Subscribe to Updates
Get the latest creative news from FooBar about art, design and business.
Author: KNN IT Team
ಅಡುಗೆ ಮಾಡಲು ಬಳಸುವ ನಮ್ಮ ದೈನಂದಿನ ದಿನಚರಿಯ ಭಾಗವಾಗಿರುವ ಗ್ಯಾಸ್ ಸಿಲಿಂಡರ್ ಎಲ್ಲ ಗೃಹಿಣಿಯ ನೆಚ್ಚಿನ ಸಂಗಾತಿ ಎಂದರೆ ತಪ್ಪಾಗದು. ಅತಿ ಶೀಘ್ರದಲ್ಲಿ ಕೆಲಸ ಕಾರ್ಯಗಳನ್ನು ಪೂರೈಸಲು ಗ್ಯಾಸ್ ಸಿಲಿಂಡರ್ ಉಪಕಾರಿಯಾಗಿದೆ. ನೀವೆಲ್ಲಾ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಕೆಂಪು ಬಣ್ಣದಲ್ಲಿರುವುದನ್ನು ಗಮನಿಸಿರಬಹುದು. ಕೆಂಪು ಬಣ್ಣ ಎಂದರೆ ಅಪಾಯದ ಸಂಕೇತ ಎನ್ನಲಾಗುತ್ತದೆ. ಗ್ಯಾಸ್ ಸಿಲಿಂಡರ್ ಅಪಾಯಕಾರಿಯಾಗಿದ್ದು, ಎಲ್‌ಪಿಜಿ ಸಿಲಿಂಡರ್‌ನಲ್ಲಿ ದಹಿಸುವ ಗ್ಯಾಸ್ ಇರುತ್ತದೆ. ಇದನ್ನು ಗಮನದಲ್ಲಿರಿಸಿ ಕಂಪನಿಯು ಸಿಲಿಂಡರ್‌ಗೆ ಕೆಂಪು ಬಣ್ಣವನ್ನು ನೀಡುತ್ತದೆ. ಅಷ್ಟೆ ಅಲ್ಲದೇ, ಕೆಂಪು ಬಣ್ಣವನ್ನು ಎಚ್ಚರಿಕೆಯ ಸಂಕೇತವಾಗಿ ಬಳಸಲಾಗುತ್ತದೆ. ಗ್ರಾಹಕರ ಸುರಕ್ಷತೆಗಾಗಿ ಗ್ಯಾಸ್ ಸಿಲಿಂಡರ್‌ಗಳಿಗೆ ಕೆಂಪು ಬಣ್ಣ ಬಳಿಯಲಾಗುತ್ತದೆ. ದೂರದಿಂದ ನೋಡಿದಾಗ ಕೆಂಪು ಬಣ್ಣವನ್ನು ಗುರುತಿಸುವುದು ಸುಲಭವಾಗಿದ್ದು, ಸಿಲಿಂಡರ್‌ಗೆ ಕೆಂಪು ಬಣ್ಣ ಬಳಿಯಲು ಇದು ಕೂಡ ಕಾರಣವಾಗಿರಬಹುದು. ಅದೇ ರೀತಿ, ಗ್ಯಾಸ್ ಸಿಲಿಂಡರ್ ಏಕೆ ದುಂಡಗಗಿರುತ್ತದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಗ್ಯಾಸ್ ಮೇಲೆ ಒತ್ತಡ ಸೃಷ್ಟಿಯಾಗಿರುವುದರಿಂದ ಸಿಲಿಂಡರ್ ದುಂಡಗೆ ತಿರುಚಲು ಪ್ರಮುಖ ಕಾರಣವಾಗಿದೆ. ದುಂಡಗಿನ ಆಕಾರವು ಸಿಲಿಂಡರ್ನಲ್ಲಿ…
ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲರೂ ಒಂದಲ್ಲ ಒಂದು ರೀತಿಯ ಹರಸಾಹಸ ಪಡುವುದು ಸಹಜವಾದುದು. ಚಳಿಗಾಲ ಶುರುವಾಗಿದ್ದು, ಬದಲಾಗುತ್ತಿರುವ ಹವಾಮಾನದಲ್ಲಿ ಅನೇಕ ಜನರು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ನೀವು ಮನೆಯ ಸುತ್ತ ಮುತ್ತ ಸಿಗುವ ಕೆಲವೊಂದು ವಸ್ತುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮು ಕಂಡುಬಂದರೆ ತುಳಸಿ ನೀರನ್ನು ಕುಡಿಯಬಹುದು.