ಬೆಳಗಾವಿ: ಮಹಾರಾಷ್ಟ್ರದ ನಾಯಕರಿಂದ ಬೆಳಗಾವಿ ಗಡಿಯ ಕುರಿತಂತೆ ದಿನೇ ದಿನೇ ಕಿರಿಕ್ ತೆಗೆಯಲಾಗುತ್ತಿದೆ. ಇಂತಹ ಮಹಾ ನಾಯಕರ ವಿರುದ್ಧ ಇಂದು ವಿಧಾನಸಭೆಯಲ್ಲಿ ಖಂಡನಾ ನಿರ್ಣಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದರು. ಈ ನಿರ್ಣಯಕ್ಕೆ ಸರ್ವಾನುಮತದಿಂದ ಅಂಗೀಕಾರವನ್ನು ದೊರೆತಿದೆ.
‘ವರಿಷ್ಠರು ಒಪ್ಪಿದರೆ ಮಂತ್ರಿಗಿರಿ, ಒಪ್ಪದಿದ್ದರೆ ದಾದಾಗಿರಿ’ : ಬಿಜೆಪಿ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವಂತ ಚಳಿಗಾಲದ ಅಧಿವೇಶನದ ವೇಳೆಯಲ್ಲಿ ಮಹಾರಾಷ್ಟ್ರದ ನಾಯಕರು ಗಡಿ ಖ್ಯಾತೆ ತೆಗೆದಿದ್ದರು. ಈ ಹಿನ್ನಲೆಯಲ್ಲಿ ಮಹಾರಾಷ್ಟ್ರ ನಾಯಕರ ನಡೆಯನ್ನು ಖಂಡಿಸಿ, ವಿಧಾನಸಭೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಖಂಡನಾ ನಿರ್ಣಯವನ್ನು ಮಂಡಿಸಿದರು.
ಮೂಡ್ನಾಕೂಡು ಚಿನ್ನಸ್ವಾಮಿ, ಪದ್ಮರಾಜ ದಂಡಾವತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಮಹಾ ನಾಯಕರ ವರ್ತನೆ ಖಂಡಿಸಿದ ಖಂಡನಾ ನಿರ್ಣಯಕ್ಕೆ, ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ದೊರೆಯಿತು. ಈ ಮೂಲಕ ಗಡಿ ಕ್ಯಾತೆ ತೆಗೆದಂತ ಮಹಾರಾಷ್ಟ್ರ ನಾಯಕರಿಗೆ ಖಡಕ್ ಉತ್ತರವನ್ನು ನೀಡಲಾಗಿದೆ.