ಕೆಎನ್ ಎನ್ ನ್ಯೂಸ್ ಡೆಸ್ಕ್ : ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಆರ್ಟೆಮಿಸ್ -1 ಮೂನ್ ಮಿಷನ್ ಉಡಾವಣೆಯನ್ನು ಎರಡನೇ ಬಾರಿಗೆ ನಿನ್ನೆ (ಸೆಪ್ಟೆಂಬರ್ 3) ತಡೆಹಿಡಿದಿದೆ. ಉಡಾವಣೆಯು ಈ ವಾರದ ಆರಂಭದಲ್ಲಿ ನಡೆಯಬೇಕಿತ್ತು. ಆದರೆ, ತಾಂತ್ರಿಕ ತೊಂದರೆಗಳಿಂದಾಗಿ ಮತ್ತೆ ಸ್ಥಗಿತಗೊಂಡಿದೆ.
ಆರ್ಟೆಮಿಸ್-1 ಮೂನ್ ಮಿಷನ್ ಉಡಾವಣೆಯನ್ನು ಮತ್ತೆ ಮುಂದೂಡಲಾಗಿದೆ. ರಾಕೆಟ್ನ ತಳ ಭಾಗದಲ್ಲಿ ಇಂಧನ ಸೋರಿಕೆಯಾಗಿದೆ. ಇದನ್ನು ತಡೆಯಲು ಸಾಧ್ಯವಾಗದೇ ಇರುವುದರಿಂದ ಹಾಗೂ ಸಮಸ್ಯೆಯನ್ನು ಗುರುತಿಸಿ ಸರಿಪಡಿಸುವಲ್ಲಿ ವಿಫಲವಾಗಿರುವುದರಿಂದ ಬಾಹ್ಯಾಕಾಶ ನೌಕೆಯ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ನಾಸಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
The #Artemis I mission to the Moon has been postponed. Teams attempted to fix an issue related to a leak in the hardware transferring fuel into the rocket, but were unsuccessful: NASA pic.twitter.com/1zgJ2c3R4n
— ANI (@ANI) September 3, 2022
ಮತ್ತೆ ಆರ್ಟೆಮಿಸ್-1 ಮಿಷನ್ನ ಉಡಾವಣೆ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ನಡೆಯಬಹುದು. ಆದ್ರೆ, ಉಡಾವಣೆಯ ಸ್ಪಷ್ಟ ದಿನಾಂಕವನ್ನು ನಾಸಾ ಇನ್ನೂ ಬಹಿರಂಗಪಡಿಸಿಲ್ಲ.
ಆಗಸ್ಟ್ 29 ರಂದು ಫ್ಲೋರಿಡಾದಲ್ಲಿರುವ ನಾಸಾ ಕೆನೆಡಿ ಬಾಹ್ಯಾಕಾಶ ಲ್ಯಾಂಚ್ಪ್ಯಾಡ್ನಿಂದ ಈ ರಾಕೆಟ್ ಉಡಾವಣೆಗೆ ಯೋಜಿಸಲಾಗಿತ್ತು.
BIG NEWS: ಕಾಂಗ್ರೆಸ್ಗೆ ಮತ್ತೊಂದು ಆಘಾತ: ಜಮ್ಮು & ಕಾಶ್ಮೀರದ ಮತ್ತೊಬ್ಬ ಹಿರಿಯ ʻಕೈʼ ನಾಯಕ ಪಕ್ಷಕ್ಕೆ ರಾಜೀನಾಮೆ
ಹಠಾತ್ ಮದ್ಯಪಾನ ತ್ಯಜಿಸಿದಾಗ ನಿಮ್ಮ ದೇಹದಲ್ಲಾಗೋ ಬದಲಾವಣೆಗಳಿವು…? ಅದೇನೆಂದು ತಿಳಿಯಿರಿ