ಇದು ಬದಲಾಗುತ್ತಿರುವ ಹವಾಮಾನದಿಂದ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ತುಳಸಿಯ ನೀರನ್ನು ಸೇವಿಸಿದರೆ ಮೊಣಕಾಲು ನೋವಿನಿಂದ ಪರಿಹಾರ ಕಂಡುಕೊಳ್ಳಬಹುದು. ಅಷ್ಟೆ ಅಲ್ಲದೇ, ಒತ್ತಡವನ್ನು ಕಡಿಮೆ ಮಾಡಲು ತುಳಸಿ ನೀರನ್ನು ಕುಡಿಯಬಹುದು. ಅಸಿಡಿಟಿಯ ಸಮಸ್ಯೆ ಇಲ್ಲವೇ ಹೊಟ್ಟೆ ಸಂಬಂಧಿ ಸಮಸ್ಯೆಗಳಿದ್ದರೆ, ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿದು ಪರಿಹಾರ ಪಡೆಯಬಹುದು. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ತುಳಸಿ ನೀರು ಉಪಕಾರಿಯಾಗಿದೆ. ಮುಖದ ಮೇಲಿನ ಕಲೆಗಳು ಮತ್ತು ಮೊಡವೆಗಳನ್ನು ತೆಗೆದುಹಾಕುವಲ್ಲಿ ತುಳಸಿ ನೀರು ಹೆಚ್ಚು ಪ್ರಯೋಜನಕಾರಿಯಾಗಿದೆ. ಪ್ರತಿದಿನ ತುಳಸಿ ನೀರನ್ನು ಕುಡಿಯುತ್ತ ಬಂದರೆ ರಕ್ತದಲ್ಲಿನ ಸಕ್ಕರೆ…
ಬೆಳಗಾವಿ : ಕರ್ನಾಟಕದ ಜನರಲ್ಲಿ ನಮ್ಮ ಸರಕಾರ ಎನ್ನುವ ಭಾವನೆ ಮೂಡಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುದ್ರೆಮನೆ ಗ್ರಾಮಸ್ಥರು ಏರ್ಪಡಿಸಿದ್ದ ಸಮ್ಮಾನ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಸಚಿವೆ, ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಮನೆಯನ್ನೂ ತಲುಪಿವೆ. ಚುನಾವಣೆ ಪೂರ್ವ ಘೋಷಿಸಿದ್ದಂತೆ 5 ಗ್ಯಾರಂಟಿ ಯೋಜನೆಗಳನ್ನೂ ಜಾರಿಗೊಳಿಸಲಾಗಿದೆ. ಇವುಗಳಲ್ಲಿ ಒಂದಿಲ್ಲೊಂದು ಯೋಜನೆಗಳು ಎಲ್ಲರ ಮನೆಗಳನ್ನೂ ತಲುಪಿವೆ. ವಿದ್ಯುತ್ ಬಿಲ್ ತುಂಬುವುದು ತಪ್ಪಿದೆ, ಮಹಿಳೆಯರು ಬಸ್ ಟಿಕೆಟ್ ಪಡೆಯುವುದು ನಿಂತಿದೆ. ಗೃಹ ಲಕ್ಷ್ಮೀ ಮೂಲಕ 2 ಸಾವಿರ ರೂ. ಬರುತ್ತಿದೆ. ಪಡಿತರ ಮತ್ತು ಅದರ ಹಣ ಖಾತೆಗೆ ಜಮಾ ಆಗುತ್ತಿದೆ. ಈಗ ಯುವ ನಿಧಿ ಯೋಜನೆ ಜಾರಿಗೊಂಡಿದೆ ಎಂದರು. ಈ ಎಲ್ಲ ಯೋಜನೆಗಳಿಂದ ಪ್ರಸ್ತುತ ಬರಗಾಲವನ್ನು ಎದುರಿಸುವ ಶಕ್ತಿ ಜನರಿಗೆ ಬಂದಿದೆ ಎಂದು ಸಚಿವೆ ಹೇಳಿದರಾಗಿದೆ.
ಕರಾವಳಿಯ ಸಾಂಪ್ರದಾಯಿಕ ಆಚರಣೆ, ಆಟವಾದ ಕೋಳಿ ಅಂಕವನ್ನು ನಡೆಸಲು ಅನುಮತಿ ನೀಡಬೇಕೆಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ರವರು ಧ್ವನಿ ಎತ್ತಿ ಈ ಬಗ್ಗೆ ಆಗ್ರಹಿಸಿದ್ದರು. ಕೊನೆಗೂ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೋಳಿ ಅಂಕ ನಡೆಸಲು ಅನುಮತಿ ದೊರೆತಿದೆ. ಆದರೆ ಎಲ್ಲಾ ಷರತ್ತುಗಳನ್ನು ತಪ್ಪದೇ ಪಾಲಸುವಂತೆ ಹೇಳಿದೆ. ಮಂಗಳೂರಿನಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆದಿದ್ದು, ಇದರಲ್ಲಿ ಭಾಗವಹಿಸಿದ್ದ ಶಾಸಕ ಹರೀಶ್ ಪೂಂಜಾ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವ – ದೇವಸ್ಥಾನಗಳಲ್ಲಿ ನೇಮ, ಕೋಲ ಉತ್ಸವಗಳ ಸಲುವಾಗಿ ಕೋಳಿ ಅಂಕ ನಡೆಯುತ್ತದೆ. ಕೋಳಿ ಅಂಕಗಳಿಗೆ ಪೊಲೀಸರು ದಾಳಿ ಮಾಡುವ ಪ್ರಕರಣಗಳು ನಡೆಯುತ್ತಿದ್ದು, ನಿಯಮಾನುಸಾರ ನಡೆಯುವ ಕೋಳಿ ಅಂಕಗಳೂ ನಿಂತಹೋಗಿವೆ. ಹೀಗಾಗಿ ಜಿಲ್ಲೆಯಲ್ಲಿ ದೈವಸ್ಥಾನ ದೇವಸ್ಥಾನಗಳಲ್ಲಿ ನೇಮ, ಕೋಲ ಉತ್ಸವಗಳ ನಂತರ ನಡೆಯುವ ಕೋಳಿ ಅಂಕಕ್ಕೆ ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿದ್ದರು. ಶಾಸಕರ ಆಗ್ರಕ್ಕೆ ದ.ಕ ಪೋಲೀಸ್ ವರಿಷ್ಠಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿ ಕೋಳಿ…
ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ ಯೂಟ್ಯೂಬರ್ ಒಬ್ಬರಿಗೆ ಮದ್ರಾಸ್ ಹೈಕೋರ್ಟ್ 50 ಲಕ್ಷ ರೂ. ದಂಡ ವಿಧಿಸಿದೆ. ಯೂಟ್ಯೂಬರ್ ಜಿಯೋ ಮೈಕಲ್ ಎಂಬಾತ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಕಾರ್ಯಕರ್ತೆಯೂ ಆಗಿರುವ ಲಿಂಗತ್ವ ಅಲ್ಪಸಂಖ್ಯಾತರಾದ ಅಪ್ಸರಾ ರೆಡ್ಡಿ ವಿರುದ್ಧ ಆಕ್ಷೇಪಾರ್ಹ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್ ನೇತೃತ್ವದ ಏಕ ಸದಸ್ಯ ಪೀಠ ದಂಡ ವಿಧಿಸಿ ತೀರ್ಪು ನೀಡಿದೆ. ಅಪ್ಸರಾ ರೆಡ್ಡಿ ಅವರು ಸೆಲೆಬ್ರಿಟಿ ಭಾಷಣಕಾರರು, ಪತ್ರಕರ್ತೆ ಹಾಗೂ ಎಐಎಡಿಎಂಕೆ ವಕ್ತಾರರು ಆಗಿದ್ದಾರೆ. ಯೂಟ್ಯೂಬರ್ ಜಿಯೋ ಮೈಕಲ್ ಪದೇಪದೆ ತಮ್ಮ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಪ್ರಕಟಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಕಳೆದ ವಾರದಲ್ಲಿ ಈ ತೀರ್ಪು ಪ್ರಕಟವಾಗಿದ್ದು, ಸ್ವತಃ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್ ಅವರು ಅಪ್ಸರಾ ವಿರುದ್ಧ ಯೂಟ್ಯೂಬ್‌ನಲ್ಲಿ ಪ್ರಕಟವಾಗಿರುವ ಹಲವು ವಿಡಿಯೋಗಳು ಹಾಗೂ ಪೋಸ್ಟ್‌ಗಳನ್ನು ವೀಕ್ಷಿಸಿ ಆಕ್ಷೇಪಾರ್ಹ ಸಂಗತಿಗಳಿರುವುದನ್ನು ಗಮನಿಸಿದರು. ಅಲ್ಲದೆ ಆರೋಪಿಯು ಸತ್ಯವನ್ನು ಪರಿಶೀಲನೆಗೊಳಪಡಿಸದೆ ಯುಟ್ಯೂಬ್‌ನಲ್ಲಿ ಪೋಸ್ಟ್ ಮಾಡಿರುವುದನ್ನು ಕಂಡುಕೊಂಡರು. “ಆಕ್ಷೇಪಾರ್ಹ…
