ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ಇಂದು ನಡೆದಿದೆ. ಎಎಸ್ಐ ಮನೆಗೆ ನುಗ್ಗಿರುವಂತ ನಾಲ್ವರು ದರೋಡೆಕೋರರು, ಎಎಸ್ಐ ಪುತ್ರನ ಮೇಲೆ ಗುಂಡು ಹಾರಿಸಿ ಮನೆ ದರೋಡೆ ಮಾಡಿರುವಂತ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಪರೇಸಂದ್ರ ಗ್ರಾಮದಲ್ಲಿನ ಬಾಗೇಪಲ್ಲಿ ಠಾಣೆಯ ಎಎಸ್ಐ ನಾರಾಯಣಸ್ವಾಮಿ ಎಂಬುವರ ಮನೆಗೆ ನಾಲ್ವರು ದರೋಡೆಕೋರರು ನುಗ್ಗಿದ್ದಾರೆ. ಮನೆಯಲ್ಲಿದ್ದಂತ ಎಎಸ್ಐ ಪುತ್ರ ಶರತ್ ಮೇಲೆ ಗುಂಡು ಹಾರಿಸಿದ್ದರಿಂದ, 3 ಗುಂಟುಗಳು ತಾಗಿ ಗಾಯಗೊಂಡಿದ್ದಾರೆ.
ಗುಂಡು ಹಾರಿಸಿದ್ದರಿಂದ ಹೆದರಿದಂತ ವೇಳೆಯಲ್ಲಿ ಎಎಎಸ್ಐ ಪತ್ನಿ, ಸೊಸೆ ಮೈಮೇಲಿನ ಚಿನ್ನಾಭರಣ, ಮನೆಯಲ್ಲಿದ್ದಂತ ನಗದನ್ನು ನಾಲ್ವರು ದರೋಡೆ ಕೋರರು ದೋಚಿಕೊಂಡು ಪರಾರಿಯಾಗಿದ್ದಾರೆ.
ಇನ್ನೂ ಎಎಸ್ಐ ನಾರಾಯಣಸ್ವಾಮಿ ಮನೆಯವರ ಚೀರಾಟ ಕೇಳಿ ಸ್ಥಳೀಯರು ಬರುತ್ತಿದ್ದಂತೆ ದರೋಡೆ ಕೋರರು ಕಾಲ್ ಕಿತ್ತಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಂತ ಶರತ್ ನನ್ನು ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.