ಬೆಂಗಳೂರು : ಇತ್ತೀಚಿಗೆ ಯುವಕರಿಗೆ ಮದುವೆ ಆಗಬೇಕು ಅಂದರೆ ಯುವತಿಯರು ಡಿಮ್ಯಾಂಡ್ ಹೆಚ್ಚುತ್ತಿದೆ ಹಾಗಾಗಿ ಯುವಕರು ಮದುವೆಯ ಮೇಲೆ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಖತರ್ನಾಕ್ ಮಹಿಳೆ ಒಬ್ಬಳು ಮೂರ್ಮುರು ಮದುವೆಯಾಗಿ ಲಕ್ಷ ಲಕ್ಷ ಹಣ ಲೂಟಿ ಮಾಡಿದ್ದಾಳೆ.
ಹೌದು ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಎಂಬ ಖತರ್ನಾಕ್ ಲೇಡಿ ಎಂದು ತಿಳಿದು ಬಂದಿದ್ದು, ಈಕೆ ಒಂದಲ್ಲ ಎರಡಲ್ಲ ಮೂರು ಮದುವೆಯಾಗಿ ಆ ಯುವಕರಿಂದ ಲಕ್ಷ ಲಕ್ಷ ಹಣ ಪಡೆದುಕೊಂಡು ಇದೀಗ ತಲೆಮರೆಸಿಕೊಂಡಿದ್ದಾಳೆ. ಈ ಕುರಿತು ಇಬ್ಬರು ಗಂಡಂದಿರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೊದಲನೇ ಗಂಡ ವೀರೇಗೌಡ ಎರಡನೇ ಗಂಡ ಅನಂತಮೂರ್ತಿ ಠಾಣೆಗೆ ದೂರು ಕೊಟ್ಟಿದ್ದಾರೆ.