ಬಂಟ್ವಾಳ : ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿದ್ದು, ಶಾಸಕರು ಪವಾಡಸದೃಶವಾಗಿ ಅಪಾಯದಿಂದ ಪಾರಾದ ಘಟನೆ ಇಂದು ಮಧ್ಯಾಹ್ನ ಮಂಗಳೂರು ಹೊರವಲಯದ ತೆಂಕ ಎಡಪದವು ಎಂಬಲ್ಲಿ ನಡೆದಿದೆ. ಶಾಸಕ ರಾಜೇಶ್ ನಾಯ್ಕ್ ಅವರು ಇಂದು ಸಂಕ್ರಮಣದ ಅಂಗವಾಗಿ ಎಡಪದವು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಾಸು ತನ್ನ ಕಾರಿನತ್ತ ನಡೆದುಕೊಂಡು ಬರುತ್ತಿರುವ ವೇಳೆ ಅಪಘಾತ ಸಂಭವಿಸಿದೆ ಎಂದು ಮಾಹಿತಿ ದೊರಕಿದೆ. ಮೂಡಬಿದಿರೆ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರೊಂದು ಶಾಸಕರು ಕಾರಿನತ್ತ ಹೆಜ್ಜೆ ಹಾಕುತ್ತಿದ್ದ ವೇಳೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ, ಕಾರು ಗುದ್ದಿದ ರಭಸಕ್ಕೆ ಶಾಸಕರು ಬಿದ್ದು ಗಾಯವಾಗಿದ್ದು, ಕೂಡಲೇ ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಶಾಸಕರು ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಚಿಕಿತ್ಸೆ ಪಡೆದುಕೊಂಡು ಶಾಸಕರು ಮನೆಗೆ ತೆರಳಿದ್ದಾರೆ. ಡಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಸ್ಥಳೀಯರು ಗುರುಪುರದಲ್ಲಿ ಹಿಡಿದು ಚಾಲಕ ಸಹಿತ ಕಾರನ್ನು ಬಜ್ಪೆ ಪೋಲೀಸರಿಗೆ ಒಪ್ಪಿಸಿದ್ದಾರೆ. ಕಾರು ಚಾಲಕನನ್ನು…
ಕೆಲವು ಬಗೆಯ ಸಿಹಿತಿಂಡಿಗಳು ಸಿಹಿಯಾಗಿದ್ದರೂ ಆರೋಗ್ಯಕ್ಕೆ ಒಳ್ಳೆಯದು. ಡಾರ್ಕ್ ಚಾಕೊಲೇಟ್ ಅಂತಹ ಒಂದು ಆರೋಗ್ಯಕರ ಆಹಾರವಾಗಿದೆ. ಈ ಟೇಸ್ಟಿ ಟ್ರೀಟ್ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಡಾರ್ಕ್ ಚಾಕೊಲೇಟ್ ಉತ್ಕರ್ಷಣ ನಿರೋಧಕಗಳು, ಫ್ಲೇವನಾಯ್ಡ್ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇವೆಲ್ಲವೂ ರೋಗಗಳನ್ನು ದೂರವಿಡುವ ಪೋಷಕಾಂಶಗಳು. ಪ್ರತಿದಿನ ಡಾರ್ಕ್ ಚಾಕಲೇಟ್ ತಿಂದರೆ ರೋಗಗಳೂ ದೂರವಾಗುತ್ತವೆ. ಡಾರ್ಕ್ ಚಾಕೊಲೇಟ್ ಚಯಾಪಚಯ, ಹಸಿವನ್ನು ನಿಯಂತ್ರಿಸುತ್ತದೆ. ಇದು ಕೊಬ್ಬಿನ ಕೋಶಗಳನ್ನು ಮಾಡುವ ಜೀನ್‌ಗಳ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ. ಡಾರ್ಕ್ ಚಾಕೊಲೇಟ್‌ನಲ್ಲಿರುವ ಫ್ಲೇವನಾಯ್ಡ್‌ಗಳಂತಹ ಸಂಯುಕ್ತಗಳು ಜೀರ್ಣಾಂಗ ವ್ಯವಸ್ಥೆಯಲ್ಲಿ ಕೊಬ್ಬಿನ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವೆಲ್ಲವೂ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಆದರೆ ಇವುಗಳನ್ನು ಮಿತವಾಗಿ ಸೇವಿಸಬೇಕು. ಸಾಮಾನ್ಯ BMI ಹೊಂದಿರುವ ಅಧಿಕ ತೂಕದ ಮಹಿಳೆಯರು ಡಾರ್ಕ್ ಚಾಕೊಲೇಟ್‌ನಿಂದ ಹೆಚ್ಚು ಪ್ರಯೋಜನ ಪಡೆಯಬಹುದು, ಆದರೆ ಫಲಿತಾಂಶಗಳು ಬದಲಾಗುತ್ತವೆ. ಪ್ರತಿದಿನ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಸೂರ್ಯನ ಹಾನಿ ಮತ್ತು ಅಕಾಲಿಕ ವಯಸ್ಸಾಗುವಿಕೆಯಿಂದ ಚರ್ಮವನ್ನು ರಕ್ಷಿಸಬಹುದು.…
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಸಾರಿಗೆ ಸಂಸ್ಥೆಗಳ ಬಸ್‌ಗಳು ಅಪಘಾತಕ್ಕೀಡಾಗಿ, ದುರಸ್ತಿಗೆ ಕಳಿಸಿದರೆ, ಅವುಗಳ ಆದಾಯ ನಷ್ಟಕ್ಕೆ ‘ಐಡಲ್ ಶುಲ್ಕ’ (ನಿಷ್ಫಲ ಶುಲ್ಕ) ಅಡಿಯಲ್ಲಿ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ. ಅಂತಹ ಪರಿಹಾರ ಪಡೆಯಲು ಸಾರಿಗೆ ಸಂಸ್ಥೆಗಳು ಅರ್ಹವಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಆದಾಯ ನಷ್ಟಕ್ಕೆ ಪರಿಹಾರ ನೀಡಲು ನ್ಯಾಯಮಂಡಳಿ ನೀಡಿದ ಆದೇಶವನ್ನು ಪ್ರಶ್ನಿಸಿ ‘ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್’ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ಕುಮಾರ್ ವಿಚಾರಣೆ ನಡೆಸಿದ್ದಾರೆ. “ಬಸ್ ಅಪಘಾತಕ್ಕೀಡಾಗಿ ಹಾನಿಗೊಳಗಾದರೆ ಮತ್ತು ದುರಸ್ತಿಗಾಗಿ ಗ್ಯಾರೇಜ್‌ನಲ್ಲಿ ಇರಿಸಿದರೆ, ಸಾರಿಗೆ ಸಂಸ್ಥೆಗಳು ಕಾನೂನಿನ ಪ್ರಕಾರ ಹಾನಿಗೆ ಸಂಬಂಧಿದಂತೆ ಪರಿಹಾರ ಪಡೆಯಬಹುದು. ಆದರೆ, ಆದಾಯದ ನಷ್ಟಕ್ಕೆ ಪರಿಹಾರ ಪಡೆಯಲು ಅರ್ಹರಲ್ಲ” ಎಂದು ಹೇಳಿದ್ದಾರೆ. ಕೆಎಸ್‌ಆರ್‌ಟಿಸಿ ಪರವಾಗಿ ವಾದ ಮಂಡಿಸಿದ ವಕೀಲರು, “ಅಪಘಾತಗಳ ಕಾರಣ, ಬಸ್‌ಗಳನ್ನು ದುರಸ್ತಿಗಾಗಿ ವರ್ಕ್‌ಶಾಪ್‌ಗಳಿಗೆ ಕರೆದೊಯ್ಯಲಾಗುತ್ತದೆ. ದುರಸ್ತಿ ಅವಧಿಯಲ್ಲಿ ಅವು ಸಂಚರಿಸಲು ಸಾಧ್ಯವಿಲ್ಲ. ಆದ್ದರಿಂದ, ಕೆಎಸ್‌ಆರ್‌ಟಿಸಿಯು ‘ಆದಾಯ ನಷ್ಟ’ ಅಡಿಯಲ್ಲಿ ಪರಿಹಾರ ಪಡೆಯಲು…
