ಬೆಂಗಳೂರು: ಪುದುಚೇರಿ – ದಾದರ್ ಎಕ್ಸ್’ಪ್ರೆಸ್ (ಸಂಖ್ಯೆ 11006) ಕಟ್ಪಾಡಿ ಜಂಕ್ಷನ್’ನಲ್ಲಿ ಮತ್ತು ಎಸ್ಎಂವಿಟಿ ಬೆಂಗಳೂರು – ಕಾಕಿನಾಡ ಟೌನ್ ಎಕ್ಸ್’ಪ್ರೆಸ್ (ಸಂಖ್ಯೆ 17209) ಜೋಲಾರ್’ಪೇಟೆ ಜಂಕ್ಷನ್’ನಲ್ಲಿ ಆಗಮಿಸುವ ಮತ್ತು ನಿರ್ಗಮಿಸುವ ಸಮಯಗಳಲ್ಲಿ ಪರಿಷ್ಕರಿಸಿರುವುದಾಗಿ ದಕ್ಷಿಣ ರೈಲ್ವೆಯು ತಿಳಿಸಿದೆ.
ಅದರಂತೆ, ರೈಲು ಸಂಖ್ಯೆ 11006 ಪುದುಚೇರಿ – ದಾದರ್ ಚಾಲುಕ್ಯ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್ ರೈಲು, ಪ್ರಸ್ತುತ ಕಟ್ಪಾಡಿ ಜಂಕ್ಷನ್’ಗೆ 01:20 ಗಂಟೆಗೆ ಆಗಮಿಸಿ, 01:40 ಗಂಟೆಗೆ ನಿರ್ಗಮಿಸುತ್ತದೆ. ಆದರೆ, ಸೆಪ್ಟೆಂಬರ್ 9, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ, ಈ ರೈಲು 01:05 ಗಂಟೆಗೆ ಆಗಮಿಸಿ 01:25 ಗಂಟೆಗೆ ನಿರ್ಗಮಿಸಲಿದೆ.
ಅದೇ ರೀತಿ, ರೈಲು ಸಂಖ್ಯೆ 17209 ಎಸ್ಎಂವಿಟಿ ಬೆಂಗಳೂರು – ಕಾಕಿನಾಡ ಟೌನ್ ಶೇಷಾದ್ರಿ ಡೈಲಿ ಎಕ್ಸ್’ಪ್ರೆಸ್ ರೈಲು, ಪ್ರಸ್ತುತ ಜೋಲಾರ್’ಪೇಟೆ ಜಂಕ್ಷನ್’ಗೆ 14:03 ಗಂಟೆಗೆ ಆಗಮಿಸಿ 14:05 ಗಂಟೆಗೆ ನಿರ್ಗಮಿಸುತ್ತದೆ. ಸೆಪ್ಟೆಂಬರ್ 10, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ, ಈ ರೈಲು 14:00 ಗಂಟೆಗೆ ಆಗಮಿಸಿ 14:05 ಗಂಟೆಗೆ ನಿರ್ಗಮಿಸಲಿದೆ.