕೂದಲನ್ನು ತೊಳೆದ ನಂತರ ನಿಮ್ಮ ಕೂದಲನ್ನು ಹಾಗೆ ಬಿಡುವ ಬದಲು ದೊಡ್ಡ ಹಲ್ಲಿರುವ ಬಾಚಣಿಗೆಯಿಂದ ನಿಮ್ಮ ಕೂದಲನ್ನು ಬಾಚಿಕೊಳ್ಳಿ. ಇದು ಕೂದಲಿನಿಂದ ಹೆಚ್ಚುವರಿ ನೀರನ್ನು ತೆಗೆದುಹಾಕುತ್ತದೆ ಮತ್ತು ಕೂದಲು ಬೇಗನೆ ಒಣಗುತ್ತದೆ. ಶಾಂಪೂ ನಂತರ ನಿಮ್ಮ ಕೂದಲಿಗೆ ಕಂಡಿಷನರ್…
ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ದಿನಗಣನೆ ಆರಂಭಗೊಂಡಿದ್ದು, ಭಗವಂತನ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದರ ಬೆನ್ನಲ್ಲೇ ವಾರಣಾಸಿಯ ಎಲ್ಲಾ 84 ಗಂಗಾ ಘಾಟ್‌ಗಳಲ್ಲಿ ಭಕ್ತರು ಮತ್ತು ಪ್ರವಾಸಿಗರಿಗೆ ಉಚಿತ ಸವಾರಿ ನೀಡಲು ಇದೀಗ ದೋಣಿ ಸವಾರರು ನಿರ್ಧರಿಸಿದ್ದಾರೆ. ಇದರ ಬಗ್ಗೆ ಮಾತನಾಡಿದ ಮಾ ಗಂಗಾ ನಿಷಾದ್ ರಾಜ್ ಸೇವಾ ಟ್ರಸ್ಟ್‌ನ ಕಾರ್ಯದರ್ಶಿಯಾದ ಶಂಭು ಸಾಹ್ನಿ, “ಪ್ರಮುಖವಾಗಿ ದೋಣಿ ನಡೆಸುವವರನ್ನು ಒಳಗೊಂಡಿರುವ ನಿಶಾದ್ ಸಮುದಾಯವು ಶ್ರೀರಾಮನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಕಾಡಿಗೆ ಹೋಗುವಾಗ ಭಗವಂತ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ಮಾತೆ ಬಳಿ ಏನನ್ನು ಸ್ವೀಕರಿಸದೆ ತನ್ನ ದೋಣಿಯಲ್ಲಿ ನದಿಯನ್ನು ದಾಟಲು ಸಹಾಯ ಮಾಡುತ್ತಾರೆ” ಎಂದರು. “ಈ ಸಂಪ್ರದಾಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ಬನಾರಸ್‌ನ ಎಲ್ಲಾ 84 ಘಾಟ್‌ಗಳಲ್ಲಿ ಗಂಗಾನದಿಯ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗುವ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಉಚಿತ ದೋಣಿ ಸೇವೆಯನ್ನು…