Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ಭೀಕರ ಅಪಘಾತ; ಪ್ರಾಣಾಪಾಯದಿಂದ ಪಾರು

ನಾಪತ್ತೆಯಾಗಿಲ್ಲ ಕೋಟಿ ಬೆಲೆಯ ಕಲ್ಲುಗಳು, ಗೋದಾಮೂ ಹಾಳಾಗಿಲ್ಲ: ಸಾಗರ ‘APMC ಕಾರ್ಯದರ್ಶಿ’ ಸ್ಪಷ್ಟನೆ

BIG NEWS: ರಾಜ್ಯದಲ್ಲಿ ‘ಕೆರೆಗೆ ವೈದ್ಯಕೀಯ ತ್ಯಾಜ್ಯ’ ಸುರಿಯುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸಚಿವ ಈಶ್ವರ ಖಂಡ್ರೆ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉದ್ಯೋಗಿಗಳೇ ಗಮನಿಸಿ : PPF ನಿಂದ ಪ್ರತಿ ತಿಂಗಳು ₹1 ಲಕ್ಷ ಪಿಂಚಣಿ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
KARNATAKA

ಉದ್ಯೋಗಿಗಳೇ ಗಮನಿಸಿ : PPF ನಿಂದ ಪ್ರತಿ ತಿಂಗಳು ₹1 ಲಕ್ಷ ಪಿಂಚಣಿ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

By kannadanewsnow57

ದೇಶದಲ್ಲಿ ಅತ್ಯಂತ ಜನಪ್ರಿಯ ಹಾಗೂ ಸುರಕ್ಷಿತ ಉಳಿತಾಯ ಯೋಜನೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಪ್ರಮುಖವಾದದ್ದು. ಸಣ್ಣ ಮೊತ್ತದ ಹೂಡಿಕೆ ಮಾಡಿ, ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಆದಾಯ ಗಳಿಸಲು ಬಯಸುವವರಿಗೆ ಇದು ಅತ್ಯುತ್ತಮ ಯೋಜನೆಯಾಗಿದೆ. ಕೇಂದ್ರ ಸರ್ಕಾರದ ಬೆಂಬಲ ಇರುವುದರಿಂದ ಈ ಯೋಜನೆಯಲ್ಲಿನ ಹೂಡಿಕೆಗೆ ಸಂಪೂರ್ಣ ಸುರಕ್ಷತೆ ಇರುತ್ತದೆ ಹಾಗೂ ಮಾರುಕಟ್ಟೆಯ ಏರಿಳಿತಗಳ ಅಪಾಯ ಇರುವುದಿಲ್ಲ.

ಇದೀಗ ಆರ್ಥಿಕ ತಜ್ಞರ ಪ್ರಕಾರ, ಪಿಪಿಎಫ್ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನಿವೃತ್ತಿಯ ನಂತರ ಭಾರಿ ಮೊತ್ತದ ನಿಧಿ (Retirement Corpus) ಸಂಗ್ರಹಿಸುವುದಲ್ಲದೆ, ಪ್ರತಿ ತಿಂಗಳು ₹1 ಲಕ್ಷದವರೆಗೆ ಪಿಂಚಣಿ ಮಾದರಿಯ ಆದಾಯವನ್ನೂ ಪಡೆಯಬಹುದು.

₹1.5 ಕೋಟಿ ನಿಧಿ ಹಾಗೂ ₹1 ಲಕ್ಷ ಪಿಂಚಣಿ ಪಡೆಯುವುದು ಹೇಗೆ?

ಪಿಪಿಎಫ್ ಯೋಜನೆಯಲ್ಲಿ ಪ್ರಸ್ತುತ ವಾರ್ಷಿಕ ಶೇಕಡಾ 7.10 ರಷ್ಟು ಬಡ್ಡಿ ದರವನ್ನು ನೀಡಲಾಗುತ್ತಿದೆ. ಇದರ ಮೂಲಕ ನಿವೃತ್ತಿ ನಿಧಿ ಮತ್ತು ಪಿಂಚಣಿ ಪಡೆಯುವ ಲೆಕ್ಕಾಚಾರ ಹೀಗಿದೆ.

ಹೂಡಿಕೆಯ ಪ್ರಮಾಣ: ಪಿಪಿಎಫ್ ಖಾತೆಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ ₹1.50 ಲಕ್ಷದವರೆಗೆ ಹೂಡಿಕೆ ಮಾಡಲು ಅವಕಾಶವಿದೆ.

30 ವರ್ಷಗಳ ಹೂಡಿಕೆ: ಸಾಮಾನ್ಯವಾಗಿ ಪಿಪಿಎಫ್ ಖಾತೆಯ ಅವಧಿ 15 ವರ್ಷಗಳಾಗಿರುತ್ತವೆ. ಆದರೆ, ಅದನ್ನು ತಲಾ 5 ವರ್ಷಗಳಂತೆ ಎಷ್ಟು ಬಾರಿಯಾದರೂ ವಿಸ್ತರಿಸಿಕೊಳ್ಳಬಹುದು. ಉದಾಹರಣೆಗೆ, ಒಬ್ಬ ವ್ಯಕ್ತಿ 30ನೇ ವಯಸ್ಸಿನಲ್ಲಿ ಖಾತೆ ತೆರೆದು, 5 ವರ್ಷಗಳ ಅವಧಿಗೆ ಮೂರು ಬಾರಿ ವಿಸ್ತರಣೆ ಮಾಡಿ ಒಟ್ಟು 30 ವರ್ಷಗಳ ಕಾಲ ಸತತವಾಗಿ ವರ್ಷಕ್ಕೆ ₹1.50 ಲಕ್ಷ ಹೂಡಿಕೆ ಮಾಡುತ್ತಾ ಹೋದರೆ, ವಾರ್ಷಿಕ 7.10% ಬಡ್ಡಿಯಂತೆ 30 ವರ್ಷಗಳ ನಂತರ ಅವರ ಖಾತೆಯಲ್ಲಿ ಒಟ್ಟು ₹1,54,50,911 (ಸುಮಾರು 1.54 ಕೋಟಿ ರೂಪಾಯಿ) ಜಮೆಯಾಗುತ್ತದೆ.

ಸ್ಮಾರ್ಟ್ ಪಿಂಚಣಿ ಯೋಜನೆ (SWP): ಮೆಚ್ಯೂರಿಟಿ ಮುಗಿದ ನಂತರ ಈ ₹1.54 ಕೋಟಿ ಬೃಹತ್ ಮೊತ್ತವನ್ನು ಸಂಪೂರ್ಣವಾಗಿ ವಿತ್ಡ್ರಾ ಮಾಡಿಕೊಳ್ಳದೆ, ಅದನ್ನು ವಾರ್ಷಿಕ ಶೇ. 7 ರಷ್ಟು ಸ್ಥಿರ ಆದಾಯ ನೀಡುವ ಸುರಕ್ಷಿತ ವ್ಯವಸ್ಥೆಯಲ್ಲಿ ಇಟ್ಟು ‘ಸಿಸ್ಟಮ್ಯಾಟಿಕ್ ವಿತ್ಡ್ರಾಯಲ್ ಪ್ಲಾನ್’ (SWP) ಮಾದರಿಗೆ ಬದಲಾಯಿಸಿಕೊಳ್ಳಬೇಕು.

ಖಾತೆಯಲ್ಲಿ ಹಣವೂ ಉಳಿಯುತ್ತೆ, ಪಿಂಚಣಿಯೂ ಸಿಗುತ್ತೆ: ಈ ಮೊತ್ತದಿಂದ ಪ್ರತಿ ತಿಂಗಳು ₹1 ಲಕ್ಷದಂತೆ ಮುಂದಿನ 20 ವರ್ಷಗಳ ಕಾಲ ಪಿಂಚಣಿ ರೂಪದಲ್ಲಿ ಹಣ ಪಡೆಯಬಹುದು. ಹೀಗೆ 20 ವರ್ಷಗಳಲ್ಲಿ ಒಟ್ಟು ₹2.40 ಕೋಟಿ ರೂಪಾಯಿಗಳನ್ನು ಪಿಂಚಣಿ ರೂಪದಲ್ಲಿ ಪಡೆದ ನಂತರವೂ, ಖಾತೆಯಲ್ಲಿ ಅಸಲು ನಿಧಿಯಾದ ₹1.5 ಕೋಟಿಗಿಂತ ಹೆಚ್ಚಿನ ಹಣ ಹಾಗೇ ಉಳಿದಿರುತ್ತದೆ! ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಬಯಸುವವರಿಗೆ ಇದೊಂದು ಅದ್ಭುತ ಐಡಿಯಾ ಎಂದು ತಜ್ಞರು ಹೇಳುತ್ತಾರೆ.

ತೆರಿಗೆ ವಿನಾಯಿತಿಯ ಬಂಪರ್ ಲಾಭ:

ಪಿಪಿಎಫ್ ಯೋಜನೆಯ ಮತ್ತೊಂದು ದೊಡ್ಡ ಹೆಗ್ಗಳಿಕೆ ಎಂದರೆ ಇದು ‘EEE’ (Exempt-Exempt-Exempt) ವರ್ಗಕ್ಕೆ ಸೇರುತ್ತದೆ. ಅಂದರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ಹೂಡಿಕೆ ಮಾಡುವ ಮೊತ್ತಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಇದರೊಂದಿಗೆ ವಾರ್ಷಿಕವಾಗಿ ಗಳಿಸುವ ಬಡ್ಡಿ ಮತ್ತು ಯೋಜನೆಯ ಅವಧಿ ಮುಗಿದ ನಂತರ ಕೈಗೆ ಸಿಗುವ ಒಟ್ಟು ಮೆಚ್ಯೂರಿಟಿ ಮೊತ್ತಕ್ಕೂ ಯಾವುದೇ ತೆರಿಗೆ ಇರುವುದಿಲ್ಲ. ಸಂಪೂರ್ಣ ಹಣ ತೆರಿಗೆ ಮುಕ್ತವಾಗಿರುತ್ತದೆ (Tax-Free).

