Subscribe to Updates
Get the latest creative news from FooBar about art, design and business.
Author: KNN IT Team
ಮಥುರಾದಲ್ಲಿರುವ 17ನೇ ಶತಮಾನದ ಶಾಹಿ ಈದ್ಗಾ ಮಸೀದಿಯಲ್ಲಿ ಸರ್ವೇ ನಡೆಸಲು ಅನುಮತಿ ನೀಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ನಡೆಸಿದ ರೀತಿಯಲ್ಲಿಯೇ ಮಥುರಾ ಶಾಹಿ ಈದ್ಗಾ ಮಸೀದಿಯಲ್ಲಿ ಮೇಲ್ವಿಚಾರಣೆಯ ಸಮೀಕ್ಷೆಗೆ ಹೈಕೋರ್ಟ್ ಕಳೆದ ತಿಂಗಳು ತನ್ನ ಒಪ್ಪಿಗೆ ನೀಡಿತ್ತು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಸಮೀಕ್ಷೆಗಾಗಿ ನ್ಯಾಯಾಲಯದ ಆಯುಕ್ತರ ನೇಮಕಕ್ಕಾಗಿ ಹೈಕೋರ್ಟ್‌ಗೆ ಸಲ್ಲಿಸಿದ “ಅಸ್ಪಷ್ಟ” ಅರ್ಜಿಯನ್ನು ಪ್ರಶ್ನಿಸಿತು. “ನೀವು ನ್ಯಾಯಾಲಯದ ಕಮಿಷನರ್ ನೇಮಕಾತಿಗಾಗಿ ಅಸ್ಪಷ್ಟ ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ. ಉದ್ದೇಶದ ಬಗ್ಗೆ ತುಂಬಾ ನಿರ್ದಿಷ್ಟವಾಗಿರಬೇಕು. ಎಲ್ಲವನ್ನೂ ನ್ಯಾಯಾಲಯವೇ ನೋಡಿಕೊಳ್ಳಬೇಕು ಎಂದು ಬಿಡಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಮಿಷನರ್ ಮೂಲಕ ಮಸೀದಿ ಸಮೀಕ್ಷೆಗೆ ಅನುಮತಿ ನೀಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಕಡೆಯವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಕೃಷ್ಣನ ಜನ್ಮಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಹೇಳಿಕೊಂಡಿವೆ ಮತ್ತು…
ಬಾಲಿವುಡ್ ಸಿನಿರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಫಿಲ್ಮ್‌ಫೇರ್ ಪ್ರಶಸ್ತಿ ಕಾರ್ಯಕ್ರಮದ ನಾಮಿನೇಷನ್ ಪಟ್ಟಿ ಹೊರಬಿದ್ದಿದೆ. ಜನವರಿ 27 ಮತ್ತು 28 ರಂದು ಗುಜರಾತ್‌ನಲ್ಲಿ 69 ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇಲ್ಲಿದೆ ಸಂಪೂರ್ಣ ಪಟ್ಟಿ… ಅತ್ಯುತ್ತಮ ಚಲನಚಿತ್ರ (ಜನಪ್ರಿಯ) : 12th ಫೇಲ್ ಜವಾನ್ OMG 2(ಓ ಮೈ ಗಾಡ್ -2) ಪಠಾಣ್ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಬೆಸ್ಟ್ ಫಿಲ್ಮ್ (ಕ್ರಿಟಿಕ್ಸ್) : 12th ಫೇಲ್ ಭೀಡ್ ಫರಾಜ್ ಜೋರಾಮ್ ಸ್ಯಾಮ್ ಬಹದ್ದೂರ್ ಥ್ರೀ ಆಫ್ ಅಸ್ ಜ್ವಿಗಾಟೊ ಅತ್ಯುತ್ತಮ ನಿರ್ದೇಶಕ : ಅಮೀರ್ ರೈ (OMG 2) ಅಟ್ಲೀ (ಜವಾನ್) ಕರಣ್ ಜೋಹರ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ) ಸಂದೀಪ್ ರೆಡ್ಡಿ ವಂಗಾ (ಅನಿಮಲ್) ಸಿದ್ಧಾರ್ಥ್ ಆನಂದ್ (ಪಠಾಣ್) ವಿಧು ವಿನೋದ್ ಚೋಪ್ರಾ (12th ಫೇಲ್) ಬೆಸ್ಟ್ ಆ್ಯಕ್ಟರ್ ಇನ್ ಲೀಡಿಂಗ್ ರೋಲ್ (ನಟ) : ರಣಬೀರ್ ಕಪೂರ್ (ಅನಿಮಲ್)…
ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಗೃಹಿಣಿಯರಿಗೆ ಕೆಲಸಗಳಿರುವುದು ಸಹಜವಾದದ್ದು. ಅದರಲ್ಲಿಯೂ ಮನೆಯ ಕೆಲಸದ ಜೊತೆಗೆ ಆಫೀಸ್ ಕೆಲ್ಸ ಕೂಡ ಮಾಡುವವರಾದರೆ ಮುಗಿಯಿತು. ಸಮಯ ಉಳಿತಾಯ ಮಾಡಿ ಗಡಿಬಿಡಿಯಲ್ಲಿ ಎಲ್ಲ ಟಾಸ್ಕ್ ಮುಗಿಸಬೇಕಾಗುತ್ತದೆ. ಆಫೀಸ್ ಕೆಲಸದ ಜೊತೆಗೆ ಮನೆ ಕೆಲಸ ಮುಗಿಸುವುದು ದೊಡ್ಡ ಸವಾಲಾಗಿದೆ. ಹೀಗಾಗಿ, ಮಹಿಳೆಯರ ಅಡುಗೆ ಮನೆ ಕೆಲಸ ಸುಲಭವಾಗಲು ಕೆಲವೊಂದು ಟಿಪ್ಸ್ ನೀಡಲಾಗಿದೆ. ಬೆಳಗ್ಗೆ ನೀವು ತರಕಾರಿ ಬಳಸಿ ಏನಾದರೂ ಅಡುಗೆ ಮಾಡಬೇಕೆಂದು ಅಂದು, ಹಿಂದಿನ ದಿನವೇ ತರಕಾರಿಗಳನ್ನು ಹೆಚ್ಚಿ, ಜಿಪ್ ಲಾಕ್ ಬ್ಯಾಗ್ನಲ್ಲಿ ಹಾಕಿಟ್ಟರೆ ಮಾರನೇ ದಿನ ನೀವು ಅದನ್ನು ಫ್ರೆಶ್ ಆಗಿ ಬಳಸಬಹುದು. ಚಪಾತಿ ಮಾಡುವ ಸಂದರ್ಭ ಪ್ರತಿ ಬಾರಿಯೂ ನೀವು ಹಿಟ್ಟು ಕಲಸಬೇಕಾಗುತ್ತದೆ. ಹಾಗಿದ್ರೆ, ಏನೂ ಮಾಡೋದು ಅಂತೀರಾ?? ಒಮ್ಮೆಲೆ ಹೆಚ್ಚಾಗಿ ಚಪಾತಿ ಹಿಟ್ಟನ್ನು ರೆಡಿ ಮಾಡಿಕೊಂಡು ನಿಮಗೆ ಬೇಕಾದಷ್ಟು ಮಾತ್ರ ಉಪಯೋಗಿಸಿ, ಉಳಿದದ್ದನ್ನು ಜಿಪ್ ಲಾಕ್ ಬ್ಯಾಗ್ನಲ್ಲಿ ಹಾಕಿಟ್ಟರೆ ನೀವು ಸುಮಾರು 15 ದಿನಗಳವರೆಗೂ ಸ್ಟೋರ್ ಮಾಡಿಡಬಹುದು. ಹೋಳು ಮಾಡಿದ ತೆಂಗಿನ ಕಾಯಿ…
ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ ಭರ್ಜರಿ ಲಾಭ ಪಡೆಯಬಹುದು. ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, ರಾಷ್ಟ್ರೀಯ ಪಿಂಚಣಿ ಯೋಜನೆ, ಟೈಮ್ ಡೆಪಾಸಿಟ್, ರಿಕರಿಂಗ್ ಡಿಪಾಸಿಟ್, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ ಮತ್ತು ಕಿಸಾನ್ ವಿಕಾಸ್ ಪತ್ರದಂತಹ ಯೋಜನೆಗಳನ್ನು ಒಳಗೊಂಡಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಹೊರತು ಪಡಿಸಿ ಕೇಂದ್ರ ಸರ್ಕಾರವು ಮೂರು ವರ್ಷಗಳ ಟೈಮ್ ಡೆಪಾಸಿಟ್ ಮೇಲಿನ ಬಡ್ಡಿಯನ್ನು ಹೆಚ್ಚಳ ಮಾಡಿದೆ. ತ್ರೈಮಾಸಿಕದಲ್ಲಿ ಇದನ್ನು 10 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಲಾಗಿದೆ. ಈ ಬಡ್ಡಿದರಗಳು ಜನವರಿ 1 ರಿಂದ ಮಾರ್ಚ್ 31 ರವರೆಗೆ ಮುಂದುವರಿಯುತ್ತವೆ. ಕಿಸಾನ್ ವಿಕಾಸ್ ಯೋಜನೆಯಲ್ಲಿ 115 ತಿಂಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಇದರ ಬಡ್ಡಿದರವು ಶೇಕಡಾ 7.5 ರಷ್ಟಿದೆ. ನೀವು 1 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಲ್ಲಿ, ಮುಕ್ತಾಯದ ಸಮಯದಲ್ಲಿ ಬಡ್ಡಿದರವು ರೂ. 1.1 ಲಕ್ಷ ರೂ.ಆಗಲಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ…
ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ಕೊಂಕಣ್ ರೈಲ್ವೆ ಡಿಸೆಂಬರ್ ಒಂದೇ ತಿಂಗಳಲ್ಲಿ 1.95 ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದೆ. ರೈಲುಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತಿದ್ದ ಒಟ್ಟು 6,675 ಮಂದಿ ಪ್ರಯಾಣಿಕರಿಂದ 1,95,64,926 ರೂಪಾಯಿ ದಂಡವನ್ನು ವಸೂಲಿ ಮಾಡಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ಈಗೀಗ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳಲ್ಲಿ ನಿರಂತರವಾಗಿ ಟಿಕೆಟ್ ತಪಾಸಣಾ ವ್ಯವಸ್ಥೆ ಜಾರಿಯಲ್ಲಿದ್ದು, ಟಿಕೆಟ್ ಇಲ್ಲದೇ ಅನಧಿಕೃತವಾಗಿ ಪ್ರಯಾಣಿಸುತ್ತಿರುವವರನ್ನು ಪತ್ತೆ ಹಚ್ಚಿ ಅವರಿಂದ ದಂಡವನ್ನು ವಸೂಲಿ ಮಾಡಲಾಗುತ್ತಿದೆ. ಕಳೆದ ತ್ರೈಮಾಸಿಕದಲ್ಲಿ (2023ರ ಅಕ್ಟೋಬರ್‌ನಿಂದ ಡಿಸೆಂಬರ್ ತನಕ) ಟಿಕೆಟ್ ರಹಿತ ಪ್ರಯಾಣಿಸುತ್ತಿದ್ದ 18,466 ಮಂದಿ ಪ್ರಯಾಣಿಕರನ್ನು ರೈಲ್ವೆ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಅವರಿಂದ ಒಟ್ಟು 5,60,99,017 ರೂ ದಂಡ ವಸೂಲಿ ಮಾಡಿದ್ದಾರೆ ಎಂದೂ ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಕೊಂಕಣ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸರಿಯಾದ ಟಿಕೆಟ್ ನೊಂದಿಗೆ ಪ್ರಯಾಣಿಸುವಂತೆ ಮನವಿ ಮಾಡಿ ರುವ ಅಧಿಕಾರಿಗಳು, ಪ್ರಯಾಣದ ನಡುವೆ ಉಂಟಾಗುವ ಅನಾನುಕೂಲತೆ ತಪ್ಪಿಸಲು ನೆರವಾಗುವಂತ ಕೋರಿದ್ದಾರೆ.…
