ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಮೈಸೂರು ಹಾಗೂ ಬೆಂಗಳೂರು, ಮೈಸೂರು ಮತ್ತು ತಾಳಗುಪ್ಪ ನಡುವೆ ಸಂಚರಿಸುತ್ತಿರುವಂತ ಎಕ್ಸ್ ಪ್ರೆಸ್ ರೈಲುಗಳ ( Express Train ) ರೈಲುಗಳ ಹೆಸರನ್ನು ಭಾರತೀಯ ರೈಲ್ವೆ ಇಲಾಖೆಯಿಂದ ಮರುನಾಮಕರಣಗೊಳಿಸಲಾಗಿದೆ.
ಈ ಕುರಿತು (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯೆ ನೀಡಿದ್ದು, ಟಿಪ್ಪು ಸುಲ್ತಾನ್ ಅವರ ಪರಂಪರೆಯನ್ನು ಅಳಿಸಲು ಬಿಜೆಪಿಗೆ ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರ ಟಿಪ್ಪು ಎಕ್ಸ್ಪ್ರೆಸ್ ಅನ್ನು ಒಡೆಯರ್ ಎಕ್ಸ್ಪ್ರೆಸ್ ಎಂದು ಮರುನಾಮಕರಣ ಮಾಡಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಟಿಪ್ಪು ಮತ್ತೊಂದು ರೈಲಿಗೆ ಒಡೆಯರ್ ಅವರ ಹೆಸರನ್ನು ಇಡಬಹುದಿತ್ತು. ಟಿಪ್ಪು ಪರಂಪರೆಯನ್ನು ಬಿಜೆಪಿ ಎಂದಿಗೂ ಅಳಿಸಿಹಾಕಲು ಸಾಧ್ಯವಿಲ್ಲ. ಅವರು ಬದುಕಿದ್ದಾಗ ಬ್ರಿಟಿಷರನ್ನು ಹೆದರಿಸಿದರು ಮತ್ತು ಇಂದಿಗೂ ಬ್ರಿಟಿಷ್ ಗುಲಾಮರನ್ನು ಹೆದರಿಸುತ್ತಾರೆ ಎಂದಿದ್ದಾರೆ.
ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್ ಪ್ರೆಸ್ ರೈಲು ( Wadeyar Express Train ) ಎಂಬುದಾಗಿ ಮರುನಾಮಕರಣಗೊಳಿಸಿದೆ.ಇನ್ನೂ ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು ಕುವೆಂಪು ಎಕ್ಸ್ ಪ್ರೆಸ್ ರೈಲು ( Kuvempu Express Train ) ಎಂಬುದಾಗಿ ಮರುನಾಮಕರಣಗೊಳಿಸಿ ಭಾರತೀಯ ರೈಲ್ವೆ ಇಲಾಖೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಪರ ವಿರೋಧ ಟೀಕೆಗಳು ವ್ಯಕ್ತವಾಗಿದೆ.
BJP govt renamed Tippu Express to Wodeyar Express. Tipu irks BJP because he waged 3 wars against its British masters. Another train could have been named after Wodeyars. BJP will never be able to erase Tipu’s legacy. He scared British while alive & scares British slaves even now pic.twitter.com/vsFJi5fR1D
— Asaduddin Owaisi (@asadowaisi) October 9, 2022
BIGG NEW : ಮಧ್ಯಪ್ರದೇಶದಲ್ಲಿ ಬಸ್ ಪಲ್ಟಿಯಾಗಿ 34 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ | Madhya Pradesh
BIGG NEWS : ಜರ್ಮನಿಯಲ್ಲಿ ಕಾಶ್ಮೀರ ವಿವಾದ ; ತಕ್ಕ ಪ್ರತ್ಯುತ್ತರ ನೀಡಿ, ಬಾಯಿ ಮುಚ್ಚಿಸಿದ ಭಾರತ