ವೃದ್ಧಾಪ್ಯದಲ್ಲಿ ನಿಯಮಿತ ಆದಾಯ ಮತ್ತು ದೊಡ್ಡ ಮೊತ್ತದ ಆಸ್ತಿಯನ್ನು ಉಳಿಸಲು ಬಯಸುವ ಮಧ್ಯಮ ವರ್ಗದ ಜನರಿಗೆ ಪಿಪಿಎಫ್ ಇಂದಿಗೂ ಅತ್ಯುತ್ತಮ ಹೂಡಿಕೆ ತಾಣವಾಗಿದೆ.

Attention Employees: How to get a pension of ₹1 lakh every month? Here are the complete details!
Share. Facebook Twitter LinkedIn WhatsApp Email

Related Posts

BREAKING: ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ಭೀಕರ ಅಪಘಾತ; ಪ್ರಾಣಾಪಾಯದಿಂದ ಪಾರು

1 Min Read

ನಾಪತ್ತೆಯಾಗಿಲ್ಲ ಕೋಟಿ ಬೆಲೆಯ ಕಲ್ಲುಗಳು, ಗೋದಾಮೂ ಹಾಳಾಗಿಲ್ಲ: ಸಾಗರ ‘APMC ಕಾರ್ಯದರ್ಶಿ’ ಸ್ಪಷ್ಟನೆ

2 Mins Read

BIG NEWS: ರಾಜ್ಯದಲ್ಲಿ ‘ಕೆರೆಗೆ ವೈದ್ಯಕೀಯ ತ್ಯಾಜ್ಯ’ ಸುರಿಯುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸಚಿವ ಈಶ್ವರ ಖಂಡ್ರೆ ಆದೇಶ

1 Min Read
Recent News

BREAKING: ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ಭೀಕರ ಅಪಘಾತ; ಪ್ರಾಣಾಪಾಯದಿಂದ ಪಾರು

ನಾಪತ್ತೆಯಾಗಿಲ್ಲ ಕೋಟಿ ಬೆಲೆಯ ಕಲ್ಲುಗಳು, ಗೋದಾಮೂ ಹಾಳಾಗಿಲ್ಲ: ಸಾಗರ ‘APMC ಕಾರ್ಯದರ್ಶಿ’ ಸ್ಪಷ್ಟನೆ

BIG NEWS: ರಾಜ್ಯದಲ್ಲಿ ‘ಕೆರೆಗೆ ವೈದ್ಯಕೀಯ ತ್ಯಾಜ್ಯ’ ಸುರಿಯುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸಚಿವ ಈಶ್ವರ ಖಂಡ್ರೆ ಆದೇಶ

ಸಾಗರ ಎಪಿಎಂಸಿ ಕಾಂಪೌಂಡ್ ನಿರ್ಮಾಣದಲ್ಲಿ ಅಕ್ರಮ ಶಂಕೆ: ಲೋಕಾಯುಕ್ತ ತನಿಖೆಗೆ ಹರತಾಳು ಹಾಲಪ್ಪ ಆಗ್ರಹ

State News
KARNATAKA

BREAKING: ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ಭೀಕರ ಅಪಘಾತ; ಪ್ರಾಣಾಪಾಯದಿಂದ ಪಾರು

By ವಸಂತ ಬಿ ಈಶ್ವರಗೆರೆ KARNATAKA 1 Min Read

ಮಂಡ್ಯ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಕೆ.ಆರ್. ನಂದಿನಿ ಅವರ ಸರ್ಕಾರಿ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾದ ಘಟನೆ…

ನಾಪತ್ತೆಯಾಗಿಲ್ಲ ಕೋಟಿ ಬೆಲೆಯ ಕಲ್ಲುಗಳು, ಗೋದಾಮೂ ಹಾಳಾಗಿಲ್ಲ: ಸಾಗರ ‘APMC ಕಾರ್ಯದರ್ಶಿ’ ಸ್ಪಷ್ಟನೆ

BIG NEWS: ರಾಜ್ಯದಲ್ಲಿ ‘ಕೆರೆಗೆ ವೈದ್ಯಕೀಯ ತ್ಯಾಜ್ಯ’ ಸುರಿಯುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸಚಿವ ಈಶ್ವರ ಖಂಡ್ರೆ ಆದೇಶ

ಸಾಗರ ಎಪಿಎಂಸಿ ಕಾಂಪೌಂಡ್ ನಿರ್ಮಾಣದಲ್ಲಿ ಅಕ್ರಮ ಶಂಕೆ: ಲೋಕಾಯುಕ್ತ ತನಿಖೆಗೆ ಹರತಾಳು ಹಾಲಪ್ಪ ಆಗ್ರಹ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.