ಭಾರತದ ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಪ್ರತಿ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಏರಿಕೆಯಾಗಲಿದೆ. ಹೊಸ ತುಟ್ಟಿಭತ್ಯೆ ಜನವರಿ ತಿಂಗಳಿನಿಂದಲೇ ಜಾರಿಗೆ ಬರಲಿದ್ದು, ಈ ಹೆಚ್ಚಳವನ್ನು ಸರ್ಕಾರ ಮಾರ್ಚ್ ತಿಂಗಳಲ್ಲಿ ಘೋಷಣೆ ಮಾಡುವ ನಿರೀಕ್ಷೆಯಿದೆ. ಸರ್ಕಾರವು ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ಮಾಡಲಾಗುತ್ತದೆ. ಪ್ರಸ್ತುತ ಸರ್ಕಾರದಿಂದ ನೌಕರರಿಗೆ ಶೇ.46 ತುಟ್ಟಿಭತ್ಯೆ ನೀಡಲಾಗುತ್ತಿದೆ. ನಿಯಮಗಳ ಅನುಸಾರ, ತುಟ್ಟಿಭತ್ಯೆ ಶೇ.50ಕ್ಕೆ ತಲುಪಿದ ಕೂಡಲೇ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಇದಾದ ಬಳಿಕ ಶೇ.50ರ ಪ್ರಕಾರ ಮೂಲ ವೇತನಕ್ಕೆ ಅದನ್ನು ಸೇರಿಸಲಾಗುತ್ತದೆ. ಮೇಲಿನ ನಿಯಮಗಳ ಅನುಸಾರ, ಕೇಂದ್ರ ನೌಕರರ ಕನಿಷ್ಠ ವೇತನದಲ್ಲಿ 9000 ರೂ. ಏರಿಕೆಯಾಗಲಿದೆ. ಉದ್ಯೋಗಿಯ ಮೂಲ ವೇತನ 18000 ರೂ.ಆಗಿದ್ದರೆ, 50% ಡಿಎಯ ಆಧಾರದಲ್ಲಿ ಅವರು 9000 ರೂ. ಪಡೆಯುತ್ತಾರೆ. ಆದರೆ, ಡಿಎ 50% ಆದ ಬಳಿಕ ಅದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಇದಾದ ಬಳಿಕ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಆ ನಂತರ ಮತ್ತೆ ಮೊದಲಿನ ನಿಯಮ ಅನ್ವಯವಾಗಲಿದೆಯಾಗಿದೆ.
ರಾಮ ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ರಾಮಮಂದಿರ ಸಿದ್ಧತೆ ನಡುವೆ ವಿಮಾನ ದರ ಏರಿಕೆಯಾಗಿದೆ. ಬೇಡಿಕೆ ಇರುವುದರಿಂದ ವಿಮಾನ ದರ ಹೆಚ್ಚಳ ಮಾಡಲಾಗಿದೆ. ಹಾಗದರೆ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ ಎಷ್ಟಿದೆ. ಕಳೆದ 10 ದಿನಗಳಲ್ಲಿ 6000 ಇದ್ದ ಟಿಕೆಟ್ ದರ ಇದೀಗ 21,500 ಆಗಿದ್ದು, ಬರೋಬ್ಬರು 400% ಹೆಚ್ಚಳ ಕಂಡಿದೆ. ಜನವರಿ 19 ಕ್ಕೆ ಬೆಂಗಳೂರು-ಅಯೋಧ್ಯೆ ವಿಮಾನ ಟಿಕೆಟ್ ದರ 21,500, ಜನವರಿ 20 ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್, ಜನವರಿ 20 ರಂದು ಟಿಕೆಟ್ ದರ 29,700, ಜನವರಿ 20 ಕ್ಕೂ ಮುನ್ನ ಅಯೋಧ್ಯೆಗೆ ತೆರಳುವ ವಿಮಾನಗಳ ಟಿಕೆಟ್ ಸೋಲ್ಡ್ ಆಗಿದೆಯಾಗಿದೆ.
