ಬೆಂಗಳೂರು :ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ಅಲೆಯುವುದೇಕೆ‘ ಎನ್ನುವ ಗಾದೆಯಂತೆ ಈಗ “ಅಂಗೈಯ್ಯಲ್ಲಿ ಅವಕಾಶ ಇಟ್ಟುಕೊಂಡು ಸರ್ಕಾರಿ ಕಚೇರಿಗಳಿಗೆ ಅಯುವುದೇಕೆ’ ಎಂಬ ಮಾತು ಗ್ರಾಮೀಣ ಜನರ ಮುಂದಿದೆ.
ಹೌದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಗಳು ಹಾಗೂ ಕುಂದುಕೊರತೆಗಳಿಗೆ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000 ಗೆ ಕರೆಮಾಡಿ ಹಲವು ಸೌಲಭ್ಯಗಳನ್ನು ಪಡೆಯಬಹುದು.
ಪಂಚಮಿತ್ರ ಸಹಾಯವಣಿಯಲ್ಲಿ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು
ನಿಮ್ಮ ಮನೆಯ ಆಸ್ತಿ ತೆರಿಗೆ ಪಾವತಿ
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ
ನಿಮ್ಮ ಗ್ರಾಮದ ರಸ್ತೆ ದುರಸ್ಥಿ ಮಾಡಿಸಲು ದೂರು
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ರೆ ದೂರು ನೀಡಲು ಪಂಚಮಿತ್ರ ಸಹಾಯವಾಣಿಗೆ ಕರೆ ಮಾಡಿ
ಸಹಾಯವಾಣೀ ಸಂಖ್ಯೆ – 8277506000 (ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ)