ಮ್ಯಾನ್ಮಾರ್ ಪದಚ್ಯುತ ಮಾಜಿ ನಾಯಕಿ ಆಂಗ್ ಸಾನ್ ಸೂಕಿ ಅವರು ಚುನಾವಣಾ ವಂಚನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಶುಕ್ರವಾರ ಸಾಬೀತಾಗಿದ್ದು, ನ್ಯಾಯಾಧೀಶರು ಕಠಿಣ ಪ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂದು ವಿಚಾರಣೆಯ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಆರಂಭದಲ್ಲಿ ನಡೆದ ಕ್ಷಿಪ್ರಕ್ರಾಂತಿಯ ನಂತರ ಮ್ಯಾನ್ಮಾರ್ನ ದಶಕಗಳ ಮಿಲಿಟರಿ ಆಡಳಿತವನ್ನು ವಿರೋಧಿಸಿದ ನೊಬೆಲ್ ಪ್ರಶಸ್ತಿ ವಿಜೇತ ಆಂಗ್ ಸಾನ್ ಸೂಕಿ ಬಂಧಿಸಲಾಗಿದೆ ಮತ್ತು ಈಗಾಗಲೇ 17 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸಲಾಗಿದೆ.
2020 ರ ನವೆಂಬರ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ಎಲ್ಡಿ) ಪ್ರಚಂಡ ಶಾಸಕಾಂಗ ಬಹುಮತದೊಂದಿಗೆ ಜಯಗಳಿಸಿ, ಪ್ರಬಲ ಮಿಲಿಟರಿ ರಚಿಸಿದ ಪಕ್ಷವನ್ನು ಸೋಲಿಸುವ ಮೂಲಕ ಅವರು ವಂಚನೆ ಮಾಡಿದ್ದಾರೆ ಎಂದು ಶುಕ್ರವಾರ ತೀರ್ಪು ಪ್ರಕಟ ಮಾಡಲಾಗಿದೆ. 76 ವರ್ಷದ ಸೂಕಿ ಅವರು ಭ್ರಷ್ಟಾಚಾರ ಮತ್ತು ಪ್ರಚೋದನೆಯಿಂದ ಹಿಡಿದು ಅಧಿಕೃತ ರಹಸ್ಯಗಳ ಸೋರಿಕೆಯವರೆಗೆ ಅನೇಕ ಆರೋಪಗಳ ಮೇಲೆ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ವಿಚಾರಣೆ ಎದುರಿಸುತ್ತಿದ್ದಾರೆ.