ಬೆಡ್ ರೂಮಿನಲ್ಲಿ ಗೊತ್ತಿಲ್ಲದೆ ನಾನಾ ವಸ್ತುಗಳನ್ನು ಇಡುತ್ತೇವೆ. ಆದರೆ ಅವುಗಳಲ್ಲಿ ಕೆಲವು ವಸ್ತು ದೋಷವನ್ನು ಉಂಟುಮಾಡಬಹುದು. ಇದರಿಂದಾಗಿ ಪತಿ-ಪತ್ನಿಯರ ನಡುವೆ ಜಗಳಗಳು ಉಂಟಾಗಬಹುದು. ಹಾಗಾದರೆ ಮಲಗುವ ಕೋಣೆಯಲ್ಲಿ ಪತಿ-ಪತ್ನಿ ಸುಖವಾಗಿರಲು ಮಲಗುವ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂಬುದರ ಬಗ್ಗೆ ಅರಿತುಕೊಳ್ಳೋಣ. ವಾಸ್ತು ಶಾಸ್ತ್ರದಲ್ಲಿ, ಮನೆಯ ಯಾವುದೇ ಪ್ರದೇಶದಲ್ಲಿ ಇಡಬಹುದಾದ ಮತ್ತು ಹಾಕಲಾಗದ ಅನೇಕ ವಸ್ತುಗಳು ಇವೆ. ಕೆಲವರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗುವುದಲ್ಲದೆ ಪತಿ-ಪತ್ನಿಯರ ನಡುವೆಯೂ ಪರಿಸ್ಥಿತಿ ಉಂಟಾಗಬಹುದು. ಮಲಗುವ ಕೋಣೆಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರವು ಕೆಲವು ನಿಯಮಗಳನ್ನು ಹೊಂದಿದೆ. ಆದ್ದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು, ನಿಮ್ಮ ಸಂಬಂಧವನ್ನು ಬಲಪಡಿಸಲು ಈ 5 ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಮನೆಯಲ್ಲಿ ಒಣ ಗಿಡಗಳನ್ನು ಇಡುವುದು ಸೂಕ್ತವಲ್ಲ. ಅದೇ ಸಮಯದಲ್ಲಿ, ಒಣಗಿದ ಮುಳ್ಳಿನ ಸಸ್ಯಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಈ ಕಾರಣದಿಂದಾಗಿ, ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಸತ್ತವರ ಫೋಟೋಗಳು ಮಲಗುವ ಕೋಣೆಯಲ್ಲಿ ಇರಬಾರದು. ವಾಸ್ತು ಶಾಸ್ತ್ರವೂ ಇದನ್ನೇ ಹೇಳುತ್ತದೆ.…
ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ಪ್ರತಿಷ್ಠಾಪನೆ ಕಾರಣ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಸೂಚನೆಯನ್ನು ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಬೆಂಗಳುರು ನಗರ ಸೇರಿ ರಾಜ್ಯದ ಎಲ್ಲಾ ಕಡೆಗಳಲ್ಲಿ ಈ ತಿಂಗಳ 22 ರವರೆಗೂ ಹೈ ಅಲರ್ಟ್ ಆಗಿರಬೇಕು ಎಂದು ಕಮಿಷನರೇಟ್ ಹಾಗೂ ಜಿಲ್ಲಾ ಎಸ್‌ಪಿಗಳಿಗೆ ಡಿಜಿ ಐಜಿಪಿ ಅಲೋಕ್ ಮೋಹನ್ ಸೂಚನೆ ನೀಡಿರುವ ಕುರಿತು ವರದಿಯಾಗಿದೆ. ಮಂಗಳೂರು, ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಉಡುಪಿ ಸೇರಿ ಕೆಲವು ಜಿಲ್ಲೆಗಳಲ್ಲಿ ನಿಗಾ ವಹಿಸಲು ಸೂಚಿಸಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಕೆಎಸ್‌ಆರ್‌ಪಿ ನಿಯೋಜನೆ ಮಾಡಲು ಸೂಚಿಸಲಾಗಿದೆ. ಶ್ರೀರಾಮನ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಪೊಲೀಸರ ಕಣ್ಗಾವಲಿಗೆ ಸೂಚನೆ ನೀಡಲಾಗಿದೆ. ಪೂಜೆ ಪುನಸ್ಕಾರ ಬಿಟ್ಟು ದೇವಸ್ಥಾನಗಳಲ್ಲಿ ಬೇರೆ ಚಟುವಟಿಕೆಗಳಿಗೆ ಅವಕಾಶ ಮಾಡಲು ಅವಕಾಶ ನೀಡಬಾರದು ಎಂದು ಸೂಚನೆ ನೀಡಲಾಗಿದೆ. ರಾಜಕೀಯ ಬಗ್ಗೆ ಮಾತನಾಡುವುದು, ಪ್ರತಿಭಟನೆ ಮಾಡುವುದು, ಸಮಾಜದ ಶಾಂತಿ ಭಂಗ ಮಾಡುವ ಘೋಷಣೆ ಮಾಡುವುದು ಸೇರಿ ಇನ್ನಿತರ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡಬೇಕು ಎಂಬ ಸಂದೇಶ ನೀಡಲಾಗಿದೆ.…
ನೈಸರ್ಗಿಕವಾಗಿ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ಕಪ್ಪಾಗಿಸಲು ಮತ್ತು ಕೂದಲು ಬೆಳೆಯುವಂತೆ ಮಾಡಲು ಏನೇನೋ ಹರಸಾಹಸ ಮಾಡಿ ಪ್ರಯೋಜನ ಸಿಕ್ಕಿಲ್ಲವೆಂದಾದರೆ ಕೆಳಕಂಡ ಸಲಹೆಗಳನ್ನು ಪಾಲನೆ ಮಾಡಬಹುದು. ಮನೆಯ ಹಿತ್ತಲಲ್ಲೇ ಸಿಗುವ ಈ ಎಲೆಯನ್ನು ಅರೆದು ಹಚ್ಚಿದರೆ ನಿಮಿಷಗಳಲ್ಲಿ ಬಿಳಿ ಕೂದಲು ಕಪ್ಪಾಗಲಿದೆ. ಪೇರಳೆ ಎಲೆಗಳು ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಒಳಗೊಂಡಿರುತ್ತದೆ. ಇದು ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಕೆಲವು ಪೇರಳೆ ಎಲೆಗಳನ್ನು ತೊಳೆದು ಬ್ಲೆಂಡರ್‌ನಲ್ಲಿ ಹಾಕಿ ದಪ್ಪನೆಯ ಪೇಸ್ಟ್ ಮಾಡಿಟ್ಟುಕೊಳ್ಳಿ. ಇದಕ್ಕೆ ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ ಹಾಕಿ ಮಿಶ್ರಣ ಮಾಡಿಕೊಂಡರೆ, ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಯ ನಂತರ ಕೂದಲನ್ನು ತೊಳೆದುಕೊಳ್ಳಿ. ಒಂದು ಲೀಟರ್ ನೀರಿನಲ್ಲಿ ಕೆಲವು ಪೇರಳೆ ಎಲೆಗಳನ್ನು ಹಾಕಿ 15 ರಿಂದ 20 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಇದಾದ ಬಳಿಕ, ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಸಂಗ್ರಹ ಮಾಡಿ. ಇದನ್ನು…