ದಕ್ಷಿಣ ಪ್ರವಾಸದ ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದ ಕೆಎಲ್ ರಾಹುಲ್ ಅವರನ್ನು ಟೆಸ್ಟ್ ಕೀಪರ್ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಎರಡು ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲದೆ ವಿಕೆಟ್ ಕೀಪಿಂಗ್ ನಲ್ಲಿಯೂ ಕೆಎಲ್ ರಾಹುಲ್ ಅವರು ತಮ್ಮ ಕೌಶಲದಿಂದ ಮಿಂಚಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಹುಲ್ ವಿಕೆಟ್ ಕೀಪಿಂಗ್ ನಡೆಸುವುದಿಲ್ಲ. ಅವರು ಸ್ಪೆಷಲಿಸ್ಟ್ ಬ್ಯಾಟರ್ ಆಗಿ ತಂಡದಲ್ಲಿ ಆಡಲಿದ್ದಾರೆ ಎಂದು ಮಾಹಿತಿ ದೊರಕಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆ ಸಮಿತಿ ಮತ್ತು ತಂಡದ ಮ್ಯಾನೇಜ್ ಮೆಂಟ್ ಮುಂಬರುವ ಸರಣಿಯಲ್ಲಿ ತಜ್ಞ ವಿಕೆಟ್-ಕೀಪರ್ ಕೆಎಸ್ ಭರತ್ ಅವರತ್ತ ಎದುರು ನೋಡುತ್ತಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಕೆಎಸ್ ಭರತ್ ಮತ್ತು ಧ್ರುವ್ ಜುರೆಲ್ ಅವರನ್ನು ವಿಕೆಟ್-ಕೀಪರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಜುರೆಲ್ ಅವರು ಇದೇ ಮೊದಲ ಬಾರಿಗೆ ಟೆಸ್ಟ್ ಕರೆ ಪಡೆದಿದ್ದಾರೆ.…
ಮಂಗಳೂರು : ಗೋವಾ ಮದ್ಯದ ಪೆಟ್ಟಿಗೆಗಳನ್ನು ಕೇರಳಕ್ಕೆ ಗೂಡ್ಸ್ ಟೆಂಪೋದಲ್ಲಿ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಮುಡಿಪು- ನೆತ್ತಿಲಪದವು ಎಂಬಲ್ಲಿ ಅಬಕಾರಿ ಪೊಲೀಸರು ಬಂಧಿಸಿ ಆತನಿಂದ ರೂ.6,87,720 ಮದ್ಯ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೊನ್ನಾವರ ನಿವಾಸಿ ರಾಧಾಕೃಷ್ಣ ಕಾಮತ್ ಯಾನೆ ಸದಾನಂದ ಕಾಮತ್ ಬಂಧಿತಆರೋಪಿಯಾಗಿದ್ದಾನೆ. ಆರೋಪಿ ಅಶೋಕ್ ಲೈಲಾಂಡ್ ಗೂಡ್ಸ್ ಟೆಂಪೋದಲ್ಲಿ ಹೊರಭಾಗದಲ್ಲಿ ತೆಂಗಿನ ಗೆರಟೆಗಳನ್ನು ಇಟ್ಟು, ಒಳಗೆ ಮದ್ಯದ ಬಾಟಲಿಗಳನ್ನು ಇಟ್ಟು ಸಾಗಾಟ ನಡೆಸುತ್ತಿದ್ದ. ಮುಡಿಪು-ನೆತ್ತಿಲಪದವು ಮಾರ್ಗವಾಗಿ 114 ಪೆಟ್ಟಿಗೆಗಳಲ್ಲಿ ಗೋವಾ ಮದ್ಯ ಸಾಗಾಟ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ. ಅಬಕಾರಿ ಜಂಟಿ ಆಯುಕ್ತ ಮಂಗಳೂರು ವಿಭಾಗ ನಿರ್ದೇಶನದಂತೆ, ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ, ಅಬಕಾರಿ ಉಪ-ಅಧೀಕ್ಷಕ, ಉಪವಿಭಾಗ ಬಂಟ್ವಾಳ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ ಮತ್ತು ಸಿಬ್ಬಂದಿ ಸುನಿಲ್ ಬೈಂದೂರು, ದೊಡ್ಡಪ್ಪ ಮತ್ತು ಸದಾಶಿವ ಹಕ್ಕ, ರವಿ ನಾರ್ವೇಕರ್, ಅರ್ಜುನ ಭಾಗೋಡಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. 2023ರ ಜು.9 ರಂದು 2484 ಲೀ ಅಕ್ರಮ…